Matthew · chapter 21 · verse 30
Matthew 21:30 in Kannada
ಆಮೇಲೆ ಅವನು ಎರಡ ನೆಯವನ ಬಳಿಗೆ ಬಂದು ಅದೇ ಪ್ರಕಾರ ಅವನಿಗೆ ಹೇಳಿದನು. ಅದಕ್ಕವನು ಪ್ರತ್ಯುತ್ತರವಾಗಿ--ಅಯ್ಯಾ, ನಾನು ಹೋಗುತ್ತೇನೆ ಎಂದು ಹೇಳಿ ಹೋಗಲಿಲ್ಲ.
Aamele avanu erada neyavana balige bandu ade prakaara avanige helidanu. Adakkavanu pratyuttaravaagi--ayyaa, naanu hoguttene endu heli hogalilla.
Matthew 21:30 in English
- King James Version (KJV)
- And he came to the second, and said likewise. And he answered and said, I [go], sir: and went not.
- World English Bible (WEB)
- He came to the second, and said the same thing. He answered, ‘I’m going, sir,’ but he didn’t go.
- American Standard Version (ASV)
- And he came to the second, and said likewise. And he answered and said, I [go], sir: and went not.
- Bible in Basic English (BBE)
- And he came to the second and said the same. And he made answer and said, I go, sir: and went not.
- Darby Translation (DBY)
- And coming to the second he said likewise; and he answering said, I [go], sir, and went not.
- Webster's Bible (WBS)
- And he came to the second, and said likewise. And he answered and said, I [go] , sir: and went not.
- Young's Literal Translation (YLT)
- 'And having come to the second, he said in the same manner, and he answering said, I [go], sir, and went not;
Read in context
- 28ನೀವು ನೆನಸುವದೇನು? ಒಬ್ಬ ಮನುಷ್ಯನಿಗೆ ಇಬ್ಬರು ಮಕ್ಕಳಿದ್ದರು; ಅವನು ಮೊದಲನೆಯವನ ಬಳಿಗೆ ಬಂದು--ಮಗನೇ, ಹೋಗಿ ಈ ಹೊತ್ತು ನನ್ನ ದ್ರಾಕ್ಷೇತೋಟದಲ್ಲಿ ಕೆಲಸಮಾಡು ಎಂದು ಹೇಳಿದನು.
- 29ಅವನು ಪ್ರತ್ಯುತ್ತರವಾಗಿ--ನಾನು ಹೋಗುವದಿಲ್ಲ ಎಂದು ಹೇಳಿ ತರುವಾಯ ಪಶ್ಚಾ ತ್ತಾಪಪಟ್ಟು ಹೋದನು.
- 30ಆಮೇಲೆ ಅವನು ಎರಡ ನೆಯವನ ಬಳಿಗೆ ಬಂದು ಅದೇ ಪ್ರಕಾರ ಅವನಿಗೆ ಹೇಳಿದನು. ಅದಕ್ಕವನು ಪ್ರತ್ಯುತ್ತರವಾಗಿ--ಅಯ್ಯಾ, ನಾನು ಹೋಗುತ್ತೇನೆ ಎಂದು ಹೇಳಿ ಹೋಗಲಿಲ್ಲ.
- 31ಈ ಇಬ್ಬರಲ್ಲಿ ಯಾವನು ತನ್ನ ತಂದೆಯ ಇಷ್ಟದಂತೆ ಮಾಡಿದನು ಎಂದು ಕೇಳಲು ಅವರು ಆತನಿಗೆ--ಮೊದಲನೆಯವನು ಅಂದರು. ಆಗ ಯೇಸು ಅವರಿಗೆ --ಸುಂಕದವರೂ ಸೂಳೆಯರೂ ನಿಮಗಿಂತ ಮೊದಲು ದೇವರರಾಜ್ಯದೊಳಗೆ ಸೇರುವರೆಂದು ನಿಮಗೆ ನಿಜವಾಗಿ ಹೇಳುತ್ತೇನೆ.
- 32ಯಾಕಂದರೆ ಯೋಹಾನನು ನೀತಿಯ ಮಾರ್ಗದಲ್ಲಿ ನಿಮ್ಮ ಬಳಿಗೆ ಬಂದನು. ಮತ್ತು ನೀವು ಅವನನ್ನು ನಂಬಲಿಲ್ಲ; ಆದರೆ ಸುಂಕದವರೂ ಸೂಳೆಯರೂ ಅವನನ್ನು ನಂಬಿದರು; ನೀವು ಅದನ್ನು ನೋಡಿದ ಮೇಲೆಯೂ ಅವನನ್ನು ನಂಬುವಂತೆ ಪಶ್ಚಾತ್ತಾಪ ಪಡಲಿಲ್ಲ.
Cross references
- Titus 1:16 ತೀತನಿಗೆ 1:16ಅವರು ತಾವು ದೇವರನ್ನು ಅರಿತವರೆಂದು ಹೇಳಿ ಕೊಳ್ಳುತ್ತಾರೆ; ಆದರೆ ಅವರು ಅಸಹ್ಯರೂ ಅವಿಧೇಯ ರೂ ಸತ್ಕಾರ್ಯಗಳಿಗೆಲ್ಲಾ ಭ್ರಷ್ಟರೂ ಆಗಿರುವದರಿಂದ ದೇವರನ್ನು ತಮ್ಮ ಕೃತ್ಯಗಳಿಂದಲೇ ಅಲ್ಲಗಳೆಯುವರು.
- Ezekiel 33:31 ಯೆಹೆಜ್ಕೇಲನು 33:31ಬೇರೆ ಜನರು ಬರುವ ಹಾಗೆ ಅವರು ನಿನ್ನ ಬಳಿಗೆ ಬಂದು ಜನರು ಕುಳಿತುಕೊಳ್ಳುವ ಹಾಗೆ ನಿನ್ನ ಮುಂದೆ ಕುಳಿತುಕೊಳ್ಳುವರು; ಅವರು ನಿನ್ನ ವಾಕ್ಯಗಳನ್ನು ಕೇಳುವರು, ಆದರೆ ಅವರು ಅವುಗಳನ್ನು ಮಾಡುವದಿಲ್ಲ. ಅವರು ತಮ್ಮ ಬಾಯಿಂದ ಹೆಚ್ಚಾದ ಪ್ರೀತಿಯನ್ನು ತೋರಿಸುವರು; ಆದರೆ ಅವರ ಹೃದಯವು ಲೋಭತ್ವದ ಕಡೆಗೆ ಹೋಗುವದು.
- Matthew 23:3 ಮತ್ತಾಯನು 23:3ಆದದರಿಂದ ಅವರು ನಿಮಗೆ ಹೇಳುವವು ಗಳನ್ನೆಲ್ಲಾ ಕೈಕೊಂಡು ನಡೆಯಿರಿ; ಅವರ ಕ್ರಿಯೆಗಳ ಪ್ರಕಾರ ನೀವು ಮಾಡಬೇಡಿರಿ; ಯಾಕಂದರೆ ಅವರು ಹೇಳುತ್ತಾರೆ, ಮಾಡುವದಿಲ್ಲ.
- Romans 2:17–25 ರೋಮಾಪುರದವರಿಗೆ 2:17–25ಇಗೋ, ನೀನು ಯೆಹೂದ್ಯನೆಂದು ಕರೆಯಲ್ಪ ಟ್ಟವನೂ ನ್ಯಾಯಪ್ರಮಾಣದಲ್ಲಿ ಭರವಸವಿಟ್ಟವನೂ ದೇವರಲ್ಲಿ ಹೆಚ್ಚಳಪಡುವವನೂ ಆಗಿದ್ದು ಆತನ ಚಿತ್ತವನ್ನು ತಿಳಿದವನಾಗಿ ನ್ಯಾಯಪ್ರಮಾಣದಿಂದ ಶಿಕ್ಷಿತ ನಾಗಿದ್ದು ಅತ್ಯುತ್ತಮವಾದವುಗಳನ್ನು ಮೆಚ್ಚುವವನಾ ಗಿದ್ದೀ; ಇದಲ್ಲದೆ ನೀನೇ ಕುರುಡರ ಮಾರ್ಗದರ್ಶ ಕನೂ ಕತ್ತಲೆಯಲ್ಲಿರುವವರಿಗೆ ಬೆಳಕೂ ಮೂರ್ಖರ ಉಪಾಧ್ಯಾಯನೂ ಶಿಶುಗಳ ಬೋಧಕನೂ ನ್ಯಾಯ ಪ್ರಮಾಣದಲ್ಲಿರುವ ತಿಳುವಳಿಕೆಯ ಮತ್ತು ಸತ್ಯದ ಸ್ವರೂಪವುಳ್ಳವನೂ ಆಗಿದ್ದೀ ಎಂದು ನಂಬಿಕೊಂಡಿದ್ದೀ. ಆದದರಿಂದ ಬೇರೊಬ್ಬನಿಗೆ ಬೋಧಿಸುವ ನೀನು ನಿನಗೆ ನೀನೇ ಬೋಧಿಸಿಕೊಳ್ಳುವದಿಲ್ಲವೋ? ಕದಿಯ ಬೇಡವೆಂದು ಬೇರೊಬ್ಬನಿಗೆ ಸಾರುವ ನೀನು ಕದಿಯು ತ್ತೀಯೋ? ವ್ಯಭಿಚಾರ ಮಾಡಬಾರದೆಂದು ಹೇಳುವ ನೀನು ವ್ಯಭಿಚಾರ ಮಾಡುತ್ತೀಯೋ? ವಿಗ್ರಹಗಳನ್ನು ಅಸಹ್ಯಿಸುವ ನೀನು ಪವಿತ್ರಸ್ಥಳವನ್ನು ಹೊಲೆಮಾಡು ತ್ತೀಯೋ? ನ್ಯಾಯಪ್ರಮಾಣದಲ್ಲಿ ಹೆಚ್ಚಳಪಡುವ ನೀನು ನ್ಯಾಯಪ್ರಮಾಣವನ್ನು ವಿಾರುವದರಿಂದ ದೇವ ರನ್ನು ಅವಮಾನಪಡಿಸುತ್ತೀಯೋ? ಬರೆಯಲ್ಪಟ್ಟ ಪ್ರಕಾರ--ನಿಮ್ಮ ಮೂಲಕ ದೇವರ ಹೆಸರು ಅನ್ಯ ಜನಾಂಗಗಳಲ್ಲಿ ದೂಷಿಸಲ್ಪಡುತ್ತದೆ. ನೀನು ನ್ಯಾಯಪ್ರಮಾಣವನ್ನು ಕೈಕೊಂಡರೆ ಸುನ್ನತಿಯು ನಿಜವಾಗಿಯೂ ಪ್ರಯೋಜನವಾದದ್ದೇ. ಆದರೆ ನೀನು ನ್ಯಾಯಪ್ರಮಾಣವನ್ನು ವಿಾರುವದಾದರೆ ನಿನ್ನ ಸುನ್ನತಿಯು ಸುನ್ನತಿ ಅಲ್ಲ.