Matthew · chapter 10 · verse 5
Matthew 10:5 in Kannada
ಯೇಸು ಈ ಹನ್ನೆರಡು ಮಂದಿಯನ್ನು ಕಳುಹಿ ಸುವಾಗ ಅವರಿಗೆ ಅಪ್ಪಣೆಕೊಟ್ಟು ಹೇಳಿದ್ದೇನಂ ದರೆ--ಅನ್ಯಜನರ ದಾರಿಯಲ್ಲಿ ಹೋಗಬೇಡಿರಿ ಮತ್ತು ಸಮಾರ್ಯರ ಯಾವ ಪಟ್ಟಣದಲ್ಲಿಯೂ ನೀವು ಪ್ರವೇಶಿಸಬೇಡಿರಿ.
Yesu ee hanneradu mandiyannu kaluhi suvaaga avarige appanekottu heliddenam dare--anyajanara daariyalli hogabediri mattu samaaryara yaava pattanadalliyoo neevu praveshisabediri.
Matthew 10:5 in English
- King James Version (KJV)
- These twelve Jesus sent forth, and commanded them, saying, Go not into the way of the Gentiles, and into [any] city of the Samaritans enter ye not:
- World English Bible (WEB)
- Jesus sent these twelve out and commanded them, saying, “Don’t go among the Gentiles, and don’t enter into any city of the Samaritans.
- American Standard Version (ASV)
- These twelve Jesus sent forth, and charged them, saying, Go not into [any] way of the Gentiles, and enter not into any city of the Samaritans:
- Bible in Basic English (BBE)
- These twelve Jesus sent out and gave them orders, saying, Do not go among the Gentiles, or into any town of Samaria,
- Darby Translation (DBY)
- These twelve Jesus sent out when he had charged them, saying, Go not off into [the] way of [the] nations, and into a city of Samaritans enter ye not;
- Webster's Bible (WBS)
- These twelve Jesus sent forth, and commanded them, saying, Go not into the way of the Gentiles, and enter ye not into [any] city of the Samaritans.
- Young's Literal Translation (YLT)
- These twelve did Jesus send forth, having given command to them, saying, 'To the way of the nations go not away, and into a city of the Samaritans go not in,
Read in context
- 3ಫಿಲಿಪ್ಪ, ಬಾರ್ತೊ ಲೊಮಾಯ, ತೋಮ, ಸುಂಕದವನಾದ ಮತ್ತಾಯ ಅಲ್ಫಾಯನ ಮಗನಾದ ಯಾಕೋಬ, ತದ್ದಾಯನೆಂಬ ಅಡ್ಡ ಹೆಸರಿನ ಲೆಬ್ಬಾಯ,
- 4ಕಾನಾನ್ಯನಾದ ಸೀಮೋನ ಮತ್ತು ಆತನನ್ನು ಹಿಡಿದುಕೊಟ್ಟ ಯೂದ ಇಸ್ಕರಿಯೋತ ಎಂಬಿವುಗಳೇ.
- 5ಯೇಸು ಈ ಹನ್ನೆರಡು ಮಂದಿಯನ್ನು ಕಳುಹಿ ಸುವಾಗ ಅವರಿಗೆ ಅಪ್ಪಣೆಕೊಟ್ಟು ಹೇಳಿದ್ದೇನಂ ದರೆ--ಅನ್ಯಜನರ ದಾರಿಯಲ್ಲಿ ಹೋಗಬೇಡಿರಿ ಮತ್ತು ಸಮಾರ್ಯರ ಯಾವ ಪಟ್ಟಣದಲ್ಲಿಯೂ ನೀವು ಪ್ರವೇಶಿಸಬೇಡಿರಿ.
- 6ಆದರೆ ತಪ್ಪಿಸಿಕೊಂಡ ಕುರಿಗಳಾದ ಇಸ್ರಾಯೇಲಿನ ಮನೆತನದವರ ಬಳಿಗೆ ಮಾತ್ರ ಹೋಗಿರಿ.
- 7ನೀವು ಹೋಗುವಾಗ-- ಪರಲೋಕ ರಾಜ್ಯವು ಸಮಾಪವಾಯಿತು ಎಂದು ಸಾರಿ ಹೇಳಿರಿ.
Cross references
- John 4:9 ಯೋಹಾನನು 4:9ಅದಕ್ಕೆ ಆ ಸಮಾ ರ್ಯದ ಸ್ತ್ರೀಯು ಆತನಿಗೆ--ನೀನು ಯೆಹೂದ್ಯನಾಗಿದ್ದು ಕುಡಿಯುವದಕ್ಕೆ ಕೊಡು ಎಂದು ಸಮಾರ್ಯದ ಸ್ತ್ರೀಯಾದ ನನ್ನಿಂದ ಕೇಳುವದು ಹೇಗೆ? ಯಾಕಂದರೆ ಯೆಹೂದ್ಯರು ಸಮಾರ್ಯದವರೊಂದಿಗೆ ಹೊಕ್ಕು ಬಳಿಕೆ ಮಾಡುವದಿಲ್ಲವಲ್ಲಾ ಅಂದಳು.
- Acts 22:21–23 ಅಪೊಸ್ತಲರ ಕೃತ್ಯಗಳು 22:21–23ಅದಕ್ಕೆ ಆತನು--ಹೋಗು, ನಾನು ನಿನ್ನನ್ನು ದೂರಕ್ಕೆ ಅನ್ಯಜನರ ಬಳಿಗೆ ಕಳುಹಿಸುವೆನು ಎಂದು ನನಗೆ ಹೇಳಿದನು. ಈ ಮಾತಿನತನಕ ಅವನು ಹೇಳಿದ್ದನ್ನು ಅವರು ಕೇಳಿ ತಮ್ಮ ಧ್ವನಿಗಳನ್ನೆತ್ತಿ--ಇಂಥವನನ್ನು ಭೂಮಿ ಯಿಂದ ತೆಗೆದುಹಾಕಿರಿ; ಇವನು ಜೀವಿಸುವದು ಯುಕ್ತವಲ್ಲ ಎಂದು ಕೂಗಿದರು. ಅವರು ಕೂಗಾಡಿ ತಮ್ಮ ವಸ್ತ್ರಗಳನ್ನು ಕಿತ್ತುಹಾಕುತ್ತಾ ಧೂಳನ್ನು ಗಾಳಿಗೆ ತೂರುತ್ತಿದ್ದಾಗ
- 2 Kings 17:24–41 2 ಅರಸುಗಳು 17:24–41ಅಶ್ಶೂರಿನ ಅರಸನು ಬಾಬೆಲಿನಿಂದಲೂ ಕೂತಾ ಅವ್ವಾ ಹಮಾತ್ ಸೆಫರ್ವಯಿಮಿನಿಂದಲೂ ಜನರನ್ನು ಬರಮಾಡಿ ಅವರನ್ನು ಇಸ್ರಾಯೇಲ್ ಮಕ್ಕಳಿಗೆ ಬದ ಲಾಗಿ ಸಮಾರ್ಯದ ಪಟ್ಟಣಗಳಲ್ಲಿ ಇರಿಸಿದನು. ಇವರು ಸಮಾರ್ಯವನ್ನು ಸ್ವತಂತ್ರಿಸಿಕೊಂಡು ಅವರ ಪಟ್ಟಣಗಳಲ್ಲಿ ವಾಸಿಸಿದರು. ಆದರೆ ಅವರು ಅಲ್ಲಿ ವಾಸಿಸಲು ಆರಂಭಿಸಿದಾಗ ಅವರು ಕರ್ತನಿಗೆ ಭಯ ಪಡದಿದದ್ದರಿಂದ ಕರ್ತನು ಅವರ ಮಧ್ಯದಲ್ಲಿ ಸಿಂಹ ಗಳನ್ನು ಕಳುಹಿಸಿದನು. ಅವು ಅವರಲ್ಲಿ ಕೆಲವರನ್ನು ಕೊಂದುಹಾಕಿದವು. ಆದಕಾರಣ ಅವರು ಅಶ್ಶೂರಿನ ಅರಸನಿಗೆ--ನೀನು ಸೇರಿಸಿ ಸಮಾರ್ಯದ ಪಟ್ಟಣಗಳಲ್ಲಿ ಇರಿಸಿದ ಜನಾಂಗಗಳು ಆ ದೇಶದ ದೇವರ ಕ್ರಮವನ್ನು ತಿಳಿಯದೆ ಇದ್ದಾರೆ. ಅವರು ಆ ದೇಶದ ದೇವರ ಕ್ರಮವನ್ನು ತಿಳಿಯದೆ ಇದ್ದದರಿಂದ ಆತನು ಅವರ ಮಧ್ಯದಲ್ಲಿ ಸಿಂಹಗಳನ್ನು ಕಳುಹಿಸಿದ್ದಾನೆ; ಇಗೋ, ಅವು ಅವರನ್ನು ಕೊಂದುಹಾಕುತ್ತವೆ ಅಂದರು. ಆಗ ಅಶ್ಶೂರಿನ ಅರಸನು--ನೀವು ಅಲ್ಲಿಂದ ತಕ್ಕೊಂಡು ಬಂದಯಾಜಕರಲ್ಲಿ ಒಬ್ಬನನ್ನು ಅಲ್ಲಿಗೆ ಕರೆದುಕೊಂಡು ಹೋಗಿರಿ; ಅವರು ಅಲ್ಲಿ ವಾಸವಾಗಿರಲಿ; ಅವನು ಅವರಿಗೆ ಆ ದೇಶದ ದೇವರ ಕ್ರಮವನ್ನು ಬೋಧಿಸಲಿ ಎಂದು ಆಜ್ಞಾಪಿಸಿದನು. ಆಗ ಅವರು ಸಮಾರ್ಯ ದಿಂದ ತಂದ ಯಾಜಕರಲ್ಲಿ ಒಬ್ಬನು ಬಂದು ಬೇತೇಲಿ ನಲ್ಲಿ ವಾಸವಾಗಿದ್ದು ಅವರು ಕರ್ತನಿಗೆ ಭಯಪಡತಕ್ಕ ವಿಧವನ್ನು ಅವರಿಗೆ ಬೋಧಿಸಿದನು. ಆದರೆ ಪ್ರತಿ ಜನಾಂಗದವರೂ ತಾವು ನಿವಾಸಿಸಿದ ಪಟ್ಟಣಗಳಲ್ಲಿ ತಮಗೆ ದೇವರುಗಳನ್ನು ಮಾಡಿ ಸಮಾರ್ಯದವರು ಮಾಡಿದ ಉನ್ನತ ಸ್ಥಳಗಳ ಮನೆಗಳಲ್ಲಿ ಅವುಗಳನ್ನು ಇರಿಸಿದರು. ಬಾಬೆಲಿನ ಜನರು ಸುಕ್ಕೋತ್ಬೆನೋತನ್ನು ಮಾಡಿದರು; ಕೂತದವರು ನೇರ್ಗಲನ್ನು ಮಾಡಿದರು; ಹಮಾತಿನ ಮನುಷ್ಯರು ಅಷೀಮನನ್ನು ಮಾಡಿದರು. ಅವ್ವೀಯರು ನಿಭಜನನ್ನೂ ತರ್ತಕನನ್ನೂ ಮಾಡಿ ದರು. ಸೆಫರ್ವಯಿಮಿನವರು ಸೆಫರ್ವಾಯಿಮಿನ ದೇವ ರುಗಳಾದ ಅದ್ರಮ್ಮೆಲಕಿಗೂ ಅನಮ್ಮೆಲಕಿಗೂ ತಮ್ಮ ಮಕ್ಕಳನ್ನು ಬೆಂಕಿಯಿಂದ ಸುಟ್ಟುಬಿಟ್ಟರು. ಹೀಗೆ ಅವರು ಕರ್ತನಿಗೆ ಭಯಪಟ್ಟು ತಮ್ಮಲ್ಲಿರುವ ನೀಚ ರೊಳಗೆ ಉನ್ನತ ಸ್ಥಾನಕ್ಕೋಸ್ಕರ ಯಾಜಕರನ್ನು ಮಾಡಿ ಕೊಂಡರು. ಇವರು ಉನ್ನತ ಸ್ಥಳಗಳ ಮೇಲಿರುವ ಮನೆಗಳಲ್ಲಿ ಅವರಿಗೋಸ್ಕರ ಬಲಿಗಳನ್ನು ಅರ್ಪಿಸುತ್ತಾ ಇದ್ದರು. ಅವರು ಕರ್ತನಿಗೆ ಭಯಪಟ್ಟು ಅವರು ಅಲ್ಲಿಂದ ಒಯ್ದು ಜನಾಂಗಗಳ ಪದ್ಧತಿಯ ಪ್ರಕಾರ ತಮ್ಮ ದೇವರುಗಳನ್ನು ಸೇವಿಸಿದರು. ಈ ದಿವಸದ ವರೆಗೂ ಅವರು ತಮ್ಮ ಪೂರ್ವದ ನ್ಯಾಯಗಳ ಪ್ರಕಾರ ಮಾಡುತ್ತಾರೆ; ಅವರು ಕರ್ತನಿಗೆ ಭಯಪಡದೆ ತಮ್ಮ ಕಟ್ಟಳೆಗಳ ಪ್ರಕಾರವಾಗಿಯೂ ತಮ್ಮ ನೀತಿಗಳ ಪ್ರಕಾರವಾಗಿಯೂ ನ್ಯಾಯಪ್ರಮಾ ಣದ ಪ್ರಕಾರವಾಗಿಯೂ ಕರ್ತನು ಇಸ್ರಾಯೇಲೆಂದು ಹೆಸರಿಟ್ಟ ಯಾಕೋಬನ ಮಕ್ಕಳಿಗೆ ಆಜ್ಞಾಪಿಸಿದ ಆಜ್ಞೆಯ ಪ್ರಕಾರವಾಗಿಯೂ ಮಾಡದೆ ಇದ್ದಾರೆ. ಕರ್ತನು ಅವರ ಸಂಗಡ ಒಡಂಬಡಿಕೆ ಮಾಡಿ ಅವರಿಗೆ ಆಜ್ಞಾಪಿಸಿ ಹೇಳಿದ್ದೇನಂದರೆ--ನೀವು ಇತರ ದೇವರುಗಳಿಗೆ ಭಯಪಡದೆ ಅಡ್ಡಬೀಳದೆ ಸೇವಿಸದೆ ಅವುಗಳಿಗೆ ಬಲಿ ಯನ್ನು ಅರ್ಪಿಸದೆ ಇರ್ರಿ. ಆದರೆ ಮಹಾಶಕ್ತಿ ಯಿಂದಲೂ ಭುಜಪರಾಕ್ರಮದಿಂದಲೂ ಐಗುಪ್ತದೇಶ ದಿಂದ ನಿಮ್ಮನ್ನು ಬರಮಾಡಿದ ಕರ್ತನಿಗೆ ನೀವು ಭಯಪಟ್ಟು ಅಡ್ಡಬಿದ್ದು ಆತನಿಗೆ ಬಲಿಯನ್ನು ಅರ್ಪಿ ಸಿರಿ. ಇದಲ್ಲದೆ ಆತನು ನಿಮಗೆ ಬರೆದುಕೊಟ್ಟ ಕಟ್ಟಳೆಗಳನ್ನೂ ನೀತಿಗಳನ್ನೂ ನ್ಯಾಯಪ್ರಮಾಣವನ್ನೂ ಆಜ್ಞೆಯನ್ನೂ ನೀವು ನಿರಂತರವಾಗಿ ಕೈಕೊಳ್ಳಲು ಎಚ್ಚರಿಕೆ ಯಾಗಿರಬೇಕು; ಇತರ ದೇವರುಗಳಿಗೆ ಭಯಪಡ ಬೇಡಿರಿ. ನಾನು ನಿಮ್ಮ ಸಂಗಡ ಮಾಡಿದ ಒಡಂಬಡಿ ಕೆಯನ್ನು ನೀವು ಮರೆಯದೆ ಇತರ ದೇವರುಗಳಿಗೆ ಭಯಪಡದೆ ನಿಮ್ಮ ದೇವರಾದ ಕರ್ತನಿಗೆ ಭಯ ಪಡಿರಿ. ಆಗ ಆತನು ನಿಮ್ಮನ್ನು ನಿಮ್ಮ ಶತ್ರುಗಳ ಕೈಯೊಳಗಿಂದ ವಿಮೋಚನೆ ಮಾಡುವನು ಅಂದನು. ಆದರೆ ಅವರು ಕೇಳದೆ ತಮ್ಮ ಪೂರ್ವದ ಪದ್ಧತಿ ಹಾಗೆ ಮಾಡಿದರು.ಹೀಗೆಯೇ ಈ ಜನಾಂಗಗಳು ಕರ್ತನಿಗೆ ಭಯಪಡದೆ ತಮ್ಮ ಕೆತ್ತಿದ ವಿಗ್ರಹಗಳನ್ನು ಸೇವಿಸಿದರು; ಅವರ ಪಿತೃಗಳು ಮಾಡಿದ ಹಾಗೆ ಅವರೂ ಅವರ ಮಕ್ಕಳೂ ಮೊಮ್ಮಕ್ಕಳೂ ಇಂದಿನ ವರೆಗೂ ಮಾಡುತ್ತಿರುತ್ತಾರೆ. ಹೀಗೆಯೇ ಈ ಜನಾಂಗಗಳು ಕರ್ತನಿಗೆ ಭಯಪಡದೆ ತಮ್ಮ ಕೆತ್ತಿದ ವಿಗ್ರಹಗಳನ್ನು ಸೇವಿಸಿದರು; ಅವರ ಪಿತೃಗಳು ಮಾಡಿದ ಹಾಗೆ ಅವರೂ ಅವರ ಮಕ್ಕಳೂ ಮೊಮ್ಮಕ್ಕಳೂ ಇಂದಿನ ವರೆಗೂ ಮಾಡುತ್ತಿರುತ್ತಾರೆ.
- Romans 15:8–9 ರೋಮಾಪುರದವರಿಗೆ 15:8–9ಹೀಗಿರುವದರಿಂದ ಪಿತೃ ಗಳಿಗೆ ಮಾಡಿದ ವಾಗ್ದಾನಗಳನ್ನು ದೃಢಪಡಿಸುವದಕ್ಕೆ ದೇವರ ಸತ್ಯಕ್ಕಾಗಿ ಯೇಸು ಕ್ರಿಸ್ತನು ಸುನ್ನತಿಯವರಿಗೆ ಸೇವಕನಾಗಿದ್ದನೆಂದು ನಾನು ಹೇಳುತ್ತೇನೆ. ಈ ಕಾರಣದಿಂದ ನಾನು ಅನ್ಯಜನಗಳ ಮಧ್ಯದಲ್ಲಿ ನಿನ್ನನು ಅರಿಕೆ ಮಾಡಿ ನಿನ್ನ ನಾಮವನ್ನು ಸಂಕೀರ್ತಿಸುವೆನು ಎಂದು ಬರೆದಿರುವ ಪ್ರಕಾರ ಅನ್ಯಜನಗಳು ದೇವರ ಕರುಣೆಗಾಗಿ ಆತನನ್ನು ಮಹಿಮೆಪಡಿಸುವರು.
- 1 Thessalonians 2:16 1 ಥೆಸಲೊನೀಕದವರಿಗೆ 2:16ಅನ್ಯ ಜನರಿಗೆ ರಕ್ಷಣೆಯಾಗುವಂತೆ ಸುವಾರ್ತೆಯನ್ನು ಹೇಳುವ ನಮಗೆ ಅವರು ಅಡ್ಡಿ ಮಾಡುತ್ತಾರೆ; ಹೀಗೆ ತಮ್ಮ ಪಾಪಗಳನ್ನು ಯಾವಾಗಲೂ ಪರಿಪೂರ್ಣ ಮಾಡುವದಕ್ಕೆ ಹೋಗುತ್ತಾರೆ; ಆದರೆ ದೇವರ ಕೋಪವು ಅವರ ಮೇಲೆ ಸಂಪೂರ್ಣವಾಗುತ್ತಾ ಬಂತು.
- John 4:22–24 ಯೋಹಾನನು 4:22–24ನೀವು ಅರಿಯದೆ ಇರುವದನ್ನು ಆರಾಧಿ ಸುತ್ತೀರಿ; ನಾವು ಅರಿತಿರುವದನ್ನೇ ಆರಾಧಿಸುತ್ತೇವೆ; ಯಾಕಂದರೆ ರಕ್ಷಣೆಯು ಯೆಹೂದ್ಯರಿಂದಲೇ. ನಿಜ ವಾದ ಆರಾಧಕರು ತಂದೆಯನ್ನು ಆತ್ಮದಿಂದಲೂ ಸತ್ಯ ದಿಂದಲೂ ಆರಾಧಿಸುವ ಗಳಿಗೆಯು ಬರುತ್ತದೆ, ಅದು ಈಗಲೇ ಬಂದಿದೆ; ಯಾಕಂದರೆ ತನ್ನನ್ನು ಆರಾಧಿಸು ವದಕ್ಕೆ ತಂದೆಯು ಅಂಥವರನ್ನು ಹುಡುಕುತ್ತಾನೆ. ದೇವರು ಆತ್ಮನಾಗಿದ್ದಾನೆ; ಆತನನ್ನು ಆರಾಧಿಸುವ ವರು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸತಕ್ಕದ್ದು ಅಂದನು.
- Luke 17:16 ಲೂಕನು 17:16ಆತನ ಪಾದಕ್ಕೆ ಅಡ್ಡಬಿದ್ದು ಆತನಿಗೆ ಕೃತಜ್ಞತಾಸ್ತುತಿಗಳನ್ನು ಸಲ್ಲಿಸಿದನು; ಅವನು ಸಮಾರ್ಯದವನಾಗಿದ್ದನು.
- Acts 8:5–25 ಅಪೊಸ್ತಲರ ಕೃತ್ಯಗಳು 8:5–25ಫಿಲಿಪ್ಪನು ಸಮಾರ್ಯ ವೆಂಬ ಪಟ್ಟಣಕ್ಕೆ ಹೋಗಿ ಅಲ್ಲಿರುವವರಿಗೆ ಕ್ರಿಸ್ತನನ್ನು ಪ್ರಕಟಿಸಿದನು. ಫಿಲಿಪ್ಪನು ಮಾಡಿದ ಸೂಚಕ ಕಾರ್ಯಗಳ ವಿಷಯವಾಗಿ ಕೇಳಿ ಜನರು ಅವುಗಳನ್ನು ನೋಡಿ ಅವನು ಹೇಳಿದ ಆ ವಿಷಯಗಳಿಗೆ ಒಮ್ಮನಸ್ಸಾಗಿ ಲಕ್ಷ್ಯಕೊಟ್ಟರು. ಅನೇಕರನ್ನು ಹಿಡಿದಿದ್ದ ಅಶುದ್ಧಾತ್ಮಗಳು ಮಹಾಶಬ್ದದಿಂದ ಕೂಗಿ ಹೊರಗೆ ಬಂದವು; ಅನೇಕ ಪಾರ್ಶ್ವವಾಯು ರೋಗಿಗಳೂ ಕುಂಟರೂ ಸ್ವಸ್ಥರಾದರು. ಹೀಗೆ ಆ ಪಟ್ಟಣದಲ್ಲಿ ಬಹು ಸಂತೋಷವಾಯಿತು. ಆದರೆ ಇದಕ್ಕಿಂತ ಮುಂಚೆ ಸೀಮೋನ ನೆಂಬವನೊಬ್ಬನು ಆ ಪಟ್ಟಣದಲ್ಲಿ ತಾನು ಏನೋ ಒಬ್ಬ ದೊಡ್ಡ ಮನುಷ್ಯನೆಂದು ಹೇಳಿಕೊಂಡು ಮಂತ್ರ ತಂತ್ರಗಳನ್ನು ನಡಿಸಿ ಸಮಾರ್ಯದ ಜನರಲ್ಲಿ ಬೆರ ಗನ್ನು ಹುಟ್ಟಿಸುತ್ತಿದ್ದನು. ಚಿಕ್ಕವರು ಮೊದಲು ಗೊಂಡು ದೊಡ್ಡವರ ಪರ್ಯಂತರ ಎಲ್ಲರೂ--ಇವನು ದೇವರ ಮಹಾಶಕ್ತಿ ಎಂದು ಹೇಳುತ್ತಾ ಅವ ನಿಗೆ ಲಕ್ಷ್ಯಕೊಡುತ್ತಿದ್ದರು. ಬಹುಕಾಲದಿಂದಲೂ ಅವನು ಮಂತ್ರತಂತ್ರಗಳನ್ನು ನಡಿಸಿ ಜನರಲ್ಲಿ ಬೆರ ಗನ್ನು ಹುಟ್ಟಿಸಿದ್ದರಿಂದ ಅವನಿಗೆ ಅವರು ಲಕ್ಷ್ಯ ಕೊಡುತ್ತಿದ್ದರು. ಆದರೆ ಫಿಲಿಪ್ಪನು ದೇವರ ರಾಜ್ಯದ ವಿಷಯದಲ್ಲಿಯೂ ಯೇಸು ಕ್ರಿಸ್ತನ ಹೆಸರಿನ ವಿಷಯ ದಲ್ಲಿಯೂ ಸಾರುತ್ತಾ ಇರಲು ಗಂಡಸರೂ ಹೆಂಗಸರೂ ನಂಬಿ ಬಾಪ್ತಿಸ್ಮ ಮಾಡಿಸಿಕೊಂಡರು. ಆಗ ಸೀಮೋ ನನು ಕೂಡ ನಂಬಿ ಬಾಪ್ತಿಸ್ಮ ಮಾಡಿಸಿಕೊಂಡು ಫಿಲಿಪ್ಪನ ಸಂಗಡ ಯಾವಾಗಲೂ ಇದ್ದು ಸೂಚಕಕಾರ್ಯಗಳೂ ಮಹತ್ಕಾರ್ಯಗಳೂ ಉಂಟಾಗುವದನ್ನು ನೋಡಿ ಬೆರಗಾದನು. ಸಮಾರ್ಯದವರು ದೇವರ ವಾಕ್ಯವನ್ನು ಸ್ವೀಕರಿಸಿದ ವರ್ತಮಾನವನ್ನು ಯೆರೂಸಲೇಮಿನಲ್ಲಿದ್ದ ಅಪೊಸ್ತಲರು ಕೇಳಿ ಪೇತ್ರ ಯೋಹಾನರನ್ನು ಅವರ ಬಳಿಗೆ ಕಳುಹಿಸಿದರು. ಇವರು ಅಲ್ಲಿಗೆ ಬಂದು ಪವಿತ್ರಾತ್ಮನನ್ನು ಅವರು ಹೊಂದಬೇಕೆಂದು ಅವರಿ ಗೋಸ್ಕರ ಪ್ರಾರ್ಥನೆ ಮಾಡಿದರು. (ಯಾಕಂದರೆ ಪವಿತ್ರಾತ್ಮನು ಅವರಲ್ಲಿ ಒಬ್ಬನ ಮೇಲಾದರೂ ಇನ್ನೂ ಬಂದಿರಲಿಲ್ಲ. ಅವರು ಕರ್ತನಾದ ಯೇಸುವಿನ ಹೆಸರಿ ನಲ್ಲಿ ಬಾಪ್ತಿಸ್ಮವನ್ನು ಮಾತ್ರ ಮಾಡಿಸಿಕೊಂಡಿದ್ದರು). ಅಪೊಸ್ತಲರು ಅವರ ಮೇಲೆ ಕೈಗಳನ್ನಿಡಲು ಅವರು ಪವಿತ್ರಾತ್ಮನನ್ನು ಹೊಂದಿದರು. ಅಪೊಸ್ತಲರು ಕೈಗಳನ್ನಿಡುವದರ ಮೂಲಕವಾಗಿ ಪವಿತ್ರಾತ್ಮ ಕೊಡೋ ಣವಾಗುವದನ್ನು ಸೀಮೋನನು ನೋಡಿ ಹಣವನ್ನು ತಂದು-- ನಾನು ಯಾರ ಮೇಲೆ ಕೈಗಳನ್ನಿಡುತ್ತೇನೋ ಅವರು ಪವಿತ್ರಾತ್ಮನನ್ನು ಹೊಂದುವಂತೆ ಈ ಅಧಿಕಾರ ವನ್ನು ನನಗೂ ಕೊಡಿರಿ ಅಂದನು. ಆದರೆ ಪೇತ್ರನು ಅವನಿಗೆ--ನಿನ್ನ ಹಣವು ನಿನ್ನ ಕೂಡ ಹಾಳಾಗಿ ಹೋಗಲಿ; ನೀನು ದೇವರ ದಾನವನ್ನು ಹಣಕ್ಕೆ ಕೊಂಡುಕೊಳ್ಳಬಹುದೆಂದು ಯೋಚಿಸುತ್ತೀ ಯಲ್ಲಾ. ಈ ಕಾರ್ಯದಲ್ಲಿ ನಿನಗೆ ಭಾಗವೂ ಇಲ್ಲ, ಪಾಲೂ ಇಲ್ಲ; ನಿನ್ನ ಹೃದಯವು ದೇವರ ಮುಂದೆ ಸರಿಯಲ್ಲ. ಆದದರಿಂದ ಈ ನಿನ್ನ ಕೆಟ್ಟತನದ ವಿಷಯವಾಗಿ ಮಾನಸಾಂತರಪಟ್ಟು ದೇವರನ್ನು ಬೇಡಿಕೋ, ಆಗ ನಿನ್ನ ಹೃದಯದ ಆಲೋಚನೆಯು ಕ್ಷಮಿಸಲ್ಪಡಬಹುದು. ಯಾಕಂದರೆ ನೀನು ಹಾನಿಕರ ವಾದ ವಿಷದಲ್ಲಿಯೂ ದುಷ್ಟತ್ವದ ಬಂಧನದಲ್ಲಿಯೂ ಇರುತ್ತೀಯೆಂದು ನನಗೆ ಕಾಣುತ್ತದೆ ಅಂದನು. ಅದಕ್ಕೆ ಸೀಮೋನನು--ನೀವು ಹೇಳಿರುವ ವಿಷಯ ಗಳಲ್ಲಿ ಯಾವದೂ ನನ್ನ ಮೇಲೆ ಬಾರದಂತೆ ನನಗೋಸ್ಕರ ನೀವೇ ಕರ್ತನನ್ನು ಬೇಡಿಕೊಳ್ಳಿರಿ ಎಂದು ಹೇಳಿದನು. ಹೀಗಿರಲಾಗಿ ಅವರು ಸಾಕ್ಷಿ ಕೊಡುತ್ತಾ ಕರ್ತನ ವಾಕ್ಯವನ್ನು ಸಾರುತ್ತಾ ಯೆರೂಸ ಲೇಮಿಗೆ ಹಿಂತಿರುಗಿ ಹೊರಟು ಸಮಾರ್ಯದವರ ಅನೇಕ ಗ್ರಾಮಗಳಲ್ಲಿ ಸುವಾರ್ತೆಯನ್ನು ಸಾರಿದರು.
- Luke 9:2 ಲೂಕನು 9:2ದೇವರ ರಾಜ್ಯವನ್ನು ಸಾರುವದಕ್ಕೂ ರೋಗಿಗಳನ್ನು ಸ್ವಸ್ಥಮಾಡುವದಕ್ಕೂ ಆತನು ಅವರನ್ನು ಕಳುಹಿಸಿಕೊಟ್ಟನು.
- Luke 9:52–54 ಲೂಕನು 9:52–54ತನಗೆ ಮುಂದಾಗಿ ದೂತರನ್ನು ಕಳುಹಿಸಿದನು. ಅವರು ಹೋಗಿ ಆತನಿಗಾಗಿ ಸಿದ್ಧ ಪಡಿಸುವಂತೆ ಸಮಾರ್ಯದ ಒಂದು ಹಳ್ಳಿಯೊಳಕ್ಕೆ ಪ್ರವೇಶಿಸಿದರು. ಆದರೆ ಅವರು ಆತನನ್ನು ಅಂಗೀಕರಿಸಲಿಲ್ಲ. ಯಾಕಂದರೆ ಆತನು ಯೆರೂಸಲೇ ಮಿಗೆ ಹೋಗುವಾತನೋ ಎಂಬಂತೆ ಆತನ ಮುಖ ವಿತ್ತು. ಆತನ ಶಿಷ್ಯರಾದ ಯಾಕೋಬ ಯೋಹಾನರು ಇದನ್ನು ನೋಡಿ--ಕರ್ತನೇ, ಎಲೀಯನು ಮಾಡಿದ ಪ್ರಕಾರ ಅವರನ್ನು ದಹಿಸಿಬಿಡುವಂತೆ ಆಕಾಶದಿಂದ ಬೆಂಕಿ ಬೀಳುವ ಹಾಗೆ ನಾವು ಅಪ್ಪಣೆಕೊಡಲು ನಿನಗೆ ಮನಸ್ಸುಂಟೋ ಎಂದು ಅವರು ಕೇಳಿದರು.
- John 7:35 ಯೋಹಾನನು 7:35ಆಗ ಯೆಹೂದ್ಯರು--ನಾವು ಅವನನ್ನು ಕಾಣದ ಹಾಗೆ ಅವನು ಎಲ್ಲಿಗೆ ಹೋಗುವನು? ಅನ್ಯಜನರ ಮಧ್ಯದಲ್ಲಿ ಚದರಿಹೋದವರ ಬಳಿಗೆ ಹೋಗಿ ಅನ್ಯಜನರಿಗೆ ಬೋಧಿಸುವನೋ?