Matthew · chapter 25 · verse 20
Matthew 25:20 in Kannada
ಆಗ ಐದು ತಲಾಂತುಗಳನ್ನು ಹೊಂದಿದ್ದವನು ಬಂದು ಬೇರೆ ಐದು ತಲಾಂತುಗಳನ್ನು ತಂದು--ಒಡೆಯನೇ, ನೀನು ನನಗೆ ಐದು ತಲಾಂತುಗಳನ್ನು ಒಪ್ಪಿಸಿದಿ; ಇಗೋ, ಅವುಗಳಲ್ಲದೆ ಬೇರೆ ಐದು ತಲಾಂತುಗಳನ್ನು ನಾನು ಸಂಪಾದಿಸಿದ್ದೇನೆ ಅಂದನು.
Aaga aidu talaantugalannu hondiddavanu bandu bere aidu talaantugalannu tandu--odeyane, neenu nanage aidu talaantugalannu oppisidi; igo, avugalallade bere aidu talaantugalannu naanu sampaadisiddene andanu.
Matthew 25:20 in English
- King James Version (KJV)
- And so he that had received five talents came and brought other five talents, saying, Lord, thou deliveredst unto me five talents: behold, I have gained beside them five talents more.
- World English Bible (WEB)
- He who received the five talents came and brought another five talents, saying, ‘Lord, you delivered to me five talents. Behold, I have gained another five talents in addition to them.’
- American Standard Version (ASV)
- And he that received the five talents came and brought other five talents, saying, Lord, thou deliveredst unto me five talents: lo, I have gained other five talents.
- Bible in Basic English (BBE)
- And he who had the five talents came with his other five talents, saying, Lord, you gave into my care five talents: see, I have got five more.
- Darby Translation (DBY)
- And he that had received the five talents came to [him] and brought five other talents, saying, [My] lord, thou deliveredst me five talents; behold, I have gained five other talents besides them.
- Webster's Bible (WBS)
- And he that had received five talents, came and brought other five talents, saying, Lord, thou deliveredst to me five talents: behold, I have gained besides them five talents more.
- Young's Literal Translation (YLT)
- and he who did receive the five talents having come, brought other five talents, saying, 'Sir, five talents thou didst deliver to me; lo, other five talents did I gain besides them.
Read in context
- 18ಆದರೆ ಒಂದು ತಲಾಂತು ಹೊಂದಿದವನು ಹೋಗಿ ಭೂಮಿಯನ್ನು ಅಗೆದು ತನ್ನ ಯಜಮಾನನ ಹಣವನ್ನು ಬಚ್ಚಿಟ್ಟನು.
- 19ಬಹುಕಾಲವಾದ ಮೇಲೆ ಆ ಸೇವಕರ ಯಜ ಮಾನನು ಬಂದು ಅವರಿಂದ ಲೆಕ್ಕಾ ತೆಗೆದುಕೊಂಡನು.
- 20ಆಗ ಐದು ತಲಾಂತುಗಳನ್ನು ಹೊಂದಿದ್ದವನು ಬಂದು ಬೇರೆ ಐದು ತಲಾಂತುಗಳನ್ನು ತಂದು--ಒಡೆಯನೇ, ನೀನು ನನಗೆ ಐದು ತಲಾಂತುಗಳನ್ನು ಒಪ್ಪಿಸಿದಿ; ಇಗೋ, ಅವುಗಳಲ್ಲದೆ ಬೇರೆ ಐದು ತಲಾಂತುಗಳನ್ನು ನಾನು ಸಂಪಾದಿಸಿದ್ದೇನೆ ಅಂದನು.
- 21ಆಗ ಅವನ ಯಜಮಾನನು ಅವನಿಗೆ--ನಂಬಿಗಸ್ತನಾದ ಒಳ್ಳೇ ಸೇವಕನೇ, ಒಳ್ಳೇದನ್ನು ಮಾಡಿದ್ದೀ. ಸ್ವಲ್ಪವಾದವುಗಳಲ್ಲಿ ನೀನು ನಂಬಿಗಸ್ತ ನಾದದ್ದರಿಂದ ನಾನು ನಿನ್ನನ್ನು ಬಹಳವಾದವುಗಳ ಮೇಲೆ ಅಧಿಕಾರಿಯನ್ನಾಗಿ ನೇಮಿಸುವೆನು; ನೀನು ನಿನ್ನ ಯಜಮಾನನ ಸಂತೋಷದಲ್ಲಿ ಪ್ರವೇಶಿಸು ಅಂದನು.
- 22ಎರಡು ತಲಾಂತುಗಳನ್ನು ಹೊಂದಿದ್ದವನು ಸಹ ಬಂದು--ಒಡೆಯನೇ, ನೀನು ನನಗೆ ಎರಡು ತಲಾಂತುಗಳನ್ನು ಒಪ್ಪಿಸಿದಿ; ಇಗೋ, ಅವುಗಳಲ್ಲದೆ ಇನ್ನೂ ಎರಡು ತಲಾಂತುಗಳನ್ನು ನಾನು ಸಂಪಾದಿಸಿ ದ್ದೇನೆ ಅಂದನು.
Cross references
- Acts 20:24 ಅಪೊಸ್ತಲರ ಕೃತ್ಯಗಳು 20:24ಆದಾಗ್ಯೂ ಇವುಗಳಲ್ಲಿ ಯಾವದೊಂದು ನನ್ನನ್ನು ಕದಲಿಸುವದಿಲ್ಲ; ಇಲ್ಲವೆ ನನ್ನ ಪ್ರಾಣವು ನನಗೆ ಪ್ರಿಯವಾದದ್ದೆಂದು ನಾನು ಎಣಿಸುವದಿಲ್ಲ; ಹೀಗೆ ದೇವರ ಕೃಪೆಯ ಸುವಾರ್ತೆಯನ್ನು ಸಾಕ್ಷಿಕರಿಸು ವದಕ್ಕಾಗಿ ನಾನು ಕರ್ತನಾದ ಯೇಸುವಿನಿಂದ ಹೊಂದಿದ ಸೇವೆಯೆಂಬ ಓಟವನ್ನು ಸಂತೋಷದಿಂದ ಕೊನೆಗಾಣಿಸುವ
- 1 Corinthians 15:10 1 ಕೊರಿಂಥದವರಿಗೆ 15:10ಆದರೆ ನಾನು ಎಂಥವನಾಗಿದ್ದೇನೋ ದೇವರ ಕೃಪೆಯಿಂದಲೇ ಅಂಥವನಾಗಿದ್ದೇನೆ; ನನಗುಂಟಾದ ಆತನ ಕೃಪೆಯು ನಿಷ್ಪಲವಾಗಲಿಲ್ಲ; ನಾನು ಅವರೆಲ್ಲರಿ ಗಿಂತಲೂ ಎಷ್ಟೋ ಹೆಚ್ಚಾಗಿ ಪ್ರಯಾಸಪಟ್ಟೆನು; ಆದರೆ ಪ್ರಯಾಸಪಟ್ಟವನು ನಾನಲ್ಲ, ನನ್ನೊಂದಿಗಿದ್ದ ದೇವರ ಕೃಪೆಯೇ.
- Colossians 1:29 ಕೊಲೊಸ್ಸೆಯವರಿಗೆ 1:29ನನ್ನಲ್ಲಿ ಬಲದಿಂದ ಕಾರ್ಯ ಮಾಡುವಾತನ ಕೆಲಸಕ್ಕನು ಸಾರವಾಗಿ ನಾನು ಸಹ ಅದಕ್ಕಾಗಿ ಪ್ರಯಾಸಪಡುತ್ತಾ ಹೋರಾಡುತ್ತೇನೆ.
- James 2:18 ಯಾಕೋಬನು 2:18ಹೌದು, ಒಬ್ಬ ಮನುಷ್ಯನು--ನಿನಗೆ ನಂಬಿಕೆಯುಂಟು, ನನಗೆ ಕ್ರಿಯೆಗಳುಂಟು; ನೀನು ಕ್ರಿಯೆಗಳಿಲ್ಲದೆ ನಿನ್ನ ನಂಬಿಕೆ ಯನ್ನು ನನಗೆ ತೋರಿಸು; ನಾನು ನನ್ನ ಕ್ರಿಯೆಗಳ ಮುಖಾಂತರ ನನ್ನ ನಂಬಿಕೆಯನ್ನು ನಿನಗೆ ತೋರಿಸುತ್ತೇನೆ ಎಂದು ಹೇಳಬಹುದು.
- Luke 19:16–17 ಲೂಕನು 19:16–17ಆಗ ಮೊದಲನೆಯವನು ಬಂದು--ಒಡೆಯನೇ, ನಿನ್ನ ಮೊಹರಿನಿಂದ ಹತ್ತು ಮೊಹರಿಗಳನ್ನು ಸಂಪಾದಿಸಿದ್ದೇನೆ ಅಂದನು. ಅದಕ್ಕೆ ಅವನು ಅವ ನಿಗೆ--ಒಳ್ಳೇದು. ನೀನು ಉತ್ತಮ ಆಳು; ಯಾಕಂದರೆ ನೀನು ಅತಿ ಸ್ವಲ್ಪದರಲ್ಲಿ ನಂಬಿಗಸ್ತನಾಗಿದ್ದೀ ಹತ್ತು ಪಟ್ಟಣಗಳ ಮೇಲೆ ನೀನು ಅಧಿಕಾರಿಯಾಗಿರು ಅಂದನು.
- 2 Timothy 4:1–8 2 ತಿಮೊಥೆಯನಿಗೆ 4:1–8ಆದದರಿಂದ ದೇವರ ಮುಂದೆಯೂ ಆತನ ಬರೋಣದಲ್ಲಿ ಮತ್ತು ಆತನ ರಾಜ್ಯ ದಲ್ಲಿ ಜೀವಿಸುವವರಿಗೂ ಸತ್ತವರಿಗೂ ನ್ಯಾಯತೀರಿಸುವ ಕರ್ತನಾದ ಯೇಸು ಕ್ರಿಸ್ತನ ಮುಂದೆಯೂ ನಾನು ನಿನಗೆ ಖಂಡಿತವಾಗಿ ಹೇಳುವದೇನಂದರೆ-- ವಾಕ್ಯವನ್ನು ಸಾರು, ಅನುಕೂಲವಾದ ಕಾಲದಲ್ಲಿಯೂ ಅನುಕೂಲವಿಲ್ಲದ ಕಾಲದಲ್ಲಿಯೂ ಅದರಲ್ಲಿ ಆಸಕ್ತ ನಾಗಿರು; ಪೂರ್ಣದೀರ್ಘಶಾಂತಿಯಿಂದಲೂ ಉಪ ದೇಶದಿಂದಲೂ ಖಂಡಿಸು, ಗದರಿಸು, ಎಚ್ಚರಿಸು. ಯಾಕಂದರೆ ಜನರು ಸ್ವಸ್ಥಬೋಧನೆಯನ್ನು ಸಹಿಸ ಲಾರದ ಕಾಲವು ಬರುತ್ತದೆ; ಅದರಲ್ಲಿ ಅವರು ತೀಟೇ ಕಿವಿಯುಳ್ಳವರಾಗಿ ತಮ್ಮ ದುರಾಶೆಗಳಿಗೆ ಅನುಕೂಲ ವಾದ ಉಪದೇಶಕರನ್ನು ಇಟ್ಟುಕೊಳ್ಳುವರು. ಅವರು ಸತ್ಯಕ್ಕೆ ಕಿವಿಗೊಡದೆ ಕಲ್ಪನಾಕಥೆಗಳನ್ನು ಕೇಳುವದಕ್ಕೆ ತಿರುಗಿಕೊಳ್ಳುವರು. ಆದರೆ ನೀನು ಎಲ್ಲಾ ವಿಷಯ ಗಳಲ್ಲಿ ಎಚ್ಚರವಾಗಿರು, ಶ್ರಮೆಗಳನ್ನು ತಾಳಿಕೋ, ಸುವಾರ್ತಿಕನ ಕೆಲಸವನ್ನು ಮಾಡು, ನಿನ್ನ ಸೇವೆಯನ್ನು ಸಂಪೂರ್ಣ ಮಾಡು. ನಾನು ಈಗ ಅರ್ಪಿತನಾಗು ವದಕ್ಕೆ ಸಿದ್ಧನಿದ್ದೇನೆ; ನಾನು ಹೊರಟು ಹೋಗಬೇಕಾದ ಸಮಯವು ಸವಿಾಪವಾಗಿದೆ. ನಾನು ಒಳ್ಳೇ ಹೋರಾಟವನ್ನು ಹೋರಾಡಿದ್ದೇನೆ, ನಾನು ನನ್ನ ಓಟ ವನ್ನು ಮುಗಿಸಿದ್ದೇನೆ, ನಾನು ನಂಬಿಕೆಯನ್ನು ಕಾಪಾಡಿ ದ್ದೇನೆ. ಇನ್ನು ಮುಂದೆ ನನಗೋಸ್ಕರ ನೀತಿಯ ಕಿರೀಟವು ಇಡಲ್ಪಟ್ಟಿದೆ; ಅದನ್ನು ನೀತಿಯುಳ್ಳ ನ್ಯಾಯಾ ಧಿಪತಿಯಾದ ಕರ್ತನು ಆ ದಿನದಲ್ಲಿ ನನಗೆ ಕೊಡು ವನು; ನನಗೆ ಮಾತ್ರವಲ್ಲದೆ ಆತನ ಬರೋಣವನ್ನು ಪ್ರೀತಿಸುವವರೆಲ್ಲರಿಗೆ ಸಹ ಕೊಡುವನು.