Matthew · chapter 16 · verse 19
Matthew 16:19 in Kannada
ನಾನು ನಿನಗೆ ಪರಲೋಕ ರಾಜ್ಯದ ಬೀಗದ ಕೈಗಳನ್ನು ಕೊಡುತ್ತೇನೆ; ನೀನು ಯಾವದನ್ನು ಭೂಮಿಯ ಮೇಲೆ ಕಟ್ಟುತ್ತೀಯೋ ಅದು ಪರಲೋಕದಲ್ಲಿಯೂ ಕಟ್ಟಲ್ಪಡುವದು; ನೀನು ಯಾವ ದನ್ನು ಭೂಮಿಯ ಮೇಲೆ ಬಿಚ್ಚುತ್ತೀಯೋ ಅದು ಪರಲೋಕದಲ್ಲಿಯೂ ಬಿಚ್ಚಲ್ಪಡುವದು ಅಂದನು.
Naanu ninage paraloka raajyada beegada kaigalannu koduttene; neenu yaavadannu bhoomiya mele kattutteeyo adu paralokadalliyoo kattalpaduvadu; neenu yaava dannu bhoomiya mele bichchutteeyo adu paralokadalliyoo bichchalpaduvadu andanu.
Matthew 16:19 in English
- King James Version (KJV)
- And I will give unto thee the keys of the kingdom of heaven: and whatsoever thou shalt bind on earth shall be bound in heaven: and whatsoever thou shalt loose on earth shall be loosed in heaven.
- World English Bible (WEB)
- I will give to you the keys of the Kingdom of Heaven, and whatever you bind on earth will have been bound in heaven; and whatever you release on earth will have been released in heaven.”
- American Standard Version (ASV)
- I will give unto thee the keys of the kingdom of heaven: and whatsoever thou shalt bind on earth shall be bound in heaven; and whatsoever thou shalt loose on earth shall be loosed in heaven.
- Bible in Basic English (BBE)
- I will give to you the keys of the kingdom of heaven: and whatever is fixed by you on earth will be fixed in heaven: and whatever you make free on earth will be made free in heaven.
- Darby Translation (DBY)
- And I will give to thee the keys of the kingdom of the heavens; and whatsoever thou mayest bind upon the earth shall be bound in the heavens; and whatsoever thou mayest loose on the earth shall be loosed in the heavens.
- Webster's Bible (WBS)
- And I will give to thee the keys of the kingdom of heaven: and whatever thou shalt bind on earth, shall be bound in heaven; and whatever thou shalt loose on earth, shall be loosed in heaven.
- Young's Literal Translation (YLT)
- and I will give to thee the keys of the reign of the heavens, and whatever thou mayest bind upon the earth shall be having been bound in the heavens, and whatever thou mayest loose upon the earth shall be having been loosed in the heavens.'
Read in context
- 17ಆಗ ಯೇಸು ಪ್ರತ್ಯುತ್ತರವಾಗಿ ಅವನಿಗೆ--ಯೋನನ ಮಗನಾದ ಸೀಮೋನನೇ, ನೀನು ಧನ್ಯನು; ಯಾಕಂದರೆ ರಕ್ತಮಾಂಸವಲ್ಲ (ಮನುಷ್ಯರಲ್ಲ), ಪರಲೋಕದಲ್ಲಿರುವ ನನ್ನ ತಂದೆಯೇ ಅದನ್ನು ನಿನಗೆ ಪ್ರಕಟಿಸಿದನು ಎಂದು ಹೇಳಿದನು.
- 18ನಾನು ಸಹ ನಿನಗೆ ಹೇಳುವದೇ ನಂದರೆ--ನೀನು ಪೇತ್ರನು, ಈ ಬಂಡೆಯ ಮೇಲೆ ನಾನು ನನ್ನ ಸಭೆಯನ್ನು ಕಟ್ಟುವೆನು; ನರಕದ ದ್ವಾರಗಳು ಅದನ್ನು ಜಯಿಸಲಾರವು.
- 19ನಾನು ನಿನಗೆ ಪರಲೋಕ ರಾಜ್ಯದ ಬೀಗದ ಕೈಗಳನ್ನು ಕೊಡುತ್ತೇನೆ; ನೀನು ಯಾವದನ್ನು ಭೂಮಿಯ ಮೇಲೆ ಕಟ್ಟುತ್ತೀಯೋ ಅದು ಪರಲೋಕದಲ್ಲಿಯೂ ಕಟ್ಟಲ್ಪಡುವದು; ನೀನು ಯಾವ ದನ್ನು ಭೂಮಿಯ ಮೇಲೆ ಬಿಚ್ಚುತ್ತೀಯೋ ಅದು ಪರಲೋಕದಲ್ಲಿಯೂ ಬಿಚ್ಚಲ್ಪಡುವದು ಅಂದನು.
- 20ತರುವಾಯ ತಾನು ಕ್ರಿಸ್ತನಾಗಿರುವ ಯೇಸು ಎಂದು ಯಾರಿಗೂ ಹೇಳಬಾರದು ಎಂಬದಾಗಿ ತನ್ನ ಶಿಷ್ಯರಿಗೆ ಆಜ್ಞಾಪಿಸಿದನು.
- 21ತಾನು ಯೆರೂಸಲೇಮಿಗೆ ಹೋಗಿ ಹೇಗೆ ಹಿರಿಯರಿಂದಲೂ ಪ್ರಧಾನ ಯಾಜಕರಿಂದಲೂ ಶಾಸ್ತ್ರಿಗಳಿಂದಲೂ ಬಹು ಶ್ರಮೆಗಳನ್ನು ಅನುಭವಿಸಿ ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ತಿರಿಗಿ ಎದ್ದು ಬರುವದು ಅವಶ್ಯವಾಗಿದೆ ಎಂದು ಯೇಸು ಅಂದಿನಿಂದ ತನ್ನ ಶಿಷ್ಯರಿಗೆ ತಿಳಿಸಲಾರಂಭಿಸಿದನು.
Cross references
- Matthew 18:18 ಮತ್ತಾಯನು 18:18ನಾನು ನಿಮಗೆ ನಿಜವಾಗಿ ಹೇಳುವದೇನಂ ದರೆ--ನೀವು ಭೂಮಿಯ ಮೇಲೆ ಯಾವದನ್ನು ಕಟ್ಟುತ್ತೀರೋ ಅದು ಪರಲೋಕದಲ್ಲಿಯೂ ಕಟ್ಟಲ್ಪಡು ವದು. ಮತ್ತು ನೀವು ಭೂಮಿಯ ಮೇಲೆ ಯಾವದನ್ನು ಬಿಚ್ಚುತ್ತೀರೋ ಅದು ಪರಲೋಕದಲ್ಲಿಯೂ ಬಿಚ್ಚಲ್ಪ ಡುವದು.
- Isaiah 22:22 ಯೆಶಾಯ 22:22ದಾವೀದನ ಮನೆಯ ಬೀಗ ದ ಕೈಯನ್ನು ಅವನ ಹೆಗಲ ಮೇಲೆ ನಾನು ಹಾಕುವೆನು; ಅವನು ತೆರೆದರೆ ಯಾರು ಮುಚ್ಚರು ಮುಚ್ಚಿದರೆ ಯಾರು ತೆರೆಯರು.
- Revelation 1:18 ಪ್ರಕಟನೆ 1:18ಸತ್ತವನಾದೆನು,ಈಗ ಬದುಕುವವನಾಗಿದ್ದೇನೆ. ಇಗೋ, ನಾನು ಎಂದೆಂ ದಿಗೂ ಬದುಕುವವನಾಗಿದ್ದೇನೆ. ಆಮೆನ್. ನರಕದ ಮತ್ತು ಮರಣದ ಬೀಗದ ಕೈಗಳೂ ನನ್ನಲ್ಲಿ ಅವೆ.
- John 20:23 ಯೋಹಾನನು 20:23ನೀವು ಯಾರ ಪಾಪಗಳನ್ನು ಕ್ಷಮಿಸುತ್ತೀರೋ ಅವು ಅವರಿಗೆ ಕ್ಷಮಿಸಲ್ಪಡುವವು; ಯಾರ ಪಾಪಗಳನ್ನು ನೀವು ಉಳಿ ಸುತ್ತೀರೋ ಅವು ಅವರಿಗೆ ಉಳಿಯುತ್ತವೆ ಎಂದು ಹೇಳಿದನು.
- Revelation 3:7 ಪ್ರಕಟನೆ 3:7ಫಿಲದೆಲ್ಫಿಯದಲ್ಲಿರುವ ಸಭೆಯ ದೂತನಿಗೆ ಬರೆ: ಪರಿಶುದ್ಧನೂ ಸತ್ಯವಂತನೂ ದಾವೀದನ ಬೀಗದ ಕೈಯುಳ್ಳವನೂ ಯಾರೂ ಮುಚ್ಚಕೂಡದಂತೆ ತೆರೆಯು ವಾತನೂ ಯಾರು ತೆರೆಯದಂತೆ ಮುಚ್ಚುವಾತನೂ ಆಗಿರುವವನು ಹೇಳುವಂಥವುಗಳೇನಂದರೆ,
- 2 Corinthians 2:10 2 ಕೊರಿಂಥದವರಿಗೆ 2:10ನೀವು ಯಾರಿಗೆ ಯಾವದನ್ನು ಮನ್ನಿಸುತ್ತೀರೋ ನಾನು ಸಹ ಮನ್ನಿಸುತ್ತೇನೆ; ನಾನು ಯಾವದನ್ನಾದರೂ ಮನ್ನಿಸಿದ್ದರೆ ಕ್ರಿಸ್ತನ ಸನ್ನಿಧಾನದಲ್ಲಿ ನಿಮ್ಮ ನಿಮಿತ್ತವೇ ಮನ್ನಿಸಿದೆನು.
- Revelation 11:6 ಪ್ರಕಟನೆ 11:6ಅವರ ಪ್ರವಾದನೆಯ ದಿನ ಗಳಲ್ಲಿ ಮಳೆಬೀಳದಂತೆ ಆಕಾಶವನ್ನು ಮುಚ್ಚುವ ಅಧಿಕಾರ ಇವರಿಗೆ ಉಂಟು. ಇದಲ್ಲದೆ ಇವರಿಗೆ ಇಷ್ಟ ಬಂದಾಗೆಲ್ಲಾ ನೀರು ರಕ್ತವಾಗುವಂತೆ ಮಾಡುವದಕ್ಕೂ ಸಕಲ ವಿಧವಾದ ಉಪದ್ರವಗಳಿಂದ ಭೂಮಿಯನ್ನು ಹೊಡೆಯುವದಕ್ಕೂ ಅಧಿಕಾರ ಉಂಟು.
- 1 Corinthians 5:4–5 1 ಕೊರಿಂಥದವರಿಗೆ 5:4–5ನೀವೂ ನನ್ನಾತ್ಮವೂ ಕರ್ತನಾದ ಯೇಸುವಿನ ಸಾಮರ್ಥ್ಯ ಸಹಿತ ಒಟ್ಟುಗೂಡಿ ಬಂದಿರಲಾಗಿ ಕರ್ತನಾದ ಯೇಸುಕ್ರಿಸ್ತನ ಪ್ರತ್ಯಕ್ಷತೆಯ ದಿನದಲ್ಲಿ ಅಂಥವನ ಆತ್ಮವು ರಕ್ಷಣೆ ಹೊಂದುವದಕ್ಕಾಗಿ ಅವನ ಶರೀರವು ನಾಶವಾಗ ಬೇಕೆಂದು ನಮ್ಮ ಕರ್ತನಾದ ಯೇಸುವಿನ ಹೆಸರಿನಲ್ಲಿ ಅವನನ್ನು ಸೈತಾನನಿಗೆ ಒಪ್ಪಿಸಿಕೊಡಬೇಕೆಂಬದೇ.
- 1 Thessalonians 4:8 1 ಥೆಸಲೊನೀಕದವರಿಗೆ 4:8ಹೀಗಿರಲು ತಾತ್ಸಾರ ಮಾಡು ವವನು ಮನುಷ್ಯನನ್ನಲ್ಲ, ತನ್ನ ಪರಿಶುದ್ಧಾತ್ಮನನ್ನು ನಮಗೆ ದಯಪಾಲಿಸಿರುವ ದೇವರನ್ನೇ ತಾತ್ಸಾರ ಮಾಡುತ್ತಾನೆ.
- Revelation 9:1 ಪ್ರಕಟನೆ 9:1ಐದನೆಯ ದೂತನು ಊದಿದಾಗ ಆಕಾಶದಿಂದ ಭೂಮಿಗೆ ಬಿದ್ದ ಒಂದು ನಕ್ಷತ್ರವನ್ನು ಕಂಡೆನು. ಅವನಿಗೆ ತಳವಿಲ್ಲದ ತಗ್ಗಿನ ಬೀಗದ ಕೈ ಕೊಡಲ್ಪಟ್ಟಿತು.
- Acts 10:34–43 ಅಪೊಸ್ತಲರ ಕೃತ್ಯಗಳು 10:34–43ಆಗ ಪೇತ್ರನು ತನ್ನ ಬಾಯಿ ತೆರೆದು ಹೇಳಿದ್ದೇನಂದರೆ--ನಿಜವಾಗಿಯೂ ದೇವರು ಪಕ್ಷಪಾತಿ ಅಲ್ಲವೆಂದು ನಾನು ತಿಳಿದಿದ್ದೇನೆ. ಆದರೆ ಪ್ರತಿ ಯೊಂದು ಜನಾಂಗದವರಲ್ಲಿ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವನು ಆತನಿಗೆ ಮೆಚ್ಚಿಕೆಯಾ ಗಿದ್ದಾನೆ. ಯೇಸು ಕ್ರಿಸ್ತನ ಮೂಲಕ ದೇವರು ಸಮಾಧಾನವನ್ನು ಪ್ರಕಟಿಸುತ್ತಾ ಇಸ್ರಾಯೇಲ್ ಜನರಿಗೆ ವಾಕ್ಯವನ್ನು ಅನುಗ್ರಹಿಸಿದ್ದಾನೆ; (ಆತನು ಎಲ್ಲರಿಗೂ ಕರ್ತನಾಗಿದ್ದಾನೆ.) ಯೋಹಾನನು ಸಾರಿದ ಬಾಪ್ತಿಸ್ಮದ ತರುವಾಯ ಆ ವಾಕ್ಯವು ಗಲಿಲಾಯದಿಂದ ಪ್ರಾರಂಭವಾಗಿ ಯೂದಾಯದಲ್ಲೆಲ್ಲಾ ಪ್ರಬಲವಾಯಿ ತೆಂಬದನ್ನೂ ದೇವರು ನಜರೇತಿನ ಯೇಸುವನ್ನು ಪವಿತ್ರಾತ್ಮನಿಂದಲೂ ಬಲದಿಂದಲೂ ಅಭಿಷೇಕಿಸಿದ ನೆಂಬದನ್ನೂ ಹೇಗೆ ಆತನು ಒಳ್ಳೇದನ್ನು ಮಾಡುತ್ತಾ ಸೈತಾನನಿಂದ ಬಾಧಿಸಲ್ಪಡುತ್ತಿರುವವರೆಲ್ಲರನ್ನು ಗುಣ ಮಾಡುತ್ತಾ ಸಂಚರಿಸಿದನೆಂಬದನ್ನು ನೀವು ತಿಳಿದಿದ್ದೀರಿ; ಯಾಕಂದರೆ ದೇವರು ಆತನ ಸಂಗಡ ಇದ್ದನು. ಆತನು ಯೆಹೂದ್ಯರ ಸೀಮೆಯಲ್ಲಿಯೂ ಯೆರೂಸ ಲೇಮಿನಲ್ಲಿಯೂ ಮಾಡಿದ ಎಲ್ಲಾ ಕಾರ್ಯಗಳಿಗೆ ನಾವು ಸಾಕ್ಷಿಗಳಾಗಿದ್ದೇವೆ; ಅವರು ಆತನನ್ನು ಮರದ ಮೇಲೆ ತೂಗಹಾಕಿಕೊಂದರು; ದೇವರು ಆತನನ್ನು ಮೂರನೆಯ ದಿನದಲ್ಲಿ ಎಬ್ಬಿಸಿ ಬಹಿರಂಗವಾಗಿ ತೋರ್ಪಡಿಸಿದನು. ದೇವರು ಎಲ್ಲರಿಗೆ ತೋರ್ಪಡಿ ಸದೆ ಆತನು ಮುಂಚಿತವಾಗಿ ಆರಿಸಿಕೊಂಡಿದ್ದ ಸಾಕ್ಷಿಗಳಾಗಿರುವ ನಮಗೆ ಆತನನ್ನು ತೋರ್ಪಡಿಸಿ ದನು. ಆತನು ಸತ್ತವರೊಳಗಿಂದ ಎದ್ದು ಬಂದ ಮೇಲೆ ನಾವು ಆತನ ಸಂಗಡ ತಿಂದು ಕುಡಿದೆವು. ಆತನೇ ಜೀವಿತರಿಗೂ ಸತ್ತವರಿಗೂ ನ್ಯಾಯಾಧಿಪತಿಯಾಗಿ ದೇವರಿಂದ ನೇಮಕವಾದವನೆಂಬದನ್ನು ಜನರಿಗೆ ಸಾರಿ ಸಾಕ್ಷಿ ಹೇಳಬೇಕೆಂದು ದೇವರು ನಮಗೆ ಅಪ್ಪಣೆಕೊಟ್ಟನು. ಆತನ ಹೆಸರಿನಲ್ಲಿ ನಂಬಿಕೆಯಿ ಡುವ ಪ್ರತಿಯೊಬ್ಬನು ಆತನಲ್ಲಿ ಪಾಪ ಪರಿಹಾರವನ್ನು ಹೊಂದುವನೆಂದು ಆತನ ವಿಷಯದಲ್ಲಿ ಪ್ರವಾದಿ ಗಳೆಲ್ಲರು ಸಾಕ್ಷಿಕೊಡುತ್ತಾರೆ ಅಂದನು.
- Acts 2:14–42 ಅಪೊಸ್ತಲರ ಕೃತ್ಯಗಳು 2:14–42ಆದರೆ ಪೇತ್ರನು ಹನ್ನೊಂದು ಮಂದಿಯೊಂದಿಗೆ ಎದ್ದು ನಿಂತು ಗಟ್ಟಿಯಾದ ಸ್ವರದಿಂದ ಅವರಿಗೆ-- ಯೂದಾಯದವರೇ, ಯೆರೂಸಲೇಮಿನಲ್ಲಿ ವಾಸ ವಾಗಿರುವ ಎಲ್ಲಾ ಜನರೇ, ಈ ವಿಷಯ ನಿಮಗೆ ಗೊತ್ತಾಗುವ ಹಾಗೆ ನನ್ನ ಮಾತುಗಳಿಗೆ ಕಿವಿಗೊಡಿರಿ. ನೀವು ಭಾವಿಸಿದಂತೆ ಇವರು ಕುಡಿದು ಅಮಲೇರಿ ದವರಲ್ಲ; ಯಾಕಂದರೆ ಈಗ ಹಗಲು ಮೂರು (ಒಂಭತ್ತು) ಗಂಟೆಯಾಗಿದೆಯಷ್ಟೆ. ಆದರೆ ಇದು ಪ್ರವಾದಿಯಾದ ಯೋವೇಲನಿಂದ ಹೇಳಲ್ಪಟ್ಟದ್ದಾಗಿದೆ. ಅದೇನಂದರೆ-- ಕಡೇ ದಿವಸಗಳಲ್ಲಿ ನಾನು ಎಲ್ಲಾ ಮನುಷ್ಯರ ಮೇಲೆ ನನ್ನ ಆತ್ಮವನ್ನು ಸುರಿಸುವೆನು; ನಿಮ್ಮ ಕುಮಾರರೂ ಕುಮಾರ್ತೆಯರೂ ಪ್ರವಾದಿಸು ವರು; ಇದಲ್ಲದೆ ನಿಮ್ಮ ಯೌವನಸ್ಥರಿಗೆ ದರ್ಶನಗಳಾ ಗುವವು; ನಿಮ್ಮ ವೃದ್ಧರಿಗೆ ಕನಸುಗಳು ಬೀಳುವವು ಎಂದು ದೇವರು ಹೇಳುತ್ತಾನೆ. ಇದಲ್ಲದೆ ಆ ದಿನಗಳಲ್ಲಿ ನನ್ನ ಸೇವಕ ಸೇವಕಿಯರ ಮೇಲೆಯೂ ನನ್ನ ಆತ್ಮವನ್ನು ಸುರಿಸುವೆನು; ಅವರೂ ಪ್ರವಾದಿಸು ವರು; ಮೇಲೆ ಆಕಾಶದಲ್ಲಿ ಅದ್ಭುತಕಾರ್ಯಗಳನೂ ಕೆಳಗೆ ಭೂಮಿಯ ಮೇಲೆ ಸೂಚಕ ಕಾರ್ಯಗಳನ್ನೂ ನಾನು ತೋರಿಸುವೆನು. ಇದಲ್ಲದೆ ರಕ್ತ, ಬೆಂಕಿ ಮತ್ತು ಹೊಗೆಯ ಹಬೆಯು ಉಂಟಾಗುವವು. ಕರ್ತನ ಗಂಭೀರವಾದ ಆ ಮಹಾದಿನವು ಬರುವ ಮುಂಚೆ ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತವಾಗು ವನು. ಆಗ ಕರ್ತನ ನಾಮವನ್ನು ಹೇಳಿಕೊಳ್ಳು ವವರೆಲ್ಲರೂ ರಕ್ಷಣೆ ಹೊಂದುವರು ಎಂದು ದೇವರು ಹೇಳುತ್ತಾನೆ ಎಂಬದೇ. ಇಸ್ರಾಯೇಲ್ ಜನರೇ, ಈ ಮಾತುಗಳನ್ನು ಕೇಳಿರಿ; ನಿಮಗೂ ತಿಳಿದಿರುವಂತೆ ನಜರೇತಿನ ಯೇಸುವು ದೇವರಿಗೆ ಮೆಚ್ಚಿಕೆಯಾದ ನೆಂಬದಕ್ಕೆ ದೇವರು ಆತನಿಂದ ಮಹತ್ಕಾರ್ಯ ಗಳನ್ನೂ ಅದ್ಭುತಕಾರ್ಯಗಳನ್ನೂ ಸೂಚಕಕಾರ್ಯ ಗಳನ್ನೂ ನಿಮ್ಮ ಮಧ್ಯದಲ್ಲಿ ನಡಿಸಿದನು. ಆದರೆ ದೇವರ ಸ್ಥಿರಸಂಕಲ್ಪಕ್ಕನುಸಾರವಾಗಿಯೂ ಭವಿಷ್ಯದ್ ಜ್ಞಾನಕ್ಕನುಸಾರವಾಗಿಯೂ ಆತನು ಒಪ್ಪಿಸಲ್ಪಟ್ಟಾಗ ನೀವು ಆತನನ್ನು ಹಿಡಿದು ದುಷ್ಟರ ಕೈಗಳಿಂದ ಶಿಲುಬೆಗೆ ಹಾಕಿಸಿಕೊಂದಿರಿ. ದೇವರು ಆತನನ್ನು ಮರಣ ವೇದನೆಗಳಿಂದ ಬಿಡಿಸಿ ಎಬ್ಬಿಸಿದನು. ಯಾಕಂದರೆ ಮರಣವು ಆತನನ್ನು ಹಿಡಿದುಕೊಂಡಿರುವದು ಅಸಾಧ್ಯ ವಾಗಿತ್ತು. ದಾವೀದನು ಆತನ ವಿಷಯವಾಗಿ-- ನಾನು ಕರ್ತನನ್ನು ನನ್ನ ಎದುರಿನಲ್ಲಿ ಯಾವಾಗಲೂ ನೋಡುತ್ತಿದ್ದೆನು; ನಾನು ಕದಲದಂತೆ ಆತನು ನನ್ನ ಬಲಗಡೆಯಲ್ಲಿಯೇ ಇದ್ದಾನೆ. ಆದದರಿಂದ ನನ್ನ ಹೃದಯವು ಹರ್ಷಿಸಿತು, ನನ್ನ ನಾಲಿಗೆಯು ಉಲ್ಲಾಸ ಗೊಂಡಿತು; ಇದಲ್ಲದೆ ನನ್ನ ಶರೀರವು ಸಹ ನಿರೀಕ್ಷೆಯಲ್ಲಿ ನೆಲೆಯಾಗಿರುವದು; ಯಾಕಂ ದರೆ--ನೀನು ನನ್ನ ಆತ್ಮವನ್ನು ಪಾತಾಳದಲ್ಲಿ ಬಿಡುವ ದಿಲ್ಲ. ನಿನ್ನ ಪರಿಶುದ್ಧನಿಗೆ ಕೊಳೆಯುವ ಅವಸ್ಥೆಯನ್ನು ನೋಡಗೊಡಿಸುವದಿಲ್ಲ. ನೀನು ಜೀವಮಾರ್ಗ ಗಳನ್ನು ನನಗೆ ತಿಳಿಯಪಡಿಸಿದ್ದೀ; ನಿನ್ನ ಸಮ್ಮುಖದಲ್ಲಿ ನನ್ನನ್ನು ಆನಂದಭರಿತನಾಗ ಮಾಡುವಿ ಎಂದು ಹೇಳು ತ್ತಾನೆ. ಜನರೇ, ಸಹೋದರರೇ, ಮೂಲಪಿತೃವಾದ ದಾವೀದನ ವಿಷಯವಾಗಿ ನಿಮ್ಮೊಂದಿಗೆ ಧಾರಾಳವಾಗಿ ಮಾತನಾಡುತ್ತೇನೆ. ಅವನು ಸತ್ತು ಹೂಣಲ್ಪಟ್ಟನು, ಅವನ ಸಮಾಧಿ ಈ ದಿನದ ವರೆಗೂ ನಮ್ಮಲ್ಲಿದೆ. ದಾವೀದನು ಪ್ರವಾದಿಯಾಗಿದ್ದದರಿಂದ ಶರೀರದ ಪ್ರಕಾರ ತನ್ನ ಸಂತಾನದವರಲ್ಲಿ ದೇವರು ಕ್ರಿಸ್ತನನ್ನು ಎಬ್ಬಿಸಿ ತನ್ನ ಸಿಂಹಾಸನದ ಮೇಲೆ ಕೂತುಕೊಳ್ಳುವಂತೆ ಮಾಡುವನೆಂದು ಆಣೆಯಿಟ್ಟು ಪ್ರಮಾಣ ಪೂರ್ವಕ ವಾಗಿ ತನಗೆ ಹೇಳಿದ್ದನ್ನು ಅವನು ಬಲ್ಲವನಾಗಿದ್ದನು. ಆತನ ಆತ್ಮವು ಪಾತಾಳದಲ್ಲಿ ಬಿಡಲ್ಪಡಲಿಲ್ಲ ವೆಂತಲೂ ಆತನ ಶರೀರವು ಕೊಳೆಯಲಿಲ್ಲವೆಂತಲೂ ಕ್ರಿಸ್ತನ ಪುನರುತ್ಥಾನದ ವಿಷಯವಾಗಿ ಅವನು ಇದನ್ನು ಮುಂದಾಗಿ ನೋಡಿ ಹೇಳಿದನು; ಈ ಯೇಸುವನ್ನೇ ದೇವರು ಎಬ್ಬಿಸಿದನು. ಇದಕ್ಕೆ ನಾವೆಲ್ಲರೂ ಸಾಕ್ಷಿ ಗಳಾಗಿದ್ದೇವೆ. ದೇವರ ಬಲಗೈಯಿಂದ ಆತನು ಉನ್ನತ ಸ್ಥಾನಕ್ಕೆ ಏರಿಸಲ್ಪಟ್ಟು ತಂದೆಯಿಂದ ಪವಿತ್ರಾತ್ಮನ ವಾಗ್ದಾನವನ್ನು ಹೊಂದಿ ನೀವು ಈಗ ನೋಡಿ ಕೇಳುವದನ್ನು ಆತನು ಸುರಿಸಿದ್ದಾನೆ. ಯಾಕಂದರೆ ದಾವೀದನು ಆಕಾಶಗಳಿಗೆ ಏರಿಹೋಗಲಿಲ್ಲ; ಆದರೆ ಕರ್ತನು ನನ್ನ ಕರ್ತನಿಗೆ-- ನಾನು ನಿನ್ನ ವಿರೋಧಿ ಗಳನ್ನು ನಿನ್ನ ಪಾದಪೀಠವಾಗಿ ಮಾಡುವ ತನಕ ನೀನು ನನ್ನ ಬಲಗಡೆಯಲ್ಲಿ ಕೂತುಕೊಂಡಿರು ಎಂದು ತಾನೇ ಹೇಳುತ್ತಾನೆ. ಆದದರಿಂದ ನೀವು ಶಿಲುಬೆಗೆ ಹಾಕಿದ ಈ ಯೇಸುವನ್ನೇ ದೇವರು ಕರ್ತನನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆಂದು ಇಸ್ರಾಯೇಲ್ ಮನೆತನದವರೆಲ್ಲರಿಗೂ ನಿಶ್ಚಯವಾಗಿ ತಿಳಿದಿರಲಿ ಎಂದು ಹೇಳಿದನು. ಅವರು ಇದನ್ನು ಕೇಳಿ ತಮ್ಮ ಹೃದಯದಲ್ಲಿ ತಿವಿಯಲ್ಪಟ್ಟವರಾಗಿ ಪೇತ್ರನಿಗೂ ಉಳಿದ ಅಪೊಸ್ತಲರಿಗೂ--ಜನರೇ, ಸಹೋದರರೇ, ನಾವು ಏನು ಮಾಡಬೇಕು ಎಂದು ಕೇಳಿದರು. ಆಗ ಪೇತ್ರನು ಅವರಿಗೆ--ನೀವು ಮಾನಸಾಂತರಪಟ್ಟು ಪಾಪಗಳ ಪರಿಹಾರಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬನು ಯೇಸು ಕ್ರಿಸ್ತನ ಹೆಸರಿನಲ್ಲಿ ಬಾಪ್ತಿಸ್ಮ ಮಾಡಿಸಿಕೊಳ್ಳಿರಿ; ಆಗ ನೀವು ಪವಿತ್ರಾತ್ಮನ ದಾನವನ್ನು ಹೊಂದುವಿರಿ. ಯಾಕಂದರೆ ಆ ವಾಗ್ದಾನವು ನಿಮಗೂ ನಿಮ್ಮ ಮಕ್ಕಳಿಗೂ ದೂರವಾಗಿರುವವರೆಲ್ಲರಿಗೂ ಅಂತೂ ನಮ್ಮ ದೇವರಾದ ಕರ್ತನು ಕರೆಯುವವರೆಲ್ಲರಿಗೂ ಮಾಡಿಯದೆ ಎಂದು ಹೇಳಿದನು. ಅವನು ಇನ್ನೂ ಬೇರೆ ಅನೇಕ ಮಾತುಗಳಿಂದ ಸಾಕ್ಷಿಕೊಟ್ಟು--ಈ ಮೂರ್ಖ ಸಂತತಿಯವರಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿರಿ ಎಂದು ಎಚ್ಚರಿಸಿ ಹೇಳಿದನು. ಆಗ ಅವನ ಮಾತನ್ನು ಸಂತೋಷವಾಗಿ ಅಂಗೀಕರಿಸಿದವರು ಬಾಪ್ತಿಸ್ಮ ಮಾಡಿಸಿಕೊಂಡರು. ಅದೇ ದಿನದಲ್ಲಿ ಸುಮಾರು ಮೂರು ಸಾವಿರ ಜನರು ಅವರೊಂದಿಗೆ ಸೇರಿಸಲ್ಪಟ್ಟರು. ಅವರು ಅಪೊಸ್ತಲರ ಬೋಧನೆ ಯಲ್ಲಿಯೂ ಅನ್ಯೋನ್ಯತೆಯಲ್ಲಿಯೂ ರೊಟ್ಟಿ ಮುರಿ ಯುವದರಲ್ಲಿಯೂ ಪ್ರಾರ್ಥನೆಗಳಲ್ಲಿಯೂ ನಿರತರಾಗಿ ಸ್ಥಿರಚಿತ್ತರಾಗಿದ್ದರು.