Matthew · chapter 18 · verse 10
Matthew 18:10 in Kannada
ಚಿಕ್ಕವರಲ್ಲಿ ಒಬ್ಬನನ್ನಾದರೂ ನೀವು ತಾತ್ಸಾರ ಮಾಡದಂತೆ ನೋಡಿಕೊಳ್ಳಿರಿ; ಯಾಕಂದರೆ ನಾನು ನಿಮಗೆ ಹೇಳುವದೇನಂದರೆ--ಪರಲೋಕದಲ್ಲಿ ಅವರ ದೂತರು ಪರಲೋಕದಲ್ಲಿರುವ ನನ್ನ ತಂದೆಯ ಮುಖವನ್ನು ಯಾವಾಗಲೂ ನೋಡುತ್ತಾರೆ.
Chikkavaralli obbanannaadaroo neevu taatsaara maadadante nodikolliri; yaakandare naanu nimage heluvadenandare--paralokadalli avara dootaru paralokadalliruva nanna tandeya mukhavannu yaavaagaloo noduttaare.
Matthew 18:10 in English
- King James Version (KJV)
- Take heed that ye despise not one of these little ones; for I say unto you, That in heaven their angels do always behold the face of my Father which is in heaven.
- World English Bible (WEB)
- See that you don’t despise one of these little ones, for I tell you that in heaven their angels always see the face of my Father who is in heaven.
- American Standard Version (ASV)
- See that ye despise not one of these little ones: for I say unto you, that in heaven their angels do always behold the face of my Father who is in heaven.
- Bible in Basic English (BBE)
- Let it not seem to you that one of these little ones is of no value; for I say to you that in heaven their angels see at all times the face of my Father in heaven.
- Darby Translation (DBY)
- See that ye do not despise one of these little ones; for I say unto you that their angels in [the] heavens continually behold the face of my Father who is in [the] heavens.
- Webster's Bible (WBS)
- Take heed that ye despise not one of these little ones: for I say to you, that in heaven their angels do always behold the face of my Father who is in heaven.
- Young's Literal Translation (YLT)
- 'Beware! — ye may not despise one of these little ones, for I say to you, that their messengers in the heavens do always behold the face of my Father who is in the heavens,
Read in context
- 8ಆದದರಿಂದ ನಿನ್ನ ಕೈಯಾಗಲೀ ಕಾಲಾಗಲೀ ನಿನ್ನನ್ನು ಅಭ್ಯಂತರಪಡಿಸಿದರೆ ಅವುಗಳನ್ನು ಕಡಿದು ನಿನ್ನಿಂದ ಬಿಸಾಡಿಬಿಡು; ನೀನು ಎರಡು ಕೈಯುಳ್ಳವನಾಗಿ ಇಲ್ಲವೆ ಎರಡು ಕಾಲುಳ್ಳವನಾಗಿ ನಿತ್ಯವಾದ ಬೆಂಕಿಗೆ ಹಾಕಲ್ಪಡುವದಕ್ಕಿಂತ ಕುಂಟ ನಾಗಿ ಇಲ್ಲವೆ ಊನನಾಗಿ ಜೀವದಲ್ಲಿ ಪ್ರವೇಶಿಸುವದು ನಿನಗೆ ಒಳ್ಳೇದು.
- 9ನಿನ್ನ ಕಣ್ಣು ನಿನ್ನನ್ನು ಅಭ್ಯಂತರ ಪಡಿಸಿದರೆ ಅದನ್ನು ಕಿತ್ತು ನಿನ್ನಿಂದ ಬಿಸಾಡಿಬಿಡು; ನೀನು ಎರಡು ಕಣ್ಣುಳ್ಳವನಾಗಿ ನರಕದ ಬೆಂಕಿಯಲ್ಲಿ ಹಾಕಲ್ಪಡುವದಕ್ಕಿಂತ ಒಂದು ಕಣ್ಣುಳ್ಳವನಾಗಿ ಜೀವದಲ್ಲಿ ಪ್ರವೇಶಿಸುವದು ನಿನಗೆ ಒಳ್ಳೇದು.
- 10ಚಿಕ್ಕವರಲ್ಲಿ ಒಬ್ಬನನ್ನಾದರೂ ನೀವು ತಾತ್ಸಾರ ಮಾಡದಂತೆ ನೋಡಿಕೊಳ್ಳಿರಿ; ಯಾಕಂದರೆ ನಾನು ನಿಮಗೆ ಹೇಳುವದೇನಂದರೆ--ಪರಲೋಕದಲ್ಲಿ ಅವರ ದೂತರು ಪರಲೋಕದಲ್ಲಿರುವ ನನ್ನ ತಂದೆಯ ಮುಖವನ್ನು ಯಾವಾಗಲೂ ನೋಡುತ್ತಾರೆ.
- 11ಯಾಕಂದರೆ ಮನುಷ್ಯಕುಮಾರನು ಕಳೆದುಹೋದ ದ್ದನ್ನು ರಕ್ಷಿಸುವದಕ್ಕಾಗಿ ಬಂದನು.
- 12ನೀವು ಹೇಗೆ ಯೋಚಿಸುತ್ತೀರಿ? ಒಬ್ಬ ಮನುಷ್ಯ ನಿಗೆ ನೂರು ಕುರಿಗಳಿರಲಾಗಿ ಅವುಗಳಲ್ಲಿ ಒಂದು ತಪ್ಪಿಸಿಕೊಂಡು ಹೋದರೆ ಅವನು ತೊಂಭತ್ತೊಂಭತ್ತನ್ನು ಬಿಟ್ಟು ಬೆಟ್ಟಗಳಿಗೆ ಹೊರಟುಹೋಗಿ ತಪ್ಪಿಸಿಕೊಂಡ ದ್ದನ್ನು ಹುಡುಕುವದಿಲ್ಲವೇ?
Cross references
- Psalm 91:11 ಕೀರ್ತನೆಗಳು 91:11ನಿನ್ನ ಎಲ್ಲಾ ಮಾರ್ಗಗಳಲ್ಲಿ ನಿನ್ನನ್ನು ಕಾಪಾಡುವದಕ್ಕೆ ಆತನು ತನ್ನ ದೂತರಿಗೆ ನಿನ್ನ ವಿಷಯವಾಗಿ ಆಜ್ಞಾಪಿಸುವನು.
- Psalm 34:7 ಕೀರ್ತನೆಗಳು 34:7ಆತನಿಗೆ ಭಯಪಡುವವರ ಸುತ್ತಲೂ ಕರ್ತನ ದೂತನು ಇಳು ಕೊಂಡು ಅವರನ್ನು ಕಾಪಾಡುತ್ತಾನೆ.
- Hebrews 1:14 ಇಬ್ರಿಯರಿಗೆ 1:14ಇವರೆಲ್ಲರು ರಕ್ಷಣೆಯನ್ನು ಬಾಧ್ಯವಾಗಿ ಹೊಂದಬೇಕಾಗಿರುವವರ ಸೇವೆಗೋಸ್ಕರ ಕಳುಹಿ ಸಲ್ಪಟ್ಟ ಊಳಿಗದ ಆತ್ಮಗಳಲ್ಲವೋ?
- Luke 16:22 ಲೂಕನು 16:22ಇದಾದ ಮೇಲೆ ಆ ಭಿಕ್ಷುಕನು ಸತ್ತನು; ದೂತರು ಅವನನ್ನು ಅಬ್ರಹಾಮನ ಎದೆಗೆ ತೆಗೆದುಕೊಂಡು ಹೋದರು; ಐಶ್ವರ್ಯವಂತನು ಸಹ ಸತ್ತನು; ಅವನನ್ನು ಹೂಣಿ ಟ್ಟರು.
- Acts 12:7–11 ಅಪೊಸ್ತಲರ ಕೃತ್ಯಗಳು 12:7–11ಆಗ ಇಗೋ, ಕರ್ತನ ದೂತನು ಪೇತ್ರನ ಬಳಿಗೆ ಬಂದಾಗ ಅವನಿದ್ದ ಸೆರೆಮನೆಯಲ್ಲಿ ಬೆಳಕು ಹೊಳೆಯಿತು. ಅವನು ಪೇತ್ರನನ್ನು ಪಕ್ಕೆ ತಟ್ಟಿ ಎಬ್ಬಿಸಿ--ತಟ್ಟನೆ ಏಳು ಅಂದನು. ಆಗಲೇ ಅವನ ಕೈಗಳಿಂದ ಸರಪಣಿಗಳು ಕಳಚಿಬಿದ್ದವು. ಆ ದೂತನು ಅವನಿಗೆ--ನಡುಕಟ್ಟಿಕೊಂಡು ನಿನ್ನ ಕೆರಗಳನ್ನು ಮೆಟ್ಟಿಕೋ ಎಂದು ಹೇಳಲು ಅವನು ಹಾಗೆಯೇ ಮಾಡಿದನು. ಆ ದೂತನು ಅವನಿಗೆ ನಿನ್ನ ಮೇಲಂಗಿ ಯನ್ನು ಹಾಕಿಕೊಂಡು ನನ್ನ ಹಿಂದೆ ಬಾ ಅಂದನು. ಅವನು ಹೊರಗೆ ಬಂದು ಆ ದೂತನ ಹಿಂದೆಯೇ ಹೋಗುತ್ತಾ ಅವನ ಮೂಲಕವಾಗಿ ನಡೆದ ಸಂಗತಿ ನಿಜವಾದದ್ದೆಂದು ತಿಳಿಯದೆ ತಾನು ನೋಡಿದ್ದು ದರ್ಶನವೆಂದು ನೆನಸಿದನು. ಅವನು ಮೊದಲನೆಯ ಎರಡನೆಯ ಕಾವಲುಗಳನ್ನು ದಾಟಿ ಪಟ್ಟಣಕ್ಕೆ ಹೋಗುವ ಕಬ್ಬಿಣದ ಬಾಗಿಲಿಗೆ ಬಂದಾಗ ಅದು ತನ್ನಷ್ಟಕ್ಕೆ ತಾನೇ ಅವರಿಗೆ ತೆರೆಯಿತು. ಅವರು ಹೊರಗೆ ಬಂದು ಒಂದು ಬೀದಿಯನ್ನು ದಾಟಿದರು; ಕೂಡಲೆ ಆ ದೂತನು ಅವನನ್ನು ಬಿಟ್ಟು ಹೊರಟುಹೋದನು. ಆಗ ಪೇತ್ರನು ಎಚ್ಚರವಾಗಿ-- ಕರ್ತನು ತನ್ನ ದೂತನನ್ನು ಕಳುಹಿಸಿ ಹೆರೋದನ ಕೈಯಿಂದಲೂ ಯೆಹೂದ್ಯ ಜನರು ನನಗೆ ಮಾಡಬೇಕೆಂದಿದ್ದ ಎಲ್ಲವುಗಳಿಂದಲೂ ನನ್ನನ್ನು ಬಿಡಿಸಿದನೆಂದು ನನಗೀಗ ನಿಶ್ಚಯವಾಗಿ ತಿಳಿದುಬಂದಿದೆ ಅಂದುಕೊಂಡನು.
- 2 Kings 6:16–17 2 ಅರಸುಗಳು 6:16–17ಅದಕ್ಕವನು--ಭಯಪಡಬೇಡ; ಅವರ ಸಂಗಡ ಇರುವವರಿಗಿಂತ ನಮ್ಮ ಸಂಗಡ ಇರುವ ವರು ಹೆಚ್ಚಾಗಿದ್ದಾರೆ ಅಂದನು. ಆಗ ಎಲೀಷನುಕರ್ತನೇ, ನೀನು ದಯಮಾಡಿ ಅವನು ನೋಡುವ ಹಾಗೆ ಅವನ ಕಣ್ಣುಗಳನ್ನು ತೆರೆ ಎಂದು ಪ್ರಾರ್ಥಿಸಿ ದನು. ಕರ್ತನು ಆ ಯೌವನಸ್ಥನ ಕಣ್ಣುಗಳನ್ನು ತೆರೆ ದಾಗ ಇಗೋ, ಎಲೀಷನ ಸುತ್ತಲೂ ಬೆಟ್ಟದಲ್ಲಿ ಬೆಂಕಿಯ ಕುದುರೆಗಳೂ ರಥಗಳೂ ತುಂಬಿರುವದನ್ನು ಅವನು ನೋಡಿದನು.
- Matthew 18:6 ಮತ್ತಾಯನು 18:6ಆದರೆ ನನ್ನಲ್ಲಿ ವಿಶ್ವಾಸವಿಡುವ ಈ ಚಿಕ್ಕವರಲ್ಲಿ ಒಬ್ಬನಿಗೆ ಯಾವ ನಾದರೂ ಅಭ್ಯಂತರವಾದರೆ ಅವನ ಕೊರಳಿಗೆ ಬೀಸುವ ಕಲ್ಲನ್ನು ನೇತು ಹಾಕಿ ಅವನನ್ನು ಸಮುದ್ರದ ಆಳದಲ್ಲಿ ಮುಳುಗಿಸಿಬಿಡುವದು ಅವನಿಗೆ ಒಳ್ಳೇದು.
- Matthew 18:14 ಮತ್ತಾಯನು 18:14ಅದರಂತೆಯೇ ಈ ಚಿಕ್ಕವರಲ್ಲಿ ಒಬ್ಬನಾದರೂ ನಾಶವಾಗುವದು ಪರಲೋಕದಲ್ಲಿರುವ ನಿಮ್ಮ ತಂದೆಯ ಚಿತ್ತವಲ್ಲ.
- Genesis 32:1–2 ಆದಿಕಾಂಡ 32:1–2ಯಾಕೋಬನು ತನ್ನ ಮಾರ್ಗವಾಗಿ ಹೋಗುತ್ತಿದ್ದಾಗ ದೇವದೂತರು ಅವನೆ ದುರಿಗೆ ಬಂದರು. ಯಾಕೋಬನು ಅವರನ್ನು ನೋಡಿದಾಗ--ಇದು ದೇವರ ಸೈನ್ಯ ಎಂದು ಹೇಳಿ ಆ ಸ್ಥಳಕ್ಕೆ ಮಹನಯಿಮ್ ಎಂದು ಹೆಸರಿಟ್ಟನು.
- Matthew 24:31 ಮತ್ತಾಯನು 24:31ತರುವಾಯ ಆತನು ತನ್ನ ದೂತರನ್ನು ತುತೂರಿಯ ಮಹಾಶಬ್ದದೊಂದಿಗೆ ಕಳುಹಿಸುವನು; ಆಗ ಅವರು ಆತನಿಂದ ಆಯಲ್ಪಟ್ಟವರನ್ನು ನಾಲ್ಕು ದಿಕ್ಕುಗಳಿಂದ ಆಕಾಶದ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೂ ಒಟ್ಟುಗೂಡಿಸುವರು.
- Matthew 1:20 ಮತ್ತಾಯನು 1:20ಅವನು ಇವುಗಳನ್ನು ಆಲೋಚನೆ ಮಾಡುತ್ತಿದ್ದಾಗ ಇಗೋ, ಕರ್ತನ ದೂತನು ಅವನಿಗೆ ಕನಸಿನಲ್ಲಿ ಕಾಣಿಸಿ ಕೊಂಡು-- ಯೋಸೇಫನೇ, ದಾವೀದನ ಕುಮಾರನೇ, ನಿನ್ನ ಹೆಂಡತಿಯಾದ ಮರಿಯಳನ್ನು ಸೇರಿಸಿಕೊಳ್ಳು ವದಕ್ಕೆ ಭಯಪಡಬೇಡ; ಯಾಕಂದರೆ ಆಕೆಯ ಗರ್ಭವು ಪವಿತ್ರಾತ್ಮನಿಂದಲೇ ಆಗಿದೆ.
- Matthew 2:13 ಮತ್ತಾಯನು 2:13ಅವರು ಹೋದಮೇಲೆ ಇಗೋ, ಕರ್ತನ ದೂತನು ಕನಸಿನಲ್ಲಿ ಯೋಸೇಫನಿಗೆ ಕಾಣಿಸಿ ಕೊಂಡು -- ಎದ್ದು ಈ ಶಿಶುವನ್ನೂ ಇದರ ತಾಯಿ ಯನ್ನೂ ಕರಕೊಂಡು ಐಗುಪ್ತಕ್ಕೆ ಓಡಿಹೋಗಿ ನಾನು ನಿನಗೆ ತಿಳಿಸುವ ತನಕ ಅಲ್ಲೇ ಇರು; ಯಾಕಂದರೆ ಹೆರೋದನು ಈ ಶಿಶುವನ್ನು ಕೊಲ್ಲಬೇಕೆಂದು