Matthew · chapter 1 · verse 7
Matthew 1:7 in Kannada
ಸೊಲೊಮೋನನಿಂದ ರೆಹಬ್ಬಾಮನು ಹುಟ್ಟಿದನು; ರೆಹಬ್ಬಾಮನಿಂದ ಅಬೀಯನು ಹುಟ್ಟಿದನು; ಅಬೀಯನಿಂದ ಆಸನು ಹುಟ್ಟಿದನು;
Solomonaninda rehabbaamanu huttidanu; rehabbaamaninda abeeyanu huttidanu; abeeyaninda aasanu huttidanu;
Matthew 1:7 in English
- King James Version (KJV)
- And Solomon begat Roboam; and Roboam begat Abia; and Abia begat Asa;
- World English Bible (WEB)
- Solomon became the father of Rehoboam. Rehoboam became the father of Abijah. Abijah became the father of Asa.
- American Standard Version (ASV)
- and Solomon begat Rehoboam; and Rehoboam begat Abijah; and Abijah begat Asa;
- Bible in Basic English (BBE)
- And the son of Solomon was Rehoboam; and the son of Rehoboam was Abijah; and the son of Abijah was Asa;
- Darby Translation (DBY)
- and Solomon begat Roboam, and Roboam begat Abia, and Abia begat Asa,
- Webster's Bible (WBS)
- And Solomon begat Roboam; and Roboam begat Abia; and Abia begat Asa;
- Young's Literal Translation (YLT)
- and Solomon begat Rehoboam, and Rehoboam begat Abijah, and Abijah begat Asa,
Read in context
- 5ಸಲ್ಮೋನನಿಂದ ರಾಹಾಬಳಲ್ಲಿ ಬೋವಜನು ಹುಟ್ಟಿ ದನು; ಬೋವಜನಿಂದ ರೂತಳಲ್ಲಿ ಓಬೇದನು ಹುಟ್ಟಿದನು; ಓಬೇದನಿಂದ ಇಷಯನು ಹುಟ್ಟಿದನು;
- 6ಇಷಯನಿಂದ ಅರಸನಾದ ದಾವೀದನು ಹುಟ್ಟಿದನು. ಅರಸನಾದ ದಾವೀದನಿಂದ ಊರೀಯನ ಹೆಂಡತಿ ಯಾಗಿದ್ದವಳಲ್ಲಿ ಸೊಲೊಮೋನನು ಹುಟ್ಟಿದನು;
- 7ಸೊಲೊಮೋನನಿಂದ ರೆಹಬ್ಬಾಮನು ಹುಟ್ಟಿದನು; ರೆಹಬ್ಬಾಮನಿಂದ ಅಬೀಯನು ಹುಟ್ಟಿದನು; ಅಬೀಯನಿಂದ ಆಸನು ಹುಟ್ಟಿದನು;
- 8ಆಸನಿಂದ ಯೆಹೋಷಾಫಾಟನು ಹುಟ್ಟಿದನು; ಯೆಹೋಷಾ ಫಾಟನಿಂದ ಯೆಹೋರಾಮನು ಹುಟ್ಟಿದನು; ಯೆಹೋ ರಾಮನಿಂದ ಉಜ್ಜೀಯನು ಹುಟ್ಟಿದನು;
- 9ಉಜ್ಜೀಯ ನಿಂದ ಯೋತಾಮನು ಹುಟ್ಟಿದನು; ಯೋತಾಮನಿಂದ ಆಹಾಜನು ಹುಟ್ಟಿದನು; ಆಹಾಜನಿಂದ ಹಿಜ್ಕೀಯನು ಹುಟ್ಟಿದನು;
Cross references
- 2 Chronicles 14:1–15 2 ಪೂರ್ವಕಾಲವೃತ್ತಾಂತ 14:1–15ಅಬೀಯನು ತನ್ನ ಪಿತೃಗಳ ಸಂಗಡ ನಿದ್ರಿಸಿದನು; ಅವನು ದಾವೀದನ ಪಟ್ಟಣದಲ್ಲಿ ಹೂಣಲ್ಪಟ್ಟನು; ಅವನ ಮಗನಾದ ಆಸನು ಅವನಿಗೆ ಬದಲಾಗಿ ಆಳಿದನು. ಅವನ ದಿವಸಗಳಲ್ಲಿ ಹತ್ತು ವರುಷ ದೇಶವು ಶಾಂತವಾಗಿತ್ತು, ಆಸನು ತನ್ನ ದೇವರಾದ ಕರ್ತನ ದೃಷ್ಟಿಯಲ್ಲಿ ಒಳ್ಳೇದನ್ನೂ ಸರಿಯಾದದ್ದನ್ನೂ ಮಾಡಿದನು. ಅವನು ಅನ್ಯದೇವರು ಗಳ ಬಲಿಪೀಠಗಳನ್ನೂ ಉನ್ನತ ಸ್ಥಳಗಳನ್ನೂ ತೆಗೆದು ಹಾಕಿ ವಿಗ್ರಹಗಳನ್ನು ಒಡೆದುಬಿಟ್ಟು ಅವುಗಳ ತೋಪು ಗಳನ್ನು ಕಡಿದುಹಾಕಿ, ತಮ್ಮ ಪಿತೃಗಳ ದೇವರಾದ ಕರ್ತನನ್ನು ಹುಡುಕಲೂ ನ್ಯಾಯಪ್ರಮಾಣವನ್ನು ಆಜ್ಞೆಯನ್ನು ಕೈಕೊಳ್ಳಲೂ ಯೆಹೂದ್ಯರಿಗೆ ಆಜ್ಞಾಪಿ ಸಿದನು. ಇದಲ್ಲದೆ ಅವನು ಉನ್ನತ ಸ್ಥಳಗಳನ್ನೂ ವಿಗ್ರಹಗಳನ್ನೂ ಯೆಹೂದದ ಸಮಸ್ತ ಪಟ್ಟಣಗಳಿಂದ ತೆಗೆದುಹಾಕಿದನು. ರಾಜ್ಯವು ಅವನ ಮುಂದೆ ಶಾಂತ ವಾಗಿತ್ತು. ಇದಲ್ಲದೆ ಅವನು ಯೆಹೂದದಲ್ಲಿ ಕೋಟೆ ಗಳುಳ್ಳ ಪಟ್ಟಣಗಳನ್ನು ಕಟ್ಟಿಸಿದನು. ದೇಶವು ಶಾಂತವಾ ಗಿತ್ತು. ಕರ್ತನು ಅವನಿಗೆ ವಿಶ್ರಾಂತಿ ಕೊಟ್ಟದ್ದರಿಂದ ಆ ವರುಷಗಳಲ್ಲಿ ಅವನಿಗೆ ಯುದ್ಧವಿರಲಿಲ್ಲ. ಅವನು ಯೆಹೂದದವರಿಗೆ--ದೇಶವು ನಮ್ಮ ಮುಂದೆ ಇರು ವಾಗ ಈ ಪಟ್ಟಣಗಳನ್ನು ಕಟ್ಟಿಸಿ ಅವುಗಳ ಸುತ್ತಲೂ ಗೋಡೆಗಳನ್ನೂ ಗೋಪುರಗಳನ್ನೂ ಬಾಗಲುಗಳನ್ನೂ ಅಗುಳಿಗಳನ್ನೂ ಮಾಡೋಣ; ಯಾಕಂದರೆ ನಾವು ನಮ್ಮ ದೇವರಾದ ಕರ್ತನನ್ನು ಹುಡುಕಿದೆವು; ನಾವು ಆತನನ್ನು ಹುಡುಕಿದ್ದರಿಂದ ಆತನು ಎಲ್ಲಾ ಕಡೆಯಲ್ಲಿ ನಮಗೆ ವಿಶ್ರಾಂತಿಯನ್ನು ಕೊಟ್ಟಿದ್ದಾನೆ ಅಂದನು. ಹಾಗೆಯೇ ಅವರು ಕಟ್ಟಿಸಿ ವೃದ್ಧಿಹೊಂದಿದರು. ಇದ ಲ್ಲದೆ ಆಸನಿಗೆ ಖೇಡ್ಯಗಳನ್ನೂ ಈಟಿಗಳನ್ನೂ ಹಿಡಿ ಯುವ ರಾಣುವೆ ಇತ್ತು. ಯೆಹೂದದವರು ಮೂರು ಲಕ್ಷಮಂದಿಯೂ ಬೆನ್ಯಾವಿಾನಿನವರು ಗುರಾಣಿಗಳನ್ನು ಹಿಡಿಯುವವರೂ, ಬಿಲ್ಲುಗಳನ್ನು ಎಸೆಯುವವರೂ ಎರಡು ಲಕ್ಷದ ಎಂಭತ್ತು ಸಾವಿರ ಮಂದಿಯೂ ಇದ್ದರು. ಇವರೆಲ್ಲರು ಪರಾಕ್ರಮಶಾಲಿಗಳಾಗಿದ್ದರು. ಆದರೆ ಕೂಷಿಯನಾದ ಜೆರಹನು ಅವರಿಗೆ ವಿರೋ ಧವಾಗಿ ಹೊರಟು ಮಾರೇಷದ ಮಟ್ಟಿಗೂ ಬಂದನು. ಅವನ ಸಂಗಡ ಹತ್ತು ಲಕ್ಷ ಜನ ರಾಣುವೆಯೂ ಮುನ್ನೂರು ರಥಗಳೂ ಇದ್ದವು. ಆಸನು ಅವನಿ ಗೆದುರಾಗಿ ಹೊರಟುಹೋದನು. ಮಾರೇಷದ ಬಳಿ ಯಲ್ಲಿ ಚೆಫಾತಾ ತಗ್ಗಿನಲ್ಲಿ ವ್ಯೂಹ ಕಟ್ಟಿದರು. ಆಗ ಆಸನು ತನ್ನ ದೇವರಾದ ಕರ್ತನನ್ನು ಕರೆದು--ಕರ್ತನೇ, ಅನೇಕರ ಮಧ್ಯದಲ್ಲಿ ಬಲಹೀನರಿಗೆ ಸಹಾಯಕೊಡು ವವನು ನಮ್ಮ ದೇವರಾದ ಕರ್ತನೇ, ನಮಗೆ ಸಹಾಯ ಕೊಡು; ಯಾಕಂದರೆ ನಾವು ನಿನ್ನ ಮೇಲೆ ಆತುಕೊಂಡಿ ದ್ದೇವೆ; ನಿನ್ನ ಹೆಸರಿನಲ್ಲಿ ನಾವು ಈ ಗುಂಪಿನ ಮೇಲೆ ಹೋಗುತ್ತೇವೆ; ಓ ಕರ್ತನೇ, ನಿನ್ನ ಹೊರತು ಬೇರೆ ಯಾರೂ ಇಲ್ಲ, ನೀನೇ ನಮ್ಮ ದೇವರು; ಮನುಷ್ಯನು ನಿನ್ನೆದುರಿನಲ್ಲಿ ಬಲಗೊಳ್ಳದಿರಲಿ ಅಂದನು. ಆಗ ಕರ್ತನು ಕೂಷಿಯರನ್ನು ಆಸನ ಮುಂದೆಯೂ ಯೆಹೂ ದದವರ ಮುಂದೆಯೂ ಹೊಡೆದನು. ಆದದರಿಂದ ಕೂಷಿಯರು ಓಡಿಹೋದರು. ಆಗ ಆಸನೂ ಅವನ ಸಂಗಡ ಇದ್ದ ಜನರೂ ಅವರನ್ನು ಗೆರಾರಿನ ವರೆಗೂ ಹಿಂದಟ್ಟಿದರು. ಕೂಷಿಯರು ತಮಗೆ ತ್ರಾಣವಿಲ್ಲದ ಹಾಗೆ ಸೋತುಹೋದರು. ಅವರು ಕರ್ತನ ಮುಂದೆಯೂ ಆತನ ಸೈನ್ಯದ ಮುಂದೆಯೂ ನಾಶ ವಾದರು. ಯೆಹೂದದವರು ಬಹು ಕೊಳ್ಳೆಯನ್ನು ಒಯ್ದರು. ಅವರು ಗೆರಾರಿನ ಸುತ್ತಲಿರುವ ಸಮಸ್ತ ಪಟ್ಟಣಗಳನ್ನು ಹೊಡೆದರು. ಕರ್ತನ ಭಯವು ಅವರ ಮೇಲೆ ಬಂತು. ಆ ಪಟ್ಟಣಗಳಲ್ಲಿ ಬಹು ಕೊಳ್ಳೆ ಇದ್ದದ್ದರಿಂದ ಇವುಗಳನ್ನೆಲ್ಲಾ ಕೊಳ್ಳೆಮಾಡಿದರು.ಪಶುಗಳಿದ್ದ ಡೇರೆಗಳನ್ನು ಹೊಡೆದು ಕುರಿಗಳನ್ನೂ ಒಂಟೆಗಳನ್ನೂ ಬಹಳವಾಗಿ ತೆಗೆದುಕೊಂಡು ಯೆರೂ ಸಲೇಮಿಗೆ ತಿರುಗಿದರು. ಪಶುಗಳಿದ್ದ ಡೇರೆಗಳನ್ನು ಹೊಡೆದು ಕುರಿಗಳನ್ನೂ ಒಂಟೆಗಳನ್ನೂ ಬಹಳವಾಗಿ ತೆಗೆದುಕೊಂಡು ಯೆರೂ ಸಲೇಮಿಗೆ ತಿರುಗಿದರು.
- 1 Kings 15:8–23 1 ಅರಸುಗಳು 15:8–23ಅಬೀಯಾಮನು ತನ್ನ ಪಿತೃಗಳ ಸಂಗಡ ಮಲಗಿ ದನು; ದಾವೀದನ ಪಟ್ಟಣದಲ್ಲಿ ಅವನನ್ನು ಹೂಣಿ ಟ್ಟರು. ಅವನ ಮಗನಾದ ಆಸನು ಅವನಿಗೆ ಬದಲಾಗಿ ಆಳಿದನು. ಇಸ್ರಾಯೇಲಿನ ಅರಸನಾದ ಯಾರೊಬ್ಬಾಮನ ಇಪ್ಪತ್ತನೇ ವರುಷದಲ್ಲಿ ಆಸನು ಯೆಹೂದದ ಮೇಲೆ ಆಳಿದನು. ನಾಲ್ವತ್ತೊಂದು ವರುಷ ಅವನು ಯೆರೂ ಸಲೇಮಿನಲ್ಲಿ ಆಳಿದನು. ಅವನ ತಾಯಿ ಅಬೀಷಾ ಲೋಮನ ಮಗಳಾಗಿದ್ದು ಮಾಕಾಳೆಂಬ ಹೆಸರುಳ್ಳವ ಳಾಗಿದ್ದಳು. ಆಸನು ತನ್ನ ತಂದೆಯಾದ ದಾವೀದನ ಹಾಗೆ ಕರ್ತನ ಸಮ್ಮುಖದಲ್ಲಿ ಮೆಚ್ಚಿಗೆಯಾದದ್ದನ್ನು ಮಾಡಿದನು. ಅವನು ಪುರುಷ ಸಂಗಮರನ್ನು ದೇಶದಲ್ಲಿಂದ ಹೊರಡಿಸಿ ತನ್ನ ಪಿತೃಗಳು ಮಾಡಿದ ಸಮಸ್ತ ವಿಗ್ರಹಗಳನ್ನು ತೆಗೆದುಹಾಕಿದನು. ಇದಲ್ಲದೆ ಆಸನು ತನ್ನ ತಾಯಿಯಾದ ಮಾಕಾ ತೋಪಿನಲ್ಲಿ ಒಂದು ವಿಗ್ರಹವನ್ನು ಮಾಡಿಸಿ ಇಟ್ಟದ್ದರಿಂದ ಅವಳನ್ನು ರಾಣಿಯಾಗಿರದ ಹಾಗೆ ತೆಗೆದುಹಾಕಿ ಅವಳ ವಿಗ್ರಹ ವನ್ನು ಕಡಿದುಬಿಟ್ಟು ಕಿದ್ರೋನೆಂಬ ಹಳ್ಳದ ಬಳಿಯಲ್ಲಿ ಅದನ್ನು ಸುಟ್ಟುಬಿಟ್ಟನು. ಉನ್ನತ ಸ್ಥಳಗಳಾದರೋ ಅವು ತೆಗೆದು ಹಾಕಲ್ಪಟ್ಟಿದ್ದಿಲ್ಲ; ಆದಾಗ್ಯೂ ಆಸನ ಹೃದಯವು ತನ್ನ ಸಮಸ್ತ ದಿವಸಗಳಲ್ಲಿ ಕರ್ತನ ದೃಷ್ಟಿಯಲ್ಲಿ ದೋಷವಿಲ್ಲದ್ದಾಗಿತ್ತು. ತಾನೂ ತನ್ನ ತಂದೆಯೂ ಅರ್ಪಿಸಿದ ಬೆಳ್ಳಿಯೂ ಬಂಗಾರವೂ ಸಾಮಾನುಗಳೂ ಅಂತೂ ಪ್ರತಿಷ್ಠಿಸಿದವುಗಳನ್ನು ಅವನು ಕರ್ತನ ಮಂದಿರಕ್ಕೆ ತಂದನು. ಆಸನಿಗೂ ಇಸ್ರಾಯೇಲಿನ ಅರಸನಾದ ಬಾಷ ನಿಗೂ ಅವರ ಜೀವಾಂತ್ಯದ ವರೆಗೆ ಯುದ್ಧ ನಡೆಯು ತ್ತಿತ್ತು. ಆಗ ಇಸ್ರಾಯೇಲಿನ ಅರಸನಾದ ಬಾಷನು ಯೆಹೂದಕ್ಕೆ ವಿರೋಧವಾಗಿ ಹೋಗಿ ಯೆಹೂದದ ಅರಸನಾದ ಆಸನ ಬಳಿಗೆ ಒಳಗಾಗಲಿ ಹೊರಗಾಗಲಿ ಯಾರೂ ಹೋಗದ ಹಾಗೆ ರಾಮವನ್ನು ಕಟ್ಟಿಸಿದನು. ಆಗ ಆಸನು ಕರ್ತನ ಮಂದಿರದ ಬೊಕ್ಕಸಗಳನ್ನೂ ಮಿಕ್ಕ ಸಮಸ್ತ ಬೆಳ್ಳಿ ಬಂಗಾರವನ್ನು ಅರಮನೆಯ ಬೊಕ್ಕಸಗಳಲ್ಲಿ ತೆಗೆದು ತನ್ನ ಸೇವಕರ ಕೈಯಲ್ಲಿ ಒಪ್ಪಿಸಿ ದಮಸ್ಕ ಪಟ್ಟಣದಲ್ಲಿ ವಾಸವಾಗಿರುವ ಹೆಜ್ಯೋನನ ಮೊಮ್ಮಗನೂ ಟಬ್ರಿಮ್ಮೋನನ ಮಗನೂ ಆಗಿರುವ ಅರಾಮಿನ ಅರಸನಾದ ಬೆನ್ಹದದನಿಗೆ ಅವುಗಳನ್ನು ಕಳುಹಿಸಿ--ನನಗೂ ನಿನಗೂ ನನ್ನ ತಂದೆಗೂ ನಿನ್ನ ತಂದೆಗೂ ಒಡಂಬಡಿಕೆ ಉಂಟಲ್ಲಾ. ಇಗೋ, ನಾನು ಬೆಳ್ಳಿ ಬಂಗಾರವನ್ನು ಕಾಣಿಕೆಯಾಗಿ ನಿನ್ನ ಬಳಿಗೆ ಕಳುಹಿಸಿದ್ದೇನೆ. ಇಸ್ರಾಯೇಲಿನ ಅರಸನಾದ ಬಾಷನು ನನ್ನನ್ನು ಬಿಟ್ಟು ಹೋಗುವ ಹಾಗೆ ನೀನು ಬಂದು ಅವನ ಸಂಗಡ ಮಾಡಿದ ನಿನ್ನ ಒಡಂಬಡಿಕೆಯನ್ನು ಮುರಿಯಬೇಕು ಅಂದನು. ಹಾಗೆಯೇ ಬೆನ್ಹದದನು ಅರಸನಾದ ಆಸನ ಮಾತನ್ನು ಕೇಳಿ ಇಸ್ರಾಯೇಲಿನ ಪಟ್ಟಣಗಳಿಗೆ ವಿರೋಧವಾಗಿ ತನಗುಂಟಾದ ಸೈನ್ಯಗಳ ಅಧಿಪತಿ ಗಳನ್ನು ಕಳುಹಿಸಿ ಇಯ್ಯೋನ್, ದಾನ್, ಆಬೇಲ್ಬೇ ತ್ಮಾಕಾ ಸಮಸ್ತ ಕಿನ್ನೆರೋತ್, ಸಮಸ್ತ ನಫ್ತಾಲಿ ದೇಶವು, ಇವುಗಳನ್ನು ಹೊಡೆದುಬಿಟ್ಟನು. ಬಾಷನು ಅದನ್ನು ಕೇಳುತ್ತಲೆ ರಾಮವನ್ನು ಕಟ್ಟಿಸುವದನ್ನು ಬಿಟ್ಟು ತಿರ್ಚ ದಲ್ಲಿ ವಾಸಿಸಿದನು. ಆಗ ಅರಸನಾದ ಆಸನು ಯೆಹೂದದೆಲ್ಲೆಲ್ಲಿಯೂ ಸಾರಿದನು; ಒಬ್ಬರೂ ಬಿಡಲ್ಪ ಡಲಿಲ್ಲ; ಆಗ ಅವರು ಬಾಷನು ಕಟ್ಟಿಸಿದ ರಾಮದ ಕಲ್ಲುಗಳನ್ನೂ ಅದರ ಮರಗಳನ್ನೂ ತಕ್ಕೊಂಡು ಹೋದರು. ಅರಸನಾದ ಆಸನು ಅವುಗಳಿಂದ ಬೆನ್ಯಾವಿಾನನ ಗೆಬವನ್ನೂ ಮಿಚ್ಪೆಯನ್ನೂ ಕಟ್ಟಿಸಿದನು. ಆಸನ ಮಿಕ್ಕಾದ ಎಲ್ಲಾ ಕ್ರಿಯೆಗಳೂ ಅವನ ಸಮಸ್ತ ಪರಾಕ್ರಮವೂ ಅವನು ಮಾಡಿದ್ದೆಲ್ಲವೂ ಅವನು ಕಟ್ಟಿಸಿದ ಪಟ್ಟಣಗಳೂ ಯೆಹೂದದ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯ ಲ್ಪಡಲಿಲ್ಲವೋ? ಆದರೆ ತನ್ನ ವೃದ್ದಾಪ್ಯದ ಕಾಲದಲ್ಲಿ ಅವನು ತನ್ನ ಕಾಲುಗಳಲ್ಲಿ ಅಸ್ವಸ್ಥನಾಗಿದ್ದನು.
- 1 Chronicles 3:10–14 1 ಪೂರ್ವಕಾಲವೃತ್ತಾಂತ 3:10–14ಸೊಲೊಮೋನನ ಮಗನು ರೆಹಬ್ಬಾಮನು; ಇವನ ಮಗನು ಅಬೀಯನು; ಇವನ ಮಗನು ಆಸನು; ಇವನ ಮಗನು ಯೆಹೋಷಾಫಾಟನು. ಇವನ ಮಗನು ಯೆಹೋರಾಮನು; ಇವನ ಮಗನು ಅಹಜ್ಯನು; ಇವನ ಮಗನು ಯೆಹೋವಾಷನು. ಇವನ ಮಗನು ಅಮಚ್ಯನು; ಇವನ ಮಗನು ಅಜರ್ಯನು; ಇವನ ಮಗನು ಯೋತಾಮನು. ಇವನ ಮಗನು ಆಹಾಜನು; ಇವನ ಮಗನು ಹಿಜ್ಕೀಯನು; ಇವನ ಮಗನು ಮನಸ್ಸೆಯು. ಇವನ ಮಗನು ಅಮೋನನು; ಇವನ ಮಗನು ಯೋಷೀ ಯನು.
- 2 Chronicles 13:7 2 ಪೂರ್ವಕಾಲವೃತ್ತಾಂತ 13:7ಇದಲ್ಲದೆ ನಿಷ್ಪ್ರಯೋಜಕರಾದ ಬೆಲಿಯಾಳನ ಮಕ್ಕಳು ಅವನ ಬಳಿಗೆ ಕೂಡಿ ಬಂದು ಸೊಲೊಮೋನನ ಮಗನಾದ ರೆಹಬ್ಬಾಮನು ಹುಡುಗ ನಾಗಿಯೂ ಮೃದು ಹೃದಯವುಳ್ಳವನಾಗಿಯೂ ಅವ ರನ್ನು ಎದುರಿಸಲು ಬಲವಿಲ್ಲದೆ ಇರುವಾಗ ಅವ ನಿಗೆ ವಿರೋಧವಾಗಿ ತಮ್ಮನ್ನು ಬಲಪಡಿಸಿಕೊಂಡಿ ದ್ದಾರೆ.
- 1 Kings 14:31 1 ಅರಸುಗಳು 14:31ರೆಹಬ್ಬಾಮನು ತನ್ನ ಪಿತೃಗಳ ಸಂಗಡ ಮಲಗಿದನು. ದಾವೀದನ ಪಟ್ಟಣದಲ್ಲಿ ಅವನು ಹೂಣಿಡಲ್ಪಟ್ಟನು. ಅವನ ತಾಯಿ ಅಮ್ಮೋನ್ಯಳಾದ ನಯಮಾಳೆಂಬ ಹೆಸರುಳ್ಳವಳಾ ಗಿದ್ದಳು. ಅವನ ಮಗನಾದ ಅಬೀಯಾಮನು ಅವನಿಗೆ ಬದಲಾಗಿ ಆಳಿದನು.
- 2 Chronicles 9:31 2 ಪೂರ್ವಕಾಲವೃತ್ತಾಂತ 9:31ಸೊಲೊಮೋನನು ತನ್ನ ಪಿತೃಗಳ ಸಂಗಡ ಮಲಗಿ ದನು; ತನ್ನ ತಂದೆಯಾದ ದಾವೀದನ ಪಟ್ಟಣದಲ್ಲಿ ಹೂಣಿಡಲ್ಪಟ್ಟನು. ಅವನ ಮಗನಾದ ರೆಹಬ್ಬಾಮನು ಅವನಿಗೆ ಬದಲಾಗಿ ಆಳಿದನು.
- 2 Chronicles 12:1 2 ಪೂರ್ವಕಾಲವೃತ್ತಾಂತ 12:1ರೆಹಬ್ಬಾಮನು ರಾಜ್ಯವನ್ನು ಸ್ಥಿರಮಾಡಿ ತನ್ನನ್ನು ಬಲಪಡಿಸಿಕೊಂಡಾಗ ಏನಾಯಿ ತಂದರೆ, ಅವನೂ ಅವನ ಸಂಗಡ ಸಮಸ್ತ ಇಸ್ರಾ ಯೇಲ್ಯರೂ ಕರ್ತನ ನ್ಯಾಯಪ್ರಮಾಣವನ್ನು ಬಿಟ್ಟು ಬಿಟ್ಟರು.