Matthew · chapter 13 · verse 38
Matthew 13:38 in Kannada
ಹೊಲವು ಈ ಲೋಕ; ಒಳ್ಳೇ ಬೀಜವು ರಾಜ್ಯದ ಮಕ್ಕಳಾಗಿದ್ದಾರೆ; ಆದರೆ ಹಣಜಿಯು ಕೆಡುಕನ ಮಕ್ಕಳಾಗಿದ್ದಾರೆ.
Holavu ee loka; olle beejavu raajyada makkalaagiddaare; aadare hanajiyu kedukana makkalaagiddaare.
Matthew 13:38 in English
- King James Version (KJV)
- The field is the world; the good seed are the children of the kingdom; but the tares are the children of the wicked [one];
- World English Bible (WEB)
- the field is the world, the good seeds are the children of the Kingdom, and the darnel weeds are the children of the evil one.
- American Standard Version (ASV)
- and the field is the world; and the good seed, these are the sons of the kingdom; and the tares are the sons of the evil [one];
- Bible in Basic English (BBE)
- And the field is the world; and the good seed is the sons of the kingdom; and the evil seeds are the sons of the Evil One;
- Darby Translation (DBY)
- and the field is the world; and the good seed, these are the sons of the kingdom, but the darnel are the sons of the evil [one];
- Webster's Bible (WBS)
- The field is the world; the good seed are the children of the kingdom; but the tares are the children of the wicked [one] ;
- Young's Literal Translation (YLT)
- and the field is the world, and the good seed, these are the sons of the reign, and the darnel are the sons of the evil one,
Read in context
- 36ತರುವಾಯ ಯೇಸು ಜನಸಮೂಹವನ್ನು ಕಳು ಹಿಸಿಬಿಟ್ಟು ಮನೆಯೊಳಕ್ಕೆ ಹೋದನು; ಆಗ ಶಿಷ್ಯರು ಆತನ ಬಳಿಗೆ ಬಂದು ಆತನಿಗೆ--ಹೊಲದ ಹಣಜಿಯ ಸಾಮ್ಯವನ್ನು ನಮಗೆ ವಿವರಿಸು ಅಂದರು.
- 37ಆತನು ಪ್ರತ್ಯುತ್ತರವಾಗಿ ಅವರಿಗೆ-- ಒಳ್ಳೇ ಬೀಜ ಬಿತ್ತುವ ವನು ಮನುಷ್ಯಕುಮಾರನು;
- 38ಹೊಲವು ಈ ಲೋಕ; ಒಳ್ಳೇ ಬೀಜವು ರಾಜ್ಯದ ಮಕ್ಕಳಾಗಿದ್ದಾರೆ; ಆದರೆ ಹಣಜಿಯು ಕೆಡುಕನ ಮಕ್ಕಳಾಗಿದ್ದಾರೆ.
- 39ಅದನ್ನು ಬಿತ್ತಿದ ವೈರಿಯು ಸೈತಾನನೇ; ಸುಗ್ಗೀ ಕಾಲವು ಲೋಕದ ಅಂತ್ಯವಾಗಿದೆ; ಮತ್ತು ಕೊಯ್ಯುವವರು ದೂತರೇ.
- 40ಹೇಗೆ ಹಣಜಿಯನ್ನು ಕೂಡಿಸಿ ಬೆಂಕಿಯಲ್ಲಿ ಸುಡು ವರೋ ಹಾಗೆಯೇ ಈ ಲೋಕಾಂತ್ಯದಲ್ಲಿ ಆಗುವದು.
Cross references
- John 8:44 ಯೋಹಾನನು 8:44ನೀವು ನಿಮ್ಮ ತಂದೆಯಾದ ಸೈತಾನನಿಗೆ ಸಂಬಂಧಪಟ್ಟವರಾಗಿದ್ದೀರಿ. ನಿಮ್ಮ ತಂದೆಯ ದುರಾಶೆಗಳನ್ನೇ ನೀವು ಮಾಡುವದಕ್ಕೆ ಇಚ್ಛೈಸುತ್ತೀರಿ; ಅವನು ಆದಿಯಿಂದಲೂ ಕೊಲೆಗಾರನಾಗಿದ್ದು ಸತ್ಯ ದಲ್ಲಿ ನಿಲ್ಲಲಿಲ್ಲ. ಯಾಕಂದರೆ ಅವನಲ್ಲಿ ಸತ್ಯವೇ ಇಲ್ಲ; ಅವನು ಸುಳ್ಳಾಡುವಾಗ ತನ್ನ ಸ್ವಂತವಾದವುಗಳಿಂದ ಮಾ
- Acts 13:10 ಅಪೊಸ್ತಲರ ಕೃತ್ಯಗಳು 13:10ಎಲ್ಲಾ ಮೋಸದಿಂದಲೂ ಎಲ್ಲಾ ಕೆಟ್ಟತನ ದಿಂದಲೂ ತುಂಬಿರುವವನೇ, ಸೈತಾನನ ಮಗನೇ, ಎಲ್ಲಾ ನೀತಿಗೂ ವಿರೋಧಿಯೇ, ನೀನು ಕರ್ತನ ನೀಟಾದ ಮಾರ್ಗಗಳನ್ನು ಡೊಂಕು ಮಾಡುವದನ್ನು ಬಿಡುವದಿಲ್ಲವೋ?
- Philippians 3:18–19 ಫಿಲಿಪ್ಪಿಯವರಿಗೆ 3:18–19(ಅನೇಕರು ಕ್ರಿಸ್ತನ ಶಿಲುಬೆಗೆ ವಿರೋಧಿಗಳಾಗಿ ನಡೆಯುತ್ತಾರೆ; ಅವರ ವಿಷಯದಲ್ಲಿ ನಾನು ನಿಮಗೆ ಎಷ್ಟೋ ಸಾರಿ ಹೇಳಿದೆನು, ಈಗಲೂ ಅಳುತ್ತಾ ಹೇಳುತ್ತೇನೆ. ನಾಶನವೇ ಅವರ ಅಂತ್ಯಾವಸ್ಥೆ, ಹೊಟ್ಟೆಯೇ ಅವರ ದೇವರು, ನಾಚಿಕೆ ಕೆಲಸಗಳಲ್ಲಿಯೇ ಅವರ ಗೌರವವು. ಅವರು ಭೂಸಂಬಂಧವಾದವುಗಳ ಮೇಲೆ ಮನಸ್ಸಿಡುತ್ತಾರೆ.)
- 1 John 3:8–10 1 ಯೋಹಾನನು 3:8–10ಪಾಪಮಾಡುವವನು ಸೈತಾನ ನಿಗೆ ಸಂಬಂಧಪಟ್ಟವನಾಗಿದ್ದಾನೆ; ಯಾಕಂದರೆ ಆದಿ ಯಿಂದಲೂ ಸೈತಾನನು ಪಾಪಮಾಡುವವನಾಗಿದ್ದಾನೆ. ಆದದರಿಂದ ದೇವಕುಮಾರನು ಸೈತಾನನ ಕೆಲಸಗಳನ್ನು ಲಯಮಾಡುವದಕ್ಕೋಸ್ಕರವೇ ಪ್ರತ್ಯಕ್ಷನಾದನು. ದೇವರಿಂದ ಹುಟ್ಟಿದವನು ಪಾಪಮಾಡನು; ಯಾಕಂದರೆ ಆತನ ಬೀಜವು ಅವನಲ್ಲಿ ನೆಲೆಗೊಂಡದೆ. ಅವನು ದೇವರಿಂದ ಹುಟ್ಟಿದ ಕಾರಣ ಪಾಪಮಾಡ ಲಾರನು. ಇವರು ದೇವರ ಮಕ್ಕಳೆಂಬದೂ ಅವರು ಸೈತಾನನ ಮಕ್ಕಳೆಂಬದೂ ಇದರಿಂದ ವ್ಯಕ್ತವಾಗುತ್ತದೆ. ನೀತಿಯನ್ನು ಅನುಸರಿಸದವನೂ ತನ್ನ ಸಹೋದರನನ್ನು ಪ್ರೀತಿಸದವನೂ ದೇವರಿಗೆ ಸಂಬಂಧಪಟ್ಟವನಲ್ಲ.
- 1 Peter 1:23 1 ಪೇತ್ರನು 1:23ೀವು ತಿರಿಗಿ ಹುಟ್ಟಿದವರಾಗಿದ್ದೀರಲ್ಲಾ; ಆ ಜನ್ಮವು ನಾಶವಾಗುವ ಬೀಜದಿಂದ ಉಂಟಾದದ್ದಲ್ಲ. ನಾಶವಾಗದ ಬೀಜ ದಿಂದಲೇ ಉಂಟಾದದ್ದು ಅದು ದೇವರ ಸದಾ ಜೀವವುಳ್ಳ ವಾಕ್ಯದ ಮೂಲಕವಾಗಿ ಉಂಟಾಯಿತು.
- Genesis 3:15 ಆದಿಕಾಂಡ 3:15ನಿನಗೂ ಸ್ತ್ರೀಗೂ ನಿನ್ನ ಸಂತತಿಗೂ ಸ್ತ್ರೀ ಸಂತತಿಗೂ ಹಗೆತನ ಇಡುವೆನು; ಆತನು ನಿನ್ನ ತಲೆಯನ್ನು ಜಜ್ಜುವನು ಮತ್ತು ನೀನು ಆತನ ಹಿಮ್ಮಡಿಯನ್ನು, ಕಚ್ಚುವಿ ಅಂದನು.
- Matthew 13:19 ಮತ್ತಾಯನು 13:19ಯಾವನಾದರೂ ರಾಜ್ಯದ ವಾಕ್ಯವನ್ನು ಕೇಳಿ ಗ್ರಹಿಸದೆ ಇರುವಾಗ ಕೆಡುಕನು ಬಂದು ಅವನ ಹೃದಯದಲ್ಲಿ ಬಿತ್ತಿದ್ದನ್ನು ತೆಗೆದು ಬಿಡು ವನು; ದಾರಿಯ ಮಗ್ಗುಲಲ್ಲಿ ಬೀಜವನ್ನು ಅಂಗೀಕರಿ ಸಿದವನು ಇವನೇ.
- James 1:18 ಯಾಕೋಬನು 1:18ಆತನು ತನ್ನ ಚಿತ್ತದ ಪ್ರಕಾರ ಸತ್ಯವಾಕ್ಯದಿಂದ ನಮ್ಮನ್ನು ಹುಟ್ಟಿಸಿರಲಾಗಿ ನಾವು ಆತನ ಸೃಷ್ಟಿಗಳಲ್ಲಿ ಒಂದು ತರಹದ ಪ್ರಥಮ ಫಲ ಗಳಂತಾದೆವು.
- James 2:5 ಯಾಕೋಬನು 2:5ನನ್ನ ಪ್ರಿಯ ಸಹೋದರರೇ, ಕೇಳಿರಿ; ದೇವರು ಈ ಲೋಕದ ಬಡವರನ್ನು ನಂಬಿಕೆಯಲ್ಲಿ ಐಶ್ವರ್ಯವಂತರಾಗಿಯೂ ತನ್ನನ್ನು ಪ್ರೀತಿಸುವವ ರಿಗೆ ತಾನು ವಾಗ್ದಾನ ಮಾಡಿದ ರಾಜ್ಯಕ್ಕೆ ಬಾಧ್ಯ ರಾಗಿಯೂ ಇರಬೇಕೆಂದು ಆರಿಸಿಕೊಳ್ಳಲಿಲ್ಲವೇ?
- Colossians 1:6 ಕೊಲೊಸ್ಸೆಯವರಿಗೆ 1:6ನೀವು ಸತ್ಯದಲ್ಲಿ ದೇವರ ಕೃಪೆಯನ್ನು ಕೇಳಿ ತಿಳುಕೊಂಡ ದಿವಸದಿಂದ ನಿಮ್ಮ ಬಳಿಗೆ ಬಂದ ಆ ಸುವಾರ್ತೆಯು ಲೋಕದಲ್ಲೆಲ್ಲಾ ಫಲಕೊಟ್ಟಂತೆ ನಿಮ್ಮಲ್ಲಿಯೂ ಫಲ ಕೊಡುತ್ತದೆ.
- Psalm 22:30 ಕೀರ್ತನೆಗಳು 22:30ಒಂದು ಸಂತಾನವು ಆತನನ್ನು ಸೇವಿಸುವದು. ಅದು ಕರ್ತನ ಸಂತತಿ ಎಂದು ಎಣಿಸ ಲ್ಪಡುವದು.ಅವರು ಬಂದು ಆತನೇ ಇದನ್ನು ಮಾಡಿದ್ದಾನೆಂದೂ ಆತನ ನೀತಿಯನ್ನೂ ಹುಟ್ಟಲಿರುವ ಜನರಿಗೆ ತಿಳಿಸುವರು.
- Hosea 2:23 ಹೋಶೇಯ 2:23ತರುವಾಯ ಇಜ್ರೇಲನ್ನು ನನಗಾಗಿ ದೇಶದಲ್ಲಿ ಬಿತ್ತುವೆನು; ಕರುಣೆ ಹೊಂದ ದವಳ ಮೇಲೆಯೇ ನಾನು ಕರುಣೆಯನ್ನು ತೋರಿ ಸುವೆನು. ನನ್ನ ಜನವಲ್ಲದ್ದಕ್ಕೆ--ನೀನು ನನ್ನ ಜನ ವೆಂದು ಹೇಳುವೆನು; ಅವರು--ನನ್ನ ದೇವರೇ ಎಂದು ಭಜಿಸುವರು ಎಂದು ದೇವರಾದ ಕರ್ತನು ಹೇಳುತ್ತಾನೆ.