Mark · chapter 9 · verse 12
Mark 9:12 in Kannada
ಆತನು ಅವರಿಗೆ ಪ್ರತ್ಯುತ್ತರವಾಗಿ-- ನಿಜವಾಗಿಯೂ ಎಲೀಯನು ಮೊದಲು ಬಂದು ಎಲ್ಲವುಗಳನ್ನು ಯಥಾಸ್ಥಾನಪಡಿಸುತ್ತಾನೆ; ಆದರೆ ಮನುಷ್ಯಕುಮಾರನು ಬಹಳ ಶ್ರಮೆಗಳನ್ನನುಭವಿ ಸುವದು ಮತ್ತು ತಿರಸ್ಕರಿಸಲ್ಪಡುವದು ಅಗತ್ಯವೆಂದು ಆತನ ವಿಷಯವಾಗಿ ಬರೆದಿರುವದು ಹೇಗೆ?
Aatanu avarige pratyuttaravaagi-- nijavaagiyoo eleeyanu modalu bandu ellavugalannu yathaasthaanapadisuttaane; aadare manushyakumaaranu bahala shramegalannanubhavi suvadu mattu tiraskarisalpaduvadu agatyavendu aatana vishayavaagi barediruvadu hege?
Mark 9:12 in English
- King James Version (KJV)
- And he answered and told them, Elias verily cometh first, and restoreth all things; and how it is written of the Son of man, that he must suffer many things, and be set at nought.
- World English Bible (WEB)
- He said to them, “Elijah indeed comes first, and restores all things. How is it written about the Son of Man, that he should suffer many things and be despised?
- American Standard Version (ASV)
- And he said unto them, Elijah indeed cometh first, and restoreth all things: and how is it written of the Son of man, that he should suffer many things and be set at nought?
- Bible in Basic English (BBE)
- And he said to them, Truly, Elijah does come first, and puts all things in order; and how is it said in the Writings that the Son of man will go through much sorrow and be made as nothing?
- Darby Translation (DBY)
- And he answering said to them, Elias indeed, having first come, restores all things; and how is it written of the Son of man that he must suffer much, and be set at nought:
- Webster's Bible (WBS)
- And he answered and told them, Elijah verily cometh first, and restoreth all things; and how it is written concerning the Son of man, that he must suffer many things, and be set at naught.
- Young's Literal Translation (YLT)
- And he answering said to them, 'Elijah indeed, having come first, doth restore all things; and how hath it been written concerning the Son of Man, that many things he may suffer, and be set at nought?
Read in context
- 10ಮತ್ತು ಸತ್ತವರೊಳಗಿಂದ ಎದ್ದು ಬರುವದರ ಅರ್ಥವೇನೆಂದು ಅವರು ಒಬ್ಬರಿಗೊಬ್ಬರು ಪ್ರಶ್ನಿಸಿಕೊಳ್ಳುತ್ತಾ ಆ ಮಾತನ್ನು ತಮ್ಮೊಳಗೆ ಇಟ್ಟುಕೊಂಡರು.
- 11ಇದಲ್ಲದೆ ಅವರು ಆತನಿಗೆ--ಎಲೀಯನು ಮೊದಲು ಬರುವದು ಅಗತ್ಯವೆಂದು ಶಾಸ್ತ್ರಿಗಳು ಯಾಕೆ ಹೇಳುತ್ತಾರೆ ಎಂದು ಕೇಳಿದರು.
- 12ಆತನು ಅವರಿಗೆ ಪ್ರತ್ಯುತ್ತರವಾಗಿ-- ನಿಜವಾಗಿಯೂ ಎಲೀಯನು ಮೊದಲು ಬಂದು ಎಲ್ಲವುಗಳನ್ನು ಯಥಾಸ್ಥಾನಪಡಿಸುತ್ತಾನೆ; ಆದರೆ ಮನುಷ್ಯಕುಮಾರನು ಬಹಳ ಶ್ರಮೆಗಳನ್ನನುಭವಿ ಸುವದು ಮತ್ತು ತಿರಸ್ಕರಿಸಲ್ಪಡುವದು ಅಗತ್ಯವೆಂದು ಆತನ ವಿಷಯವಾಗಿ ಬರೆದಿರುವದು ಹೇಗೆ?
- 13ಆದರೆ ನಾನು ನಿಮಗೆ ಹೇಳುವದೇನಂದರೆ-- ಎಲೀಯನು ನಿಜವಾಗಿಯೂ ಬಂದನು. ಅವನ ವಿಷಯವಾಗಿ ಬರೆದಿರುವಂತೆ ಅವರು ತಮ್ಮ ಮನಸ್ಸಿಗೆ ಬಂದ ಹಾಗೆ ಅವನಿಗೆ ಮಾಡಿದರು ಅಂದನು.
- 14ಆತನು ತನ್ನ ಶಿಷ್ಯರ ಬಳಿಗೆ ಬಂದಾಗ ಅವರ ಸುತ್ತಲೂ ದೊಡ್ಡ ಸಮೂಹವನ್ನೂ ಶಾಸ್ತ್ರಿಗಳು ಅವರೊಂದಿಗೆ ತರ್ಕಿಸುತ್ತಿರುವದನ್ನೂ ಕಂಡನು.
Cross references
- Isaiah 53:1–12 ಯೆಶಾಯ 53:1–12ನಮ್ಮ ಸುದ್ಧಿಯನ್ನು ಯಾರು ನಂಬಿದ್ದಾರೆ? ಕರ್ತನ ತೋಳು ಯಾರಿಗೆ ಪ್ರಕಟವಾ ಯಿತು? ಆತನು ಚಿಗುರಿನಂತೆಯೂ ಒಣನೆಲದಿಂದ ಹುಟ್ಟಿಬರುವ ಬೇರಿನಂತೆಯೂ ಆತನ ಮುಂದೆ ಬೆಳೆ ಯುವನು. ಆತನಿಗೆ ಯಾವ ರೂಪವಾಗಲಿ ಅಂದವಾ ಗಲಿ ಇರಲಿಲ್ಲ; ನಾವು ಆತನನ್ನು ನೋಡಿದಾಗ ಅಲ್ಲಿ ನಾವು ಅಪೇಕ್ಷಿಸುವಂಥ ಯಾವ ಚಂದವೂ ಇರಲಿಲ್ಲ. ಆತನು ಮನುಷ್ಯರಿಂದ ತಳ್ಳಲ್ಪಟ್ಟವನೂ ತಿರಸ್ಕರಿಸ ಲ್ಪಟ್ಟವನೂ ದುಃಖಿತ ಮನುಷ್ಯನೂ ಕಷ್ಟವನ್ನು ಅರಿತ ವನೂ; ನಾವು ನಮ್ಮ ಮುಖಗಳನ್ನು ಆತನಿಂದ ಮರೆ ಮಾಡಿಕೊಳ್ಳುವ ಹಾಗೆ ಧಿಕ್ಕರಿಸಲ್ಪಟ್ಟವನೂ ಆಗಿದ್ದನು. ನಾವು ಆತನನ್ನು ಲಕ್ಷಕ್ಕೆ ತರಲಿಲ್ಲ. ನಿಶ್ಚಯವಾಗಿಯೂ ಆತನು ನಮ್ಮ ಸಂಕಟಗಳನ್ನು ಸಹಿಸಿಕೊಂಡು ನಮ್ಮ ದುಃಖಗಳನ್ನು ಹೊತ್ತನು; ಆದರೂ ನಾವು ಆತನನ್ನು ಪೆಟ್ಟು ತಿಂದವನು, ದೇವರಿಂದ ಹೊಡೆಯಲ್ಪಟ್ಟವನು, (ಶಿಕ್ಷಿಸಲ್ಪಟ್ಟವನು) ಹಿಂಸಿಸಲ್ಪಟ್ಟವನು ಎಂದು ಭಾವಿಸಿ ಕೊಂಡೆವು. ನಮ್ಮ ದ್ರೋಹಗಳ ನಿಮಿತ್ತ ಆತನಿಗೆ ಗಾಯವಾಯಿತು, ನಮ್ಮ ದುಷ್ಕೃತ್ಯಗಳ ನಿಮಿತ್ತ ಆತನು ಜಜ್ಜಲ್ಪಟ್ಟನು; ನಮ್ಮ ಸಮಾಧಾನಕ್ಕೆ ಕಾರಣವಾದ ಶಿಕ್ಷೆಯು ಆತನ ಮೇಲೆ ಬಿತ್ತು; ಆತನ ಬಾಸುಂಡೆ ಗಳಿಂದ ನಮಗೆ ಸ್ವಸ್ಥವಾಯಿತು. ನಾವೆಲ್ಲರೂ ದಾರಿ ತಪ್ಪಿದ ಕುರಿಗಳಂತಿದ್ದೆವು; ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ಸ್ವಂತ ಮಾರ್ಗಕ್ಕೆ ತಿರುಗಿಕೊಂಡಿದ್ದನು; ಕರ್ತನು ನಮ್ಮ ದುಷ್ಕೃತ್ಯಗಳನ್ನೆಲ್ಲಾ ಆತನ ಮೇಲೆ ಹಾಕಿದನು. ಆತನು ಪೀಡಿಸಲ್ಪಟ್ಟವನೂ ಮತ್ತು ಹಿಂಸಿಸಲ್ಪಟ್ಟವನೂ ಆಗಿದ್ದನು. ಆದರೂ ಆತನು ತನ್ನ ಬಾಯನ್ನು ತೆರೆಯಲೇ ಇಲ್ಲ; ವಧಿಸುವದಕ್ಕೆ ತರಲ್ಪ ಡುವ ಕುರಿಮರಿಯಂತೆಯೂ ಉಣ್ಣೆ ಕತ್ತರಿಸುವವರ ಮುಂದೆ ಇದ್ದ ಕುರಿಯ ಹಾಗೆಯೂ ಆತನು ಮೌನ ವಾಗಿದ್ದನು. ಹೀಗೆ ಆತನು ತನ್ನ ಬಾಯನ್ನು ತೆರೆಯಲೇ ಇಲ್ಲ. ಆತನು ಸೆರೆಯಿಂದಲೂ ನ್ಯಾಯತೀರ್ಪಿ ನಿಂದಲೂ ತೆಗೆಯಲ್ಪಟ್ಟನು; ಆತನ ಸಂತತಿಯನ್ನು ತಿಳಿಯಪಡಿಸಿದವರು ಯಾರು? ಆತನು ಜೀವಿತರ ದೇಶದಿಂದ ಕಡಿಯಲ್ಪಟ್ಟವನು (ತೆಗೆಯಲ್ಪಟ್ಟನು); ತನ್ನ ಪ್ರಜೆಯ ದ್ರೋಹಕ್ಕಾಗಿ ಆತನು ಪೆಟ್ಟು ತಿಂದನು. ಆತನು ಮರಣವನ್ನು ಧನಿಕರೊಂದಿಗೂ ಆತನ ಸಮಾಧಿಯನ್ನು ದುಷ್ಟರೊಂದಿಗೂ ಮಾಡಿಕೊಂಡನು. ಆತನು ಯಾವ ಬಲಾತ್ಕಾರವನ್ನೂ ಮಾಡಲಿಲ್ಲ ಇಲ್ಲವೆ ಆತನ ಬಾಯಲ್ಲಿ ಯಾವ ವಂಚನೆಯೂ ಇರಲಿಲ್ಲ. ಆದಾಗ್ಯೂ ಆತನನ್ನು ಜಜ್ಜುವದು ಕರ್ತನಿಗೆ ಮೆಚ್ಚಿಕೆ ಯಾಗಿತ್ತು. ಆತನು (ದೇವರು) ಆತನನ್ನು ಸಂಕಟಕ್ಕೆ ಒಳಪಡಿಸಿದನು; ನೀನು ಆತನ ಪ್ರಾಣವನ್ನು ಪಾಪ ಕ್ಕೋಸ್ಕರ ಬಲಿಯನ್ನಾಗಿ ಮಾಡುವಾಗ ಆತನು ತನ್ನ ಸಂತಾನವನ್ನು ನೋಡುವನು. ಆತನು ತನ್ನ ದಿವಸ ಗಳನ್ನು ಹೆಚ್ಚಿಸುವನು, ಕರ್ತನ ಸಂತೋಷವು ಆತನ ಕೈಯಲ್ಲಿ ಸಫಲವಾಗುವದು. ಆತನು ತನ್ನ ಆತ್ಮದ ವೇದನೆಯನ್ನು ಕಂಡು ತೃಪ್ತನಾಗುವನು; ತನ್ನ ತಿಳುವ ಳಿಕೆಯಿಂದ ನೀತಿವಂತನಾದ ನನ್ನ ಸೇವಕನು ಅನೇಕ ರಿಗೆ ನೀತಿಯನು ಉಂಟುಮಾಡುವನು; ಯಾಕಂದರೆ ಆತನು ಅವರ ದುಷ್ಕೃತ್ಯಗಳನ್ನು ಹೊತ್ತುಕೊಳ್ಳುವನು.ಆದದರಿಂದ ನಾನು ಆತನಿಗೋಸ್ಕರ ದೊಡ್ಡ ವರೊಂದಿಗೆ ಭಾಗಮಾಡುವೆನು ಆತನು ಬಲಿಷ್ಠರ ಸಂಗಡ ಕೊಳ್ಳೆಯಲ್ಲಿ ಪಾಲುಮಾಡುವನು; ಆತನು ತನ್ನ ಪ್ರಾಣವನ್ನು ಮರಣದ ವರೆಗೆ ಹೊಯ್ದು ಬಿಟ್ಟು ದ್ರೋಹಿಗಳೊಂದಿಗೆ ಎಣಿಸಲ್ಪಟ್ಟನು; ಅನೇಕರ ಪಾಪ ವನ್ನು ಹೊತ್ತುಕೊಂಡು ದ್ರೋಹಿಗಳಿಗೋಸ್ಕರ ವಿಜ್ಞಾ ಪನೆ ಮಾಡಿದನು. ಆದದರಿಂದ ನಾನು ಆತನಿಗೋಸ್ಕರ ದೊಡ್ಡ ವರೊಂದಿಗೆ ಭಾಗಮಾಡುವೆನು ಆತನು ಬಲಿಷ್ಠರ ಸಂಗಡ ಕೊಳ್ಳೆಯಲ್ಲಿ ಪಾಲುಮಾಡುವನು; ಆತನು ತನ್ನ ಪ್ರಾಣವನ್ನು ಮರಣದ ವರೆಗೆ ಹೊಯ್ದು ಬಿಟ್ಟು ದ್ರೋಹಿಗಳೊಂದಿಗೆ ಎಣಿಸಲ್ಪಟ್ಟನು; ಅನೇಕರ ಪಾಪ ವನ್ನು ಹೊತ್ತುಕೊಂಡು ದ್ರೋಹಿಗಳಿಗೋಸ್ಕರ ವಿಜ್ಞಾ ಪನೆ ಮಾಡಿದನು.
- Isaiah 50:6 ಯೆಶಾಯ 50:6ನಾನು ಹೊಡೆಯುವವರಿಗೆ ಬೆನ್ನನ್ನು ಮತ್ತು ಕೂದಲು ಕೀಳುವವರಿಗೆ ನನ್ನ ಕೆನ್ನೆಯನ್ನು ಕೊಟ್ಟೆನು; ನನ್ನ ಮುಖವನ್ನು ನಿಂದೆಗೂ ಉಗುಳುವಿಕೆಗೂ ಮರೆ ಮಾಡಲಿಲ್ಲ.
- Isaiah 52:14 ಯೆಶಾಯ 52:14ಅವನ ಮುಖವು ಮನುಷ್ಯರಿಗಿಂತಲೂ ಅವನ ಆಕಾರವು ನರಪುತ್ರರಿ ಗಿಂತಲೂ ಕುರೂಪವಾಗಿರುವದನ್ನು ನೋಡಿ ಹೇಗೆ ಆಶ್ಚರ್ಯಪಟ್ಟರೋಹಾಗೆಯೇ ಅನೇಕ ಜನಾಂಗ ಗಳನ್ನು ಆತನು ಚಮಕಿತ ಮಾಡುವನು; ಅರಸರು ಆತನ ನಿಮಿತ್ತ ತಮ್ಮ ಬಾಯಿಗಳನ್ನು ಮುಚ್ಚಿಕೊಳ್ಳು ವರು; ಯಾಕಂದರೆ ಅವರಿಗೆ ತಿಳಿಸಲ್ಪಡದೇ ಇರುವ ದನ್ನು ಅವರು ನೋಡುವರು; ಕೇಳದೇ ಇರುವದನ್ನು ಗ್ರಹಿಸುವರು.
- Luke 1:16–17 ಲೂಕನು 1:16–17ಅವನು ಇಸ್ರಾ ಯೇಲಿನ ಮಕ್ಕಳಲ್ಲಿ ಅನೇಕರನ್ನು ಅವರ ದೇವರಾದ ಕರ್ತನ ಕಡೆಗೆ ತಿರುಗಿಸುವನು. ಅವನು ತಂದೆಗಳ ಹೃದಯಗಳನ್ನು ಮಕ್ಕಳಕಡೆಗೂ ಅವಿಧೇಯರನ್ನು ನೀತಿವಂತರ ಜ್ಞಾನಕ್ಕೂ ತಿರುಗಿಸಿ ಕರ್ತನಿಗೋಸ್ಕರ ಜನರನ್ನು ಸಿದ್ಧಮಾಡುವದಕ್ಕೆ ಎಲೀಯನ ಆತ್ಮದಲ್ಲಿ ಯೂ ಬಲದಲ್ಲಿಯೂ ಆತನ ಮುಂದೆ ಹೋಗುವನು ಎಂದು ಹೇಳಿದನು.
- Isaiah 40:3–5 ಯೆಶಾಯ 40:3–5ಇಗೋ, ಒಂದು ವಾಣಿ, ಅರಣ್ಯದಲ್ಲಿ ಕರ್ತನ ದಾರಿಯನ್ನು ನೆಟ್ಟಗೆ ಮಾಡಿರಿ; ಅಡವಿಯಲ್ಲಿ ನಮ್ಮ ದೇವರಿಗೆ ರಾಜಮಾರ್ಗವನ್ನು ನೆಟ್ಟಗೆ ಮಾಡಿರಿ. ಎಲ್ಲಾ ತಗ್ಗುಗಳು ಮುಚ್ಚಲ್ಪಡಲಿ, ಎಲ್ಲಾ ಬೆಟ್ಟ ಗುಡ್ಡ ಗಳು ತಗ್ಗಿಸಲ್ಪಡಲಿ, ಕೊರಕಲ ನೆಲವು ಸಮವಾಗು ವದು; ಕರ್ತನ ಮಹಿಮೆಯು ಗೋಚರವಾಗುವದು. ಎಲ್ಲಾ ಮನುಷ್ಯರು ಒಟ್ಟಿಗೆ ಅದನ್ನು ಕಾಣುವರು ಕರ್ತನ ಬಾಯಿಯೇ ಇದನ್ನು ನುಡಿದದೆ ಎಂದು ಒಬ್ಬನು ಕೂಗುತ್ತಾನೆ.
- Luke 23:11 ಲೂಕನು 23:11ಹೆರೋದನು ತನ್ನ ಯುದ್ಧಭಟರೊಂದಿಗೆ ಆತನನ್ನು ತಿರಸ್ಕರಿಸಿ ಹಾಸ್ಯಮಾಡಿ ಆತನ ಮೇಲೆ ಶೋಭಾಯಮಾನವಾದ ವಸ್ತ್ರವನ್ನು ಹೊದಿಸಿ ಆತನನ್ನು ತಿರಿಗಿ ಪಿಲಾತನ ಬಳಿಗೆ ಕಳುಹಿಸಿ ದನು.
- Isaiah 49:7 ಯೆಶಾಯ 49:7ಮನುಷ್ಯನಿಂದ ತಿರಸ್ಕರಿಸಲ್ಪಟ್ಟವನು ಜನಾಂಗಕ್ಕೆ ಅಸ ಹ್ಯನೂ ಅಧಿಕಾರಿಗಳ ಸೇವಕನಿಗೆ ಇಸ್ರಾಯೇಲಿನ ವಿಮೋಚಕನೂ ಮತ್ತು ಅವನ ಪರಿಶುದ್ಧನಾದ ಕರ್ತನೂ ಹೀಗೆ ಹೇಳುತ್ತಾನೆ, ಕರ್ತನ ನಂಬಿಗಸ್ತಿ ಕೆಯನ್ನೂ ನಿನ್ನನ್ನು ಆದುಕೊಂಡ ಇಸ್ರಾಯೇಲಿನ ಪರಿಶುದ್ಧನನ್ನೂ ನೋಡಿ ಅರಸರು ಏಳುತ್ತಾರೆ; ಅಧಿ ಪತಿಗಳು ಸಹ ಆರಾಧಿಸುವರು.
- Psalm 22:1–31 ಕೀರ್ತನೆಗಳು 22:1–31ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ? ನೀನು ಯಾಕೆ ನನಗೆ ಸಹಾಯ ಮಾಡದೆಯೂ ನನ್ನ ಕೂಗಿಗೆ ಕಿವಿ ಗೊಡದೆಯೂ ದೂರವಾಗಿದ್ದೀ. ಓ ನನ್ನ ದೇವರೇ, ಹಗಲಿನಲ್ಲಿ ಕರೆಯುತ್ತೇನೆ; ನೀನು ಉತ್ತರ ಕೊಡುವದಿಲ್ಲ; ರಾತ್ರಿಯಲ್ಲಿಯೂ ನಾನು ಮೌನವಾಗಿರು ವದಿಲ್ಲ. ಆದರೆ ನೀನು ಪರಿಶುದ್ಧನಾಗಿದ್ದೀ; ನೀನು ಇಸ್ರಾಯೇಲಿನ ಸ್ತೋತ್ರಗಳಲ್ಲಿ ವಾಸ ಮಾಡುವಾ ತನು. ನಿನ್ನಲ್ಲಿ ನಮ್ಮ ಪಿತೃಗಳು ಭರವಸವಿಟ್ಟರು; ಅವರು ಭರವಸವಿಟ್ಟದ್ದರಿಂದ ನೀನು ಅವರನ್ನು ತಪ್ಪಿ ಸಿದಿ. ನಿನಗೆ ಅವರು ಮೊರೆ ಇಟ್ಟದ್ದರಿಂದ ತಪ್ಪಿಸ ಲ್ಪಟ್ಟರು; ನಿನ್ನಲ್ಲಿ ಭರವಸವಿಟ್ಟದ್ದರಿಂದ ಅವರು ನಾಚಿಕೆ ಪಡಲಿಲ್ಲ. ನಾನು ಹುಳವೇ, ಮನುಷ್ಯನಲ್ಲ; ಮನುಷ್ಯರಿಂದ ನಿಂದಿಸಲ್ಪಟ್ಟವನೂ ಜನರಿಂದ ತಿರಸ್ಕರಿಸಲ್ಪಟ್ಟವನೂ ಆಗಿದ್ದೇನೆ. ನನ್ನನ್ನು ನೋಡುವವರೆಲ್ಲರು ನನ್ನನ್ನು ಗೇಲಿ ಮಾಡಿ ನಗುವರು, ಅವರು ತುಟಿ ಅಗಲಮಾಡಿ ತಲೆ ಆಡಿಸುತ್ತಾ-- ಆತನು ಕರ್ತನ ಮೇಲೆ ಭರವಸ ವಿಟ್ಟಿದ್ದಾನಲ್ಲಾ; ಆತನು ಅವನನ್ನು ತಪ್ಪಿಸಿ ಅವನನ್ನು ಬಿಡಿಸಲಿ; ಆತನು ಅವನಲ್ಲಿ ಸಂತೋಷಪಡುತ್ತಾ ನಲ್ಲಾ ಅನ್ನುತ್ತಾರೆ. ಆದರೆ ನೀನು ಗರ್ಭದಿಂದ ನನ್ನನ್ನು ತೆಗೆದಿ; ನನ್ನ ತಾಯಿಯ ಎದೆಯಲ್ಲಿದ್ದಾಗ ನಾನು ನಿರೀಕ್ಷಿಸುವಂತೆ ಮಾಡಿದಿ. ಹುಟ್ಟಿದಂದಿನಿಂದ ನೀನೇ ನನಗೆ ಆಧಾರ; ನನ್ನ ತಾಯಿಯ ಹೊಟ್ಟೆಯಿಂದ ನನ್ನನ್ನು ಬರಮಾಡಿದ ನನ್ನ ದೇವರು ನೀನೇ ಆಗಿದ್ದೀ. ನನ್ನಿಂದ ದೂರವಾಗಿರಬೇಡ; ಇಕ್ಕಟ್ಟು ಸವಿಾಪ ವಾಗಿದೆ; ನನಗೆ ಸಹಾಯಕನು ಯಾರೂ ಇಲ್ಲ. ಬಹಳ ಹೋರಿಗಳು ನನ್ನನ್ನು ಸುತ್ತಿಕೊಂಡಿವೆ; ಬಾಷಾನಿನ ಬಲವಾದ ಹೋರಿಗಳು ನನ್ನನ್ನು ಮುತ್ತಿ ಕೊಂಡಿವೆ. ಹರಿದು ಬಿಡುವಂಥ ಗರ್ಜಿಸುವ ಸಿಂಹದ ಹಾಗೆ ನನ್ನ ಮೇಲೆ ತಮ್ಮ ಬಾಯಿ ತೆರೆದಿ ದ್ದಾರೆ. ನಾನು ನೀರಿನ ಹಾಗೆ ಹೊಯ್ಯಲ್ಪಟ್ಟಿದ್ದೇನೆ; ನನ್ನ ಎಲುಬುಗಳೆಲ್ಲಾ ಕೀಲು ತಪ್ಪಿವೆ; ನನ್ನ ಹೃದ ಯವು ಮೇಣದ ಹಾಗೆ ನನ್ನ ಕರುಳುಗಳ ಮಧ್ಯದಲ್ಲಿ ಕರಗಿಹೋಗಿದೆ. ನನ್ನ ಶಕ್ತಿ ಬೋಕಿಯ ಹಾಗೆ ಒಣಗಿ ಹೋಗಿದೆ; ನನ್ನ ನಾಲಿಗೆ ಅಂಗಳಕ್ಕೆ ಹತ್ತುತ್ತದೆ; ಮರಣದ ಧೂಳಿಗೆ ನನ್ನನ್ನು ಬರಮಾಡಿದಿ. ನಾಯಿ ಗಳು ನನ್ನನ್ನು ಸುತ್ತಿಕೊಂಡಿವೆ; ದುರ್ಮಾರ್ಗಿಗಳ ಸಭೆಯು ನನ್ನನ್ನು ಮುತ್ತಿಕೊಂಡಿದೆ; ಅವರು ನನ್ನ ಕೈಗಳನ್ನೂ ಕಾಲುಗಳನ್ನೂ ತಿವಿದಿದ್ದಾರೆ. ನನ್ನ ಎಲು ಬುಗಳನ್ನೆಲ್ಲಾ ಎಣಿಸುತ್ತೇನೆ; ಅವರು ನನ್ನನ್ನು ದೃಷ್ಟಿಸಿ ನೋಡುತ್ತಾರೆ. ನನ್ನ ವಸ್ತ್ರಗಳನ್ನು ತಮ್ಮಲ್ಲಿ ಪಾಲು ಮಾಡಿಕೊಳ್ಳುತ್ತಾರೆ. ನನ್ನ ಅಂಗಿಗೋಸ್ಕರ ಚೀಟು ಹಾಕುತ್ತಾರೆ. ಆದರೆ ಓ ಕರ್ತನೇ, ನೀನು ನನ್ನಿಂದ ದೂರವಾಗಿರಬೇಡ; ಓ ನನ್ನ ಬಲವೇ, ನನ್ನ ಸಹಾಯಕ್ಕೆ ತ್ವರೆಪಡು. ನನ್ನ ಪ್ರಾಣವನ್ನು ಕತ್ತಿಯಿಂದಲೂ ನನಗೆ ಪ್ರಿಯವಾದದ್ದನ್ನು ನಾಯಿಯ ಬಲದಿಂದಲೂ ಬಿಡಿಸು. ನನ್ನನ್ನು ಸಿಂಹದ ಬಾಯಿಂದ ರಕ್ಷಿಸು; ನನ್ನನ್ನು ಕಾಡುಕೋಣಗಳ ಕೊಂಬುಗಳಿಂದ ತಪ್ಪಿಸಿ ಉತ್ತರ ಕೊಟ್ಟೆಯಲ್ಲಾ. ನಾನು ನಿನ್ನ ಹೆಸರನ್ನು ನನ್ನ ಸಹೋದರರಿಗೆ ಸಾರುವೆನು; ಕೂಟದ ಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು. ಕರ್ತನಿಗೆ ಭಯಪಡುವವರೇ, ಆತನನ್ನು ಸ್ತುತಿಸಿರಿ; ಯಾಕೋಬಿನ ಎಲ್ಲಾ ಸಂತಾನದವರೇ, ಆತನನ್ನು ಘನಪಡಿಸಿರಿ; ಇಸ್ರಾಯೇಲಿನ ಎಲ್ಲಾ ಸಂತಾನದವರೇ, ಆತನಿಗೆ ಭಯಪಡಿರಿ. ಸಂಕಟ ಪಡುವವನ ಸಂಕಟ ವನ್ನು ಆತನು ತಿರಸ್ಕರಿಸಲಿಲ್ಲ, ಅಸಹ್ಯಿಸಲಿಲ್ಲ; ತನ್ನ ಮುಖವನ್ನು ಅವನಿಂದ ಮರೆಮಾಡಲಿಲ್ಲ; ಆದರೆ ಅವನು ಮೊರೆಯಿಡಲು ಆತನು ಕೇಳಿದನು. ಮಹಾ ಸಭೆಯಲ್ಲಿ ನಿನ್ನನ್ನು ಕುರಿತು ನನ್ನ ಸ್ತೋತ್ರವು ನಿನಗಿ ರುವದು; ನನ್ನ ಪ್ರಮಾಣಗಳನ್ನು ಆತನಿಗೆ ಭಯಪಡು ವವರ ಮುಂದೆ ಸಲ್ಲಿಸುವೆನು. ದೀನರು ಉಂಡು ತೃಪ್ತಿಯಾಗುವರು; ಕರ್ತನನ್ನು ಹುಡುಕುವವರು ಆತನನ್ನು ಸ್ತುತಿಸುವರು; ನಿಮ್ಮ ಹೃದಯವು ಎಂದೆಂದಿಗೂ ಬದುಕುವದು. ಲೋಕದಂತ್ಯದಲ್ಲಿರುವ ಎಲ್ಲಾ ಜನರು ಜ್ಞಾಪಕ ಮಾಡಿ ಕರ್ತನ ಕಡೆಗೆ ತಿರಿಗಿಕೊಳ್ಳುವರು; ಜನಾಂಗ ಗಳ ಗೋತ್ರಗಳೆಲ್ಲರೂ ನಿನ್ನ ಮುಂದೆ ಆರಾಧಿಸುವರು. ರಾಜ್ಯವು ಕರ್ತನದೇ; ಜನಾಂಗಗಳಲ್ಲಿ ಆಳುವಾತನು ಆತನೇ. ಭೂಮಿಯ ಪುಷ್ಟರೆಲ್ಲರೂ ಉಂಡು ಆರಾಧಿಸುವರು; ತಮ್ಮ ಪ್ರಾಣವನ್ನು ಬದುಕಿಸಲಾರದೆ ಧೂಳಿನಲ್ಲಿ ಇಳಿಯುವವರೆಲ್ಲರೂ ಆತನ ಮುಂದೆ ಅಡ್ಡಬೀಳುವರು. ಒಂದು ಸಂತಾನವು ಆತನನ್ನು ಸೇವಿಸುವದು. ಅದು ಕರ್ತನ ಸಂತತಿ ಎಂದು ಎಣಿಸ ಲ್ಪಡುವದು.ಅವರು ಬಂದು ಆತನೇ ಇದನ್ನು ಮಾಡಿದ್ದಾನೆಂದೂ ಆತನ ನೀತಿಯನ್ನೂ ಹುಟ್ಟಲಿರುವ ಜನರಿಗೆ ತಿಳಿಸುವರು. ಅವರು ಬಂದು ಆತನೇ ಇದನ್ನು ಮಾಡಿದ್ದಾನೆಂದೂ ಆತನ ನೀತಿಯನ್ನೂ ಹುಟ್ಟಲಿರುವ ಜನರಿಗೆ ತಿಳಿಸುವರು.
- Zechariah 13:7 ಜೆಕರ್ಯ 13:7ಓ ಕತ್ತಿಯೇ, ನನ್ನ ಕುರುಬನಿಗೆ ವಿರೋಧವಾಗಿ, ನನ್ನ ಸಂಗಡಿಗನಾದ ಮನುಷ್ಯನಿಗೆ ವಿರೋಧವಾಗಿ, ಎಚ್ಚರವಾಗು ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ; ಕುರುಬನನ್ನು ಹೊಡೆ, ಆಗ ಕುರಿಗಳು ಚದರಿ ಹೋಗುವವು; ಆದರೆ ಚಿಕ್ಕವುಗಳ ಮೇಲೆ ನನ್ನ ಕೈಯನ್ನು ತಿರುಗಿಸುವೆನು ಎಂದು ಹೇಳುತ್ತಾನೆ.
- Matthew 11:2–18 ಮತ್ತಾಯನು 11:2–18ಆಗ ಯೋಹಾನನು ಸೆರೆಮನೆಯಲ್ಲಿ ಕ್ರಿಸ್ತನ ಕಾರ್ಯಗಳನ್ನು ಕೇಳಿದ್ದರಿಂದ ತನ್ನ ಶಿಷ್ಯರಲ್ಲಿ ಇಬ್ಬರನ್ನು ಕಳುಹಿಸಿ ಆತನಿಗೆ-- ಬರಬೇಕಾದಾತನು ನೀನೋ ಇಲ್ಲವೆ ನಾವು ಬೇರೊಬ್ಬನಿಗಾಗಿ ನೋಡಬೇಕೋ ಅಂದನು. ಯೇಸು ಪ್ರತ್ಯುತ್ತರವಾಗಿ ಅವರಿಗೆ-- ನೀವು ಹೋಗಿ ಕೇಳುವವುಗಳನ್ನೂ ನೋಡುವವು ಗಳನ್ನೂ ಯೋಹಾನನಿಗೆ ತಿಳಿಸಿರಿ; ಕುರುಡರು ದೃಷ್ಟಿ ಹೊಂದುತ್ತಾರೆ, ಕುಂಟರು ನಡೆಯುತ್ತಾರೆ,ಕುಷ್ಟರೋಗಿಗಳು ಶುದ್ಧರಾಗುತ್ತಾರೆ, ಕಿವುಡರು ಕೇಳುತ್ತಾರೆ, ಸತ್ತವರು ಎಬ್ಬಿಸಲ್ಪಡುತ್ತಾರೆ ಮತ್ತು ಬಡವರಿಗೆ ಸುವಾರ್ತೆ ಸಾರಲ್ಪಡುತ್ತದೆ. ನನ್ನ ವಿಷಯವಾಗಿ ಸಂಶಯಪಡದವನೇ ಧನ್ಯನು ಅಂದನು. ಅವರು ಹೊರಟುಹೋಗುತ್ತಿದ್ದಾಗ ಯೇಸು ಯೋಹಾನನ ಕುರಿತಾಗಿ ಜನಸಮೂಹಗಳೊಂ ದಿಗೆ -- ಏನು ನೋಡುವದಕ್ಕಾಗಿ ನೀವು ಅಡವಿಗೆ ಹೋದಿರಿ? ಗಾಳಿಯಿಂದ ಅಲ್ಲಾಡುವದಂಟನ್ನೋ? ಆದರೆ ನೀವು ಏನು ನೊಡುವದಕ್ಕಾಗಿ ಹೋದಿರಿ? ನಯವಾದ ವಸ್ತ್ರಗಳನ್ನು ಧರಿಸಿಕೊಂಡ ಮನುಷ್ಯ ನನ್ನೋ? ಇಗೋ, ನಯವಾದ ಬಟ್ಟೆಗಳನ್ನು ಧರಿಸಿಕೊ ಳ್ಳುವವರು ಅರಮನೆಗಳಲ್ಲಿ ಇರುತ್ತಾರೆ. ಆದರೆ ನೀವು ಏನು ನೋಡುವದಕ್ಕಾಗಿ ಹೋದಿರಿ? ಪ್ರವಾದಿ ಯನ್ನೋ? ಹೌದು, ಪ್ರವಾದಿಗಿಂತಲೂ ಹೆಚ್ಚಿನವನು ಎಂದು ನಾನು ನಿಮಗೆ ಹೇಳುತ್ತೇನೆ. ಯಾಕಂ ದರೆ--ಇಗೋ, ನಿನ್ನ ಮಾರ್ಗವನ್ನು ನಿನ್ನ ಮುಂದೆ ಸಿದ್ಧಪಡಿಸುವ ನನ್ನ ದೂತನನ್ನು ನಾನು ನಿನ್ನ ಮುಂದೆ ಕಳುಹಿಸುತ್ತೇನೆಂದು ಯಾವನ ವಿಷಯವಾಗಿ ಬರೆದಿ ದೆಯೋ ಅವನೇ ಇವನು. ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ಸ್ತ್ರೀಯರಲ್ಲಿ ಹುಟ್ಟಿದವರೊ ಳಗೆ ಬಾಪ್ತಿಸ್ಮ ಮಾಡಿಸುವ ಯೋಹಾನನಿಗಿಂತ ದೊಡ್ಡವನು ಏಳಲಿಲ್ಲ; ಆದಾಗ್ಯೂ ಪರಲೋಕ ರಾಜ್ಯದಲ್ಲಿ ಅತ್ಯಲ್ಪನಾದವನು ಅವನಿಗಿಂತಲೂ ದೊಡ್ಡ ವನಾಗಿದ್ದಾನೆ. ಇದಲ್ಲದೆ ಬಾಪ್ತಿಸ್ಮ ಮಾಡಿಸುವ ಯೋಹಾನನ ದಿನಗಳಿಂದ ಇದುವರೆಗೆ ಪರಲೋಕ ರಾಜ್ಯವು ಬಲಾತ್ಕಾರಕ್ಕೆ ಗುರಿಯಾಗಿದೆ; ಮತ್ತು ಬಲಾತ್ಕಾರಿಗಳು ಅದನ್ನು ಒತ್ತಾಯದಿಂದ ತೆಗೆದು ಕೊಳ್ಳುತ್ತಾರೆ. ಯಾಕಂದರೆ ಎಲ್ಲಾ ಪ್ರವಾದಿಗಳೂ ನ್ಯಾಯಪ್ರಮಾಣವೂ ಯೋಹಾನನ ವರೆಗೆ ಪ್ರವಾದಿ ಸಿದ್ದುಂಟು. ನೀವು ಇದನ್ನು ಅಂಗೀಕರಿಸುವದಕ್ಕೆ ಮನಸ್ಸಿದ್ದರೆ ಬರಬೇಕಾಗಿದ್ದ ಎಲೀಯನು ಇವನೇ. ಕೇಳುವದಕ್ಕೆ ಕಿವಿಗಳುಳ್ಳವನು ಕೇಳಲಿ. ಆದರೆ ಈ ಸಂತತಿಯನ್ನು ನಾನು ಯಾವದಕ್ಕೆ ಹೋಲಿಸಲಿ? ಮಕ್ಕಳು ಪೇಟೆಗಳಲ್ಲಿ ಕೂತುಕೊಂಡು ತಮ್ಮ ಸಂಗಡಿ ಗರನ್ನು ಕರೆಯುತ್ತಾ-- ನಾವು ನಿಮಗೋಸ್ಕರ ಕೊಳಲೂದಿದೆವು, ಆದರೆ ನೀವು ಕುಣಿಯಲಿಲ್ಲ; ನಾವು ನಿಮಗೋಸ್ಕರ ಶೋಕಿಸಿದೆವು, ಆದರೆ ನೀವು ಗೋಳಾಡಲಿಲ್ಲ ಎಂದು ಹೇಳುವವರಿಗೆ ಇದು ಹೋಲಿಕೆಯಾಗಿದೆ. ಯಾಕಂದರೆ ಯೋಹಾನನು ತಿನ್ನದೆಯೂ ಕುಡಿಯದೆಯೂ ಬಂದನು. ಅದಕ್ಕೆ ಅವರು--ಅವನಿಗೆ ದೆವ್ವ ಹಿಡಿದಿದೆ ಅನ್ನುತ್ತಾರೆ.
- John 3:27–30 ಯೋಹಾನನು 3:27–30ಯೋಹಾನನು ಪ್ರತ್ಯುತ್ತರವಾಗಿ--ಪರಲೋಕ ದಿಂದ ಒಬ್ಬ ಮನುಷ್ಯನಿಗೆ ಕೊಡಲ್ಪಡದ ಹೊರತು ಅವನು ಯಾವದನ್ನೂ ಹೊಂದಲಾರನು. ನಾನು ಕ್ರಿಸ್ತನಲ್ಲ, ಆದರೆ ಆತನ ಮುಂದಾಗಿ ಕಳುಹಿಸಲ್ಪಟ್ಟ ವನೆಂದು ನಾನು ಹೇಳಿದ್ದಕ್ಕೆ ನೀವೇ ನನಗೆ ಸಾಕ್ಷಿಗಳಾ ಗಿದ್ದೀರಿ. ಮದಲಗಿತ್ತಿಯುಳ್ಳವನೇ ಮದಲಿಂಗನು; ಆದರೆ ಮದಲಿಂಗನ ಸ್ನೇಹಿತನು ನಿಂತುಕೊಂಡು ಆತನ ಮಾತನ್ನು ಕೇಳಿ ಮದಲಿಂಗನ ಧ್ವನಿಗೆ ಬಹಳವಾಗಿ ಸಂತೋಷ ಪಡುತ್ತಾನೆ; ಆದಕಾರಣ ಈ ನನ್ನ ಸಂತೋಷವು ನೆರವೇರಿತು. ಆತನು ಹೆಚ್ಚಿಸಲ್ಪ ಡತಕ್ಕದ್ದು; ನಾನು ತಗ್ಗಿಸಲ್ಪಡತಕ್ಕದ್ದು.
- Psalm 69:1–36 ಕೀರ್ತನೆಗಳು 69:1–36ಓ ದೇವರೇ ನನ್ನನ್ನು ರಕ್ಷಿಸು; ನೀರು ನನ್ನ ಪ್ರಾಣದ ವರೆಗೂ ಬಂದಿದೆ. ನೆಲೆ ಸಿಕ್ಕದ ಆಳವಾದ ಕೆಸರಿನಲ್ಲಿ ನಾನು ಮುಳುಗುತ್ತೇನೆ; ನನ್ನ ಮೇಲೆ ಹಾದುಹೋಗುವ ನೀರಿನ ಪ್ರವಾಹಗಳ ಅಗಾಧದಲ್ಲಿ ನಾನು ಸಿಕ್ಕಿಕೊಂಡಿದ್ದೇನೆ. ನಾನು ಕೂಗಿ ದಣಿದಿದ್ದೇನೆ; ನನ್ನ ಗಂಟಲು ಒಣಗಿದೆ; ನಾನು ದೇವ ರನ್ನು ಎದುರು ನೋಡುವದರಿಂದ ನನ್ನ ಕಣ್ಣುಗಳು ಕ್ಷೀಣಿಸುತ್ತವೆ. ಕಾರಣವಿಲ್ಲದೆ ನನ್ನನ್ನು ಹಗೆ ಮಾಡು ವವರು ನನ್ನ ತಲೆಯ ಕೂದಲುಗಳಿಗಿಂತ ಹೆಚ್ಚಾಗಿ ದ್ದಾರೆ; ನನ್ನನ್ನು ಅನ್ಯಾಯವಾಗಿ ಸಂಹರಿಸುವ ನನ್ನ ಶತ್ರುಗಳೂ ಪ್ರಬಲವಾಗಿದ್ದಾರೆ; ನಾನು ತೆಗೆದು ಕೊಳ್ಳದ್ದನ್ನು ನನ್ನಿಂದ ದೋಚಿಕೊಂಡರು. ಓ ದೇವರೇ, ನೀನು ನನ್ನ ಮೂಢತನವನ್ನು ತಿಳಿದಿದ್ದೀ; ನನ್ನ ಪಾಪಗಳು ನಿನಗೆ ಮರೆಯಾಗಿಲ್ಲ. ಸೈನ್ಯಗಳ ಕರ್ತನಾದ ದೇವರೇ, ನಿನ್ನನ್ನು ನಿರೀಕ್ಷಿಸು ವವರು ನನ್ನ ದೆಸೆಯಿಂದ ನಾಚಿಕೆಪಡದಿರಲಿ; ಓ ಇಸ್ರಾಯೇಲಿನ ದೇವರೇ, ನಿನ್ನನ್ನು ಹುಡುಕುವವರು ನನ್ನಿಂದ ಅವಮಾನಪಡದಿರಲಿ. ನಿನ್ನ ನಿಮಿತ್ತ ನಿಂದೆ ಯನ್ನು ತಾಳಿದ್ದೇನೆ; ಅವಮಾನವು ನನ್ನ ಮುಖವನ್ನು ಮುಚ್ಚಿಯದೆ. ನನ್ನ ಸಹೋದರರಿಗೆ ಅನ್ಯನಾಗಿದ್ದೇನೆ; ನನ್ನ ಒಡಹುಟ್ಟಿದವರಿಗೆ ಪರಕೀಯನಾಗಿದ್ದೇನೆ. ನಿನ್ನ ಆಲಯದ ಆಸಕ್ತಿಯು ನನ್ನನ್ನು ತಿಂದುಬಿಟ್ಟಿದೆ; ನಿನ್ನನ್ನು ನಿಂದಿಸುವವರ ನಿಂದೆಗಳು ನನ್ನ ಮೇಲೆ ಬಿದ್ದಿವೆ. ನನ್ನ ಪ್ರಾಣವು ಉಪವಾಸದಲ್ಲಿ ಶಿಕ್ಷಿಸಲ್ಪಟ್ಟು ಅತ್ತಾಗ ಅದು ನನಗೆ ನಿಂದೆ ಆಯಿತು. ಗೋಣಿತಟ್ಟನ್ನು ಸಹ ನನ್ನ ಉಡುಪಾಗಿ ಮಾಡಿಕೊಂಡಿದ್ದೇನೆ; ಹೀಗೆ ನಾನು ಅವರಿಗೆ ಗಾದೆ ಆದೆನು. ಬಾಗಲಲ್ಲಿ ಕೂತು ಕೊಳ್ಳುವವರು ನನಗೆ ವಿರೋಧವಾಗಿ ಮಾತನಾಡು ತ್ತಾರೆ; ನಾನು ಮದ್ಯಪಾನಿಗಳಿಗೆ ಸಂಗೀತವಾದೆನು. ಓ ಕರ್ತನೇ, ನಾನಾದರೋ ಅಂಗೀಕಾರದ ಸಮ ಯದಲ್ಲಿ ನಿನಗೆ ನನ್ನ ಪ್ರಾರ್ಥನೆಯನ್ನು ಮಾಡುವೆನು. ಓ ದೇವರೇ, ನಿನ್ನ ಅತಿಶಯವಾದ ಕರುಣೆಯಿಂದಲೂ ನಿನ್ನ ರಕ್ಷಣೆಯ ಸತ್ಯದಲ್ಲಿಯೂ ನನಗೆ ಉತ್ತರಕೊಡು. ನಾನು ಮುಳುಗದಂತೆ ನನ್ನನ್ನು ಕೆಸರಿನೊಳಗಿಂದ ಬಿಡಿಸು; ಹಗೆಮಾಡುವವರಿಂದ ನನ್ನನ್ನು ತಪ್ಪಿಸು, ನೀರಿನ ಅಗಾಧಗಳೊಳಗಿಂದಲೂ ನನಗೆ ಬಿಡುಗಡೆ ಯಾಗಲಿ ನೀರಿನ ಪ್ರವಾಹವು ನನ್ನ ಮೇಲೆ ಹಾದು ಹೋಗದೇ ಇರಲಿ; ಅಗಾಧವು ನನ್ನನ್ನು ನುಂಗದೆ ಇರಲಿ; ಕುಣಿಯು ನನಗಾಗಿ ತನ್ನ ಬಾಯನ್ನು ಮುಟ್ಟ ದಿರಲಿ. ಓ ಕರ್ತನೇ, ನನಗೆ ಉತ್ತರಕೊಡು;ನಿನ್ನ ಪ್ರೀತಿ ಕರುಣೆಯು ಒಳ್ಳೇದಾಗಿದೆ; ನಿನ್ನ ಅತಿ ಶಯವಾದ ಅಂತಃಕರುಣೆಗಳ ಪ್ರಕಾರ ನನ್ನ ಕಡೆಗೆ ತಿರುಗು. ನಿನ್ನ ಮುಖವನ್ನು ನಿನ್ನ ಸೇವಕನಿಗೆ ಮರೆಮಾಡಬೇಡ; ನಾನು ಇಕ್ಕಟ್ಟಿನಲ್ಲಿದ್ದೇನೆ; ಬೇಗ ನನಗೆ ಉತ್ತರಕೊಡು. ಸವಿಾಪವಾಗಿದ್ದು ನನ್ನ ಪ್ರಾಣವನ್ನು ರಕ್ಷಿಸು ನನ್ನನ್ನು ನನ್ನ ಶತ್ರುಗಳ ನಿಮಿತ್ತ ವಾಗಿ ವಿಮೋಚಿಸು. ನೀನು ನನ್ನ ನಿಂದೆಯನ್ನೂ ನಾಚಿಕೆಯನ್ನೂ ಅವಮಾನವನ್ನೂ ತಿಳಿದಿದ್ದೀ; ನನ್ನ ವೈರಿಗಳೆಲ್ಲರು ನಿನ್ನ ಮುಂದೆ ಇದ್ದಾರೆ. ನಿಂದೆಯು ನನ್ನ ಹೃದಯವನ್ನು ಮುರಿದದೆ; ಭಾರದಿಂದ ನಾನು ತುಂಬಿದವನಾಗಿದ್ದೇನೆ, ಕನಿಕರಕ್ಕೋಸ್ಕರ ಕೆಲವರನ್ನು ನಿರೀಕ್ಷಿಸಿದೆನು, ಆದರೆ ಒಬ್ಬರೂ ಕಾಣಲಿಲ್ಲ. ಆದರಿಸುವವರಿಗೋಸ್ಕರ ಸಹ ಎದುರು ನೋಡಿದೆನು: ಆದರೆ ಯಾರೂ ಸಿಕ್ಕಲಿಲ್ಲ. ನನ್ನ ಆಹಾರಕ್ಕಾಗಿ ಕಹಿಯಾದದನ್ನು ಕೊಟ್ಟರು; ನನಗೆ ದಾಹವಾದಾಗ ಹುಳಿರಸವನ್ನು ಕುಡಿಯ ಕೊಟ್ಟರು. ಅವರ ಮೇಜು ಅವರ ಮುಂದೆ ಉರುಲಾ ಗಲಿ, ಸುಖವಾಗಿರುವವರಿಗೆ ಅದು ನೇಣೂ ಆಗಲಿ. ಅವರ ಕಣ್ಣಗಳು ಕಾಣದ ಹಾಗೆ ಕತ್ತಲಾಗಲಿ; ಅವರ ಸೊಂಟಗಳನ್ನು ಯಾವಾಗಲೂ ಕದಲಿಸು. ಅವರ ಮೇಲೆ ನಿನ್ನ ರೋಷವನ್ನು ಹೊಯ್ಯಿ; ನಿನ್ನ ಕೋಪದ ಉರಿಯು ಅವರನ್ನು ಹಿಡಿಯಲಿ. ಅವರ ವಾಸಸ್ಥಳವು ನಾಶವಾಗಲಿ; ಅವರ ಗುಡಾರಗಳಲ್ಲಿ ನಿವಾಸಿಯು ಇಲ್ಲದೆ ಹೋಗಲಿ. ನೀನು ಹೊಡೆದ ವನನ್ನು ಅವರು ಹಿಂಸಿಸುತ್ತಾರೆ, ನೀನು ಗಾಯಮಾಡಿ ದವರ ವ್ಯಸನವನ್ನು ಮಾತನಾಡಿಕೊಳ್ಳುತ್ತಾರೆ. ಅವರ ಅಕ್ರಮಕ್ಕೆ ಅಕ್ರಮವನ್ನು ಸೇರಿಸು; ಅವರು ನಿನ್ನ ನೀತಿಯಲ್ಲಿ ಸೇರದೆ ಇರಲಿ. ಜೀವದ ಪುಸ್ತಕದೊಳಗಿಂದ ಅವರು ಅಳಿಸಲ್ಪಡಲಿ; ನೀತಿವಂತರ ಸಂಗಡ ಅವರ ಹೆಸರು ಬರೆಯಲ್ಪಡದೆ ಇರಲಿ. ಆದರೆ ನಾನು ದೀನನಾಗಿಯೂ ವ್ಯಸನವುಳ್ಳವನಾಗಿಯೂ ಇದ್ದೇನೆ; ಓ ದೇವರೇ, ನಿನ್ನ ರಕ್ಷಣೆಯು ನನ್ನನ್ನು ಉನ್ನತದಲ್ಲಿರಿಸಲಿ. ದೇವರ ಹೆಸರನ್ನು ಹಾಡುತ್ತಾ ಸ್ತುತಿಸುವೆನು; ಸ್ತೋತ್ರದಿಂದ ಆತನನ್ನು ಘನಪಡಿ ಸುವೆನು. ಅದು ಕರ್ತನಿಗೆ ಕೊಂಬುಗಳೂ ಗೊರಸೆ ಗಳೂ ಉಳ್ಳ ಎಳೇ ಹೋರಿಗಳಿಗಿಂತ ಮೆಚ್ಚಿಕೆಯಾಗಿರು ವದು. ಇದನ್ನು ದೀನರು ನೋಡಿ, ಸಂತೋಷಿಸು ವರು. ದೇವರನ್ನು ಹುಡುಕುವ ನಿಮ್ಮ ಹೃದಯವು ಜೀವಿಸುವದು. ಕರ್ತನು ಬಡವರನ್ನು ಲಾಲಿಸಿ ತನ್ನ ಸೆರೆಯವರನ್ನು ತಿರಸ್ಕರಿಸುವದಿಲ್ಲ. ಆಕಾಶವೂ ಭೂಮಿಯೂ ಸಮುದ್ರಗಳೂ ಅವುಗಳಲ್ಲಿ ಸಂಚರಿಸುವುದೆಲ್ಲವೂ ಆತನನ್ನು ಸ್ತುತಿಸಲಿ. ದೇವರು ಚೀಯೋನನ್ನು ರಕ್ಷಿಸಿ ಯೆಹೂದದ ಪಟ್ಟ ಣಗಳನ್ನು ಕಟ್ಟುವನು; ಹೀಗೆ ಅವರು ಅಲ್ಲಿ ವಾಸ ಮಾಡಿ ಅದನ್ನು ಸ್ವಾಧೀನಪಡಿಸಿಕೊಳ್ಳುವರು.ಅವನ ಸೇವಕರ ಸಂತತಿಯು ಸಹ ಅದನ್ನು ಬಾಧ್ಯವಾಗಿ ಹೊಂದುವದು; ಆತನ ಹೆಸರನ್ನು ಪ್ರೀತಿಮಾಡುವವರು ಅದರಲ್ಲಿ ವಾಸಮಾಡುವರು. ಅವನ ಸೇವಕರ ಸಂತತಿಯು ಸಹ ಅದನ್ನು ಬಾಧ್ಯವಾಗಿ ಹೊಂದುವದು; ಆತನ ಹೆಸರನ್ನು ಪ್ರೀತಿಮಾಡುವವರು ಅದರಲ್ಲಿ ವಾಸಮಾಡುವರು.