Matthew · chapter 12 · verse 43
Matthew 12:43 in Kannada
ಅಶುದ್ಧಾತ್ಮವು ಒಬ್ಬ ಮನುಷ್ಯನಿಂದ ಹೊರಗೆ ಹೋದ ಮೇಲೆ ನೀರಿಲ್ಲದ ಸ್ಥಳಗಳಲ್ಲಿ ವಿಶ್ರಾಂತಿಗಾಗಿ ತಿರುಗಾಡಿದರೂ ಅದನ್ನು ಕಂಡುಕೊಳ್ಳಲಿಲ್ಲ.
Ashuddhaatmavu obba manushyaninda horage hoda mele neerillada sthalagalalli vishraantigaagi tirugaadidaroo adannu kandukollalilla.
Matthew 12:43 in English
- King James Version (KJV)
- When the unclean spirit is gone out of a man, he walketh through dry places, seeking rest, and findeth none.
- World English Bible (WEB)
- “When an unclean spirit has gone out of a man, he passes through waterless places seeking rest, and doesn’t find it.
- American Standard Version (ASV)
- But the unclean spirit, when he is gone out of the man, passeth through waterless places, seeking rest, and findeth it not.
- Bible in Basic English (BBE)
- But the unclean spirit, when he is gone out of a man, goes through dry places looking for rest, and getting it not.
- Darby Translation (DBY)
- But when the unclean spirit has gone out of the man, he goes through dry places, seeking rest, and does not find [it].
- Webster's Bible (WBS)
- When the unclean spirit is gone out of a man, he walketh through dry places, seeking rest, and he findeth none.
- Young's Literal Translation (YLT)
- 'And, when the unclean spirit may go forth from the man, it doth walk through dry places seeking rest, and doth not find;
Read in context
- 41ನ್ಯಾಯವಿಚಾರಣೆಯಲ್ಲಿ ನಿನೆವೆಯ ಜನರು ಈ ಸಂತತಿಯೊಂದಿಗೆ ಎದ್ದು ಅವರನ್ನು ಖಂಡಿಸು ವರು; ಯಾಕಂದರೆ ಯೋನನು ಸಾರಿದಾಗ ಅವರು ಮಾನಸಾಂತರಪಟ್ಟರು; ಮತ್ತು ಇಗೋ, ಇಲ್ಲಿ ಯೋನ ನಿಗಿಂತಲೂ ದೊಡ್ಡವನಿದ್ದಾನೆ.
- 42ನ್ಯಾಯವಿಚಾರಣೆ ಯಲ್ಲಿ ದಕ್ಷಿಣದ ರಾಣಿಯು ಈ ಸಂತತಿಯವರೊಂದಿಗೆ ಎದ್ದು ಇವರನ್ನು ಖಂಡಿಸುವಳು; ಯಾಕಂದರೆ ಆಕೆಯು ಸೊಲೊಮೋನನ ಜ್ಞಾನವನ್ನು ಕೇಳುವದಕ್ಕಾಗಿ ಭೂಮಿ ಯ ಕಟ್ಟಕಡೆಯಿಂದ ಬಂದಳು; ಇಗೋ, ಇಲ್ಲಿ ಸೊಲೊ ಮೋನನಿಗಿಂತಲೂ ದೊಡ್ಡವನಿದ್ದಾನೆ.
- 43ಅಶುದ್ಧಾತ್ಮವು ಒಬ್ಬ ಮನುಷ್ಯನಿಂದ ಹೊರಗೆ ಹೋದ ಮೇಲೆ ನೀರಿಲ್ಲದ ಸ್ಥಳಗಳಲ್ಲಿ ವಿಶ್ರಾಂತಿಗಾಗಿ ತಿರುಗಾಡಿದರೂ ಅದನ್ನು ಕಂಡುಕೊಳ್ಳಲಿಲ್ಲ.
- 44ಆಗ ಅದು--ನಾನು ಹೊರಟುಬಂದ ನನ್ನ ಮನೆಗೆ ಹಿಂತಿರುಗುವೆನು ಎಂದು ಅಂದುಕೊಂಡು ಬಂದು ಅದು ಬರಿದಾಗಿಯೂ ಗುಡಿಸಿ ಅಲಂಕರಿಸಲ್ಪಟ್ಟದ್ದಾ ಗಿಯೂ ಇರುವದನ್ನು ಕಂಡಿತು.
- 45ತರುವಾಯ ಅದು ಹೋಗಿ ತನಗಿಂತ ಕೆಟ್ಟವುಗಳಾಗಿರುವ ಬೇರೆ ಏಳು ಆತ್ಮಗಳನ್ನು ಕರಕೊಂಡು ಅವು ಅದರೊಳಗೆ ಪ್ರವೇಶಿಸಿ ವಾಸಮಾಡುತ್ತವೆ; ಹೀಗೆ ಆ ಮನುಷ್ಯನ ಕಡೇ ಸ್ಥಿತಿಯು ಮೊದಲಿಗಿಂತಲೂ ಕೆಟ್ಟದ್ದಾಗಿರುವದು. ಅದರಂತೆಯೇ ಈ ಕೆಟ್ಟ ಸಂತತಿಗೂ ಆಗುವದು ಎಂದು ಹೇಳಿದನು.
Cross references
- Luke 11:24–26 ಲೂಕನು 11:24–26ಅಶುದ್ಧಾತ್ಮವು ಒಬ್ಬ ಮನುಷ್ಯನಿಂದ ಹೊರಗೆ ಹೋದಮೇಲೆ ನೀರಿಲ್ಲದ ಸ್ಥಳಗಳಲ್ಲಿ ತಿರು ಗುತ್ತಾ ವಿಶ್ರಾಂತಿಯನ್ನು ಹುಡುಕಿ ಏನೂ ಕಾಣದೆ ಅದು--ನಾನು ಹೊರಟು ಬಂದ ನನ್ನ ಮನೆಗೆ ಹಿಂದಿ ರುಗುವೆನು ಎಂದು ಅಂದುಕೊಳ್ಳುತ್ತದೆ. ಅದು ಬಂದು ಆ ಮನೆಯು ಗುಡಿಸಿ ಅಲಂಕರಿಸಿದ್ದನ್ನು ಕಂಡಿತು. ಆಗ ಅದು ಹೋಗಿ ತನಗಿಂತಲೂ ಕೆಟ್ಟವು ಗಳಾದ ಬೇರೆ ಏಳು ದುರಾತ್ಮಗಳನ್ನು ತನ್ನೊಂದಿಗೆ ಕರಕೊಂಡು ಒಳಗೆ ಸೇರಿ ಅಲ್ಲಿ ವಾಸಮಾಡುವವು; ಮತ್ತು ಆ ಮನುಷ್ಯನ ಕಡೇ ಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗಿರುವದು ಅಂದನು.
- Luke 8:28–32 ಲೂಕನು 8:28–32ಅವನು ಯೇಸುವನ್ನು ನೋಡಿದಾಗ ಆತನ ಮುಂದೆ ಬಿದ್ದು--ಯೇಸುವೇ, ಮಹೋನ್ನತ ನಾದ ದೇವರಕುಮಾರನೇ, ನನ್ನ ಗೊಡವೆ ನಿನಗೆ ಯಾಕೆ? ನನ್ನನ್ನು ಸಂಕಟಪಡಿಸಬೇಡವೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ ಎಂದು ಗಟ್ಟಿಯಾದ ಸ್ವರದಿಂದ ಕೂಗಿ ಹೇಳಿದನು. (ಯಾಕಂದರೆ ಆ ಅಶುದ್ಧಾತ್ಮವು ಅವನಿಂದ ಹೊರಗೆ ಬರಬೇಕೆಂದು ಆತನು ಅಪ್ಪಣೆ ಕೊಟ್ಟಿದ್ದನು. ಅದು ಬಹಳ ಸಾರಿ ಅವನನ್ನು ಹಿಡಿಯುತ್ತಿ ದ್ದದರಿಂದ ಅವನು ಸರಪಣಿಗಳಿಂದಲೂ ಬೇಡಿಗಳಿಂ ದಲೂ ಕಟ್ಟಲ್ಪಡುತ್ತಿದ್ದರೂ ಅವನು ಆ ಬಂಧನಗಳನ್ನು ಮುರಿದುಬಿಡುತ್ತಿದ್ದನು ಮತ್ತು ದೆವ್ವವು ಅವನನ್ನು ಅ ಯೇಸು ಅವನಿಗೆ--ನಿನ್ನ ಹೆಸರು ಏನು ಎಂದು ಕೇಳಿದನು. ಅದಕ್ಕವನು--ಲೀಜೆನ್ (ದಂಡು) ಅಂದನು. ಯಾಕಂ ದರೆ ಬಹಳ ದೆವ್ವಗಳು ಅವನಲ್ಲಿ ಸೇರಿಕೊಂಡಿದ್ದವು. ಅವು ತಮ್ಮನ್ನು ಹೊರಗೆ ಅಗಾಧಕ್ಕೆ ಹೋಗುವಂತೆ ಅಪ್ಪಣೆ ಕೊಡಬಾರದೆಂದು ಆತನನ್ನು ಬೇಡಿಕೊಂಡವು. ಆಗ ಅಲ್ಲಿ ಬೆಟ್ಟದ ಮೇಲೆ ಬಹಳ ಹಂದಿಗಳ ಹಿಂಡು ಮೇಯುತ್ತಿದ್ದದರಿಂದ ಅವುಗಳೊಳಗೆ ತಾವು ಸೇರಿಕೊಳ್ಳಲು ಅಪ್ಪಣೆ ಕೊಡಬೇಕೆಂದು ಆತನನ್ನು ಬೇಡಿಕೊಂಡವು. ಆತನು ಅವುಗಳಿಗೆ ಅಪ್ಪಣೆಕೊಟ್ಟನು.
- Matthew 8:29 ಮತ್ತಾಯನು 8:29ಆಗ ಇಗೋ, ಅವರು--ಯೇಸುವೇ, ದೇವ ಕುಮಾರನೇ, ನಿನ್ನೊಂದಿಗೆ ನಮ್ಮ ಗೊಡವೆ ಏನು? ಸಮಯಕ್ಕೆ ಮುಂಚೆ ನಮ್ಮನ್ನು ಸಂಕಟಪಡಿಸು ವದಕ್ಕಾಗಿ ಇಲ್ಲಿಗೆ ಬಂದೆಯಾ ಎಂದು ಕೂಗಿ ಹೇಳಿದರು.
- Mark 5:7–13 ಮಾರ್ಕನು 5:7–13ಮಹೋನ್ನತನಾದ ದೇವಕುಮಾರನಾಗಿ ರುವ ಯೇಸುವೇ, ನನ್ನ ಗೊಡವೆ ನಿನಗೆ ಯಾಕೆ? ನನ್ನನ್ನು ಯಾತನೆಪಡಿಸಬೇಡವೆಂದು ನಾನು ನಿನಗೆ ದೇವರಾಣೆ ಇಡುತ್ತೇನೆ ಎಂದು ಮಹಾ ಶಬ್ದದಿಂದ ಕೂಗಿ ಹೇಳಿದನು. ಯಾಕಂದರೆ ಆತನು ಅವ ನಿಗೆ--ಅಶುದ್ಧಾತ್ಮವೇ, ಆ ಮನುಷ್ಯನೊಳಗಿನಿಂದ ಹೊರಗೆ ಬಾ ಎಂದು ಹೇಳಿದ್ದನು. ಆತನು ಅವನಿಗೆ--ನಿನ್ನ ಹೇಸರೇನು ಎಂದು ಕೇಳಲು ಅವನು ಪ್ರತ್ಯುತ್ತರವಾಗಿ--ನನ್ನ ಹೆಸರು ಲೀಜೆನ್ (ದಂಡು); ಯಾಕಂದರೆ ನಾವು ಅನೇಕರಿದ್ದೇವೆ ಅಂದನು. ತಮ್ಮನ್ನು ಆ ದೇಶದೊಳಗಿಂದ ಹೊರಗೆ ಕಳುಹಿಸದಂತೆ ಅವನು ಆತನನ್ನು ಬಹಳವಾಗಿ ಬೇಡಿ ಕೊಂಡನು. ಆಗ ಅಲ್ಲಿ ಬೆಟ್ಟಗಳ ಸವಿಾಪದಲ್ಲಿ ಹಂದಿಗಳ ದೊಡ್ಡ ಗುಂಪು ಮೇಯುತ್ತಿತ್ತು. ಎಲ್ಲಾ ದೆವ್ವಗಳು ಆತನಿಗೆ--ನಾವು ಆ ಹಂದಿಗಳೊಳಗೆ ಸೇರಿಕೊಳ್ಳುವಂತೆ ನಮ್ಮನ್ನು ಕಳುಹಿಸು ಎಂದು ಬೇಡಿಕೊಂಡವು. ಕೂಡಲೆ ಯೇಸು ಅವುಗಳಿಗೆ ಅಪ್ಪಣೆಕೊಟ್ಟನು. ಆಗ ಅಶುದ್ಧಾತ್ಮಗಳು ಹೊರಗೆ ಹೋಗಿ ಆ ಹಂದಿಗಳೊಳಗೆ ಸೇರಿಕೊಂಡವು; ಮತ್ತು ಆ ಗುಂಪು ಉಗ್ರತೆಯಿಂದ ಓಡಿ ಇಳಿಜಾರಿನಿಂದ ಸಮುದ್ರದೊಳಗೆ ಬಿದ್ದು ಉಸುರುಗಟ್ಟಿ ಸತ್ತವು. (ಅವು ಸುಮಾರು ಎರಡು ಸಾವಿರ ಇದ್ದವು.)
- Amos 8:11–13 ಆಮೋಸ 8:11–13ಇಗೋ, ದಿನಗಳು ಬರುವವು, ಆಗ ನಾನು ದೇಶದಲ್ಲಿ ಕ್ಷಾಮವನ್ನು ಕಳುಹಿಸುವೆನು. ಅದು ರೊಟ್ಟಿಯ ಕ್ಷಾಮವಲ್ಲ, ನೀರಿನ ದಾಹದ ಬರವಲ್ಲ; ಕರ್ತನ ವಾಕ್ಯಗಳನ್ನು ಕೇಳಬೇಕೆಂಬ ಕ್ಷಾಮ ವನ್ನೇ ಎಂಬದಾಗಿ ದೇವರಾದ ಕರ್ತನು ಹೇಳುತ್ತಾನೆ. ಆಗ ಅವರು ಸಮುದ್ರದಿಂದ ಸಮುದ್ರಕ್ಕೂ ಉತ್ತರ ದಿಂದ ಪೂರ್ವಕ್ಕೂ ಅಲೆದು ಕರ್ತನ ವಾಕ್ಯವನ್ನು ಹುಡುಕುವದಕ್ಕೆ ಅತ್ತಿತ್ತ ಓಡಾಡಿ ಅದನ್ನು ಕಾಣದೆ ಹೋಗುವರು. ಆ ದಿನದಲ್ಲಿ ಸೌಂದರ್ಯವತಿಯ ರಾದ ಕನ್ಯೆಯರು ಮತ್ತು ಯೌವನಸ್ಥರು ಸಹ ದಾಹ ದಿಂದ ಕುಗ್ಗಿ ಹೋಗುವರು.ಅವರು ಸಮಾರ್ಯದ ಪಾಪದ ಮೇಲೆ ಆಣೆಯಿಟ್ಟುಕೊಂಡು--ಓ ದಾನೇ, ನಿನ್ನ ದೇವರ ಜೀವದಾಣೆ ಎಂದೂ ಬೇರ್ಷೆಬ ಮಾರ್ಗದ ಜೀವದಾಣೆ ಎಂದೂ ಹೇಳುವವರು ಬಿದ್ದು ಮತ್ತೆ ಮೇಲೆ ಏಳಲಾರರು.
- 1 Peter 5:8 1 ಪೇತ್ರನು 5:8ಸ್ವಸ್ಥಚಿತ್ತರಾಗಿರ್ರಿ. ಎಚ್ಚರವಾಗಿರ್ರಿ; ನಿಮ್ಮ ವಿರೋಧಿ ಯಾಗಿರುವ ಸೈತಾನನು ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ.
- Job 2:2 ಯೋಬನು 2:2ಆಗ ಕರ್ತನು ಸೈತಾನನಿಗೆ--ನೀನು ಎಲ್ಲಿಂದ ಬಂದೆ ಅಂದನು. ಸೈತಾನನು ಪ್ರತ್ಯುತ್ತರವಾಗಿ ಕರ್ತನಿಗೆಭೂಮಿಯಲ್ಲಿ ಅತ್ತಿಂದ ಇತ್ತ ಇತ್ತಿಂದ ಅತ್ತ, ಮೇಲೆಯೂ ಕೆಳಗೂ ಹೋಗುತ್ತಾ ಅದರಲ್ಲಿ ನಡೆ ದಾಡಿ ಬಂದೆನು ಅಂದನು.
- Isaiah 35:6–7 ಯೆಶಾಯ 35:6–7ಕುಂಟನು ಜಿಂಕೆಯಂತೆ ಹಾರುವನು ಮೂಕನ ನಾಲಿಗೆ ಹಾಡು ವದು; ಅರಣ್ಯದಲ್ಲಿ ನೀರೂ ಮರುಭೂಮಿಯಲ್ಲಿ ಒರ ತೆಗಳೂ ಒಡೆಯುವವು. ಒಣನೆಲವು ಕೊಳವಾಗು ವದು; ಬೆಂಗಾಡು ಪ್ರದೇಶವು ನೀರಿನ ಬುಗ್ಗೆಯಾಗು ವದು. ಸರ್ಪಗಳು ವಾಸಿಸುವ ಮಲಗುವ ಪ್ರತಿ ಯೊಂದು ಸ್ಥಳವು ಹುಲ್ಲು, ಜೊಂಡುಗಳಿಂದ ತುಂಬಿ ರುವದು.
- Ezekiel 47:8–12 ಯೆಹೆಜ್ಕೇಲನು 47:8–12ಆಗ ಅವನು ಹೇಳಿದ್ದೇನಂದರೆ, ಈ ನೀರು ಪೂರ್ವ ಸೀಮೆಗೆ ಹೋಗಿ ಒಣಭೂಮಿಗೆ ಇಳಿದು ಸಮುದ್ರ ಸೇರುವವು; ಸಮುದ್ರ ಸೇರಿದ ಮೇಲೆ ಆ ನೀರು ಸಿಹಿಯಾಗುವದು. ಇದಲ್ಲದೆ ಆಗುವದೇನಂದರೆ, ಈ ದಿನ ಬರುವ ಎಲ್ಲಾ ಸ್ಥಳಗಳಲ್ಲಿ ಸಂಚರಿಸುವಂತ ಸಮಸ್ತ ಜೀವಿಗಳು ಬದುಕುವವು ಮತ್ತು ವಿಾನುಗಳು ಬಹು ದೊಡ್ಡ ಸಮೂಹವಾಗುವವು. ಈ ನೀರು ಅಲ್ಲಿಗೆ ಬರುವಾಗ ಅವು ಸ್ವಸ್ಥವಾಗುವವು; ಈ ನದಿಗಳು ಎಲ್ಲಿಗೆ ಬರುತ್ತವೋ ಅಲ್ಲಿ ಎಲ್ಲಾ ಬದುಕುವವು. ಏನ್ಗೆದಿ ಮೊದಲುಗೊಂಡು ಏನ್ಎಗ್ಲಯಿಮಿನ ವರೆಗೂ ವಿಾನುಗಾರರು ಅದರ ಬಳಿಯಲ್ಲಿ ನಿಲ್ಲುವರು. ಅಲ್ಲಿ ಬಲೆಹಾಸುವ ಸ್ಥಳಗಳಿರುವವು. ಅದರ ವಿಾನು ಗಳು ಮಹಾಸಮುದ್ರದ ವಿಾನುಗಳಾಗಿ ಜಾತ್ಯಾನುಸಾರ ವಾಗಿ ಬಹಳವಾಗಿರುವವು, ಆದರೆ ಅದರ ಕೆಸರಾದ ಸ್ಥಳಗಳು, ಕೊಳಚೆಗಳು, ಸ್ವಸ್ಥವಾಗುವದಿಲ್ಲ, ಅವು ಉಪ್ಪಿಗೆ ಒಪ್ಪಿಸಲ್ಪಡುವವು. ನದಿಯ ಬಳಿ ಅದರ ತೀರದಲ್ಲಿ ಆ ಕಡೆಯೂ ಈ ಕಡೆಯೂ ಆಹಾರಕ್ಕಾಗಿ ಎಲ್ಲಾ ಮರಗಳು ಬೆಳೆಯುವವು, ಅವುಗಳ ಎಲೆಗಳು ಬಾಡುವದಿಲ್ಲ ಹಣ್ಣು ಮುಗಿದು ಹೋಗುವದಿಲ್ಲ. ಅವು ತಿಂಗಳುಗಳ ಪ್ರಕಾರ ಹೊಸ ಫಲಗಳನ್ನು ಫಲಿಸು ವವು; ಅವುಗಳ ನೀರು ಪರಿಶುದ್ಧ ಸ್ಥಳದಿಂದ ಹೊರಟು ಬಂದದ್ದು, ಅವುಗಳ ಹಣ್ಣುಗಳು ಆಹಾರಕ್ಕೂ ಎಲೆಗಳು ಔಷಧಕ್ಕೂ ಆಗುವವು.
- Isaiah 41:18 ಯೆಶಾಯ 41:18ಎತ್ತರವಾದ ಸ್ಥಳಗಳಲ್ಲಿ ನದಿಗಳನ್ನು, ತಗ್ಗುಗಳ ಮಧ್ಯದಲ್ಲಿ ಬುಗ್ಗೆ ಗಳನ್ನು ಹೊರಡಿಸಿ ಅರಣ್ಯವನ್ನು ನೀರಿನ ಕೆರೆಯ ನ್ನಾಗಿಯೂ ಒಣನೆಲವನ್ನು ನೀರಿನ ಒರತೆಗಳನ್ನಾ ಗಿಯೂ ಮಾಡುವೆನು.
- Job 1:7 ಯೋಬನು 1:7ಕರ್ತನು ಸೈತಾನನಿಗೆ--ನೀನು ಎಲ್ಲಿಂದ ಬಂದಿ ಅಂದನು. ಸೈತಾನನು ಕರ್ತನಿಗೆ ಪ್ರತ್ಯುತ್ತರವಾಗಿ--ಭೂಮಿಯಲ್ಲಿ ಅತ್ತಿಂದ ಇತ್ತ ಇತ್ತಿಂದ ಅತ್ತ ತಿರುಗಾಡಿ ಮೇಲೆಯೂ ಕೆಳಗೂ ಹೋಗುತ್ತಾ ಅದರಲ್ಲಿ ನಡೆದಾಡಿ ಬಂದೆನು ಅಂದನು.
- Psalm 63:1 ಕೀರ್ತನೆಗಳು 63:1ಓ ದೇವರೇ, ನೀನೇ ನನ್ನ ದೇವರು ಹೊತ್ತಾರೆ ನಿನ್ನನ್ನು ಹುಡುಕುತ್ತೇನೆ; ನೀರಿಲ್ಲದೆ ಒಣಗಿದ ಭೂಮಿಯಲ್ಲಿದ್ದವನು ನೀರಿ ಗಾಗಿಯೋ ಎಂಬಂತೆ ನನ್ನ ಆತ್ಮವು ನಿನಗಾಗಿ ಆತುರ ಗೊಳ್ಳುತ್ತದೆ; ಶರೀರವು ಕಂದಿಹೋಗುತ್ತದೆ.