Matthew · chapter 27 · verse 12
Matthew 27:12 in Kannada
ಆಗ ಪ್ರಧಾನ ಯಾಜಕರೂ ಹಿರಿಯರೂ ಆತನ ಮೇಲೆ ದೂರು ಹೇಳುತ್ತಿರುವಾಗ ಆತನು ಏನು ಉತ್ತರ ಕೊಡಲಿಲ್ಲ.
Aaga pradhaana yaajakaroo hiriyaroo aatana mele dooru heluttiruvaaga aatanu enu uttara kodalilla.
Matthew 27:12 in English
- King James Version (KJV)
- And when he was accused of the chief priests and elders, he answered nothing.
- World English Bible (WEB)
- When he was accused by the chief priests and elders, he answered nothing.
- American Standard Version (ASV)
- And when he was accused by the chief priests and elders, he answered nothing.
- Bible in Basic English (BBE)
- But when the chief priests and those in authority made statements against him, he gave no answer.
- Darby Translation (DBY)
- And when he was accused of the chief priests and the elders, he answered nothing.
- Webster's Bible (WBS)
- And when he was accused by the chief priests and elders, he answered nothing.
- Young's Literal Translation (YLT)
- And in his being accused by the chief priests and the elders, he did not answer any thing,
Read in context
- 10ಕರ್ತನು ನನಗಾಗಿ ನೇಮಿಸಿದ ಹಾಗೆ ಅವುಗಳನ್ನು ಕುಂಬಾರನ ಹೊಲಕ್ಕಾಗಿ ಕೊಟ್ಟರು ಎಂಬದು.
- 11ಯೇಸು ಅಧಿಪತಿಯ ಮುಂದೆ ನಿಂತಿದ್ದನು; ಆಗ ಆ ಅಧಿಪತಿಯು ಆತನಿಗೆ--ನೀನು ಯೆಹೂದ್ಯರ ಅರಸನೋ ಎಂದು ಕೇಳಿದನು. ಅದಕ್ಕೆ ಯೇಸು ಅವನಿಗೆ--ನೀನೇ ಹೇಳುತ್ತೀ ಅಂದನು.
- 12ಆಗ ಪ್ರಧಾನ ಯಾಜಕರೂ ಹಿರಿಯರೂ ಆತನ ಮೇಲೆ ದೂರು ಹೇಳುತ್ತಿರುವಾಗ ಆತನು ಏನು ಉತ್ತರ ಕೊಡಲಿಲ್ಲ.
- 13ಆಗ ಪಿಲಾತನು ಆತನಿಗೆ--ನಿನಗೆ ವಿರೋಧವಾಗಿ ಇವರು ಇಷ್ಟು ದೂರು ಹೇಳುವದನ್ನು ನೀನು ಕೇಳುವದಿಲ್ಲವೋ ಅಂದನು.
- 14ಆತನು ಒಂದು ಮಾತಿಗಾದರೂ ಅವನಿಗೆ ಉತ್ತರಕೊಡದೆ ಇದ್ದದರಿಂದ ಅಧಿಪತಿಯು ಅತ್ಯಾಶ್ಚರ್ಯಪಟ್ಟನು.
Cross references
- Matthew 26:63 ಮತ್ತಾಯನು 26:63ಆದರೆ ಯೇಸು ಸುಮ್ಮನಿದ್ದನು. ಆಗ ಮಹಾಯಾಜಕನು ಪ್ರತ್ಯುತ್ತರವಾಗಿ ಆತನಿಗೆ--ನೀನು ದೇವಕುಮಾರನಾದ ಕ್ರಿಸ್ತನಾದರೆ ಅದನ್ನು ನಮಗೆ ಹೇಳಬೇಕೆಂದು ಜೀವಸ್ವರೂಪನಾದ ದೇವರ ಆಣೆಯನ್ನು ನಿನಗೆ ಇಡುತ್ತೇನೆ ಅಂದನು.
- Isaiah 53:7 ಯೆಶಾಯ 53:7ಆತನು ಪೀಡಿಸಲ್ಪಟ್ಟವನೂ ಮತ್ತು ಹಿಂಸಿಸಲ್ಪಟ್ಟವನೂ ಆಗಿದ್ದನು. ಆದರೂ ಆತನು ತನ್ನ ಬಾಯನ್ನು ತೆರೆಯಲೇ ಇಲ್ಲ; ವಧಿಸುವದಕ್ಕೆ ತರಲ್ಪ ಡುವ ಕುರಿಮರಿಯಂತೆಯೂ ಉಣ್ಣೆ ಕತ್ತರಿಸುವವರ ಮುಂದೆ ಇದ್ದ ಕುರಿಯ ಹಾಗೆಯೂ ಆತನು ಮೌನ ವಾಗಿದ್ದನು. ಹೀಗೆ ಆತನು ತನ್ನ ಬಾಯನ್ನು ತೆರೆಯಲೇ ಇಲ್ಲ.
- 1 Peter 2:23 1 ಪೇತ್ರನು 2:23ಬೈಯುವವರನ್ನು ಆತನು ಪ್ರತಿಯಾಗಿ ಬೈಯಲಿಲ್ಲ; ಆತನು ಬಾಧೆಯನ್ನನು ಭವಿಸಿದಾಗ ಯಾರನ್ನೂ ಬೆದರಿಸದೆ ನ್ಯಾಯವಾಗಿ ತೀರ್ಪುಮಾಡುವಾತನಿಗೆ ತನ್ನನ್ನು ಒಪ್ಪಿಸಿದನು.
- Acts 8:32 ಅಪೊಸ್ತಲರ ಕೃತ್ಯಗಳು 8:32ಅವನು ಓದುತ್ತಿದ್ದ ಬರಹದ ಭಾಗವು ಯಾವ ದಂದರೆ--ವಧ್ಯಸ್ಥಾನಕ್ಕೆ ಒಯ್ಯಲ್ಪಡುವ ಕುರಿಯಂತೆ ಆತನು ಒಯ್ಯಲ್ಪಟ್ಟನು; ಕುರಿಮರಿಯು ಉಣ್ಣೆ ಕತ್ತರಿಸು ವವನ ಮುಂದೆ ಮೌನವಾಗಿರುವಂತೆ ಆತನು ತನ್ನ ಬಾಯಿತೆರೆಯಲೇ ಇಲ್ಲ.
- Mark 15:3–5 ಮಾರ್ಕನು 15:3–5ಇದ ಲ್ಲದೆ ಪ್ರಧಾನಯಾಜಕರು ಆತನ ಮೇಲೆ ಅನೇಕ ದೂರುಗಳನ್ನು ಹೇಳಿದರು; ಆದರೆ ಆತನು ಏನೂ ಉತ್ತರ ಕೊಡಲಿಲ್ಲ. ಆಗ ಪಿಲಾತನು ತಿರಿಗಿ ಆತ ನಿಗೆ--ನೀನು ಏನೂ ಉತ್ತರಕೊಡುವದಿಲ್ಲವೋ? ಇವರು ನಿನಗೆ ವಿರೋಧವಾಗಿ ಎಷ್ಟು ದೂರುಗಳನ್ನು ಹೇಳುತ್ತಾರೆ ನೋಡು ಎಂದು ಕೇಳಿದನು. ಆದರೂ ಯೇಸು ಉತ್ತರಕೊಡದೆ ಇರಲಾಗಿ ಪಿಲಾತನು ಆಶ್ಚರ್ಯಪಟ್ಟನು.
- John 19:9–11 ಯೋಹಾನನು 19:9–11ತಿರಿಗಿ ನ್ಯಾಯಾಲಯ ದೊಳಗೆ ಹೋಗಿ ಯೇಸುವಿಗೆ--ನೀನು ಎಲ್ಲಿಂದ ಬಂದವನು ಎಂದು ಆತನನ್ನು ಕೇಳಿದನು. ಆದರೆ ಯೇಸು ಅವನಿಗೆ ಉತ್ತರಕೊಡಲಿಲ್ಲ. ಆಗ ಪಿಲಾತನು ಆತನಿಗೆ--ನೀನು ನನ್ನ ಸಂಗಡ ಮಾತ ನಾಡುವದಿಲ್ಲವೋ? ನಾನು ನಿನ್ನನ್ನು ಶಿಲುಬೆಗೆ ಹಾಕಿಸುವದಕ್ಕೂ ನಿನ್ನನ್ನು ಬಿಡಿಸುವದಕ್ಕೂ ನನಗೆ ಅಧಿಕಾರವು ಉಂಟೆಂದು ನಿನಗೆ ತಿಳಿಯುವದಿಲ್ಲವೋ ಎಂದು ಕೇಳಿದನು. ಅದಕ್ಕೆ ಯೇಸು--ಮೇಲಿನಿಂದ ನಿನಗೆ ಕೊಡಲ್ಪಡದಿದ್ದರೆ ನನ್ನ ಮೇಲೆ ನಿನಗೆ ಯಾವ ಅಧಿಕಾರವೂ ಇರುತ್ತಿರಲಿಲ್ಲ. ಆದಕಾರಣ ನನ್ನನ್ನು ನಿನಗೆ ಒಪ್ಪಿಸಿದವನಿಗೆ ಹೆಚ್ಚಾದ ಪಾಪ ಉಂಟು ಎಂದು ಉತ್ತರ ಕೊಟ್ಟನು.
- Matthew 27:14 ಮತ್ತಾಯನು 27:14ಆತನು ಒಂದು ಮಾತಿಗಾದರೂ ಅವನಿಗೆ ಉತ್ತರಕೊಡದೆ ಇದ್ದದರಿಂದ ಅಧಿಪತಿಯು ಅತ್ಯಾಶ್ಚರ್ಯಪಟ್ಟನು.
- Psalm 38:13–14 ಕೀರ್ತನೆಗಳು 38:13–14ಆದರೆ ನಾನು ಕಿವುಡನ ಹಾಗೆ ಕೇಳಿಸಿಕೊಳ್ಳಲಿಲ್ಲ; ತನ್ನ ಬಾಯನ್ನು ತೆರೆಯದ ಮೂಕನ ಹಾಗೆ ನಾನಿದ್ದೆನು. ನಾನು ಕಿವಿ ಕೇಳಿಸದವನಂತೆಯೂ ಪ್ರತ್ತ್ಯುತ್ತರ ಕೊಡಲಾರದವನಂತೆಯೂ ಆದೆನು.