Matthew · chapter 11 · verse 25
Matthew 11:25 in Kannada
ಆ ಸಮಯದಲ್ಲಿ ಯೇಸು--ತಂದೆಯೇ, ಪರಲೋಕ ಮತ್ತು ಭೂಲೋಕಗಳ ಒಡೆಯನೇ, ನೀನು ಈ ಸಂಗತಿಗಳನ್ನು ಜ್ಞಾನಿಗಳಿಗೂ ಬುದ್ಧಿವಂತ ರಿಗೂ ಮರೆಮಾಡಿ ಶಿಶುಗಳಿಗೆ ಪ್ರಕಟಮಾಡಿ ರುವದಕ್ಕಾಗಿ ನಾನು ನಿನ್ನನ್ನು ಕೊಂಡಾಡುತ್ತೇನೆ.
Aa samayadalli yesu--tandeye, paraloka mattu bhoolokagala odeyane, neenu ee sangatigalannu jnyaanigaligoo buddhivanta rigoo maremaadi shishugalige prakatamaadi ruvadakkaagi naanu ninnannu kondaaduttene.
Matthew 11:25 in English
- King James Version (KJV)
- At that time Jesus answered and said, I thank thee, O Father, Lord of heaven and earth, because thou hast hid these things from the wise and prudent, and hast revealed them unto babes.
- World English Bible (WEB)
- At that time, Jesus answered, “I thank you, Father, Lord of heaven and earth, that you hid these things from the wise and understanding, and revealed them to infants.
- American Standard Version (ASV)
- At that season Jesus answered and said, I thank thee, O Father, Lord of heaven and earth, that thou didst hide these things from the wise and understanding, and didst reveal them unto babes:
- Bible in Basic English (BBE)
- At that time Jesus made answer and said, I give praise to you, O Father, Lord of heaven and earth, because you have kept these things secret from the wise and the men of learning, and have made them clear to little children.
- Darby Translation (DBY)
- At that time, Jesus answering said, I praise thee, Father, Lord of the heaven and of the earth, that thou hast hid these things from the wise and prudent, and hast revealed them to babes.
- Webster's Bible (WBS)
- At that time Jesus answered and said, I thank thee, O Father, Lord of heaven and earth, because thou hast hid these things from the wise and prudent, and hast revealed them to babes.
- Young's Literal Translation (YLT)
- At that time Jesus answering said, 'I do confess to Thee, Father, Lord of the heavens and of the earth, that thou didst hide these things from wise and understanding ones, and didst reveal them to babes.
Read in context
- 23ಆಕಾಶದವರೆಗೂ ಹೆಚ್ಚಿಸಲ್ಪಟ್ಟ ಕಪೆರ್ನೌಮೇ, ನೀನು ಕೆಳಗೆ ಪಾತಾಳಕ್ಕೆ ದೊಬ್ಬಲ್ಪಡುವಿ; ಯಾಕಂದರೆ ನಿನ್ನೊಳಗೆ ನಡೆದಿರುವ ಮಹತ್ಕಾರ್ಯಗಳು ಸೊದೋಮಿನಲ್ಲಿ ನಡೆದಿದ್ದರೆ ಅದು ಈ ದಿನದವರೆಗೂ ಇರುತ್ತಿತ್ತು.
- 24ಆದರೆ ನಾನು ನಿನಗೆ ಹೇಳುವದೇನಂದರೆ --ನ್ಯಾಯತೀರ್ಪಿನ ದಿನದಲ್ಲಿ ನಿನಗಿಂತಲೂ ಸೊದೋಮಿನ ಗತಿಯು ಹೆಚ್ಚು ತಾಳಬಹುದಾಗಿರುವದು.
- 25ಆ ಸಮಯದಲ್ಲಿ ಯೇಸು--ತಂದೆಯೇ, ಪರಲೋಕ ಮತ್ತು ಭೂಲೋಕಗಳ ಒಡೆಯನೇ, ನೀನು ಈ ಸಂಗತಿಗಳನ್ನು ಜ್ಞಾನಿಗಳಿಗೂ ಬುದ್ಧಿವಂತ ರಿಗೂ ಮರೆಮಾಡಿ ಶಿಶುಗಳಿಗೆ ಪ್ರಕಟಮಾಡಿ ರುವದಕ್ಕಾಗಿ ನಾನು ನಿನ್ನನ್ನು ಕೊಂಡಾಡುತ್ತೇನೆ.
- 26ಹೌದು, ತಂದೆಯೇ, ಇದು ನಿನ್ನ ದೃಷ್ಟಿಯಲ್ಲಿ ಒಳ್ಳೆಯದಾಗಿ ತೋಚಿತು.
- 27ನನ್ನ ತಂದೆಯು ಎಲ್ಲವನ್ನೂ ನನಗೆ ಒಪ್ಪಿಸಿದ್ದಾನೆ. ತಂದೆಯೇ ಹೊರತು ಇನ್ನಾವನೂ ಮಗನನ್ನು ತಿಳಿದವನಲ್ಲ; ಇಲ್ಲವೆ ಮಗನೇ ಹೊರತು ಇನ್ನಾವನೂ ತಂದೆಯನ್ನು ತಿಳಿದವನಲ್ಲ; ಮತ್ತು ಮಗನು ತಂದೆಯನ್ನು ಯಾರಿಗೆ ಪ್ರಕಟಿಸುವದಕ್ಕೆ ಮನಸ್ಸುಳ್ಳವನಾಗಿದ್ದಾನೋ ಅವನೂ ಆತನನ್ನು ತಿಳಿದ
Cross references
- Matthew 21:16 ಮತ್ತಾಯನು 21:16ಇವರು ಹೇಳುವದೇನೆಂದು ನೀನು ಕೇಳುತ್ತೀಯೋ ಎಂದು ಕೇಳಿದ್ದಕ್ಕೆ ಯೇಸು ಅವರಿಗೆ -- ಹೌದು, ಸಣ್ಣ ಮಕ್ಕಳ ಮತ್ತು ಮೊಲೇಕೂಸುಗಳ ಬಾಯಿಂದ ನೀನು ಸ್ತೋತ್ರವನ್ನು ಸಿದ್ಧಿಗೆ ತಂದಿದ್ದೀ ಎಂಬದನ್ನು ನೀವು ಎಂದಾದರೂ ಓದಲಿಲ್ಲವೋ ಅಂದನು.
- Psalm 8:2 ಕೀರ್ತನೆಗಳು 8:2ಶತ್ರುವನ್ನೂ ಮುಯ್ಯಿಗೆ ಮುಯ್ಯಿ ಕೊಡುವವನನ್ನೂ ನಿಲ್ಲಿಸಿಬಿಡುವದಕ್ಕೆ ನಿನ್ನ ವೈರಿಗಳ ನಿಮಿತ್ತ ಶಿಶುಗಳ ಮತ್ತು ಮೊಲೆ ಕೂಸುಗಳ ಬಾಯಿಂದ ನೀನು ನಿನ್ನ ಬಲವನ್ನು ಸ್ಥಾಪಿಸಿದ್ದೀ.
- Matthew 16:17 ಮತ್ತಾಯನು 16:17ಆಗ ಯೇಸು ಪ್ರತ್ಯುತ್ತರವಾಗಿ ಅವನಿಗೆ--ಯೋನನ ಮಗನಾದ ಸೀಮೋನನೇ, ನೀನು ಧನ್ಯನು; ಯಾಕಂದರೆ ರಕ್ತಮಾಂಸವಲ್ಲ (ಮನುಷ್ಯರಲ್ಲ), ಪರಲೋಕದಲ್ಲಿರುವ ನನ್ನ ತಂದೆಯೇ ಅದನ್ನು ನಿನಗೆ ಪ್ರಕಟಿಸಿದನು ಎಂದು ಹೇಳಿದನು.
- Luke 10:21–24 ಲೂಕನು 10:21–24ಆ ಗಳಿಗೆಯಲ್ಲಿ ಯೇಸು ಆತ್ಮದಲ್ಲಿ ಉಲ್ಲಾಸ ಗೊಂಡು -- ಓ ತಂದೆಯೇ, ಪರಲೋಕ, ಭೂಲೋಕ ಗಳ ಒಡೆಯನೇ, ನೀನು ಈ ಸಂಗತಿಗಳನ್ನು ಜ್ಞಾನಿ ಗಳಿಗೂ ಬುದ್ಧಿವಂತರಿಗೂ ಮರೆಮಾಡಿ ಕೂಸುಗಳಿಗೆ ಪ್ರಕಟಮಾಡಿರುವದರಿಂದ ನಿನ್ನನ್ನು ಕೊಂಡಾಡುತ್ತೇನೆ; ಹೌದು, ತಂದೆಯೇ, ಅದು ನಿನ್ನ ದೃ ಎಲ್ಲವುಗಳು ನನ್ನ ತಂದೆಯಿಂದ ನನಗೆ ಒಪ್ಪಿಸಲ್ಪಟ್ಟಿವೆ; ತಂದೆಯ ಹೊರತು ಯಾರೂ ಮಗನನ್ನು ಅರಿಯರು. ಮಗನೂ ತಾನು ಯಾರಿಗೆ ತಂದೆಯನ್ನು ಪ್ರಕಟಮಾಡುವನೋ ಅವನೂ ಅಲ್ಲದೆ ಆತನನ್ನು (ತಂದೆಯನ್ನು) ಯಾರೂ ಅರಿತವರಲ್ಲ. ಆತನು ತನ್ನ ಶಿಷ್ಯರ ಕಡೆಗೆ ತಿರುಗಿಕೊಂಡು--ನೀವು ನೋಡು ತ್ತಿರುವವುಗಳನ್ನು ನೋಡುವ ಕಣ್ಣುಗಳು ಧನ್ಯವಾದವು ಗಳು ಎಂದು ಪ್ರತ್ಯೇಕವಾಗಿ ಹೇಳಿದನು. ಯಾಕಂದರೆ ಅನೇಕ ಪ್ರವಾದಿಗಳೂ ಅರಸರೂ ನೀವು ನೋಡು ವಂಥವುಗಳನ್ನು ನೋಡಬೇಕೆಂದು ಅಪೇಕ್ಷಿಸಿದರೂ ನೋಡಲಿಲ್ಲ ಮತ್ತು ನೀವು ಕೇಳುವಂಥವುಗಳನ್ನು ಕೇಳ ಬೇಕೆಂದು ಅಪೇಕ್ಷಿಸಿದರೂ ಅವರು ಕೇಳಲಿಲ್ಲ ಎಂದು ನಾನು ನಿಮಗೆ ಹೇಳುತ್ತೇನೆ ಅಂದನು.
- 1 Corinthians 1:18–29 1 ಕೊರಿಂಥದವರಿಗೆ 1:18–29ನಾಶವಾಗುವವರಿಗೆ ಶಿಲುಬೆಯ ವಿಷಯವಾದ ಸಾರೋಣವು ಹುಚ್ಚುತನವಾಗಿದೆ; ರಕ್ಷಣೆ ಹೊಂದಿದ ನಮಗಾದರೋ ಅದು ದೇವರ ಶಕ್ತಿಯಾಗಿದೆ. ನಾನು ಜ್ಞಾನಿಗಳ ಜ್ಞಾನವನ್ನು ನಾಶಮಾಡುವೆನು; ವಿವೇಕಿಗಳ ವಿವೇಕವನ್ನು ಇಲ್ಲದಂತಾಗ ಮಾಡುವೆನು ಎಂದು ಬರೆಯಲ್ಪಟ್ಟಿದೆ. ಜ್ಞಾನಿಯು ಎಲ್ಲಿ? ಶಾಸ್ತ್ರಿಯು ಎಲ್ಲಿ? ಲೋಕದ ತರ್ಕವಾದಿ ಎಲ್ಲಿ? ದೇವರು ಈ ಲೋಕದ ಜ್ಞಾನವನ್ನು ಹುಚ್ಚುತನವನ್ನಾಗಿ ಮಾಡಿದ್ದಾನಲ್ಲವೇ? ಯಾಕಂದರೆ ದೇವರ ಜ್ಞಾನದಲ್ಲಿ ಲೋಕವು(ತನ್ನ) ಜ್ಞಾನದ ಮೂಲಕ ದೇವರನ್ನು ತಿಳಿದುಕೊಳ್ಳಲಿಲ್ಲವಾದ ದರಿಂದ ಪ್ರಸಂಗದ ಹುಚ್ಚುತನದಿಂದಲೇ ನಂಬುವ ವರನ್ನು ರಕ್ಷಿಸುವದು ದೇವರಿಗೆ ಇಷ್ಟವಾಗಿತ್ತು. ಯೆಹೂದ್ಯರು ಸೂಚಕಕಾರ್ಯವನ್ನು ಕೇಳುತ್ತಾರೆ; ಗ್ರೀಕರು ಜ್ಞಾನವನ್ನು ಹುಡುಕುತ್ತಾರೆ; ನಾವಾದರೋ ಶಿಲುಬೆಗೆ ಹಾಕಲ್ಪಟ್ಟವನಾದ ಕ್ರಿಸ್ತನನ್ನು ಪ್ರಚುರ ಪಡಿಸುತ್ತೇವೆ. ಆತನು ಯೆಹೂದ್ಯರಿಗೆ ಅಭ್ಯಂತರವೂ ಗ್ರೀಕರಿಗೆ ಹುಚ್ಚುತನವೂ ಆಗಿದ್ದಾನೆ. ಆದರೆ ಕರೆಯಲ್ಪಟ್ಟ ಯೆಹೂದ್ಯರಿಗೂ ಗ್ರೀಕರಿಗೂ ಕ್ರಿಸ್ತನೇ ದೇವರ ಶಕ್ತಿಯೂ ದೇವರ ಜ್ಞಾನವೂ ಆಗಿದ್ದಾನೆ. ದೇವರ ಹುಚ್ಚುತನವು ಮನುಷ್ಯರಿಗಿಂತಲೂ ಜ್ಞಾನವುಳ್ಳದ್ದಾಗಿದೆ. ದೇವರ ಬಲಹೀನತೆಯು ಮನುಷ್ಯರಿಗಿಂತಲೂ ಬಲವುಳ್ಳದ್ದಾಗಿದೆ. ಸಹೋದರರೇ, ದೇವರು ನಿಮ್ಮನ್ನು ಕರೆದಾಗ ಎಂಥವರನ್ನು ಕರೆದನೆಂದು ಆಲೋಚಿಸಿರಿ; ನಿಮ್ಮೊಳಗೆ ಲೌಕಿಕದೃಷ್ಟಿಯಲ್ಲಿ ಜ್ಞಾನಿಗಳೂ ಅನೇಕರಿಲ್ಲ, ಬಲಿಷ್ಠರೂ ಅನೇಕರಿಲ್ಲ, ಕುಲೀನರೂ ಅನೇಕರಿಲ್ಲ. ಆದರೆ ದೇವರು ಜ್ಞಾನಿಗಳನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬುದ್ಧಿಹೀನರನ್ನು ಆರಿಸಿಕೊಂಡಿದ್ದಾನೆ; ದೇವರು ಬಲಿಷ್ಟರನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬಲಹೀನರನ್ನು ಆರಿಸಿಕೊಂಡಿದ್ದಾನೆ; ಇದಲ್ಲದೆ ದೇವರು ಇರುವವುಗಳನ್ನು ಇಲ್ಲದಂತಾಗಿ ಮಾಡುವ ಹಾಗೆ ಈ ಲೋಕದ ಹೀನವಾದವರನ್ನೂ ಅಸಡ್ಡೆಯಾದವರನ್ನೂ ಆರಿಸಿಕೊಂಡದ್ದಲ್ಲದೆ ಗಣನೆಗೆ ಬಾರದವರನ್ನೂ ಆರಿಸಿಕೊಂಡಿದ್ದಾನೆ. ಹೀಗಿರಲು ಆತನ ಮುಂದೆ ಹೊಗಳಿಕೊಳ್ಳುವದಕ್ಕೆ ಯಾರಿಗೂ ಆಸ್ಪದವಿಲ್ಲ.
- Matthew 18:3–4 ಮತ್ತಾಯನು 18:3–4ನೀವು ತಿರುಗಿ ಕೊಂಡು ಚಿಕ್ಕ ಮಕ್ಕಳಂತೆ ಆಗದೆಹೋದರೆ ಪರಲೋಕ ರಾಜ್ಯದೊಳಗೆ ಪ್ರವೇಶಿಸುವದಿಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ. ಆದದರಿಂದ ಯಾವನು ಈ ಚಿಕ್ಕ ಮಗುವಿನಂತೆ ತನ್ನನ್ನು ತಾನು ತಗ್ಗಿಸಿಕೊಳ್ಳುವನೋ ಅವನೇ ಪರಲೋಕರಾಜ್ಯದಲ್ಲಿ ಅತಿ ದೊಡ್ಡವನಾಗಿರುವನು.
- Romans 11:8–10 ರೋಮಾಪುರದವರಿಗೆ 11:8–10(ಬರೆದಿರುವಂತೆ ದೇವರು ಅವರಿಗೆ ತೂಕಡಿಕೆಯ ಆತ್ಮವನ್ನೂ ಕಾಣದ ಕಣ್ಣುಗಳನ್ನೂ ಕೇಳದ ಕಿವಿಗಳನ್ನೂ ಕೊಟ್ಟಿದ್ದಾನೆ). ಉಳಿದವರು ಈ ದಿನದ ವರೆಗೂ ಕುರುಡರಾಗಿದ್ದಾರೆ. ಇದಲ್ಲದೆ ದಾವೀದನು--ಅವರ ಊಟವು ಅವರಿಗೆ ಉರ್ಲೂ ಬೋನೂ ಅಭ್ಯಂತರವೂ ಪ್ರತಿಫಲವೂ ಆಗಲಿ. ನೋಡದಂತೆ ಅವರ ಕಣ್ಣು ಗಳು ಮೊಬ್ಬಾಗಲಿ; ಅವರ ಬೆನ್ನು ಯಾವಾಗಲೂ ಬೊಗ್ಗಿಕೊಂಡಿರಲಿ ಎಂದು ಅನ್ನುತ್ತಾನೆ.
- 1 Corinthians 2:6–8 1 ಕೊರಿಂಥದವರಿಗೆ 2:6–8ಆದರೂ ಪರಿಪೂರ್ಣರಾದವರಲ್ಲಿ ಜ್ಞಾನವನ್ನೇ ನಾವು ಹೇಳುತ್ತೇವೆ; ಆದಾಗ್ಯೂ ಅದು ಇಹಲೋಕದ ಜ್ಞಾನವಲ್ಲ ಇಲ್ಲವೆ ಇಲ್ಲದೆ ಹೋಗುವ ಇಹ ಲೋಕಾಧಿಪತಿಗಳ ಜ್ಞಾನವೂ ಅಲ್ಲ. ಆದರೆ ಗುಪ್ತ ವಾಗಿದ್ದ ಜ್ಞಾನವನ್ನು ತಿಳಿಸುವಲ್ಲಿ ದೇವರ ಜ್ಞಾನವನ್ನೇ ಹೇಳುತ್ತೇವೆ; ಅದನ್ನು ದೇವರು ನಮ್ಮ ಮಹಿಮೆಗಾಗಿ ಲೋಕೋತ್ಪತ್ತಿಗಿಂತ ಮೊದಲೇ ನೇಮಿಸಿದನು. ಇದನ್ನು (ಆ ಜ್ಞಾನವನ್ನು) ಇಹಲೋಕಾಧಿ ಪತಿಗಳಲ್ಲಿ ಯಾರೂ ಅರಿಯಲಿಲ್ಲ; ಅರಿತಿದ್ದರೆ ಅವರು ಮಹಿಮೆ ಯುಳ್ಳ ಕರ್ತನನ್ನು ಶಿಲುಬೆಗೆ ಹಾಕುತ್ತಿರಲಿಲ್ಲ.
- John 9:39–41 ಯೋಹಾನನು 9:39–41ಯೇಸು--ನೋಡದವರು ನೋಡುವಂತೆಯೂ ನೋಡುವವರು ಕುರುಡರಾಗುವಂತೆಯೂ ನ್ಯಾಯತೀರ್ಪಿಗೋಸ್ಕರ ನಾನು ಈ ಲೋಕಕ್ಕೆ ಬಂದಿದ್ದೇನೆ ಅಂದನು. ಆತ ನೊಂದಿಗಿದ್ದ ಫರಿಸಾಯರಲ್ಲಿ ಕೆಲವರು ಈ ಮಾತು ಗಳನ್ನು ಕೇಳಿ--ನಾವು ಸಹ ಕುರುಡರೋ ಎಂದು ಆತನನ್ನು ಕೇಳಿದರು.ಅದಕ್ಕೆ ಯೇಸು ಅವರಿಗೆ--ನೀವು ಕುರುಡರಾಗಿದ್ದರೆ ನಿಮ್ಮಲ್ಲಿ ಪಾಪವು ಇರುತ್ತಿರ ಲಿಲ್ಲ. ಆದರೆ--ನಾವು ನೋಡುತ್ತೇವೆಂದು ನೀವು ಹೇಳುವದರಿಂದ ನಿಮ್ಮ ಪಾಪವು ಉಳಿದದೆ ಅಂದನು. ಅದಕ್ಕೆ ಯೇಸು ಅವರಿಗೆ--ನೀವು ಕುರುಡರಾಗಿದ್ದರೆ ನಿಮ್ಮಲ್ಲಿ ಪಾಪವು ಇರುತ್ತಿರ ಲಿಲ್ಲ. ಆದರೆ--ನಾವು ನೋಡುತ್ತೇವೆಂದು ನೀವು ಹೇಳುವದರಿಂದ ನಿಮ್ಮ ಪಾಪವು ಉಳಿದದೆ ಅಂದನು.
- Mark 10:14–16 ಮಾರ್ಕನು 10:14–16ಆದರೆ ಯೇಸು ಅದನ್ನು ನೋಡಿದಾಗ ಬಹಳವಾಗಿ ಕೋಪಗೊಂಡು ಅವರಿಗೆ--ಚಿಕ್ಕಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ; ಅವುಗಳಿಗೆ ಅಡ್ಡಿಮಾಡ ಬೇಡಿರಿ; ಯಾಕಂದರೆ ದೇವರ ರಾಜ್ಯವು ಇಂಥವರದೇ ಅಂದನು. ನಾನು ನಿಮಗೆ ನಿಜವಾಗಿ ಹೇಳುವದೇ ನಂದರೆ--ಯಾವನಾದರೂ ಚಿಕ್ಕ ಮಗುವಿನಂತೆ ದೇವರ ರಾಜ್ಯವನ್ನು ಅಂಗೀಕರಿಸದಿದ್ದರೆ ಅವನು ಅದರೊಳಗೆ ಪ್ರವೇಶಿಸುವದಿಲ್ಲ. ಇದಲ್ಲದೆ ಆತನು ಆ ಮಕ್ಕಳನ್ನು ಎತ್ತಿಕೊಂಡು ತನ್ನ ಕೈಗಳನ್ನು ಅವುಗಳ ಮೇಲೆ ಇಟ್ಟು ಆಶೀರ್ವದಿಸಿದನು.
- Acts 17:24 ಅಪೊಸ್ತಲರ ಕೃತ್ಯಗಳು 17:24ಜಗತ್ತನ್ನೂ ಅದರಲ್ಲಿರುವ ಎಲ್ಲವುಗಳನ್ನೂ ಉಂಟುಮಾಡಿದ ದೇವರು ಭೂಮ್ಯಾಕಾಶಗಳ ಒಡೆಯ ನಾಗಿರುವದರಿಂದ ಕೈಯಿಂದ ಕಟ್ಟಿರುವ ಗುಡಿಗಳಲ್ಲಿ ವಾಸಮಾಡುವಾತನಲ್ಲ.
- 2 Corinthians 3:14 2 ಕೊರಿಂಥದವರಿಗೆ 3:14ಆದರೆ ಅವರ ಬುದ್ದಿಮಂದವಾಯಿತು, ಆ ಮುಸುಕು ಕ್ರಿಸ್ತನಲ್ಲಿ ತೆಗೆದು ಹಾಕಲ್ಪಟ್ಟಿರುವದರಿಂದ ಹಳೇ ಒಡಂಬಡಿಕೆಯು ಪಾರಾಯಣವಾಗುವಾಗೆಲ್ಲಾ ಈ ದಿನದ ವರೆಗೂ ಅವರಿಗೆ ಆ ಮುಸುಕು ತೆಗೆಯಲ್ಪಡದೆ ಉಳಿದಿದೆ.