Matthew · chapter 25 · verse 14
Matthew 25:14 in Kannada
ಯಾಕಂದರೆ ಪರಲೋಕರಾಜ್ಯವು ದೂರ ದೇಶಕ್ಕೆ ಪ್ರಯಾಣಮಾಡುವ ಒಬ್ಬ ಮನುಷ್ಯನು ತನ್ನ ಸ್ವಂತ ಸೇವಕರನ್ನು ಕರೆದು ಅವರಿಗೆ ತನ್ನ ಆಸ್ತಿಯನ್ನು ಒಪ್ಪಿಸಿದಂತೆ ಇದೆ.
Yaakandare paralokaraajyavu doora deshakke prayaanamaaduva obba manushyanu tanna svanta sevakarannu karedu avarige tanna aastiyannu oppisidante ide.
Matthew 25:14 in English
- King James Version (KJV)
- For [the kingdom of heaven is] as a man travelling into a far country, [who] called his own servants, and delivered unto them his goods.
- World English Bible (WEB)
- “For it is like a man going into another country, who called his own servants and entrusted his goods to them.
- American Standard Version (ASV)
- For [it is] as [when] a man, going into another country, called his own servants, and delivered unto them his goods.
- Bible in Basic English (BBE)
- For it is as when a man, about to take a journey, got his servants together, and gave them his property.
- Darby Translation (DBY)
- For [it is] as [if] a man going away out of a country called his own bondmen and delivered to them his substance.
- Webster's Bible (WBS)
- For [the kingdom of heaven is] as a man traveling into a far country, [who] called his own servants, and delivered to them his goods.
- Young's Literal Translation (YLT)
- 'For — as a man going abroad did call his own servants, and did deliver to them his substance,
Read in context
- 12ಆದರೆ ಅವನು ಪ್ರತ್ಯುತ್ತರವಾಗಿ--ನಿಮ್ಮನ್ನು ಅರಿ ಯೆನು ಎಂದು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು.
- 13ಆದದರಿಂದ ಎಚ್ಚರವಾಗಿರ್ರಿ; ಯಾಕಂದರೆ ಮನುಷ್ಯಕುಮಾರನು ಬರುವ ದಿನ ವನ್ನಾಗಲೀ ಗಳಿಗೆಯನ್ನಾಗಲೀ ನೀವು ಅರಿಯದವರಾ ಗಿದ್ದೀರಿ ಅಂದನು.
- 14ಯಾಕಂದರೆ ಪರಲೋಕರಾಜ್ಯವು ದೂರ ದೇಶಕ್ಕೆ ಪ್ರಯಾಣಮಾಡುವ ಒಬ್ಬ ಮನುಷ್ಯನು ತನ್ನ ಸ್ವಂತ ಸೇವಕರನ್ನು ಕರೆದು ಅವರಿಗೆ ತನ್ನ ಆಸ್ತಿಯನ್ನು ಒಪ್ಪಿಸಿದಂತೆ ಇದೆ.
- 15ಅವನು ಒಬ್ಬನಿಗೆ ಐದು ತಲಾಂತುಗಳನ್ನು ಇನ್ನೊಬ್ಬನಿಗೆ ಎರಡು, ಮತ್ತೊಬ್ಬನಿಗೆ ಒಂದು, ಹೀಗೆ ಅವನವನ ಸಾಮರ್ಥ್ಯದ ಪ್ರಕಾರ ಕೊಟ್ಟು ತಕ್ಷಣವೇ ಪ್ರಯಾಣ ಮಾಡಿದನು.
- 16ತರುವಾಯ ಐದು ತಲಾಂತುಗಳನ್ನು ಹೊಂದಿದ ವನು ಹೋಗಿ ಅವುಗಳಿಂದ ವ್ಯಾಪಾರಮಾಡಿ ಬೇರೆ ಐದು ತಲಾಂತುಗಳನ್ನು ಸಂಪಾದಿಸಿದನು.
Cross references
- Mark 13:34 ಮಾರ್ಕನು 13:34ಮನುಷ್ಯಕುಮಾರನು ದೂರದ ಪ್ರಯಾಣವನ್ನು ಕೈಕೊಂಡು ತನ್ನ ಮನೆಯನ್ನು ಬಿಟ್ಟು ತನ್ನ ಸೇವಕರಿಗೆ ಅಧಿಕಾರವನ್ನು ಮತ್ತು ಪ್ರತಿಯೊ ಬ್ಬನಿಗೆ ಅವನವನ ಕೆಲಸವನ್ನು ಕೊಟ್ಟು ಬಾಗಲು ಕಾಯು ವವನಿಗೆ ಜಾಗರೂಕನಾಗಿರಬೇಕೆಂದು ಆಜ್ಞಾಪಿಸಿದವನ ಹಾಗೆ ಇದ್ದಾನೆ.
- Romans 12:6–8 ರೋಮಾಪುರದವರಿಗೆ 12:6–8ಹೀಗೆ ಕೃಪೆಗನುಸಾರವಾಗಿ ನಮಗೆ ವಿಧವಿಧವಾದ ವರಗಳು ಕೊಡಲ್ಪಟ್ಟಿರಲು ಅವುಗಳಲ್ಲಿ ಅದು ಪ್ರವಾದನೆ ಯಾಗಿದ್ದರೆ ನಂಬಿಕೆಯ ಪ್ರಮಾಣಕ್ಕೆ ತಕ್ಕಂತೆ ಪ್ರವಾದಿಸೋಣ. ಇಲ್ಲವೆ ಸೇವೆಯಾಗಿದ್ದರೆ ನಮ್ಮ ಸೇವೆಯಲ್ಲಿ ನಿರತರಾಗಿರೋಣ. ಬೋಧಿಸುವವನು ಬೋಧಿಸುವದರಲ್ಲಿ ನಿರತನಾಗಿರಲಿ. ಇಲ್ಲವೆ ಎಚ್ಚರಿಸುವವನು ಎಚ್ಚರಿಸುವದರಲ್ಲಿ ನಿರತನಾಗಿರಲಿ ಮತ್ತು ಕೊಡುವವನು ಯಥಾರ್ಥವಾಗಿ ಕೊಡಲಿ. ಆಳುವವನು ಶ್ರದ್ಧೆಯಿಂದ ಆಳಲಿ, ಕರುಣೆಯನ್ನು ತೋರಿಸುವವನು ಸಂತೋಷಪೂರ್ವಕವಾಗಿ ತೋರಿಸಲಿ.
- 1 Peter 4:9–11 1 ಪೇತ್ರನು 4:9–11ಗುಣುಗುಟ್ಟದೆ ಒಬ್ಬರಿಗೊಬ್ಬರು ಅತಿಥಿ ಸತ್ಕಾರ ಮಾಡಿರಿ. ನೀವೆಲ್ಲರು ದೇವರ ವಿವಿಧ ಕೃಪೆಯ ವಿಷಯದಲ್ಲಿ ಒಳ್ಳೇ ಮನೆವಾರ್ತೆಯವರಾಗಿದ್ದು ಪ್ರತಿಯೊಬ್ಬನು ತಾನು ಹೊಂದಿದ ವರವನ್ನು ಎಲ್ಲರ ಸೇವೆಯಲ್ಲಿ ಉಪಯೋಗಿಸಲಿ. ಒಬ್ಬನು ಬೋಧಿಸು ವವನಾದರೆ ದೈವೋಕ್ತಿಗಳನ್ನು ನುಡಿಯುವವನಾಗಿ ಬೋಧಿಸಲಿ. ಒಬ್ಬನು ಸೇವೆ ಮಾಡುವವನಾದರೆ ದೇವರಿಂದ ಶಕ್ತಿಯನ್ನು ಹೊಂದಿದವನಾಗಿ ಮಾಡಲಿ. ಇದರಿಂದ ಎಲ್ಲಾದರಲ್ಲಿ ಯೇಸು ಕ್ರಿಸ್ತನ ಮೂಲಕ ದೇವರಿಗೆ ಮಹಿಮೆ ಉಂಟಾಗುವದು. ಯೇಸು ಕ್ರಿಸ್ತನಿಗೆ ಸ್ತೋತ್ರವೂ ಆಧಿಪತ್ಯವೂ
- Luke 19:12–27 ಲೂಕನು 19:12–27ಅದೇ ನಂದರೆ--ಕೀರ್ತಿವಂತನಾದ ಒಬ್ಬಾನೊಬ್ಬ ಮನುಷ್ಯನು ತನಗೋಸ್ಕರ ರಾಜ್ಯವನ್ನು ಪಡೆದುಕೊಂಡು ತಿರಿಗಿ ಬರುವದಕ್ಕಾಗಿ ದೂರ ದೇಶಕ್ಕೆ ಹೊರಟುಹೋದನು. ಅವನು ತನ್ನ ಹತ್ತು ಆಳುಗಳನ್ನು ಕರೆದು ಅವರಿಗೆ ಹತ್ತು ಮೊಹರಿಗಳನ್ನು ಒಪ್ಪಿಸಿ--ನಾನು ಬರುವವರೆಗೆ ವ್ಯಾಪಾರ ಮಾಡಿಕೊಂಡಿರ್ರಿ ಎಂದು ಹೇಳಿದನು. ಆದರೆ ಅವರ ಪಟ್ಟಣದವರು ಅವನನ್ನು ದ್ವೇಷಿಸಿ--ಇವನು ನಮ್ಮ ಮೇಲೆ ಆಡಳಿತ ಮಾಡುವದು ನಮಗೆ ಮನಸ್ಸಿಲ್ಲ ಎಂದು ಹೇಳಿ ಅವನ ಹಿಂದೆ ಸಂದೇಶವನ್ನು ಕಳುಹಿಸಿದರು. ಇದಾದ ಮೇಲೆ ಅವನು ರಾಜ್ಯವನ್ನು ಪಡೆದು ಹಿಂದಿರುಗಿದಾಗ ವ್ಯಾಪಾ ರದಿಂದ ಪ್ರತಿಯೊಬ್ಬ ಮನುಷ್ಯನು ಎಷ್ಟು ಲಾಭವನ್ನು ಪಡೆದನೆಂದು ತಿಳುಕೊಳ್ಳುವಂತೆ ತಾನು ಹಣಕೊಟ್ಟ ಆ ಆಳುಗಳನ್ನು ತನ್ನ ಬಳಿಗೆ ಕರೆಯಬೇಕೆಂದು ಆಜ್ಞಾಪಿ ಸಿದನು. ಆಗ ಮೊದಲನೆಯವನು ಬಂದು--ಒಡೆಯನೇ, ನಿನ್ನ ಮೊಹರಿನಿಂದ ಹತ್ತು ಮೊಹರಿಗಳನ್ನು ಸಂಪಾದಿಸಿದ್ದೇನೆ ಅಂದನು. ಅದಕ್ಕೆ ಅವನು ಅವ ನಿಗೆ--ಒಳ್ಳೇದು. ನೀನು ಉತ್ತಮ ಆಳು; ಯಾಕಂದರೆ ನೀನು ಅತಿ ಸ್ವಲ್ಪದರಲ್ಲಿ ನಂಬಿಗಸ್ತನಾಗಿದ್ದೀ ಹತ್ತು ಪಟ್ಟಣಗಳ ಮೇಲೆ ನೀನು ಅಧಿಕಾರಿಯಾಗಿರು ಅಂದನು. ಎರಡನೆಯವನು ಬಂದು--ಒಡೆಯನೇ, ನಿನ್ನ ಮೊಹರಿಯಿಂದ ಐದು ಮೊಹರಿಗಳನ್ನು ಸಂಪಾ ದಿಸಿದ್ದೇನೆ ಅಂದನು. ಅದಕ್ಕೆ ಅವನು ಅದೇ ಪ್ರಕಾರ--ನೀನು ಸಹ ಐದು ಪಟ್ಟಣಗಳ ಮೇಲಿರು ಎಂದು ಅವನಿಗೆ ಹೇಳಿದನು. ಆಗ ಮತ್ತೊಬ್ಬನು ಬಂದು--ಒಡೆಯನೇ, ಇಗೋ, ನಾನು ಕರವಸ್ತ್ರದಲ್ಲಿ ಕಟ್ಟಿ ಇಟ್ಟಿದ್ದ ನಿನ್ನ ಮೊಹರಿ ಇದೇ. ಯಾಕಂದರೆ ನೀನು ಕಠಿಣವಾದ ಮನುಷ್ಯನು ಎಂದು ನಾನು ನಿನಗೆ ಭಯಪಟ್ಟೆನು; ನೀನು ಇಡದೆ ಇರುವದನ್ನು ತಕ್ಕೊಳ್ಳು ವವನೂ ಬಿತ್ತದೆ ಇರುವಲ್ಲಿ ಕೊಯ್ಯುವವನೂ ಆಗಿದ್ದೀ ಅಂದನು. ಆಗ ಅವನು--ನೀನು ಕೆಟ್ಟ ಆಳು, ನಿನ್ನ ಮಾತಿನ ಮೇಲೆಯೇ ನಿನಗೆ ನ್ಯಾಯತೀರಿ ಸುವೆನು. ನಾನು ಇಡದೆ ಇರುವಲ್ಲಿ ತಕ್ಕೊಳ್ಳುವವನೂ ಬಿತ್ತದೆ ಇರುವಲ್ಲಿ ಕೊಯ್ಯುವವನೂ ಆದ ಕಠಿಣ ಮನುಷ್ಯನೆಂದು ನಿನಗೆ ತಿಳಿದಿತ್ತಲ್ಲಾ. ಹಾಗಿದ್ದರೆ ನನ್ನ ಹಣವನ್ನು ಧನ ವ್ಯವಹಾರದ ಸಂಸ್ಥೆಯಲ್ಲಿ ಯಾಕೆ ಹಾಕಲಿಲ್ಲ? ನಾನು ಬಂದಾಗ ಅದನ್ನು ಬಡ್ಡಿಯ ಸಹಿತ ತೆಗೆದುಕೊಳ್ಳುತ್ತಿದ್ದೆನು ಎಂದು ಅವನಿಗೆ ಹೇಳಿದನು. ಅವನು ಹತ್ತಿರ ನಿಂತಿದ್ದವರಿಗೆ--ಇವನ ಕಡೆಯಿಂದ ಆ ಮೊಹರಿಯನ್ನು ತಕ್ಕೊಂಡು ಹತ್ತು ಮೊಹರಿಗಳಿ ದ್ದವನಿಗೆ ಕೊಡಿರಿ ಅಂದನು. (ಆಗ ಅವರು ಅವ ನಿಗೆ--ಒಡೆಯನೇ, ಅವನಿಗೆ ಹತ್ತು ಮೊಹರಿಗಳಿವೆ ಯಲ್ಲಾ ಅಂದರು.) ಆದರೆ ನಾನು ನಿಮಗೆ ಹೇಳು ವದೇನಂದರೆ--ಇದ್ದ ಪ್ರತಿಯೊಬ್ಬನಿಗೆ ಕೊಡಲ್ಪಡು ವದು ಮತ್ತು ಇಲ್ಲದವನ ಕಡೆಯಿಂದ ಅವನಿಗೆ ಇದ್ದದ್ದೂ ಅವನಿಂದ ತೆಗೆಯಲ್ಪಡುವದು. ಆದರೆ ತಮ್ಮ ಮೇಲೆ ನಾನು ಆಡಳಿತ ಮಾಡುವದಕ್ಕೆ ಮನಸ್ಸಿಲ್ಲದ ಆ ನನ್ನ ವಿರೋಧಿಗಳನ್ನು ಇಲ್ಲಿಗೆ ತಂದು ನನ್ನ ಮುಂದೆ ಸಂಹಾರ ಮಾಡಿರಿ ಅಂದನು.
- Ephesians 4:11 ಎಫೆಸದವರಿಗೆ 4:11ಪರಿಶುದ್ಧರನ್ನು ಯೋಗ್ಯಸ್ಥಿತಿಗೆ ತರುವ ಕೆಲಸಕ್ಕೋಸ್ಕರವೂ ಸೇವೆಯ ಕೆಲಸಕ್ಕೋಸ್ಕರವೂ ಕ್ರಿಸ್ತನ ದೇಹವು ಅಭಿವೃದ್ಧಿಯಾಗುವದಕ್ಕೂಸ್ಕರವೂ
- 1 Corinthians 4:1–2 1 ಕೊರಿಂಥದವರಿಗೆ 4:1–2ಒಬ್ಬನು ನಮ್ಮನ್ನು ಕ್ರಿಸ್ತನ ಸೇವಕರೆಂತಲೂ ದೇವರ ಮರ್ಮಗಳ ವಿಷಯದಲ್ಲಿ ಮನೆವಾರ್ತೆಯವರೆಂತಲೂ ಎಣಿಸಲಿ. ಹೀಗಿರಲು ಮನೆವಾರ್ತೆಯವನು ನಂಬಿಗಸ್ತನಾಗಿ ಕಂಡುಬರುವದು ಅವಶ್ಯವಾಗಿದೆ.
- Matthew 25:14–30 ಮತ್ತಾಯನು 25:14–30ಯಾಕಂದರೆ ಪರಲೋಕರಾಜ್ಯವು ದೂರ ದೇಶಕ್ಕೆ ಪ್ರಯಾಣಮಾಡುವ ಒಬ್ಬ ಮನುಷ್ಯನು ತನ್ನ ಸ್ವಂತ ಸೇವಕರನ್ನು ಕರೆದು ಅವರಿಗೆ ತನ್ನ ಆಸ್ತಿಯನ್ನು ಒಪ್ಪಿಸಿದಂತೆ ಇದೆ. ಅವನು ಒಬ್ಬನಿಗೆ ಐದು ತಲಾಂತುಗಳನ್ನು ಇನ್ನೊಬ್ಬನಿಗೆ ಎರಡು, ಮತ್ತೊಬ್ಬನಿಗೆ ಒಂದು, ಹೀಗೆ ಅವನವನ ಸಾಮರ್ಥ್ಯದ ಪ್ರಕಾರ ಕೊಟ್ಟು ತಕ್ಷಣವೇ ಪ್ರಯಾಣ ಮಾಡಿದನು. ತರುವಾಯ ಐದು ತಲಾಂತುಗಳನ್ನು ಹೊಂದಿದ ವನು ಹೋಗಿ ಅವುಗಳಿಂದ ವ್ಯಾಪಾರಮಾಡಿ ಬೇರೆ ಐದು ತಲಾಂತುಗಳನ್ನು ಸಂಪಾದಿಸಿದನು. ಅದೇ ಪ್ರಕಾರ ಎರಡು ಹೊಂದಿದವನು ಸಹ ಬೇರೆ ಎರಡನ್ನು ಸಂಪಾದಿಸಿದನು. ಆದರೆ ಒಂದು ತಲಾಂತು ಹೊಂದಿದವನು ಹೋಗಿ ಭೂಮಿಯನ್ನು ಅಗೆದು ತನ್ನ ಯಜಮಾನನ ಹಣವನ್ನು ಬಚ್ಚಿಟ್ಟನು. ಬಹುಕಾಲವಾದ ಮೇಲೆ ಆ ಸೇವಕರ ಯಜ ಮಾನನು ಬಂದು ಅವರಿಂದ ಲೆಕ್ಕಾ ತೆಗೆದುಕೊಂಡನು. ಆಗ ಐದು ತಲಾಂತುಗಳನ್ನು ಹೊಂದಿದ್ದವನು ಬಂದು ಬೇರೆ ಐದು ತಲಾಂತುಗಳನ್ನು ತಂದು--ಒಡೆಯನೇ, ನೀನು ನನಗೆ ಐದು ತಲಾಂತುಗಳನ್ನು ಒಪ್ಪಿಸಿದಿ; ಇಗೋ, ಅವುಗಳಲ್ಲದೆ ಬೇರೆ ಐದು ತಲಾಂತುಗಳನ್ನು ನಾನು ಸಂಪಾದಿಸಿದ್ದೇನೆ ಅಂದನು. ಆಗ ಅವನ ಯಜಮಾನನು ಅವನಿಗೆ--ನಂಬಿಗಸ್ತನಾದ ಒಳ್ಳೇ ಸೇವಕನೇ, ಒಳ್ಳೇದನ್ನು ಮಾಡಿದ್ದೀ. ಸ್ವಲ್ಪವಾದವುಗಳಲ್ಲಿ ನೀನು ನಂಬಿಗಸ್ತ ನಾದದ್ದರಿಂದ ನಾನು ನಿನ್ನನ್ನು ಬಹಳವಾದವುಗಳ ಮೇಲೆ ಅಧಿಕಾರಿಯನ್ನಾಗಿ ನೇಮಿಸುವೆನು; ನೀನು ನಿನ್ನ ಯಜಮಾನನ ಸಂತೋಷದಲ್ಲಿ ಪ್ರವೇಶಿಸು ಅಂದನು. ಎರಡು ತಲಾಂತುಗಳನ್ನು ಹೊಂದಿದ್ದವನು ಸಹ ಬಂದು--ಒಡೆಯನೇ, ನೀನು ನನಗೆ ಎರಡು ತಲಾಂತುಗಳನ್ನು ಒಪ್ಪಿಸಿದಿ; ಇಗೋ, ಅವುಗಳಲ್ಲದೆ ಇನ್ನೂ ಎರಡು ತಲಾಂತುಗಳನ್ನು ನಾನು ಸಂಪಾದಿಸಿ ದ್ದೇನೆ ಅಂದನು. ಆಗ ಅವನ ಯಜಮಾನನು ಅವನಿಗೆ--ನಂಬಿಗಸ್ತನಾದ ಒಳ್ಳೇ ಸೇವಕನೇ, ಒಳ್ಳೇ ದನ್ನು ಮಾಡಿದ್ದೀ; ಸ್ವಲ್ಪವಾದವುಗಳಲ್ಲಿ ನೀನು ನಂಬಿಗ ಸ್ತನಾದದ್ದರಿಂದ ನಾನು ನಿನ್ನನ್ನು ಬಹಳವಾದವುಗಳ ಮೇಲೆ ಅಧಿಕಾರಿಯನ್ನಾಗಿ ನೇಮಿಸುವೆನು; ನೀನು ನಿನ್ನ ಯಜಮಾನನ ಸಂತೋಷದಲ್ಲಿ ಪ್ರವೇಶಿಸು ಅಂದನು. ಆಗ ಒಂದು ತಲಾಂತು ಹೊಂದಿದ್ದ ವನು ಬಂದು--ಒಡೆಯನೇ, ನೀನು ಬಿತ್ತದಿರುವಲ್ಲಿ ಕೊಯ್ಯುವವನೂ ತೂರದಿರುವಲ್ಲಿ ಕೂಡಿಸುವವನೂ ಆಗಿರುವ ಕಠಿಣ ಮನುಷ್ಯನೆಂದು ನಾನು ಬಲ್ಲೆನು; ಅದಕ್ಕೆ ನಾನು ಭಯಪಟ್ಟು ಹೋಗಿ ನಿನ್ನ ತಲಾಂತನ್ನು ಭೂಮಿಯಲ್ಲಿ ಬಚ್ಚಿಟ್ಟೆನು. ಇಗೋ, ನಿನ್ನದು ನಿನಗೆ ಸಲ್ಲಿದೆ ಅಂದನು. ಅದಕ್ಕೆ ಅವನ ಯಜ ಮಾನನು ಪ್ರತ್ಯುತ್ತರವಾಗಿ--ಮೈಗಳ್ಳನಾದ ಕೆಟ್ಟ ಸೇವಕನೇ, ನಾನು ಬಿತ್ತದಿರುವಲ್ಲಿ ಕೊಯ್ಯುವವನೆ ಂತಲೂ ತೂರದಿರುವಲ್ಲಿ ಕೂಡಿಸುವವನೆಂತಲೂ ನೀನು ತಿಳಿದಿದ್ದೀಯಲ್ಲಾ. ಹಾಗಾದರೆ ನೀನು ನನ್ನ ಹಣವನ್ನು ಬಡ್ಡಿಗಾಗಿ ಕೊಡತಕ್ಕದ್ದಾಗಿತ್ತು; ನಾನು ಬಂದಾಗ ನನ್ನ ಸ್ವಂತದ್ದನ್ನು ಬಡ್ಡಿ ಸಹಿತವಾಗಿ ಹೊಂದಿ ಕೊಳ್ಳುತ್ತಿದ್ದೆನು. ಆ ತಲಾಂತನ್ನು ತೆಗೆದುಕೊಂಡು ಹತ್ತು ತಲಾಂತುಗಳುಳ್ಳವನಿಗೆ ಕೊಡಿರಿ. ಇದ್ದ ಪ್ರತಿ ಯೊಬ್ಬನಿಗೆ ಕೊಡಲ್ಪಡುವದು ಮತ್ತು ಅವನಿಗೆ ಸಮೃದ್ಧಿ ಯಾಗುವದು; ಇಲ್ಲದವನ ಕಡೆಯಿಂದ ಅವನಿಗೆ ಇದ್ದದ್ದೂ ತೆಗೆಯಲ್ಪಡುವದು. ಮತ್ತು ನಿಷ್ಪ್ರಯೋ ಜಕನಾದ ಈ ಸೇವಕನನ್ನು ನೀವು ಹೊರಗೆ ಕತ್ತಲೆಯಲ್ಲಿ ಹಾಕಿರಿ; ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು ಅಂದನು.
- 1 Corinthians 12:4 1 ಕೊರಿಂಥದವರಿಗೆ 12:4ವರಗಳಲ್ಲಿ ಬೇರೆ ಬೇರೆ ವಿಧಗಳುಂಟು. ಆದರೆ ಆತ್ಮನು ಒಬ್ಬನೇ;
- 1 Corinthians 12:7–29 1 ಕೊರಿಂಥದವರಿಗೆ 12:7–29ಆದರೆ ಪವಿತ್ರಾತ್ಮನ ಪ್ರಕಟನೆಯು ಪ್ರತಿಯೊಬ್ಬನ ಪ್ರಯೋಜನಕ್ಕಾಗಿ ಕೊಡಲ್ಪಟ್ಟಿದೆ. ಹೇಗಂದರೆ ಒಬ್ಬನಿಗೆ ಆತ್ಮನ ಮೂಲಕ ಜ್ಞಾನವಾಕ್ಯವು, ಒಬ್ಬನಿಗೆ ಅದೇ ಆತ್ಮನಿಗೆ ಅನುಗುಣವಾಗಿ ತಿಳುವಳಿಕೆಯ ವಾಕ್ಯವು, ಬೇರೊಬ್ಬನಿಗೆ ಆ ಆತ್ಮನಿಂದಲೇ ನಂಬಿಕೆಯು, ಮತ್ತೊಬ್ಬನಿಗೆ ಆ ಆತ್ಮನಿಂದಲೇ ರೋಗ ಗಳನ್ನು ವಾಸಿಮಾಡುವ ವರಗಳು, ಒಬ್ಬನಿಗೆ ಮಹತುಗಳನ್ನು ಮಾಡುವ ವರವು, ಇನ್ನೊಬ್ಬನಿಗೆ ಪ್ರವಾದನೆಯ ವರವು, ಮತ್ತೊಬ್ಬನಿಗೆ ಆತ್ಮಗಳನ್ನು ವಿವೇಚಿಸುವ ವರವು, ಇನ್ನೊಬ್ಬನಿಗೆ ವಿವಿಧ ಭಾಷೆಗಳನ್ನಾಡುವ ವರವು, ಮತ್ತೊಬ್ಬನಿಗೆ ಭಾಷೆಗಳ ಅರ್ಥವನ್ನು ಹೇಳುವ ವರವು ಕೊಡಲ್ಪಡುತ್ತದೆ. ಆದರೆ ಈ ಎಲ್ಲಾ ಕಾರ್ಯ ಗಳನ್ನು ಮಾಡುವ ಆ ಒಬ್ಬ ಆತ್ಮನೇ ತನ್ನ ಚಿತ್ತಾನು ಸಾರವಾಗಿ ಒಬ್ಬೊಬ್ಬನಿಗೆ ಹಂಚಿಕೊಡುತ್ತಾನೆ. ಹೇಗೆ ದೇಹವು ಒಂದಾಗಿದ್ದರೂ ಅದಕ್ಕಿರುವ ಅಂಗಗಳು ಅನೇಕವಾಗಿವೆಯೋ, ಹೇಗೆ ಆ ದೇಹದ ಅಂಗಗಳೆಲ್ಲವು ಅನೇಕವಾಗಿದ್ದು ಒಂದೇ ದೇಹವಾಗಿ ರುವದೋ, ಹಾಗೆಯೇ ಕ್ರಿಸ್ತನು ಇದ್ದಾನೆ. ಯೆಹೂದ್ಯರಾಗಲಿ ಅನ್ಯರಾಗಲಿ ದಾಸರಾಗಲಿ ಸ್ವತಂತ್ರರಾಗಲಿ ನಾವೆಲ್ಲರು ಒಂದೇ ದೇಹವಾಗು ವದಕ್ಕಾಗಿ ಒಬ್ಬನೇ ಆತ್ಮನಿಂದ ಬಾಪ್ತಿಸ್ಮ ಮಾಡಿಸಿ ಕೊಂಡೆವು; ಆ ಒಬ್ಬನೇ ಆತ್ಮನು ನಮ್ಮೆಲ್ಲರಿಗೂ ಪಾನವಾಗಿ ಕೊಡಲ್ಪಟ್ಟಿದ್ದಾನೆ. ದೇಹವು ಒಂದೇ ಅಂಗವಲ್ಲ, ಆದರೆ ಅದು ಅನೇಕ ಅಂಗಗಳುಳ್ಳದ್ದಾಗಿದೆ. ಕಾಲು--ನಾನು ಕೈಯಲ್ಲದ ಕಾರಣ ದೇಹಕ್ಕೆ ಸೇರಲಿಲ್ಲವೆಂದು ಹೇಳಿದರೂ ಅದು ದೇಹಕ್ಕೆ ಸೇರದೆ ಇರುವದೋ? ಕಿವಿ--ನಾನು ಕಣ್ಣಲ್ಲದ ಕಾರಣ ದೇಹಕ್ಕೆ ಸೇರಲಿಲ್ಲವೆಂದು ಹೇಳಿದರೂ ಅದು ದೇಹಕ್ಕೆ ಸೇರದೆ ಇರುವದೋ? ದೇಹವೆಲ್ಲಾ ಕಣ್ಣಾದರೆ ಕೇಳುವದೆಲ್ಲಿ? ಅದೆಲ್ಲಾ ಕೇಳುವದಾದರೆ ಮೂಸಿ ನೋಡುವದೆಲ್ಲಿ? ಆದರೆ ದೇವರು ಆ ಅಂಗಗಳಲ್ಲಿ ಪ್ರತಿಯೊಂದನ್ನು ತನ್ನ ಇಷ್ಟಾನುಸಾರವಾಗಿ ದೇಹದಲ್ಲಿ ಇಟ್ಟಿದ್ದಾನೆ. ಅವೆಲ್ಲವೂ ಒಂದೇ ಅಂಗವಾಗಿದ್ದರೆ ದೇಹವೆಲ್ಲಿರುವದು? ಆದರೆ ಅಂಗಗಳೇನೋ ಅನೇಕ, ದೇಹವು ಒಂದೇ. ಕಣ್ಣು ಕೈಗೆ--ನೀನು ನನಗೆ ಅವಶ್ಯವಿಲ್ಲವೆಂದೂ ತಲೆಯು ಕಾಲು ಗಳಿಗೆ--ನೀವು ನನಗೆ ಅವಶ್ಯವಿಲ್ಲವೆಂದೂ ಹೇಳುವದ ಕ್ಕಾಗುವದಿಲ್ಲ. ಹೌದು, ಶರೀರದ ಅಂಗಗಳು ಬಹಳ ಬಲಹೀನವಾದವುಗಳೆಂದು ಕಂಡರೂ ಹೆಚ್ಚಾಗಿ ಅವಶ್ಯ ವಾಗಿವೆ. ಇದಲ್ಲದೆ ಅಲ್ಪ ಮಾನವುಳ್ಳವುಗಳೆಂದು ನಾವು ಎಣಿಸುವ ದೇಹದ ಅಂಗಗಳಿಗೆ ಹೆಚ್ಚಾದ ಗೌರವವನ್ನು ಕೊಡುತ್ತೇವೆ. ಆಗ ಅಂದವಿಲ್ಲದ ನಮ್ಮ ಅಂಗಗಳು ಹೆಚ್ಚು ಅಂದವಾಗಿರುತ್ತವೆ. ಅಂದವುಳ್ಳ ನಮ್ಮ ಅಂಗಗಳಿಗೆ ಯಾವ ಅವಶ್ಯಕತೆಯೂ ಇರುವದಿಲ್ಲ; ಆದರೆ ದೇವರು ಕೊರತೆಯುಳ್ಳ ಅಂಗ ವನ್ನು ಹೆಚ್ಚಾಗಿ ಗೌರವಿಸಿ ದೇಹವನ್ನು ಹದವಾಗಿ ಜೋಡಿಸಿದ್ದಾನೆ. ಹೀಗೆ ದೇಹದಲ್ಲಿ ಭೇದವಿರದೆ ಅಂಗಗಳು ಒಂದಕ್ಕೊಂದು ಚಿಂತಿಸುವವುಗಳಾಗಿ ರುತ್ತವೆ. ಒಂದು ಅಂಗಕ್ಕೆ ನೋವಾದರೆ ಎಲ್ಲಾ ಅಂಗಗಳಿಗೂ ನೋವಾಗುತ್ತದೆ; ಇಲ್ಲವೆ ಒಂದು ಅಂಗಕ್ಕೆ ಮರ್ಯಾದೆ ಬಂದರೆ ಎಲ್ಲಾ ಅಂಗಗಳಿಗೂ ಸಂತೋಷವಾಗುತ್ತದೆ. ಈಗ ನೀವು ಕ್ರಿಸ್ತನ ದೇಹವಾಗಿದ್ದು ವಿಶೇಷ ವಾಗಿ ಅಂಗಗಳಾಗಿದ್ದೀರಿ. ದೇವರು ಕೆಲವರನ್ನು ಸಭೆಯಲ್ಲಿ ಮೊದಲನೆಯದಾಗಿ ಅಪೊಸ್ತಲರನ್ನು, ಎರಡನೆಯದಾಗಿ ಪ್ರವಾದಿಗಳನ್ನು, ಮೂರನೆಯದಾಗಿ ಉಪದೇಶಕರನ್ನು ಇಟ್ಟಿದ್ದಾನೆ; ಆಮೇಲೆ ಮಹತ್ಕಾರ್ಯ ಗಳನ್ನೂ ವಾಸಿಮಾಡುವ ವರಗಳನ್ನೂ ಸಹಾಯ ಮಾಡುವದನ್ನೂ ಕಾರ್ಯಗಳನ್ನು ನಿರ್ವಹಿಸುವದನ್ನೂ ವಿವಿಧ ಭಾಷೆಗಳನಾ ಎಲ್ಲರೂ ಅಪೊಸ್ತಲರೋ? ಎಲ್ಲರೂ ಪ್ರವಾದಿ ಗಳೋ? ಎಲ್ಲರೂ ಉಪದೇಶಕರೋ? ಎಲ್ಲರೂ ಮಹತ್ಕಾರ್ಯಗಳನ್ನು ಮಾಡುವವರೋ?
- Matthew 21:33 ಮತ್ತಾಯನು 21:33ಮತ್ತೊಂದು ಸಾಮ್ಯವನ್ನು ಕೇಳಿರಿ: ಒಬ್ಬ ಮನೇ ಯಜಮಾನನು ದ್ರಾಕ್ಷೇತೋಟವನ್ನು ನೆಟ್ಟು ಅದರ ಸುತ್ತಲೂ ಬೇಲಿಹಾಕಿ ಅದರೊಳಗೆ ತೊಟ್ಟಿಯನ್ನು ಅಗೆದು ಗೋಪುರವನ್ನು ಕಟ್ಟಿ ಒಕ್ಕಲಿಗರಿಗೆ ವಾರಕ್ಕೆ ಕೊಟ್ಟು ದೂರದೇಶಕ್ಕೆ ಹೋದನು.
- Luke 16:1–12 ಲೂಕನು 16:1–12ತರುವಾಯ ಆತನು ತನ್ನ ಶಿಷ್ಯರಿಗೂ ಆಗ ಅವನು ಆ ಮನೆವಾರ್ತೆ ಯವನನ್ನು ಕರೆದು ಅವನಿಗೆ--ಇದೇನು ನಾನು ನಿನ್ನ ವಿಷಯದಲ್ಲಿ ಕೇಳುವದು? ಮನೆವಾರ್ತೆಯ ನಿನ್ನ ಲೆಕ್ಕವನ್ನು ಒಪ್ಪಿಸು; ಯಾಕಂದರೆ ನೀನು ಇನ್ನು ಮೇಲೆ ಮನೆವಾರ್ತೆಯವನಾಗಿರುವದಕ್ಕಾಗುವದಿಲ್ಲ ಅಂದನು. ಆಗ ಆ ಮನೆವಾರ್ತೆಯವನು ತನ್ನೊಳಗೆ--ನಾನೇನು ಮಾಡಲಿ? ಯಾಕಂದರೆ ನನ್ನ ಯಜಮಾನನು ನನ್ನನ್ನು ಮನೆವಾರ್ತೆಯ ಕೆಲಸದಿಂದ ತೆಗೆದುಬಿಡು ತ್ತಾನೆ; ನಾನು ಅಗೆಯಲಾರೆನು, ಭಿಕ್ಷೆ ಬೇಡುವದಕ್ಕೆ ನಾನು ನಾಚಿಕೊಳ್ಳುತ್ತೇನೆ. ಮನೆವಾರ್ತೆಯ ಕೆಲಸ ದಿಂದ ನನ್ನನ್ನು ತೆಗೆದ ಮೇಲೆ ಅವರು ನನ್ನನ್ನು ತಮ್ಮ ಮನೆಗಳಲ್ಲಿ ಸೇರಿಸಿಕೊಳ್ಳುವಂತೆ ನಾನು ಮಾಡಬೇಕಾ ದದ್ದನ್ನು ನಿರ್ಧರಿಸಿದ್ದೇನೆ ಎಂದು ಅಂದುಕೊಂಡನು. ಹೀಗೆ ಅವನು ತನ್ನ ಯಜಮಾನನ ಸಾಲಗಾರರಲ್ಲಿ ಪ್ರತಿಯೊಬ್ಬನನ್ನು ಕರೆದು ಮೊದಲನೆಯವನಿಗೆ--ನೀನು ನನ್ನ ಯಜಮಾನನಿಗೆ ಸಲ್ಲಿಸಬೇಕಾದದ್ದು ಎಷ್ಟು ಎಂದು ಕೇಳಲು ಅವನು--ಒಂದು ನೂರು ಅಳತೆ ಎಣ್ಣೆ ಅಂದನು. ಆಗ ಅವನು--ನಿನ್ನ ಬೆಲೆ ಪಟ್ಟಿಯನ್ನು ತೆಗೆದುಕೋ, ಮತ್ತು ಬೇಗ ಕೂತುಕೊಂಡು ಐವತ್ತು ಎಂದು ಬರೆ ಎಂದು ಅವನಿಗೆ ಹೇಳಿದನು. ಇದಲ್ಲದೆ ಅವನು ಮತ್ತೊಬ್ಬನಿಗೆ--ನೀನು ಸಲ್ಲಿಸಬೇಕಾದದ್ದು ಎಷ್ಟು? ಅನ್ನಲು ಅವನು--ಒಂದು ನೂರು ಅಳತೆ ಗೋಧಿ ಅಂದನು. ಆಗ ಅವನು--ನಿನ್ನ ಬೆಲೆ ಪಟ್ಟಿ ಯನ್ನು ತೆಗೆದುಕೊಂಡು ಎಂಭತ್ತು ಎಂದು ಬರೆ ಅಂದನು. ಆಗ ಯಜಮಾನನು ಅನ್ಯಾಯಗಾರನಾದ ಆ ಮನೆವಾರ್ತೆಯವನು ಜಾಣತನ ಮಾಡಿದನೆಂದು ಅವನನ್ನು ಹೊಗಳಿದನು; ಯಾಕಂದರೆ ಈ ಲೋಕದ ಮಕ್ಕಳು ತಮ್ಮ ಸಂತತಿಯವರಲ್ಲಿ ಬೆಳಕಿನ ಮಕ್ಕಳಿಗಿಂತ ಜಾಣರಾಗಿದ್ದಾರೆ. ನಾನು ನಿಮಗೆ ಹೇಳುವದೇ ನಂದರೆ--ಅನ್ಯಾಯದ ಧನದಿಂದ ನಿಮಗೆ ಸ್ನೇಹಿತರನ್ನು ಮಾಡಿಕೊಳ್ಳಿರಿ; ಅದು ನಿಮ್ಮನ್ನು ಬಿಟ್ಟು ಹೋದಾಗ ಅವರು ನಿಮ್ಮನ್ನು ನಿತ್ಯವಾದ ನಿವಾಸಗಳಲ್ಲಿ ಸೇರಿಸಿ ಕೊಳ್ಳುವರು. ಯಾವನು ಸ್ವಲ್ಪವಾದದ್ದರಲ್ಲಿ ನಂಬಿಗಸ್ತ ನಾಗಿರುವನೋ ಅವನು ಬಹಳವಾದದ್ದರಲ್ಲಿಯೂ ನಂಬಿಗಸ್ತನಾಗಿದ್ದಾನೆ; ಯಾವನು ಸ್ವಲ್ಪವಾದದ್ದರಲ್ಲಿ ಅನ್ಯಾಯಗಾರನಾಗಿರುವನೋ ಅವನು ಬಹಳವಾದದ್ದ ರಲ್ಲಿಯೂ ಅನ್ಯಾಯಗಾರನಾಗಿದ್ದಾನೆ. ಆದದರಿಂದ ಅನ್ಯಾಯವಾದ ಧನದಲ್ಲಿ ನೀವು ನಂಬಿಗಸ್ತರಾಗಿರದಿದ್ದರೆ ನಿಜವಾದ ಧನವನ್ನು ನಿಮ್ಮ ವಶಕ್ಕೆ ಯಾರು ಒಪ್ಪಿಸುವರು? ಇದಲ್ಲದೆ ಮತ್ತೊಬ್ಬನದರಲ್ಲಿ ನೀವು ನಂಬಿಗಸ್ತರಾಗಿರದಿದ್ದರೆ ನಿಮ್ಮ ಸ್ವಂತದ್ದನ್ನು ನಿಮಗೆ ಯಾರು ಕೊಡುವರು?
- 1 Corinthians 3:5 1 ಕೊರಿಂಥದವರಿಗೆ 3:5ಹಾಗಾದರೆ ಪೌಲನು ಯಾರು? ಅಪೊಲ್ಲೋಸನು ಯಾರು? ಅವರು ಸೇವಕರು, ಅವರ ಮುಖಾಂತರ ನೀವು ನಂಬುವವರಾದಿರಿ; ಕರ್ತನು ಒಬ್ಬೊಬ್ಬನಿಗೆ ದಯಪಾಲಿಸಿದ ಪ್ರಕಾರ ಅವರು ಸೇವೆ ಮಾಡುವವ ರಾಗಿದ್ದಾರೆ.