Matthew · chapter 1 · verse 9
Matthew 1:9 in Kannada
ಉಜ್ಜೀಯ ನಿಂದ ಯೋತಾಮನು ಹುಟ್ಟಿದನು; ಯೋತಾಮನಿಂದ ಆಹಾಜನು ಹುಟ್ಟಿದನು; ಆಹಾಜನಿಂದ ಹಿಜ್ಕೀಯನು ಹುಟ್ಟಿದನು;
Ujjeeya ninda yotaamanu huttidanu; yotaamaninda aahaajanu huttidanu; aahaajaninda hijkeeyanu huttidanu;
Matthew 1:9 in English
- King James Version (KJV)
- And Ozias begat Joatham; and Joatham begat Achaz; and Achaz begat Ezekias;
- World English Bible (WEB)
- Uzziah became the father of Jotham. Jotham became the father of Ahaz. Ahaz became the father of Hezekiah.
- American Standard Version (ASV)
- and Uzziah begat Jotham; and Jotham begat Ahaz; and Ahaz begat Hezekiah;
- Bible in Basic English (BBE)
- And the son of Uzziah was Jotham; and the son of Jotham was Ahaz; and the son of Ahaz was Hezekiah;
- Darby Translation (DBY)
- and Ozias begat Joatham, and Joatham begat Achaz, and Achaz begat Ezekias,
- Webster's Bible (WBS)
- And Ozias begat Joatham; and Joatham begat Achaz; and Achaz begat Ezekias;
- Young's Literal Translation (YLT)
- and Uzziah begat Jotham, and Jotham begat Ahaz, and Ahaz begat Hezekiah,
Read in context
- 7ಸೊಲೊಮೋನನಿಂದ ರೆಹಬ್ಬಾಮನು ಹುಟ್ಟಿದನು; ರೆಹಬ್ಬಾಮನಿಂದ ಅಬೀಯನು ಹುಟ್ಟಿದನು; ಅಬೀಯನಿಂದ ಆಸನು ಹುಟ್ಟಿದನು;
- 8ಆಸನಿಂದ ಯೆಹೋಷಾಫಾಟನು ಹುಟ್ಟಿದನು; ಯೆಹೋಷಾ ಫಾಟನಿಂದ ಯೆಹೋರಾಮನು ಹುಟ್ಟಿದನು; ಯೆಹೋ ರಾಮನಿಂದ ಉಜ್ಜೀಯನು ಹುಟ್ಟಿದನು;
- 9ಉಜ್ಜೀಯ ನಿಂದ ಯೋತಾಮನು ಹುಟ್ಟಿದನು; ಯೋತಾಮನಿಂದ ಆಹಾಜನು ಹುಟ್ಟಿದನು; ಆಹಾಜನಿಂದ ಹಿಜ್ಕೀಯನು ಹುಟ್ಟಿದನು;
- 10ಹಿಜ್ಕೀಯನಿಂದ ಮನಸ್ಸೆಯು ಹುಟ್ಟಿದನು; ಮನಸ್ಸೆಯಿಂದ ಆಮೋನನು ಹುಟ್ಟಿದನು; ಆಮೋನನಿಂದ ಯೋಷೀಯನು ಹುಟ್ಟಿದನು;
- 11ಅವರು ಬಾಬೆಲಿಗೆ ಸೆರೆಯಾಗಿ ಒಯ್ಯಲ್ಪಟ್ಟ ಸಮಯದಲ್ಲಿ ಯೋಷೀಯನಿಂದ ಯೆಕೊನ್ಯನೂ ಅವನ ಸಹೋದರರೂ ಹುಟ್ಟಿದರು.
Cross references
- 1 Chronicles 3:11–13 1 ಪೂರ್ವಕಾಲವೃತ್ತಾಂತ 3:11–13ಇವನ ಮಗನು ಯೆಹೋರಾಮನು; ಇವನ ಮಗನು ಅಹಜ್ಯನು; ಇವನ ಮಗನು ಯೆಹೋವಾಷನು. ಇವನ ಮಗನು ಅಮಚ್ಯನು; ಇವನ ಮಗನು ಅಜರ್ಯನು; ಇವನ ಮಗನು ಯೋತಾಮನು. ಇವನ ಮಗನು ಆಹಾಜನು; ಇವನ ಮಗನು ಹಿಜ್ಕೀಯನು; ಇವನ ಮಗನು ಮನಸ್ಸೆಯು.
- 2 Chronicles 27:1–32 2 ಪೂರ್ವಕಾಲವೃತ್ತಾಂತ 27:1–32ಯೋತಾಮನು ಆಳಲು ಆರಂಭಿಸಿದಾಗ ಇಪ್ಪತ್ತೈದು ವರುಷದವನಾಗಿದ್ದು ಯೆರೂಸ ಲೇಮಿನಲ್ಲಿ ಹದಿನಾರು ವರುಷಗಳು ಆಳಿದನು. ಇವನ ತಾಯಿಯಾದ ಯೆರೂಷಳು ಚಾದೋಕನ ಮಗಳು. ಇವನು ತನ್ನ ತಂದೆಯಾದ ಉಜ್ಜೀಯನು ಮಾಡಿದ ಎಲ್ಲಾದರ ಪ್ರಕಾರ ಕರ್ತನ ದೃಷ್ಟಿಯಲ್ಲಿ ಸರಿಯಾದ ದ್ದನ್ನು ಮಾಡಿದನು. ಆದರೆ ಕರ್ತನ ಮನೆಯಲ್ಲಿ ಪ್ರವೇಶಿಸಲಿಲ್ಲ. ಜನರು ಇನ್ನೂ ಕೆಟ್ಟದ್ದನ್ನು ಮಾಡುತ್ತಾ ಇದ್ದರು. ಇವನು ಕರ್ತನ ಮಂದಿರದ ಎತ್ತರವಾದ ಬಾಗಲನ್ನು ಕಟ್ಟಿಸಿ ಓಫೇಲ್ ಎಂಬ ಗೋಡೆಯ ಮೇಲೆ ಬಹಳವಾಗಿ ಕಟ್ಟಿಸಿದನು. ಇದಲ್ಲದೆ ಯೆಹೂದ ಪರ್ವತಗಳಲ್ಲಿ ಪಟ್ಟಣಗಳನ್ನೂ ಅರಣ್ಯದಲ್ಲಿ ಕೋಟೆ ಗಳನ್ನೂ ಗಡೀಸ್ಥಾನಗಳನ್ನೂ ಕಟ್ಟಿಸಿದನು. ಇವನು ಅಮ್ಮೋನಿಯರ ಅರಸನ ಸಂಗಡ ಯುದ್ಧಮಾಡಿ ಅವ ನನ್ನು ಜಯಿಸಿದನು. ಆದ್ದರಿಂದ ಅಮ್ಮೋನನ ಮಕ್ಕಳು ಅದೇ ವರುಷದಲ್ಲಿ ನೂರು ಬೆಳ್ಳಿ ತಲಾಂತುಗಳನ್ನೂ ಹತ್ತುಸಾವಿರ ಅಳತೆಯ ಗೋಧಿಯನ್ನೂ ಹತ್ತು ಸಾವಿರ ಕೋರ್ ಜವೆ ಗೋಧಿಯನ್ನೂ ಅವನಿಗೆ ಕೊಟ್ಟರು. ಅಮ್ಮೋನನ ಮಕ್ಕಳು ಎರಡನೇ ವರುಷದಲ್ಲಿಯೂ ಮೂರನೇ ವರುಷದಲ್ಲಿಯೂ ಅದೇ ಪ್ರಕಾರ ಅವನಿಗೆ ಕೊಟ್ಟರು. ಹೀಗೆಯೇ ಯೋತಾಮನು ತನ್ನ ದೇವ ರಾದ ಕರ್ತನ ಮುಂದೆ ತನ್ನ ಮಾರ್ಗಗಳನ್ನು ಸರಿಪಡಿಸಿ ದ್ದರಿಂದ ಇವನು ಬಲಗೊಂಡನು. ಯೋತಾಮನ ಮಿಕ್ಕಾದ ಕ್ರಿಯೆಗಳೂ ಅವನು ಮಾಡಿದ ಯುದ್ಧಗಳೂ ಅವನ ಮಾರ್ಗಗಳೂ ಇಗೋ, ಅವು ಇಸ್ರಾಯೇಲ್ ಯೆಹೂದ ಅರಸುಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ. ಇವನು ಆಳಲು ಆರಂಭಿಸಿದಾಗ ಇಪ್ಪತ್ತೈದು ವರುಷ ದವನಾಗಿದ್ದು ಯೆರೂಸಲೇಮಿನಲ್ಲಿ ಹದಿನಾರು ವರುಷ ಆಳಿದನು.ಯೋತಾಮನು ತನ್ನ ಪಿತೃಗಳ ಸಂಗಡ ನಿದ್ರಿಸಿದನು; ಅವರು ಅವನನ್ನು ದಾವೀದನ ಪಟ್ಟಣದಲ್ಲಿ ಹೂಣಿಟ್ಟರು. ಅವನ ಮಗನಾದ ಆಹಾ ಜನು ಅವನಿಗೆ ಬದಲಾಗಿ ಆಳಿದನು. ಯೋತಾಮನು ತನ್ನ ಪಿತೃಗಳ ಸಂಗಡ ನಿದ್ರಿಸಿದನು; ಅವರು ಅವನನ್ನು ದಾವೀದನ ಪಟ್ಟಣದಲ್ಲಿ ಹೂಣಿಟ್ಟರು. ಅವನ ಮಗನಾದ ಆಹಾ ಜನು ಅವನಿಗೆ ಬದಲಾಗಿ ಆಳಿದನು.
- 2 Kings 18:1–20 2 ಅರಸುಗಳು 18:1–20ಇಸ್ರಾಯೇಲಿನ ಅರಸನಾಗಿರುವ ಏಲನ ಮಗನಾದ ಹೋಶೇಯನ ಆಳ್ವಿಕೆಯ ಮೂರನೇ ವರುಷದಲ್ಲಿ ಯೆಹೂದದ ಅರಸನಾಗಿರುವ ಆಹಾಜನ ಮಗನಾದ ಹಿಜ್ಕೀಯನು ಆಳಲು ಆರಂಭಿ ಸಿದನು. ಅವನು ಆಳಲು ಆರಂಭಿಸಿದಾಗ ಇಪ್ಪ ತ್ತೈದು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಇಪ್ಪ ತ್ತೊಂಭತ್ತು ವರುಷ ಆಳಿದನು. ಅವನ ತಾಯಿಯ ಹೆಸರು ಅಬಿಯು; ಅವಳು ಜೆಕರ್ಯನ ಮಗಳಾಗಿದ್ದಳು. ಅವನು ತನ್ನ ತಂದೆಯಾದ ದಾವೀದನು ಮಾಡಿದ ಹಾಗೆ ಕರ್ತನ ದೃಷ್ಟಿಗೆ ಒಳ್ಳೆಯದನ್ನು ಮಾಡಿದನು. ಅವನು ಉನ್ನತ ಸ್ಥಳಗಳನ್ನು ತೆಗೆದುಹಾಕಿ, ವಿಗ್ರಹ ಗಳನ್ನು ಒಡೆದುಬಿಟ್ಟು, ತೋಪುಗಳನ್ನು ಕಡಿದುಹಾಕಿ, ಮೋಶೆಯು ಮಾಡಿದ ತಾಮ್ರದ ಸರ್ಪವನ್ನು ಚೂರುಚೂರು ಮಾಡಿದನು. ಆ ದಿವಸಗಳ ವರೆಗೂ ಇಸ್ರಾ ಯೇಲಿನ ಮಕ್ಕಳು ಅದಕ್ಕೆ ಧೂಪಸುಡುತ್ತಿದ್ದರು. ಅದನ್ನು ತಾಮ್ರದ ತುಂಡು ಎಂದು ಅವನು ಕರೆದನು. ಅವನು ಇಸ್ರಾಯೇಲಿನ ದೇವರಾದ ಕರ್ತನಲ್ಲಿ ಭರವಸವುಳ್ಳ ವನಾಗಿದ್ದನು; ಅವನಿಗೆ ಮುಂಚೆ ಇದ್ದವರಲ್ಲಿಯೂ ಅವನ ತರುವಾಯ ಯೆಹೂದದ ಎಲ್ಲಾ ಅರಸುಗಳ ಲ್ಲಿಯೂ ಅವನ ಹಾಗೆ ಇದ್ದವನು ಒಬ್ಬನೂ ಇಲ್ಲ. ಅವನು ಕರ್ತನನ್ನು ಹಿಂಬಾಲಿಸುವದನ್ನು ಬಿಟ್ಟುಬಿಡದೆ ಆತನಿಗೆ ಹೊಂದಿಕೊಂಡು ಕರ್ತನು ಮೋಶೆಗೆ ಆಜ್ಞಾ ಪಿಸಿದ ಆಜ್ಞೆಗಳನ್ನು ಕೈಕೊಂಡನು. ಕರ್ತನು ಅವನ ಸಂಗಡ ಇದ್ದನು; ಅವನು ಯಾವ ಕಡೆಗೆ ಹೋದರೂ ಅವನಿಗೆ ಸಫಲವಾಗುತ್ತಿತ್ತು. ಅವನು ಅಶ್ಶೂರಿನ ಅರಸ ನನ್ನು ಸೇವಿಸದೆ ಅವನ ಮೇಲೆ ತಿರುಗಿ ಬಿದ್ದನು. ಅವನು ಫಿಲಿಷ್ಟಿಯರನ್ನು ಗಾಜದ ವರೆಗೂ ಅದರ ಮೇರೆಗಳ ವರೆಗೂ ಕಾವಲುಗಾರರ ಬುರುಜುಗಳ ಮೊದಲುಗೊಂಡು ಕೋಟೆಯುಳ್ಳ ಪಟ್ಟಣದ ವರೆಗೂ ಸಂಹರಿಸಿದನು. ಇಸ್ರಾಯೇಲಿನ ಅರಸನಾಗಿರುವ ಏಲನ ಮಗ ನಾದ ಹೋಶೇಯನ ಆಳ್ವಿಕೆಯ ಏಳನೇ ವರುಷದಲ್ಲಿ, ಅರಸನಾಗಿರುವ ಹಿಜ್ಕೀಯನ ನಾಲ್ಕನೇ ವರುಷದಲ್ಲಿ ಏನಾಯಿತಂದರೆ, ಅಶ್ಶೂರಿನ ಅರಸನಾದ ಶಲ್ಮನೆಸೆರನು ಸಮಾರ್ಯದ ಮೇಲೆ ಬಂದು ಅದನ್ನು ಮುತ್ತಿಗೆ ಹಾಕಿದನು. ಮೂರು ವರುಷವಾದ ತರುವಾಯ ಅವರು ಅದನ್ನು ತೆಗೆದುಕೊಂಡರು. ಇಸ್ರಾಯೇಲಿನ ಅರಸನಾಗಿರುವ ಹೋಶೇಯನ ಆಳ್ವಿಕೆಯ ಒಂಭತ್ತನೇ ವರುಷವಾದ ಹಿಜ್ಕೀಯನ ಆರನೇ ವರುಷದಲ್ಲಿ ಸಮಾ ರ್ಯವು ತೆಗೆದುಕೊಳ್ಳಲ್ಪಟ್ಟಿತು. ಅಶ್ಶೂರಿನ ಅರಸನು ಅಶ್ಶೂರಕ್ಕೆ ಇಸ್ರಾಯೇಲನ್ನು ಸೆರೆಯಾಗಿ ಒಯ್ದು ಗೋಜಾನ್ ನದಿಯ ಬಳಿಯಲ್ಲಿ ಹಲಹುನಲ್ಲಿಯೂ ಹಾಬೋರಿನಲ್ಲಿಯೂ ಮೇದ್ಯರ ಪಟ್ಟಣಗಳಲ್ಲಿಯೂ ಅವರನ್ನು ಇರಿಸಿದನು. ಅವರು ತಮ್ಮ ದೇವರಾದ ಕರ್ತನ ಶಬ್ದವನ್ನು ಕೇಳದೆ ಆತನ ಒಡಂಬಡಿಕೆಯನ್ನೂ ಕರ್ತನ ಸೇವಕನಾದ ಮೋಶೆಯು ಆಜ್ಞಾಪಿಸಿದ್ದ ಎಲ್ಲ ವನ್ನೂ ವಿಾರಿದರು; ಅವುಗಳನ್ನು ಕೇಳದೆಯೂ ಮಾಡ ದೆಯೂ ಹೋದರು. ಅರಸನಾದ ಹಿಜ್ಕೀಯನ ಆಳ್ವಿಕೆಯ ಹದಿನಾಲ್ಕನೇ ವರುಷದಲ್ಲಿ ಅಶ್ಶೂರಿನ ಅರಸನಾದ ಸನ್ಹೇರೀಬನು ಯೆಹೂದದ ಕೋಟೆಯುಳ್ಳ ಸಕಲ ಪಟ್ಟಣಗಳ ಮೇಲೆ ಬಂದು ಅವುಗಳನ್ನು ವಶಪಡಿಸಿಕೊಂಡನು. ಆಗ ಯೆಹೂದದ ಅರಸನಾದ ಹಿಜ್ಕೀಯನು ಲಾಕೀ ಷನ ಬಳಿಯಲ್ಲಿದ್ದ ಅಶ್ಶೂರಿನ ಅರಸನಿಗೆ--ನಾನು ಪಾಪಮಾಡಿದ್ದೇನೆ; ನನ್ನನ್ನು ಬಿಟ್ಟು ಹಿಂತಿರಿಗಿ ಹೋಗು; ನೀನು ನನ್ನ ಮೇಲೆ ಹೊರಿಸುವದನ್ನು ನಾನು ತಾಳಿಕೊಳ್ಳುತ್ತೇನೆ ಎಂದು ಹೇಳಿ ಕಳುಹಿಸಿ ದನು. ಆಗ ಅಶ್ಶೂರಿನ ಅರಸನು ಯೆಹೂದದ ಅರಸನಾದ ಹಿಜ್ಕೀಯನಿಗೆ ಮುನ್ನೂರು ತಲಾಂತು ಬೆಳ್ಳಿಯನ್ನೂ ಮೂವತ್ತು ತಲಾಂತು ಬಂಗಾರವನ್ನೂ ಕೊಡಲು ನೇಮಕ ಮಾಡಿದನು. ಆದದರಿಂದ ಹಿಜ್ಕೀಯನು ಕರ್ತನ ಮನೆಯಲ್ಲಿಯೂ ಅರಸನ ಮನೆಯ ಬೊಕ್ಕಸಗಳಲ್ಲಿಯೂ ಸಿಕ್ಕಿದ ಎಲ್ಲಾ ಬೆಳ್ಳಿ ಯನ್ನು ಕೊಟ್ಟನು. ಆ ಕಾಲದಲ್ಲಿ ಯೆಹೂದದ ಅರಸನಾದ ಹಿಜ್ಕೀಯನು ಕರ್ತನ ಮಂದಿರದ ಕದ ಗಳ ಮೇಲೆಯೂ ಸ್ತಂಭಗಳ ಮೇಲೆಯೂ ತಾನು ಹೊದಿಸಿದ್ದ ಬಂಗಾರವನ್ನು ಕತ್ತರಿಸಿ ಅಶ್ಶೂರಿನ ಅರಸ ನಿಗೆ ಕೊಟ್ಟನು. ಅಶ್ಶೂರಿನ ಅರಸನು ಲಾಕೀಷಿನಿಂದ ತರ್ತಾನ ನನ್ನೂ ರಬ್ಸಾರೀಸನನ್ನೂ ರಬ್ಷಾಕೆಯನ್ನೂ ದೊಡ್ಡ ದಂಡನ್ನೂ ಯೆರೂಸಲೇಮಿನಲ್ಲಿದ್ದ ಅರಸನಾದ ಹಿಜ್ಕೀ ಯನ ಬಳಿಗೆ ಕಳುಹಿಸಿದನು. ಅವರು ಯೆರೂಸಲೇಮಿಗೆ ಬಂದು ಅರಸನ ಹೊಲದ ರಾಜ ಮಾರ್ಗದಲ್ಲಿರುವ ಮೇಲಿನ ಕೆರೆಯ ಕಾಲುವೆಯ ಬಳಿಯಲ್ಲಿ ನಿಂತರು. ಅವರು ಅರಸನನ್ನು ಕರೇ ಕಳುಹಿಸಿದರು. ಆದರೆ ಮನೆವಾರ್ತೆಯವನಾದ ಹಿಲ್ಕೀಯನ ಮಗನಾದ ಎಲ್ಯಾ ಕೀಮನೂ ಲೇಖಕನಾದ ಶೆಬ್ನನೂ ಸಂಪ್ರತಿಯವನಾದ ಆಸಾಫನ ಮಗನಾದ ಯೋವನೂ ಅವರ ಬಳಿಗೆ ಬಂದರು. ಆಗ ರಬ್ಷಾಕೆಯು ಅವರಿಗೆ--ನೀವು ಹಿಜ್ಕೀಯನಿಗೆ ಹೇಳಬೇಕಾದದ್ದೇನಂದರೆ, ಮಹಾ ಅರಸನಾದ ಅಶ್ಶೂರಿನ ಅರಸನು ಹೇಳುವದೇನಂದರೆ, ಭರವಸವಾಗಿರುವ ಈ ನಂಬಿಕೆಯೇನು? ಯುದ್ಧ ಕ್ಕಾಗಿ ಯೋಚನೆಯೂ ಪರಾಕ್ರಮವೂ ಉಂಟೆಂದು ನೀನು ಹೇಳುತ್ತೀ. ಆದರೆ ಅವು ವ್ಯರ್ಥವಾದ ಮಾತು ಗಳು.
- 2 Chronicles 26:21 2 ಪೂರ್ವಕಾಲವೃತ್ತಾಂತ 26:21ಅರಸನಾದ ಉಜ್ಜೀಯನು ಸಾಯುವ ದಿವಸದ ವರೆಗೂ ಕುಷ್ಠರೋಗಿಯಾಗಿದ್ದನು. ಅವನು ಕುಷ್ಠರೋಗವುಳ್ಳವನಾದದರಿಂದ ಪ್ರತ್ಯೇಕವಾದ ಮನೆ ಯಲ್ಲಿ ವಾಸವಾಗಿದ್ದನು. ಯಾಕಂದರೆ ಅವನು ಕರ್ತನ ಆಲಯದಿಂದ ತೆಗೆದುಹಾಕಲ್ಪಟ್ಟವನಾಗಿದ್ದನು. ಅವನ ಮಗನಾದ ಯೋತಾಮನು ಅರಸನ ಮನೆಯ ಮೇಲೆ ಇದ್ದು ದೇಶದ ಜನರಿಗೆ ನ್ಯಾಯತೀರಿಸುತ್ತಾ ಇದ್ದನು.
- 2 Kings 15:7 2 ಅರಸುಗಳು 15:7ಅಜರ್ಯನು ತನ್ನ ಪಿತೃಗಳ ಸಂಗಡ ನಿದ್ರಿಸಿದನು; ಅವನನ್ನು ದಾವೀದನ ಪಟ್ಟಣದಲ್ಲಿ ಅವನ ಪಿತೃಗಳ ಸ್ಮಶಾನ ಭೂಮಿಯಲ್ಲಿ ಹೂಣಿಟ್ಟರು; ಅವನ ಮಗನಾದ ಯೋತಾಮನು ಅವನಿಗೆ ಬದಲಾಗಿ ಅರಸನಾದನು.
- Isaiah 7:1–13 ಯೆಶಾಯ 7:1–13ಯೋಥಾಮನ ಮಗನೂ ಉಜ್ಜೀಯನ ಮೊಮ್ಮಗನೂ ಯೆಹೂದದ ಅರಸನೂ ಆದ ಆಹಾಜನ ಕಾಲದಲ್ಲಿ ಅರಾಮ್ಯರ ಅರಸನಾದ ರೆಚೀನ, ರೆಮಲ್ಯನ ಮಗನೂ ಇಸ್ರಾಯೇಲ್ಯರ ಅರ ಸನೂ ಆದ ಪೆಕಹ ಎಂಬವರು ಯೆರೂಸಲೇಮಿನ ವಿರುದ್ಧವಾಗಿ ಯುದ್ಧಕ್ಕೆ ಹೋದರು. ಆದರೆ ಅದನ್ನು ಜಯಿಸಲು ಸಾಧ್ಯವಾಗಲಿಲ್ಲ. ಸಿರಿಯಾದವರು ಎಫ್ರಾಯಾಮ್ಯರೊಂದಿಗೆ ಹೊಂದಿಕೊಂಡಿದ್ದಾರೆಂದು ದಾವೀದನ ಮನೆಗೆ ತಿಳಿದಾಗ ಅವನ ಹೃದಯವು ಪ್ರಜೆಯ ಹೃದಯವು ಅರಣ್ಯದ ಮರಗಳು ಗಾಳಿಗೆ ಅಲುಗಾಡುವಂತೆ ನಡುಗಿದವು. ಆಗ ಕರ್ತನು, ಯೆಶಾಯನಿಗೆ--ನೀನು ಶೆಯಾರ್ ಯಾಶೂಬನೆಂಬ ನಿನ್ನ ಮಗನನ್ನು ಕರೆದುಕೊಂಡು ಹೋಗಿ ಮಡಿವಾಳರ ಹೊಲದ ಮೇಲೆ ಹೋಗುವ ದಾರಿಯಲ್ಲಿ ಮೇಲಿನ ಕೆರೆಯ ಕಾಲುವೆಯ ಕೊನೆಯ ಹತ್ತಿರ ಆಹಾಜನನ್ನು ಎದುರುಗೊಂಡು ಅವನಿಗೆ ಹೀಗೆ ಹೇಳು-- ಜಾಗ ರೂಕನಾಗಿ ಸುಮ್ಮನಿರು; ಭಯಪಡಬೇಡ ಇಲ್ಲವೆ ರೆಚೀನ ಅರಾಮ್ಯ ರೆಮಲ್ಯನ ಮಗ ಇವರ ಕೋಪವು ಎಷ್ಟು ಹೆಚ್ಚಿದರೂ ಹೊಗೆಯಾಡುವ ಈ ಎರಡು ಮೋಟು ಕೊಳ್ಳಿಗಳಿಗೆ ನಿನ್ನ ಹೃದಯವು ಕುಂದದಿರಲಿ. ಸಿರಿಯಾದವರೂ ಎಫ್ರಾಯಿಮಿನವರೂ ರೆಮಲ್ಯನ ಮಗನೂ ನಿನಗೆ ವಿರೋಧವಾಗಿ ದುರಾಲೋಚನೆ ಮಾಡಿ, ನಾವು ಯೆಹೂದಕ್ಕೆ ವಿರೋಧವಾಗಿ ಹೋಗಿ ಅದನ್ನು ವ್ಯಥೆಪಡಿಸಿ ಅದರಲ್ಲಿ ನಮಗಾಗಿ ಮಾಡಿ ಕೊಂಡಿರುವ ಒಪ್ಪಂದವನ್ನು ಉಲ್ಲಂಘಿಸಿ ಅದರ ಮಧ್ಯದಲ್ಲಿ ಒಬ್ಬ ಅರಸನನ್ನು ಅಂದರೆ ಟಾಬೇಲನ ಮಗನನ್ನು ನೇಮಿಸಿಕೊಳ್ಳೋಣ ಎಂದು ಹೇಳುವರು ಅದಕ್ಕೆ ಕರ್ತನಾದ ದೇವರು--ಅದು ನಿಲ್ಲುವದಿಲ್ಲ; ಇಲ್ಲವೆ ಅದು ಆಗುವದೇ ಇಲ್ಲ. ದಮಸ್ಕವು ಸಿರಿ ಯಾದ ತಲೆಯಾಗಿದೆ ಮತ್ತು ದಮಸ್ಕದ ತಲೆಯು ರೆಚೀನ; ಅರುವತ್ತೈದು ವರುಷಗಳೊಳಗೆ ಎಫ್ರಾಯಾ ಮ್ಯರು ಭಂಗಪಟ್ಟು ಜನಾಂಗವೆನಿಸಿಕೊಳ್ಳರು. ಎಫ್ರಾ ಯಾಮಿನ ತಲೆ ಸಮಾರ್ಯ ಸಮಾರ್ಯದ ತಲೆ ರೆಮಲ್ಯನ ಮಗನು. ನೀವು ನಂಬದೆ ಹೋದರೆ ನೀವು ನಿಜವಾಗಿಯೂ ನೆಲೆಗೊಳ್ಳುವದಿಲ್ಲ ಎಂಬದೇ. ಇದಲ್ಲದೆ ಕರ್ತನು ಆಹಾಜನಿಗೆ -- ನಿನ್ನ ದೇವರಾದ ಕರ್ತನಿಂದ ಒಂದು ಗುರುತನ್ನು ಕೇಳು; ಅದು ಕೆಳಗೆ ಆಳದಲ್ಲಾದರೂ ಇಲ್ಲವೆ ಮೇಲೆ ಎತ್ತರದ ಲ್ಲಿದ್ದರೂ ಅದನ್ನು ಕೇಳಿಕೋ ಎಂದು ಹೇಳಿದನು. ಆದರೆ ಆಹಾಜನು -- ನಾನು ಕೇಳಿಕೊಳ್ಳುವದಿಲ್ಲ; ಇಲ್ಲವೆ ಕರ್ತನನ್ನು ಪರೀಕ್ಷಿಸುವದಿಲ್ಲ ಅಂದನು. ಅದಕ್ಕೆ (ಯೆಶಾಯನು) ದಾವೀದನ ಮನೆಯ ವರೇ, ಈಗ ಕೇಳಿರಿ, ಮನುಷ್ಯರನ್ನು ಬೇಸರಗೊಳಿ ಸುವದು ಅಷ್ಟು ದೊಡ್ಡದಲ್ಲವೆಂದೆಣಿಸಿ ನನ್ನ ದೇವ ರನ್ನೂ ಬೇಸರಗೊಳಿಸುವಿರಾ?
- Isaiah 36:1–22 ಯೆಶಾಯ 36:1–22ಅರಸನಾದ ಹಿಜ್ಕೀಯನ ಆಳಿಕೆಯ ಹದಿನಾಲ್ಕನೇ ವರುಷದಲ್ಲಿ ಅಶ್ಶೂರದ ಅರಸ ನಾದ ಸನ್ಹೇರೀಬನು ಬಂದು ಯೆಹೂದದ ಎಲ್ಲಾ ಕೋಟೆಯ ಪಟ್ಟಣಗಳನ್ನು ಸ್ವಾಧೀನಮಾಡಿಕೊಂಡನು. ಆಗ ಅಶ್ಶೂರದ ಅರಸನು ಲಾಕೀಷಿನಿಂದ ದೊಡ್ಡ ಸೈನ್ಯದ ಸಂಗಡ ರಬ್ಷಾಕನನ್ನು ಯೆರೂಸಲೇಮಿನಲ್ಲಿದ್ದ ಹಿಜ್ಕೀಯನ ಬಳಿಗೆ ಕಳುಹಿಸಿದನು. ಅವನು ಮೇಲಿನ ಕೆರೆಯ ಕಾಲುವೆಯ ಸವಿಾಪದಲ್ಲಿ ಅಗಸರ ಹೊಲದ ರಾಜಮಾರ್ಗದಲ್ಲಿ ನಿಂತುಕೊಂಡನು. ಆಗ ಮನೆಯ ವಿಚಾರಕನಾದ ಹಿಲ್ಕೀಯನ ಮಗನಾದ ಎಲ್ಯಾಕೀ ಮನು, ಲೇಖಕನಾದ ಶೆಬ್ನ, ದಾಖಲೆಗಾರನಾದ ಆಸಾ ಫನ ಮಗನಾಗಿದ್ದ ಯೋವ ಎಂಬವರು ಬಂದರು. ರಬ್ಷಾಕನು ಅವರಿಗೆ--ನೀವು ಅಶ್ಶೂರಿನ ಅರಸನಾದ ಮಹಾರಾಜನ ಈ ಮಾತುಗಳನ್ನು ಹಿಜ್ಕೀಯನಿಗೆ ತಿಳಿ ಸಿರಿ--ಈ ನಿನ್ನ ಭರವಸಕ್ಕೆ ಯಾವ ಆಧಾರವುಂಟು? ಯುದ್ಧಕ್ಕೆ ಬೇಕಾದ ಆಲೋಚನೆಯೂ ಪರಾಕ್ರಮವೂ ನನಗೆ ಉಂಟೆಂದು ಹೇಳುವ ನಿನ್ನ ಮಾತು ಬರೀ ವ್ಯರ್ಥವಾದ ಮಾತುಗಳೇ, ನೀನು ಯಾರನ್ನು ನಂಬಿ ಕೊಂಡು ನನಗೆ ವಿರೋಧವಾಗಿ ತಿರುಗಿಬಿದ್ದಿದ್ದಿ? ಜಜ್ಜಿದ ದಂಡಿಗೆ ಸಮಾನವಾದ ಐಗುಪ್ತವೆಂಬ ಕೋಲಿನ ಮೇಲೆ ಭರವಸವಿಟ್ಟಿರುತ್ತಿಯಷ್ಟೆ; ಒಬ್ಬನು ಅಂತ ಕೋಲನ್ನು ಊರಿಕೊಳ್ಳುವದಾದರೆ ಅದು ಅವನ ಕೈಯೊಳಕ್ಕೆ ಹೋಗಿ ತಿವಿಯುತ್ತದೆ. ಐಗುಪ್ತದ ಅರಸ ನಾದ ಫರೋಹನು ತನ್ನಲ್ಲಿ ನಂಬಿಕೆ ಇಟ್ಟುಕೊಳ್ಳುವ ವರೆಲ್ಲರಿಗೆ ಹೀಗೆ ಇದ್ದಾನೆ. ಆದರೆ ನೀನು ನಮ್ಮ ದೇವರಾದ ಕರ್ತನಲ್ಲಿ ನಂಬಿಕೆಯಿಟ್ಟಿದ್ದೇವೆಂದು ನನಗೆ ಹೇಳಿದರೆ ಹಿಜ್ಕೀಯನು ಇದೇ ಯಜ್ಞವೇದಿಯ ಮುಂದೆ ಆರಾಧನೆ ಮಾಡಬೇಕೆಂಬದಾಗಿ ಯೆಹೂ ದಕ್ಕೂ ಯೆರೂಸಲೇಮಿಗೂ ಆಜ್ಞಾಪಿಸಿ, ಹಿಜ್ಕೀಯನು ಯಾವನ ಪೂಜಾ ಸ್ಥಳಗಳನ್ನೂ ಯಜ್ಞವೇದಿಗಳನ್ನೂ ತೆಗೆದುಹಾಕಿದ್ದಾನೋ ಅವನೇ ಅಲ್ಲವೋ? ಹಾಗಾದರೆ ಈಗ ನನ್ನ ಯಜಮಾನನಾದ ಅಶ್ಶೂ ರಿನ ಅರಸನಿಗೆ ಹೊಣೆಗಾರರನ್ನು ಕೊಡು ಎಂದು ಬೇಡಿಕೊಳ್ಳುತ್ತೇನೆ. ಆಗ ನೀನು ಅವುಗಳ ಮೇಲೆ ಸವಾರಿಮಾಡುವದಕ್ಕೆ ಜನರನ್ನು ಕೊಡುವದಕ್ಕಾದರೆ ನಿನಗೆ ಎರಡು ಸಾವಿರ ಕುದುರೆಗಳನ್ನು ನಾನು ಕೊಡು ವೆನು. ಇದಾಗದಿದ್ದರೆ ನನ್ನ ಯಜಮಾನನ ಸೇವಕ ರಲ್ಲಿ ಚಿಕ್ಕವನಾದ ಒಬ್ಬ ಸೈನ್ಯಾಧಿಪತಿಯ ಮುಖವನ್ನು ಹೇಗೆ ತಿರುಗಿಸಿ ಬಿಡುವಿ? ಹೀಗಿರಲಾಗಿ ಕುದುರೆಗಳಿ ಗೋಸ್ಕರವೂ ರಾಹುತರಿಗೋಸ್ಕರವೂ ಐಗುಪ್ತದಲ್ಲಿ ನಂಬಿಕೊಳ್ಳುತ್ತೀ. ಈ ದೇಶವನ್ನು ಹಾಳುಮಾಡು ವದಕ್ಕೆ ಕರ್ತನಿಲ್ಲದೆ ನಾನು ಬಂದಿದ್ದೇನೋ? ಈ ದೇಶಕ್ಕೆ ವಿರೋಧವಾಗಿ ಬಂದು ಅದನ್ನು ಹಾಳುಮಾಡಿ ಬಿಡು ಎಂದು ಕರ್ತನೇ ನನಗೆ ಆಜ್ಞಾಪಿಸಿದನು ಎನ್ನುವದು. ಆಗ ಎಲ್ಯಾಕೀಮ್, ಶೆಬ್ನ, ಯೋವ ಎಂಬವರು ರಬ್ಷಾಕೆಗೆ--ನೀನು ಮಾತನಾಡುವದು ಗೋಡೆಯ ಮೇಲಿರುವವರಿಗೆ ಕೇಳಿಸುತ್ತದೆ. ಆದದರಿಂದ ದಯ ವಿಟ್ಟು ನಿನ್ನ ಸೇವಕರಾದ ನಮ್ಮೊಡನೆ ಸಿರಿಯಾ ಭಾಷೆ ಯಲ್ಲಿ ಮಾತನಾಡು ಅದು ನಮಗೆ ತಿಳಿಯುತ್ತದೆ; ಯೆಹೂದ್ಯರ ಭಾಷೆಯಲ್ಲಿ ಮಾತನಾಡಬೇಡ ಎಂದು ಹೇಳಿದರು. ಆದರೆ ರಬ್ಷಾಕೆಯು--ನನ್ನ ಯಜ ಮಾನನು ನಿಮ್ಮ ಸಂಗಡವಾಗಲಿ ನಿಮ್ಮ ಯಜಮಾ ನನ ಸಂಗಡವಾಗಲಿ ಈ ಮಾತುಗಳನ್ನು ಹೇಳುವ ದಕ್ಕೆ ಕಳುಹಿಸಿದನೋ? ತಮ್ಮ ಸ್ವಂತ ಮಲವನ್ನು ತಿಂದು ಸ್ವಂತ ಮೂತ್ರವನ್ನು ಕುಡಿಯಬೇಕೆಂದು ಈ ಗೋಡೆಯ ಮೇಲೆ ಕೂತಿರುವ ಮನುಷ್ಯರ ಸಂಗಡ ಮಾತನಾಡಲು ಅವನು ನನ್ನನ್ನು ಕಳುಹಿಸಲಿಲ್ಲವೋ ಅಂದನು. ಆಗ ರಬ್ಷಾಕನು ನಿಂತುಕೊಂಡು ಯೆಹೂ ದ್ಯರ ಭಾಷೆಯಲ್ಲಿ ಗಟ್ಟಿಯಾದ ಶಬ್ದದಿಂದ ಕೂಗಿ ಹೇಳಿದ್ದೇನಂದರೆ--ಅಶ್ಶೂರಿನ ಅರಸನಾದ ಮಹಾ ರಾಜನ ಮಾತುಗಳನ್ನು ಕೇಳಿರಿ. ಇವನು ನಿಮಗೆ--ಹಿಜ್ಕೀಯನು ನಿಮಗೆ ಮೋಸಮಾಡದಿರಲಿ, ಅವನು ನಿಮ್ಮನ್ನು ಬಿಡಿಸಲು ಶಕ್ತನಲ್ಲ. ಇಲ್ಲವೇ ಕರ್ತನು ನಿಶ್ಚಯವಾಗಿ ನಮ್ಮನ್ನು ತಪ್ಪಿಸುವನು; ಈ ಪಟ್ಟಣವು ಅಶ್ಶೂರದ ಅರಸನ ವಶವಾಗುವದಿಲ್ಲ ಎಂದು ಹೇಳಿ ನೀವು ಕರ್ತನಲ್ಲಿ ಭರವಸೆ ಇಡುವಂತೆ ಮಾಡಿದರೂ; ಹಿಜ್ಕೀಯನ ಮಾತುಗಳಿಗೆ ಕಿವಿಗೊಡಬೇಡಿರಿ; ಅಶ್ಶೂರದ ಅರಸನು ಹೇಳುವದೇನಂದರೆ, ನನ್ನೊಡನೆ ಒಡಂಬಡಿಕೆ ಮಾಡಿಕೊಂಡು ನನ್ನ ಬಳಿಗೆ ಹೊರಗೆ ಬನ್ನಿರಿ, ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ಅಂಜೂರದ ಮರ, ದ್ರಾಕ್ಷಾಲತೆ ಇವುಗಳ ಫಲಗಳನ್ನು ತಿಂದು ತನ್ನ ತನ್ನ ಬಾವಿಯ ನೀರನ್ನು ಕುಡಿಯುವಿರಿ. ಸ್ವಲ್ಪ ಕಾಲವಾದ ನಂತರ ನಾನು ಬಂದು ನಿಮ್ಮನ್ನು ಧಾನ್ಯ, ದ್ರಾಕ್ಷಾರಸ, ಆಹಾರ, ದ್ರಾಕ್ಷೇತೋಟ ಇವು ಸಮೃದ್ಧಿ ಯಾಗಿರುವ ನಿಮ್ಮ ದೇಶಕ್ಕೆ ಸಮಾನವಾಗಿರುವ ಇನ್ನೊಂದು ದೇಶಕ್ಕೆ ಕರಕೊಂಡು ಹೋಗುವೆನು. ಕರ್ತನು ನಮ್ಮನ್ನು ತಪ್ಪಿಸುವನು ಎಂದು ಹೇಳಿ ಹಿಜ್ಕೀಯನು ನಿಮ್ಮನ್ನು ಪ್ರೇರೇಪಿಸದಂತೆ ಎಚ್ಚರಿಕೆ ಯಾಗಿರ್ರಿ. ಯಾವ ಜನಾಂಗದ ದೇವರುಗಳಾದರೂ ತನ್ನ ದೇಶಗಳನ್ನು ಅಶ್ಶೂರದ ಅರಸನ ಕೈಯಿಂದ ಬಿಡಿಸಿದವೋ? ಹಮಾತ್, ಅರ್ಪಾದ್, ಸೆಫರ್ವ ಯಿಮ್ನ ದೇವರುಗಳು ಎಲ್ಲಿ? ಅವು ಸಮಾರ್ಯವ ನ್ನಾದರೂ ನನ್ನ ಕೈಯಿಂದ ತಪ್ಪಿಸಿದವೋ? ಈ ದೇಶಗಳ ಎಲ್ಲಾ ದೇವರುಗಳಲ್ಲಿ ಯಾರೂ ತಮ್ಮ ದೇಶವನ್ನು ನನ್ನ ಕೈಯಿಂದ ಬಿಡಿಸಲಾರದ ಮೇಲೆ ಕರ್ತನು ಯೆರೂಸಲೇಮನ್ನು ನನ್ನ ಕೈಯಿಂದ ಬಿಡಿಸು ವನೋ ಅನ್ನುತ್ತಾನೆ ಎಂದು ಹೇಳಿದನು. ಅದರೆ ಅವರು ಅವನಿಗೆ ಒಂದು ಮಾತನ್ನಾದರೂ ಉತ್ತರ ಕೊಡದೆ ಸುಮ್ಮನಿದ್ದರು. ಯಾಕಂದರೆ ಅವನಿಗೆ ಉತ್ತರ ಕೊಡಬೇಡಿರೆಂದು ಅರಸನ ಆಜ್ಞೆಯಾಗಿತ್ತು.ಆಗ ಹಿಲ್ಕೀಯನ ಮಗನೂ ಮನೆಯ ಮೇಲ್ವಿಚಾರಕನೂ ಆಗಿದ್ದ ಎಲ್ಯಾಕೀಮನು ಮತ್ತು ಲೇಖಕನಾದ ಶೆಬ್ನ, ಆಸಾಫನ ಮಗನೂ ಬರೆಯುವವನೂ ಆದ ಯೋವ ಎಂಬವರು ತಮ್ಮ ಬಟ್ಟೆಗಳನ್ನು ಹರಿದು ಕೊಂಡು ಹಿಜ್ಕೀಯನ ಬಳಿಗೆ ಬಂದು ಅವನಿಗೆ ರಬ್ಷಾಕೆಯ ಮಾತುಗಳನ್ನು ತಿಳಿಸಿದರು. ಆಗ ಹಿಲ್ಕೀಯನ ಮಗನೂ ಮನೆಯ ಮೇಲ್ವಿಚಾರಕನೂ ಆಗಿದ್ದ ಎಲ್ಯಾಕೀಮನು ಮತ್ತು ಲೇಖಕನಾದ ಶೆಬ್ನ, ಆಸಾಫನ ಮಗನೂ ಬರೆಯುವವನೂ ಆದ ಯೋವ ಎಂಬವರು ತಮ್ಮ ಬಟ್ಟೆಗಳನ್ನು ಹರಿದು ಕೊಂಡು ಹಿಜ್ಕೀಯನ ಬಳಿಗೆ ಬಂದು ಅವನಿಗೆ ರಬ್ಷಾಕೆಯ ಮಾತುಗಳನ್ನು ತಿಳಿಸಿದರು.