Matthew · chapter 25 · verse 6
Matthew 25:6 in Kannada
ಮಧ್ಯರಾತ್ರಿಯಲ್ಲಿ--ಇಗೋ, ಮದಲಿಂಗನು ಬರುತ್ತಾನೆ; ಅವನನ್ನು ಎದುರುಗೊಳ್ಳುವದಕ್ಕಾಗಿ ಹೊರಡಿರಿ ಎಂಬ ಕೂಗಾ ಯಿತು.
Madhyaraatriyalli--igo, madalinganu baruttaane; avanannu edurugolluvadakkaagi horadiri emba koogaa yitu.
Matthew 25:6 in English
- King James Version (KJV)
- And at midnight there was a cry made, Behold, the bridegroom cometh; go ye out to meet him.
- World English Bible (WEB)
- But at midnight there was a cry, ‘Behold! The bridegroom is coming! Come out to meet him!’
- American Standard Version (ASV)
- But at midnight there is a cry, Behold, the bridegroom! Come ye forth to meet him.
- Bible in Basic English (BBE)
- But in the middle of the night there is a cry, The husband comes! Go out to him.
- Darby Translation (DBY)
- But in [the] middle of [the] night there was a cry, Behold, the bridegroom; go forth to meet him.
- Webster's Bible (WBS)
- And at midnight there was a cry made, Behold, the bridegroom cometh; go ye out to meet him.
- Young's Literal Translation (YLT)
- and in the middle of the night a cry was made, Lo, the bridegroom doth come; go ye forth to meet him.
Read in context
- 4ಬುದ್ದಿವಂತೆಯರು ತಮ್ಮ ದೀಪಗಳೊ ಂದಿಗೆ ಪಾತ್ರೆಯಲ್ಲಿ ಎಣ್ಣೆಯನ್ನೂ ತಕ್ಕೊಂಡರು.
- 5ಮದಲಿಂಗನು ತಡಮಾಡಿದಾಗ ಅವರೆಲ್ಲರೂ ತೂಕಡಿಸಿ ನಿದ್ರಿಸಿದರು.
- 6ಮಧ್ಯರಾತ್ರಿಯಲ್ಲಿ--ಇಗೋ, ಮದಲಿಂಗನು ಬರುತ್ತಾನೆ; ಅವನನ್ನು ಎದುರುಗೊಳ್ಳುವದಕ್ಕಾಗಿ ಹೊರಡಿರಿ ಎಂಬ ಕೂಗಾ ಯಿತು.
- 7ಆಗ ಆ ಕನ್ಯೆಯರೆಲ್ಲರೂ ಎದ್ದು ತಮ್ಮ ದೀಪಗಳನ್ನು ಸರಿಪಡಿಸಿಕೊಂಡರು;
- 8ಬುದ್ಧಿಹೀನರು ಬುದ್ಧಿವಂತೆಯರಿಗೆ-- ನಿಮ್ಮ ಎಣ್ಣೆಯಲ್ಲಿ ನಮಗೆ ಕೊಡಿರಿ; ಯಾಕಂದರೆ ನಮ್ಮ ದೀಪಗಳು ಆರಿಹೋಗಿವೆ ಅಂದರು.
Cross references
- 2 Peter 3:10 2 ಪೇತ್ರನು 3:10ಆದರೂ ಕರ್ತನ ದಿನವು ರಾತ್ರಿಯಲ್ಲಿ ಕಳ್ಳನು ಬರುವಂತೆ ಬರುತ್ತದೆ. ಆ ದಿನದಲ್ಲಿ ಆಕಾಶಗಳು ಮಹಾಘೋಷದಿಂದ ಇಲ್ಲದೆ ಹೋಗು ವವು. ಅತಿ ಉಷ್ಣದಿಂದ ಪಂಚಭೂತಗಳು ಉರಿದು ಲಯವಾಗಿ ಹೋಗುವವು; ಭೂಮಿಯೂ ಅದರಲ್ಲಿ ರುವ ಕೆಲಸಗಳೂ ಸುಟ್ಟುಹೋಗುವವು.
- John 5:28–29 ಯೋಹಾನನು 5:28–29ಇದಕ್ಕೆ ಆಶ್ಚರ್ಯಪಡ ಬೇಡಿರಿ; ಒಂದು ಕಾಲ ಬರುತ್ತದೆ; ಆಗ ಸಮಾಧಿಗಳಲ್ಲಿ ರುವವರೆಲ್ಲರೂ ಆತನ ಧ್ವನಿಯನ್ನು ಕೇಳಿ ಹೊರಗೆ ಬರುವರು, ಒಳ್ಳೇದನ್ನು ಮಾಡಿದವರು ಜೀವದ ಪುನರುತ್ಥಾನವನ್ನೂ ಕೆಟ್ಟದ್ದನ್ನು ಮಾಡಿದವರು ತೀರ್ಪಿನ ಪುನರುತ್ಥಾನವನ್ನೂ ಹೊಂದುವರು.
- Matthew 25:1 ಮತ್ತಾಯನು 25:1ಇದಲ್ಲದೆ ಪರಲೋಕ ರಾಜ್ಯವು ತಮ್ಮ ದೀಪಗಳನ್ನು ತಕ್ಕೊಂಡು ಮದಲಿಂಗ ನನ್ನು ಎದುರುಗೊಳ್ಳುವದಕ್ಕಾಗಿ ಹೊರಟುಹೋದ ಹತ್ತುಮಂದಿ ಕನ್ಯೆಯರಿಗೆ ಹೋಲಿಕೆಯಾಗಿರುವದು.
- Matthew 24:31 ಮತ್ತಾಯನು 24:31ತರುವಾಯ ಆತನು ತನ್ನ ದೂತರನ್ನು ತುತೂರಿಯ ಮಹಾಶಬ್ದದೊಂದಿಗೆ ಕಳುಹಿಸುವನು; ಆಗ ಅವರು ಆತನಿಂದ ಆಯಲ್ಪಟ್ಟವರನ್ನು ನಾಲ್ಕು ದಿಕ್ಕುಗಳಿಂದ ಆಕಾಶದ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೂ ಒಟ್ಟುಗೂಡಿಸುವರು.
- Matthew 24:44 ಮತ್ತಾಯನು 24:44ಆದಕಾರಣ ನೀವು ಸಹ ಸಿದ್ಧವಾಗಿರ್ರಿ; ಯಾಕಂದರೆ ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ.
- Isaiah 25:9 ಯೆಶಾಯ 25:9ಆ ದಿನದಲ್ಲಿ (ಜನರು) ಹೇಳುವದೇನಂದರೆ--ಇಗೋ, ಈತನೇ ನಮ್ಮ ದೇವರು, ನಾವು ಈತನಿ ಗೋಸ್ಕರ ಕಾದಿದ್ದೇವೆ; ಈತನು ನಮ್ಮನ್ನು ರಕ್ಷಿಸುವನು. ಈತನೇ ಕರ್ತನು, ನಾವು ಈತನಿಗೋಸ್ಕರ ಕಾದಿ ದ್ದೇವೆ; ನಾವು ಈತನ ರಕ್ಷಣೆಯಲ್ಲಿ ಹರ್ಷಿಸಿ ಸಂತೋಷ ಪಡುವೆವು.
- Malachi 3:1–2 ಮಲಾಕಿಯ 3:1–2ಇಗೋ, ನನ್ನ ದೂತನನ್ನು ನಾನು ಕಳುಹಿಸುತ್ತೇನೆ; ಅವನು ನನ್ನ ಮುಂದೆ ಮಾರ್ಗವನ್ನು ಸಿದ್ಧಮಾಡುವನು; ನೀವು ಹುಡುಕುವ ಕರ್ತನು ಫಕ್ಕನೆ ತನ್ನ ಆಲಯಕ್ಕೆ ಬರುವನು; ನೀವು ಸಂತೋಷಪಡುವ ಒಡಂಬಡಿಕೆಯ ದೂತನೇ, ಇಗೋ, ಬರುತ್ತಾನೆಂದು ಸೈನ್ಯಗಳ ಕರ್ತನು ಹೇಳು ತ್ತಾನೆ. ಆದರೆ ಆತನ ಬರುವಿಕೆಯ ದಿವಸದಲ್ಲಿ ಯಾರು ಉಳಿದಾರು? ಆತನು ಪ್ರತ್ಯಕ್ಷವಾಗುವಾಗ ಯಾರು ನಿಲ್ಲುವರು? ಆತನು ಅಕ್ಕಸಾಲಿಗನ ಬೆಂಕಿಯ ಹಾಗೆಯೂ ಅಗಸನ ಚೌಳಿನ ಹಾಗೆಯೂ ಇದ್ದಾನೆ.
- Mark 13:33–37 ಮಾರ್ಕನು 13:33–37ನೀವು ಎಚ್ಚರವಾಗಿರ್ರಿ, ಜಾಗರೂಕರಾಗಿರ್ರಿ, ಪ್ರಾರ್ಥಿಸಿರಿ. ಯಾಕಂದರೆ ಸಮಯವು ಯಾವಾಗ ಎಂದು ನಿಮಗೆ ತಿಳಿಯದು. ಮನುಷ್ಯಕುಮಾರನು ದೂರದ ಪ್ರಯಾಣವನ್ನು ಕೈಕೊಂಡು ತನ್ನ ಮನೆಯನ್ನು ಬಿಟ್ಟು ತನ್ನ ಸೇವಕರಿಗೆ ಅಧಿಕಾರವನ್ನು ಮತ್ತು ಪ್ರತಿಯೊ ಬ್ಬನಿಗೆ ಅವನವನ ಕೆಲಸವನ್ನು ಕೊಟ್ಟು ಬಾಗಲು ಕಾಯು ವವನಿಗೆ ಜಾಗರೂಕನಾಗಿರಬೇಕೆಂದು ಆಜ್ಞಾಪಿಸಿದವನ ಹಾಗೆ ಇದ್ದಾನೆ. ಆದದರಿಂದ ಜಾಗರೂಕರಾಗಿರ್ರಿ. ಯಾಕಂದರೆ ಮನೇ ಯಜಮಾನನು ಸಂಜೆಯಲ್ಲಿಯೋ ಸರಿಹೊತ್ತಿನಲ್ಲಿಯೋ ಇಲ್ಲವೆ ಹುಂಜ ಕೂಗುವಾ ಗಲೋ ಇಲ್ಲವೆ ಮುಂಜಾನೆಯಲ್ಲಿಯೋ ಯಾವಾಗ ಬರುತ್ತಾನೋ ನಿಮಗೆ ಗೊತ್ತಿಲ್ಲ. ಆತನು ಫಕ್ಕನೆ ಬಂದು ನೀವು ನಿದ್ರೆ ಮಾಡುವದನ್ನು ಕಂಡಾನು.ನಿಮಗೆ ಹೇಳುವದನ್ನು ನಾನು ಎಲ್ಲರಿಗೂ ಹೇಳು ತ್ತೇನೆ--ಎಚ್ಚರವಾಗಿರ್ರಿ ಅಂದನು. ನಿಮಗೆ ಹೇಳುವದನ್ನು ನಾನು ಎಲ್ಲರಿಗೂ ಹೇಳು ತ್ತೇನೆ--ಎಚ್ಚರವಾಗಿರ್ರಿ ಅಂದನು.
- Revelation 16:15 ಪ್ರಕಟನೆ 16:15ಇಗೋ, ಕಳ್ಳನು ಬರುವಂತೆ ನಾನು ಬರುತ್ತೇನೆ. ನಿರ್ವಾಣನಾಗಿ ತಿರುಗಾಡುವಾಗ ಜನರು ತನ್ನ ನಾಚಿಕೆಯನ್ನು ನೋಡಿಯಾರೆಂದು ಎಚ್ಚರ ವಾಗಿದ್ದು ತನ್ನ ವಸ್ತ್ರಗಳನ್ನು ಕಾಪಾಡಿಕೊಳ್ಳುವವನು ಧನ್ಯನು.
- Luke 12:38–40 ಲೂಕನು 12:38–40ಅವನು ಎರಡನೇ ಜಾವದಲ್ಲಿ ಇಲ್ಲವೇ ಮೂರನೇ ಜಾವದಲ್ಲಿ ಬಂದು ಅವರನ್ನು ಹಾಗೆಯೇ ಕಂಡರೆ ಆ ಸೇವಕರು ಧನ್ಯರು. ಕಳ್ಳನು ಯಾವಗಳಿಗೆಯಲ್ಲಿ ಬರುವ ನೆಂಬದು ಮನೇ ಯಜಮಾನನಿಗೆ ತಿಳಿದಿದ್ದರೆ ಅವನು ಎಚ್ಚರವಾಗಿದ್ದು ತನ್ನ ಮನೆಯನ್ನು ಕನ್ನಾಕೊರೆಯ ಗೊಡಿಸುತ್ತಿರಲಿಲ್ಲವೆಂಬದನ್ನು ತಿಳುಕೊಳ್ಳಿರಿ. ಆದ ಕಾರಣ ನೀವು ಸಹ ಸಿದ್ಧವಾಗಿರ್ರಿ; ಯಾಕಂದರೆ ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ ಎಂದು ಹೇಳಿದನು.
- Psalm 98:9 ಕೀರ್ತನೆಗಳು 98:9ಆತನು ಭೂಮಿಗೆ ನ್ಯಾಯ ತೀರಿಸಲು ಬರುತ್ತಾನೆ. ಲೋಕಕ್ಕೆ ನೀತಿಯಿಂದಲೂ ಜನಗಳಿಗೆ ನ್ಯಾಯದಲ್ಲಿಯೂ ತೀರ್ಪು ಕೊಡುವನು.
- 1 Thessalonians 4:16 1 ಥೆಸಲೊನೀಕದವರಿಗೆ 4:16ಕರ್ತನು ತಾನೇ ಆಜ್ಞಾಘೋಷದೊಡನೆಯೂ ಪ್ರಧಾನ ದೂತನ ಶಬ್ದದೊಡನೆಯೂ ದೇವರ ತುತೂರಿಯೊಡನೆಯೂ ಆಕಾಶದಿಂದ ಇಳಿದು ಬರುವನು; ಆಗ ಕ್ರಿಸ್ತನಲ್ಲಿರುವ ಸತ್ತವರು ಮೊದಲು ಎದ್ದು ಬರುವರು;