Matthew · chapter 22 · verse 12
Matthew 22:12 in Kannada
ಅವನು ಆ ಮನುಷ್ಯನಿಗೆ--ಸ್ನೇಹಿತನೇ, ಮದುವೆಯ ಉಡುಪಿಲ್ಲದೆ ನೀನು ಒಳಗೆ ಹೇಗೆ ಬಂದಿ ಎಂದು ಕೇಳಲು ಅವನು ಸುಮ್ಮನಿದ್ದನು.
Avanu aa manushyanige--snehitane, maduveya udupillade neenu olage hege bandi endu kelalu avanu summaniddanu.
Matthew 22:12 in English
- King James Version (KJV)
- And he saith unto him, Friend, how camest thou in hither not having a wedding garment? And he was speechless.
- World English Bible (WEB)
- and he said to him, ‘Friend, how did you come in here not wearing wedding clothing?’ He was speechless.
- American Standard Version (ASV)
- and he saith unto him, Friend, how camest thou in hither not having a wedding-garment? And he was speechless.
- Bible in Basic English (BBE)
- And he says to him, Friend, how came you in here not having a guest's robe? And he had nothing to say.
- Darby Translation (DBY)
- And he says to him, [My] friend, how camest thou in here not having on a wedding garment? But he was speechless.
- Webster's Bible (WBS)
- And he saith to him, Friend, how camest thou in hither, not having a wedding-garment? And he was speechless.
- Young's Literal Translation (YLT)
- and he saith to him, Comrade, how didst thou come in hither, not having clothing of the marriage-feast? and he was speechless.
Read in context
- 10ಆಗ ಆ ಸೇವಕರು ಹೆದ್ದಾರಿಗಳಿಗೆ ಹೋಗಿ ತಾವು ಕಂಡವರ ನ್ನೆಲ್ಲಾ ಅಂದರೆ ಕೆಟ್ಟವರನ್ನೂ ಒಳ್ಳೆಯವರನ್ನೂ ಒಟ್ಟು ಗೂಡಿಸಿದರು; ಹೀಗೆ ಮದುವೆಗೆ ಅತಿಥಿಗಳು ತುಂಬಿ ಕೊಂಡರು.
- 11ತರುವಾಯ ಅರಸನು ಅತಿಥಿಗಳನ್ನು ನೋಡುವದಕ್ಕಾಗಿ ಒಳಗೆ ಬಂದು ಮದುವೆಯ ಉಡು ಪಿಲ್ಲದೆ ಇದ್ದ ಒಬ್ಬ ಮನುಷ್ಯನನ್ನು ಅಲ್ಲಿ ಕಂಡನು.
- 12ಅವನು ಆ ಮನುಷ್ಯನಿಗೆ--ಸ್ನೇಹಿತನೇ, ಮದುವೆಯ ಉಡುಪಿಲ್ಲದೆ ನೀನು ಒಳಗೆ ಹೇಗೆ ಬಂದಿ ಎಂದು ಕೇಳಲು ಅವನು ಸುಮ್ಮನಿದ್ದನು.
- 13ತರುವಾಯ ಅರಸನು ಸೇವಕರಿಗೆ--ಅವನ ಕೈ ಕಾಲುಗಳನ್ನು ಕಟ್ಟಿ ತಕ್ಕೊಂಡು ಹೋಗಿ ಹೊರಗೆ ಕತ್ತಲೆಯಲ್ಲಿ ಹಾಕಿರಿ; ಅಲ್ಲಿ ಗೋಳಾಟವೂ ಹಲ್ಲುಕಡಿಯೋಣವೂ ಇರುವವು.
- 14ಯಾಕಂದರೆ ಕರೆಯಲ್ಪಟ್ಟವರು ಅನೇಕರು; ಆದರೆ ಆಯಲ್ಪಟ್ಟವರು ಸ್ವಲ್ಪ ಜನ ಅಂದನು.
Cross references
- 1 Samuel 2:9 1 ಸಮುವೇಲನು 2:9ಆತನು ತನ್ನ ಪರಿಶುದ್ಧರ ಕಾಲುಗಳನ್ನು ಕಾಯು ವನು; ಆದರೆ ದುಷ್ಟರು ಕತ್ತಲಲ್ಲಿ ಮೌನವಾಗಿರುವರು; ಶಕ್ತಿಯಿಂದ ಒಬ್ಬನೂ ಜಯಿಸನು.
- Matthew 20:13 ಮತ್ತಾಯನು 20:13ಆದರೆ ಅವನು ಅವರಲ್ಲಿ ಒಬ್ಬನಿಗೆ ಪ್ರತ್ಯುತ್ತರವಾಗಿ--ಸ್ನೇಹಿ ತನೇ, ನಾನು ನಿನಗೆ ಅನ್ಯಾಯ ಮಾಡಲಿಲ್ಲ; ಒಂದು ಪಾವಲಿಗೆ ನೀನು ನನ್ನೊಂದಿಗೆ ಒಪ್ಪಂದ ಮಾಡಿಕೊಳ್ಳ ಲಿಲ್ಲವೇ?
- Job 5:16 ಯೋಬನು 5:16ಆದದರಿಂದ ದರಿದ್ರನಿಗೆ ನಿರೀಕ್ಷೆ ಯುಂಟು; ಅಪರಾಧವು ಬಾಯಿ ಮುಚ್ಚುವದು.
- Jeremiah 2:26 ಯೆರೆಮೀಯ 2:26ಕಳ್ಳನು ಸಿಕ್ಕಿದ ಮೇಲೆ ನಾಚಿಕೆಪಡುವ ಪ್ರಕಾರ ಇಸ್ರಾಯೇಲಿನ ಮನೆತನ ದವರಿಗೆ ನಾಚಿಕೆಯಾಯಿತು; ಅವರಿಗೂ ಅವರ ಅರಸರಿಗೂ ಸಾಮಂತರಿಗೂ ಯಾಜಕರಿಗೂ ಅವರ ಪ್ರವಾದಿಗಳಿಗೂ ನಾಚಿಕೆಯಾಯಿತು.
- Titus 3:11 ತೀತನಿಗೆ 3:11ಅಂಥವನು ಸನ್ಮಾರ್ಗ ತಪ್ಪಿದವನೂ ಪಾಪಮಾಡುವವನು ಆಗಿದ್ದಾನೆ; ತಾನು ಶಿಕ್ಷಾಪಾತ್ರನೆಂದು ತನ್ನನ್ನು ತಾನೇ ಖಂಡಿಸಿಕೊಳ್ಳುವನು.
- Matthew 26:50 ಮತ್ತಾಯನು 26:50ಅದಕ್ಕೆ ಯೇಸು ಅವನಿಗೆ--ಸ್ನೇಹಿತನೇ, ನೀನು ಯಾಕೆ ಬಂದಿರುತ್ತೀ ಎಂದು ಕೇಳಿದನು; ಆಗ ಅವರು ಬಂದು ಯೇಸುವಿನ ಮೇಲೆ ಕೈಹಾಕಿ ಆತನನ್ನು ಹಿಡಿದರು.
- Jeremiah 2:23 ಯೆರೆಮೀಯ 2:23ನಾನು ಅಶುದ್ಧನಲ್ಲ, ಬಾಳನನ್ನು ಹಿಂಬಾಲಿಸಲಿಲ್ಲ ಎಂದು ನೀನು ಹೇಳುವದು ಹೇಗೆ? ತಗ್ಗಿನಲ್ಲಿ ನಿನ್ನ ಮಾರ್ಗವನ್ನು ನೋಡು; ನೀನು ಮಾಡಿದ್ದನ್ನು ತಿಳುಕೋ; ನೀನು ತೀವ್ರವಾಗಿ ಸಂಚಾರ ಮಾಡುವ ಹೆಣ್ಣು ಒಂಟೆಯೇ;
- Psalm 107:42 ಕೀರ್ತನೆಗಳು 107:42ನೀತಿವಂತರು ನೋಡಿ ಸಂತೋ ಷಪಡುವರು; ಆದರೆ ಎಲ್ಲಾ ಅಕ್ರಮಗಾರರು ಬಾಯಿ ಮುಚ್ಚಿಕೊಳ್ಳುವರು.ಜ್ಞಾನಿಯು ಯಾವನೋ, ಅವನು ಇವುಗಳನ್ನು ಗಮನಿಸುವನು; ಅವರು ಕರ್ತನ ಪ್ರೀತಿ ಕರುಣೆಯನ್ನು ಗ್ರಹಿಸಿಕೊಳ್ಳುವರು.
- Acts 5:2–11 ಅಪೊಸ್ತಲರ ಕೃತ್ಯಗಳು 5:2–11ಅದರ ಕ್ರಯದಲ್ಲಿ ಒಂದು ಭಾಗವನ್ನು ತೆಗೆದಿಟ್ಟು ಇನ್ನೊಂದು ಭಾಗವನ್ನು ತಂದು ಅಪೊಸ್ತಲರ ಪಾದಗಳ ಬಳಿಯಲ್ಲಿ ಇಟ್ಟನು; ಇದು ಅವನ ಹೆಂಡತಿಗೂ ತಿಳಿದಿತ್ತು. ಆಗ ಪೇತ್ರನು--ಅನನೀಯನೇ, ಪವಿತ್ರಾತ್ಮನಿಗೆ ಸುಳ್ಳು ಹೇಳಿ ಹೊಲದ ಕ್ರಯದಲ್ಲಿ ಒಂದು ಭಾಗವನ್ನು ತೆಗೆದಿಡುವಂತೆ ಸೈತಾನನು ನಿನ್ನ ಹೃದಯವನ್ನು ತುಂಬಿ ಕೊಂಡದ್ದು ಯಾಕೆ? ಆ ಆಸ್ತಿಯು ಇದ್ದಾಗ ಅದು ನಿನ್ನ ಸ್ವಂತದ್ದಾಗಿತ್ತಲ್ಲವೇ? ಅದನ್ನು ಮಾರಿದ ಮೇಲೆಯೂ ನಿನ್ನ ಅಧೀನದಲ್ಲಿಯೇ ಇತ್ತಲ್ಲವೇ? ನಿನ್ನ ಹೃದಯದಲ್ಲಿ ಅದನ್ನು ಯಾಕೆ ಯೋಚಿಸಿದ್ದೀ? ನೀನು ಮನುಷ್ಯರಿಗಲ್ಲ, ದೇವರಿಗೇ ಸುಳ್ಳಾಡಿದ್ದೀ ಅಂದನು. ಅನನೀಯನು ಈ ಮಾತುಗಳನ್ನು ಕೇಳಿ ಕೆಳಗೆ ಬಿದ್ದು ಪ್ರಾಣಬಿಟ್ಟನು; ಇವುಗಳನ್ನು ಕೇಳಿದವರೆಲ್ಲರಿಗೂ ಮಹಾಭಯ ಉಂಟಾ ಯಿತು. ಆಗ ಯೌವನಸ್ಥರು ಎದ್ದು ಅವನನ್ನು ಸುತ್ತಿ ಹೊತ್ತುಕೊಂಡು ಹೋಗಿ ಹೂಣಿಟ್ಟರು. ಸುಮಾರು ಮೂರು ತಾಸುಗಳಾದ ಮೇಲೆ ಅವನ ಹೆಂಡತಿಯು ನಡೆದ ಸಂಗತಿಯನ್ನು ತಿಳಿಯದೆ ಒಳಗೆ ಬಂದಳು. ಆಗ ಪೇತ್ರನು ಆಕೆಗೆ--ನೀವು ಆ ಹೊಲವನ್ನು ಇಷ್ಟೇ ಹಣಕ್ಕೆ ಮಾರಿದಿರೋ? ನನಗೆ ಹೇಳು ಎಂದು ಕೇಳಿದನು. ಅದಕ್ಕೆ ಆಕೆಯು--ಹೌದು, ಅಷ್ಟಕ್ಕೇ ಅಂದಳು. ಆಗ ಪೇತ್ರನು ಆಕೆಗೆ--ಕರ್ತನ ಆತ್ಮನನ್ನು ಶೋಧಿಸುವದಕ್ಕಾಗಿ ನೀವು ಹೇಗೆ ಒಟ್ಟಾಗಿ ಸಮ್ಮತಿಸಿ ದ್ದೀರಿ? ಇಗೋ, ನಿನ್ನ ಗಂಡನನ್ನು ಹೂಣಿಟ್ಟವರ ಪಾದಗಳು ಬಾಗಿಲಲ್ಲಿ ಇವೆ, ಅವರು ನಿನ್ನನ್ನೂ ಹೊತ್ತು ಕೊಂಡು ಹೋಗುವರು ಅಂದನು. ಕೂಡಲೆ ಆಕೆಯು ಅವನ ಪಾದಗಳ ಮುಂದೆ ಬಿದ್ದು ಪ್ರಾಣ ಬಿಟ್ಟಳು. ಆಗ ಆ ಯೌವನಸ್ಥರು ಒಳಗೆ ಬಂದು ಆಕೆಯು ಸತ್ತಿದ್ದನ್ನು ಕಂಡು ಹೊತ್ತುಕೊಂಡು ಹೋಗಿ ಆಕೆಯ ಗಂಡನ ಪಕ್ಕದಲ್ಲಿ ಹೂಣಿಟ್ಟರು. ಸರ್ವ ಸಭೆಗೂ ಇವುಗಳನ್ನು ಕೇಳಿದವರೆಲ್ಲರಿಗೂ ಮಹಾಭಯ ಉಂಟಾಯಿತು.
- Acts 8:20–23 ಅಪೊಸ್ತಲರ ಕೃತ್ಯಗಳು 8:20–23ಆದರೆ ಪೇತ್ರನು ಅವನಿಗೆ--ನಿನ್ನ ಹಣವು ನಿನ್ನ ಕೂಡ ಹಾಳಾಗಿ ಹೋಗಲಿ; ನೀನು ದೇವರ ದಾನವನ್ನು ಹಣಕ್ಕೆ ಕೊಂಡುಕೊಳ್ಳಬಹುದೆಂದು ಯೋಚಿಸುತ್ತೀ ಯಲ್ಲಾ. ಈ ಕಾರ್ಯದಲ್ಲಿ ನಿನಗೆ ಭಾಗವೂ ಇಲ್ಲ, ಪಾಲೂ ಇಲ್ಲ; ನಿನ್ನ ಹೃದಯವು ದೇವರ ಮುಂದೆ ಸರಿಯಲ್ಲ. ಆದದರಿಂದ ಈ ನಿನ್ನ ಕೆಟ್ಟತನದ ವಿಷಯವಾಗಿ ಮಾನಸಾಂತರಪಟ್ಟು ದೇವರನ್ನು ಬೇಡಿಕೋ, ಆಗ ನಿನ್ನ ಹೃದಯದ ಆಲೋಚನೆಯು ಕ್ಷಮಿಸಲ್ಪಡಬಹುದು. ಯಾಕಂದರೆ ನೀನು ಹಾನಿಕರ ವಾದ ವಿಷದಲ್ಲಿಯೂ ದುಷ್ಟತ್ವದ ಬಂಧನದಲ್ಲಿಯೂ ಇರುತ್ತೀಯೆಂದು ನನಗೆ ಕಾಣುತ್ತದೆ ಅಂದನು.
- Romans 3:19 ರೋಮಾಪುರದವರಿಗೆ 3:19ಪ್ರತಿಯೊಂದು ಬಾಯಿ ಮುಚ್ಚಿ ಹೋಗುವಂತೆಯೂ ಲೋಕವೆಲ್ಲಾ ದೇವರ ಮುಂದೆ ದೋಷಿಯಾಗಿರುವಂತೆಯೂ ನ್ಯಾಯ ಪ್ರಮಾಣವು ಹೇಳುವವುಗಳನ್ನು ನ್ಯಾಯಪ್ರಮಾಣಕ್ಕೆ ಒಳಗಾದವರಿಗೆ ಹೇಳುತ್ತದೆಯೆಂದು ನಾವು ಬಲ್ಲೆವು.
- Matthew 5:20 ಮತ್ತಾಯನು 5:20ನಾನು ನಿಮಗೆ ಹೇಳುವದೇನಂದರೆ-- ಶಾಸ್ತ್ರಿಗಳ ಮತ್ತು ಫರಿಸಾಯರ ನೀತಿಗಿಂತಲೂ ನಿಮ್ಮ ನೀತಿಯು ಹೆಚ್ಚಿನದಾಗಿರದ ಹೊರತು ನೀವು ಪರಲೋಕ ರಾಜ್ಯದಲ್ಲಿ ಪ್ರವೇಶಿಸುವದಕ್ಕಾಗುವದೇ ಇಲ್ಲ.