Luke · chapter 17 · verse 16
Luke 17:16 in Kannada
ಆತನ ಪಾದಕ್ಕೆ ಅಡ್ಡಬಿದ್ದು ಆತನಿಗೆ ಕೃತಜ್ಞತಾಸ್ತುತಿಗಳನ್ನು ಸಲ್ಲಿಸಿದನು; ಅವನು ಸಮಾರ್ಯದವನಾಗಿದ್ದನು.
Aatana paadakke addabiddu aatanige krutajnyataastutigalannu sallisidanu; avanu samaaryadavanaagiddanu.
Luke 17:16 in English
- King James Version (KJV)
- And fell down on [his] face at his feet, giving him thanks: and he was a Samaritan.
- World English Bible (WEB)
- He fell on his face at Jesus’ feet, giving him thanks; and he was a Samaritan.
- American Standard Version (ASV)
- and he fell upon his face at his feet, giving him thanks: and he was a Samaritan.
- Bible in Basic English (BBE)
- And, falling down on his face at the feet of Jesus, he gave the credit to him; and he was a man of Samaria.
- Darby Translation (DBY)
- and fell on [his] face at his feet giving him thanks: and he was a Samaritan.
- Webster's Bible (WBS)
- And fell down on [his] face at his feet, giving him thanks: and he was a Samaritan.
- Young's Literal Translation (YLT)
- and he fell upon [his] face at his feet, giving thanks to him, and he was a Samaritan.
Read in context
- 14ಆತನು ಅವರನ್ನು ನೋಡಿ ಅವರಿಗೆ--ಹೋಗಿ ಯಾಜಕರಿಗೆ ನಿಮ್ಮನ್ನು ತೋರಿಸಿ ಕೊಳ್ಳಿರಿ ಅಂದನು. ಅವರು ಹೋಗುತ್ತಿರುವಾಗಲೇ ಶುದ್ಧರಾದರು.
- 15ಅವರಲ್ಲಿ ಒಬ್ಬನು ತಾನು ಸ್ವಸ್ಥ ವಾದದ್ದನ್ನು ನೋಡಿ ಹಿಂದಿರುಗಿ ಬಂದು ಮಹಾ ಶಬ್ದದಿಂದ ದೇವರನ್ನು ಮಹಿಮೆಪಡಿಸುತ್ತಾ
- 16ಆತನ ಪಾದಕ್ಕೆ ಅಡ್ಡಬಿದ್ದು ಆತನಿಗೆ ಕೃತಜ್ಞತಾಸ್ತುತಿಗಳನ್ನು ಸಲ್ಲಿಸಿದನು; ಅವನು ಸಮಾರ್ಯದವನಾಗಿದ್ದನು.
- 17ಆದರೆ ಯೇಸು ಅವನಿಗೆ--ಹತ್ತು ಮಂದಿ ಶುದ್ಧರಾಗ ಲಿಲ್ಲವೇ. ಆದರೆ ಆ ಒಂಭತ್ತು ಮಂದಿ ಎಲ್ಲಿ?
- 18ದೇವ ರನ್ನು ಮಹಿಮೆಪಡಿಸುವದಕ್ಕೆ ಹಿಂದಿರುಗಿದವರಲ್ಲಿ ಈ ಅನ್ಯನ ಹೊರತು ಯಾರೂ ಕಾಣಿಸಲಿಲ್ಲ ಎಂದು ಹೇಳಿ
Cross references
- Acts 8:5–25 ಅಪೊಸ್ತಲರ ಕೃತ್ಯಗಳು 8:5–25ಫಿಲಿಪ್ಪನು ಸಮಾರ್ಯ ವೆಂಬ ಪಟ್ಟಣಕ್ಕೆ ಹೋಗಿ ಅಲ್ಲಿರುವವರಿಗೆ ಕ್ರಿಸ್ತನನ್ನು ಪ್ರಕಟಿಸಿದನು. ಫಿಲಿಪ್ಪನು ಮಾಡಿದ ಸೂಚಕ ಕಾರ್ಯಗಳ ವಿಷಯವಾಗಿ ಕೇಳಿ ಜನರು ಅವುಗಳನ್ನು ನೋಡಿ ಅವನು ಹೇಳಿದ ಆ ವಿಷಯಗಳಿಗೆ ಒಮ್ಮನಸ್ಸಾಗಿ ಲಕ್ಷ್ಯಕೊಟ್ಟರು. ಅನೇಕರನ್ನು ಹಿಡಿದಿದ್ದ ಅಶುದ್ಧಾತ್ಮಗಳು ಮಹಾಶಬ್ದದಿಂದ ಕೂಗಿ ಹೊರಗೆ ಬಂದವು; ಅನೇಕ ಪಾರ್ಶ್ವವಾಯು ರೋಗಿಗಳೂ ಕುಂಟರೂ ಸ್ವಸ್ಥರಾದರು. ಹೀಗೆ ಆ ಪಟ್ಟಣದಲ್ಲಿ ಬಹು ಸಂತೋಷವಾಯಿತು. ಆದರೆ ಇದಕ್ಕಿಂತ ಮುಂಚೆ ಸೀಮೋನ ನೆಂಬವನೊಬ್ಬನು ಆ ಪಟ್ಟಣದಲ್ಲಿ ತಾನು ಏನೋ ಒಬ್ಬ ದೊಡ್ಡ ಮನುಷ್ಯನೆಂದು ಹೇಳಿಕೊಂಡು ಮಂತ್ರ ತಂತ್ರಗಳನ್ನು ನಡಿಸಿ ಸಮಾರ್ಯದ ಜನರಲ್ಲಿ ಬೆರ ಗನ್ನು ಹುಟ್ಟಿಸುತ್ತಿದ್ದನು. ಚಿಕ್ಕವರು ಮೊದಲು ಗೊಂಡು ದೊಡ್ಡವರ ಪರ್ಯಂತರ ಎಲ್ಲರೂ--ಇವನು ದೇವರ ಮಹಾಶಕ್ತಿ ಎಂದು ಹೇಳುತ್ತಾ ಅವ ನಿಗೆ ಲಕ್ಷ್ಯಕೊಡುತ್ತಿದ್ದರು. ಬಹುಕಾಲದಿಂದಲೂ ಅವನು ಮಂತ್ರತಂತ್ರಗಳನ್ನು ನಡಿಸಿ ಜನರಲ್ಲಿ ಬೆರ ಗನ್ನು ಹುಟ್ಟಿಸಿದ್ದರಿಂದ ಅವನಿಗೆ ಅವರು ಲಕ್ಷ್ಯ ಕೊಡುತ್ತಿದ್ದರು. ಆದರೆ ಫಿಲಿಪ್ಪನು ದೇವರ ರಾಜ್ಯದ ವಿಷಯದಲ್ಲಿಯೂ ಯೇಸು ಕ್ರಿಸ್ತನ ಹೆಸರಿನ ವಿಷಯ ದಲ್ಲಿಯೂ ಸಾರುತ್ತಾ ಇರಲು ಗಂಡಸರೂ ಹೆಂಗಸರೂ ನಂಬಿ ಬಾಪ್ತಿಸ್ಮ ಮಾಡಿಸಿಕೊಂಡರು. ಆಗ ಸೀಮೋ ನನು ಕೂಡ ನಂಬಿ ಬಾಪ್ತಿಸ್ಮ ಮಾಡಿಸಿಕೊಂಡು ಫಿಲಿಪ್ಪನ ಸಂಗಡ ಯಾವಾಗಲೂ ಇದ್ದು ಸೂಚಕಕಾರ್ಯಗಳೂ ಮಹತ್ಕಾರ್ಯಗಳೂ ಉಂಟಾಗುವದನ್ನು ನೋಡಿ ಬೆರಗಾದನು. ಸಮಾರ್ಯದವರು ದೇವರ ವಾಕ್ಯವನ್ನು ಸ್ವೀಕರಿಸಿದ ವರ್ತಮಾನವನ್ನು ಯೆರೂಸಲೇಮಿನಲ್ಲಿದ್ದ ಅಪೊಸ್ತಲರು ಕೇಳಿ ಪೇತ್ರ ಯೋಹಾನರನ್ನು ಅವರ ಬಳಿಗೆ ಕಳುಹಿಸಿದರು. ಇವರು ಅಲ್ಲಿಗೆ ಬಂದು ಪವಿತ್ರಾತ್ಮನನ್ನು ಅವರು ಹೊಂದಬೇಕೆಂದು ಅವರಿ ಗೋಸ್ಕರ ಪ್ರಾರ್ಥನೆ ಮಾಡಿದರು. (ಯಾಕಂದರೆ ಪವಿತ್ರಾತ್ಮನು ಅವರಲ್ಲಿ ಒಬ್ಬನ ಮೇಲಾದರೂ ಇನ್ನೂ ಬಂದಿರಲಿಲ್ಲ. ಅವರು ಕರ್ತನಾದ ಯೇಸುವಿನ ಹೆಸರಿ ನಲ್ಲಿ ಬಾಪ್ತಿಸ್ಮವನ್ನು ಮಾತ್ರ ಮಾಡಿಸಿಕೊಂಡಿದ್ದರು). ಅಪೊಸ್ತಲರು ಅವರ ಮೇಲೆ ಕೈಗಳನ್ನಿಡಲು ಅವರು ಪವಿತ್ರಾತ್ಮನನ್ನು ಹೊಂದಿದರು. ಅಪೊಸ್ತಲರು ಕೈಗಳನ್ನಿಡುವದರ ಮೂಲಕವಾಗಿ ಪವಿತ್ರಾತ್ಮ ಕೊಡೋ ಣವಾಗುವದನ್ನು ಸೀಮೋನನು ನೋಡಿ ಹಣವನ್ನು ತಂದು-- ನಾನು ಯಾರ ಮೇಲೆ ಕೈಗಳನ್ನಿಡುತ್ತೇನೋ ಅವರು ಪವಿತ್ರಾತ್ಮನನ್ನು ಹೊಂದುವಂತೆ ಈ ಅಧಿಕಾರ ವನ್ನು ನನಗೂ ಕೊಡಿರಿ ಅಂದನು. ಆದರೆ ಪೇತ್ರನು ಅವನಿಗೆ--ನಿನ್ನ ಹಣವು ನಿನ್ನ ಕೂಡ ಹಾಳಾಗಿ ಹೋಗಲಿ; ನೀನು ದೇವರ ದಾನವನ್ನು ಹಣಕ್ಕೆ ಕೊಂಡುಕೊಳ್ಳಬಹುದೆಂದು ಯೋಚಿಸುತ್ತೀ ಯಲ್ಲಾ. ಈ ಕಾರ್ಯದಲ್ಲಿ ನಿನಗೆ ಭಾಗವೂ ಇಲ್ಲ, ಪಾಲೂ ಇಲ್ಲ; ನಿನ್ನ ಹೃದಯವು ದೇವರ ಮುಂದೆ ಸರಿಯಲ್ಲ. ಆದದರಿಂದ ಈ ನಿನ್ನ ಕೆಟ್ಟತನದ ವಿಷಯವಾಗಿ ಮಾನಸಾಂತರಪಟ್ಟು ದೇವರನ್ನು ಬೇಡಿಕೋ, ಆಗ ನಿನ್ನ ಹೃದಯದ ಆಲೋಚನೆಯು ಕ್ಷಮಿಸಲ್ಪಡಬಹುದು. ಯಾಕಂದರೆ ನೀನು ಹಾನಿಕರ ವಾದ ವಿಷದಲ್ಲಿಯೂ ದುಷ್ಟತ್ವದ ಬಂಧನದಲ್ಲಿಯೂ ಇರುತ್ತೀಯೆಂದು ನನಗೆ ಕಾಣುತ್ತದೆ ಅಂದನು. ಅದಕ್ಕೆ ಸೀಮೋನನು--ನೀವು ಹೇಳಿರುವ ವಿಷಯ ಗಳಲ್ಲಿ ಯಾವದೂ ನನ್ನ ಮೇಲೆ ಬಾರದಂತೆ ನನಗೋಸ್ಕರ ನೀವೇ ಕರ್ತನನ್ನು ಬೇಡಿಕೊಳ್ಳಿರಿ ಎಂದು ಹೇಳಿದನು. ಹೀಗಿರಲಾಗಿ ಅವರು ಸಾಕ್ಷಿ ಕೊಡುತ್ತಾ ಕರ್ತನ ವಾಕ್ಯವನ್ನು ಸಾರುತ್ತಾ ಯೆರೂಸ ಲೇಮಿಗೆ ಹಿಂತಿರುಗಿ ಹೊರಟು ಸಮಾರ್ಯದವರ ಅನೇಕ ಗ್ರಾಮಗಳಲ್ಲಿ ಸುವಾರ್ತೆಯನ್ನು ಸಾರಿದರು.
- Matthew 10:5 ಮತ್ತಾಯನು 10:5ಯೇಸು ಈ ಹನ್ನೆರಡು ಮಂದಿಯನ್ನು ಕಳುಹಿ ಸುವಾಗ ಅವರಿಗೆ ಅಪ್ಪಣೆಕೊಟ್ಟು ಹೇಳಿದ್ದೇನಂ ದರೆ--ಅನ್ಯಜನರ ದಾರಿಯಲ್ಲಿ ಹೋಗಬೇಡಿರಿ ಮತ್ತು ಸಮಾರ್ಯರ ಯಾವ ಪಟ್ಟಣದಲ್ಲಿಯೂ ನೀವು ಪ್ರವೇಶಿಸಬೇಡಿರಿ.
- Revelation 19:10 ಪ್ರಕಟನೆ 19:10ಆಗ ನಾನು ಅವನಿಗೆ ಆರಾಧನೆ ಮಾಡಬೇಕೆಂದು ಅವನ ಪಾದಗಳ ಮುಂದೆ ಬೀಳಲು ಅವನು--ನೀನು ಹಾಗೆ ಮಾಡಬೇಡ ನೋಡು, ನಾನು ನಿನಗೂ ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೊಂದಿದ ನಿನ್ನ ಸಹೋದರ ರಿಗೂ ಜೊತೆಯ ದಾಸನಾಗಿದ್ದೇನೆ; ದೇವರಿಗೆ ಆರಾಧನೆ ಮಾಡು. ಯಾಕಂದರೆ ಯೇಸುವಿನ ವಿಷಯ
- Revelation 19:4–5 ಪ್ರಕಟನೆ 19:4–5ಆಗ ಇಪ್ಪತ್ತನಾಲ್ಕು ಮಂದಿ ಹಿರಿಯರೂ ಆ ನಾಲ್ಕು ಜೀವಿಗಳೂ--ಆಮೆನ್. ಹಲ್ಲೆಲೂಯಾ ಎಂದು ಹೇಳುತ್ತಾ ಸಿಂಹಾಸನದ ಮೇಲೆ ಕೂತಿದ್ದ ದೇವರ ಮುಂದೆ ಅಡ್ಡಬಿದ್ದು ಆರಾಧಿಸಿದರು. ಆಮೇಲೆ ಸಿಂಹಾಸನದ ಕಡೆಯಿಂದ ಬಂದ ಒಂದು ಶಬ್ದವು--ದೇವರ ಸೇವಕರೆಲ್ಲರೇ, ಆತನಿಗೆ ಭಯ ಪಡುವ ಹಿರಿಕಿರಿಯರೇ, ನಮ್ಮ ದೇವರನ್ನು ಕೊಂಡಾಡಿರಿ ಎಂದು ಹೇಳಿತು.
- Luke 10:32–35 ಲೂಕನು 10:32–35ಅದೇ ಪ್ರಕಾರ ಒಬ್ಬ ಲೇವಿ ಯೂ ಆ ಸ್ಥಳಕ್ಕೆ ಬಂದು ಅವನನ್ನು ನೋಡಿ ಓರೆಯಾಗಿ ಹೋದನು. ಆದರೆ ಒಬ್ಬಾನೊಬ್ಬ ಸಮಾರ್ಯದ ವನು ಪ್ರಯಾಣ ಮಾಡುತ್ತಾ ಅವನಿದ್ದಲ್ಲಿಗೆ ಬಂದನು; ಅವನನ್ನು ನೋಡಿ ಅವನ ಮೇಲೆ ಕನಿಕರಪಟು ಅವನ ಬಳಿಗೆ ಹೋಗಿ ಎಣ್ಣೆಯನ್ನೂ ದ್ರಾಕ್ಷಾರಸ ವನ್ನೂ ಹೊಯ್ದು ಅವನ ಗಾಯಗಳನ್ನು ಕಟ್ಟಿ ತನ್ನ ಸ್ವಂತ ಪಶುವಿನ ಮೇಲೆ ಕೂಡ್ರಿಸಿ ವಸತಿ ಗೃಹಕ್ಕೆ ತಂದು ಅವನನ್ನು ಆರೈಕೆ ಮಾಡಿದನು. ಮರುದಿವಸ ಅವನು ಹೊರಟು ಹೋಗುತ್ತಿದ್ದಾಗ ಎರಡು ನಾಣ್ಯ ಗಳನ್ನು ತೆಗೆದು ವಸತಿಗೃಹದ ಯಜಮಾನನಿಗೆ ಕೊಟ್ಟು ಅವನಿಗೆ--ಇವನನ್ನು ಆರೈಕೆ ಮಾಡು, ನೀನು ಏನಾ ದರೂ ಹೆಚ್ಚು ವೆಚ್ಚ ಮಾಡಿದರೆ ನಾನು ತಿರಿಗಿ ಬಂದಾಗ ಕೊಟ್ಟು ತೀರಿಸುತ್ತೇನೆ ಅಂದನು.
- Luke 9:52–56 ಲೂಕನು 9:52–56ತನಗೆ ಮುಂದಾಗಿ ದೂತರನ್ನು ಕಳುಹಿಸಿದನು. ಅವರು ಹೋಗಿ ಆತನಿಗಾಗಿ ಸಿದ್ಧ ಪಡಿಸುವಂತೆ ಸಮಾರ್ಯದ ಒಂದು ಹಳ್ಳಿಯೊಳಕ್ಕೆ ಪ್ರವೇಶಿಸಿದರು. ಆದರೆ ಅವರು ಆತನನ್ನು ಅಂಗೀಕರಿಸಲಿಲ್ಲ. ಯಾಕಂದರೆ ಆತನು ಯೆರೂಸಲೇ ಮಿಗೆ ಹೋಗುವಾತನೋ ಎಂಬಂತೆ ಆತನ ಮುಖ ವಿತ್ತು. ಆತನ ಶಿಷ್ಯರಾದ ಯಾಕೋಬ ಯೋಹಾನರು ಇದನ್ನು ನೋಡಿ--ಕರ್ತನೇ, ಎಲೀಯನು ಮಾಡಿದ ಪ್ರಕಾರ ಅವರನ್ನು ದಹಿಸಿಬಿಡುವಂತೆ ಆಕಾಶದಿಂದ ಬೆಂಕಿ ಬೀಳುವ ಹಾಗೆ ನಾವು ಅಪ್ಪಣೆಕೊಡಲು ನಿನಗೆ ಮನಸ್ಸುಂಟೋ ಎಂದು ಅವರು ಕೇಳಿದರು. ಆದರೆ ಆತನು ತಿರುಗಿಕೊಂಡು ಅವರನ್ನು ಗದರಿಸಿ--ನೀವು ಯಾವ ತರವಾದ ಆತ್ಮದವರಾಗಿದ್ದೀರೆಂದು ನಿಮಗೆ ತಿಳಿಯದು. ಯಾಕಂದರೆ ಮನುಷ್ಯಕುಮಾರನು ಮನುಷ್ಯರ ಪ್ರಾಣಗಳನ್ನು ನಾಶಮಾಡುವದಕ್ಕಾಗಿ ಅಲ್ಲ, ಅವರನ್ನು ರಕ್ಷಿಸುವದಕ್ಕಾಗಿ ಬಂದನು ಎಂದು ಹೇಳಿದನು. ಅವರು ಮತ್ತೊಂದು ಹಳ್ಳಿಗೆ ಹೋದರು.
- Revelation 4:10 ಪ್ರಕಟನೆ 4:10ಆಗ ಆ ಇಪ್ಪತ್ತನಾಲ್ಕು ಮಂದಿ ಹಿರಿಯರು ಸಿಂಹಾಸನದ ಮೇಲೆ ಕೂತಿದ್ದಾತನ ಮುಂದೆ ಅಡ್ಡಬಿದ್ದು ತಮ್ಮ ಕಿರೀಟಗಳನ್ನು ಸಿಂಹಾಸನದ ಮುಂದೆ ಹಾಕಿ ಯುಗಯುಗಾಂತರ ಗಳಲ್ಲಿಯೂ ಜೀವಿಸುವಾತನನ್ನು ಆರಾಧಿಸುತ್ತಾ--ಓ ಕರ್ತನೇ, ನೀನು ಪ್ರಭಾವ ಮಾನಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಯಾಕಂದರೆ ಸಮಸ್ತವನ್ನು ಸೃಷ್ಟಿಸಿದಾತನು ನೀನೇ. ಅವು ನಿನ್ನ ಚಿತ್ತ ದಂತೆ ಉಂಟಾಗಿ ಸೃಷ್ಟಿಸಲ್ಪಟ್ಟವು ಎಂದು ಹೇಳುವರು.
- Acts 1:8 ಅಪೊಸ್ತಲರ ಕೃತ್ಯಗಳು 1:8ಆದರೆ ಪವಿತ್ರಾತ್ಮನು ನಿಮ್ಮ ಮೇಲೆ ಬಂದಾಗ ನೀವು ಬಲವನ್ನು ಹೊಂದುವಿರಿ; ಯೆರೂಸಲೇಮಿನಲ್ಲಿಯೂ ಎಲ್ಲಾ ಯೂದಾಯದ ಲ್ಲಿಯೂ ಸಮಾರ್ಯದಲ್ಲಿಯೂ ಭೂಮಿಯ ಕಟ್ಟ ಕಡೆಯವರೆಗೂ ನೀವು ನನಗೆ ಸಾಕ್ಷಿಗಳಾಗಿರುವಿರಿ ಎಂದು ಹೇಳಿದನು.
- Luke 5:8 ಲೂಕನು 5:8ಸೀಮೋನ್ ಪೇತ್ರನು ಅದನ್ನು ಕಂಡಾಗ ಯೇಸುವಿನ ಮೊಣಕಾಲಿಗೆ ಬಿದ್ದು--ನನ್ನನ್ನು ಬಿಟ್ಟು ಹೋಗು; ಓ ಕರ್ತನೇ, ನಾನು ಪಾಪಾತ್ಮನು ಅಂದನು.
- John 4:9 ಯೋಹಾನನು 4:9ಅದಕ್ಕೆ ಆ ಸಮಾ ರ್ಯದ ಸ್ತ್ರೀಯು ಆತನಿಗೆ--ನೀನು ಯೆಹೂದ್ಯನಾಗಿದ್ದು ಕುಡಿಯುವದಕ್ಕೆ ಕೊಡು ಎಂದು ಸಮಾರ್ಯದ ಸ್ತ್ರೀಯಾದ ನನ್ನಿಂದ ಕೇಳುವದು ಹೇಗೆ? ಯಾಕಂದರೆ ಯೆಹೂದ್ಯರು ಸಮಾರ್ಯದವರೊಂದಿಗೆ ಹೊಕ್ಕು ಬಳಿಕೆ ಮಾಡುವದಿಲ್ಲವಲ್ಲಾ ಅಂದಳು.
- Revelation 5:14 ಪ್ರಕಟನೆ 5:14ಆಗ ನಾಲ್ಕು ಜೀವಿಗಳು--ಆಮೆನ್ ಅಂದವು; ಇಪ್ಪತ್ತನಾಲ್ಕು ಮಂದಿ ಹಿರಿಯರು ಅಡ್ಡ ಬಿದ್ದು ಯುಗಯುಗಾಂತರಗಳಲ್ಲಿ ಜೀವಿಸುವಾತನನ್ನು ಆರಾಧಿಸಿದರು.
- John 4:39–42 ಯೋಹಾನನು 4:39–42ಆಗ--ನಾನು ಮಾಡಿ ದೆಲ್ಲವನ್ನು ನನಗೆ ತಿಳಿಸಿದನೆಂದು ಸಾಕ್ಷಿಕೊಟ್ಟ ಆ ಸ್ತ್ರೀಯ ಮಾತಿಗೋಸ್ಕರ ಆ ಪಟ್ಟಣದ ಅನೇಕ ಸಮಾರ್ಯದವರು ಆತನ ಮೇಲೆ ನಂಬಿಕೆ ಇಟ್ಟರು. ಹೀಗೆ ಆ ಸಮಾರ್ಯ ದವರು ಆತನ ಬಳಿಗೆ ಬಂದಾಗ ಆತನು ತಮ್ಮೊಂದಿಗೆ ಇರಬೇಕೆಂದು ಆತನನ್ನು ಬೇಡಿಕೊಳ್ಳಲು ಆತನು ಎರಡು ದಿವಸ ಅಲ್ಲಿ ಇಳುಕೊಂಡನು. ಇನ್ನೂ ಹೆಚ್ಚು ಜನರು ಆತನ ಸ್ವಂತ ಮಾತಿಗೋಸ್ಕರ ಆತನನ್ನು ನಂಬಿದರು. ಆ ಸ್ತ್ರೀಗೆ-- ನಾವು ಈಗ ನಂಬುವದು ನಿನ್ನ ಮಾತಿನಿಂದಲ್ಲ; ಯಾಕಂದರೆ ನಾವೇ ಸ್ವತಃ ಈತನ ಮಾತನ್ನು ಕೇಳಿದ್ದೇವೆ ಮತ್ತು ಈತನು ನಿಜವಾಗಿಯೂ ಲೋಕರಕ್ಷಕನಾದ ಕ್ರಿಸ್ತನೆಂದು ಬಲ್ಲೆವು ಅಂದರು.
Original words (Greek)
- And · G2532καί kaí
- down · G4098πίπτω píptō
- on · G1909ἐπί epí
- face · G4383πρόσωπον prósōpon
- at · G3844παρά pará
- his · G846αὐτός autós
- feet · G4228πούς poús
- giving · G2168εὐχαριστέω eucharistéō
- him · G846αὐτός autós
- thanks · G2168εὐχαριστέω eucharistéō
- and · G2532καί kaí
- he · G846αὐτός autós
- was · G2258ἦν ēn
- Samaritan · G4541Σαμαρείτης Samareítēs