Matthew · chapter 24 · verse 10
Matthew 24:10 in Kannada
ಆಗ ಅನೇಕರು ಅಭ್ಯಂತರಪಟ್ಟು ಒಬ್ಬರನ್ನೊಬ್ಬರು ಹಿಡುಕೊಡುವರು ಮತ್ತು ಒಬ್ಬರನ್ನೊಬ್ಬರು ಹಗೆಮಾಡು ವರು.
Aaga anekaru abhyantarapattu obbarannobbaru hidukoduvaru mattu obbarannobbaru hagemaadu varu.
Matthew 24:10 in English
- King James Version (KJV)
- And then shall many be offended, and shall betray one another, and shall hate one another.
- World English Bible (WEB)
- Then many will stumble, and will deliver up one another, and will hate one another.
- American Standard Version (ASV)
- And then shall many stumble, and shall deliver up one another, and shall hate one another.
- Bible in Basic English (BBE)
- And numbers of people will be turned from the right way, and will give one another up and have hate for one another.
- Darby Translation (DBY)
- And then will many be offended, and will deliver one another up, and hate one another;
- Webster's Bible (WBS)
- And then will many be offended, and will betray one another, and will hate one another.
- Young's Literal Translation (YLT)
- and then shall many be stumbled, and they shall deliver up one another, and shall hate one another.
Read in context
- 8ಇವೆಲ್ಲವುಗಳು ಸಂಕಟಗಳ ಆರಂಭವು.
- 9ಆಗ ನಿಮ್ಮನ್ನು ಸಂಕಟಪಡಿ ಸುವದಕ್ಕಾಗಿ ಒಪ್ಪಿಸುವರು; ಮತ್ತು ನಿಮ್ಮನ್ನು ಕೊಲ್ಲು ವರು. ಇದಲ್ಲದೆ ನನ್ನ ಹೆಸರಿನ ನಿಮಿತ್ತವಾಗಿ ಎಲ್ಲಾ ಜನಾಂಗಗಳವರು ನಿಮ್ಮನ್ನು ಹಗೆ ಮಾಡುವರು.
- 10ಆಗ ಅನೇಕರು ಅಭ್ಯಂತರಪಟ್ಟು ಒಬ್ಬರನ್ನೊಬ್ಬರು ಹಿಡುಕೊಡುವರು ಮತ್ತು ಒಬ್ಬರನ್ನೊಬ್ಬರು ಹಗೆಮಾಡು ವರು.
- 11ಇದಲ್ಲದೆ ಬಹುಮಂದಿ ಸುಳ್ಳು ಪ್ರವಾದಿಗಳು ಎದ್ದು ಅನೇಕರನ್ನು ಮೋಸಗೊಳಿ ಸುವರು.
- 12ದುಷ್ಟತನ ಹೆಚ್ಚಾಗುವದರಿಂದ ಬಹಳ ಜನರ ಪ್ರೀತಿಯು ತಣ್ಣಗಾಗುವದು.
Cross references
- Micah 7:5–6 ಮೀಕ 7:5–6ಸ್ನೇಹಿತನಲ್ಲಿ ನಂಬಿಕೆ ಇಡಬೇಡಿರಿ; ಆಪ್ತಸ್ನೇಹಿತನಲ್ಲಿ ಭರವಸವಿಡಬೇಡಿರಿ; ನಿನ್ನ ಎದೆಯ ಮೇಲೆ ಮಲಗುವವಳಿಗೆ ನಿನ್ನ ಬಾಯಿಯ ಬಾಗಲುಗಳನ್ನು ಕಾಯಿ. ಮಗನು ತನ್ನ ತಂದೆಯನ್ನು ಅವಮಾನ ಮಾಡುತ್ತಾನೆ; ಮಗಳು ತನ್ನ ತಾಯಿಗೂ ಸೊಸೆಯು ತನ್ನ ಅತ್ತೆಗೂ ವಿರೋಧವಾಗಿ ಏಳುತ್ತಾರೆ; ಒಬ್ಬ ಮನುಷ್ಯನಿಗೆ ಸ್ವಂತ ಮನೆಯವರೇ ಶತ್ರುಗಳು.
- Matthew 11:6 ಮತ್ತಾಯನು 11:6ನನ್ನ ವಿಷಯವಾಗಿ ಸಂಶಯಪಡದವನೇ ಧನ್ಯನು ಅಂದನು.
- Mark 13:12 ಮಾರ್ಕನು 13:12ಆಗ ಸಹೋದರನು ಸಹೋದರನನ್ನೂ ತಂದೆಯು ಮಗನನ್ನೂ ಮರಣಕ್ಕೆ ಒಪ್ಪಿಸುವರು; ಮಕ್ಕಳು ತಮ್ಮ ತಂದೆತಾಯಿಗಳಿಗೆ ವಿರೋಧವಾಗಿ ಎದ್ದು ಅವ ರನ್ನು ಕೊಲ್ಲಿಸುವದಕ್ಕೆ ಕಾರಣರಾಗುವರು.
- Luke 21:16 ಲೂಕನು 21:16ಆದರೆ ತಂದೆ ತಾಯಿಗಳೂ ಸಹೋದರರೂ ಬಂಧುಗಳೂ ಸ್ನೇಹಿ ತರೂ ನಿಮ್ಮನ್ನು ಹಿಡಿದುಕೊಡುವರು; ನಿಮ್ಮಲ್ಲಿ ಕೆಲವ ರನ್ನು ಕೊಲ್ಲಿಸುವರು.
- Mark 4:17 ಮಾರ್ಕನು 4:17ತಮ್ಮಲ್ಲಿ ಬೇರು ಇಲ್ಲದ ಕಾರಣ ಸ್ವಲ್ಪ ಕಾಲ ಮಾತ್ರ ಇರುವಂಥವರಾಗಿದ್ದಾರೆ; ತರುವಾಯ ವಾಕ್ಯದ ನಿಮಿತ್ತ ಉಪದ್ರವವಾಗಲೀ ಹಿಂಸೆಯಾಗಲೀ ಬಂದಾಗ ಕೂಡಲೆ ಅವರು ಅಭ್ಯಂತರಪಡುತ್ತಾರೆ.
- 2 Timothy 4:16 2 ತಿಮೊಥೆಯನಿಗೆ 4:16ನಾನು ಮೊದಲನೆಯ ಸಾರಿ ಪ್ರತಿವಾದ ಮಾಡಿದಾಗ ಯಾರೂ ನನ್ನೊಂದಿಗೆ ನಿಲ್ಲಲಿಲ್ಲ. ಎಲ್ಲರೂ ನನ್ನನ್ನು ತೊರೆದುಬಿಟ್ಟರು; ಇದು ಅವರ ಲೆಕ್ಕಕ್ಕೆ ಸೇರಿಸಲ್ಪಡದೆ ಇರಲಿ ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ.
- John 6:66–67 ಯೋಹಾನನು 6:66–67ಅಂದಿನಿಂದ ಆತನ ಶಿಷ್ಯರಲ್ಲಿ ಅನೇಕರು ಹಿಂದಕ್ಕೆ ಹೊರಟುಹೋಗಿ ಮತ್ತೆ ಅವರು ಆತನ ಸಂಗಡ ಎಂದಿಗೂ ಸಂಚರಿಸಲೇ ಇಲ್ಲ. ಆಗ ಯೇಸು ಹನ್ನೆ ರಡು ಮಂದಿಗೆ--ನೀವು ಸಹ ಹೊರಟು ಹೋಗಬೇಕೆಂ ದಿದ್ದೀರೋ ಎಂದು ಕೇಳಲು
- Matthew 10:21 ಮತ್ತಾಯನು 10:21ಸಹೋದರನು ತನ್ನ ಸಹೋದರನನ್ನೂ ತಂದೆಯು ಮಗನನ್ನೂ ಮರಣಕ್ಕೆ ಒಪ್ಪಿಸುವರು; ಮತ್ತು ಮಕ್ಕಳು ತಂದೆತಾಯಿಗಳಿಗೆ ವಿರೋಧವಾಗಿ ಎದ್ದು ಅವರನ್ನು ಕೊಲ್ಲಿಸುವರು.
- Matthew 13:21 ಮತ್ತಾಯನು 13:21ಆದರೂ ಅವನಲ್ಲಿ ಬೇರಿಲ್ಲದ ಕಾರಣ ಸ್ವಲ್ಪಕಾಲ ಮಾತ್ರ ಇರುವನು; ಯಾಕಂದರೆ ವಾಕ್ಯಕ್ಕಾಗಿ ಸಂಕಟ ಇಲ್ಲವೆ ಹಿಂಸೆ ಬಂದಾಗ ತಕ್ಷಣವೇ ಅವನು ಅಭ್ಯಂತರ ಪಡುವನು.
- Matthew 10:35–36 ಮತ್ತಾಯನು 10:35–36ಹೇಗಂದರೆ ಮಗನಿಗೂ ಅವನ ತಂದೆಗೂ ಮಗಳಿಗೂ ಆಕೆಯ ತಾಯಿಗೂ ಸೊಸೆಗೂ ಆಕೆಯ ಅತ್ತೆಗೂ ವಿರೋಧವನ್ನು ಹುಟ್ಟಿಸುವದಕ್ಕೆ ನಾನು ಬಂದಿದ್ದೇನೆ. ಒಬ್ಬ ಮನುಷ್ಯನಿಗೆ ಅವನ ಮನೆ ಯವರೇ ವಿರೋಧಿಗಳಾಗಿರುವರು.
- Matthew 26:31–34 ಮತ್ತಾಯನು 26:31–34ಆಮೇಲೆ ಯೇಸು ಅವರಿಗೆ--ನೀವೆಲ್ಲರೂ ಈ ರಾತ್ರಿ ನನ್ನ ವಿಷಯದಲ್ಲಿ ಅಭ್ಯಂತರಪಡುವಿರಿ; ಯಾಕಂದರೆ-- ನಾನು ಕುರುಬನನ್ನು ಹೊಡೆಯುವೆನು; ಮಂದೆ ಯ ಕುರಿಗಳು ಚದರಿಹೋಗುವವು ಎಂದು ಬರೆದದೆ; ಆದರೆ ನಾನು ಎದ್ದ ಮೇಲೆ ನಿಮಗಿಂತ ಮುಂಚಿತ ವಾಗಿ ಗಲಿಲಾಯಕ್ಕೆ ಹೋಗುವೆನು ಅಂದನು. ಪೇತ್ರನು ಪ್ರತ್ಯುತ್ತರವಾಗಿ ಆತನಿಗೆ-- ಎಲ್ಲರೂ ನಿನ್ನ ವಿಷಯದಲ್ಲಿ ಅಭ್ಯಂತರಪಟ್ಟರೂ ನಾನು ಎಂದಿಗೂ ಅಭ್ಯಂತರಪಡುವದಿಲ್ಲ ಅಂದನು. ಯೇಸು ಅವ ನಿಗೆ--ಈ ರಾತ್ರಿಯಲ್ಲಿ ಹುಂಜ ಕೂಗುವದಕ್ಕಿಂತ ಮುಂಚೆ ಮೂರು ಸಾರಿ ನನ್ನನ್ನು ಅಲ್ಲಗಳೆಯುವಿ ಎಂದು ನಾನು ನಿನಗೆ ನಿಜವಾಗಿ ಹೇಳುತ್ತೇನೆ ಅಂದನು.
- 2 Timothy 4:10 2 ತಿಮೊಥೆಯನಿಗೆ 4:10ಯಾಕಂದರೆ ದೇಮನು ಇಹಲೋಕವನ್ನು ಪ್ರೀತಿಸಿ ನನ್ನನ್ನು ತೊರೆದುಬಿಟ್ಟು ಥೆಸಲೋನಿಕಕ್ಕೆ ಹೋದನು; ಕ್ರೆಸ್ಕನು ಗಲಾತ್ಯಕ್ಕೂ ತೀತನು ದಲ್ಮಾತ್ಯಕ್ಕೂ ಹೋದರು;