Matthew · chapter 1 · verse 22
Matthew 1:22 in Kannada
ಪ್ರವಾದಿಯ ಮುಖಾಂತರ ಕರ್ತನು ಹೇಳಿದ ಮಾತು ನೆರವೇರುವಂತೆ ಇದೆಲ್ಲಾ ನಡೆಯಿತು.
Pravaadiya mukhaantara kartanu helida maatu neraveruvante idellaa nadeyitu.
Matthew 1:22 in English
- King James Version (KJV)
- Now all this was done, that it might be fulfilled which was spoken of the Lord by the prophet, saying,
- World English Bible (WEB)
- Now all this has happened that it might be fulfilled which was spoken by the Lord through the prophet, saying,
- American Standard Version (ASV)
- Now all this is come to pass, that it might be fulfilled which was spoken by the Lord through the prophet, saying,
- Bible in Basic English (BBE)
- Now all this took place so that the word of the Lord by the prophet might come true,
- Darby Translation (DBY)
- Now all this came to pass that that might be fulfilled which was spoken by [the] Lord, through the prophet, saying,
- Webster's Bible (WBS)
- Now all this was done, that it might be fulfilled which was spoken from the Lord by the prophet, saying,
- Young's Literal Translation (YLT)
- And all this hath come to pass, that it may be fulfilled that was spoken by the Lord through the prophet, saying,
Read in context
- 20ಅವನು ಇವುಗಳನ್ನು ಆಲೋಚನೆ ಮಾಡುತ್ತಿದ್ದಾಗ ಇಗೋ, ಕರ್ತನ ದೂತನು ಅವನಿಗೆ ಕನಸಿನಲ್ಲಿ ಕಾಣಿಸಿ ಕೊಂಡು-- ಯೋಸೇಫನೇ, ದಾವೀದನ ಕುಮಾರನೇ, ನಿನ್ನ ಹೆಂಡತಿಯಾದ ಮರಿಯಳನ್ನು ಸೇರಿಸಿಕೊಳ್ಳು ವದಕ್ಕೆ ಭಯಪಡಬೇಡ; ಯಾಕಂದರೆ ಆಕೆಯ ಗರ್ಭವು ಪವಿತ್ರಾತ್ಮನಿಂದಲೇ ಆಗಿದೆ.
- 21ಆಕೆಯು ಒಬ್ಬ ಮಗನನ್ನು ಹೆರುವಳು; ನೀನು ಆತನಿಗೆ ಯೇಸು ಎಂದು ಕರೆಯಬೇಕು; ಯಾಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸುವನು ಅಂದನು.
- 22ಪ್ರವಾದಿಯ ಮುಖಾಂತರ ಕರ್ತನು ಹೇಳಿದ ಮಾತು ನೆರವೇರುವಂತೆ ಇದೆಲ್ಲಾ ನಡೆಯಿತು.
- 23ಆ ಮಾತೇನಂದರೆ -- ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಳು; ಅವರು ಆತನ ಹೆಸರನ್ನು ಇಮ್ಮಾನುವೇಲ್ ಎಂದು ಕರೆಯುವರು ಎಂಬದೇ. ದೇವರು ನಮ್ಮ ಕೂಡ ಇದ್ದಾನೆ ಎಂಬದು ಇದರ ಅರ್ಥ.
- 24ಆಗ ಯೋಸೇ ಫನು ನಿದ್ರೆಯಿಂದ ಎಚ್ಚತ್ತು ಕರ್ತನ ದೂತನು ತನಗೆ ಅಪ್ಪಣೆ ಕೊಟ್ಟಂತೆ ತನ್ನ ಹೆಂಡತಿಯನ್ನು ಸೇರಿಸಿಕೊಂಡನು;ಆಕೆಯು ತನ್ನ ಚೊಚ್ಚಲ ಮಗನನ್ನು ಹೆರುವ ತನಕ ಅವನು ಆಕೆಯನ್ನು ಅರಿಯಲಿಲ್ಲ; ಅವನು ಆತನ ಹೆಸರನ್ನು ಯೇಸು ಎಂದು ಕರೆದನು.
Cross references
- Luke 24:44 ಲೂಕನು 24:44ಆಗ ಆತನು ಅವರಿಗೆ--ಮೋಶೆಯ ನ್ಯಾಯ ಪ್ರಮಾಣದಲ್ಲಿಯೂ ಪ್ರವಾದನೆಗಳಲ್ಲಿಯೂ ಕೀರ್ತನೆ ಗಳಲ್ಲಿಯೂ ನನ್ನನ್ನು ಕುರಿತಾಗಿ ಬರೆಯಲ್ಪಟ್ಟವು ಗಳೆಲ್ಲವು ನೆರವೇರುವದು ಅಗತ್ಯವಾಗಿದೆ ಎಂಬ ಈ ಮಾತುಗಳನ್ನು ನಾನು ನಿಮ್ಮೊಂದಿಗೆ ಇದ್ದಾಗಲೇ ಹೇಳಿದ್ದೆನು ಅಂದನು.
- Matthew 2:23 ಮತ್ತಾಯನು 2:23ಅವನು ನಜರೇತೆಂಬ ಪಟ್ಟಣಕ್ಕೆ ಬಂದು ಅಲ್ಲಿ ವಾಸಿಸಿದನು; ಇದರಿಂದ--ಆತನು ನಜರಾಯನೆಂದು ಕರೆಯಲ್ಪ ಡುವನು ಎಂಬದಾಗಿ ಪ್ರವಾದಿಗಳಿಂದ ಹೇಳಲ್ಪಟ್ಟದ್ದು ನೆರವೇರುವಂತೆ ಹೀಗಾಯಿತು.
- 1 Kings 8:15 1 ಅರಸುಗಳು 8:15ಅವನುನನ್ನ ತಂದೆಯಾದ ದಾವೀದನ ಸಂಗಡ ಮಾತನಾಡಿ ತನ್ನ ಕೈಯಿಂದ ನೆರವೇರಿಸಿದ ಇಸ್ರಾಯೇಲಿನ ದೇವ ರಾದ ಕರ್ತನು ಸ್ತುತಿಸಲ್ಪಡಲಿ. ಆತನು ಹೇಳಿದ್ದೇ ನಂದರೆ--
- Acts 3:18 ಅಪೊಸ್ತಲರ ಕೃತ್ಯಗಳು 3:18ಕ್ರಿಸ್ತನು ಬಾಧೆಪಡ ಬೇಕೆಂದು ದೇವರು ಮುಂದಾಗಿ ತನ್ನ ಎಲ್ಲಾ ಪ್ರವಾದಿ ಗಳ ಬಾಯಿಂದ ಹೇಳಿಸಿದವುಗಳನ್ನು ಹೀಗೆ ನೆರವೇರಿ ಸಿದನು.
- 1 Kings 8:24 1 ಅರಸುಗಳು 8:24ನಿನ್ನ ಸೇವಕನಾದಂಥ ನನ್ನ ತಂದೆ ಯಾದ ದಾವೀದನಿಗೆ ವಾಗ್ದಾನಮಾಡಿ ನೆರವೇರಿಸಿದಾ ತನೇ,
- John 17:12 ಯೋಹಾನನು 17:12ನಾನು ಅವರೊಂದಿಗೆ ಲೋಕದಲ್ಲಿದ್ದಾಗ ನಿನ್ನ ಹೆಸರಿನಲ್ಲಿ ಅವರನ್ನು ಕಾಪಾಡಿದೆನು; ನೀನು ನನಗೆ ಕೊಟ್ಟವರನ್ನು ನಾನು ಕಾಪಾಡಿದ್ದೇನೆ; ಬರಹವು ನೆರವೇರುವ ಹಾಗೆ ಆ ನಾಶನದ ಮಗನೇ ಹೊರತು ಅವರಲ್ಲಿ ಒಬ್ಬನೂ ನಾಶವಾಗಲಿಲ್ಲ.
- Matthew 12:17 ಮತ್ತಾಯನು 12:17ಹೀಗೆ ಪ್ರವಾದಿಯಾದ ಯೆಶಾಯನಿಂದ ಹೇಳಲ್ಪಟ್ಟಿದ್ದು ನೆರವೇರಿತು; ಅದೇನಂದರೆ--
- John 18:9 ಯೋಹಾನನು 18:9ಹೀಗೆ--ನೀನು ನನಗೆ ಕೊಟ್ಟವರಲ್ಲಿ ಒಬ್ಬನನ್ನಾದರೂ ನಾನು ಕಳಕೊಳ್ಳಲಿಲ್ಲವೆಂದು ಆತನು ಹೇಳಿದ ಮಾತು ನೆರವೇರುವಂತೆ ಇದಾಯಿತು.
- Matthew 13:35 ಮತ್ತಾಯನು 13:35ಹೀಗೆ--ಸಾಮ್ಯಗಳನ್ನು ಹೇಳುವಂತೆ ನನ್ನ ಬಾಯಿ ತೆರೆಯುವೆನು; ಲೋಕದ ಅಸ್ತಿವಾರದಿಂದ ಮರೆಯಾಗಿ ಇಡಲ್ಪಟ್ಟವುಗಳನ್ನು ನಾನು ಹೊರಪಡಿಸುವೆನು ಎಂದು ಪ್ರವಾದಿಯಿಂದ ಹೇಳಲ್ಪಟ್ಟದ್ದು ನೆರವೇರಿತು.
- John 19:36–37 ಯೋಹಾನನು 19:36–37ಯಾಕಂದರೆ--ಆತನ ಒಂದು ಎಲುಬಾದರೂ ಮುರಿಯಲ್ಪಡಬಾರದು ಎಂಬ ಬರಹವು ನೆರವೇರುವಂತೆ ಇವುಗಳು ಸಂಭವಿಸಿದವು. ತಿರಿಗಿ ಮತ್ತೊಂದು ಬರಹವು--ಅವರು ತಾವು ಇರಿದವನನ್ನು ನೋಡುವರು ಎಂದು ಹೇಳುತ್ತದೆ.
- Ezra 1:1 ಎಜ್ರನು 1:1ಯೆರೆವಿಾಯನ ಮುಖಾಂತರ ಕರ್ತನು ಹೇಳಿದ ವಾಕ್ಯವು ಈಡೇರುವ ಹಾಗೆ ಪಾರಸಿಯ ಅರಸನಾದ ಕೋರೆಷನ ಮೊದಲನೇ ವರುಷದಲ್ಲಿ ಕರ್ತನು ಪಾರಸಿಯ ಅರಸನಾದ ಕೋರೆಷನ ಆತ್ಮವನ್ನು ಪ್ರೇರೇಪಿಸಿದ್ದರಿಂದ ಅವನು ತನ್ನ ರಾಜ್ಯದಲ್ಲಿ ಎಲ್ಲೆಲ್ಲಿಯೂ ಸಾರೋಣದಿಂದಲೂ ಬರಹದಿಂದಲೂ ಹೇಳಿದ್ದೇನಂದರೆ--
- John 12:38–40 ಯೋಹಾನನು 12:38–40ಇದರಿಂದ--ಕರ್ತನೇ, ನಮ್ಮ ವರ್ತ ಮಾನವನ್ನು ಯಾರು ನಂಬಿದ್ದಾರೆ? ಕರ್ತನ ಬಾಹುವು ಯಾರಿಗೆ ಪ್ರಕಟವಾಯಿತು ಎಂದು ಪ್ರವಾದಿಯಾದ ಯೆಶಾಯನು ನುಡಿದದ್ದು ನೆರವೇರುವ ಹಾಗೆ ಇದಾಯಿತು. ಅವರು ನಂಬಲಾರದೆ ಇದ್ದದರಿಂದ ಯೆಶಾಯನು ತಿರಿಗಿ ಹೇಳಿದ್ದೇನಂದರೆ-- ಅವರು ಕಣ್ಣಿನಿಂದ ಕಾಣದೆ ಹೃದಯದಿಂದ ಗ್ರಹಿಸದೆ ಮತ್ತು ತಿರುಗಿಕೊಂಡು ನನ್ನಿಂದ ಸ್ವಸ್ಥತೆಯನ್ನು ಹೊಂದದೆ ಇರುವಂತೆ ಆತನು ಅವರ ಕಣ್ಣುಗಳನ್ನು ಕುರುಡು ಮಾಡಿ ಅವರ ಹೃದಯವನ್ನು ಕಠಿಣ ಮಾಡಿದನು ಎಂಬದು.