Matthew · chapter 6 · verse 2
Matthew 6:2 in Kannada
ಆದದರಿಂದ ಕಪಟಿಗಳು ಜನರಿಂದ ಹೊಗಳಿಸಿ ಕೊಳ್ಳಬೇಕೆಂದು ಸಭಾಮಂದಿರಗಳಲ್ಲಿಯೂ ಬೀದಿಗಳ ಲ್ಲಿಯೂ ಮಾಡುವಂತೆ ನೀನು ದಾನ ಮಾಡುವಾಗ ನಿನ್ನ ಮುಂದೆ ತುತ್ತೂರಿಯನ್ನೂದಬೇಡ. ನಾನು ನಿಮಗೆ ನಿಜವಾಗಿ ಹೇಳುವದೇನಂದರೆ--ಅವರು ತಮ್ಮ ಪ್ರತಿಫಲವನ್ನು ಹೊಂದಿದ್ದಾರೆ.
Aadadarinda kapatigalu janarinda hogalisi kollabekendu sabhaamandiragalalliyoo beedigala lliyoo maaduvante neenu daana maaduvaaga ninna munde tuttooriyannoodabeda. Naanu nimage nijavaagi heluvadenandare--avaru tamma pratiphalavannu hondiddaare.
Matthew 6:2 in English
- King James Version (KJV)
- Therefore when thou doest [thine] alms, do not sound a trumpet before thee, as the hypocrites do in the synagogues and in the streets, that they may have glory of men. Verily I say unto you, They have their reward.
- World English Bible (WEB)
- Therefore, when you do merciful deeds, don’t sound a trumpet before yourself, as the hypocrites do in the synagogues and in the streets, that they may get glory from men. Most certainly I tell you, they have received their reward.
- American Standard Version (ASV)
- When therefore thou doest alms, sound not a trumpet before thee, as the hypocrites do in the synagogues and in the streets, that they may have glory of men. Verily I say unto you, They have received their reward.
- Bible in Basic English (BBE)
- When then you give money to the poor, do not make a noise about it, as the false-hearted men do in the Synagogues and in the streets, so that they may have glory from men. Truly, I say to you, They have their reward.
- Darby Translation (DBY)
- When therefore thou doest alms, sound not a trumpet before thee, as the hypocrites do in the synagogues and in the streets, so that they may have glory from men. Verily I say unto you, They have their reward.
- Webster's Bible (WBS)
- Therefore, when thou doest [thy] alms, do not sound a trumpet before thee, as the hypocrites do, in the synagogues, and in the streets, that they may have glory from men. Verily, I say to you, they have their reward.
- Young's Literal Translation (YLT)
- whenever, therefore, thou mayest do kindness, thou mayest not sound a trumpet before thee as the hypocrites do, in the synagogues, and in the streets, that they may have glory from men; verily I say to you — they have their reward!
Read in context
- 1ಜನರು ನೋಡಲಿ ಎಂದು ನೀವು ನಿಮ್ಮ ದಾನವನ್ನು ಅವರ ಮುಂದೆ ಮಾಡದಂತೆ ಎಚ್ಚರಿಕೆ ತಂದುಕೊಳ್ಳಿರಿ; ಇಲ್ಲವಾದರೆ ಪರಲೋಕ ದಲ್ಲಿರುವ ನಿಮ್ಮ ತಂದೆಯಿಂದ ನಿಮಗೆ ಪ್ರತಿಫಲ ಸಿಗಲಾರದು.
- 2ಆದದರಿಂದ ಕಪಟಿಗಳು ಜನರಿಂದ ಹೊಗಳಿಸಿ ಕೊಳ್ಳಬೇಕೆಂದು ಸಭಾಮಂದಿರಗಳಲ್ಲಿಯೂ ಬೀದಿಗಳ ಲ್ಲಿಯೂ ಮಾಡುವಂತೆ ನೀನು ದಾನ ಮಾಡುವಾಗ ನಿನ್ನ ಮುಂದೆ ತುತ್ತೂರಿಯನ್ನೂದಬೇಡ. ನಾನು ನಿಮಗೆ ನಿಜವಾಗಿ ಹೇಳುವದೇನಂದರೆ--ಅವರು ತಮ್ಮ ಪ್ರತಿಫಲವನ್ನು ಹೊಂದಿದ್ದಾರೆ.
- 3ಆದರೆ ನೀನು ದಾನಮಾಡುವಾಗ ನಿನ್ನ ಬಲಗೈ ಮಾಡುವದು ನಿನ್ನ ಎಡಗೈಗೆ ತಿಳಿಯದಿರಲಿ.
- 4ಹೀಗೆ ನಿನ್ನ ದಾನವು ಅಂತರಂಗದಲ್ಲಿರುವದು; ಮತ್ತು ಅಂತರಂಗದಲ್ಲಿ ನೋಡುವ ನಿನ್ನ ತಂದೆಯು ತಾನೇ ಬಹಿರಂಗವಾಗಿ ನಿನಗೆ ಪ್ರತಿಫಲ ಕೊಡುವನು.
Cross references
- Matthew 6:5 ಮತ್ತಾಯನು 6:5ನೀನು ಪ್ರಾರ್ಥನೆ ಮಾಡುವಾಗ ಕಪಟಿಗಳಂತೆ ಇರಬೇಡ; ಯಾಕಂದರೆ ಜನರು ನೋಡುವಂತೆ ಸಭಾಮಂದಿರಗಳಲ್ಲಿಯೂ ಬೀದಿಗಳ ಮೂಲೆಗಳ ಲ್ಲಿಯೂ ನಿಂತು ಪ್ರಾರ್ಥನೆಮಾಡುವದನ್ನು ಅವರು ಪ್ರೀತಿಸುತ್ತಾರೆ. ನಾನು ನಿಮಗೆ ನಿಜವಾಗಿ ಹೇಳುವ ದೇನಂದರೆ--ಅವರು ತಮ್ಮ ಪ್ರತಿಫಲವನ್ನು ಹೊಂದಿ ದ್ದಾರೆ.
- 2 Corinthians 9:6–15 2 ಕೊರಿಂಥದವರಿಗೆ 9:6–15ಆದರೆ--ಸ್ವಲ್ಪವಾಗಿ ಬಿತ್ತುವವನು (ಪೈರನ್ನು) ಸ್ವಲ್ಪವಾಗಿ ಕೊಯ್ಯುವನು; ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿಯೇ ಕೊಯ್ಯುವನು ಎಂದು ನಾನು ಹೇಳು ತ್ತೇನೆ. ಪ್ರತಿಯೊಬ್ಬನು ತನ್ನ ಹೃದಯದಲ್ಲಿ ನಿರ್ಣಯಿಸಿ ಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ ಯಾರೂ ಕೊಡಬಾರದು; ಯಾಕಂದರೆ ಸಂತೋಷವಾಗಿ ಕೊಡುವವನನ್ನು ದೇವರು ಪ್ರೀತಿ ಮಾಡುತ್ತಾನೆ. ದೇವರು ಸಕಲ ವಿಧವಾದ ಕೃಪೆಯನ್ನು ನಿಮಗೆ ಧಾರಾಳವಾಗಿ ಅನುಗ್ರಹಿಸುವದಕ್ಕೆ ಶಕ್ತನಾದ್ದರಿಂದ ನೀವು ಯಾವಾ ಗಲೂ ಎಲ್ಲಾ ವಿಷಯಗಳಲ್ಲಿ ಪರಿಪೂರ್ಣತೆ ಯುಳ್ಳವರಾಗಿ ಸಕಲಸತ್ಕಾರ್ಯಗಳನ್ನು ಹೇರಳವಾಗಿ ಮಾಡುವವರಾಗಿರುವಿರಿ. (ಬರೆದಿರುವ ಪ್ರಕಾರ--ಆತನು ಬಡವರಿಗೆ ಧಾರಾಳವಾಗಿ ಹಂಚಿಕೊಟ್ಟನು; ಆತನ ನೀತಿಯು ಸದಾಕಾಲವೂ ಇರುವದು ಎಂಬದೇ. ಬಿತ್ತುವವನಿಗೆ ಬೀಜವನ್ನೂ ತಿನ್ನುವವನಿಗೆ ಆಹಾರ ವನ್ನೂ ಕೊಡುವಾತನು ನಿಮಗೂ ಬಿತ್ತುವದಕ್ಕೆ ಬೀಜವನ್ನು ಕೊಟ್ಟು ಹೆಚ್ಚಿಸಿ ನಿಮ್ಮ ನೀತಿಯಿಂದಾದ ಕಾರ್ಯಗಳ ಫಲಗಳನ್ನು ವೃದ್ಧಿಪಡಿಸುವನು.) ಹೀಗೆ ನೀವು ಎಲ್ಲಾ ವಿಷಯಗಳಲ್ಲಿ ಐಶ್ವರ್ಯವಂತರಾಗಿದ್ದು ಉದಾರವಾಗಿ ಕೊಡಲು ಶಕ್ತರಾಗುವಿರಿ; ಅದು ನಮ್ಮ ಮೂಲಕ ದೇವರಿಗೆ ಕೃತಜ್ಞತಾಸ್ತುತಿಯನ್ನುಂಟು ಮಾಡುವದು. ಹೇಗಂದರೆ ಈ ನಿಮ್ಮ ಸೇವೆಯ ಪರಿಚರ್ಯವು ಪರಿಶುದ್ಧರ ಕೊರತೆಗಳನ್ನು ನೀಗು ವದು ಮಾತ್ರವಲ್ಲದೆ ಅನೇಕರಿಂದ ದೇವರಿಗೆ ಕೃತಜ್ಞತಾಸ್ತುತಿಯನ್ನು ಹುಟ್ಟಿಸುವದು. ಈ ಸಹಾಯ ದಿಂದ ತೋರಿಬಂದ ನಿಮ್ಮ ಯೋಗ್ಯ ಭಾವವನ್ನು ಅವರು ನೋಡುವಾಗ ನೀವು ಕ್ರಿಸ್ತನ ಸುವಾರ್ತೆಗೆ ವಿಧೇಯರಾದದ್ದರಿಂದಲೂ ತಮಗೂ ಎಲ್ಲರಿಗೂ ನೀವು ಉದಾರವಾಗಿ ಸಹಾಯ ಮಾಡಿದ್ದರಿಂದಲೂ ದೇವರನ್ನು ಕೊಂಡಾಡುವರು. ಇದಲ್ಲದೆ ನಿಮ್ಮಲ್ಲಿ ರುವ ದೇವರ ಅಪಾರವಾದ ಕೃಪೆಯ ನಿಮಿತ್ತ ಅವರು ಪ್ರಾರ್ಥನೆ ಮಾಡುವವರಾಗಿ ನಿಮಗೋಸ್ಕರ ಹಂಬಲಿ ಸುತ್ತಾರೆ.ವರ್ಣಿಸಲಶಕ್ಯವಾದ ದೇವರದಾನಕ್ಕಾಗಿ ಆತನಿಗೆ ಸ್ತೋತ್ರವಾಗಲಿ. ವರ್ಣಿಸಲಶಕ್ಯವಾದ ದೇವರದಾನಕ್ಕಾಗಿ ಆತನಿಗೆ ಸ್ತೋತ್ರವಾಗಲಿ.
- Matthew 6:16 ಮತ್ತಾಯನು 6:16ಇದಲ್ಲದೆ ನೀವು ಉಪವಾಸ ಮಾಡುವಾಗ ಕಪಟಿಗಳ ಹಾಗೆ ವ್ಯಸನದ ಮುಖ ಮಾಡಿಕೊಳ್ಳ ಬೇಡಿರಿ. ಯಾಕಂದರೆ ತಾವು ಉಪವಾಸವಾಗಿ ದ್ದೇವೆಂದು ಜನರಿಗೆ ತೋರುವಂತೆ ಅವರು ತಮ್ಮ ಮುಖಗಳನ್ನು ವಿಕಾರ ಮಾಡಿಕೊಳ್ಳುತ್ತಾರೆ. ನಾನು ನಿಮಗೆ ನಿಜವಾಗಿ ಹೇಳುವದೇನಂದರೆ--ಅವರು ತಮ್ಮ ಪ್ರತಿ
- John 5:41 ಯೋಹಾನನು 5:41ನಾನು ಮನುಷ್ಯರಿಂದ ಮಾನವನ್ನು ಅಂಗೀಕರಿ ಸುವದಿಲ್ಲ.
- Hebrews 13:16 ಇಬ್ರಿಯರಿಗೆ 13:16ಇದಲ್ಲದೆ ಒಳ್ಳೆಯದನ್ನು ಮಾಡುವದನ್ನೂ ಉದಾರವಾಗಿ ಕೊಡುವದನ್ನೂ ಮರೆಯಬೇಡಿರಿ; ಇವೇ ದೇವರಿಗೆ ಮೆಚ್ಚಿಕೆಯಾದ ಯಜ್ಞಗಳು.
- 1 John 3:17–19 1 ಯೋಹಾನನು 3:17–19ಆದರೆ ಈ ಲೋಕದ ಸಂಪತ್ತುಳ್ಳ ಯಾವನಾದರೂ ಕೊರತೆಯಲ್ಲಿರುವ ತನ್ನ ಸಹೋದರನನ್ನು ನೋಡಿ ಕರುಣಿಸದೆ ಬಿಟ್ಟರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರುವದು ಹೇಗೆ? ನನ್ನ ಚಿಕ್ಕ ಮಕ್ಕಳೇ, ನೀವು ಮಾತಿನಿಂದಾಗಲಿ ನಾಲಿಗೆಯಿಂದಾಗಲಿ ಪ್ರೀತಿಸುವವರಾಗಿರದೆ ಕ್ರಿಯೆಯಲ್ಲಿಯೂ ಸತ್ಯದ ಲ್ಲಿಯೂ ಪ್ರೀತಿಸುವವರಾಗಿರಬೇಕು. ಸತ್ಯಕ್ಕೆ ಸಂಬಂಧಪಟ್ಟವರೆಂಬದು ಇದರಿಂದಲೇ ನಮಗೆ ತಿಳಿಯುತ್ತದೆ; ಆತನ ಸಮಕ್ಷಮದಲ್ಲಿ ನಮ್ಮ ಹೃದಯಗಳನ್ನು ನಿಶ್ಚಯಪಡಿಸಿಕೊಳ್ಳುತ್ತೇವೆ.
- James 2:15–16 ಯಾಕೋಬನು 2:15–16ಒಬ್ಬ ಸಹೋದರನಿಗೆ ಇಲ್ಲವೆ ಒಬ್ಬ ಸಹೋದರಿಗೆ ಬಟ್ಟೆಯೂ ಆ ದಿನದ ಆಹಾರವೂ ಇಲ್ಲದಿರುವಾಗ ನಿಮ್ಮಲ್ಲಿ ಒಬ್ಬನು ಅವರಿಗೆ ದೇಹಕ್ಕೆ ಬೇಕಾದವುಗಳನ್ನು ಕೊಡದೆ--ಸಮಾಧಾನದಿಂದ ಹೋಗಿರಿ, ಬೆಂಕಿಕಾಯಿಸಿಕೊಳ್ಳಿರಿ, ಹೊಟ್ಟೆತುಂಬಿಸಿ ಕೊಳ್ಳಿರಿ ಎಂದು ಹೇಳಿದರೆ ಪ್ರಯೋಜನವೇನು?
- Luke 20:46 ಲೂಕನು 20:46ನಿಲುವಂಗಿಗಳನ್ನು ತೊಟ್ಟುಕೊಂಡು ತಿರುಗಾಡುವದಕ್ಕೆ ಬಯಸುವವರೂ ಸಂತೆಗಳಲ್ಲಿ ವಂದನೆಗಳನ್ನೂ ಸಭಾಮಂದಿರಗಳಲ್ಲಿ ಅತ್ಯುನ್ನತ ಸ್ಥಾನ ಗಳನ್ನೂ ಔತಣಗಳಲ್ಲಿ ಮುಖ್ಯಸ್ಥಾನಗಳನ್ನೂ ಪ್ರೀತಿಸುವ ವರಾದ ಶಾಸ್ತ್ರಿಗಳ ವಿಷಯದಲ್ಲಿ ಎಚ್ಚರಿಕೆಯಾಗಿರ್ರಿ;ಇವರು ವಿಧವೆಯರ ಮನೆಗಳನ್ನು ನುಂಗಿ ತೋರಿಕೆ ಗಾಗಿ ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತಾರೆ; ಇವರೇ ಹೆಚ್ಚಾದ ದಂಡನೆಯನ್ನು ಹೊಂದುವರು ಅಂದನು.
- John 7:18 ಯೋಹಾನನು 7:18ತನ್ನ ವಿಷಯವಾಗಿ ತಾನೇ ಮಾತನಾಡುವವನು ತನ್ನ ಸ್ವಂತ ಮಹಿಮೆಯನ್ನು ಹುಡುಕುತ್ತಾನೆ; ಆದರೆ ತನ್ನನ್ನು ಕಳುಹಿಸಿದಾತನ ಮಹಿಮೆಯನ್ನು ಹುಡುಕುವಾತನೇ ಸತ್ಯವಂತನು; ಆತ ನಲ್ಲಿ ಅನೀತಿಯಿಲ್ಲ.
- 1 Peter 4:11 1 ಪೇತ್ರನು 4:11ಒಬ್ಬನು ಬೋಧಿಸು ವವನಾದರೆ ದೈವೋಕ್ತಿಗಳನ್ನು ನುಡಿಯುವವನಾಗಿ ಬೋಧಿಸಲಿ. ಒಬ್ಬನು ಸೇವೆ ಮಾಡುವವನಾದರೆ ದೇವರಿಂದ ಶಕ್ತಿಯನ್ನು ಹೊಂದಿದವನಾಗಿ ಮಾಡಲಿ. ಇದರಿಂದ ಎಲ್ಲಾದರಲ್ಲಿ ಯೇಸು ಕ್ರಿಸ್ತನ ಮೂಲಕ ದೇವರಿಗೆ ಮಹಿಮೆ ಉಂಟಾಗುವದು. ಯೇಸು ಕ್ರಿಸ್ತನಿಗೆ ಸ್ತೋತ್ರವೂ ಆಧಿಪತ್ಯವೂ
- Psalm 37:21 ಕೀರ್ತನೆಗಳು 37:21ದುಷ್ಟನು ಸಾಲಮಾಡಿ ತಿರಿಗಿ ಸಲ್ಲಿಸುವದಿಲ್ಲ; ನೀತಿವಂತನು ದಯಾಳುವಾಗಿ ಕೊಡುತ್ತಾನೆ.
- Hosea 8:1 ಹೋಶೇಯ 8:1ನಿನ್ನ ಬಾಯಿಗೆ ತುತೂರಿಯನ್ನು ಇಟ್ಟುಕೋ, ಅವರು ನನ್ನ ಒಡಂಬಡಿಕೆಯನ್ನು ವಿಾರಿ ನನ್ನ ನ್ಯಾಯಪ್ರಮಾಣಕ್ಕೆ ವಿರುದ್ಧವಾಗಿ ಅಪರಾಧ ಮಾಡಿದ್ದರಿಂದ ಅವನು ಹದ್ದಿನ ಹಾಗೆ ಕರ್ತನ ಆಲಯಕ್ಕೆ ವಿರುದ್ಧವಾಗಿ ಬರುತ್ತಾನೆ.