Mark · chapter 10 · verse 14
Mark 10:14 in Kannada
ಆದರೆ ಯೇಸು ಅದನ್ನು ನೋಡಿದಾಗ ಬಹಳವಾಗಿ ಕೋಪಗೊಂಡು ಅವರಿಗೆ--ಚಿಕ್ಕಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ; ಅವುಗಳಿಗೆ ಅಡ್ಡಿಮಾಡ ಬೇಡಿರಿ; ಯಾಕಂದರೆ ದೇವರ ರಾಜ್ಯವು ಇಂಥವರದೇ ಅಂದನು.
Aadare yesu adannu nodidaaga bahalavaagi kopagondu avarige--chikkamakkalannu nanna hattirakke baragodisiri; avugalige addimaada bediri; yaakandare devara raajyavu inthavarade andanu.
Mark 10:14 in English
- King James Version (KJV)
- But when Jesus saw [it], he was much displeased, and said unto them, Suffer the little children to come unto me, and forbid them not: for of such is the kingdom of God.
- World English Bible (WEB)
- But when Jesus saw it, he was moved with indignation and said to them, “Allow the little children to come to me! Don’t forbid them, for God’s Kingdom belongs to such as these.
- American Standard Version (ASV)
- But when Jesus saw it, he was moved with indignation, and said unto them, Suffer the little children to come unto me; forbid them not: for to such belongeth the kingdom of God.
- Bible in Basic English (BBE)
- And when Jesus saw it, he was angry, and said to them, Let the little children come to me, and do not keep them away; for of such is the kingdom of God.
- Darby Translation (DBY)
- But Jesus seeing [it], was indignant, and said to them, Suffer the little children to come to me; forbid them not; for of such is the kingdom of God.
- Webster's Bible (WBS)
- But when Jesus saw [it] , he was much displeased, and said to them, Suffer the little children to come to me, and forbid them not: for of such is the kingdom of God.
- Young's Literal Translation (YLT)
- and Jesus having seen, was much displeased, and he said to them, 'Suffer the children to come unto me, and forbid them not, for of such is the reign of God;
Read in context
- 12ಇದಲ್ಲದೆ ಒಬ್ಬ ಸ್ತ್ರೀಯು ತನ್ನ ಗಂಡನನ್ನು ಬಿಟ್ಟು ಬೇರೊಬ್ಬನನ್ನು ಮದುವೆಯಾದರೆ ಅವಳು ವ್ಯಭಿಚಾರ ಮಾಡುವವಳಾಗಿದ್ದಾಳೆ ಅಂದನು.
- 13ಆಗ ಕೆಲವರು ಚಿಕ್ಕ ಮಕ್ಕಳನ್ನು ಆತನು ಮುಟ್ಟಬೇಕೆಂದು ಆತನ ಬಳಿಗೆ ಅವುಗಳನ್ನು ತಂದರು; ಆದರೆ ಆತನ ಶಿಷ್ಯರು ತಂದವರನ್ನು ಗದರಿಸಿದರು.
- 14ಆದರೆ ಯೇಸು ಅದನ್ನು ನೋಡಿದಾಗ ಬಹಳವಾಗಿ ಕೋಪಗೊಂಡು ಅವರಿಗೆ--ಚಿಕ್ಕಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ; ಅವುಗಳಿಗೆ ಅಡ್ಡಿಮಾಡ ಬೇಡಿರಿ; ಯಾಕಂದರೆ ದೇವರ ರಾಜ್ಯವು ಇಂಥವರದೇ ಅಂದನು.
- 15ನಾನು ನಿಮಗೆ ನಿಜವಾಗಿ ಹೇಳುವದೇ ನಂದರೆ--ಯಾವನಾದರೂ ಚಿಕ್ಕ ಮಗುವಿನಂತೆ ದೇವರ ರಾಜ್ಯವನ್ನು ಅಂಗೀಕರಿಸದಿದ್ದರೆ ಅವನು ಅದರೊಳಗೆ ಪ್ರವೇಶಿಸುವದಿಲ್ಲ.
- 16ಇದಲ್ಲದೆ ಆತನು ಆ ಮಕ್ಕಳನ್ನು ಎತ್ತಿಕೊಂಡು ತನ್ನ ಕೈಗಳನ್ನು ಅವುಗಳ ಮೇಲೆ ಇಟ್ಟು ಆಶೀರ್ವದಿಸಿದನು.
Cross references
- Matthew 19:14 ಮತ್ತಾಯನು 19:14ಆದರೆ ಯೇಸು--ಚಿಕ್ಕಮಕ್ಕಳನ್ನು ಬಿಡಿರಿ, ನನ್ನ ಬಳಿಗೆ ಬಾರ ದಂತೆ ಅವುಗಳಿಗೆ ಅಡ್ಡಿ ಮಾಡಬೇಡಿರಿ; ಯಾಕಂದರೆ ಪರಲೋಕರಾಜ್ಯವು ಇಂಥವರದೇ ಅಂದನು.
- Matthew 18:4 ಮತ್ತಾಯನು 18:4ಆದದರಿಂದ ಯಾವನು ಈ ಚಿಕ್ಕ ಮಗುವಿನಂತೆ ತನ್ನನ್ನು ತಾನು ತಗ್ಗಿಸಿಕೊಳ್ಳುವನೋ ಅವನೇ ಪರಲೋಕರಾಜ್ಯದಲ್ಲಿ ಅತಿ ದೊಡ್ಡವನಾಗಿರುವನು.
- Matthew 18:10 ಮತ್ತಾಯನು 18:10ಚಿಕ್ಕವರಲ್ಲಿ ಒಬ್ಬನನ್ನಾದರೂ ನೀವು ತಾತ್ಸಾರ ಮಾಡದಂತೆ ನೋಡಿಕೊಳ್ಳಿರಿ; ಯಾಕಂದರೆ ನಾನು ನಿಮಗೆ ಹೇಳುವದೇನಂದರೆ--ಪರಲೋಕದಲ್ಲಿ ಅವರ ದೂತರು ಪರಲೋಕದಲ್ಲಿರುವ ನನ್ನ ತಂದೆಯ ಮುಖವನ್ನು ಯಾವಾಗಲೂ ನೋಡುತ್ತಾರೆ.
- Psalm 131:1–2 ಕೀರ್ತನೆಗಳು 131:1–2ಕರ್ತನೇ, ನನ್ನ ಹೃದಯವು ಗರ್ವದ್ದಲ್ಲ; ನನ್ನ ಕಣ್ಣುಗಳು ಅಹಂಭಾವ ದವುಗಳೂ ಅಲ್ಲ; ದೊಡ್ಡ ವಿಷಯಗಳಲ್ಲಿಯೂ ನನಗೆ ನಿಲುಕಲಾರದವುಗಳಲ್ಲಿಯೂ ನಾನು ನಡೆದುಕೊಳ್ಳು ವದಿಲ್ಲ. ಮೊಲೆ ಬಿಡಿಸಿದ ಕೂಸು ತನ್ನ ತಾಯಿಯ ಬಳಿಯಲ್ಲಿ ಇರುವ ಪ್ರಕಾರ ನಿಶ್ಚಯವಾಗಿ ನನ್ನನ್ನು ಸಂತೈಸಿಕೊಂಡು ಮೌನವಾಗಿದ್ದೇನೆ; ನನ್ನ ಪ್ರಾಣವು ಮೊಲೆ ಬಿಡಿಸಿದ ಕೂಸಿನ ಹಾಗೆ ನನ್ನ ಬಳಿಯಲ್ಲಿ ಅದೆ.ಇಸ್ರಾಯೇಲು ಈಗಿನಿಂದ ಯುಗಯುಗಕ್ಕೂ ಕರ್ತನನ್ನು ಎದುರುನೋಡಲಿ.
- Luke 18:15–16 ಲೂಕನು 18:15–16ತರುವಾಯ ಚಿಕ್ಕಮಕ್ಕಳನ್ನು ಸಹ ಯೇಸು ಮುಟ್ಟುವಂತೆ ಜನರು ಅವುಗಳನ್ನು ಆತನ ಬಳಿಗೆ ತಂದಾಗ ಆತನ ಶಿಷ್ಯರು ಇದನ್ನು ನೋಡಿ ಅವರನು ಗದರಿಸಿದರು. ಆದರೆ ಯೇಸು ಅವರನ್ನು ತನ್ನ ಹತ್ತಿರಕ್ಕೆ ಕರೆದು--ಚಿಕ್ಕ ಮಕ್ಕಳನ್ನು ನನ್ನ ಹತ್ತಿರಕ್ಕೆ ಬರುವಂತೆ ಬಿಡಿರಿ; ಅವುಗಳಿಗೆ ಅಡ್ಡಿ ಮಾಡಬೇಡಿರಿ; ಯಾಕಂದರೆ ದೇವರ ರಾಜ್ಯವು ಅಂಥವರದೇ.
- 1 Peter 2:2 1 ಪೇತ್ರನು 2:2ಹೊಸದಾಗಿ ಹುಟ್ಟಿದ ಶಿಶುಗಳಂತಿರುವ ನೀವು ಬೆಳೆಯುವ ಹಾಗೆ ವಾಕ್ಯವೆಂಬ ಶುದ್ಧ ಹಾಲನ್ನು ಬಯಸಿರಿ.
- 2 Timothy 3:15 2 ತಿಮೊಥೆಯನಿಗೆ 3:15ಚಿಕ್ಕಂದಿನಿಂದಲೂ ನೀನು ಪರಿಶುದ ಬರಹಗಳನ್ನು ತಿಳಿದವನಾಗಿದ್ದೀಯಲ್ಲಾ; ಆ ಬರಹಗಳು ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆಯ ಮೂಲಕ ರಕ್ಷಣೆ ಹೊಂದಿಸುವ ಜ್ಞಾನವನ್ನು ಕೊಡುವದಕ್ಕೆ ಶಕ್ತವಾಗಿವೆ.
- Revelation 14:5 ಪ್ರಕಟನೆ 14:5ಇವರ ಬಾಯಲ್ಲಿ ವಂಚನೆ ಸಿಕ್ಕಲಿಲ್ಲ; ಯಾಕಂದರೆ ಇವರು ದೇವರ ಸಿಂಹಾಸನದ ಮುಂದೆ ನಿರ್ದೋಷಿಗಳಾಗಿದ್ದಾರೆ.
- 1 Corinthians 7:14 1 ಕೊರಿಂಥದವರಿಗೆ 7:14ಯಾಕಂದರೆ ನಂಬಿಕೆಯಿಲ್ಲದ ಗಂಡನು ತನ್ನ ಹೆಂಡತಿಯಲ್ಲಿ ಶುದ್ಧನಾಗಿದ್ದಾನೆ; ನಂಬಿಕೆಯಿಲ್ಲದ ಹೆಂಡತಿಯು ತನ್ನ ಗಂಡನಲ್ಲಿ ಶುದ್ಧಳಾಗಿದ್ದಾಳೆ. ಹಾಗಲ್ಲ ದಿದ್ದರೆ ನಿಮ್ಮ ಮಕ್ಕಳು ಅಪವಿತ್ರರಾಗುತ್ತಿದ್ದರು; ಈಗಲಾದರೋ ಅವರು ಪವಿತ್ರರಾಗಿದ್ದಾರೆ.
- Acts 2:39 ಅಪೊಸ್ತಲರ ಕೃತ್ಯಗಳು 2:39ಯಾಕಂದರೆ ಆ ವಾಗ್ದಾನವು ನಿಮಗೂ ನಿಮ್ಮ ಮಕ್ಕಳಿಗೂ ದೂರವಾಗಿರುವವರೆಲ್ಲರಿಗೂ ಅಂತೂ ನಮ್ಮ ದೇವರಾದ ಕರ್ತನು ಕರೆಯುವವರೆಲ್ಲರಿಗೂ ಮಾಡಿಯದೆ ಎಂದು ಹೇಳಿದನು.
- 1 Corinthians 14:20 1 ಕೊರಿಂಥದವರಿಗೆ 14:20ಸಹೋದರರೇ, ಬುದ್ಧಿಯ ವಿಷಯ ದಲ್ಲಿ ಬಾಲಕರಾಗಿರಬೇಡಿರಿ; ಕೆಟ್ಟತನದ ವಿಷಯದಲ್ಲಿ ಶಿಶುಗಳಾಗಿಯೇ ಇದ್ದು ಬುದ್ಧಿಯ ವಿಷಯದಲ್ಲಿ ಪ್ರಾಯಸ್ಥರಾಗಿರಬೇಕು.
- Numbers 14:31 ಅರಣ್ಯಕಾಂಡ 14:31ಆದರೆ ಸುಲಿಗೆಯಾಗುವರೆಂದು ನೀವು ಹೇಳಿದ ನಿಮ್ಮ ಮಕ್ಕಳನ್ನು ಅಲ್ಲಿಗೆ ತರುವೆನು; ನೀವು ಅಲಕ್ಷ್ಯ ಮಾಡಿದ ದೇಶವನ್ನು ಅವರು ಅನುಭವಿಸುವರು.