Matthew · chapter 27 · verse 38
Matthew 27:38 in Kannada
ಅಲ್ಲಿ ಒಬ್ಬನನ್ನು ಬಲಗಡೆಯಲ್ಲಿಯೂ ಮತ್ತೊಬ್ಬನನ್ನು ಎಡಗಡೆಯ ಲ್ಲಿಯೂ ಇಬ್ಬರು ಕಳ್ಳರನ್ನು ಆತನೊಂದಿಗೆ ಶಿಲುಬೆಗೆ ಹಾಕಿದರು.
Alli obbanannu balagadeyalliyoo mattobbanannu edagadeya lliyoo ibbaru kallarannu aatanondige shilubege haakidaru.
Matthew 27:38 in English
- King James Version (KJV)
- Then were there two thieves crucified with him, one on the right hand, and another on the left.
- World English Bible (WEB)
- Then there were two robbers crucified with him, one on his right hand and one on the left.
- American Standard Version (ASV)
- Then are there crucified with him two robbers, one on the right hand and one on the left.
- Bible in Basic English (BBE)
- Then two thieves were put on crosses with him, one on the right and one on the left.
- Darby Translation (DBY)
- Then are crucified with him two robbers, one on the right hand and one on the left.
- Webster's Bible (WBS)
- Then were there two thieves crucified with him: one on the right hand, and another on the left.
- Young's Literal Translation (YLT)
- Then crucified with him are two robbers, one on the right hand, and one on the left,
Read in context
- 36ಮತ್ತು ಅವರು ಕೆಳಗೆ ಕೂತುಕೊಂಡು ಆತನನ್ನು ಕಾಯುತ್ತಿದ್ದರು.
- 37ಇದಲ್ಲದೆ ಆತನ ತಲೆಯ ಮೇಲ್ಭಾಗದಲ್ಲಿ--ಇವನು ಯೆಹೂದ್ಯರ ಅರಸನಾದ ಯೇಸು ಎಂದು ಆತನ ವಿಷಯವಾದ ಅಪರಾಧವನ್ನು ಬರೆಯಿಸಿದರು.
- 38ಅಲ್ಲಿ ಒಬ್ಬನನ್ನು ಬಲಗಡೆಯಲ್ಲಿಯೂ ಮತ್ತೊಬ್ಬನನ್ನು ಎಡಗಡೆಯ ಲ್ಲಿಯೂ ಇಬ್ಬರು ಕಳ್ಳರನ್ನು ಆತನೊಂದಿಗೆ ಶಿಲುಬೆಗೆ ಹಾಕಿದರು.
- 39ಅಲ್ಲಿ ಹೋಗುತ್ತಿದ್ದವರು ಆತನನ್ನು ದೂಷಿಸಿ ತಮ್ಮ ತಲೆಗಳನ್ನು ಅಲ್ಲಾಡಿಸುತ್ತಾ--
- 40ದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಕಟ್ಟುವವನೇ, ನಿನ್ನನ್ನು ನೀನೇ ರಕ್ಷಿಸಿಕೋ; ಮತ್ತು ನೀನು ದೇವಕುಮಾರನಾಗಿದ್ದರೆ ಶಿಲುಬೆಯಿಂದ ಕೆಳಗೆ ಇಳಿದು ಬಾ ಅಂದರು.
Cross references
- John 19:18 ಯೋಹಾನನು 19:18ಅಲ್ಲಿ ಇಬ್ಬರು ಅಂದರೆ ಆ ಕಡೆಗೊಬ್ಬನನ್ನೂ ಈ ಕಡೆಗೊಬ್ಬನನ್ನು ಮಧ್ಯೆ ಯೇಸುವನ್ನೂ ಇರಿಸಿ ಆತನೊಂದಿಗೆ ಶಿಲುಬೆಗೆ ಹಾಕಿದರು.
- Luke 23:39–43 ಲೂಕನು 23:39–43ತೂಗುಹಾಕಲ್ಪಟ್ಟಿದ್ದ ದುಷ್ಕರ್ಮಿಗಳಲ್ಲಿ ಒಬ್ಬನು ಆತನನ್ನು ದೂಷಿಸಿ--ನೀನು ಕ್ರಿಸ್ತನಾಗಿದ್ದರೆ ನಿನ್ನನ್ನು ರಕ್ಷಿಸಿಕೊಂಡು ನಮ್ಮನ್ನೂ ರಕ್ಷಿಸು ಅಂದನು. ಆದರೆ ಮತ್ತೊಬ್ಬನು ಪ್ರತ್ಯುತ್ತರವಾಗಿ ಅವನನ್ನು ಗದರಿಸಿ--ನೀನು ಇದೇ ದಂಡನೆಯಲ್ಲಿರುವದನ್ನು ನೋಡಿಯೂ ದೇವರಿಗೆ ಭಯಪಡುವದಿಲ್ಲವೋ? ನಾವಂತೂ ನ್ಯಾಯವಾಗಿಯೇ ನಮ್ಮ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಹೊಂದುತ್ತಾ ಇದ್ದೇವೆ; ಈತನಾದರೋ ತಪ್ಪಾದದ್ದೇನೂ ಮಾಡಲಿಲ್ಲ ಅಂದನು. ಇದಲ್ಲದೆ ಅವನು ಯೇಸು ವಿಗೆ--ಕರ್ತನೇ, ನೀನು ನಿನ್ನ ರಾಜ್ಯದಲ್ಲಿ ಬರುವಾಗ ನನ್ನನ್ನು ನೆನಪು ಮಾಡಿಕೋ ಅಂದನು. ಆಗ ಯೇಸು ಅವನಿಗೆ--ಈ ದಿನವೇ ನೀನು ನನ್ನೊಂದಿಗೆ ಪರದೈಸಿನಲ್ಲಿರುವಿ ಎಂದು ನಾನು ನಿನಗೆ ನಿಜವಾಗಿ ಹೇಳುತ್ತೇನೆ ಅಂದನು.
- John 19:31–35 ಯೋಹಾನನು 19:31–35ಅದು ಸಿದ್ಧತೆಯ ದಿನವಾದದ್ದರಿಂದ ಸಬ್ಬತ್ ದಿನದಲ್ಲಿ ದೇಹಗಳು ಶಿಲುಬೆಯ ಮೇಲೆ ಇರಬಾರ ದೆಂದು ಅವರ ಕಾಲುಗಳನ್ನು ಮುರಿದು ಅವರನ್ನು ತೆಗೆದುಬಿಡಬೇಕೆಂದು ಯೆಹೂದ್ಯರು ಪಿಲಾತನನ್ನು ಬೇಡಿಕೊಂಡರು. (ಯಾಕಂದರೆ ಆ ಸಬ್ಬತ್ದಿನವು ವಿಶೇಷವಾದ ದಿನವಾಗಿತ್ತು). ಆಗ ಸೈನಿಕರು ಬಂದು ಆತನ ಜೊತೆಯಲ್ಲಿ ಶಿಲುಬೆಗೆ ಹಾಕಲ್ಪಟ್ಟಿದ್ದ ಮೊದಲನೆಯವನ ಕಾಲುಗಳನ್ನೂ ಮತ್ತೊಬ್ಬನ ಕಾಲುಗಳನ್ನೂ ಮುರಿದರು. ಆದರೆ ಅವರು ಯೇಸುವಿನ ಬಳಿಗೆ ಬಂದಾಗ ಆತನು ಆಗಲೇ ಸತ್ತಿರುವದನ್ನು ಕಂಡು ಆತನ ಕಾಲುಗಳನ್ನು ಮುರಿ ಯಲಿಲ್ಲ. ಆದರೆ ಸೈನಿಕರಲ್ಲಿ ಒಬ್ಬನು ಈಟಿಯಿಂದ ಆತನ ಪಕ್ಕೆಯನ್ನು ತಿವಿದನು; ಕೂಡಲೆ ರಕ್ತವೂ ನೀರೂ ಹೊರಗೆ ಬಂತು. ಅದನ್ನು ನೋಡಿದವನೇ ಸಾಕ್ಷಿ ಕೊಟ್ಟಿದ್ದಾನೆ. ಅವನ ಸಾಕ್ಷಿಯು ಸತ್ಯವೇ; ನೀವು ನಂಬುವಂತೆ ಅವನು ಹೇಳುವದು ಸತ್ಯವೆಂದು ಅವನು ಬಲ್ಲನು.
- Isaiah 53:12 ಯೆಶಾಯ 53:12ಆದದರಿಂದ ನಾನು ಆತನಿಗೋಸ್ಕರ ದೊಡ್ಡ ವರೊಂದಿಗೆ ಭಾಗಮಾಡುವೆನು ಆತನು ಬಲಿಷ್ಠರ ಸಂಗಡ ಕೊಳ್ಳೆಯಲ್ಲಿ ಪಾಲುಮಾಡುವನು; ಆತನು ತನ್ನ ಪ್ರಾಣವನ್ನು ಮರಣದ ವರೆಗೆ ಹೊಯ್ದು ಬಿಟ್ಟು ದ್ರೋಹಿಗಳೊಂದಿಗೆ ಎಣಿಸಲ್ಪಟ್ಟನು; ಅನೇಕರ ಪಾಪ ವನ್ನು ಹೊತ್ತುಕೊಂಡು ದ್ರೋಹಿಗಳಿಗೋಸ್ಕರ ವಿಜ್ಞಾ ಪನೆ ಮಾಡಿದನು.
- Mark 15:27 ಮಾರ್ಕನು 15:27ಇಬ್ಬರು ಕಳ್ಳರನ್ನು, ಒಬ್ಬನನ್ನು ಆತನ ಬಲಗಡೆಗೂ ಮತ್ತೊಬ್ಬನನ್ನು ಆತನ ಎಡ ಗಡೆಗೂ ಆತನೊಂದಿಗೆ ಅವರು ಶಿಲುಬೆಗೆ ಹಾಕಿ ದರು.
- Matthew 27:44 ಮತ್ತಾಯನು 27:44ಆತನ ಜೊತೆಗೆ ಶಿಲುಬೆಗೆ ಹಾಕಲ್ಪಟ್ಟಿದ್ದ ಕಳ್ಳರು ಸಹ ಅದೇ ರೀತಿಯಾಗಿ ಆತನನ್ನು ನಿಂದಿಸಿದರು.
- Luke 22:37 ಲೂಕನು 22:37ಯಾಕಂದರೆ--ಆತನು ಅಕ್ರಮಗಾರರಲ್ಲಿ ಎಣಿಸಲ್ಪಟ್ಟವನು ಎಂಬದಾಗಿ ಬರೆ ಯಲ್ಪಟ್ಟದ್ದು ಇನ್ನೂ ನೆರವೇರತಕ್ಕದ್ದಾಗಿದೆ; ನನ್ನ ವಿಷಯ ವಾದವುಗಳು ಕೊನೆಗಾಣಬೇಕು ಎಂದು ನಾನು ನಿಮಗೆ ಹೇಳುತ್ತೇನೆ ಅಂದನು.
- Luke 23:32–33 ಲೂಕನು 23:32–33ಇದಲ್ಲದೆ ದುಷ್ಕರ್ಮಿಗಳಾದ ಬೇರೆ ಇಬ್ಬರನ್ನು ಆತನೊಂದಿಗೆ ಕೊಲ್ಲುವದಕ್ಕಾಗಿ ತೆಗೆದುಕೊಂಡು ಹೋದರು. ಅವರು ಕಲ್ವಾರಿ ಎಂದು ಕರೆಯಲ್ಪಡುವ ಸ್ಥಳಕ್ಕೆ ಬಂದಾಗ ಅಲ್ಲಿ ಆತನನ್ನು ಮತ್ತು ಆ ದುಷ್ಕರ್ಮಿಗಳಲ್ಲಿ ಒಬ್ಬನನ್ನು ಬಲಗಡೆಯಲ್ಲಿ ಮತ್ತೊಬ್ಬನನ್ನು ಎಡಗಡೆ ಯಲ್ಲಿ ಶಿಲುಬೆಗೆ ಹಾಕಿದರು.