Matthew · chapter 20 · verse 18
Matthew 20:18 in Kannada
ಇಗೋ, ನಾವು ಯೆರೂಸಲೇಮಿಗೆ ಹೋಗುತ್ತೇವೆ. ಅಲ್ಲಿ ಮನುಷ್ಯ ಕುಮಾರನು ಪ್ರಧಾನ ಯಾಜಕರಿಗೂ ಶಾಸ್ತ್ರಿಗಳಿಗೂ ಒಪ್ಪಿಸಲ್ಪಡುವನು; ಅವರು ಆತನಿಗೆ ಮರಣ ದಂಡನೆಯನ್ನು ವಿಧಿಸುವರು.
Igo, naavu yeroosalemige hogutteve. Alli manushya kumaaranu pradhaana yaajakarigoo shaastrigaligoo oppisalpaduvanu; avaru aatanige marana dandaneyannu vidhisuvaru.
Matthew 20:18 in English
- King James Version (KJV)
- Behold, we go up to Jerusalem; and the Son of man shall be betrayed unto the chief priests and unto the scribes, and they shall condemn him to death,
- World English Bible (WEB)
- “Behold, we are going up to Jerusalem, and the Son of Man will be delivered to the chief priests and scribes, and they will condemn him to death,
- American Standard Version (ASV)
- Behold, we go up to Jerusalem; and the Son of man shall be delivered unto the chief priests and scribes; and they shall condemn him to death,
- Bible in Basic English (BBE)
- See, we go up to Jerusalem; and the Son of man will be given into the hands of the chief priests and scribes; and they will give orders for him to be put to death,
- Darby Translation (DBY)
- Behold we go up to Jerusalem, and the Son of man will be delivered up to the chief priests and scribes, and they will condemn him to death;
- Webster's Bible (WBS)
- Behold, we go up to Jerusalem; and the Son of man will be betrayed to the chief priests, and to the scribes, and they will condemn him to death,
- Young's Literal Translation (YLT)
- 'Lo, we go up to Jerusalem, and the Son of Man shall be delivered to the chief priests and scribes,
Read in context
- 16ಹೀಗೆ ಕಡೆಯವರು ಮೊದಲನೆಯವರಾಗುವರು; ಮೊದಲನೆಯವರು ಕಡೆಯವರಾಗುವರು. ಯಾಕಂದರೆ ಕರೆಯಲ್ಪಟ್ಟವರು ಅನೇಕರು; ಆದರೆ ಆಯಲ್ಪಟ್ಟವರು ಸ್ವಲ್ಪ ಜನ ಎಂದು ಹೇಳಿದನು.
- 17ತರುವಾಯ ಯೇಸು ಯೆರೂಸಲೇಮಿಗೆ ಹೋಗುತ್ತಿರುವಾಗ ಹನ್ನೆರಡು ಮಂದಿ ಶಿಷ್ಯರನ್ನು ದಾರಿಯಲ್ಲಿ ವಿಂಗಡವಾಗಿ ಕರೆದು ಅವರಿಗೆ--
- 18ಇಗೋ, ನಾವು ಯೆರೂಸಲೇಮಿಗೆ ಹೋಗುತ್ತೇವೆ. ಅಲ್ಲಿ ಮನುಷ್ಯ ಕುಮಾರನು ಪ್ರಧಾನ ಯಾಜಕರಿಗೂ ಶಾಸ್ತ್ರಿಗಳಿಗೂ ಒಪ್ಪಿಸಲ್ಪಡುವನು; ಅವರು ಆತನಿಗೆ ಮರಣ ದಂಡನೆಯನ್ನು ವಿಧಿಸುವರು.
- 19ಇದಲ್ಲದೆ ಆತನನ್ನು ಹಾಸ್ಯ ಮಾಡು ವದಕ್ಕೂ ಕೊರಡೆಗಳಿಂದ ಹೊಡೆಯುವದಕ್ಕೂ ಶಿಲುಬೆಗೆ ಹಾಕುವದಕ್ಕೂ ಆತನನ್ನು ಅನ್ಯಜನರಿಗೆ ಒಪ್ಪಿಸಿಕೊಡುವರು; ಮತ್ತು ಮೂರನೆಯ ದಿನದಲ್ಲಿ ಆತನು ತಿರಿಗಿ ಎದ್ದು ಬರುವನು ಎಂದು ಹೇಳಿದನು.
- 20ತರುವಾಯ ಜೆಬೆದಾಯನ ಮಕ್ಕಳ ತಾಯಿಯು ತನ್ನ ಕುಮಾರರೊಂದಿಗೆ ಆತನ ಬಳಿಗೆ ಬಂದು ಆತ ನನ್ನು ಆರಾಧಿಸುತ್ತಾ ಆತನನ್ನು ಏನೋ ಬೇಡಿಕೊಳ್ಳ ಬೇಕೆಂದು ಅಪೇಕ್ಷಿಸಿದಳು.
Cross references
- Matthew 16:21 ಮತ್ತಾಯನು 16:21ತಾನು ಯೆರೂಸಲೇಮಿಗೆ ಹೋಗಿ ಹೇಗೆ ಹಿರಿಯರಿಂದಲೂ ಪ್ರಧಾನ ಯಾಜಕರಿಂದಲೂ ಶಾಸ್ತ್ರಿಗಳಿಂದಲೂ ಬಹು ಶ್ರಮೆಗಳನ್ನು ಅನುಭವಿಸಿ ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ತಿರಿಗಿ ಎದ್ದು ಬರುವದು ಅವಶ್ಯವಾಗಿದೆ ಎಂದು ಯೇಸು ಅಂದಿನಿಂದ ತನ್ನ ಶಿಷ್ಯರಿಗೆ ತಿಳಿಸಲಾರಂಭಿಸಿದನು.
- Acts 2:23 ಅಪೊಸ್ತಲರ ಕೃತ್ಯಗಳು 2:23ಆದರೆ ದೇವರ ಸ್ಥಿರಸಂಕಲ್ಪಕ್ಕನುಸಾರವಾಗಿಯೂ ಭವಿಷ್ಯದ್ ಜ್ಞಾನಕ್ಕನುಸಾರವಾಗಿಯೂ ಆತನು ಒಪ್ಪಿಸಲ್ಪಟ್ಟಾಗ ನೀವು ಆತನನ್ನು ಹಿಡಿದು ದುಷ್ಟರ ಕೈಗಳಿಂದ ಶಿಲುಬೆಗೆ ಹಾಕಿಸಿಕೊಂದಿರಿ.
- Matthew 27:1 ಮತ್ತಾಯನು 27:1ಬೆಳಗಾದಾಗ ಎಲ್ಲಾ ಪ್ರಧಾನ ಯಾಜಕರೂ ಜನರ ಹಿರಿಯರೂ ಯೇಸುವನ್ನು ಕೊಲ್ಲಿಸುವದಕ್ಕೆ ಆತನಿಗೆ ವಿರೋಧವಾಗಿ ಆಲೋಚನೆ ಮಾಡಿಕೊಂಡರು.
- Matthew 26:2 ಮತ್ತಾಯನು 26:2ಎರಡು ದಿವಸಗಳಾದ ಮೇಲೆ ಪಸ್ಕ ಹಬ್ಬ ಇರುವ ದೆಂದು ನೀವು ಬಲ್ಲಿರಿ. ಆಗ ಮನುಷ್ಯಕುಮಾರನು ಶಿಲುಬೆಗೆ ಹಾಕಲ್ಪಡುವದಕ್ಕಾಗಿ ಹಿಡಿದುಕೊಡಲ್ಪಡು ವನು ಅಂದನು.
- Matthew 17:22–23 ಮತ್ತಾಯನು 17:22–23ಅವರು ಗಲಿಲಾಯಲ್ಲಿ ಇನ್ನೂ ವಾಸವಾಗಿದ್ದಾಗ ಯೇಸು ಅವರಿಗೆ--ಮನುಷ್ಯಕುಮಾರನು ಮನುಷ್ಯರ ಕೈಗಳಿಗೆ ಒಪ್ಪಿಸಲ್ಪಡುವನು. ಅವರು ಆತನನ್ನು ಕೊಲ್ಲುವರು; ಇದಲ್ಲದೆ ಮೂರನೇ ದಿನದಲ್ಲಿ ಆತನು ತಿರಿಗಿ ಎಬ್ಬಿಸಲ್ಪಡುವನು ಎಂದು ಹೇಳಿದನು. ಅದಕ್ಕೆ ಅವರು ಬಹಳ ದುಃಖಪಟ್ಟರು.
- Matthew 26:66 ಮತ್ತಾಯನು 26:66ನಿಮಗೆ ಹೇಗೆ ತೋರುತ್ತದೆ ಎಂದು ಕೇಳಿದ್ದಕ್ಕೆ ಅವರು ಪ್ರತ್ಯುತ್ತರವಾಗಿ--ಇವನು ಮರಣಕ್ಕೆ ಪಾತ್ರನು ಅಂದರು.
- Acts 4:27–28 ಅಪೊಸ್ತಲರ ಕೃತ್ಯಗಳು 4:27–28ನಿಜವಾಗಿಯೂ ನೀನು ಅಭಿಷೇಕಿಸಿದ ನಿನ್ನ ಪವಿತ್ರ ಸೇವಕನಾದ ಯೇಸುವಿಗೆ ವಿರೋಧವಾಗಿ ಹೆರೋದನೂ ಪೊಂತ್ಯ ಪಿಲಾತನೂ ಅನ್ಯಜನರ ಮತ್ತು ಇಸ್ರಾಯೇಲ್ ಜನರ ಸಹಿತ ಒಂದಾಗಿ ಕೂಡಿಕೊಂಡು ನಿನ್ನ ಹಸ್ತವು ಮತ್ತು ನಿನ್ನ ಸಂಕಲ್ಪವು ಮೊದಲೇ ನಿಶ್ಚಯಿಸಿದ್ದನ್ನು ಮಾಡಿದರು.
- Psalm 22:1–31 ಕೀರ್ತನೆಗಳು 22:1–31ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ? ನೀನು ಯಾಕೆ ನನಗೆ ಸಹಾಯ ಮಾಡದೆಯೂ ನನ್ನ ಕೂಗಿಗೆ ಕಿವಿ ಗೊಡದೆಯೂ ದೂರವಾಗಿದ್ದೀ. ಓ ನನ್ನ ದೇವರೇ, ಹಗಲಿನಲ್ಲಿ ಕರೆಯುತ್ತೇನೆ; ನೀನು ಉತ್ತರ ಕೊಡುವದಿಲ್ಲ; ರಾತ್ರಿಯಲ್ಲಿಯೂ ನಾನು ಮೌನವಾಗಿರು ವದಿಲ್ಲ. ಆದರೆ ನೀನು ಪರಿಶುದ್ಧನಾಗಿದ್ದೀ; ನೀನು ಇಸ್ರಾಯೇಲಿನ ಸ್ತೋತ್ರಗಳಲ್ಲಿ ವಾಸ ಮಾಡುವಾ ತನು. ನಿನ್ನಲ್ಲಿ ನಮ್ಮ ಪಿತೃಗಳು ಭರವಸವಿಟ್ಟರು; ಅವರು ಭರವಸವಿಟ್ಟದ್ದರಿಂದ ನೀನು ಅವರನ್ನು ತಪ್ಪಿ ಸಿದಿ. ನಿನಗೆ ಅವರು ಮೊರೆ ಇಟ್ಟದ್ದರಿಂದ ತಪ್ಪಿಸ ಲ್ಪಟ್ಟರು; ನಿನ್ನಲ್ಲಿ ಭರವಸವಿಟ್ಟದ್ದರಿಂದ ಅವರು ನಾಚಿಕೆ ಪಡಲಿಲ್ಲ. ನಾನು ಹುಳವೇ, ಮನುಷ್ಯನಲ್ಲ; ಮನುಷ್ಯರಿಂದ ನಿಂದಿಸಲ್ಪಟ್ಟವನೂ ಜನರಿಂದ ತಿರಸ್ಕರಿಸಲ್ಪಟ್ಟವನೂ ಆಗಿದ್ದೇನೆ. ನನ್ನನ್ನು ನೋಡುವವರೆಲ್ಲರು ನನ್ನನ್ನು ಗೇಲಿ ಮಾಡಿ ನಗುವರು, ಅವರು ತುಟಿ ಅಗಲಮಾಡಿ ತಲೆ ಆಡಿಸುತ್ತಾ-- ಆತನು ಕರ್ತನ ಮೇಲೆ ಭರವಸ ವಿಟ್ಟಿದ್ದಾನಲ್ಲಾ; ಆತನು ಅವನನ್ನು ತಪ್ಪಿಸಿ ಅವನನ್ನು ಬಿಡಿಸಲಿ; ಆತನು ಅವನಲ್ಲಿ ಸಂತೋಷಪಡುತ್ತಾ ನಲ್ಲಾ ಅನ್ನುತ್ತಾರೆ. ಆದರೆ ನೀನು ಗರ್ಭದಿಂದ ನನ್ನನ್ನು ತೆಗೆದಿ; ನನ್ನ ತಾಯಿಯ ಎದೆಯಲ್ಲಿದ್ದಾಗ ನಾನು ನಿರೀಕ್ಷಿಸುವಂತೆ ಮಾಡಿದಿ. ಹುಟ್ಟಿದಂದಿನಿಂದ ನೀನೇ ನನಗೆ ಆಧಾರ; ನನ್ನ ತಾಯಿಯ ಹೊಟ್ಟೆಯಿಂದ ನನ್ನನ್ನು ಬರಮಾಡಿದ ನನ್ನ ದೇವರು ನೀನೇ ಆಗಿದ್ದೀ. ನನ್ನಿಂದ ದೂರವಾಗಿರಬೇಡ; ಇಕ್ಕಟ್ಟು ಸವಿಾಪ ವಾಗಿದೆ; ನನಗೆ ಸಹಾಯಕನು ಯಾರೂ ಇಲ್ಲ. ಬಹಳ ಹೋರಿಗಳು ನನ್ನನ್ನು ಸುತ್ತಿಕೊಂಡಿವೆ; ಬಾಷಾನಿನ ಬಲವಾದ ಹೋರಿಗಳು ನನ್ನನ್ನು ಮುತ್ತಿ ಕೊಂಡಿವೆ. ಹರಿದು ಬಿಡುವಂಥ ಗರ್ಜಿಸುವ ಸಿಂಹದ ಹಾಗೆ ನನ್ನ ಮೇಲೆ ತಮ್ಮ ಬಾಯಿ ತೆರೆದಿ ದ್ದಾರೆ. ನಾನು ನೀರಿನ ಹಾಗೆ ಹೊಯ್ಯಲ್ಪಟ್ಟಿದ್ದೇನೆ; ನನ್ನ ಎಲುಬುಗಳೆಲ್ಲಾ ಕೀಲು ತಪ್ಪಿವೆ; ನನ್ನ ಹೃದ ಯವು ಮೇಣದ ಹಾಗೆ ನನ್ನ ಕರುಳುಗಳ ಮಧ್ಯದಲ್ಲಿ ಕರಗಿಹೋಗಿದೆ. ನನ್ನ ಶಕ್ತಿ ಬೋಕಿಯ ಹಾಗೆ ಒಣಗಿ ಹೋಗಿದೆ; ನನ್ನ ನಾಲಿಗೆ ಅಂಗಳಕ್ಕೆ ಹತ್ತುತ್ತದೆ; ಮರಣದ ಧೂಳಿಗೆ ನನ್ನನ್ನು ಬರಮಾಡಿದಿ. ನಾಯಿ ಗಳು ನನ್ನನ್ನು ಸುತ್ತಿಕೊಂಡಿವೆ; ದುರ್ಮಾರ್ಗಿಗಳ ಸಭೆಯು ನನ್ನನ್ನು ಮುತ್ತಿಕೊಂಡಿದೆ; ಅವರು ನನ್ನ ಕೈಗಳನ್ನೂ ಕಾಲುಗಳನ್ನೂ ತಿವಿದಿದ್ದಾರೆ. ನನ್ನ ಎಲು ಬುಗಳನ್ನೆಲ್ಲಾ ಎಣಿಸುತ್ತೇನೆ; ಅವರು ನನ್ನನ್ನು ದೃಷ್ಟಿಸಿ ನೋಡುತ್ತಾರೆ. ನನ್ನ ವಸ್ತ್ರಗಳನ್ನು ತಮ್ಮಲ್ಲಿ ಪಾಲು ಮಾಡಿಕೊಳ್ಳುತ್ತಾರೆ. ನನ್ನ ಅಂಗಿಗೋಸ್ಕರ ಚೀಟು ಹಾಕುತ್ತಾರೆ. ಆದರೆ ಓ ಕರ್ತನೇ, ನೀನು ನನ್ನಿಂದ ದೂರವಾಗಿರಬೇಡ; ಓ ನನ್ನ ಬಲವೇ, ನನ್ನ ಸಹಾಯಕ್ಕೆ ತ್ವರೆಪಡು. ನನ್ನ ಪ್ರಾಣವನ್ನು ಕತ್ತಿಯಿಂದಲೂ ನನಗೆ ಪ್ರಿಯವಾದದ್ದನ್ನು ನಾಯಿಯ ಬಲದಿಂದಲೂ ಬಿಡಿಸು. ನನ್ನನ್ನು ಸಿಂಹದ ಬಾಯಿಂದ ರಕ್ಷಿಸು; ನನ್ನನ್ನು ಕಾಡುಕೋಣಗಳ ಕೊಂಬುಗಳಿಂದ ತಪ್ಪಿಸಿ ಉತ್ತರ ಕೊಟ್ಟೆಯಲ್ಲಾ. ನಾನು ನಿನ್ನ ಹೆಸರನ್ನು ನನ್ನ ಸಹೋದರರಿಗೆ ಸಾರುವೆನು; ಕೂಟದ ಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು. ಕರ್ತನಿಗೆ ಭಯಪಡುವವರೇ, ಆತನನ್ನು ಸ್ತುತಿಸಿರಿ; ಯಾಕೋಬಿನ ಎಲ್ಲಾ ಸಂತಾನದವರೇ, ಆತನನ್ನು ಘನಪಡಿಸಿರಿ; ಇಸ್ರಾಯೇಲಿನ ಎಲ್ಲಾ ಸಂತಾನದವರೇ, ಆತನಿಗೆ ಭಯಪಡಿರಿ. ಸಂಕಟ ಪಡುವವನ ಸಂಕಟ ವನ್ನು ಆತನು ತಿರಸ್ಕರಿಸಲಿಲ್ಲ, ಅಸಹ್ಯಿಸಲಿಲ್ಲ; ತನ್ನ ಮುಖವನ್ನು ಅವನಿಂದ ಮರೆಮಾಡಲಿಲ್ಲ; ಆದರೆ ಅವನು ಮೊರೆಯಿಡಲು ಆತನು ಕೇಳಿದನು. ಮಹಾ ಸಭೆಯಲ್ಲಿ ನಿನ್ನನ್ನು ಕುರಿತು ನನ್ನ ಸ್ತೋತ್ರವು ನಿನಗಿ ರುವದು; ನನ್ನ ಪ್ರಮಾಣಗಳನ್ನು ಆತನಿಗೆ ಭಯಪಡು ವವರ ಮುಂದೆ ಸಲ್ಲಿಸುವೆನು. ದೀನರು ಉಂಡು ತೃಪ್ತಿಯಾಗುವರು; ಕರ್ತನನ್ನು ಹುಡುಕುವವರು ಆತನನ್ನು ಸ್ತುತಿಸುವರು; ನಿಮ್ಮ ಹೃದಯವು ಎಂದೆಂದಿಗೂ ಬದುಕುವದು. ಲೋಕದಂತ್ಯದಲ್ಲಿರುವ ಎಲ್ಲಾ ಜನರು ಜ್ಞಾಪಕ ಮಾಡಿ ಕರ್ತನ ಕಡೆಗೆ ತಿರಿಗಿಕೊಳ್ಳುವರು; ಜನಾಂಗ ಗಳ ಗೋತ್ರಗಳೆಲ್ಲರೂ ನಿನ್ನ ಮುಂದೆ ಆರಾಧಿಸುವರು. ರಾಜ್ಯವು ಕರ್ತನದೇ; ಜನಾಂಗಗಳಲ್ಲಿ ಆಳುವಾತನು ಆತನೇ. ಭೂಮಿಯ ಪುಷ್ಟರೆಲ್ಲರೂ ಉಂಡು ಆರಾಧಿಸುವರು; ತಮ್ಮ ಪ್ರಾಣವನ್ನು ಬದುಕಿಸಲಾರದೆ ಧೂಳಿನಲ್ಲಿ ಇಳಿಯುವವರೆಲ್ಲರೂ ಆತನ ಮುಂದೆ ಅಡ್ಡಬೀಳುವರು. ಒಂದು ಸಂತಾನವು ಆತನನ್ನು ಸೇವಿಸುವದು. ಅದು ಕರ್ತನ ಸಂತತಿ ಎಂದು ಎಣಿಸ ಲ್ಪಡುವದು.ಅವರು ಬಂದು ಆತನೇ ಇದನ್ನು ಮಾಡಿದ್ದಾನೆಂದೂ ಆತನ ನೀತಿಯನ್ನೂ ಹುಟ್ಟಲಿರುವ ಜನರಿಗೆ ತಿಳಿಸುವರು. ಅವರು ಬಂದು ಆತನೇ ಇದನ್ನು ಮಾಡಿದ್ದಾನೆಂದೂ ಆತನ ನೀತಿಯನ್ನೂ ಹುಟ್ಟಲಿರುವ ಜನರಿಗೆ ತಿಳಿಸುವರು.
- Daniel 9:24–27 ದಾನಿಯೇಲನು 9:24–27ಅಕ್ರಮಗಳನ್ನು ಮುಗಿಸುವದಕ್ಕೂ ಪಾಪಗಳನ್ನು ಮುಚ್ಚುವದಕ್ಕೂ ಅಪರಾಧಗಳಿಗೆ ಪ್ರಾಯಶ್ಚಿತ್ತ ಮಾಡು ವದಕ್ಕೂ ನಿತ್ಯವಾದ ನೀತಿಯನ್ನು ಬರಮಾಡುವದಕ್ಕೂ ಆ ದರ್ಶನಕ್ಕೂ ಪ್ರವಾದಿಗೂ ಮುದ್ರೆಹಾಕುವದಕ್ಕೂ ಅತಿಪರಿಶುದ್ಧನನ್ನು ಅಭಿಷೇಕ ಮಾಡುವದಕ್ಕೂ ನಿನ್ನ ಜನರ ಮೇಲೆಯೂ ನಿನ್ನ ಪರಿಶುದ್ಧ ಪಟ್ಟಣದ ಮೇಲೆಯೂ ಎಪ್ಪತ್ತು ವಾರಗಳು ನೇಮಿಸಲ್ಪಟ್ಟಿವೆ. ಆದದರಿಂದ ನೀನು ತಿಳಿಯಬೇಕಾದದ್ದು ಏನಂದರೆ --ಯೆರೂಸಲೇಮನ್ನು ತಿರಿಗಿ ಸ್ಥಾಪಿಸಿ ಕಟ್ಟಲು ಆಜ್ಞೆ ಹೊರಡುವದು ಮೊದಲುಗೊಂಡು ಅಭಿಷಿಕ್ತನಾದ (ಮೆಸ್ಸೀಯನ) ಪ್ರಭುವಿನ ವರೆಗೂ ಏಳು ವಾರಗಳು ಕಳೆಯಬೇಕು. ಅದು ಪುನಃ ಸ್ಥಾಪಿಸಲ್ಪಟ್ಟು ಅರವತ್ತೆರಡು ವಾರಗಳು ಇರುವದು. ಅದಕ್ಕೆ ಬೀದಿಯೂ ಗೋಡೆ ಗಳೂ ಕಷ್ಟಕಾಲದಲ್ಲಿ ಕಟ್ಟಲ್ಪಡುವದು. ಅರವತ್ತೆರಡು ವಾರಗಳಾದ ಮೇಲೆ ಮೆಸ್ಸೀಯನು ಛೇದಿಸಲ್ಪಡುವನು. ಆದರೆ ತನಗೆ ಅಲ್ಲ; ನುಗ್ಗುವ ಪ್ರಭುವಿನ ಜನರು ಪಟ್ಟಣವನ್ನೂ ಪರಿಶುದ್ಧ ಸ್ಥಳವನ್ನೂ ನಾಶಮಾಡುವರು. ಪ್ರಳಯದಿಂದ ಅದು ಅಂತ್ಯವಾಗುವದು. ಅಂತ್ಯದ ವರೆಗೂ ಯುದ್ಧವಾಗಿ ನಾಶನಗಳು ಸಂಭವಿಸುವವು.ಅವನು ಒಂದು ವಾರಕ್ಕಾಗಿ ಬಹಳ ಜನರೊಂದಿಗೆ ದೃಢವಾದ ಒಡಂಬಡಿಕೆಯನ್ನು ಮಾಡಿಕೊಳ್ಳುವನು. ವಾರದ ಮಧ್ಯದಲ್ಲಿ ಯಜ್ಞವನ್ನೂ ಅರ್ಪಣೆಯನ್ನೂ ನಿಲ್ಲಿಸುವನು. ಅಸಹ್ಯಗಳನ್ನು ವಾಹನಮಾಡಿಕೊಂಡು ಒಬ್ಬ ಘಾತಕನು ಹಾರಿಬರುವನು, ನಿಶ್ಚಿತ ಪ್ರಳಯವು ಅವನನ್ನು ಮುಳುಗಿಸುವ ತನಕ ಹಾಳು ಮಾಡುವನು. ಅವನು ಒಂದು ವಾರಕ್ಕಾಗಿ ಬಹಳ ಜನರೊಂದಿಗೆ ದೃಢವಾದ ಒಡಂಬಡಿಕೆಯನ್ನು ಮಾಡಿಕೊಳ್ಳುವನು. ವಾರದ ಮಧ್ಯದಲ್ಲಿ ಯಜ್ಞವನ್ನೂ ಅರ್ಪಣೆಯನ್ನೂ ನಿಲ್ಲಿಸುವನು. ಅಸಹ್ಯಗಳನ್ನು ವಾಹನಮಾಡಿಕೊಂಡು ಒಬ್ಬ ಘಾತಕನು ಹಾರಿಬರುವನು, ನಿಶ್ಚಿತ ಪ್ರಳಯವು ಅವನನ್ನು ಮುಳುಗಿಸುವ ತನಕ ಹಾಳು ಮಾಡುವನು.
- Psalm 69:1–36 ಕೀರ್ತನೆಗಳು 69:1–36ಓ ದೇವರೇ ನನ್ನನ್ನು ರಕ್ಷಿಸು; ನೀರು ನನ್ನ ಪ್ರಾಣದ ವರೆಗೂ ಬಂದಿದೆ. ನೆಲೆ ಸಿಕ್ಕದ ಆಳವಾದ ಕೆಸರಿನಲ್ಲಿ ನಾನು ಮುಳುಗುತ್ತೇನೆ; ನನ್ನ ಮೇಲೆ ಹಾದುಹೋಗುವ ನೀರಿನ ಪ್ರವಾಹಗಳ ಅಗಾಧದಲ್ಲಿ ನಾನು ಸಿಕ್ಕಿಕೊಂಡಿದ್ದೇನೆ. ನಾನು ಕೂಗಿ ದಣಿದಿದ್ದೇನೆ; ನನ್ನ ಗಂಟಲು ಒಣಗಿದೆ; ನಾನು ದೇವ ರನ್ನು ಎದುರು ನೋಡುವದರಿಂದ ನನ್ನ ಕಣ್ಣುಗಳು ಕ್ಷೀಣಿಸುತ್ತವೆ. ಕಾರಣವಿಲ್ಲದೆ ನನ್ನನ್ನು ಹಗೆ ಮಾಡು ವವರು ನನ್ನ ತಲೆಯ ಕೂದಲುಗಳಿಗಿಂತ ಹೆಚ್ಚಾಗಿ ದ್ದಾರೆ; ನನ್ನನ್ನು ಅನ್ಯಾಯವಾಗಿ ಸಂಹರಿಸುವ ನನ್ನ ಶತ್ರುಗಳೂ ಪ್ರಬಲವಾಗಿದ್ದಾರೆ; ನಾನು ತೆಗೆದು ಕೊಳ್ಳದ್ದನ್ನು ನನ್ನಿಂದ ದೋಚಿಕೊಂಡರು. ಓ ದೇವರೇ, ನೀನು ನನ್ನ ಮೂಢತನವನ್ನು ತಿಳಿದಿದ್ದೀ; ನನ್ನ ಪಾಪಗಳು ನಿನಗೆ ಮರೆಯಾಗಿಲ್ಲ. ಸೈನ್ಯಗಳ ಕರ್ತನಾದ ದೇವರೇ, ನಿನ್ನನ್ನು ನಿರೀಕ್ಷಿಸು ವವರು ನನ್ನ ದೆಸೆಯಿಂದ ನಾಚಿಕೆಪಡದಿರಲಿ; ಓ ಇಸ್ರಾಯೇಲಿನ ದೇವರೇ, ನಿನ್ನನ್ನು ಹುಡುಕುವವರು ನನ್ನಿಂದ ಅವಮಾನಪಡದಿರಲಿ. ನಿನ್ನ ನಿಮಿತ್ತ ನಿಂದೆ ಯನ್ನು ತಾಳಿದ್ದೇನೆ; ಅವಮಾನವು ನನ್ನ ಮುಖವನ್ನು ಮುಚ್ಚಿಯದೆ. ನನ್ನ ಸಹೋದರರಿಗೆ ಅನ್ಯನಾಗಿದ್ದೇನೆ; ನನ್ನ ಒಡಹುಟ್ಟಿದವರಿಗೆ ಪರಕೀಯನಾಗಿದ್ದೇನೆ. ನಿನ್ನ ಆಲಯದ ಆಸಕ್ತಿಯು ನನ್ನನ್ನು ತಿಂದುಬಿಟ್ಟಿದೆ; ನಿನ್ನನ್ನು ನಿಂದಿಸುವವರ ನಿಂದೆಗಳು ನನ್ನ ಮೇಲೆ ಬಿದ್ದಿವೆ. ನನ್ನ ಪ್ರಾಣವು ಉಪವಾಸದಲ್ಲಿ ಶಿಕ್ಷಿಸಲ್ಪಟ್ಟು ಅತ್ತಾಗ ಅದು ನನಗೆ ನಿಂದೆ ಆಯಿತು. ಗೋಣಿತಟ್ಟನ್ನು ಸಹ ನನ್ನ ಉಡುಪಾಗಿ ಮಾಡಿಕೊಂಡಿದ್ದೇನೆ; ಹೀಗೆ ನಾನು ಅವರಿಗೆ ಗಾದೆ ಆದೆನು. ಬಾಗಲಲ್ಲಿ ಕೂತು ಕೊಳ್ಳುವವರು ನನಗೆ ವಿರೋಧವಾಗಿ ಮಾತನಾಡು ತ್ತಾರೆ; ನಾನು ಮದ್ಯಪಾನಿಗಳಿಗೆ ಸಂಗೀತವಾದೆನು. ಓ ಕರ್ತನೇ, ನಾನಾದರೋ ಅಂಗೀಕಾರದ ಸಮ ಯದಲ್ಲಿ ನಿನಗೆ ನನ್ನ ಪ್ರಾರ್ಥನೆಯನ್ನು ಮಾಡುವೆನು. ಓ ದೇವರೇ, ನಿನ್ನ ಅತಿಶಯವಾದ ಕರುಣೆಯಿಂದಲೂ ನಿನ್ನ ರಕ್ಷಣೆಯ ಸತ್ಯದಲ್ಲಿಯೂ ನನಗೆ ಉತ್ತರಕೊಡು. ನಾನು ಮುಳುಗದಂತೆ ನನ್ನನ್ನು ಕೆಸರಿನೊಳಗಿಂದ ಬಿಡಿಸು; ಹಗೆಮಾಡುವವರಿಂದ ನನ್ನನ್ನು ತಪ್ಪಿಸು, ನೀರಿನ ಅಗಾಧಗಳೊಳಗಿಂದಲೂ ನನಗೆ ಬಿಡುಗಡೆ ಯಾಗಲಿ ನೀರಿನ ಪ್ರವಾಹವು ನನ್ನ ಮೇಲೆ ಹಾದು ಹೋಗದೇ ಇರಲಿ; ಅಗಾಧವು ನನ್ನನ್ನು ನುಂಗದೆ ಇರಲಿ; ಕುಣಿಯು ನನಗಾಗಿ ತನ್ನ ಬಾಯನ್ನು ಮುಟ್ಟ ದಿರಲಿ. ಓ ಕರ್ತನೇ, ನನಗೆ ಉತ್ತರಕೊಡು;ನಿನ್ನ ಪ್ರೀತಿ ಕರುಣೆಯು ಒಳ್ಳೇದಾಗಿದೆ; ನಿನ್ನ ಅತಿ ಶಯವಾದ ಅಂತಃಕರುಣೆಗಳ ಪ್ರಕಾರ ನನ್ನ ಕಡೆಗೆ ತಿರುಗು. ನಿನ್ನ ಮುಖವನ್ನು ನಿನ್ನ ಸೇವಕನಿಗೆ ಮರೆಮಾಡಬೇಡ; ನಾನು ಇಕ್ಕಟ್ಟಿನಲ್ಲಿದ್ದೇನೆ; ಬೇಗ ನನಗೆ ಉತ್ತರಕೊಡು. ಸವಿಾಪವಾಗಿದ್ದು ನನ್ನ ಪ್ರಾಣವನ್ನು ರಕ್ಷಿಸು ನನ್ನನ್ನು ನನ್ನ ಶತ್ರುಗಳ ನಿಮಿತ್ತ ವಾಗಿ ವಿಮೋಚಿಸು. ನೀನು ನನ್ನ ನಿಂದೆಯನ್ನೂ ನಾಚಿಕೆಯನ್ನೂ ಅವಮಾನವನ್ನೂ ತಿಳಿದಿದ್ದೀ; ನನ್ನ ವೈರಿಗಳೆಲ್ಲರು ನಿನ್ನ ಮುಂದೆ ಇದ್ದಾರೆ. ನಿಂದೆಯು ನನ್ನ ಹೃದಯವನ್ನು ಮುರಿದದೆ; ಭಾರದಿಂದ ನಾನು ತುಂಬಿದವನಾಗಿದ್ದೇನೆ, ಕನಿಕರಕ್ಕೋಸ್ಕರ ಕೆಲವರನ್ನು ನಿರೀಕ್ಷಿಸಿದೆನು, ಆದರೆ ಒಬ್ಬರೂ ಕಾಣಲಿಲ್ಲ. ಆದರಿಸುವವರಿಗೋಸ್ಕರ ಸಹ ಎದುರು ನೋಡಿದೆನು: ಆದರೆ ಯಾರೂ ಸಿಕ್ಕಲಿಲ್ಲ. ನನ್ನ ಆಹಾರಕ್ಕಾಗಿ ಕಹಿಯಾದದನ್ನು ಕೊಟ್ಟರು; ನನಗೆ ದಾಹವಾದಾಗ ಹುಳಿರಸವನ್ನು ಕುಡಿಯ ಕೊಟ್ಟರು. ಅವರ ಮೇಜು ಅವರ ಮುಂದೆ ಉರುಲಾ ಗಲಿ, ಸುಖವಾಗಿರುವವರಿಗೆ ಅದು ನೇಣೂ ಆಗಲಿ. ಅವರ ಕಣ್ಣಗಳು ಕಾಣದ ಹಾಗೆ ಕತ್ತಲಾಗಲಿ; ಅವರ ಸೊಂಟಗಳನ್ನು ಯಾವಾಗಲೂ ಕದಲಿಸು. ಅವರ ಮೇಲೆ ನಿನ್ನ ರೋಷವನ್ನು ಹೊಯ್ಯಿ; ನಿನ್ನ ಕೋಪದ ಉರಿಯು ಅವರನ್ನು ಹಿಡಿಯಲಿ. ಅವರ ವಾಸಸ್ಥಳವು ನಾಶವಾಗಲಿ; ಅವರ ಗುಡಾರಗಳಲ್ಲಿ ನಿವಾಸಿಯು ಇಲ್ಲದೆ ಹೋಗಲಿ. ನೀನು ಹೊಡೆದ ವನನ್ನು ಅವರು ಹಿಂಸಿಸುತ್ತಾರೆ, ನೀನು ಗಾಯಮಾಡಿ ದವರ ವ್ಯಸನವನ್ನು ಮಾತನಾಡಿಕೊಳ್ಳುತ್ತಾರೆ. ಅವರ ಅಕ್ರಮಕ್ಕೆ ಅಕ್ರಮವನ್ನು ಸೇರಿಸು; ಅವರು ನಿನ್ನ ನೀತಿಯಲ್ಲಿ ಸೇರದೆ ಇರಲಿ. ಜೀವದ ಪುಸ್ತಕದೊಳಗಿಂದ ಅವರು ಅಳಿಸಲ್ಪಡಲಿ; ನೀತಿವಂತರ ಸಂಗಡ ಅವರ ಹೆಸರು ಬರೆಯಲ್ಪಡದೆ ಇರಲಿ. ಆದರೆ ನಾನು ದೀನನಾಗಿಯೂ ವ್ಯಸನವುಳ್ಳವನಾಗಿಯೂ ಇದ್ದೇನೆ; ಓ ದೇವರೇ, ನಿನ್ನ ರಕ್ಷಣೆಯು ನನ್ನನ್ನು ಉನ್ನತದಲ್ಲಿರಿಸಲಿ. ದೇವರ ಹೆಸರನ್ನು ಹಾಡುತ್ತಾ ಸ್ತುತಿಸುವೆನು; ಸ್ತೋತ್ರದಿಂದ ಆತನನ್ನು ಘನಪಡಿ ಸುವೆನು. ಅದು ಕರ್ತನಿಗೆ ಕೊಂಬುಗಳೂ ಗೊರಸೆ ಗಳೂ ಉಳ್ಳ ಎಳೇ ಹೋರಿಗಳಿಗಿಂತ ಮೆಚ್ಚಿಕೆಯಾಗಿರು ವದು. ಇದನ್ನು ದೀನರು ನೋಡಿ, ಸಂತೋಷಿಸು ವರು. ದೇವರನ್ನು ಹುಡುಕುವ ನಿಮ್ಮ ಹೃದಯವು ಜೀವಿಸುವದು. ಕರ್ತನು ಬಡವರನ್ನು ಲಾಲಿಸಿ ತನ್ನ ಸೆರೆಯವರನ್ನು ತಿರಸ್ಕರಿಸುವದಿಲ್ಲ. ಆಕಾಶವೂ ಭೂಮಿಯೂ ಸಮುದ್ರಗಳೂ ಅವುಗಳಲ್ಲಿ ಸಂಚರಿಸುವುದೆಲ್ಲವೂ ಆತನನ್ನು ಸ್ತುತಿಸಲಿ. ದೇವರು ಚೀಯೋನನ್ನು ರಕ್ಷಿಸಿ ಯೆಹೂದದ ಪಟ್ಟ ಣಗಳನ್ನು ಕಟ್ಟುವನು; ಹೀಗೆ ಅವರು ಅಲ್ಲಿ ವಾಸ ಮಾಡಿ ಅದನ್ನು ಸ್ವಾಧೀನಪಡಿಸಿಕೊಳ್ಳುವರು.ಅವನ ಸೇವಕರ ಸಂತತಿಯು ಸಹ ಅದನ್ನು ಬಾಧ್ಯವಾಗಿ ಹೊಂದುವದು; ಆತನ ಹೆಸರನ್ನು ಪ್ರೀತಿಮಾಡುವವರು ಅದರಲ್ಲಿ ವಾಸಮಾಡುವರು. ಅವನ ಸೇವಕರ ಸಂತತಿಯು ಸಹ ಅದನ್ನು ಬಾಧ್ಯವಾಗಿ ಹೊಂದುವದು; ಆತನ ಹೆಸರನ್ನು ಪ್ರೀತಿಮಾಡುವವರು ಅದರಲ್ಲಿ ವಾಸಮಾಡುವರು.
- Mark 14:64–65 ಮಾರ್ಕನು 14:64–65ನೀವು ಈ ದೇವದೂಷಣೆಯನ್ನು ಕೇಳಿದ್ದೀರಲ್ಲಾ; ನಿಮಗೆ ಹೇಗೆ ತೋರುತ್ತದೆ ಎಂದು ಕೇಳಲು ಅವರೆಲ್ಲರೂ ಅವನು ಮರಣದಂಡನೆ ಹೊಂದತಕ್ಕವನು ಎಂದು ತೀರ್ಪುಮಾಡಿದರು ತರು ವಾಯ ಕೆಲವರು ಆತನ ಮೇಲೆ ಉಗುಳಿ ಆತನ ಮುಖವನ್ನು ಮುಚ್ಚಿ ಆತನನ್ನು ಗುದ್ದುವದಕ್ಕೆ ಆರಂಭಿಸಿ ಆತನಿಗೆ--ಪ್ರವಾದನೆ ಹೇಳು ಅಂದರು. ಆಳು ಗಳು ಆತನನ್ನು ಹೊಡೆದರು.
- Psalm 2:1–3 ಕೀರ್ತನೆಗಳು 2:1–3ಅನ್ಯಜನರು ಕೋಪೋದ್ರೇಕಗೊಳ್ಳುವದೂ ಪ್ರಜೆಗಳು ವ್ಯರ್ಥವಾದದ್ದನ್ನು ಯೋಚಿಸುವದೂ ಯಾಕೆ? ಕರ್ತನಿಗೆ ವಿರೋಧ ವಾಗಿಯೂ ಆತನ ಅಭಿಷಕ್ತನಿಗೆ ವಿರೋಧವಾಗಿಯೂ ಭೂರಾಜರು ನಿಂತುಕೊಳ್ಳುತ್ತಾರೆ; ಪ್ರಭುಗಳು ಒಟ್ಟಾಗಿ ಆಲೋಚಿಸುತ್ತಾರೆ. ಅವರು--ಅವರ ಬಂಧನಗಳನ್ನು ತುಂಡುತುಂಡಾಗಿ ಮುರಿದು ಅವರ ಕಟ್ಟುಗಳನ್ನು ನಮ್ಮಿಂದ ಬಿಸಾಡೋಣ ಅನ್ನುತ್ತಾರೆ.