Matthew · chapter 12 · verse 42
Matthew 12:42 in Kannada
ನ್ಯಾಯವಿಚಾರಣೆ ಯಲ್ಲಿ ದಕ್ಷಿಣದ ರಾಣಿಯು ಈ ಸಂತತಿಯವರೊಂದಿಗೆ ಎದ್ದು ಇವರನ್ನು ಖಂಡಿಸುವಳು; ಯಾಕಂದರೆ ಆಕೆಯು ಸೊಲೊಮೋನನ ಜ್ಞಾನವನ್ನು ಕೇಳುವದಕ್ಕಾಗಿ ಭೂಮಿ ಯ ಕಟ್ಟಕಡೆಯಿಂದ ಬಂದಳು; ಇಗೋ, ಇಲ್ಲಿ ಸೊಲೊ ಮೋನನಿಗಿಂತಲೂ ದೊಡ್ಡವನಿದ್ದಾನೆ.
Nyaayavichaarane yalli dakshinada raaniyu ee santatiyavarondige eddu ivarannu khandisuvalu; yaakandare aakeyu solomonana jnyaanavannu keluvadakkaagi bhoomi ya kattakadeyinda bandalu; igo, illi solo monanigintaloo doddavaniddaane.
Matthew 12:42 in English
- King James Version (KJV)
- The queen of the south shall rise up in the judgment with this generation, and shall condemn it: for she came from the uttermost parts of the earth to hear the wisdom of Solomon; and, behold, a greater than Solomon [is] here.
- World English Bible (WEB)
- The Queen of the South will rise up in the judgment with this generation and will condemn it, for she came from the ends of the earth to hear the wisdom of Solomon; and behold, someone greater than Solomon is here.
- American Standard Version (ASV)
- The queen of the south shall rise up in the judgment with this generation, and shall condemn it: for she came from the ends of the earth to hear the wisdom of Solomon; and behold, a greater than Solomon is here.
- Bible in Basic English (BBE)
- The queen of the South will come up in the day of judging and give her decision against this generation: for she came from the ends of the earth to give ear to the wisdom of Solomon; and now a greater than Solomon is here.
- Darby Translation (DBY)
- A queen of [the] south shall rise up in the judgment with this generation, and shall condemn it; for she came from the ends of the earth to hear the wisdom of Solomon; and behold, more than Solomon [is] here.
- Webster's Bible (WBS)
- The queen of the south shall rise up in the judgment with this generation, and shall condemn it: for she came from the uttermost parts of the earth to hear the wisdom of Solomon; and behold, a greater than Solomon [is] here.
- Young's Literal Translation (YLT)
- 'A queen of the south shall rise up in the judgment with this generation, and shall condemn it, for she came from the ends of the earth to hear the wisdom of Solomon, and lo, a greater than Solomon here!
Read in context
- 40ಯಾಕಂದರೆ ಯೋನನು ಮೂರು ಹಗಲು ಮತ್ತು ಮೂರು ರಾತ್ರಿ ಮಾನಿನ ಹೊಟ್ಟೆಯಲ್ಲಿ ಇದ್ದ ಹಾಗೆಯೇ ಮನುಷ್ಯಕುಮಾರನು ಮೂರು ಹಗಲು ಮತ್ತು ಮೂರು ರಾತ್ರಿ ಭೂಗರ್ಭ ದಲ್ಲಿರುವನು.
- 41ನ್ಯಾಯವಿಚಾರಣೆಯಲ್ಲಿ ನಿನೆವೆಯ ಜನರು ಈ ಸಂತತಿಯೊಂದಿಗೆ ಎದ್ದು ಅವರನ್ನು ಖಂಡಿಸು ವರು; ಯಾಕಂದರೆ ಯೋನನು ಸಾರಿದಾಗ ಅವರು ಮಾನಸಾಂತರಪಟ್ಟರು; ಮತ್ತು ಇಗೋ, ಇಲ್ಲಿ ಯೋನ ನಿಗಿಂತಲೂ ದೊಡ್ಡವನಿದ್ದಾನೆ.
- 42ನ್ಯಾಯವಿಚಾರಣೆ ಯಲ್ಲಿ ದಕ್ಷಿಣದ ರಾಣಿಯು ಈ ಸಂತತಿಯವರೊಂದಿಗೆ ಎದ್ದು ಇವರನ್ನು ಖಂಡಿಸುವಳು; ಯಾಕಂದರೆ ಆಕೆಯು ಸೊಲೊಮೋನನ ಜ್ಞಾನವನ್ನು ಕೇಳುವದಕ್ಕಾಗಿ ಭೂಮಿ ಯ ಕಟ್ಟಕಡೆಯಿಂದ ಬಂದಳು; ಇಗೋ, ಇಲ್ಲಿ ಸೊಲೊ ಮೋನನಿಗಿಂತಲೂ ದೊಡ್ಡವನಿದ್ದಾನೆ.
- 43ಅಶುದ್ಧಾತ್ಮವು ಒಬ್ಬ ಮನುಷ್ಯನಿಂದ ಹೊರಗೆ ಹೋದ ಮೇಲೆ ನೀರಿಲ್ಲದ ಸ್ಥಳಗಳಲ್ಲಿ ವಿಶ್ರಾಂತಿಗಾಗಿ ತಿರುಗಾಡಿದರೂ ಅದನ್ನು ಕಂಡುಕೊಳ್ಳಲಿಲ್ಲ.
- 44ಆಗ ಅದು--ನಾನು ಹೊರಟುಬಂದ ನನ್ನ ಮನೆಗೆ ಹಿಂತಿರುಗುವೆನು ಎಂದು ಅಂದುಕೊಂಡು ಬಂದು ಅದು ಬರಿದಾಗಿಯೂ ಗುಡಿಸಿ ಅಲಂಕರಿಸಲ್ಪಟ್ಟದ್ದಾ ಗಿಯೂ ಇರುವದನ್ನು ಕಂಡಿತು.
Cross references
- 1 Kings 10:1–13 1 ಅರಸುಗಳು 10:1–13ಶೆಬದ ರಾಣಿಯು ಕರ್ತನ ನಾಮವನ್ನು ಕುರಿತೂ ಸೊಲೊಮೋನನ ಕೀರ್ತಿ ಯನ್ನೂ ಕೇಳಿದಾಗ ಒಗಟುಗಳಿಂದ ಅವನನ್ನು ಪರೀಕ್ಷಿ ಸಲು ಬಂದಳು. ಅವಳು ಮಹಾ ಗುಂಪಿನ ಸಂಗಡ ಸುಗಂಧದ್ರವ್ಯಗಳನ್ನೂ ಬಹು ಹೆಚ್ಚಾದ ಚಿನ್ನವನ್ನೂ ಅಮೂಲ್ಯವಾದ ಕಲ್ಲುಗಳನ್ನೂ ಹೊರುವ ಒಂಟೆಗಳ ಸಂಗಡ ಬಂದಳು. ಅವಳು ಸೊಲೊಮೋನನ ಬಳಿಗೆ ಬಂದ ಮೇಲೆ ತನ್ನ ಹೃದಯದಲ್ಲಿದ್ದ ಎಲ್ಲವನ್ನು ಕುರಿತು ಅವನ ಸಂಗಡ ಮಾತನಾಡಿದಳು. ಆಗ ಸೊಲೊ ಮೋನನು ಅವಳ ಪ್ರಶ್ನೆಗಳಿಗೆಲ್ಲಾ ಉತ್ತರಿಸಿದನು. ಅವಳಿಗೆ ತಿಳಿಸದಂಥ ಅರಸನಿಗೆ ಮರೆಯಾಗಿದ್ದಂಥದ್ದು ಒಂದೂ ಇರಲಿಲ್ಲ. ಶೆಬದ ರಾಣಿಯು ಸೊಲೊ ಮೋನನ ಸಮಸ್ತ ಜ್ಞಾನವನ್ನೂ ಅವನು ಕಟ್ಟಿಸಿದ ಮಂದಿರವನ್ನೂ ಅವನ ಮೇಜಿನ ಭೋಜನವನ್ನೂ ದಾಸರ ಕೂತಿರುವಿಕೆಯ ರೀತಿಯನ್ನೂ ಸೇವಕರು ನಿಂತಿರುವದನ್ನೂ ಅವರ ವಸ್ತ್ರಗಳನ್ನೂ ಅವನ ಪಾನ ದಾಯಕರನ್ನೂ ಅವನು ಕರ್ತನ ಮಂದಿರಕ್ಕೆ ಹೋಗುವ ಮಾರ್ಗವನ್ನೂ ನೋಡಿದಾಗ ಸ್ತಬ್ಧಳಾದಳು; ಅವಳು ಅರಸನಿಗೆ-- ನಾನು ನನ್ನ ದೇಶದಲ್ಲಿ ನಿನ್ನ ಕ್ರಿಯೆ ಗಳನ್ನು ಕುರಿತೂ ನಿನ್ನ ಜ್ಞಾನವನ್ನು ಕುರಿತೂ ಕೇಳಿದ ಮಾತು ಸತ್ಯವು. ಆದರೆ ನಾನು ಬಂದು ನನ್ನ ಕಣ್ಣು ಗಳಿಂದ ನೋಡುವವರೆಗೂ ಆ ಮಾತುಗಳನ್ನು ನಂಬದೆ ಹೋದೆನು. ಇಗೋ, ಇದರಲ್ಲಿ ಅರ್ಧವೂ ನನಗೆ ಹೇಳಲ್ಪಟ್ಟಿದ್ದಿಲ್ಲ; ನಿನ್ನ ಜ್ಞಾನವೂ ಸಂಪತ್ತೂ ನಾನು ಕೇಳಿದ ಕೀರ್ತಿಗಿಂತ ಅಧಿಕವಾಗಿರುವದು. ನಿನ್ನ ಮನುಷ್ಯರು ಭಾಗ್ಯವಂತರು; ನಿನ್ನ ಮುಂದೆ ಯಾವಾ ಗಲೂ ನಿಂತು ನಿನ್ನ ಜ್ಞಾನವನ್ನು ಕೇಳುವ ಈ ನಿನ್ನ ಸೇವಕರು ಭಾಗ್ಯವಂತರು. ನಿನ್ನನ್ನು ಇಸ್ರಾಯೇಲಿನ ಸಿಂಹಾಸನದ ಮೇಲೆ ಕೂಡ್ರಿಸುವ ಹಾಗೆ ನಿನ್ನಲ್ಲಿ ಇಷ್ಟಪಟ್ಟ ನಿನ್ನ ದೇವರಾದ ಕರ್ತನು ಸ್ತುತಿಸಲ್ಪಡಲಿ. ಕರ್ತನು ಯುಗಯುಗಕ್ಕೂ ಇಸ್ರಾಯೇಲನ್ನು ಪ್ರೀತಿ ಮಾಡಿದ್ದರಿಂದ ನ್ಯಾಯವನ್ನೂ ನೀತಿಯನ್ನೂ ನಡಿಸಲು ಆತನು ನಿನ್ನನ್ನು ಅರಸನಾಗ ಮಾಡಿದನು ಅಂದಳು. ಅವಳು ಅರಸನಿಗೆ ನೂರ ಇಪ್ಪತ್ತು ತಲಾಂತು ಚಿನ್ನವನ್ನೂ ಬಹುಸಮೃದ್ಧಿಯಾದ ಸುಗಂಧದ್ರವ್ಯಗ ಳನ್ನೂ ಅಮೂಲ್ಯವಾದ ಕಲ್ಲುಗಳನ್ನೂ ಕೊಟ್ಟಳು. ಶೆಬದ ರಾಣಿಯು ಅರಸನಾದ ಸೊಲೊಮೋನನಿಗೆ ಕೊಟ್ಟ ಅಪರಿಮಿತವಾದ ಸುಗಂಧಗಳ ಹಾಗೆ ಇನ್ನೆಂದೂ ಬಂದದ್ದಿಲ್ಲ. ಇದಲ್ಲದೆ ಹೀರಾಮನ ಹಡಗುಗಳು ಓಫಿರಿನಿಂದ ಬಂಗಾರವನ್ನೂ ಅನೇಕ ಅಲ್ಮುಗ್ ಮರಗಳನ್ನೂ ಅಮೂಲ್ಯವಾದ ಕಲ್ಲುಗಳನ್ನೂ ತಂದವು. ಅರಸನು ಅಲ್ಮುಗ್ ಮರಗಳಿಂದ ಕರ್ತನ ಮಂದಿರಕ್ಕೋಸ್ಕರವೂ ಅರಸನ ಮನೆಗೋಸ್ಕರವೂ ಸ್ತಂಭಗಳನ್ನು ಮಾಡಿಸಿ ದನು. ಇದಲ್ಲದೆ ಅವುಗಳಿಂದ ಹಾಡುವವರಿಗೋಸ್ಕರ ಕಿನ್ನರಿಗಳನ್ನೂ ವೀಣೆಗಳನ್ನೂ ಮಾಡಿಸಿದನು; ಅಂದಿ ನಿಂದ ಈ ದಿನದ ವರೆಗೂ ಅಂಥ ಅಲ್ಮುಗ್ ಮರಗಳು ಬಂದದ್ದೂ ಇಲ್ಲ, ಕಂಡದ್ದೂ ಇಲ್ಲ. ಅರಸನಾದ ಸೊಲೊಮೋನನು ಶೆಬದ ರಾಣಿಗೆ ರಾಜನ ದಾನವಾಗಿ ಕೊಟ್ಟದ್ದು ಹೊರತಾಗಿ ಅವಳು ಇಚ್ಚೈಸಿ ಕೇಳಿದ್ದನ್ನೆಲ್ಲಾ ಸೊಲೊಮೋನನು ಅವಳಿಗೆ ಕೊಟ್ಟನು. ಆಕೆಯು ಹಿಂತಿರುಗಿ ತನ್ನ ಸೇವಕರ ಕೂಡ ತನ್ನ ಸ್ವದೇಶಕ್ಕೆ ಹೋದಳು.
- 2 Chronicles 9:1–12 2 ಪೂರ್ವಕಾಲವೃತ್ತಾಂತ 9:1–12ಶೆಬದ ರಾಣಿಯು ಸೊಲೊಮೋನನ ಕೀರ್ತಿಯನ್ನು ಕೇಳಿದಾಗ ಒಗಟುಗಳಿಂದ ಅವನನ್ನು ಶೋಧಿಸಲು ಅವಳು ಮಹಾಗುಂಪಿನ ಸಂಗಡ ಸುಗಂಧಗಳನ್ನೂ ಬಹು ಬಂಗಾರವನ್ನೂ ಅಮೂಲ್ಯವಾದ ಕಲ್ಲುಗಳನ್ನೂ ಹೊತ್ತುಕೊಂಡಿರುವ ಒಂಟೆಗಳ ಸಂಗಡ ಯೆರೂಸಲೇಮಿಗೆ ಬಂದಳು. ಅವಳು ಸೊಲೊಮೋನನ ಬಳಿಗೆ ಬಂದ ಮೇಲೆ ತನ್ನ ಹೃದಯದಲ್ಲಿದ್ದ ಎಲ್ಲವನ್ನು ಅವನ ಸಂಗಡ ಮಾತಾ ಡಿದಳು. ಆಗ ಸೊಲೊಮೋನನು ಅವಳ ಪ್ರಶ್ನೆ ಗಳಿಗೆಲ್ಲಾ ಉತ್ತರಕೊಟ್ಟನು. ಸೊಲೊಮೋನನು ಅವ ಳಿಗೆ ಉತ್ತರ ಕೊಡದಂಥ, ಅವನಿಗೆ ಬಚ್ಚಿಡಲ್ಪಟ್ಟಿದ್ದು ಒಂದೂ ಇರಲಿಲ್ಲ. ಶೆಬದ ರಾಣಿಯು ಸೊಲೊ ಮೋನನ ಜ್ಞಾನವನ್ನೂ ಅವನು ಕಟ್ಟಿಸಿದ ಮನೆಯನ್ನೂ ಅವನ ಮೇಜಿನ ಭೋಜನವನ್ನೂ ಅವನ ಸೇವಕರು ಕೂತಿರುವದನ್ನೂ ನಿಂತಿರುವದನ್ನೂ ಅವನ ವಸ್ತ್ರಗಳನ್ನೂ ಅವನ ಪಾನದಾಯಕರನ್ನೂ ಅವರ ವಸ್ತ್ರಗಳನ್ನೂ ಅವನು ಕರ್ತನ ಆಲಯಕ್ಕೆ ಹೋಗುವ ಮಾರ್ಗವನ್ನೂ ನೋಡಿದಾಗ ಅವಳಿಗೆ ವಿಸ್ಮಯವಾಯಿತು. ಅವಳು ಅರಸನಿಗೆ ನನ್ನ ದೇಶದಲ್ಲಿ ನಿನ್ನ ಕ್ರಿಯೆಗಳನ್ನು ಕುರಿತೂ ನಿನ್ನ ಜ್ಞಾನವನ್ನು ಕುರಿತೂ ನಾನು ಕೇಳಿದ ಮಾತು ಸತ್ಯ. ಆದರೆ ನಾನು ಬಂದು ನನ್ನ ಕಣ್ಣುಗಳಿಂದ ನೋಡುವ ವರೆಗೆ ಆ ಮಾತುಗಳನ್ನು ನಂಬದೆ ಹೋದೆನು; ಇಗೋ, ನಿನ್ನ ಮಹಾಜ್ಞಾನದಲ್ಲಿ ಅರ್ಧ ವಾದರೂ ನನಗೆ ಹೇಳಲ್ಪಟ್ಟಿದ್ದಿಲ್ಲ; ನಾನು ಕೇಳಿದ್ದಕ್ಕಿಂತ ನಿನ್ನ ಕೀರ್ತಿ ಅಧಿಕವಾಗಿರುವದು. ನಿನ್ನ ಮನುಷ್ಯರು ಭಾಗ್ಯವಂತರು; ನಿನ್ನ ಮುಂದೆ ಯಾವಾಗಲೂ ನಿಂತು ನಿನ್ನ ಜ್ಞಾನವನ್ನು ಕೇಳುವ ಈ ನಿನ್ನ ಸೇವಕರು ಭಾಗ್ಯ ವಂತರು. ನಿನ್ನ ಕರ್ತನಾದ ದೇವರಿಗೋಸ್ಕರ ಅರಸ ನಾಗಿರಲು ತನ್ನ ಸಿಂಹಾಸನದ ಮೇಲೆ ನಿನ್ನನ್ನು ಇರಿ ಸಲು ನಿನ್ನಲ್ಲಿ ಇಷ್ಟಪಟ್ಟ ನಿನ್ನ ದೇವರಾದ ಕರ್ತನು ಸ್ತುತಿಸಲ್ಪಡಲಿ. ನಿನ್ನ ದೇವರು ಇಸ್ರಾಯೇಲನ್ನು ಯುಗ ಯುಗಕ್ಕೂ ನಿಲ್ಲಿಸಲು ಅವರನ್ನು ಪ್ರೀತಿಮಾಡಿದ್ದರಿಂದ ನ್ಯಾಯವನ್ನೂ ನೀತಿಯನ್ನೂ ನಡಿಸಲು ಆತನು ನಿನ್ನನ್ನು ಅವರ ಮೇಲೆ ಅರಸನಾಗಿರಲು ಮಾಡಿದನು ಅಂದಳು. ಅವಳು ಅರಸನಿಗೆ ನೂರಿಪ್ಪತ್ತು ತಲಾಂತು ತೂಕ ಬಂಗಾರವನ್ನೂ ಬಹು ಹೆಚ್ಚಾದ ಸುಗಂಧಗಳನ್ನೂ ಅಮೂಲ್ಯವಾದ ಕಲ್ಲುಗಳನ್ನೂ ಕೊಟ್ಟಳು. ಶೆಬದ ರಾಣಿಯು ಅರಸನಾದ ಸೊಲೊಮೋನನಿಗೆ ಕೊಟ್ಟಂಥ ಸುಂಗಧಗಳು ತರುವಾಯ ಬಂದದ್ದಿಲ್ಲ. ಇದಲ್ಲದೆ ಓಫೀರಿನಿಂದ ಬಂಗಾರವನ್ನು ತಂದ ಹೂರಾಮನ ಸೇವಕರೂ ಸೊಲೊಮೋನನ ಸೇವ ಕರೂ ಅಲ್ಮಗ್ ಮರಗಳನ್ನೂ ಅಮೂಲ್ಯವಾದ ಕಲ್ಲುಗ ಳನ್ನೂ ತಂದರು. ಅರಸನು ಆ ಸುಗಂಧ ಮರಗಳಿಂದ ಕರ್ತನ ಆಲಯಕ್ಕೋಸ್ಕರ ಅರಸನ ಮನೆಗೋಸ್ಕರವೂ ಸೋಪಾನಗಳನ್ನೂ ಹಾಡುವವರಿಗೋಸ್ಕರ ಕಿನ್ನರಿಗ ಳನ್ನೂ ವೀಣೆಗಳನ್ನೂ ಮಾಡಿಸಿದನು; ಯೆಹೂದ ದೇಶದಲ್ಲಿ ಅದಕ್ಕಿಂತ ಮುಂಚೆ ಅಂಥವುಗಳು ಕಾಣಲಿಲ್ಲ. ಶೆಬದ ರಾಣಿಯು ಅರಸನಿಗೆ ತಂದದ್ದಕ್ಕೆ ಬದ ಲಾಗಿ ಅರಸನಾದ ಸೊಲೊಮೋನನು ಕೊಟ್ಟದ್ದು ಹೊರತಾಗಿ ಅವಳು ಇಚ್ಛಿಸಿ ಕೇಳಿದ್ದನ್ನೆಲ್ಲಾ ಅವಳಿಗೆ ಕೊಟ್ಟನು. ಆಗ ಅವಳು ತಿರಿಗಿಕೊಂಡು ತನ್ನ ದೇಶಕ್ಕೆ ಹೋದಳು; ಅವಳೂ ಅವಳ ಸೇವಕರೂ ಕೂಡ ಹೋದರು.
- Luke 11:31–32 ಲೂಕನು 11:31–32ನ್ಯಾಯ ತೀರ್ಪಿ ನಲ್ಲಿ ದಕ್ಷಿಣದ ರಾಣಿಯು ಈ ಸಂತತಿ ಯವರೊಂದಿಗೆ ಎದ್ದು ಇವರನ್ನು ಖಂಡಿಸುವಳು; ಯಾಕಂದರೆ ಆಕೆಯು ಸೊಲೊಮೋನನ ಜ್ಞಾನವನ್ನು ಕೇಳುವದಕ್ಕೆ ಭೂಮಿಯ ಕಟ್ಟಕಡೆಯ ಭಾಗಗಳಿಂದ ಬಂದಳು; ಮತ್ತು ಇಗೋ, ಸೊಲೊಮೋನನಿಗಿಂತಲೂ ಹೆಚ್ಚಿನವನು ಇಲ್ಲಿದ್ದಾನೆ. ನಿನೆವೆಯವರು ನ್ಯಾಯತೀರ್ಪಿನಲ್ಲಿ ಈ ಸಂತತಿಯವ ರೊಂದಿಗೆ ಎದ್ದು ಇದನ್ನು ಖಂಡಿಸುವರು. ಯಾಕಂದರೆ ಯೋನನು ಸಾರಿದ್ದನ್ನು ಕೇಳಿ ಅವರು ಮಾನಸಾಂತರ ಪಟ್ಟರು; ಮತ್ತು ಇಗೋ, ಯೋನನಿಗಿಂತಲೂ ಹೆಚ್ಚಿನ ವನು ಇಲ್ಲಿದ್ದಾನೆ.
- Hebrews 1:2–4 ಇಬ್ರಿಯರಿಗೆ 1:2–4ಈ ಅಂತ್ಯದಿನಗಳಲ್ಲಿ ನಮ್ಮ ಸಂಗಡ ತನ್ನ ಮಗನ ಮುಖಾಂತರ ಮಾತನಾಡಿದ್ದಾನೆ. ಈತನನ್ನು ಎಲ್ಲಕ್ಕೂ ಬಾಧ್ಯನನ್ನಾಗಿ ನೇಮಿಸಿದನು, ಈತನ ಮೂಲಕವೇ ಲೋಕಗಳನ್ನು ಉಂಟು ಮಾಡಿದನು. ಈತನು ದೇವರ ಮಹಿಮೆಯ ಪ್ರಕಾಶವೂ ಆತನ ವ್ಯಕ್ತಿತ್ವದ ಪ್ರತಿರೂಪವೂ ತನ್ನ ಬಲವುಳ್ಳ ವಾಕ್ಯದಿಂದ ಸಮಸ್ತಕ್ಕೆ ಆಧಾರವೂ ಆಗಿದ್ದು ತಾನೇ ನಮ್ಮ ಪಾಪಗಳನ್ನು ತೊಳೆದ ಮೇಲೆ ಉನ್ನತದೊಳಗೆ ಮಹೋನ್ನತನ ಬಲ ಗಡೆಯಲ್ಲಿ ಕೂತುಕೊಂಡನು. ಈತನು ದೂತರಿಗಿಂತಲೂ ಉತ್ತಮನಾಗಿ ಮಾಡ ಲ್ಪಟ್ಟು ಅವರಿಗಿಂತ ಅತಿ ಶ್ರೇಷ್ಠವಾದ ಹೆಸರನ್ನು ಬಾಧ್ಯವಾಗಿ ಹೊಂದಿದನಲ್ಲಾ;
- John 1:14 ಯೋಹಾನನು 1:14ಇದಲ್ಲದೆ ಆ ವಾಕ್ಯವಾಗಿರುವಾತನು ಶರೀರಧಾರಿ ಯಾಗಿ ಕೃಪೆಯಿಂದಲೂ ಸತ್ಯದಿಂದಲೂ ತುಂಬಿ ನಮ್ಮ ಮಧ್ಯದಲ್ಲಿ ವಾಸಮಾಡಿದನು. (ತಂದೆಯಿಂದ ಹುಟ್ಟಿದ ಒಬ್ಬನೇ ಮಗನ ಮಹಿಮೆಯಂತೆ ನಾವು ಆತನ ಮಹಿಮೆಯನ್ನು ನೋಡಿದೆವು).
- Matthew 17:5 ಮತ್ತಾಯನು 17:5ಅವನು ಇನ್ನೂ ಮಾತನಾಡುತ್ತಿರುವಾಗಲೇ ಇಗೋ, ಪ್ರಕಾಶಮಾನವಾದ ಮೇಘವು ಅವರ ಮೇಲೆ ಕವಿದುಕೊಂಡಿತು; ಆಗ ಇಗೋ--ನಾನು ಬಹಳವಾಗಿ ಮೆಚ್ಚಿಕೊಂಡಿರುವ ಪ್ರಿಯನಾದ ನನ್ನ ಮಗನು ಈತನೇ; ಈತನ ಮಾತನ್ನು ನೀವು ಕೇಳಿರಿ ಎಂದು ಹೇಳುವ ಧ್ವನಿಯು ಮೇಘದೊಳಗಿಂದ ಉಂಟಾಯಿತು.
- Matthew 3:17 ಮತ್ತಾಯನು 3:17ಆಗ--ಇಗೋ, ಈತನು ಪ್ರಿಯ ನಾಗಿರುವ ನನ್ನ ಮಗನು; ಈತನನ್ನು ನಾನು ಬಹಳ ವಾಗಿ ಮೆಚ್ಚಿದ್ದೇನೆ ಎಂದು ಪರಲೋಕದಿಂದ ಹೇಳುವ ಧ್ವನಿಯಾಯಿತು.
- John 1:18 ಯೋಹಾನನು 1:18ಯಾವನೂ ಯಾವ ಕಾಲದಲ್ಲೂ ದೇವರನ್ನು ಕಂಡಿಲ್ಲ. ತಂದೆಯ ಎದೆಯಲ್ಲಿರುವ ಆ ಒಬ್ಬನೇ ಮಗ ನಾಗಿರುವಾತನು ಆತನನ್ನು ತಿಳಿಯಪಡಿಸಿದ್ದಾನೆ.
- Isaiah 7:14 ಯೆಶಾಯ 7:14ಆದಕಾರಣ ಕರ್ತನು ತಾನೇ ಒಂದು ಗುರುತನ್ನು ನಿನಗೆ ಕೊಡು ವನು; ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಒಬ್ಬ ಮಗನನ್ನು ಹಡೆಯುವಳು. ಆತನನ್ನು ಇಮ್ಮಾನು ವೇಲ್ ಎಂದು ಕರೆಯುವರು.
- Isaiah 9:6–7 ಯೆಶಾಯ 9:6–7ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ಆ ಮಗನು ನಮಗೆ ಕೊಡಲ್ಪಟ್ಟಿದ್ದಾನೆ; ಆಡಳಿತವು ಆತನ ಬಾಹುವಿನ ಮೇಲಿರುವದು; ಅದ್ಭುತ ಸ್ವರೂಪನು, ಆಲೋಚನಾ ಕರ್ತನು, ಪರಾಕ್ರಮಿಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂದು ಆತನ ಹೆಸರು ಕರೆಯಲ್ಪಡುವದು. ಅದನ್ನು ನೇಮಿಸುವದಕ್ಕೂ ಇಂದಿನಿಂದ ಎಂದೆಂದಿಗೂ ನೀತಿ ನ್ಯಾಯಗಳೊಂದಿಗೆ ಅದನ್ನು ಸ್ಥಾಪಿಸುವದಕ್ಕೂ ದಾವೀದನ ಸಿಂಹಾಸನ ಕ್ಕಾಗಲಿ ಅವನ ರಾಜ್ಯಕ್ಕಾಗಲಿ ಅವನ ಪರಿಪಾಲ ನೆಯ ಮತ್ತು ಶಾಂತಿಯ ಅಭಿವೃದ್ಧಿಗಾಗಲಿ ಅಂತ್ಯವೇ ಇಲ್ಲ; ಸೈನ್ಯಗಳ ಕರ್ತನ ಆಸಕ್ತಿಯು ಇದನ್ನು ನೆರವೇರಿ ಸುವದು.
- Philippians 2:6–7 ಫಿಲಿಪ್ಪಿಯವರಿಗೆ 2:6–7ಆತನು ದೇವಸ್ವರೂಪ ನಾಗಿದ್ದರೂ ದೇವರಿಗೆ ಸರಿಸಮಾನನಾಗಿರುವೆನೆಂದಿಣಿ ಸದೆ ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡಾಗ ಮನುಷ್ಯರ ಹೋಲಿಕೆ ಯಲ್ಲಿ ಮಾಡಲ್ಪಟ್ಟನು.
- Acts 8:27–28 ಅಪೊಸ್ತಲರ ಕೃತ್ಯಗಳು 8:27–28ಅವನು ಎದ್ದು ಹೊರಟು ಹೋಗುತ್ತಿರುವಾಗ ಇಗೋ, ಐಥಿಯೋಪ್ಯದವರ ರಾಣಿಯಾಗಿದ್ದ ಕಂದಾಕೆಯ ಕೈಕೆಳಗೆ ದೊಡ್ಡ ಅಧಿಕಾ ರಿಯೂ ಆಕೆಯ ಎಲ್ಲಾ ಖಜಾನೆಯ ಮೇಲ್ವಿಚಾರಕನೂ ಆಗಿದ್ದ ಐಥಿಯೋಪ್ಯದವನಾದ ಒಬ್ಬ ಕಂಚುಕಿಯು ಆರಾಧನೆಗೋಸ್ಕರ ಯೆರೂಸಲೇಮಿಗೆ ಬಂದು ಹಿಂತಿರುಗಿ ಹೋಗುವಾಗ ತನ್ನ ರಥದಲ್ಲಿ ಕೂತು ಕೊಂಡು ಯೆಶಾಯ ಪ್ರವಾದಿಯ ಗ್ರಂಥವನ್ನು ಓದು ತ್ತಿದ್ದನು;