Matthew · chapter 20 · verse 9
Matthew 20:9 in Kannada
ಸುಮಾರು ಹನ್ನೊಂದನೆ ಯ ತಾಸಿನಲ್ಲಿ ಕರೆಯಲ್ಪಟ್ಟವರಾದ ಪ್ರತಿಯೊಬ್ಬನು ಒಂದೊಂದು ಪಾವಲಿಯನ್ನು ಹೊಂದಿದನು.
Sumaaru hannondane ya taasinalli kareyalpattavaraada pratiyobbanu ondondu paavaliyannu hondidanu.
Matthew 20:9 in English
- King James Version (KJV)
- And when they came that [were hired] about the eleventh hour, they received every man a penny.
- World English Bible (WEB)
- “When those who were hired at about the eleventh hour came, they each received a denarius.
- American Standard Version (ASV)
- And when they came that [were hired] about the eleventh hour, they received every man a shilling.
- Bible in Basic English (BBE)
- And when those men came who had gone to work at the eleventh hour, they were given every man a penny.
- Darby Translation (DBY)
- And when they [who came to work] about the eleventh hour came, they received each a denarius.
- Webster's Bible (WBS)
- And when they came that [were hired] about the eleventh hour, they received every man a penny.
- Young's Literal Translation (YLT)
- And they of about the eleventh hour having come, did receive each a denary.
Read in context
- 7ಅವರು ಅವನಿಗೆ--ಯಾಕಂದರೆ ಯಾರೂ ನಮ್ಮನ್ನು ಕೂಲಿಗೆ ಕರೆಯಲಿಲ್ಲ ಅಂದರು. ಆಗ ಅವನು ಅವರಿಗೆ--ನೀವು ಸಹ ದ್ರಾಕ್ಷೇತೋಟಕ್ಕೆ ಹೋಗಿರಿ ಮತ್ತು ಸರಿಯಾದದ್ದನ್ನು ನೀವು ಹೊಂದುವಿರಿ ಎಂದು ಹೇಳಿ ದನು.
- 8ಹೀಗೆ ಸಾಯಂಕಾಲವಾದಾಗ ದ್ರಾಕ್ಷೇತೋಟ ದ ಯಜಮಾನನು ತನ್ನ ಮನೇವಾರ್ತೆಯವನಿಗೆ-- ಕೂಲಿಯಾಳುಗಳನ್ನು ಕರೆದು ಕೊನೆಯವನಿಂದ ಪ್ರಾರಂಭಿಸಿ ಮೊದಲನೆಯವನ ವರೆಗೆ ಕೂಲಿಯನ್ನು ಕೊಡು ಎಂದು ಹೇಳಿದನು.
- 9ಸುಮಾರು ಹನ್ನೊಂದನೆ ಯ ತಾಸಿನಲ್ಲಿ ಕರೆಯಲ್ಪಟ್ಟವರಾದ ಪ್ರತಿಯೊಬ್ಬನು ಒಂದೊಂದು ಪಾವಲಿಯನ್ನು ಹೊಂದಿದನು.
- 10ಆದರೆ ಮೊದಲು ಬಂದವರು ತಮಗೆ ಹೆಚ್ಚು ದೊರೆಯುವ ದೆಂದು ನೆನಸಿದರು. ಆದರೂ ಅವರಲ್ಲಿ ಪ್ರತಿಯೊಬ್ಬನು ಅದೇ ರೀತಿಯಲ್ಲಿ ಒಂದೊಂದು ಪಾವಲಿಯನ್ನು ಹೊಂದಿದನು.
- 11ಅವರು ಅದನ್ನು ಹೊಂದಿದಾಗ ಮನೇ ಯಜಮಾನನಿಗೆ ವಿರೋಧವಾಗಿ ಗುಣು ಗುಟ್ಟುತ್ತಾ--
Cross references
- Ephesians 2:8–10 ಎಫೆಸದವರಿಗೆ 2:8–10ನಂಬಿಕೆಯ ಮೂಲಕ ಕೃಪೆ ಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, ಅದು ದೇವರ ದಾನವೇ. ಅದು ಕ್ರಿಯೆಗಳಿಂದ ಉಂಟಾದದ್ದಲ್ಲ; ಆದದರಿಂದ ಹೊಗಳಿಕೊಳ್ಳುವದಕ್ಕೆ ಯಾರಿಗೂ ಆಸ್ಪದ ವಿಲ್ಲ. ದೇವರು ಮುಂದಾಗಿ ನೇಮಿಸಿದ ಸತ್ಕ್ರಿಯೆ ಗಳಲ್ಲಿ ನಾವು ನಡೆಯುವಂತೆ ಕ್ರಿಸ್ತ ಯೇಸುವಿನಲ್ಲಿ ಸೃಷ್ಟಿಸಲ್ಪಟ್ಟವರಾದ ನಾವು ಆತನ ಕೆಲಸವಾಗಿದ್ದೇವೆ.
- Romans 4:3–6 ರೋಮಾಪುರದವರಿಗೆ 4:3–6ಹಾಗಾದರೆ ಬರಹವು ಹೇಳುವ ದೇನು? ಅಬ್ರಹಾಮನು ದೇವರನ್ನು ನಂಬಿದನು; ಆ ನಂಬಿಕೆಯು ಅವನ ಲೆಕ್ಕಕ್ಕೆ ನೀತಿ ಎಂದು ಎಣಿಸಲ್ಪಟ್ಟಿತು. ಕೆಲಸ ಮಾಡಿದವನಿಗೆ ಬರುವ ಸಂಬಳವು ಕೃಪೆಯಿಂದ ದೊರಕುವಂಥದ್ದೆಂದು ಎಣಿಕೆ ಯಾಗುವದಿಲ್ಲ; ಅದು ಸಲ್ಲತಕ್ಕದ್ದೇ. ಆದರೆ ಯಾವನು ಪುಣ್ಯಕ್ರಿಯೆಗಳನ್ನು ಮಾಡಿದವನಾಗಿರದೆ ಭಕ್ತಿಹೀನರನ್ನು ನೀತಿವಂತರೆಂದು ನಿರ್ಣಯಿಸುವಾತನಲ್ಲಿ ನಂಬಿಕೆ ಯಿಡುತ್ತಾನೋ ಅವನ ನಂಬಿಕೆಯೇ ನೀತಿ ಎಂದು ಎಣಿಸಲ್ಪಡುವದು. ದೇವರು ಯಾವನನ್ನು ಕ್ರಿಯೆ ಗಳಿಲ್ಲದೆ ನೀತಿವಂತನೆಂದು ಎಣಿಸುತ್ತಾನೋ ಅವನು ಧನ್ಯನೆಂದು ದಾವೀದನು ಸಹ ಹೇಳುತ್ತಾನೆ.
- Matthew 20:2 ಮತ್ತಾಯನು 20:2ಅವನು ದಿನಕ್ಕೆ ಒಂದು ಪಾವಲಿಯಂತೆ (ಪೆನ್ನಿ) ಕೂಲಿಯಾಳುಗಳೊಂದಿಗೆ ಒಪ್ಪಂದ ಮಾಡಿ ಕೊಂಡು ತನ್ನ ದ್ರಾಕ್ಷೇತೋಟಕ್ಕೆ ಅವರನ್ನು ಕಳುಹಿಸಿ ಕೊಟ್ಟನು.
- Luke 23:40–43 ಲೂಕನು 23:40–43ಆದರೆ ಮತ್ತೊಬ್ಬನು ಪ್ರತ್ಯುತ್ತರವಾಗಿ ಅವನನ್ನು ಗದರಿಸಿ--ನೀನು ಇದೇ ದಂಡನೆಯಲ್ಲಿರುವದನ್ನು ನೋಡಿಯೂ ದೇವರಿಗೆ ಭಯಪಡುವದಿಲ್ಲವೋ? ನಾವಂತೂ ನ್ಯಾಯವಾಗಿಯೇ ನಮ್ಮ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಹೊಂದುತ್ತಾ ಇದ್ದೇವೆ; ಈತನಾದರೋ ತಪ್ಪಾದದ್ದೇನೂ ಮಾಡಲಿಲ್ಲ ಅಂದನು. ಇದಲ್ಲದೆ ಅವನು ಯೇಸು ವಿಗೆ--ಕರ್ತನೇ, ನೀನು ನಿನ್ನ ರಾಜ್ಯದಲ್ಲಿ ಬರುವಾಗ ನನ್ನನ್ನು ನೆನಪು ಮಾಡಿಕೋ ಅಂದನು. ಆಗ ಯೇಸು ಅವನಿಗೆ--ಈ ದಿನವೇ ನೀನು ನನ್ನೊಂದಿಗೆ ಪರದೈಸಿನಲ್ಲಿರುವಿ ಎಂದು ನಾನು ನಿನಗೆ ನಿಜವಾಗಿ ಹೇಳುತ್ತೇನೆ ಅಂದನು.
- Ephesians 1:6–8 ಎಫೆಸದವರಿಗೆ 1:6–8ತನ್ನ ಕೃಪಾಮಹಿಮೆಯ ಸ್ತುತಿಗಾಗಿ ಆತನು ನಮ್ಮನ್ನು ಆ ಪ್ರಿಯನಲ್ಲಿ ಅಂಗೀಕರಿಸಿದ್ದಾನೆ. ಆತನ ಕೃಪಾ ಐಶ್ವರ್ಯ ಕ್ಕನುಸಾರವಾಗಿ ಆತನ ರಕ್ತದ ಮೂಲಕ ಆತನಲ್ಲಿ ನಮಗೆ ವಿಮೋಚನೆಯು ಅಂದರೆ ಪಾಪಗಳ ಕ್ಷಮಾ ಪಣೆಯು ಉಂಟಾಯಿತು. ಹೀಗೆ ಆತನು ತನ್ನ ಕೃಪಾತಿಶಯದಲ್ಲಿ ಸಕಲ ಜ್ಞಾನವನ್ನೂ ಬುದ್ದಿಯನ್ನೂ ಇನ್ನೂ ಹೆಚ್ಚಾಗಿ ನಮ್ಮ ಕಡೆಗೆ ತೋರಿಸಿದ್ದಾನೆ.
- Matthew 20:6–7 ಮತ್ತಾಯನು 20:6–7ತರುವಾಯ ಸುಮಾರು ಹನ್ನೊಂದ ನೆಯ ತಾಸಿನಲ್ಲಿ ಅವನು ಹೊರಗೆಹೋಗಿ ಬೇರೆ ಕೆಲವರು ಕೆಲಸವಿಲ್ಲದೆ ನಿಂತಿರುವದನ್ನು ಕಂಡು ಅವರಿಗೆ--ನೀವು ದಿನವೆಲ್ಲಾ ಇಲ್ಲಿ ಕೆಲಸವಿಲ್ಲದೆ ನಿಂತಿರುವದೇಕೆ ಎಂದು ಕೇಳಿದನು. ಅವರು ಅವನಿಗೆ--ಯಾಕಂದರೆ ಯಾರೂ ನಮ್ಮನ್ನು ಕೂಲಿಗೆ ಕರೆಯಲಿಲ್ಲ ಅಂದರು. ಆಗ ಅವನು ಅವರಿಗೆ--ನೀವು ಸಹ ದ್ರಾಕ್ಷೇತೋಟಕ್ಕೆ ಹೋಗಿರಿ ಮತ್ತು ಸರಿಯಾದದ್ದನ್ನು ನೀವು ಹೊಂದುವಿರಿ ಎಂದು ಹೇಳಿ ದನು.
- Romans 5:20–21 ರೋಮಾಪುರದವರಿಗೆ 5:20–21ಹೇಗಾದರೂ ಅಪರಾಧವು ಹೆಚ್ಚಾಗಿ ಕಂಡುಬರುವ ಹಾಗೆ ನ್ಯಾಯಪ್ರಮಾಣವು ಪ್ರವೇಶಿಸಿತು; ಆದರೆ ಪಾಪವು ಹೆಚ್ಚಿದಲ್ಲೇ ಕೃಪೆಯು ಎಷ್ಟೋ ಹೆಚ್ಚಾಗಿ ಪ್ರಬಲವಾಯಿತು.ಹೀಗೆ ಪಾಪವು ಮರಣವನ್ನುಂಟು ಮಾಡುವದಕ್ಕಾಗಿ ಪ್ರಭುತ್ವವನ್ನು ನಡಿಸಿದ ಹಾಗೆಯೇ ಕೃಪೆಯು ನೀತಿಯ ಮೂಲಕ ನಮ್ಮ ಕರ್ತನಾದ ಯೇಸು ಕ್ರಿಸ್ತನಿಂದಾದ ನಿತ್ಯಜೀವ ವನ್ನುಂಟು ಮಾಡುವದಕ್ಕೆ ಪ್ರಭುತ್ವ ನಡಿಸುವದು. ಹೀಗೆ ಪಾಪವು ಮರಣವನ್ನುಂಟು ಮಾಡುವದಕ್ಕಾಗಿ ಪ್ರಭುತ್ವವನ್ನು ನಡಿಸಿದ ಹಾಗೆಯೇ ಕೃಪೆಯು ನೀತಿಯ ಮೂಲಕ ನಮ್ಮ ಕರ್ತನಾದ ಯೇಸು ಕ್ರಿಸ್ತನಿಂದಾದ ನಿತ್ಯಜೀವ ವನ್ನುಂಟು ಮಾಡುವದಕ್ಕೆ ಪ್ರಭುತ್ವ ನಡಿಸುವದು.
- 1 Timothy 1:14–16 1 ತಿಮೊಥೆಯನಿಗೆ 1:14–16ನಮ್ಮ ಕರ್ತನ ಕೃಪೆಯು ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆ ಮತ್ತು ಪ್ರೀತಿಯೊಂದಿಗೆ ಅತ್ಯಧಿಕವಾಯಿತು. ಕ್ರಿಸ್ತ ಯೇಸು ಪಾಪಿಗಳನ್ನು ರಕ್ಷಿಸುವದಕ್ಕೋಸ್ಕರ ಈ ಲೋಕಕ್ಕೆ ಬಂದನು ಎಂದು ಹೇಳುವದು ನಂಬತಕ್ಕದ್ದಾಗಿಯೂ ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದಾಗಿಯೂ ಅದೆ; ಆ ಪಾಪಿಗಳಲ್ಲಿ ನಾನೇ ಮುಖ್ಯನು. ಹೇಗಿದ್ದರೂ ಇನ್ನು ಮುಂದೆ ನಿತ್ಯ ಜೀವಕ್ಕಾಗಿ ತನ್ನ ಮೇಲೆ ನಂಬಿಕೆಯಿಡುವವರಿಗೆ ದೃಷ್ಟಾಂತವಿರಬೇಕೆಂದು ಯೇಸು ಕ್ರಿಸ್ತನು ಮೊದಲು ನನ್ನನ್ನು ಕರುಣಿಸಿ ನನ್ನಲ್ಲಿ ತನ್ನ ಪೂರ್ಣದೀರ್ಘ ಶಾಂತಿಯನ್ನು ತೋರ್ಪಡಿಸಿದನು.