Matthew · chapter 27 · verse 30
Matthew 27:30 in Kannada
ಅವರು ಆತನ ಮೇಲೆ ಉಗುಳಿ ಆ ಬೆತ್ತವನ್ನು ತಕ್ಕೊಂಡು ಆತನ ತಲೆಯ ಮೇಲೆ ಹೊಡೆದರು.
Avaru aatana mele uguli aa bettavannu takkondu aatana taleya mele hodedaru.
Matthew 27:30 in English
- King James Version (KJV)
- And they spit upon him, and took the reed, and smote him on the head.
- World English Bible (WEB)
- They spat on him, and took the reed and struck him on the head.
- American Standard Version (ASV)
- And they spat upon him, and took the reed and smote him on the head.
- Bible in Basic English (BBE)
- And they put shame on him, and gave him blows on the head with the rod.
- Darby Translation (DBY)
- And having spit upon him, they took the reed and beat [him] on his head.
- Webster's Bible (WBS)
- And they spit upon him, and took the reed, and struck him on the head.
- Young's Literal Translation (YLT)
- And having spit on him, they took the reed, and were smiting on his head;
Read in context
- 28ಮತ್ತು ಅವರು ಆತನ ಬಟ್ಟೆಗಳನ್ನು ತೆಗೆದು ರಕ್ತವರ್ಣದ ನಿಲುವಂಗಿಯನ್ನು ಆತನಿಗೆ ತೊಡಿಸಿದರು.
- 29ತರುವಾಯ ಅವರು ಒಂದು ಮುಳ್ಳಿನ ಕಿರೀಟವನ್ನು ಹೆಣೆದು ಅದನ್ನು ಆತನ ತಲೆಯ ಮೇಲಿಟ್ಟು ಬಲಗೈಯಲ್ಲಿ ಒಂದು ಬೆತ್ತವನ್ನು ಕೊಟ್ಟು ಆತನ ಮುಂದೆ ಮೊಣಕಾಲೂರಿ--ಯೆಹೂದ್ಯರ ಅರಸನೇ, ವಂದನೆ ಎಂದು ಹೇಳಿ ಆತನನ್ನು ಹಾಸ್ಯಮಾಡಿದರು.
- 30ಅವರು ಆತನ ಮೇಲೆ ಉಗುಳಿ ಆ ಬೆತ್ತವನ್ನು ತಕ್ಕೊಂಡು ಆತನ ತಲೆಯ ಮೇಲೆ ಹೊಡೆದರು.
- 31ಅವರು ಆತನಿಗೆ ಹಾಸ್ಯಮಾಡಿದ ಮೇಲೆ ಆ ನಿಲುವಂಗಿಯನ್ನು ಆತ ನಿಂದ ತೆಗೆದು ಆತನ ಸ್ವಂತವಸ್ತ್ರವನ್ನು ಹೊದಿಸಿ ಆತನನ್ನು ಶಿಲುಬೆಗೆ ಹಾಕುವದಕ್ಕಾಗಿ ತಕ್ಕೊಂಡು ಹೋದರು.
- 32ಅವರು ಹೊರಗೆ ಬರುತ್ತಿರುವಾಗ ಕುರೇನ್ಯನಾದ ಸೀಮೋನನೆಂಬ ಮನುಷ್ಯನನ್ನು ಕಂಡು ಆತನ ಶಿಲುಬೆಯನ್ನು ಹೊರುವಂತೆ ಅವನನ್ನು ಬಲವಂತ ಮಾಡಿದರು.
Cross references
- Isaiah 50:6 ಯೆಶಾಯ 50:6ನಾನು ಹೊಡೆಯುವವರಿಗೆ ಬೆನ್ನನ್ನು ಮತ್ತು ಕೂದಲು ಕೀಳುವವರಿಗೆ ನನ್ನ ಕೆನ್ನೆಯನ್ನು ಕೊಟ್ಟೆನು; ನನ್ನ ಮುಖವನ್ನು ನಿಂದೆಗೂ ಉಗುಳುವಿಕೆಗೂ ಮರೆ ಮಾಡಲಿಲ್ಲ.
- Matthew 26:67 ಮತ್ತಾಯನು 26:67ಆಮೇಲೆ ಅವರು ಆತನ ಮುಖದ ಮೇಲೆ ಉಗುಳಿ ಆತನನ್ನು ಗುದ್ದಿದರು; ಬೇರೆ ಕೆಲವರು ಆತನನ್ನು ಹೊಡೆದರು.
- Mark 15:19 ಮಾರ್ಕನು 15:19ಅವರು ಬೆತ್ತದಿಂದ ಆತನ ತಲೆಯ ಮೇಲೆ ಹೊಡೆದು ಆತನ ಮೇಲೆ ಉಗುಳಿ ತಮ್ಮ ಮೊಣಕಾಲೂರಿ ಆತನಿಗೆ ನಮಸ್ಕರಿಸಿದರು.
- Isaiah 53:7 ಯೆಶಾಯ 53:7ಆತನು ಪೀಡಿಸಲ್ಪಟ್ಟವನೂ ಮತ್ತು ಹಿಂಸಿಸಲ್ಪಟ್ಟವನೂ ಆಗಿದ್ದನು. ಆದರೂ ಆತನು ತನ್ನ ಬಾಯನ್ನು ತೆರೆಯಲೇ ಇಲ್ಲ; ವಧಿಸುವದಕ್ಕೆ ತರಲ್ಪ ಡುವ ಕುರಿಮರಿಯಂತೆಯೂ ಉಣ್ಣೆ ಕತ್ತರಿಸುವವರ ಮುಂದೆ ಇದ್ದ ಕುರಿಯ ಹಾಗೆಯೂ ಆತನು ಮೌನ ವಾಗಿದ್ದನು. ಹೀಗೆ ಆತನು ತನ್ನ ಬಾಯನ್ನು ತೆರೆಯಲೇ ಇಲ್ಲ.
- Isaiah 53:3 ಯೆಶಾಯ 53:3ಆತನು ಮನುಷ್ಯರಿಂದ ತಳ್ಳಲ್ಪಟ್ಟವನೂ ತಿರಸ್ಕರಿಸ ಲ್ಪಟ್ಟವನೂ ದುಃಖಿತ ಮನುಷ್ಯನೂ ಕಷ್ಟವನ್ನು ಅರಿತ ವನೂ; ನಾವು ನಮ್ಮ ಮುಖಗಳನ್ನು ಆತನಿಂದ ಮರೆ ಮಾಡಿಕೊಳ್ಳುವ ಹಾಗೆ ಧಿಕ್ಕರಿಸಲ್ಪಟ್ಟವನೂ ಆಗಿದ್ದನು. ನಾವು ಆತನನ್ನು ಲಕ್ಷಕ್ಕೆ ತರಲಿಲ್ಲ.
- Job 30:8–10 ಯೋಬನು 30:8–10ಹುಚ್ಚರ ಮಕ್ಕಳಾಗಿಯೂ ಹೌದು, ಕೆಳಮಟ್ಟದವರ ಮಕ್ಕಳಾಗಿಯೂ ಇದ್ದರು. ಆದರೆ ಈಗ ನಾನು ಅವರ ಹಾಸ್ಯದ ರಾಗವೂ ಹೌದು, ಅವರಿಗೆ ಗಾದೆಯೂ ಆದೆನು. ನನ್ನನ್ನು ಅಸಹ್ಯಿಸುತ್ತಾರೆ; ನನಗೆ ದೂರ ವಾಗಿ ಓಡಿಹೋಗುತ್ತಾರೆ; ನನ್ನ ಮುಖದ ಮುಂದೆ ಉಗುಳಲು ಹಿಂದೆಗೆಯುವದಿಲ್ಲ.
- Luke 18:32–33 ಲೂಕನು 18:32–33ಆತನು ಅನ್ಯಜನಗಳಿಗೆ ಒಪ್ಪಿಸಲ್ಪ ಡುವನು; ಅವರು ಆತನನ್ನು ಹಾಸ್ಯಮಾಡುವವರಾಗಿ ಅವಮಾನ ಮಾಡುತ್ತಾ ಆತನ ಮೇಲೆ ಉಗುಳುವರು. ಇದಲ್ಲದೆ ಅವರು ಆತನನ್ನು ಕೊರಡೆಗಳಿಂದ ಹೊಡೆದು ಕೊಲ್ಲುವರು. ಮೂರನೆಯ ದಿನದಲ್ಲಿ ಆತನು ತಿರಿಗಿ ಏಳುವನು ಅಂದನು.
- Isaiah 52:14 ಯೆಶಾಯ 52:14ಅವನ ಮುಖವು ಮನುಷ್ಯರಿಗಿಂತಲೂ ಅವನ ಆಕಾರವು ನರಪುತ್ರರಿ ಗಿಂತಲೂ ಕುರೂಪವಾಗಿರುವದನ್ನು ನೋಡಿ ಹೇಗೆ ಆಶ್ಚರ್ಯಪಟ್ಟರೋಹಾಗೆಯೇ ಅನೇಕ ಜನಾಂಗ ಗಳನ್ನು ಆತನು ಚಮಕಿತ ಮಾಡುವನು; ಅರಸರು ಆತನ ನಿಮಿತ್ತ ತಮ್ಮ ಬಾಯಿಗಳನ್ನು ಮುಚ್ಚಿಕೊಳ್ಳು ವರು; ಯಾಕಂದರೆ ಅವರಿಗೆ ತಿಳಿಸಲ್ಪಡದೇ ಇರುವ ದನ್ನು ಅವರು ನೋಡುವರು; ಕೇಳದೇ ಇರುವದನ್ನು ಗ್ರಹಿಸುವರು.
- Micah 5:1 ಮೀಕ 5:1ಈಗ ಓ ಸೈನ್ಯಗಳ ಕುಮಾರ್ತೆಯೇ, ಗುಂಪುಗಳಾಗಿ ಕೂಡಿಕೊಳ್ಳಿರಿ; ಅವನು ನಮಗೆ ಮುತ್ತಿಗೆ ಹಾಕಿದ್ದಾನೆ. ಇಸ್ರಾಯೇಲಿನ ನ್ಯಾಯಾಧಿಪತಿಯನ್ನು ಕೋಲಿನಿಂದ ಕೆನ್ನೆಯ ಮೇಲೆ ಹೊಡೆಯುತ್ತಾರೆ.
- Isaiah 49:7 ಯೆಶಾಯ 49:7ಮನುಷ್ಯನಿಂದ ತಿರಸ್ಕರಿಸಲ್ಪಟ್ಟವನು ಜನಾಂಗಕ್ಕೆ ಅಸ ಹ್ಯನೂ ಅಧಿಕಾರಿಗಳ ಸೇವಕನಿಗೆ ಇಸ್ರಾಯೇಲಿನ ವಿಮೋಚಕನೂ ಮತ್ತು ಅವನ ಪರಿಶುದ್ಧನಾದ ಕರ್ತನೂ ಹೀಗೆ ಹೇಳುತ್ತಾನೆ, ಕರ್ತನ ನಂಬಿಗಸ್ತಿ ಕೆಯನ್ನೂ ನಿನ್ನನ್ನು ಆದುಕೊಂಡ ಇಸ್ರಾಯೇಲಿನ ಪರಿಶುದ್ಧನನ್ನೂ ನೋಡಿ ಅರಸರು ಏಳುತ್ತಾರೆ; ಅಧಿ ಪತಿಗಳು ಸಹ ಆರಾಧಿಸುವರು.