Matthew · chapter 5 · verse 21
Matthew 5:21 in Kannada
ನೀನು ನರಹತ್ಯ ಮಾಡಬಾರದು; ಯಾವನಾ ದರೂ ನರಹತ್ಯಮಾಡಿದರೆ ನ್ಯಾಯತೀರ್ಪಿನ ಅಪಾ ಯಕ್ಕೆ ಒಳಗಾಗುವನು ಎಂದು ಪೂರ್ವಿಕರು ಹೇಳಿರು ವದನ್ನು ನೀವು ಕೇಳಿದ್ದೀರಿ.
Neenu narahatya maadabaaradu; yaavanaa daroo narahatyamaadidare nyaayateerpina apaa yakke olagaaguvanu endu poorvikaru heliru vadannu neevu keliddeeri.
Matthew 5:21 in English
- King James Version (KJV)
- Ye have heard that it was said by them of old time, Thou shalt not kill; and whosoever shall kill shall be in danger of the judgment:
- World English Bible (WEB)
- “You have heard that it was said to the ancient ones, ‘You shall not murder;’ and ‘Whoever murders will be in danger of the judgment.’
- American Standard Version (ASV)
- Ye have heard that it was said to them of old time, Thou shalt not kill; and whosoever shall kill shall be in danger of the judgment:
- Bible in Basic English (BBE)
- You have knowledge that it was said in old times, You may not put to death; and, Whoever puts to death will be in danger of being judged:
- Darby Translation (DBY)
- Ye have heard that it was said to the ancients, Thou shalt not kill; but whosoever shall kill shall be subject to the judgment.
- Webster's Bible (WBS)
- Ye have heard that it was said to them of old time, Thou shalt not kill; and whoever shall kill, shall be in danger of the judgment:
- Young's Literal Translation (YLT)
- 'Ye heard that it was said to the ancients: Thou shalt not kill, and whoever may kill shall be in danger of the judgment;
Read in context
- 19ಆದದರಿಂದ ಯಾವನಾದರೂ ಈ ಆಜ್ಞೆಗಳಲ್ಲಿ ಚಿಕ್ಕದಾದ ಒಂದನ್ನು ಮಾರಿ ಹಾಗೆಯೇ ಜನರಿಗೆ ಬೋಧಿಸಿದರೆ ಅವನು ಪರಲೋಕರಾಜ್ಯದಲ್ಲಿ ಅಲ್ಪನೆಂದು ಕರೆಯಲ್ಪಡುವನು; ಯಾವನಾದರೂ ಇವುಗಳನ್ನು ಕೈಕೊಂಡು ಬೋಧಿಸಿದರೆ ಅವನೇ ಪರಲೋಕ ರಾಜ್ಯದಲ್ಲಿ ದೊಡ್ಡವನೆಂದು ಕರೆಯಲ್ಪಡು ವನು.
- 20ನಾನು ನಿಮಗೆ ಹೇಳುವದೇನಂದರೆ-- ಶಾಸ್ತ್ರಿಗಳ ಮತ್ತು ಫರಿಸಾಯರ ನೀತಿಗಿಂತಲೂ ನಿಮ್ಮ ನೀತಿಯು ಹೆಚ್ಚಿನದಾಗಿರದ ಹೊರತು ನೀವು ಪರಲೋಕ ರಾಜ್ಯದಲ್ಲಿ ಪ್ರವೇಶಿಸುವದಕ್ಕಾಗುವದೇ ಇಲ್ಲ.
- 21ನೀನು ನರಹತ್ಯ ಮಾಡಬಾರದು; ಯಾವನಾ ದರೂ ನರಹತ್ಯಮಾಡಿದರೆ ನ್ಯಾಯತೀರ್ಪಿನ ಅಪಾ ಯಕ್ಕೆ ಒಳಗಾಗುವನು ಎಂದು ಪೂರ್ವಿಕರು ಹೇಳಿರು ವದನ್ನು ನೀವು ಕೇಳಿದ್ದೀರಿ.
- 22ನಾನು ನಿಮಗೆ ಹೇಳುವದೇನಂದರೆ-- ನಿಷ್ಕಾರಣವಾಗಿ ತನ್ನ ಸಹೋದರನ ಮೇಲೆ ಯಾವನಾದರೂ ಸಿಟ್ಟುಗೊಂಡರೆ ಅವನು ನ್ಯಾಯತೀರ್ಪಿನ ಅಪಾಯಕ್ಕೆ ಒಳಗಾಗುವನು; ಮತ್ತು ಯಾವನಾದರೂ ತನ್ನ ಸಹೋದರನಿಗೆ-- ವ್ಯರ್ಥವಾದವನೇ ಎಂದು ಹೇಳಿದರೆ ಅವನು ನ್ಯಾಯಸಭೆಯ ಅಪಾಯಕ್ಕೆ ಒಳಗಾಗುವನು
- 23ಆದದರಿಂದ ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಬಳಿಗೆ ತಂದಾಗ ನಿನಗೆ ವಿರೋಧ ವಾದದ್ದು ನಿನ್ನ ಸಹೋದರನಿಗೆ ಇದೆಯೆಂದು ನೆನಪಿಗೆ ಬಂದರೆ
Cross references
- Deuteronomy 5:17 ಧರ್ಮೋಪದೇಶಕಾಂಡ 5:17ಕೊಲ್ಲಬೇಡ
- Exodus 20:13 ವಿಮೋಚನಕಾಂಡ 20:13ಕೊಲೆ ಮಾಡಬಾರದು.
- Numbers 35:30–34 ಅರಣ್ಯಕಾಂಡ 35:30–34ಪ್ರಾಣಹತ್ಯ ಮಾಡುವ ಕೊಲೆಪಾತಕನನ್ನು ಸಾಕ್ಷಿಗಳ ಬಾಯಿಯ ಪ್ರಕಾರ ಕೊಲ್ಲಬೇಕು; ಸಾಯುವ ಹಾಗೆ ಯಾವ ಮನುಷ್ಯನಿಗಾದರೂ ವಿರೋಧವಾಗಿ ಒಬ್ಬನು ಸಾಕ್ಷಿ ಹೇಳಬಾರದು. ಸಾಯತಕ್ಕ ಕೊಲೆ ಪಾತಕನ ಪ್ರಾಣಕ್ಕೋಸ್ಕರ ಈಡನ್ನು ತಕ್ಕೊಳ್ಳಬೇಡಿರಿ; ಯಾಕಂದರೆ ಅವನು ನಿಜವಾಗಿಯೂ ಸಾಯಬೇಕು. ತನ್ನ ಆಶ್ರಯದ ಪಟ್ಟಣಕ್ಕೆ ಓಡಿಹೋದವನಿ ಗೋಸ್ಕರ ಅವನು ತಿರಿಗಿ ಬಂದು ಯಾಜಕನು ಸಾಯುವ ವರೆಗೂ ಸ್ವದೇಶದಲ್ಲಿ ವಾಸಮಾಡುವ ಹಾಗೆ ಈಡನ್ನು ತಕ್ಕೊಳ್ಳಬೇಡಿರಿ. ಹೀಗೆ ನೀವು ಇರುವ ದೇಶವನ್ನು ಅಪವಿತ್ರ ಮಾಡಬೇಡಿರಿ; ದೇಶವನ್ನು ಅಪವಿತ್ರಮಾಡು ವಂಥದ್ದು ರಕ್ತವೇ. ಅದರಲ್ಲಿ ಚೆಲ್ಲಲ್ಪಟ್ಟ ರಕ್ತದ ನಿಮಿತ್ತ ಅದನ್ನು ಚೆಲ್ಲಿದವನ ರಕ್ತದಿಂದಲ್ಲದೆ ದೇಶವು ಶುದ್ಧವಾ ಗುವದಿಲ್ಲ.ಆದದರಿಂದ ನೀವು ವಾಸಮಾಡುವ ದೇಶವನ್ನು ನೀವು ಅಶುದ್ಧಮಾಡಬೇಡಿರಿ; ಯಾಕಂದರೆ ನಾನು ಅದರೊಳಗೆ ವಾಸಿಸುತ್ತೇನೆ; ಕರ್ತನಾಗಿರುವ ನಾನೇ ಇಸ್ರಾಯೇಲ್ ಮಕ್ಕಳ ಮಧ್ಯದಲ್ಲಿ ವಾಸಿಸುತ್ತೇನೆ. ಆದದರಿಂದ ನೀವು ವಾಸಮಾಡುವ ದೇಶವನ್ನು ನೀವು ಅಶುದ್ಧಮಾಡಬೇಡಿರಿ; ಯಾಕಂದರೆ ನಾನು ಅದರೊಳಗೆ ವಾಸಿಸುತ್ತೇನೆ; ಕರ್ತನಾಗಿರುವ ನಾನೇ ಇಸ್ರಾಯೇಲ್ ಮಕ್ಕಳ ಮಧ್ಯದಲ್ಲಿ ವಾಸಿಸುತ್ತೇನೆ.
- Exodus 21:12–14 ವಿಮೋಚನಕಾಂಡ 21:12–14ಮನುಷ್ಯನನ್ನು ಸಾಯುವಂತೆ ಹೊಡೆದವನು ಖಂಡಿತವಾಗಿ ಸಾಯಬೇಕು. ಆದರೆ ಅವನು ಹೊಂಚಿ ನೋಡದೆ ಇದ್ದು ದೇವರು ಅವನ ಕೈಗೆ ಅವನನ್ನು ಒಪ್ಪಿಸಿದ್ದಾಗಿದ್ದರೆ ಅವನು ಓಡಿಹೋಗುವಂತೆ ಅವನಿಗೆ ಒಂದು ಸ್ಥಳವನ್ನು ನಿನಗೆ ನಾನು ನೇಮಿಸುವೆನು. ಒಬ್ಬನು ತನ್ನ ನೆರೆಯವನನ್ನು ಕೊಲ್ಲಬೇಕೆಂಬ ಉದ್ದೇಶ ಇಟ್ಟುಕೊಂಡು ಮೋಸತನದಿಂದ ಕೊಂದರೆ ಅವನು ಸಾಯುವಂತೆ ನೀನು ಅವನನ್ನು ನನ್ನ ಯಜ್ಞ ವೇದಿಯಿಂದ ತೆಗೆಯಬೇಕು.
- Numbers 35:16–21 ಅರಣ್ಯಕಾಂಡ 35:16–21ಒಬ್ಬನು ಕಬ್ಬಿಣದ ಆಯುಧದಿಂದ ಮತ್ತೊಬ್ಬನನ್ನು ಸಾಯುವ ಹಾಗೆ ಹೊಡೆದರೆ ಅವನು ಕೊಲೆಪಾತಕನು; ಆ ಕೊಲೆಪಾತಕನನ್ನು ನಿಜವಾಗಿಯೂ ಸಾಯಿಸಬೇಕು. ಒಬ್ಬನು ಮರಣವಾಗುವಂತೆ ಕಲ್ಲನ್ನು ಎಸೆದು ಮತ್ತೊಬ್ಬನನ್ನು ಸಾಯುವಹಾಗೆ ಹೊಡೆದರೆ ಅವನು ಕೊಲೆಪಾತಕನು; ಆ ಕೊಲೆಪಾತಕನನ್ನು ನಿಜವಾಗಿಯೂ ಸಾಯಿಸಬೇಕು. ಇಲ್ಲವೆ ಮರಣವಾಗುವಂತೆ ಮರದ ಆಯುಧವನ್ನು ಎಸೆದು ಒಬ್ಬನನ್ನು ಸಾಯುವ ಹಾಗೆ ಹೊಡೆದರೆ ಅವನು ಕೊಲೆಪಾತಕನು; ಆ ಕೊಲೆ ಪಾತಕನನ್ನು ನಿಜವಾಗಿಯೂ ಸಾಯಿಸಬೇಕು. ರಕ್ತ ಸೇಡು ತೀರಿಸಿಕೊಳ್ಳುವವನು ಕೊಲೆಪಾತಕನನ್ನು ತಾನೇ ಕೊಲ್ಲಬೇಕು; ಅವನನ್ನು ಸಂಧಿಸುವಾಗಲೇ ಕೊಲ್ಲ ಬೇಕು. ಒಬ್ಬನು ಮತ್ತೊಬ್ಬನನ್ನು ಹಗೆಮಾಡಿ ಸಾಯುವ ಹಾಗೆ ಹೊಡೆದರೆ ಇಲ್ಲವೆ ನೂಕುವದ ರಿಂದಲಾದರೂ ಹೊಂಚಿ ನೋಡಿಕೊಂಡು ಅವನ ಮೇಲೆ ಯಾವದನ್ನಾದರೂ ಬಲವಾಗಿ ಎಸೆದರೆ ಇಲ್ಲವೆ ಶತ್ರುತ್ವಮಾಡಿ ಅವನು ಸಾಯುವ ಹಾಗೆ ತನ್ನ ಕೈಯಿಂದ ಹೊಡೆದರೆ ಅವನು ಕೊಲೆಪಾತಕನೇ; ಹೊಡೆದವನನ್ನು ನಿಜವಾಗಿ ಸಾಯಿಸಬೇಕು; ರಕ್ತ ಸೇಡು ತೀರಿಸುವವನು ಅವನನ್ನು ಸಂಧಿಸುವಾಗಲೇ ಆ ಕೊಲೆ ಪಾತಕನನ್ನು ಕೊಲ್ಲಬೇಕು.
- Deuteronomy 21:7–9 ಧರ್ಮೋಪದೇಶಕಾಂಡ 21:7–9ಉತ್ತರಕೊಟ್ಟು ಹೇಳತಕ್ಕದ್ದೇನಂದರೆ--ನಮ್ಮ ಕೈಗಳು ಈ ರಕ್ತವನ್ನು ಚೆಲ್ಲಲಿಲ್ಲ; ನಮ್ಮ ಕಣ್ಣುಗಳು ಅದನ್ನು ನೋಡಲಿಲ್ಲ. ಓ ಕರ್ತನೇ, ನೀನು ವಿಮೋಚಿಸಿದ ನಿನ್ನ ಜನರಾದ ಇಸ್ರಾಯೇಲ್ಯರಿಗೆ ಕರುಣೆಯುಳ್ಳವನಾಗಿರು. ನಿನ್ನ ಜನ ರಾದ ಇಸ್ರಾಯೇಲ್ಯರ ಮೇಲೆ ನಿರ್ದೋಷವಾದ ರಕ್ತಾಪರಾಧವನ್ನು ಹೊರಿಸಬೇಡ ಎಂಬದೇ. ಆ ರಕ್ತಾಪರಾಧವು ಅವರಿಗೆ ಕ್ಷಮಿಸಲ್ಪಡುವದು. ಈ ಪ್ರಕಾರ ನೀನು ಕರ್ತನ ಮುಂದೆ ಸರಿಯಾದದ್ದನ್ನು ಮಾಡಿದರೆ ರಕ್ತಾಪರಾಧವನ್ನು ನಿನ್ನಿಂದ ತೆಗೆದುಹಾಕುವಿ.
- Genesis 9:5–6 ಆದಿಕಾಂಡ 9:5–6ಇದಲ್ಲದೆ ನಿಮ್ಮ ಪ್ರಾಣಗಳಿಗೋಸ್ಕರ ನಿಮ್ಮ ರಕ್ತವನ್ನು ನಾನು ಖಂಡಿತವಾಗಿಯೂ ವಿಚಾರಿಸುವೆನು. ಎಲ್ಲಾ ಮೃಗಗಳಿಂದ ಅದನ್ನು ವಿಚಾರಿಸುವೆನು. ಮನುಷ್ಯನ ಪ್ರಾಣವನ್ನು ಮನುಷ್ಯನಿಂದಲೂ ಅವ ನವನ ಸಹೋದರನಿಂದಲೂ ವಿಚಾರಿಸುವೆನು. ಯಾವನು ಮನುಷ್ಯನ ರಕ್ತವನ್ನು ಸುರಿಸುವನೋ ಅವನ ರಕ್ತವು ಮನುಷ್ಯನಿಂದಲೇ ಸುರಿಸಲ್ಪಡುವದು. ಯಾಕಂದರೆ ದೇವರು ತನ್ನ ಸ್ವರೂಪದಲ್ಲಿ ಮನುಷ್ಯ ನನ್ನು ಉಂಟುಮಾಡಿದನು.
- Matthew 5:38 ಮತ್ತಾಯನು 5:38ಇದಲ್ಲದೆ--ಕಣ್ಣಿಗೆ ಪ್ರತಿಯಾಗಿ ಕಣ್ಣನ್ನೂ ಹಲ್ಲಿಗೆ ಪ್ರತಿಯಾಗಿ ಹಲ್ಲನ್ನೂ ತೆಗಿಸು ಎಂದು ಹೇಳಿರುವದನ್ನು ನೀವು ಕೇಳಿದ್ದೀರಿ.
- Job 8:8–10 ಯೋಬನು 8:8–10ದಯಮಾಡಿ ಪೂರ್ವಿಕರನ್ನು ವಿಚಾರಿಸು; ಅವರ ಪಿತೃಗಳು ಕಂಡುಕೊಂಡದನ್ನು ಗಮನಿಸು. ನಾವು ನಿನ್ನೆ ಹುಟ್ಟಿದವರೂ ಏನೂ ಅರಿಯವದವರೂ ಆಗಿ ದ್ದೇವೆ; ನಮ್ಮ ದಿವಸಗಳು ಭೂಮಿಯ ಮೇಲೆ ನೆರಳಿ ನಂತಿವೆ. ಅವರು ನಿನಗೆ ಬೋಧಿಸುವದಿಲ್ಲವೋ? ನಿನ್ನೊಂದಿಗೆ ಮಾತನಾಡುವದಿಲ್ಲವೋ? ತಮ್ಮ ಮಾತು ಗಳನ್ನು ಹೃದಯದೊಳಗಿಂದ ಹೊರತರುವದಿಲ್ಲವೋ?
- Matthew 5:33 ಮತ್ತಾಯನು 5:33ನೀನು ಸುಳ್ಳಾಣೆ ಇಡಬೇಡ; ಆದರೆ ನಿನ್ನ ಪ್ರಮಾಣಗಳನ್ನು ಕರ್ತನಿಗೆ ಸಲ್ಲಿಸಬೇಕು ಎಂದು ಪೂರ್ವಿಕರು ಹೇಳಿರುವದನ್ನು ನೀವು ಕೇಳಿದ್ದೀರಿ.
- Matthew 5:27 ಮತ್ತಾಯನು 5:27ವ್ಯಭಿಚಾರ ಮಾಡಬಾರದು ಎಂದು ಪೂರ್ವಿಕರು ಹೇಳಿರುವದನ್ನು ನೀವು ಕೇಳಿದ್ದೀರಿ;
- Numbers 35:12 ಅರಣ್ಯಕಾಂಡ 35:12ಕೊಂದವನು ಸಭೆಯ ಮುಂದೆ ನ್ಯಾಯತೀರ್ಪಿಗೆ ನಿಲ್ಲುವ ವರೆಗೂ ಸಾಯದ ಹಾಗೆ ಅವು ನಿಮಗೆ ಸೇಡು ತೀರಿಸುವವನ ದೆಸೆಯಿಂದ ಆಶ್ರಯದ ಪಟ್ಟಣಗಳಾಗಿರಬೇಕು.