Matthew · chapter 13 · verse 42
Matthew 13:42 in Kannada
ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು.
Alli golaatavoo hallu kadiyonavoo iruvavu.
Matthew 13:42 in English
- King James Version (KJV)
- And shall cast them into a furnace of fire: there shall be wailing and gnashing of teeth.
- World English Bible (WEB)
- and will cast them into the furnace of fire. There will be weeping and gnashing of teeth.
- American Standard Version (ASV)
- and shall cast them into the furnace of fire: there shall be the weeping and the gnashing of teeth.
- Bible in Basic English (BBE)
- And will put them into the fire; there will be weeping and cries of sorrow.
- Darby Translation (DBY)
- and they shall cast them into the furnace of fire; there shall be the weeping and the gnashing of teeth.
- Webster's Bible (WBS)
- And shall cast them into a furnace of fire: there shall be wailing and gnashing of teeth.
- Young's Literal Translation (YLT)
- and shall cast them to the furnace of the fire; there shall be the weeping and the gnashing of the teeth.
Read in context
- 40ಹೇಗೆ ಹಣಜಿಯನ್ನು ಕೂಡಿಸಿ ಬೆಂಕಿಯಲ್ಲಿ ಸುಡು ವರೋ ಹಾಗೆಯೇ ಈ ಲೋಕಾಂತ್ಯದಲ್ಲಿ ಆಗುವದು.
- 41ಮನುಷ್ಯಕುಮಾರನು ತನ್ನ ದೂತರನ್ನು ಕಳುಹಿ ಸುವನು; ಅವರು ಆತಂಕ ಮಾಡುವ ಎಲ್ಲವುಗಳನ್ನೂ ದುಷ್ಟತನ ಮಾಡುವವರನ್ನೂ ಆತನ ರಾಜ್ಯದೊಳಗಿಂದ ಕೂಡಿಸಿ ಅವರನ್ನು ಬೆಂಕಿಯ ಆವಿಗೆಯಲ್ಲಿ ಹಾಕುವರು;
- 42ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು.
- 43ತರುವಾಯ ನೀತಿವಂತರು ತಮ್ಮ ತಂದೆಯ ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು. ಕೇಳುವದಕ್ಕೆ ಕಿವಿಗಳುಳ್ಳವನು ಕೇಳಲಿ.
- 44ಪರಲೋಕರಾಜ್ಯವು ಹೊಲದಲ್ಲಿ ಬಚ್ಚಿಟ್ಟಿದ ಸಂಪತ್ತಿಗೆ ಹೋಲಿಕೆಯಾಗಿದೆ; ಅದನ್ನು ಒಬ್ಬ ಮನು ಷ್ಯನು ಕಂಡುಕೊಂಡು ಬಚ್ಚಿಟ್ಟು ಅದರ ಸಂತೋಷದ ನಿಮಿತ್ತ ಹೊರಟುಹೋಗಿ ತನಗಿದ್ದದ್ದನ್ನೆಲ್ಲಾ ಮಾರಿ ಆ ಹೊಲವನ್ನು ಕೊಂಡುಕೊಳ್ಳುತ್ತಾನೆ.
Cross references
- Matthew 13:50 ಮತ್ತಾಯನು 13:50ಮತ್ತು ಅವರನ್ನು ಬೆಂಕಿಯ ಆವಿಗೆಯಲ್ಲಿ ಹಾಕುವರು; ಅಲ್ಲಿ ಗೋಳಾಟವೂ ಹಲ್ಲುಕಡಿಯೋಣವೂ ಇರುವವು ಎಂದು ಹೇಳಿದನು.
- Luke 16:23–24 ಲೂಕನು 16:23–24ಆಗ ಅವನು ಪಾತಾಳದೊಳಗೆ ಯಾತನೆಯಲ್ಲಿ ದ್ದವನಾಗಿ ತನ್ನ ಕಣ್ಣುಗಳನ್ನು ಮೇಲಕ್ಕೆತ್ತಿ ದೂರದಿಂದ ಅಬ್ರಹಾಮನನ್ನೂ ಅವನ ಎದೆಯಲ್ಲಿದ್ದ ಲಾಜರನನೂ ನೋಡಿದನು. ಅವನು--ತಂದೆಯಾದ ಅಬ್ರಹಾ ಮನೇ, ನನ್ನ ಮೇಲೆ ಕರುಣೆ ಇಟ್ಟು ಲಾಜರನು ತನ್ನ ತುದಿಬೆರಳನ್ನು ನೀರಲ್ಲಿ ಅದ್ದಿ ನನ್ನ ನಾಲಿಗೆಯನ್ನು ತಣ್ಣಗೆ ಮಾಡುವಂತೆ ಅವನನ್ನು ಕಳುಹಿಸು; ಯಾಕಂದರೆ ನಾನು ಈ ಉರಿಯಲ್ಲಿ ಯಾತನೆಪಡುತ್ತಾ ಇದ್ದೇನೆ ಎಂದು ಕೂಗಿ ಹೇಳಿದನು.
- Matthew 8:12 ಮತ್ತಾಯನು 8:12ಆದರೆ ರಾಜ್ಯದ ಮಕ್ಕಳು ಹೊರಗೆ ಕತ್ತಲೆಯಲ್ಲಿ ದೊಬ್ಬಲ್ಪಡುವರು; ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು.
- Revelation 20:14–15 ಪ್ರಕಟನೆ 20:14–15ಆಮೇಲೆ ಮೃತ್ಯುವೂ ನರಕವೂ ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟವು; ಇದೇ ಎರಡನೆಯ ಮರಣವು.ಯಾವನ ಹೆಸರು ಜೀವಗ್ರಂಥದಲ್ಲಿ ಬರೆದದ್ದಾಗಿ ಕಾಣಲಿಲ್ಲವೋ ಅವನು ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟನು. ಯಾವನ ಹೆಸರು ಜೀವಗ್ರಂಥದಲ್ಲಿ ಬರೆದದ್ದಾಗಿ ಕಾಣಲಿಲ್ಲವೋ ಅವನು ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟನು.
- Revelation 20:10 ಪ್ರಕಟನೆ 20:10ಇದಲ್ಲದೆ ಅವರನ್ನು ಮರುಳುಗೊಳಿಸಿದ ಸೈತಾನನು ಬೆಂಕಿ ಗಂಧಕಗಳುರಿಯುವ ಕೆರೆಯಲ್ಲಿ ದೊಬ್ಬಲ್ಪಟ್ಟನು; ಅಲ್ಲಿ ಮೃಗವೂ ಸುಳ್ಳು ಪ್ರವಾದಿಯೂ ಕೂಡ ಇದ್ದಾರೆ; ಅವರು ಹಗಲಿರುಳು ಯುಗಯುಗಾಂತರಗಳಲ್ಲಿಯೂ ಯಾತನೆಪಡುತ್ತಿರುವರು.
- Revelation 19:20 ಪ್ರಕಟನೆ 19:20ಆಗ ಮೃಗವು ಸೆರೆಸಿಕ್ಕಿತು; ಇದಲ್ಲದೆ ಮೃಗದ ಮುಂದೆ ಮಹತ್ಕಾರ್ಯಗಳನ್ನು ಮಾಡಿ ಮೃಗದ ಗುರುತು ಹಾಕಿಸಿಕೊಂಡವರನ್ನೂ ಅದರ ವಿಗ್ರಹವನ್ನು ಆರಾಧಿಸಿದವರನ್ನೂ ಮರುಳುಗೊಳಿಸಿದ ಆ ಸುಳ್ಳು ಪ್ರವಾದಿಯೂ ಆದರ ಜೊತೆಯಲ್ಲಿ ಸೆರೆ ಸಿಕ್ಕಿದನು. ಇವರಿಬ್ಬರೂ ಜೀವಸಹಿತವಾಗಿ ಗಂಧಕ ದಿಂದಮಿಕ್ಕಾದವರು ಆ ಕುದುರೆಯ ಮೇಲೆ ಕೂತಿದ್ದಾತನ ಕತ್ತಿಯಿಂದ ಅಂದರೆ ಆತನ ಬಾಯಿಂದ ಬಂದ ಕತ್ತಿ ಯಿಂದ ಹತರಾದರು; ಹಕ್ಕಿಗಳೆಲ್ಲಾ ಅವರ ಮಾಂಸವನು ಹೊಟ್ಟೆತುಂಬಾ ತಿಂದವು.
- Mark 9:43–49 ಮಾರ್ಕನು 9:43–49ನಿನ್ನ ಕೈ ನಿನಗೆ ಅಭ್ಯಂತರ ಮಾಡಿದರೆ ಅದನ್ನು ಕಡಿದುಹಾಕು; ಯಾಕಂದರೆ ಎರಡು ಕೈಗಳು ಳ್ಳವನಾಗಿ ಎಂದಿಗೂ ಆರದ ಬೆಂಕಿಯ ನರಕದೊಳಗೆ ಹೋಗುವದಕ್ಕಿಂತ ಅಂಗಹೀನನಾಗಿ ಜೀವದಲ್ಲಿ ಸೇರು ವದು ನಿನಗೆ ಒಳ್ಳೇದು; ಅಲ್ಲಿ ಅವರ ಹುಳವು ಸಾಯುವದಿಲ್ಲ ಮತ್ತು ಬೆಂಕಿಯು ಆರುವದಿಲ್ಲ. ನಿನ್ನ ಕಾಲು ನಿನಗೆ ಅಭ್ಯಂತರ ಮಾಡಿದರೆ ಅದನ್ನು ಕಡಿದು ಹಾಕು; ಯಾಕಂದರೆ ನೀನು ಎರಡು ಕಾಲುಗಳುಳ್ಳವ ನಾಗಿ ಎಂದಿಗೂ ಆರದ ಬೆಂಕಿಯ ನರಕದೊಳಗೆ ಹಾಕ ಲ್ಪಡುವದಕ್ಕಿಂತ ಕುಂಟನಾಗಿ ಜೀವದಲ್ಲಿ ಸೇರುವದು ನಿನಗೆ ಒಳ್ಳೇದು. ಅಲ್ಲಿ ಅವರ ಹುಳವು ಸಾಯುವ ದಿಲ್ಲ ಮತ್ತು ಬೆಂಕಿಯು ಆರುವದಿಲ್ಲ. ನಿನ್ನ ಕಣ್ಣು ನಿನಗೆ ಅಭ್ಯಂತರ ಮಾಡಿದರೆ ಅದನ್ನು ಕಿತ್ತುಬಿಡು; ಎರಡು ಕಣ್ಣುಗಳುಳ್ಳವನಾಗಿ ನರಕದ ಬೆಂಕಿಯಲ್ಲಿ ಹಾಕ ಲ್ಪಡುವದಕ್ಕಿಂತ ಒಂದು ಕಣ್ಣುಳ್ಳವನಾಗಿ ದೇವರ ರಾಜ್ಯ ದಲ್ಲಿ ಸೇರುವದು ನಿನಗೆ ಒಳ್ಳೇದು. ಅಲ್ಲಿ ಅವರ ಹುಳವು ಸಾಯುವದಿಲ್ಲ ಮತ್ತು ಬೆಂಕಿಯು ಆರುವದಿಲ್ಲ. ಯಾಕಂದರೆ ಪ್ರತಿಯೊಬ್ಬನಿಗೂ ಬೆಂಕಿಯಿಂದ ಸಾರವಾಗಬೇಕು; ಮತ್ತು ಪ್ರತಿಯೊಂದು ಯಜ್ಞಕ್ಕೆ ಉಪ್ಪಿ ನಿಂದ ಸಾರವಾಗಬೇಕು.ಉಪ್ಪು ಒಳ್ಳೆಯದು; ಆದರೆ ಉಪ್ಪು ತನ್ನ ಸಾರವನ್ನು ಕಳೆದುಕೊಂಡರೆ ಇನ್ನಾತರಿಂದ ನೀವು ಅದನ್ನು ರುಚಿಗೊಳಿಸುವಿರಿ? ನಿಮ್ಮೊಳಗೆ ಉಪ್ಪು ಇರಲಿ; ಮತ್ತು ಒಬ್ಬರ ಸಂಗಡಲೊಬ್ಬರು ಸಮಾಧಾನ ವಾಗಿರ್ರಿ ಅಂದನು.
- Psalm 21:9 ಕೀರ್ತನೆಗಳು 21:9ನೀನು ಕೋಪಿಸುವ ಕಾಲದಲ್ಲಿ ಅವರನ್ನು ಬೆಂಕಿಯ ಒಲೆಯ ಹಾಗೆ ಮಾಡುವಿ; ಕರ್ತನು ತನ್ನ ಕೋಪದಿಂದ ಅವರನ್ನು ನುಂಗಿಬಿಡುವನು; ಬೆಂಕಿಯು ಅವರನ್ನು ದಹಿಸಿ ಬಿಡು ವದು.
- Revelation 14:10 ಪ್ರಕಟನೆ 14:10ಅಂಥವನು ದೇವರ ಕೋಪವೆಂಬ ಪಾತ್ರೆ ಯಲ್ಲಿ ಏನೂ ಬೆರಸದೆ ಹಾಕಿದ ಆತನ ರೌದ್ರವೆಂಬ ದ್ರಾಕ್ಷಾರಸವನ್ನು ಕುಡಿಯುವನು. ಪರಿಶುದ್ಧ ದೂತರ ಮುಂದೆಯೂ ಕುರಿಮರಿಯಾದಾತನ ಮುಂದೆಯೂ ಬೆಂಕಿಯಿಂದ ಮತ್ತು ಗಂಧಕದಿಂದ ಯಾತನೆಪಡು ವನು.
- Daniel 3:6 ದಾನಿಯೇಲನು 3:6ಯಾವನು ಅಡ್ಡಬೀಳ ದೆಯೂ ನಮಸ್ಕರಿಸದೆಯೂ ಇರುವನೋ ಅವನು ಅದೇ ಗಳಿಗೆಯಲ್ಲಿ ಉರಿಯುವ ಬೆಂಕಿಯ ಆವಿಗೆಯ ಮಧ್ಯದಲ್ಲಿ ಹಾಕಲ್ಪಡುವನು ಅಂದನು.
- Matthew 22:13 ಮತ್ತಾಯನು 22:13ತರುವಾಯ ಅರಸನು ಸೇವಕರಿಗೆ--ಅವನ ಕೈ ಕಾಲುಗಳನ್ನು ಕಟ್ಟಿ ತಕ್ಕೊಂಡು ಹೋಗಿ ಹೊರಗೆ ಕತ್ತಲೆಯಲ್ಲಿ ಹಾಕಿರಿ; ಅಲ್ಲಿ ಗೋಳಾಟವೂ ಹಲ್ಲುಕಡಿಯೋಣವೂ ಇರುವವು.
- Daniel 3:21–22 ದಾನಿಯೇಲನು 3:21–22ಅವರು ತಮ್ಮ ಶಲ್ಯ, ಇಜಾರು, ಮುಂಡಾಸ ಮೊದಲಾದವುಗಳನ್ನು ಧರಿಸಿಕೊಂಡವರಾಗಿರುವಾಗ ಅವರು ಧಗಧಗನೆ ಉರಿಯುವ ಬೆಂಕಿಯ ಆವಿಗೆಯಲ್ಲಿ ಹಾಕಲ್ಪಟ್ಟರು. ಅರಸನ ಆಜ್ಞೆಯು ತೀಕ್ಷ್ಣವಾಗಿಯೂ ಆವಿಗೆಯು ಧಗಧಗನೆ ಉರಿದದ್ದರಿಂದಲೂ ಬೆಂಕಿಯ ಜ್ವಾಲೆಯು ಶದ್ರಕ್ ಮೇಷಕ್ ಅಬೇದ್ನೆಗೋ ಎಂಬವರನ್ನು ಎತ್ತಿಹಾಕಿದ ಆ ಮನುಷ್ಯರನ್ನೇ ಸಂಹರಿಸಿತು.