Matthew · chapter 28 · verse 6
Matthew 28:6 in Kannada
ಆತನು ಇಲ್ಲಿ ಇಲ್ಲ; ಯಾಕಂದರೆ ಆತನು ಹೇಳಿರುವ ಪ್ರಕಾರ ಆತನು ಎದ್ದಿದ್ದಾನೆ; ಕರ್ತನು ಮಲಗಿದ್ದ ಸ್ಥಳವನ್ನು ಬಂದು ನೋಡಿರಿ.
Aatanu illi illa; yaakandare aatanu heliruva prakaara aatanu eddiddaane; kartanu malagidda sthalavannu bandu nodiri.
Matthew 28:6 in English
- King James Version (KJV)
- He is not here: for he is risen, as he said. Come, see the place where the Lord lay.
- World English Bible (WEB)
- He is not here, for he has risen, just like he said. Come, see the place where the Lord was lying.
- American Standard Version (ASV)
- He is not here; for he is risen, even as he said. Come, see the place where the Lord lay.
- Bible in Basic English (BBE)
- He is not here, for he has come to life again, even as he said. Come, see the Lord's resting-place.
- Darby Translation (DBY)
- He is not here, for he is risen, as he said. Come, see the place where the Lord lay.
- Webster's Bible (WBS)
- He is not here: for he is risen, as he said. Come, see the place where the Lord lay.
- Young's Literal Translation (YLT)
- he is not here, for he rose, as he said; come, see the place where the Lord was lying;
Read in context
- 4ಕಾವಲುಗಾರರು ಅವನಿಗೆ ಭಯಪಟ್ಟು ನಡುಗುತ್ತಾ ಸತ್ತವರ ಹಾಗಾದರು.
- 5ಆ ದೂತನು ಸ್ತ್ರೀಯರಿಗೆ-- ನೀವು ಭಯಪಡಬೇಡಿರಿ; ಯಾಕಂದರೆ ಶಿಲುಬೆಗೆ ಹಾಕಲ್ಪಟ್ಟವನಾದ ಯೇಸುವನ್ನು ನೀವು ಹುಡುಕುತ್ತೀರೆಂದು ನಾನು ಬಲ್ಲೆನು.
- 6ಆತನು ಇಲ್ಲಿ ಇಲ್ಲ; ಯಾಕಂದರೆ ಆತನು ಹೇಳಿರುವ ಪ್ರಕಾರ ಆತನು ಎದ್ದಿದ್ದಾನೆ; ಕರ್ತನು ಮಲಗಿದ್ದ ಸ್ಥಳವನ್ನು ಬಂದು ನೋಡಿರಿ.
- 7ಬೇಗನೆ ಹೋಗಿ ಆತನು ಸತ್ತವರೊಳಗಿಂದ ಎದ್ದಿದ್ದಾನೆ ಎಂದು ಆತನ ಶಿಷ್ಯರಿಗೆ ಹೇಳಿರಿ; ಮತ್ತು ಇಗೋ, ನಿಮಗೆ ಮುಂದಾಗಿ ಆತನು ಗಲಿಲಾಯಕ್ಕೆ ಹೋಗುತ್ತಾನೆ. ನೀವು ಆತನನ್ನು ಅಲ್ಲಿ ಕಾಣುವಿರಿ; ಇಗೋ, ನಾನು ನಿಮಗೆ ಹೇಳಿದ್ದೇನೆ ಅಂದನು.
- 8ಅವರು ಭಯದಿಂದಲೂ ಮಹಾ ಸಂತೋಷದಿಂದಲೂ ಸಮಾಧಿಯಿಂದ ಬೇಗನೆ ಹೊರಟು ಆತನ ಶಿಷ್ಯರಿಗೆ ತಿಳಿಸುವದಕ್ಕಾಗಿ ಓಡಿಹೋದರು.
Cross references
- Mark 16:6 ಮಾರ್ಕನು 16:6ಆದರೆ ಅವನು ಅವರಿಗೆ--ಭಯಪಡಬೇಡಿರಿ, ಶಿಲುಬೆಗೆ ಹಾಕಲ್ಪಟ್ಟ ನಜರೇತಿನ ಯೇಸುವನ್ನು ಹುಡುಕುತ್ತಿದ್ದೀರಿ; ಆತನು ಎದ್ದಿದ್ದಾನೆ; ಇಲ್ಲಿ ಇಲ್ಲ, ಆತನನ್ನು ಇಟ್ಟಿದ್ದ ಸ್ಥಳವನ್ನು ನೋಡಿರಿ;
- Matthew 12:40 ಮತ್ತಾಯನು 12:40ಯಾಕಂದರೆ ಯೋನನು ಮೂರು ಹಗಲು ಮತ್ತು ಮೂರು ರಾತ್ರಿ ಮಾನಿನ ಹೊಟ್ಟೆಯಲ್ಲಿ ಇದ್ದ ಹಾಗೆಯೇ ಮನುಷ್ಯಕುಮಾರನು ಮೂರು ಹಗಲು ಮತ್ತು ಮೂರು ರಾತ್ರಿ ಭೂಗರ್ಭ ದಲ್ಲಿರುವನು.
- Luke 24:6–8 ಲೂಕನು 24:6–8ಆತನು ಇಲ್ಲಿಲ್ಲ, ಎದ್ದಿದ್ದಾನೆ; ಆತನು ಇನ್ನೂ ಗಲಿಲಾಯ ದಲ್ಲಿದ್ದಾಗಲೇ-- ಮನುಷ್ಯಕುಮಾರನು ಪಾಪಿಷ್ಠರ ಕೈಗಳಿಗೆ ಹೇಗೆ ಒಪ್ಪಿಸಲ್ಪಟ್ಟವನಾಗಿ ಶಿಲುಬೆಗೆ ಹಾಕಲ್ಪಟ್ಟು ಮೂರನೆಯ ದಿನದಲ್ಲಿ ತಿರಿಗಿ ಏಳುವನು ಎಂದು ನಿಮಗೆ ಹೇಳಿದ್ದನ್ನು ನೀವು ನೆನಪು ಮಾಡಿಕೊಳ್ಳಿರಿ ಅಂದರು. ಆಗ ಅವರು ಆತನ ಮಾತುಗಳನ್ನು ನೆನಪು ಮಾಡಿಕೊಂಡು
- Matthew 16:21 ಮತ್ತಾಯನು 16:21ತಾನು ಯೆರೂಸಲೇಮಿಗೆ ಹೋಗಿ ಹೇಗೆ ಹಿರಿಯರಿಂದಲೂ ಪ್ರಧಾನ ಯಾಜಕರಿಂದಲೂ ಶಾಸ್ತ್ರಿಗಳಿಂದಲೂ ಬಹು ಶ್ರಮೆಗಳನ್ನು ಅನುಭವಿಸಿ ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ತಿರಿಗಿ ಎದ್ದು ಬರುವದು ಅವಶ್ಯವಾಗಿದೆ ಎಂದು ಯೇಸು ಅಂದಿನಿಂದ ತನ್ನ ಶಿಷ್ಯರಿಗೆ ತಿಳಿಸಲಾರಂಭಿಸಿದನು.
- Luke 24:23 ಲೂಕನು 24:23ಆತನ ದೇಹವನ್ನು ಕಾಣದೆ ಬಂದು ಆತನು ಜೀವದಿಂದೆ ದ್ದಿದ್ದಾನೆ ಎಂದು ದೇವದೂತರು ಹೇಳಿದ್ದನ್ನೂ ಆ ದೂತರ ದೃಶ್ಯವನ್ನು ಕಂಡದ್ದನ್ನೂ ನಮಗೆ ಹೇಳಿ ಆಶ್ಚರ್ಯವನ್ನುಂಟು ಮಾಡಿದರು.
- John 20:4–9 ಯೋಹಾನನು 20:4–9ಹೀಗೆ ಅವರಿಬ್ಬರೂ ಜೊತೆಯಾಗಿ ಓಡಿದರು; ಆ ಬೇರೆ ಶಿಷ್ಯನು ಪೇತ್ರನಿಗಿಂತ ಮುಂದೆ ಓಡಿ ಮೊದಲು ಸಮಾಧಿಗೆ ಬಂದನು. ಅವನು ಬೊಗ್ಗಿಕೊಂಡು ಒಳಗೆ ನೋಡಿದಾಗ ನಾರುಬಟ್ಟೆಗಳು ಬಿದ್ದಿರುವದನ್ನು ಕಂಡನು. ಆದಾಗ್ಯೂ ಅವನು ಒಳಗೆ ಹೋಗಲಿಲ್ಲ. ಆಮೇಲೆ ಸೀಮೋನ ಪೇತ್ರನು ಅವನ ಹಿಂದೆ ಬಂದು ಸಮಾಧಿಯೊಳಕ್ಕೆ ಹೋಗಿ ನಾರುಬಟ್ಟೆಗಳು ಬಿದ್ದಿರುವದನ್ನೂ ಆತನ ತಲೆಯ ಮೇಲಿದ್ದ ಕೈವಸ್ತ್ರವು ನಾರುಬಟ್ಟೆಗಳೊಂದಿಗೆ ಇರದೆ ಸುತ್ತಿ ಒಂದು ಕಡೆಯಲ್ಲಿ ಬೇರೆ ಇರುವದನ್ನೂ ಕಂಡನು. ಆಗ ಮೊದಲು ಸಮಾಧಿಗೆ ಬಂದ ಆ ಬೇರೆ ಶಿಷ್ಯನು ಸಹ ಒಳಗೆ ಹೋಗಿ ನೋಡಿ ನಂಬಿದನು. ಯಾಕಂದರೆ ಆತನು ಸತ್ತವರೊಳಗಿಂದ ತಿರಿಗಿ ಎದ್ದೇಳುವದು ಅಗತ್ಯವೆಂಬ ಬರಹವು ಅವರಿಗೆ ಇನ್ನೂ ತಿಳಿದಿರಲಿಲ್ಲ.
- Matthew 27:63 ಮತ್ತಾಯನು 27:63ಅಯ್ಯಾ, ಆ ಮೋಸಗಾರನು ಇನ್ನೂ ಜೀವದಿಂದಿದ್ದಾಗ-- ಮೂರು ದಿನಗಳಾದ ಮೇಲೆ ನಾನು ತಿರಿಗಿ ಏಳುತ್ತೇನೆ ಎಂದು ಹೇಳಿದ್ದು ನಮ್ಮ ನೆನಪಿಗೆ ಬರುತ್ತದೆ.
- Matthew 26:31–32 ಮತ್ತಾಯನು 26:31–32ಆಮೇಲೆ ಯೇಸು ಅವರಿಗೆ--ನೀವೆಲ್ಲರೂ ಈ ರಾತ್ರಿ ನನ್ನ ವಿಷಯದಲ್ಲಿ ಅಭ್ಯಂತರಪಡುವಿರಿ; ಯಾಕಂದರೆ-- ನಾನು ಕುರುಬನನ್ನು ಹೊಡೆಯುವೆನು; ಮಂದೆ ಯ ಕುರಿಗಳು ಚದರಿಹೋಗುವವು ಎಂದು ಬರೆದದೆ; ಆದರೆ ನಾನು ಎದ್ದ ಮೇಲೆ ನಿಮಗಿಂತ ಮುಂಚಿತ ವಾಗಿ ಗಲಿಲಾಯಕ್ಕೆ ಹೋಗುವೆನು ಅಂದನು.
- Luke 24:44 ಲೂಕನು 24:44ಆಗ ಆತನು ಅವರಿಗೆ--ಮೋಶೆಯ ನ್ಯಾಯ ಪ್ರಮಾಣದಲ್ಲಿಯೂ ಪ್ರವಾದನೆಗಳಲ್ಲಿಯೂ ಕೀರ್ತನೆ ಗಳಲ್ಲಿಯೂ ನನ್ನನ್ನು ಕುರಿತಾಗಿ ಬರೆಯಲ್ಪಟ್ಟವು ಗಳೆಲ್ಲವು ನೆರವೇರುವದು ಅಗತ್ಯವಾಗಿದೆ ಎಂಬ ಈ ಮಾತುಗಳನ್ನು ನಾನು ನಿಮ್ಮೊಂದಿಗೆ ಇದ್ದಾಗಲೇ ಹೇಳಿದ್ದೆನು ಅಂದನು.
- Matthew 17:23 ಮತ್ತಾಯನು 17:23ಅವರು ಆತನನ್ನು ಕೊಲ್ಲುವರು; ಇದಲ್ಲದೆ ಮೂರನೇ ದಿನದಲ್ಲಿ ಆತನು ತಿರಿಗಿ ಎಬ್ಬಿಸಲ್ಪಡುವನು ಎಂದು ಹೇಳಿದನು. ಅದಕ್ಕೆ ಅವರು ಬಹಳ ದುಃಖಪಟ್ಟರು.
- John 10:17 ಯೋಹಾನನು 10:17ಯಾಕಂದರೆ ನಾನು ನನ್ನ ಪ್ರಾಣವನ್ನು ತಿರಿಗಿಪಡಕೊಳ್ಳುವಂತೆ ಅದನ್ನು ಕೊಡುತ್ತೇನೆ; ಆದದ ರಿಂದ ನನ್ನ ತಂದೆಯು ನನ್ನನ್ನು ಪ್ರೀತಿಸುತ್ತಾನೆ.
- Mark 8:31 ಮಾರ್ಕನು 8:31ಮನುಷ್ಯ ಕುಮಾರನು ಅನೇಕ ಶ್ರಮೆಗಳನ್ನು ಅನುಭವಿಸಿ ಹಿರಿಯ ರಿಂದಲೂ ಪ್ರಧಾನ ಯಾಜಕರಿಂದಲೂ ಶಾಸ್ತ್ರಿಗಳಿಂ ದಲೂ ತಿರಸ್ಕರಿಸಲ್ಪಟ್ಟವನಾಗಿ ಕೊಲ್ಲಲ್ಪಟ್ಟು ಮೂರು ದಿವಸಗಳಾದ ಮೇಲೆ ಏಳುವದು ಅವಶ್ಯವೆಂದು ಅವ ರಿಗೆ ಬೋಧಿಸಲಾರಂಭಿಸಿದನು.