Matthew · chapter 25 · verse 16
Matthew 25:16 in Kannada
ತರುವಾಯ ಐದು ತಲಾಂತುಗಳನ್ನು ಹೊಂದಿದ ವನು ಹೋಗಿ ಅವುಗಳಿಂದ ವ್ಯಾಪಾರಮಾಡಿ ಬೇರೆ ಐದು ತಲಾಂತುಗಳನ್ನು ಸಂಪಾದಿಸಿದನು.
Taruvaaya aidu talaantugalannu hondida vanu hogi avugalinda vyaapaaramaadi bere aidu talaantugalannu sampaadisidanu.
Matthew 25:16 in English
- King James Version (KJV)
- Then he that had received the five talents went and traded with the same, and made [them] other five talents.
- World English Bible (WEB)
- Immediately he who received the five talents went and traded with them, and made another five talents.
- American Standard Version (ASV)
- Straightway he that received the five talents went and traded with them, and made other five talents.
- Bible in Basic English (BBE)
- Straight away he who had been given the five talents went and did trade with them, and made five more.
- Darby Translation (DBY)
- And he that had received the five talents went and trafficked with them, and made five other talents.
- Webster's Bible (WBS)
- Then he that had received the five talents, went and traded with the same, and gained other five talents.
- Young's Literal Translation (YLT)
- 'And he who did receive the five talents, having gone, wrought with them, and made other five talents;
Read in context
- 14ಯಾಕಂದರೆ ಪರಲೋಕರಾಜ್ಯವು ದೂರ ದೇಶಕ್ಕೆ ಪ್ರಯಾಣಮಾಡುವ ಒಬ್ಬ ಮನುಷ್ಯನು ತನ್ನ ಸ್ವಂತ ಸೇವಕರನ್ನು ಕರೆದು ಅವರಿಗೆ ತನ್ನ ಆಸ್ತಿಯನ್ನು ಒಪ್ಪಿಸಿದಂತೆ ಇದೆ.
- 15ಅವನು ಒಬ್ಬನಿಗೆ ಐದು ತಲಾಂತುಗಳನ್ನು ಇನ್ನೊಬ್ಬನಿಗೆ ಎರಡು, ಮತ್ತೊಬ್ಬನಿಗೆ ಒಂದು, ಹೀಗೆ ಅವನವನ ಸಾಮರ್ಥ್ಯದ ಪ್ರಕಾರ ಕೊಟ್ಟು ತಕ್ಷಣವೇ ಪ್ರಯಾಣ ಮಾಡಿದನು.
- 16ತರುವಾಯ ಐದು ತಲಾಂತುಗಳನ್ನು ಹೊಂದಿದ ವನು ಹೋಗಿ ಅವುಗಳಿಂದ ವ್ಯಾಪಾರಮಾಡಿ ಬೇರೆ ಐದು ತಲಾಂತುಗಳನ್ನು ಸಂಪಾದಿಸಿದನು.
- 17ಅದೇ ಪ್ರಕಾರ ಎರಡು ಹೊಂದಿದವನು ಸಹ ಬೇರೆ ಎರಡನ್ನು ಸಂಪಾದಿಸಿದನು.
- 18ಆದರೆ ಒಂದು ತಲಾಂತು ಹೊಂದಿದವನು ಹೋಗಿ ಭೂಮಿಯನ್ನು ಅಗೆದು ತನ್ನ ಯಜಮಾನನ ಹಣವನ್ನು ಬಚ್ಚಿಟ್ಟನು.
Cross references
- 2 Timothy 2:6 2 ತಿಮೊಥೆಯನಿಗೆ 2:6ಪ್ರಯಾಸ ಪಡುವ ವ್ಯವಸಾಯಗಾರನು ಫಲಗಳಲ್ಲಿ ಮೊದಲನೆಯ ದಾಗಿ ಪಾಲುಗಾರನಾಗಿರತಕ್ಕದ್ದು.
- Philemon 1:6–7 ಫಿಲೆಮೋನನಿಗೆ 1:6–7ಹೀಗೆ ನಿನ್ನ ವಿಶ್ವಾಸದ ಅನ್ಯೋನ್ಯತೆಯು ಕ್ರಿಸ್ತ ಯೇಸುವಿನಲ್ಲಿ ಮತ್ತು ನಿನ್ನಲ್ಲಿರುವ ಎಲ್ಲಾ ಒಳ್ಳೇದರ ತಿಳುವಳಿಕೆಯಲ್ಲಿ ಬಲ ವಾಗಿರುವದು. ಸಹೋದರನೇ, ನಿನ್ನ ಮೂಲಕ ಪರಿಶುದ್ಧರ ಹೃದಯಗಳಿಗೆ ಉತ್ತೇಜನವಾದದರಿಂದ ನಿನ್ನ ಪ್ರೀತಿಯ ನಿಮಿತ್ತ ನನಗೆ ಬಹಳ ಸಂತೋಷವೂ ಆದರಣೆಯೂ ಉಂಟಾದವು.
- 1 Timothy 6:17–18 1 ತಿಮೊಥೆಯನಿಗೆ 6:17–18ಈ ಲೋಕದಲ್ಲಿ ಐಶ್ವರ್ಯವುಳ್ಳವರು ಅಹಂಕಾರಿ ಗಳಾಗಿರದೆ, ಅಸ್ಥಿರವಾದ ಐಶ್ವರ್ಯದ ಮೇಲೆ ಭರವಸ ವನ್ನಿಡದೆ ನಮ್ಮ ಅನುಭೋಗಕ್ಕೋಸ್ಕರ ನಮಗೆ ಎಲ್ಲ ವನ್ನೂ ಹೇರಳವಾಗಿ ದಯಪಾಲಿಸುವ ಜೀವವುಳ್ಳ ದೇವರ ಮೇಲೆ ಭರವಸವನ್ನಿಡಬೇಕೆಂತಲೂ ಅವರು ಒಳ್ಳೇದನ್ನು ಮಾಡುವವರೂ ಸತ್ಕಾರ್ಯಗಳಲ್ಲಿ ಐಶ್ವರ್ಯವಂತರೂ ಪಾಲುಕೊಡುವದರಲ್ಲಿ ಸಿದ್ಧವಾಗಿ ರುವವರೂ ಪರೋಪಕಾರ ಮಾಡುವವರೂ ಆಗಿದ್ದು.
- 3 John 1:5–8 3 ಯೋಹಾನನು 1:5–8ಪ್ರಿಯನೇ, ಸಹೋದರರಿಗೂ ಪರಿಚಯವಿಲ್ಲದವ ರಿಗೂ ನೀನು ಮಾಡುವದನ್ನೆಲ್ಲಾ ನಂಬಿಗಸ್ತನಾಗಿ ಮಾಡುತ್ತೀ. ಅವರು ಸಭೆಯ ಮುಂದೆ ನಿನ್ನ ಪ್ರೀತಿಗೆ ಸಾಕ್ಷಿ ಹೇಳಿದರು. ಅವರನ್ನು ನೀನು ಭಕ್ತಿಪೂರ್ವಕವಾಗಿ ಸಾಗ ಕಳುಹಿಸಿದರೆ ನೀನು ಒಳ್ಳೇದು ಮಾಡುತ್ತೀ. ಯಾಕಂದರೆ ಅವರು ಆತನ ಹೆಸರಿನ ನಿಮಿತ್ತವಾಗಿ ಹೊರಟು ಹೋಗಿದ್ದಾರೆ; ಅನ್ಯಜನಗಳಿಂದ ಏನೂ ತೆಗೆದುಕೊಳ್ಳುವವರಲ್ಲ. ಆದದರಿಂದ ನಾವು ಸತ್ಯಕ್ಕೆ ಸಹಕಾರಿಗಳಾಗುವಂತೆ ಅಂಥವರನ್ನು ಸೇರಿಸಿಕೊಳ್ಳುವ ಹಂಗಿನಲ್ಲಿದ್ದೇವೆ.
- Isaiah 60:5–16 ಯೆಶಾಯ 60:5–16ಆಗ ನೀನು ಅದನ್ನು ನೋಡುವಿ, ನೀವು ಗುಂಪು ಗುಂಪಾಗಿ ಹೋಗುವಿರಿ. ನಿನ್ನ ಹೃದಯವು ಹೆದರಿ ವಿಶಾಲವಾಗು ವದು; ಸಮುದ್ರದ (ವ್ಯಾಪಾರದ) ಸಮೃದ್ಧಿಯು ನಿನ್ನ ಕಡೆಗೆ ತಿರುಗಿಕೊಳ್ಳುವದು; ಅನ್ಯಜನಾಂಗದ ಸೇನಾ ಬಲವು ನಿನ್ನ ಬಳಿಗೆ ಬರುವದು. ಒಂಟೆಗಳ ಸಮೂಹವು ನಿನ್ನನ್ನು ಮುಚ್ಚುವದು; ಮಿದ್ಯಾನಿನ, ಏಫದ ವೇಗವುಳ್ಳ ಒಂಟೆಗಳು ಅವೆಲ್ಲಾ ಶೇಬದಿಂದಲೂ ಬರುವವು; ಅವು ಬಂಗಾರವನ್ನೂ ಧೂಪವನ್ನೂ ತರುವವು; ಅವು ಕರ್ತನ ಸ್ತೋತ್ರ ಗಳನ್ನು ಸಾರುವವು. ಕೇದಾರಿನ ಮಂದೆಗಳೆಲ್ಲಾ ನಿನ್ನ ಬಳಿಗೆ ಕೂಡಿಸಲ್ಪಡುವವು; ನೆಬಾಯೋತಿನ ಟಗರು ಗಳು ನಿನ್ನನ್ನು ಸೇವಿಸುವವು; ಅವು ನನ್ನ ಬಲಿಪೀಠದ ಮೇಲೆ ಅಂಗೀಕಾರವಾಗುವವು, ನಾನು ನನ್ನ ಮಹಿ ಮೆಯ ಆಲಯವನ್ನು ಘನಪಡಿಸುವೆನು. ಮೇಘದಂತೆಯೂ ತಮ್ಮ ಗೂಡುಗಳಿಗೆ ಹೋಗುವ ಪಾರಿವಾಳಗಳಂತೆಯೂ ಹಾರುವ ಇವರು ಯಾರು? ನಿಶ್ಚಯವಾಗಿ ದ್ವೀಪಗಳು, ತಾರ್ಷೀಷಿನ ಹಡಗುಗಳು ಮೊದಲಾಗಿ, ನನಗೋಸ್ಕರ ದೂರದಿಂದ ನಿನ್ನ ಕುಮಾರರನ್ನು ತಮ್ಮ ಬೆಳ್ಳಿಬಂಗಾರದ ಸಹಿತವಾಗಿ ನಿನ್ನ ದೇವರಾದ ಕರ್ತನ ಹೆಸರಿನ ಬಳಿಗೂ ನಿನ್ನನ್ನು ಶೃಂಗರಿಸಿರುವ ಇಸ್ರಾಯೇಲಿನ ಪರಿಶುದ್ಧನ ಬಳಿಗೂ ತರುವದರಲ್ಲಿ ಮುಂದಾಗುತ್ತಿವೆ. ಇದಲ್ಲದೆ ಅನ್ಯರ ಮಕ್ಕಳು ನಿನ್ನ ಗೋಡೆಗಳನ್ನು ಕಟ್ಟುವರು; ಅವರ ಅರಸರು ಸಹ ನಿನಗೆ ಸೇವೆ ಮಾಡುವರು; ನನ್ನ ರೌದ್ರದಲ್ಲಿ ನಿನ್ನನ್ನು ಹೊಡೆದೆನು; ಆದರೆ ನನ್ನ ಕಟಾಕ್ಷದಲ್ಲಿ ನಿನ್ನನ್ನು ಕರುಣಿಸುವೆನು. ಆದದರಿಂದ ನಿನ್ನ ಬಾಗಿಲುಗಳು ಯಾವಾಗಲೂ ತೆರೆದಿರುವವು; ಅನ್ಯಜನಾಂಗಗಳ ಆಸ್ತಿ ನಿನ್ನ ಬಳಿಗೆ ತರಲ್ಪಟ್ಟು, ಅವರ ಅರಸರು ಸಹ ನಡಿಸಲ್ಪಡುವದ ಕ್ಕೋಸ್ಕರವೇ ಹಗಲು ಇಲ್ಲವೆ ರಾತ್ರಿ ಅವು ಮುಚ್ಚಲ್ಪ ಡುವದಿಲ್ಲ. ನಿನ್ನನ್ನು ಸೇವಿಸದ ಜನಾಂಗವೂ ರಾಜ್ಯವೂ ನಾಶವಾಗುವದು; ಹೌದು, ಆ ಜನಾಂಗ ಗಳು ಸಂಪೂರ್ಣವಾಗಿ ಹಾಳಾಗುವವು. ಲೆಬನೋ ನಿನ ವೈಭವವು ಸುರಗಿ, ದಿಂಡುಗ, ಹೊನ್ನೆ ಮರಗಳು ಕೂಡ ನನ್ನ ಪರಿಶುದ್ಧ ಸ್ಥಳವನ್ನು ಶೃಂಗರಿಸುವದಕ್ಕೆ ನಿನ್ನ ಬಳಿಗೆ ಬರುವವು; ನನ್ನ ಪಾದಗಳ ಸ್ಥಳವನ್ನು ನಾನು ಗೌರವವುಳ್ಳದ್ದಾಗಿ ಮಾಡುವೆನು. ಆಗ ನಿನ್ನನ್ನು ಕುಗ್ಗಿಸಿದವರ ಮಕ್ಕಳು ಬೊಗ್ಗಿಕೊಂಡು ನಿನ್ನ ಬಳಿಗೆ ಬರುವರು; ನಿನ್ನನ್ನು ಅಸಡ್ಡೆಮಾಡಿದವರೆಲ್ಲರು ನಿನ್ನ ಅಂಗಾಲುಗಳಿಗೆ ಸರಿಯಾಗಿ ಅಡ್ಡಬಿದ್ದು ನಿನ್ನನ್ನು ಕರ್ತನ ಪಟ್ಟಣವೆಂದು ಇಸ್ರಾಯೇಲಿನ ಪರಿಶುದ್ಧನ ಚೀಯೋ ನೆಂದೂ ಕರೆಯುವರು. ಹಾದುಹೋಗುವವರಿಲ್ಲದೆ ನೀನು ಬಿಡಲ್ಪಟ್ಟವಳೂ ಹಗೆ ಮಾಡಲ್ಪಟ್ಟವಳೂ ಆಗಿ ದ್ದಕ್ಕೆ ಬದಲಾಗಿ ನಿನ್ನನ್ನು ನಿತ್ಯವಾದ ಘನತೆಯೂ ಅನೇಕ ಸಂತತಿಗಳಲ್ಲಿ ಉಲ್ಲಾಸವಾಗಿಯೂ ಮಾಡು ತ್ತೇನೆ. ಅನ್ಯಜನಾಂಗಗಳ ಹಾಲನ್ನು ಹೀರಿಕೊಳ್ಳುವಿ; ಅರಸರ ಮೊಲೆಯನ್ನು ಸಹ ಹೀರಿಕೊಳ್ಳುವಿ; ಆಗ ಕರ್ತನಾದ ನಾನೇ ನಿನ್ನ ರಕ್ಷಕನೂ ನಿನ್ನ ವಿಮೋ ಚಕನೂ ಯಾಕೋಬನ ಪರಾಕ್ರಮಿಯೂ ಎಂದು ತಿಳುಕೊಳ್ಳುವಿ.
- 2 Chronicles 33:15–16 2 ಪೂರ್ವಕಾಲವೃತ್ತಾಂತ 33:15–16ಇದಲ್ಲದೆ ಅವನು ಅನ್ಯ ದೇವರುಗಳನ್ನೂ ಕರ್ತನ ಆಲಯದಲ್ಲಿರುವ ವಿಗ್ರಹವನ್ನೂ ಕರ್ತನ ಆಲಯದ ಪರ್ವತದಲ್ಲಿಯೂ ಯೆರೂಸಲೇಮಿನ ಲ್ಲಿಯೂ ತಾನು ಕಟ್ಟಿಸಿದ ಸಮಸ್ತ ಬಲಿಪೀಠಗಳನ್ನೂ ತೆಗೆದುಹಾಕಿ ಅವುಗಳನ್ನು ಪಟ್ಟಣದ ಹೊರಗೆ ಬಿಸಾಡಿ ಬಿಟ್ಟನು. ಅವನು ಕರ್ತನ ಬಲಿಪೀಠವನ್ನು ಕಟ್ಟಿಸಿ ಅದರ ಮೇಲೆ ಸಮಾಧಾನದ ಬಲಿಗಳನ್ನೂ ಸ್ತೋತ್ರದ ಬಲಿಗಳನ್ನೂ ಅರ್ಪಿಸಿ ಇಸ್ರಾಯೇಲಿನ ದೇವರಾದ ಕರ್ತನನ್ನು ಸೇವಿಸಲು ಯೆಹೂದದವರಿಗೆ ಆಜ್ಞಾಪಿಸಿ ದನು.
- Romans 15:18–19 ರೋಮಾಪುರದವರಿಗೆ 15:18–19ಮಾತಿ ನಿಂದಲೂ ಕ್ರಿಯೆಯಿಂದಲೂ ಬಲವಾದ ಸೂಚಕ ಕಾರ್ಯಗಳಿಂದಲೂ ಅದ್ಭುತಕಾರ್ಯಗಳಿಂದಲೂ ದೇವರಾತ್ಮನ ಬಲದಿಂದಲೂ ಅನ್ಯಜನಗಳವರು ವಿಧೇಯರಾಗುವಂತೆ ಕ್ರಿಸ್ತನು ನನ್ನ ಮೂಲಕ ಮಾಡ ದಿರುವವುಗಳನ್ನು ಮಾತನಾಡಲು ನಾನು ಧೈರ್ಯ ಪಡುವದಿಲ್ಲ. ಹೀಗೆ ಯೆರೂಸಲೇಮ್ ಮೊದಲು ಗೊಂಡು ಇಲ್ಲುರಿಕದ ಸುತ್ತಲೂ ನಾನು ಕ್ರಿಸ್ತನ ಸುವಾರ್ತೆಯನ್ನು ಪೂರ್ಣವಾಗಿ ಸಾರಿದ್ದೇನೆ.
- Nehemiah 5:14–19 ನೆಹೆಮೀಯ 5:14–19ಇದಲ್ಲದೆ ನಾನು ಯೆಹೂದ ದೇಶದಲ್ಲಿ ಅವರ ಅಧಿಪತಿಯಾಗಿದ್ದ ಕಾಲ ಮೊದಲುಗೊಂಡು ಅರಸ ನಾದ ಆರ್ತಷಸ್ತನ ಇಪ್ಪತ್ತನೇ ವರುಷ ಮೊದಲು ಗೊಂಡು ಮೂವತ್ತೆರಡನೇ ವರುಷದ ವರೆಗೆ ಹನ್ನೆರಡು ವರುಷವಾಗಿ ನಾನೂ ನನ್ನ ಸಹೋದರರೂ ಅಧಿ ಪತಿಯಾದವನ ರೊಟ್ಟಿಯನ್ನು ತಿನ್ನಲಿಲ್ಲ. ಆದರೆ ನನಗಿಂತ ಮುಂಚೆ ಇದ್ದ ಅಧಿಪತಿಗಳು ಜನರಿಗೆ ಭಾರವಾಗಿದ್ದು ನಾಲ್ವತ್ತು ಬೆಳ್ಳಿಯ ಶೇಕೆಲುಗಳ ಹೊರ ತಾಗಿ ಅವರಿಂದ ರೊಟ್ಟಿಯನ್ನೂ ದ್ರಾಕ್ಷಾರಸವನ್ನೂ ತೆಗೆದುಕೊಳ್ಳುತ್ತಾ ಇದ್ದರು. ಅವರ ಸೇವಕರು ಸಹ ಜನರನ್ನು ಆಳುತ್ತಾ ಇದ್ದರು. ಆದರೆ ದೇವರ ಭಯದ ನಿಮಿತ್ತ ನಾನು ಹೀಗೆ ಮಾಡಿದವನಲ್ಲ. ಇದಲ್ಲದೆ ನಾನು ಈ ಗೋಡೆಯ ಕಾರ್ಯದಲ್ಲಿ ನೆಲೆಯಾಗಿದ್ದೆನು. ನಾವು ಭೂಮಿಯನ್ನು ಕೊಂಡುಕೊಳ್ಳಲಿಲ್ಲ. ನನ್ನ ಸೇವಕರೆಲ್ಲರು ಕೆಲಸಕ್ಕೆ ಕೂಡಿ ಬಂದರು. ನಮ್ಮ ಸುತ್ತಲೂ ಇರುವ ಜನಾಂಗಗಳಿಂದ ಬಂದವರ ಹೊರ ತು ಯೆಹೂದ್ಯರೂ ಅಧಿಕಾರಸ್ಥರೂ ನೂರ ಐವತ್ತು ಮಂದಿ ನನ್ನ ಮೇಜಿಗೆ ಸೇರುತ್ತಿದ್ದರು. ಪ್ರತಿದಿನಕ್ಕೆ ಸಿದ್ಧಮಾಡಿದ್ದೇನಂದರೆ, ಒಂದು ಎತ್ತೂ ಉತ್ತಮವಾದ ಆರು ಕುರಿಗಳೂ; ಕೋಳಿಗಳೂ, ಹತ್ತು ದಿವಸಕ್ಕೆ ಒಂದು ಸಾರಿ ಸಕಲ ವಿಧವಾದ ದ್ರಾಕ್ಷಾರಸವೂ ನನಗೋಸ್ಕರ ಸಿದ್ಧಮಾಡಲ್ಪಟ್ಟವು. ಆದರೆ ಈ ಜನರ ಮೇಲೆ ಇದ್ದ ದಾಸತ್ವ ಭಾರವಾಗಿದ್ದದರಿಂದ ನಾನು ಅಧಿಪತಿಯಾದವನ ರೊಟ್ಟಿಯನ್ನು ಇದಕ್ಕೋಸ್ಕರ ಕೇಳಿದ್ದಿಲ್ಲ.ನನ್ನ ದೇವರೆ, ನನಗೆ ಮೇಲನ್ನು ಮಾಡಲು ನಾನು ಈ ಜನರಿಗೆ ಮಾಡಿದ ಎಲ್ಲವನ್ನು ಜ್ಞಾಪಕಮಾಡು. ನನ್ನ ದೇವರೆ, ನನಗೆ ಮೇಲನ್ನು ಮಾಡಲು ನಾನು ಈ ಜನರಿಗೆ ಮಾಡಿದ ಎಲ್ಲವನ್ನು ಜ್ಞಾಪಕಮಾಡು.
- 2 Timothy 4:5–8 2 ತಿಮೊಥೆಯನಿಗೆ 4:5–8ಆದರೆ ನೀನು ಎಲ್ಲಾ ವಿಷಯ ಗಳಲ್ಲಿ ಎಚ್ಚರವಾಗಿರು, ಶ್ರಮೆಗಳನ್ನು ತಾಳಿಕೋ, ಸುವಾರ್ತಿಕನ ಕೆಲಸವನ್ನು ಮಾಡು, ನಿನ್ನ ಸೇವೆಯನ್ನು ಸಂಪೂರ್ಣ ಮಾಡು. ನಾನು ಈಗ ಅರ್ಪಿತನಾಗು ವದಕ್ಕೆ ಸಿದ್ಧನಿದ್ದೇನೆ; ನಾನು ಹೊರಟು ಹೋಗಬೇಕಾದ ಸಮಯವು ಸವಿಾಪವಾಗಿದೆ. ನಾನು ಒಳ್ಳೇ ಹೋರಾಟವನ್ನು ಹೋರಾಡಿದ್ದೇನೆ, ನಾನು ನನ್ನ ಓಟ ವನ್ನು ಮುಗಿಸಿದ್ದೇನೆ, ನಾನು ನಂಬಿಕೆಯನ್ನು ಕಾಪಾಡಿ ದ್ದೇನೆ. ಇನ್ನು ಮುಂದೆ ನನಗೋಸ್ಕರ ನೀತಿಯ ಕಿರೀಟವು ಇಡಲ್ಪಟ್ಟಿದೆ; ಅದನ್ನು ನೀತಿಯುಳ್ಳ ನ್ಯಾಯಾ ಧಿಪತಿಯಾದ ಕರ್ತನು ಆ ದಿನದಲ್ಲಿ ನನಗೆ ಕೊಡು ವನು; ನನಗೆ ಮಾತ್ರವಲ್ಲದೆ ಆತನ ಬರೋಣವನ್ನು ಪ್ರೀತಿಸುವವರೆಲ್ಲರಿಗೆ ಸಹ ಕೊಡುವನು.
- 1 Corinthians 9:16–23 1 ಕೊರಿಂಥದವರಿಗೆ 9:16–23ನಾನು ಸುವಾರ್ತೆಯನ್ನು ಸಾರಿದರೂ ಹೆಚ್ಚಳ ಪಡುವದಕ್ಕೆ ನನಗೇನೂ ಇಲ್ಲ; ಸಾರಲೇ ಬೇಕೆಂಬ ನಿರ್ಬಂಧ ನನ್ನ ಮೇಲೆ ಇದೆ. ಹೌದು, ನಾನು ಸುವಾರ್ತೆಯನ್ನು ಸಾರದಿದ್ದರೆ ನನಗೆ ಅಯ್ಯೋ! ನಾನು ಇದನ್ನು ಇಷ್ಟಪೂರ್ವಕವಾಗಿ ಮಾಡಿದರೆ ನನಗೆ ಬಹುಮಾನವುಂಟು. ನನ್ನ ಇಷ್ಟಕ್ಕೆ ವಿರೋಧ ವಾಗಿ ಮಾಡಿದರೆ ಸುವಾರ್ತೆಯ ವಿಷಯವಾದ ದೈವನೇಮವು ನನ್ನ ವಶಕ್ಕೆ ಕೊಡಲ್ಪಟ್ಟಿದೆ. ಹಾಗಾ ದರೆ ನನ್ನ ಬಹುಮಾನ ಯಾವದು? ನಿಶ್ಚಯವಾಗಿ ನಾನು ಸುವಾರ್ತೆಯನ್ನು ಸಾರುವಾಗ ಸುವಾರ್ತೆ ಯಲ್ಲಿರುವ ನನ್ನ ಅಧಿಕಾರವನ್ನು ನಾನು ದುರುಪ ಯೋಗ ಮಾಡದಂತೆ ಕ್ರಿಸ್ತನ ಸುವಾರ್ತೆಯನ್ನು ಉಚಿತವಾಗಿ ಸಾರುವದೇ ನನ್ನ ಬಹುಮಾನ. ಎಲ್ಲರಿಂದಲೂ ನಾನು ಸ್ವತಂತ್ರನಾಗಿದ್ದರೂ ಇನ್ನೂ ಹೆಚ್ಚು ಜನರನ್ನು ಸಂಪಾದಿಸಿಕೊಳ್ಳುವದಕ್ಕೋಸ್ಕರ ನನ್ನನ್ನು ಎಲ್ಲರಿಗೂ ಸೇವಕನನ್ನಾಗಿ ಮಾಡಿಕೊಂಡಿದ್ದೇನೆ. ಇದಲ್ಲದೆ ಯೆಹೂದ್ಯರನ್ನು ಸಂಪಾದಿಸಿಕೊಳ್ಳುವಂತೆ ಯೆಹೂದ್ಯರಿಗೆ ನಾನು ಯೆಹೂದ್ಯನಾಗಿಯೂ ನ್ಯಾಯ ಪ್ರಮಾಣದ ಅಧೀನದಲ್ಲಿರುವವರನ್ನು ಸಂಪಾದಿಸಿ ಕೊಳ್ಳುವಂತೆ ನ್ಯಾಯಪ್ರಮಾಣಕ್ಕೆ ಅಧೀನರಾಗಿರು ವವರಿಗೆ ನ್ಯಾಯಪ್ರಮಾಣಕ್ಕೆ ಅಧೀನನಾಗಿಯೂ (ನಾನು ದೇವರ ನ್ಯಾಯಪ್ರಮಾಣವಿಲ್ಲದವ ನಂತಲ್ಲ, ಕ್ರಿಸ್ತನ ನ್ಯಾಯಪ್ರಮಾಣಕ್ಕೆ ಒಳಗಾದವನೇ;) ನ್ಯಾಯಪ್ರಮಾಣವಿಲ್ಲದವರನ್ನು ಸಂಪಾದಿಸಿಕೊಳ್ಳು ವದಕ್ಕಾಗಿ ಅವರಿಗೆ ನ್ಯಾಯಪ್ರಮಾಣವಿಲ್ಲದವ ನಂತೆಯೂ ಆದೆನು. ಬಲವಿಲ್ಲದವರನ್ನು ಸಂಪಾದಿಸು ವದಕ್ಕೆ ಅವರಿಗೆ ಬಲವಿಲ್ಲದವನಂತಾದೆನು; ಯಾವ ವಿಧದಲ್ಲಿಯಾದರೂ ಕೆಲವರನ್ನು ರಕ್ಷಿಸಬೇಕೆಂದು ಯಾರಾರಿಗೆ ಎಂಥೆಂಥವನಾಗಬೇಕೋ ಅಂಥವನಾಗಿದ್ದೇನೆ. ನಾನು ನಿಮ್ಮೊಂದಿಗೆ ಸುವಾರ್ತೆಯ ಫಲದಲ್ಲಿ ಪಾಲುಗಾರನಾಗಬೇಕೆಂದು ಸುವಾರ್ತೆ ಗೋಸ್ಕರವೇ ಇದನ್ನು ಮಾಡುತ್ತೇನೆ.
- Isaiah 23:18 ಯೆಶಾಯ 23:18(ಆದರೆ) ಅವಳ ವ್ಯಾಪಾರವೂ ಆದಾಯವೂ ಬೊಕ್ಕಸದಲ್ಲಿ ಹಾಕದೆ ಇಲ್ಲವೆ ಇಟ್ಟುಕೊಳ್ಳದೆ ಕರ್ತನಿಗೆ ಪರಿಶುದ್ಧವಾಗು ವದು. ಅವಳ ವ್ಯಾಪಾರವು ಕರ್ತನ ಸನ್ನಿಧಾನದಲ್ಲಿ ವಾಸಿಸುವ ವರೆಗೆ ಬೇಕಾದಷ್ಟು ಅನ್ನವನ್ನೂ ಶ್ರೇಷ್ಠವಾದ ಉಡುಪನ್ನೂ ಒದಗಿಸಲು ಅನು ಕೂಲವಾಗುವದು.
- Acts 13:36 ಅಪೊಸ್ತಲರ ಕೃತ್ಯಗಳು 13:36ದಾವೀದನು ದೇವರ ಚಿತ್ತಕ್ಕನು ಸಾರವಾಗಿ ತನ್ನ ಸ್ವಂತ ಸಂತತಿಯವರಿಗೆ ಸೇವೆ ಮಾಡಿದ ನಂತರ ಅವನು ನಿದ್ರೆಹೋಗಿ ತನ್ನ ಪಿತೃಗಳ ಬಳಿಯಲಿ ಸೇರಿ ಕೊಳೆಯುವ ಅವಸ್ಥೆಯನ್ನು ನೋಡಿದನು.