Matthew · chapter 23 · verse 3
Matthew 23:3 in Kannada
ಆದದರಿಂದ ಅವರು ನಿಮಗೆ ಹೇಳುವವು ಗಳನ್ನೆಲ್ಲಾ ಕೈಕೊಂಡು ನಡೆಯಿರಿ; ಅವರ ಕ್ರಿಯೆಗಳ ಪ್ರಕಾರ ನೀವು ಮಾಡಬೇಡಿರಿ; ಯಾಕಂದರೆ ಅವರು ಹೇಳುತ್ತಾರೆ, ಮಾಡುವದಿಲ್ಲ.
Aadadarinda avaru nimage heluvavu galannellaa kaikondu nadeyiri; avara kriyegala prakaara neevu maadabediri; yaakandare avaru heluttaare, maaduvadilla.
Matthew 23:3 in English
- King James Version (KJV)
- All therefore whatsoever they bid you observe, [that] observe and do; but do not ye after their works: for they say, and do not.
- World English Bible (WEB)
- All things therefore whatever they tell you to observe, observe and do, but don’t do their works; for they say, and don’t do.
- American Standard Version (ASV)
- all things therefore whatsoever they bid you, [these] do and observe: but do not ye after their works; for they say, and do not.
- Bible in Basic English (BBE)
- All things, then, which they give you orders to do, these do and keep: but do not take their works as your example, for they say and do not.
- Darby Translation (DBY)
- all things therefore, whatever they may tell you, do and keep. But do not after their works, for they say and do not,
- Webster's Bible (WBS)
- All therefore, whatever they bid you observe, [that] observe and do: but do not ye according to their works: for they say, and do not.
- Young's Literal Translation (YLT)
- all, then, as much as they may say to you to observe, observe and do, but according to their works do not, for they say, and do not;
Read in context
- 1ತರುವಾಯ ಯೇಸು ಜನಸಮೂಹಕ್ಕೂ ಶಿಷ್ಯರಿಗೂ ಹೇಳಿದ್ದೇನಂದರೆ --
- 2ಶಾಸ್ತ್ರಿ ಗಳೂ ಫರಿಸಾಯರೂ ಮೋಶೆಯ ಸ್ಥಾನದಲ್ಲಿ ಕೂತಿ ದ್ದಾರೆ;
- 3ಆದದರಿಂದ ಅವರು ನಿಮಗೆ ಹೇಳುವವು ಗಳನ್ನೆಲ್ಲಾ ಕೈಕೊಂಡು ನಡೆಯಿರಿ; ಅವರ ಕ್ರಿಯೆಗಳ ಪ್ರಕಾರ ನೀವು ಮಾಡಬೇಡಿರಿ; ಯಾಕಂದರೆ ಅವರು ಹೇಳುತ್ತಾರೆ, ಮಾಡುವದಿಲ್ಲ.
- 4ಹೊರುವದಕ್ಕೆ ಅವರು ಭಾರವಾದ ಮತ್ತು ಕ್ರೂರವಾದ ಹೊರೆಗಳನ್ನು ಕಟ್ಟಿ ಜನರ ಹೆಗಲುಗಳ ಮೇಲೆ ಹೊರಿಸುತ್ತಾರೆ. ತಾವಾ ದರೋ ತಮ್ಮ ಬೆರಳುಗಳಲ್ಲಿ ಒಂದರಿಂದ ಲಾದರೂ ಅವುಗಳನ್ನು ಸರಿಸುವದಿಲ್ಲ.
- 5ಆದರೆ ತಾವು ಮಾಡುವ ತಮ್ಮ ಕ್ರಿಯೆಗಳನ್ನೆಲ್ಲಾ ಜನರು ನೋಡುವಂತೆ ಮಾಡು ತ್ತಾರೆ. ಅವರು ತಮ್ಮ ಜ್ಞಾಪಕಪಟ್ಟಿಗಳನ್ನು ಅಗಲಮಾಡಿ ಉಡುಪುಗಳ ಅಂಚುಗಳನ್ನು ಉದ್ದ ಮಾಡುತ್ತಾ
Cross references
- 2 Timothy 3:5 2 ತಿಮೊಥೆಯನಿಗೆ 3:5ಭಕ್ತಿಯ ವೇಷವಿದ್ದು ಅದರ ಬಲವನ್ನು ಅಲ್ಲಗಳೆಯುವವರೂ ಆಗಿರುವರು; ಇಂಥವರಿಂದ ಪ್ರತ್ಯೇಕವಾಗಿರು.
- Titus 1:16 ತೀತನಿಗೆ 1:16ಅವರು ತಾವು ದೇವರನ್ನು ಅರಿತವರೆಂದು ಹೇಳಿ ಕೊಳ್ಳುತ್ತಾರೆ; ಆದರೆ ಅವರು ಅಸಹ್ಯರೂ ಅವಿಧೇಯ ರೂ ಸತ್ಕಾರ್ಯಗಳಿಗೆಲ್ಲಾ ಭ್ರಷ್ಟರೂ ಆಗಿರುವದರಿಂದ ದೇವರನ್ನು ತಮ್ಮ ಕೃತ್ಯಗಳಿಂದಲೇ ಅಲ್ಲಗಳೆಯುವರು.
- Romans 2:19–24 ರೋಮಾಪುರದವರಿಗೆ 2:19–24ಇದಲ್ಲದೆ ನೀನೇ ಕುರುಡರ ಮಾರ್ಗದರ್ಶ ಕನೂ ಕತ್ತಲೆಯಲ್ಲಿರುವವರಿಗೆ ಬೆಳಕೂ ಮೂರ್ಖರ ಉಪಾಧ್ಯಾಯನೂ ಶಿಶುಗಳ ಬೋಧಕನೂ ನ್ಯಾಯ ಪ್ರಮಾಣದಲ್ಲಿರುವ ತಿಳುವಳಿಕೆಯ ಮತ್ತು ಸತ್ಯದ ಸ್ವರೂಪವುಳ್ಳವನೂ ಆಗಿದ್ದೀ ಎಂದು ನಂಬಿಕೊಂಡಿದ್ದೀ. ಆದದರಿಂದ ಬೇರೊಬ್ಬನಿಗೆ ಬೋಧಿಸುವ ನೀನು ನಿನಗೆ ನೀನೇ ಬೋಧಿಸಿಕೊಳ್ಳುವದಿಲ್ಲವೋ? ಕದಿಯ ಬೇಡವೆಂದು ಬೇರೊಬ್ಬನಿಗೆ ಸಾರುವ ನೀನು ಕದಿಯು ತ್ತೀಯೋ? ವ್ಯಭಿಚಾರ ಮಾಡಬಾರದೆಂದು ಹೇಳುವ ನೀನು ವ್ಯಭಿಚಾರ ಮಾಡುತ್ತೀಯೋ? ವಿಗ್ರಹಗಳನ್ನು ಅಸಹ್ಯಿಸುವ ನೀನು ಪವಿತ್ರಸ್ಥಳವನ್ನು ಹೊಲೆಮಾಡು ತ್ತೀಯೋ? ನ್ಯಾಯಪ್ರಮಾಣದಲ್ಲಿ ಹೆಚ್ಚಳಪಡುವ ನೀನು ನ್ಯಾಯಪ್ರಮಾಣವನ್ನು ವಿಾರುವದರಿಂದ ದೇವ ರನ್ನು ಅವಮಾನಪಡಿಸುತ್ತೀಯೋ? ಬರೆಯಲ್ಪಟ್ಟ ಪ್ರಕಾರ--ನಿಮ್ಮ ಮೂಲಕ ದೇವರ ಹೆಸರು ಅನ್ಯ ಜನಾಂಗಗಳಲ್ಲಿ ದೂಷಿಸಲ್ಪಡುತ್ತದೆ.
- Acts 5:29 ಅಪೊಸ್ತಲರ ಕೃತ್ಯಗಳು 5:29ಆಗ ಪೇತ್ರನೂ ಉಳಿದ ಅಪೊಸ್ತಲರೂ ಪ್ರತ್ಯುತ್ತರವಾಗಿ--ನಾವು ಮನುಷ್ಯರಿಗಿಂತ ದೇವರಿಗೆ ವಿಧೇಯರಾಗತಕ್ಕದ್ದು.
- Romans 13:1 ರೋಮಾಪುರದವರಿಗೆ 13:1ಪ್ರತಿಯೊಬ್ಬನು ತನ್ನ ಮೇಲಿರುವ ಅಧಿಕಾರಿಗಳಿಗೆ ಅಧೀನನಾಗಿರಲಿ; ಯಾಕಂದರೆ ದೇವರಿಂದ ಹೊರತು ಒಬ್ಬರಿಗೂ ಅಧಿಕಾರವಿರುವದಿಲ್ಲ; ಇರುವ ಅಧಿಕಾರಿಗಳು ದೇವ ರಿಂದ ನೇಮಿಸಲ್ಪಟ್ಟವರು.
- Matthew 21:30 ಮತ್ತಾಯನು 21:30ಆಮೇಲೆ ಅವನು ಎರಡ ನೆಯವನ ಬಳಿಗೆ ಬಂದು ಅದೇ ಪ್ರಕಾರ ಅವನಿಗೆ ಹೇಳಿದನು. ಅದಕ್ಕವನು ಪ್ರತ್ಯುತ್ತರವಾಗಿ--ಅಯ್ಯಾ, ನಾನು ಹೋಗುತ್ತೇನೆ ಎಂದು ಹೇಳಿ ಹೋಗಲಿಲ್ಲ.
- Psalm 50:16–20 ಕೀರ್ತನೆಗಳು 50:16–20ಆದರೆ ದುಷ್ಟನಿಗೆ ದೇವರು ಹೇಳುವದೇನಂದರೆ --ನನ್ನ ನಿಯಮಗಳನ್ನು ಪ್ರಕಟಿಸುವದು ನಿನಗೇನು? ಇಲ್ಲವೆ ನನ್ನ ಒಡಂಬಡಿಕೆಯನ್ನು ನಿನ್ನ ಬಾಯಲ್ಲಿ ಉಚ್ಚರಿಸುವದೇಕೆ? ನೀನು ಶಿಕ್ಷಣವನ್ನು ಹಗೆಮಾಡಿ ನನ್ನ ವಾಕ್ಯಗಳನ್ನು ನಿನ್ನ ಹಿಂದೆ ಹಾಕುತ್ತೀಯಲ್ಲಾ. ಕಳ್ಳನನ್ನು ನೋಡಿದರೆ ಅವನೊಂದಿಗೆ ಒಪ್ಪುತ್ತೀ; ಜಾರರ ಸಂಗಡ ನಿನ್ನ ಪಾಲು ಇದೆ. ನೀನು ನಿನ್ನ ಬಾಯನ್ನು ಕೇಡಿಗೆ ಒಪ್ಪಿಸುತ್ತೀ; ನಿನ್ನ ನಾಲಿಗೆಯು ಮೋಸವನ್ನು ಜೋಡಿಸುತ್ತದೆ. ನೀನು ಕೂತು ಕೊಂಡು ನಿನ್ನ ಸಹೋದರನಿಗೆ ವಿರೋಧವಾಗಿ ನುಡಿ ಯುತ್ತೀ; ನಿನ್ನ ಸ್ವಂತ ಒಡಹುಟ್ಟಿದವನ ಮೇಲೆ ಚಾಡಿ ಹೇಳುತ್ತೀ.
- Deuteronomy 17:9–12 ಧರ್ಮೋಪದೇಶಕಾಂಡ 17:9–12ಯಾಜಕರಾದ ಲೇವಿಯರ ಬಳಿಗೂ ಆ ದಿವಸದಲ್ಲಿ ನ್ಯಾಯಾಧಿಪತಿಯಾದವನ ಬಳಿಗೂ ಹೋಗಿ ವಿಚಾರಿಸಬೇಕು; ಅವರು ನಿನಗೆ ಆ ನ್ಯಾಯದ ತೀರ್ಪನ್ನು ತಿಳಿಸುವರು. ಅವರು ನಿನಗೆ ಕರ್ತನು ಆದುಕೊಳ್ಳುವ ಆ ಸ್ಥಳದಿಂದ ತಿಳಿಸುವ ತೀರ್ಪಿನ ಪ್ರಕಾರ ನೀನು ಮಾಡಿ ಬೋಧಿಸುವಂಥದ್ದೆಲ್ಲಾ ಅನುಸ ರಿಸಬೇಕು. ಅವರು ನಿನಗೆ ಬೋಧಿಸುವ ನ್ಯಾಯ ಪ್ರಮಾಣದ ಪ್ರಕಾರವೂ ಅವರು ನಿನಗೆ ಹೇಳುವ ತೀರ್ಪಿನ ಪ್ರಕಾರವೂ ನೀನು ಮಾಡಬೇಕು; ಅವರು ನಿನಗೆ ತಿಳಿಸುವ ವಾಕ್ಯವನ್ನು ಬಿಟ್ಟು ಎಡಕ್ಕಾದರೂ ಬಲಕ್ಕಾದರೂ ತೊಲಗಬಾರದು. ಅಲ್ಲಿ ನಿನ್ನ ದೇವ ರಾದ ಕರ್ತನಿಗೆ ಸೇವೆಮಾಡುವದಕ್ಕೆ ನಿಂತ ಯಾಜಕನ ಮಾತಾದರೂ ನ್ಯಾಯಾಧಿಪತಿಯ ಮಾತಾದರೂ ಕೇಳದೆ ಅಹಂಕಾರದಿಂದ ಏನಾದರೂ ಮಾಡುವ ದಾದರೆ ಆ ಮನುಷ್ಯನು ಸಾಯಬೇಕು; ಹೀಗೆ ಕೆಟ್ಟದ್ದನ್ನು ಇಸ್ರಾಯೇಲಿನಿಂದ ತೆಗೆದುಹಾಕಬೇಕು;
- 2 Chronicles 30:12 2 ಪೂರ್ವಕಾಲವೃತ್ತಾಂತ 30:12ಇದಲ್ಲದೆ ಕರ್ತನ ವಾಕ್ಯದಿಂದುಂಟಾದ ಅರಸನ ಪ್ರಧಾನರ ಆಜ್ಞೆಯನ್ನು ಕೈಕೊಳ್ಳಲು ಅವರಿಗೆ ಒಂದೇ ಹೃದಯವನ್ನು ಕೊಡಲು ದೇವರ ಕೈ ಯೆಹೂ ದದವರಲ್ಲಿ ಇತ್ತು.
- Exodus 18:23 ವಿಮೋಚನಕಾಂಡ 18:23ಈ ಕಾರ್ಯವನ್ನು ಮಾಡುವದಕ್ಕೆ ದೇವರು ನಿನಗೆ ಅಪ್ಪಣೆಕೊಟ್ಟರೆ ನೀನು ಇದನ್ನು ನಿರ್ವಹಿಸಲು ಶಕ್ತ ನಾಗುವಿ. ಈ ಜನರೆಲ್ಲರೂ ತಮ್ಮ ತಮ್ಮ ಸ್ಥಳಗಳಿಗೆ ಸಮಾಧಾನದಿಂದ ಹೋಗುವರು ಅಂದನು.
- Matthew 15:2–9 ಮತ್ತಾಯನು 15:2–9ನಿನ್ನ ಶಿಷ್ಯರು ಹಿರಿಯರ ಸಂಪ್ರದಾಯ ವನ್ನು ಯಾಕೆ ಮಾರುತ್ತಾರೆ? ಯಾಕಂದರೆ ಅವರು ರೊಟ್ಟಿ ತಿನ್ನುವಾಗ ತಮ್ಮ ಕೈಗಳನ್ನು ತೊಳಕೊಳ್ಳುವದಿಲ್ಲ ಅಂದರು. ಅದಕ್ಕೆ ಆತನು ಪ್ರತ್ಯುತ್ತರವಾಗಿ ಅವ ರಿಗೆ--ನೀವು ಸಹ ನಿಮ್ಮ ಸಂಪ್ರದಾಯದ ನಿಮಿತ್ತವಾಗಿ ದೇವರ ಆಜ್ಞೆಯನ್ನು ಯಾಕೆ ಮಾರುತ್ತೀರಿ? ಯಾಕಂ ದರೆ ದೇವರು ಅಪ್ಪಣೆ ಕೊಟ್ಟು ಹೇಳಿದ್ದೇನಂದರೆ--ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು. ಮತ್ತು--ಯಾವನಾದರೂ ತಂದೆಯನ್ನಾಗಲೀ ತಾಯಿಯನ್ನಾ ಗಲೀ ಶಪಿಸಿದರೆ ಅವನು ಸಾಯಲೇಬೇಕು ಎಂಬದೇ. ಆದರೆ ನೀವು--ಯಾವನಾದರೂ ತನ್ನ ತಂದೆಗಾಗಲೀ ತಾಯಿಗಾಗಲೀ-- ನನ್ನಿಂದ ನಿನಗೆ ಪ್ರಯೋಜನ ವಾಗತಕ್ಕದ್ದು ಕಾಣಿಕೆಯಾಯಿತು ಎಂದು ಹೇಳುವದಾ ದರೆ ಅವನು ತನ್ನ ತಂದೆಯನ್ನಾಗಲೀ ತಾಯಿಯನ್ನಾ ಗಲೀ ಸನ್ಮಾನಿಸುವದರಿಂದ ಬಿಡುಗಡೆಯಾಗಿದ್ದಾನೆಂದು ನೀವು ಹೇಳುತ್ತೀರಿ. ಹೀಗೆ ನಿಮ್ಮ ಸಂಪ್ರದಾಯದ ನಿಮಿತ್ತವಾಗಿ ದೇವರ ಆಜ್ಞೆಯನ್ನು ನಿರರ್ಥಕ ಮಾಡಿದ್ದೀರಿ. ಕಪಟಿಗಳೇ, ನಿಮ್ಮ ವಿಷಯವಾಗಿ ಯೆಶಾಯನು ಸರಿಯಾಗಿ ಪ್ರವಾದಿಸಿದನು; ಆದೇ ನಂದರೆ-- ಈ ಜನರು ತಮ್ಮ ಬಾಯಿಂದ ನನ್ನನ್ನು ಸಮಾಪಿಸಿ ತುಟಿಗಳಿಂದ ನನ್ನನ್ನು ಸನ್ಮಾನಿಸುತ್ತಾರೆ; ಆದರೆ ಅವರ ಹೃದಯವು ನನ್ನಿಂದ ದೂರವಾಗಿದೆ. ಅವರು ಮನುಷ್ಯರ ಆಜ್ಞೆಗಳನ್ನು ಬೋಧಿಸಿ ಕಲಿಸುವ ದರಿಂದ ನನ್ನನ್ನು ಆರಾಧಿಸುವದು ವ್ಯರ್ಥ ಎಂಬದೇ.
- Exodus 18:19–20 ವಿಮೋಚನಕಾಂಡ 18:19–20ಆದದರಿಂದ ಈಗ ನನ್ನ ಮಾತನ್ನು ಕೇಳು, ನಿನಗೆ ಆಲೋಚನೆ ಹೇಳುತ್ತೇನೆ; ದೇವರು ನಿನ್ನ ಸಂಗಡ ಇರಲಿ; ನೀನು ಜನರಿಗಾಗಿ ದೇವರ ಪಕ್ಷದಲ್ಲಿದ್ದು ಅವರ ವ್ಯಾಜ್ಯಗಳನ್ನು ಆತನ ಮುಂದೆ ತರಬೇಕು. ನೇಮಕಗಳನ್ನೂ ನ್ಯಾಯ ಪ್ರಮಾಣಗಳನ್ನೂ ಅವರಿಗೆ ಕಲಿಸಿ, ಅವರು ಹೋಗ ತಕ್ಕ ಮಾರ್ಗವನ್ನೂ ಅವರು ಮಾಡತಕ್ಕ ಕೆಲಸವನ್ನೂ ಅವರಿಗೆ ತೋರಿಸಬೇಕು.