Matthew · chapter 12 · verse 7
Matthew 12:7 in Kannada
ಆದರೆ--ನನಗೆ ಯಜ್ಞವಲ್ಲ, ಕರುಣೆಯೇ ಬೇಕು ಎಂಬದರ ಅರ್ಥವನ್ನು ನೀವು ತಿಳಿದಿದ್ದರೆ ನಿರಪರಾಧಿಗಳನ್ನು ಅಪರಾಧಿಗಳೆಂದು ತೀರ್ಪುಮಾಡು ತ್ತಿದ್ದಿಲ್ಲ.
Aadare--nanage yajnyavalla, karuneye beku embadara arthavannu neevu tilididdare niraparaadhigalannu aparaadhigalendu teerpumaadu ttiddilla.
Matthew 12:7 in English
- King James Version (KJV)
- But if ye had known what [this] meaneth, I will have mercy, and not sacrifice, ye would not have condemned the guiltless.
- World English Bible (WEB)
- But if you had known what this means, ‘I desire mercy, and not sacrifice,’ you wouldn’t have condemned the guiltless.
- American Standard Version (ASV)
- But if ye had known what this meaneth, I desire mercy, and not sacrifice, ye would not have condemned the guiltless.
- Bible in Basic English (BBE)
- But if these words had been in your minds, My desire is for mercy and not for offerings, you would not have been judging those who have done no wrong.
- Darby Translation (DBY)
- But if ye had known what is: I will have mercy and not sacrifice, ye would not have condemned the guiltless.
- Webster's Bible (WBS)
- But if ye had known what [this] meaneth, I will have mercy, and not sacrifice, ye would not have condemned the guiltless.
- Young's Literal Translation (YLT)
- and if ye had known what is: Kindness I will, and not sacrifice — ye had not condemned the blameless,
Read in context
- 5ಇದಲ್ಲದೆ ಸಬ್ಬತ್ ದಿನಗಳಲ್ಲಿ ಯಾಜಕರು ದೇವಾಲಯದಲ್ಲಿ ಸಬ್ಬತ್ತನ್ನು ಅಪವಿತ್ರಪಡಿಸಿದರೂ ನಿರಪರಾಧಿಗಳಾಗಿದ್ದಾ ರೆಂದು ನೀವು ನ್ಯಾಯಪ್ರಮಾಣದಲ್ಲಿ ಓದಲಿಲ್ಲವೇ?
- 6ಆದರೆ ನಾನು ನಿಮಗೆ ಹೇಳುವದೇನಂದರೆ-- ದೇವಾಲಯಕ್ಕಿಂತಲೂ ದೊಡ್ಡವನು ಈ ಸ್ಥಳದಲ್ಲಿ ಇದ್ದಾನೆ.
- 7ಆದರೆ--ನನಗೆ ಯಜ್ಞವಲ್ಲ, ಕರುಣೆಯೇ ಬೇಕು ಎಂಬದರ ಅರ್ಥವನ್ನು ನೀವು ತಿಳಿದಿದ್ದರೆ ನಿರಪರಾಧಿಗಳನ್ನು ಅಪರಾಧಿಗಳೆಂದು ತೀರ್ಪುಮಾಡು ತ್ತಿದ್ದಿಲ್ಲ.
- 8ಯಾಕಂದರೆ ಮನುಷ್ಯ ಕುಮಾರನು ಸಬ್ಬತ್ ದಿನಕ್ಕೂ ಒಡೆಯನಾಗಿದ್ದಾನೆ ಎಂದು ಹೇಳಿದನು.
- 9ತರುವಾಯ ಆತನು ಅಲ್ಲಿಂದ ಹೊರಟು ಅವರ ಸಭಾಮಂದಿರದೊಳಕ್ಕೆ ಹೋದನು.
Cross references
- Hosea 6:6 ಹೋಶೇಯ 6:6ನಾನು ಬಲಿಯನ್ನಲ್ಲ ಕರುಣೆಯನ್ನೇ ಮತ್ತು ದಹನ ಬಲಿಗಳಿಗಿಂತ ದೇವರ ತಿಳುವಳಿಕೆಯನ್ನೇ ಹೆಚ್ಚಾಗಿ ಅಪೇಕ್ಷಿಸಿದ್ದೇನೆ.
- Matthew 9:13 ಮತ್ತಾಯನು 9:13ನೀವು ಹೋಗಿ--ನಾನು ಯಜ್ಞವನ್ನಲ್ಲ; ಕರುಣೆಯನ್ನೇ ಅಪೇಕ್ಷಿಸುತ್ತೇನೆ ಎಂಬದರ ಅರ್ಥವನ್ನು ಕಲಿಯಿರಿ; ಯಾಕಂದರೆ ನಾನು ನೀತಿ ವಂತರನ್ನಲ್ಲ, ಪಾಪಿಗಳನ್ನು ಮಾನಸಾಂತರಪಡು ವದಕ್ಕಾಗಿ ಕರೆಯಲು ಬಂದೆನು ಎಂದು ಹೇಳಿದನು.
- Micah 6:6–8 ಮೀಕ 6:6–8ನಾನು ಯಾವದರೊಂದಿಗೆ ಕರ್ತನ ಮುಂದೆ ಬರಲಿ? ಯಾವದರೊಂದಿಗೆ ಉನ್ನತವಾದ ದೇವರ ಮುಂದೆ ಅಡ್ಡಬೀಳಲಿ? ದಹನಬಲಿಗಳ ಸಂಗಡವೂ ಒಂದು ವರುಷದ ಕರುಗಳ ಸಂಗಡವೂ ಆತನ ಮುಂದೆ ಬರಲೋ? ಸಾವಿರ ಟಗರುಗಳಿಗಾದರೂ ಎಣ್ಣೆಯ ಹತ್ತು ಸಾವಿರ ನದಿಗಳಿಗಾದರೂ ಕರ್ತನು ಮೆಚ್ಚು ವನೋ? ನನ್ನ ದ್ರೋಹಕ್ಕಾಗಿ ನನ್ನ ಚೊಚ್ಚಲ ಮಗ ನನ್ನೂ ನನ್ನ ಆತ್ಮದ ಪಾಪಕ್ಕಾಗಿ ನನ್ನ ಗರ್ಭದ ಫಲ ವನ್ನೂ ಕೊಡಲೋ? ಮನುಷ್ಯನೇ, ಉತ್ತಮವಾದ ದ್ದನ್ನು ನಿನಗೆ ಆತನು ತಿಳಿಸಿದ್ದಾನೆ; ಹೌದು, ನ್ಯಾಯ ವನ್ನು ಮಾಡುವದೂ ಕರುಣೆಯನ್ನು ಪ್ರೀತಿಮಾಡು ವದೂ ನಿನ್ನ ದೇವರ ಸಂಗಡ ವಿನಯವಾಗಿ ನಡ ಕೊಳ್ಳುವದೂ ಇದನ್ನೇ ಹೊರತು ಕರ್ತನು ಇನ್ನೇನು ನಿನ್ನಿಂದ ಕೇಳುತ್ತಾನೆ.
- Isaiah 1:11–17 ಯೆಶಾಯ 1:11–17ನೀವು ಲೆಕ್ಕವಿಲ್ಲದಷ್ಟು ಯಜ್ಞಗಳನ್ನು ನನಗೆ ಅರ್ಪಿಸುವ ಉದ್ದೇಶವೇನು? ಎಂದು ಕರ್ತನು ನುಡಿಯುತ್ತಾನೆ. ಟಗರುಗಳ ದಹನಬಲಿಗಳು, ಪುಷ್ಟಿ ಪ್ರಾಣಿಗಳ ಕೊಬ್ಬು, ಇದೆಲ್ಲಾ ನನಗೆ ಸಾಕಾಯಿತು; ಹೋರಿ, ಕುರಿ, ಹೋತಗಳ ರಕ್ತಕ್ಕೆ ನಾನು ಸಂತೋಷಪಡುವ ದಿಲ್ಲ. ನೀವು ನನ್ನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳ ಬೇಕೆಂದು ಬರುತ್ತೀರಲ್ಲಾ; ನನ್ನ ಪ್ರಾಕಾರಗಳನ್ನು ತುಳಿ ಯಲು ಯಾರು ನಿಮ್ಮನ್ನು ಕೇಳಿಕೊಂಡರು? ಇನ್ನು ವ್ಯರ್ಥವಾದ ಕಾಣಿಕೆಗಳನ್ನು ತಾರದಿರಿ, ಧೂಪವು ನನಗೆ ಅಸಹ್ಯ, ಹುಣ್ಣಿಮೆಗಳೂ ಸಬ್ಬತ್ತುಗಳೂ ಸಭೆಗಳು ಕೂಡುವದೂ ಇವು ಬೇಡ; ದುಷ್ಟತನದಿಂದ ಕೂಡಿದ ವಿಶೇಷ ಕೂಟವನ್ನು ಸಹ ನಾನು ಸಹಿಸಲಾರೆನು. ನಿಮ್ಮ ಹುಣ್ಣಿಮೆಗಳನ್ನೂ ನೇಮಕವಾದ ಹಬ್ಬಗಳನ್ನೂ ನನ್ನ ಆತ್ಮವು ಹಗೆಮಾಡುತ್ತದೆ. ಅವು ನನಗೆ ಭಾರ, ಸಹಿಸಲು ಬೇಸರ. ನೀವು ನಿಮ್ಮ ಕೈಗಳನ್ನು ಚಾಚಲು ನಾನು ನನ್ನ ಕಣ್ಣುಗಳನ್ನು ನಿಮಗೆ ಮರೆಮಾಡುವೆನು; ಹೌದು, ನೀವು ಬಹು ಪ್ರಾರ್ಥನೆಗಳನ್ನು ಮಾಡಿ ದರೂ ನಾನು ಕೇಳೆನು, ನಿಮ್ಮ ಕೈಗಳು ರಕ್ತದಿಂದ ತುಂಬಿಯವೆ. ನಿಮ್ಮನ್ನು ತೊಳೆದುಕೊಂಡು ಶುದ್ಧ ಮಾಡಿಕೊಳ್ಳಿರಿ; ನನ್ನ ಕಣ್ಣೆದುರಿನಿಂದ ನಿಮ್ಮ ದುಷ್ಟ ಕೃತ್ಯಗಳನ್ನು ತೆಗೆದುಹಾಕಿರಿ, ಕೆಟ್ಟದ್ದನ್ನು ನಿಲ್ಲಿಸಿಬಿಡಿರಿ; ಒಳ್ಳೆಯದನ್ನು ಮಾಡಲು ಕಲಿತುಕೊಳ್ಳಿರಿ; ನ್ಯಾಯ ವನ್ನು ಹುಡುಕಿರಿ, ಹಿಂಸೆಪಡುವವರನ್ನು ಉಪಚರಿಸಿರಿ, ಅನಾಥರಿಗೆ ನ್ಯಾಯತೀರಿಸಿರಿ, ವಿಧವೆಯರ ಪರವಾಗಿವಾದಿಸಿರಿ.
- Proverbs 17:15 ಜ್ಞಾನೋಕ್ತಿಗಳು 17:15ದುಷ್ಟರನ್ನು ನೀತಿ ವಂತರೆಂದು ನಿರ್ಣಯಿಸುವವನೂ ನೀತಿವಂತನನ್ನು ದಂಡನೆಗೆ ಗುರಿಮಾಡುವವನೂ ಇವರಿಬ್ಬರೂ ಕರ್ತ ನಿಗೆ ಅಸಹ್ಯರು.
- Acts 13:27 ಅಪೊಸ್ತಲರ ಕೃತ್ಯಗಳು 13:27ಯೆರೂ ಸಲೇಮಿನಲ್ಲಿ ವಾಸವಾಗಿರುವವರೂ ಅವರ ಅಧಿಕಾರಿ ಗಳೂ ಆತನನ್ನಾಗಲೀ ಪ್ರತಿ ಸಬ್ಬತ್ದಿನದಲ್ಲಿ ಪಾರಾ ಯಣವಾಗುವ ಪ್ರವಾದಿಗಳ ವಾಕ್ಯಗಳನ್ನಾಗಲೀ ಗ್ರಹಿಸದೆ ಆತನನ್ನು ಅಪರಾಧಿಯೆಂದು ತೀರ್ಪುಮಾಡಿ ಆ ವಾಕ್ಯಗಳನ್ನೇ ನೆರವೇರಿಸಿದರು.
- Matthew 22:29 ಮತ್ತಾಯನು 22:29ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವರಿಗೆ--ನೀವು ಬರಹಗಳನ್ನಾಗಲೀ ದೇವರ ಶಕ್ತಿಯನ್ನಾಗಲೀ ತಿಳಿಯದೆ ತಪ್ಪುವವರಾಗಿದ್ದೀರಿ.
- Psalm 109:31 ಕೀರ್ತನೆಗಳು 109:31ಬಡವನ ಬಲಪಾರ್ಶ್ವದಲ್ಲಿ ಅವನ ಪ್ರಾಣಕ್ಕೆ ನ್ಯಾಯತೀರಿಸುವ ವರೊಳಗಿಂದ ಅವನನ್ನು ರಕ್ಷಿಸುವದಕ್ಕೆ ಆತನು ನಿಂತುಕೊಳ್ಳುವನು.
- James 5:6 ಯಾಕೋಬನು 5:6ನೀತಿವಂತನಿಗೆ ದಂಡನೆಯನ್ನು ವಿಧಿಸಿ ಕೊಂದು ಹಾಕಿ ದ್ದೀರಿ; ಅವನು ನಿಮ್ಮನ್ನು ಎದುರಾಯಿಸುವವನಲ್ಲ.
- Psalm 94:21 ಕೀರ್ತನೆಗಳು 94:21ನೀತಿವಂತನ ಪ್ರಾಣಕ್ಕೆ ವಿರೋಧವಾಗಿ ಅವರು ಕೂಡಿಕೊಳ್ಳುತ್ತಾರೆ; ನಿರಪರಾಧಿಯ ರಕ್ತವನ್ನು ಖಂಡಿಸುತ್ತಾರೆ.
- Job 32:3 ಯೋಬನು 32:3ಅವನ ಮೂವರು ಸ್ನೇಹಿತರ ಮೇಲೆಯೂ ಅವರು ಉತ್ತರ ಕಂಡುಕೊಳ್ಳದೆ ಯೋಬನನ್ನು ಖಂಡಿಸಿದ್ದರಿಂದ ಅವನ ಕೋಪ ಉರಿಯಿತು.