Matthew · chapter 12 · verse 8
Matthew 12:8 in Kannada
ಯಾಕಂದರೆ ಮನುಷ್ಯ ಕುಮಾರನು ಸಬ್ಬತ್ ದಿನಕ್ಕೂ ಒಡೆಯನಾಗಿದ್ದಾನೆ ಎಂದು ಹೇಳಿದನು.
Yaakandare manushya kumaaranu sabbat dinakkoo odeyanaagiddaane endu helidanu.
Matthew 12:8 in English
- King James Version (KJV)
- For the Son of man is Lord even of the sabbath day.
- World English Bible (WEB)
- For the Son of Man is Lord of the Sabbath.”
- American Standard Version (ASV)
- For the Son of man is lord of the sabbath.
- Bible in Basic English (BBE)
- For the Son of man is lord of the Sabbath.
- Darby Translation (DBY)
- For the Son of man is Lord of the sabbath.
- Webster's Bible (WBS)
- For the Son of man is Lord even of the sabbath.
- Young's Literal Translation (YLT)
- for the son of man is lord even of the sabbath.'
Read in context
- 6ಆದರೆ ನಾನು ನಿಮಗೆ ಹೇಳುವದೇನಂದರೆ-- ದೇವಾಲಯಕ್ಕಿಂತಲೂ ದೊಡ್ಡವನು ಈ ಸ್ಥಳದಲ್ಲಿ ಇದ್ದಾನೆ.
- 7ಆದರೆ--ನನಗೆ ಯಜ್ಞವಲ್ಲ, ಕರುಣೆಯೇ ಬೇಕು ಎಂಬದರ ಅರ್ಥವನ್ನು ನೀವು ತಿಳಿದಿದ್ದರೆ ನಿರಪರಾಧಿಗಳನ್ನು ಅಪರಾಧಿಗಳೆಂದು ತೀರ್ಪುಮಾಡು ತ್ತಿದ್ದಿಲ್ಲ.
- 8ಯಾಕಂದರೆ ಮನುಷ್ಯ ಕುಮಾರನು ಸಬ್ಬತ್ ದಿನಕ್ಕೂ ಒಡೆಯನಾಗಿದ್ದಾನೆ ಎಂದು ಹೇಳಿದನು.
- 9ತರುವಾಯ ಆತನು ಅಲ್ಲಿಂದ ಹೊರಟು ಅವರ ಸಭಾಮಂದಿರದೊಳಕ್ಕೆ ಹೋದನು.
- 10ಇಗೋ, ಅಲ್ಲಿ ಕೈ ಬತ್ತಿದ್ದ ಒಬ್ಬ ಮನುಷ್ಯನಿದ್ದನು. ಆಗ ಅವರು ಆತನ ಮೇಲೆ ತಪ್ಪು ಹೊರಿಸಬೇಕೆಂದು ಆತನಿಗೆ-- ಸಬ್ಬತ್ ದಿನಗಳಲ್ಲಿ ಸ್ವಸ್ಥ ಮಾಡುವದು ನ್ಯಾಯವೋ ಎಂದು ಕೇಳಿದರು.
Cross references
- Luke 6:5 ಲೂಕನು 6:5ಆತನು ಅವ ರಿಗೆ--ಮನುಷ್ಯಕುಮಾರನು ಸಬ್ಬತ್ತಿಗೂ ಒಡೆಯನಾಗಿ ದ್ದಾನೆ ಅಂದನು.
- Mark 2:28 ಮಾರ್ಕನು 2:28ಆದದರಿಂದ ಮನುಷ್ಯಕುಮಾ ರನು ಸಬ್ಬತ್ತಿಗೆ ಸಹ ಒಡೆಯನಾಗಿದ್ದಾನೆ ಅಂದನು.
- John 5:17–23 ಯೋಹಾನನು 5:17–23ಆದರೆ ಯೇಸು ಅವರಿಗೆ--ನನ್ನ ತಂದೆಯು ಈ ವರೆಗೂ ಕೆಲಸ ಮಾಡುತ್ತಾನೆ ಮತ್ತು ನಾನೂ ಕೆಲಸ ಮಾಡುತ್ತೇನೆ ಅಂದನು. ಆದದರಿಂದ ಆತನು ಸಬ್ಬತ್ತನ್ನು ವಿಾರಿದ್ದು ಮಾತ್ರವಲ್ಲದೆ ದೇವರನ್ನು ತನ್ನ ಸ್ವಂತ ತಂದೆ ಎಂದು ಕರೆದು ತನ್ನನ್ನು ದೇವರಿಗೆ ಸಮಾನ ಮಾಡಿಕೊಂಡ ಕಾರಣ ಯೆಹೂದ್ಯರು ಆತನನ್ನು ಕೊಲ್ಲುವದಕ್ಕೆ ಇನ್ನಷ್ಟು ಪ್ರಯತ್ನ ಮಾಡಿದರು. ಆಗ ಯೇಸು ಪ್ರತ್ಯುತ್ತರವಾಗಿ ಅವರಿಗೆ-- ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ತಂದೆಯು ಮಾಡುವದನ್ನು ಕಂಡದ್ದನ್ನಲ್ಲದೆ ಮಗನು ತನ್ನಷ್ಟಕ್ಕೆ ತಾನೇ ಯಾವದನ್ನೂ ಮಾಡಲಾರನು; ಆತನು ಮಾಡುವದನ್ನೆಲ್ಲಾ ಹಾಗೆಯೇ ಮಗನೂ ಮಾಡುವನು. ಯಾಕಂದರೆ ತಂದೆಯು ಮಗನನ್ನು ಪ್ರೀತಿಸಿ ತಾನು ಸ್ವತಃ ಮಾಡುವವುಗಳನ್ನೆಲ್ಲಾ ಮಗನಿಗೆ ತೋರಿಸುತ್ತಾನೆ; ನೀವು ಆಶ್ಚರ್ಯಪಡುವ ಹಾಗೆ ಇವುಗಳಿಗಿಂತ ಮಹತ್ತಾದ ಕೆಲಸಗಳನ್ನು ಆತನಿಗೆ ತೋರಿಸುವನು. ತಂದೆಯು ಹೇಗೆ ಸತ್ತವರನ್ನು ಎಬ್ಬಿಸಿ ಬದುಕಿಸುತ್ತಾನೋ ಹಾಗೆಯೇ ಮಗನೂ ತನಗೆ ಇಷ್ಟವಿರು ವವರನ್ನು ಬದುಕಿಸುತ್ತಾನೆ. ಇದಲ್ಲದೆ ತಂದೆಯು ಯಾರಿಗೂ ತೀರ್ಪು ಮಾಡುವದಿಲ್ಲ; ಆದರೆ ಎಲ್ಲರೂ ತಂದೆಗೆ ಮಾನಕೊಡುವ ಪ್ರಕಾರವೇ ಮಗನಿಗೂ ಮಾನ ಕೊಡಬೇಕೆಂದು ತೀರ್ಪು ಮಾಡು ವದನ್ನೆಲ್ಲಾ ಮಗನಿಗೆ ಒಪ್ಪಿಸಿದ್ದಾನೆ. ಮಗನಿಗೆ ಮಾನ ಕೊಡದವನು ಆತನನ್ನು ಕಳುಹಿಸಿದ ತಂದೆಗೂ ಮಾನ ಕೊಡದವನಾಗಿದ್ದಾನೆ.
- Mark 9:4–7 ಮಾರ್ಕನು 9:4–7ಆಗ ಅಲ್ಲಿ ಎಲೀಯನು ಮೋಶೆ ಯೊಂದಿಗೆ ಅವರಿಗೆ ಕಾಣಿಸಿಕೊಂಡು ಯೇಸುವಿನೊ ಂದಿಗೆ ಮಾತನಾಡುತ್ತಿದ್ದರು. ಆಗ ಪೇತ್ರನು ಯೇಸು ವಿಗೆ-- ಬೋಧಕನೇ, ನಾವು ಇಲ್ಲೆ ಇರುವದು ನಮಗೆ ಒಳ್ಳೇದು; ನಿನಗೊಂದು ಮೋಶೆಗೊಂದು ಮತ್ತು ಎಲೀಯನಿಗೊಂದು ಮೂರು ಗುಡಾರಗಳನ್ನು ನಾವು ಕಟ್ಟುವೆವು ಎಂದು ಹೇಳಿದನು. ಅವನು ಏನು ಮಾತನಾಡಬೇಕೋ ಅವನಿಗೆ ತಿಳಿದಿರಲಿಲ್ಲ; ಯಾಕಂ ದರೆ ಅವರು ಬಹಳವಾಗಿ ಹೆದರಿದ್ದರು. ಆಗ ಅಲ್ಲಿ ಮೋಡವು ಅವರ ಮೇಲೆ ಕವಿದುಕೊಂಡಿತು; ಮತ್ತು --ಈತನು ಪ್ರಿಯನಾಗಿರುವ ನನ್ನ ಮಗನು; ಈತನ ಮಾತನ್ನು ಕೇಳಿರಿ ಎಂದು ಹೇಳಿದ ಧ್ವನಿಯು ಮೋಡದೊಳಗಿಂದ ಬಂತು.
- Matthew 9:6 ಮತ್ತಾಯನು 9:6ಆದರೆ ಮನುಷ್ಯಕುಮಾರನಿಗೆ ಪಾಪ ಗಳನ್ನು ಕ್ಷಮಿಸಿಬಿಡುವದಕ್ಕೆ ಭೂಮಿಯ ಮೇಲೆ ಅಧಿಕಾರ ಉಂಟೆಂದು ನೀವು ತಿಳಿಯಬೇಕು ಎಂದು ಹೇಳಿ ಆ ಪಾರ್ಶ್ವವಾಯು ರೋಗಿಗೆ--ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಿನ್ನ ಮನೆಗೆ ಹೋಗು ಎಂದು ಹೇಳಿದನು.