Matthew · chapter 24 · verse 9
Matthew 24:9 in Kannada
ಆಗ ನಿಮ್ಮನ್ನು ಸಂಕಟಪಡಿ ಸುವದಕ್ಕಾಗಿ ಒಪ್ಪಿಸುವರು; ಮತ್ತು ನಿಮ್ಮನ್ನು ಕೊಲ್ಲು ವರು. ಇದಲ್ಲದೆ ನನ್ನ ಹೆಸರಿನ ನಿಮಿತ್ತವಾಗಿ ಎಲ್ಲಾ ಜನಾಂಗಗಳವರು ನಿಮ್ಮನ್ನು ಹಗೆ ಮಾಡುವರು.
Aaga nimmannu sankatapadi suvadakkaagi oppisuvaru; mattu nimmannu kollu varu. Idallade nanna hesarina nimittavaagi ellaa janaangagalavaru nimmannu hage maaduvaru.
Matthew 24:9 in English
- King James Version (KJV)
- Then shall they deliver you up to be afflicted, and shall kill you: and ye shall be hated of all nations for my name’s sake.
- World English Bible (WEB)
- “Then they will deliver you up to oppression and will kill you. You will be hated by all of the nations for my name’s sake.
- American Standard Version (ASV)
- Then shall they deliver you up unto tribulation, and shall kill you: and ye shall be hated of all the nations for my name’s sake.
- Bible in Basic English (BBE)
- Then they will be cruel to you, and will put you to death: and you will be hated by all nations because of my name.
- Darby Translation (DBY)
- Then shall they deliver you up to tribulation, and shall kill you; and ye will be hated of all the nations for my name's sake.
- Webster's Bible (WBS)
- Then will they deliver you up to be afflicted, and will kill you: and ye will be hated by all nations for my name's sake.
- Young's Literal Translation (YLT)
- then they shall deliver you up to tribulation, and shall kill you, and ye shall be hated by all the nations because of my name;
Read in context
- 7ಯಾಕಂದರೆ ಜನಾಂಗಕ್ಕೆ ವಿರೋಧವಾಗಿ ಜನಾಂಗವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು; ಅಲ್ಲಲ್ಲಿ ಬರಗಳು, ಘೋರವ್ಯಾಧಿಗಳು ಮತ್ತು ಭೂಕಂಪಗಳು ಆಗುವವು.
- 8ಇವೆಲ್ಲವುಗಳು ಸಂಕಟಗಳ ಆರಂಭವು.
- 9ಆಗ ನಿಮ್ಮನ್ನು ಸಂಕಟಪಡಿ ಸುವದಕ್ಕಾಗಿ ಒಪ್ಪಿಸುವರು; ಮತ್ತು ನಿಮ್ಮನ್ನು ಕೊಲ್ಲು ವರು. ಇದಲ್ಲದೆ ನನ್ನ ಹೆಸರಿನ ನಿಮಿತ್ತವಾಗಿ ಎಲ್ಲಾ ಜನಾಂಗಗಳವರು ನಿಮ್ಮನ್ನು ಹಗೆ ಮಾಡುವರು.
- 10ಆಗ ಅನೇಕರು ಅಭ್ಯಂತರಪಟ್ಟು ಒಬ್ಬರನ್ನೊಬ್ಬರು ಹಿಡುಕೊಡುವರು ಮತ್ತು ಒಬ್ಬರನ್ನೊಬ್ಬರು ಹಗೆಮಾಡು ವರು.
- 11ಇದಲ್ಲದೆ ಬಹುಮಂದಿ ಸುಳ್ಳು ಪ್ರವಾದಿಗಳು ಎದ್ದು ಅನೇಕರನ್ನು ಮೋಸಗೊಳಿ ಸುವರು.
Cross references
- John 16:2 ಯೋಹಾನನು 16:2ಅವರು ನಿಮ್ಮನ್ನು ಸಭಾಮಂದಿರಗಳಿಂದ ಹೊರಗೆ ಹಾಕುವರು; ಹೌದು, ನಿಮ್ಮನ್ನು ಕೊಲ್ಲುವವನು ದೇವರ ಸೇವೆ ಮಾಡುತ್ತಾನೆಂದು ನೆನಸುವ ಗಳಿಗೆ ಬರುತ್ತದೆ.
- John 15:19–20 ಯೋಹಾನನು 15:19–20ನೀವು ಲೋಕದವರಾಗಿದ್ದರೆ ಲೋಕವು ತನ್ನವರನ್ನು ಪ್ರೀತಿಸುತ್ತಿತ್ತು; ಆದರೆ ನೀವು ಲೋಕದವರಲ್ಲದೆ ಇರುವದರಿಂದಲೂ ನಾನು ಲೋಕದೊಳಗಿಂದ ನಿಮ್ಮನ್ನು ಆರಿಸಿಕೊಂಡದ್ದರಿಂದಲೂ ಲೋಕವು ನಿಮ್ಮನ್ನು ದ್ವೇಷಮಾಡುತ್ತದೆ. ತನ್ನ ದಣಿಗಿಂತ ಆಳು ದೊಡ್ಡವನಲ್ಲ ಎಂದು ನಾನು ನಿಮಗೆ ಹೇಳಿದ ಮಾತನ್ನು ಜ್ಞಾಪಕಮಾಡಿಕೊಳ್ಳಿರಿ; ಅವರು ನನ್ನನ್ನು ಹಿಂಸಿಸಿದರೆ ನಿಮ್ಮನ್ನು ಸಹ ಹಿಂಸಿಸುವರು. ಅವರು ನನ್ನ ಮಾತನ್ನು ಕೈ ಕೊಂಡಿದ್ದರೆ ನಿಮ್ಮ ಮಾತನ್ನು ಸಹ ಕೈಕೊಳ್ಳುವರು.
- Luke 21:16–17 ಲೂಕನು 21:16–17ಆದರೆ ತಂದೆ ತಾಯಿಗಳೂ ಸಹೋದರರೂ ಬಂಧುಗಳೂ ಸ್ನೇಹಿ ತರೂ ನಿಮ್ಮನ್ನು ಹಿಡಿದುಕೊಡುವರು; ನಿಮ್ಮಲ್ಲಿ ಕೆಲವ ರನ್ನು ಕೊಲ್ಲಿಸುವರು. ನನ್ನ ಹೆಸರಿನ ನಿಮಿತ್ತವಾಗಿ ನಿಮ್ಮನ್ನು ಎಲ್ಲರೂ ದ್ವೇಷಿಸುವರು.
- Revelation 2:10 ಪ್ರಕಟನೆ 2:10ನಿನ್ನನ್ನು ಸಂಕಟಪಡಿಸುವವುಗಳಲ್ಲಿ ಯಾವ ದಕ್ಕೂ ಹೆದರಬೇಡ. ಇಗೋ, ನೀವು ಶೋಧಿಸಲ್ಪಡು ವಂತೆ ಸೈತಾನನು ನಿಮ್ಮಲ್ಲಿ ಕೆಲವರನ್ನು ಸೆರೆಮನೆಯೊಳಗೆ ಹಾಕುವನು; ಹತ್ತು ದಿವಸಗಳ ತನಕ ನಿಮಗೆ ಸಂಕಟವಿ ರುವದು. ನೀನು ಸಾಯಬೇಕಾದರೂ ನಂಬಿಗಸ್ತ ನಾಗಿರು; ನಾನು ನಿನಗೆ
- Luke 21:12 ಲೂಕನು 21:12ಆದರೆ ಇವೆಲ್ಲವುಗಳಿಗಿಂತ ಮೊದಲು ಅವರು ನಿಮ್ಮನ್ನು ಹಿಡಿದು ಹಿಂಸಿಸಿ ಸಭಾಮಂದಿರ ಗಳಿಗೂ ಸೆರೆಮನೆಗಳಿಗೂ ಒಪ್ಪಿಸಿ ನನ್ನ ಹೆಸರಿನ ನಿಮಿತ್ತ ಅರಸುಗಳ ಮತ್ತು ಅಧಿಕಾರಿಗಳ ಮುಂದೆ ನಿಮ್ಮನ್ನು ತರುವರು.
- Matthew 10:17–22 ಮತ್ತಾಯನು 10:17–22ಆದರೆ ಜನರ ವಿಷಯದಲ್ಲಿ ಎಚ್ಚ ರಿಕೆಯಾಗಿರ್ರಿ; ಯಾಕಂದರೆ ಅವರು ನಿಮ್ಮನ್ನು ನ್ಯಾಯ ವಿಚಾರಣೆಯ ಸಭೆಗಳಿಗೆ ಒಪ್ಪಿಸುವರು; ತಮ್ಮ ಸಭಾ ಮಂದಿರಗಳಲ್ಲಿ ನಿಮ್ಮನ್ನು ಕೊರಡೆಗಳಿಂದ ಹೊಡೆಯು ವರು. ಇದಲ್ಲದೆ ನನ್ನ ನಿಮಿತ್ತವಾಗಿ ನಿಮ್ಮನ್ನು ಅಧಿ ಕಾರಿಗಳ ಮತ್ತು ಅರಸುಗಳ ಮುಂದಕ್ಕೆ ತೆಗೆದುಕೊಂಡು ಹೋಗುವರು. ಹೀಗೆ ಅವರಿಗೂ ಅನ್ಯಜನಗಳಿಗೂ ಸಾಕ್ಷಿಯಾಗುವದು. ಆದರೆ ಅವರು ನಿಮ್ಮನ್ನು ಒಪ್ಪಿಸಿ ಕೊಟ್ಟಾಗ ನೀವು ಹೇಗೆ ಇಲ್ಲವೆ ಏನು ಮಾತನಾಡ ಬೇಕೆಂಬದಾಗಿ ಯೋಚಿಸಬೇಡಿರಿ; ಯಾಕಂದರೆ ನೀವು ಏನು ಮಾತನಾಡಬೇಕೆಂಬದು ಆ ಗಳಿಗೆಯಲ್ಲಿಯೇ ನಿಮಗೆ ತಿಳಿಸಲ್ಪಡುವದು. ಯಾಕಂದರೆ ಮಾತನಾಡು ವವರು ನೀವಲ್ಲ, ಆದರೆ ನಿಮ್ಮ ತಂದೆಯ ಆತ್ಮನು ನಿಮ್ಮೊಳಗೆ ಮಾತನಾಡುತ್ತಾನೆ. ಸಹೋದರನು ತನ್ನ ಸಹೋದರನನ್ನೂ ತಂದೆಯು ಮಗನನ್ನೂ ಮರಣಕ್ಕೆ ಒಪ್ಪಿಸುವರು; ಮತ್ತು ಮಕ್ಕಳು ತಂದೆತಾಯಿಗಳಿಗೆ ವಿರೋಧವಾಗಿ ಎದ್ದು ಅವರನ್ನು ಕೊಲ್ಲಿಸುವರು. ನನ್ನ ಹೆಸರಿನ ನಿಮಿತ್ತವಾಗಿ ಎಲ್ಲರೂ ನಿಮ್ಮನ್ನು ಹಗೆ ಮಾಡುವರು; ಆದರೆ ಕಡೆಯ ವರೆಗೆ ತಾಳುವವನು ರಕ್ಷಣೆ ಹೊಂದುವನು.
- Mark 13:9–13 ಮಾರ್ಕನು 13:9–13ಆದರೆ ನೀವು ನಿಮ್ಮ ವಿಷಯದಲ್ಲಿ ಎಚ್ಚರಿಕೆ ತೆಗೆದುಕೊಳ್ಳಿರಿ; ಯಾಕಂದರೆ ಅವರು ನಿಮ್ಮನ್ನು ನ್ಯಾಯವಿಚಾರಣೆಯ ಸಭೆಗಳಿಗೆ ಒಪ್ಪಿಸುವರು; ಸಭಾಮಂದಿರಗಳಲ್ಲಿ ನಿಮ್ಮನ್ನು ಹೊಡೆಯುವರು; ಅವರಿಗೆ ವಿರೋಧವಾಗಿ ನನ್ನ ನಿಮಿತ್ತ ಅಧಿಕಾರಿಗಳ ಮತ್ತು ಅರಸುಗಳ ಮುಂದೆ ನೀವು ತರಲ್ಪಡುವಿರಿ. ಸುವಾರ್ತೆಯು ಮೊದಲು ಎಲ್ಲಾ ಜನಾಂಗಗಳಲ್ಲಿ ಸಾರಲ್ಪಡುವದು ಅಗತ್ಯವಾಗಿದೆ. ಆದರೆ ಅವರು ನಿಮ್ಮನ್ನು ಒಪ್ಪಿಸುವದಕ್ಕಾಗಿ ತಕ್ಕೊಂಡು ಹೋಗುವಾಗ ನೀವು ಏನು ಮಾತನಾಡಬೇಕೆಂಬದನ್ನು ಮುಂಚಿತವಾಗಿ ಚಿಂತಿಸಬೇಡಿರಿ, ಆಲೋಚಿಸಲೂ ಬೇಡಿರಿ; ಆದರೆ ಆ ಗಳಿಗೆಯಲ್ಲಿ ನಿಮಗೆ ಯಾವದು ಕೊಡಲ್ಪಡುವದೋ ಅದನ್ನೇ ಮಾತನಾಡಿರಿ; ಯಾಕಂ ದರೆ ಮಾತನಾಡುವವರು ನೀವಲ್ಲ, ಆದರೆ ಪರಿಶು ಆಗ ಸಹೋದರನು ಸಹೋದರನನ್ನೂ ತಂದೆಯು ಮಗನನ್ನೂ ಮರಣಕ್ಕೆ ಒಪ್ಪಿಸುವರು; ಮಕ್ಕಳು ತಮ್ಮ ತಂದೆತಾಯಿಗಳಿಗೆ ವಿರೋಧವಾಗಿ ಎದ್ದು ಅವ ರನ್ನು ಕೊಲ್ಲಿಸುವದಕ್ಕೆ ಕಾರಣರಾಗುವರು. ನನ್ನ ಹೆಸರಿನ ನಿಮಿತ್ತವಾಗಿ ಎಲ್ಲರೂ ನಿಮ್ಮನ್ನು ಹಗೆ ಮಾಡು ವರು. ಆದರೆ ಕಡೇವರೆಗೂ ತಾಳುವವನೇ ರಕ್ಷಣೆ ಹೊಂದುವನು.
- Revelation 6:9–11 ಪ್ರಕಟನೆ 6:9–11ಆತನು ಐದನೆಯ ಮುದ್ರೆಯನ್ನು ತೆರೆದಾಗ ದೇವರವಾಕ್ಯದ ನಿಮಿತ್ತವಾಗಿಯೂ ತಾವು ಹೊಂದಿದ್ದ ಸಾಕ್ಷಿಯ ನಿಮಿತ್ತವಾಗಿಯೂ ಹತವಾದವರ ಆತ್ಮಗಳು ಯಜ್ಞವೇದಿಯ ಕೆಳಗಿರುವದನ್ನು ನಾನು ಕಂಡೆನು. ಅವರು--ಓ ಕರ್ತನೇ, ಪರಿಶುದ್ಧನೂ ಸತ್ಯವಂತನೂ ಆಗಿರುವಾತನೇ, ಭೂಮಿಯ ಮೇಲೆ ವಾಸಿಸುವವರು ನಮ್ಮ ರಕ್ತವನ್ನು ಸುರಿಸಿದ್ದಕ್ಕಾಗಿ ನೀನು ಎಷ್ಟು ಕಾಲದವರೆಗೆ ನ್ಯಾಯವಿಚಾರಿಸದೆಯೂ ಪ್ರತಿದಂಡನೆ ಮಾಡದೆಯೂ ಇರುವಿ ಎಂದು ಮಹಾಶಬ್ದದಿಂದ ಕೂಗುತ್ತಾ ಹೇಳಿದರು. ಅವರಲ್ಲಿ ಒಬ್ಬೊಬ್ಬನಿಗೆ ಬಿಳೀ ನಿಲುವಂಗಿಗಳು ಕೊಡಲ್ಪಟ್ಟಿದ್ದವು. ಇದಲ್ಲದೆ ಅವರ ಹಾಗೆ ಅವರ ಜೊತೆ ಸೇವಕರ ಮತ್ತು ಅವರ ಸಹೋದರರ ಕೊಲೆಯು ಪೂರೈಸುವ ತನಕ ಇನೂ ಸ್ವಲ್ಪ ಕಾಲ ವಿಶ್ರಮಿಸಿಕೊಂಡಿರಬೇಕೆಂದು ಅವರಿಗೆ ಹೇಳಲ್ಪಟ್ಟಿತು.
- Revelation 7:14 ಪ್ರಕಟನೆ 7:14ಅದಕ್ಕೆ ನಾನು ಅಯ್ಯಾ, ನೀನೇ ಬಲ್ಲೆ ಅಂದೆನು. ಅವನು ನನಗೆ--ಇವರು ಮಹಾಸಂಕಟದೊಳಗಿಂದ ಬಂದವರು; ಕುರಿಮರಿಯಾ ದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಬೆಳ್ಳಗೆ ಮಾಡಿದ್ದಾರೆ.
- 1 Peter 4:16 1 ಪೇತ್ರನು 4:16ಕ್ರೈಸ್ತನಾಗಿ ಬಾಧೆಪಟ್ಟರೆ ಅವನು ನಾಚಿಕೆ ಪಡದೆ ಅದರಲ್ಲಿಯೇ ದೇವರನ್ನು ಘನಪಡಿಸಲಿ.
- 1 Thessalonians 2:14–16 1 ಥೆಸಲೊನೀಕದವರಿಗೆ 2:14–16ಸಹೋ ದರರೇ, ನೀವು ಯೂದಾಯದಲ್ಲಿ ಕ್ರಿಸ್ತ ಯೇಸುವಿನ ಲ್ಲಿರುವ ದೇವರ ಸಭೆಗಳನ್ನು ಅನುಸರಿಸುವವರಾದಿರಿ. ಅವರು ಯೆಹೂದ್ಯರಿಂದ ಅನುಭವಿಸಿದಂಥ ಕಷ್ಟಗಳನ್ನು ನೀವೂ ನಿಮ್ಮ ಸ್ವದೇಶದವರಿಂದ ಅನುಭವಿಸಿದಿರಿ. ಆ ಯೆಹೂದ್ಯರು ಕರ್ತನಾದ ಯೇಸುವನ್ನು ಮತ್ತು ತಮ್ಮ ಸ್ವಂತ ಪ್ರವಾದಿಗಳನ್ನು ಕೊಂದರು; ನಮ್ಮನ್ನು ಹಿಂಸಿಸಿದರು; ಅವರು ದೇವರನ್ನು ಮೆಚ್ಚಿಸುವವರಲ್ಲ, ಎಲ್ಲಾ ಮನುಷ್ಯರಿಗೂ ವಿರೋಧಿಗಳಾಗಿದ್ದಾರೆ. ಅನ್ಯ ಜನರಿಗೆ ರಕ್ಷಣೆಯಾಗುವಂತೆ ಸುವಾರ್ತೆಯನ್ನು ಹೇಳುವ ನಮಗೆ ಅವರು ಅಡ್ಡಿ ಮಾಡುತ್ತಾರೆ; ಹೀಗೆ ತಮ್ಮ ಪಾಪಗಳನ್ನು ಯಾವಾಗಲೂ ಪರಿಪೂರ್ಣ ಮಾಡುವದಕ್ಕೆ ಹೋಗುತ್ತಾರೆ; ಆದರೆ ದೇವರ ಕೋಪವು ಅವರ ಮೇಲೆ ಸಂಪೂರ್ಣವಾಗುತ್ತಾ ಬಂತು.
- Acts 5:40–41 ಅಪೊಸ್ತಲರ ಕೃತ್ಯಗಳು 5:40–41ಇದಕ್ಕೆ ಅವರು ಅವನೊಂದಿಗೆ ಒಪ್ಪಿಕೊಂಡು ಅಪೊಸ್ತಲರನ್ನು ಕರೆಯಿಸಿ ಅವರನ್ನು ಹೊಡೆದು ಯೇಸುವಿನ ಹೆಸರಿನಲ್ಲಿ ಮಾತನಾಡಬಾರದೆಂದು ಅಪ್ಪಣೆ ಕೊಟ್ಟು ಬಿಟ್ಟುಬಿಟ್ಟರು. ಆತನ ಹೆಸರಿಗಾಗಿ ಅವಮಾನಪಡುವದಕ್ಕೆ ತಾವು ಯೋಗ್ಯರೆಂದು ಎಣಿಸ ಲ್ಪಟ್ಟದ್ದಕ್ಕಾಗಿ ಅವರು ಸಂತೋಷಿಸುತ್ತಾ ಆಲೋಚನಾ ಸಭೆಯಿಂದ ಹೊರಟುಹೋದರು.ಪ್ರತಿದಿನ ದೇವಾಲಯದಲ್ಲಿಯೂ ಪ್ರತಿಯೊಂದು ಮನೆಯ ಲ್ಲಿಯೂ ಯೇಸು ಕ್ರಿಸ್ತನ ವಿಷಯವಾಗಿ ಎಡೆಬಿಡದೆ ಬೋಧಿಸುತ್ತಾ ಸಾರುತ್ತಾ ಇದ್ದರು.