Matthew · chapter 6 · verse 4
Matthew 6:4 in Kannada
ಹೀಗೆ ನಿನ್ನ ದಾನವು ಅಂತರಂಗದಲ್ಲಿರುವದು; ಮತ್ತು ಅಂತರಂಗದಲ್ಲಿ ನೋಡುವ ನಿನ್ನ ತಂದೆಯು ತಾನೇ ಬಹಿರಂಗವಾಗಿ ನಿನಗೆ ಪ್ರತಿಫಲ ಕೊಡುವನು.
Heege ninna daanavu antarangadalliruvadu; mattu antarangadalli noduva ninna tandeyu taane bahirangavaagi ninage pratiphala koduvanu.
Matthew 6:4 in English
- King James Version (KJV)
- That thine alms may be in secret: and thy Father which seeth in secret himself shall reward thee openly.
- World English Bible (WEB)
- so that your merciful deeds may be in secret, then your Father who sees in secret will reward you openly.
- American Standard Version (ASV)
- that thine alms may be in secret: and thy Father who seeth in secret shall recompense thee.
- Bible in Basic English (BBE)
- So that your giving may be in secret; and your Father, who sees in secret, will give you your reward.
- Darby Translation (DBY)
- so that thine alms may be in secret, and thy Father who sees in secret will render [it] to thee.
- Webster's Bible (WBS)
- That thy alms may be in secret; and thy Father who seeth in secret, himself will reward thee openly.
- Young's Literal Translation (YLT)
- that thy kindness may be in secret, and thy Father who is seeing in secret Himself shall reward thee manifestly.
Read in context
- 2ಆದದರಿಂದ ಕಪಟಿಗಳು ಜನರಿಂದ ಹೊಗಳಿಸಿ ಕೊಳ್ಳಬೇಕೆಂದು ಸಭಾಮಂದಿರಗಳಲ್ಲಿಯೂ ಬೀದಿಗಳ ಲ್ಲಿಯೂ ಮಾಡುವಂತೆ ನೀನು ದಾನ ಮಾಡುವಾಗ ನಿನ್ನ ಮುಂದೆ ತುತ್ತೂರಿಯನ್ನೂದಬೇಡ. ನಾನು ನಿಮಗೆ ನಿಜವಾಗಿ ಹೇಳುವದೇನಂದರೆ--ಅವರು ತಮ್ಮ ಪ್ರತಿಫಲವನ್ನು ಹೊಂದಿದ್ದಾರೆ.
- 3ಆದರೆ ನೀನು ದಾನಮಾಡುವಾಗ ನಿನ್ನ ಬಲಗೈ ಮಾಡುವದು ನಿನ್ನ ಎಡಗೈಗೆ ತಿಳಿಯದಿರಲಿ.
- 4ಹೀಗೆ ನಿನ್ನ ದಾನವು ಅಂತರಂಗದಲ್ಲಿರುವದು; ಮತ್ತು ಅಂತರಂಗದಲ್ಲಿ ನೋಡುವ ನಿನ್ನ ತಂದೆಯು ತಾನೇ ಬಹಿರಂಗವಾಗಿ ನಿನಗೆ ಪ್ರತಿಫಲ ಕೊಡುವನು.
- 5ನೀನು ಪ್ರಾರ್ಥನೆ ಮಾಡುವಾಗ ಕಪಟಿಗಳಂತೆ ಇರಬೇಡ; ಯಾಕಂದರೆ ಜನರು ನೋಡುವಂತೆ ಸಭಾಮಂದಿರಗಳಲ್ಲಿಯೂ ಬೀದಿಗಳ ಮೂಲೆಗಳ ಲ್ಲಿಯೂ ನಿಂತು ಪ್ರಾರ್ಥನೆಮಾಡುವದನ್ನು ಅವರು ಪ್ರೀತಿಸುತ್ತಾರೆ. ನಾನು ನಿಮಗೆ ನಿಜವಾಗಿ ಹೇಳುವ ದೇನಂದರೆ--ಅವರು ತಮ್ಮ ಪ್ರತಿಫಲವನ್ನು ಹೊಂದಿ ದ್ದಾರೆ.
- 6ಆದರೆ ನೀನು ಪ್ರಾರ್ಥನೆ ಮಾಡುವಾಗ ನಿನ್ನ ಕೋಣೆಯೊಳಕ್ಕೆ ಹೋಗಿ ಬಾಗಿಲನ್ನು ಮುಚ್ಚಿ ಅಂತರಂಗದಲ್ಲಿರುವ ನಿನ್ನ ತಂದೆಗೆ ಪ್ರಾರ್ಥನೆಮಾಡು; ಆಗ ಅಂತರಂಗದಲ್ಲಿ ನೋಡುವ ನಿನ್ನ ತಂದೆಯು ಬಹಿರಂಗವಾಗಿ ನಿನಗೆ ಪ್ರತಿಫಲ ಕೊಡುವನು.
Cross references
- Matthew 6:18 ಮತ್ತಾಯನು 6:18ಆಗ ನೀನು ಉಪವಾಸಮಾಡುತ್ತೀ ಎಂದು ಜನರಿಗೆ ಕಾಣದಿದ್ದರೂ ಅಂತರಂಗದಲ್ಲಿರುವ ನಿನ್ನ ತಂದೆಗೆ ಕಾಣುವದು. ಮತ್ತು ಅಂತರಂಗದಲ್ಲಿ ನೋಡುವ ನಿನ್ನ ತಂದೆಯು ಬಹಿರಂಗವಾಗಿ ನಿನಗೆ ಪ್ರತಿಫಲ ಕೊಡುವನು.
- Matthew 6:6 ಮತ್ತಾಯನು 6:6ಆದರೆ ನೀನು ಪ್ರಾರ್ಥನೆ ಮಾಡುವಾಗ ನಿನ್ನ ಕೋಣೆಯೊಳಕ್ಕೆ ಹೋಗಿ ಬಾಗಿಲನ್ನು ಮುಚ್ಚಿ ಅಂತರಂಗದಲ್ಲಿರುವ ನಿನ್ನ ತಂದೆಗೆ ಪ್ರಾರ್ಥನೆಮಾಡು; ಆಗ ಅಂತರಂಗದಲ್ಲಿ ನೋಡುವ ನಿನ್ನ ತಂದೆಯು ಬಹಿರಂಗವಾಗಿ ನಿನಗೆ ಪ್ರತಿಫಲ ಕೊಡುವನು.
- Jeremiah 17:10 ಯೆರೆಮೀಯ 17:10ಕರ್ತನಾದ ನಾನೇ ಹೃದಯ ವನ್ನು ಪರೀಕ್ಷಿಸುತ್ತೇನೆ; ಅಂತರಿಂದ್ರಿಯಗಳನ್ನು ಶೋಧಿ ಸುತ್ತೇನೆ. ಒಬ್ಬೊಬ್ಬನಿಗೆ ಅವನವನ ಮಾರ್ಗಗಳ ಪ್ರಕಾರವೂ ಅವನ ಕ್ರಿಯೆಗಳ ಫಲದ ಪ್ರಕಾರವೂ (ಪ್ರತಿಫಲ) ಕೊಡುತ್ತೇನೆ.
- Luke 14:14 ಲೂಕನು 14:14ಆಗ ಅವರು ನಿನಗೆ ಪ್ರತ್ಯುಪಕಾರ ಮಾಡುವದಕ್ಕೆ ಆಗದಿರುವ ದರಿಂದ ನೀನು ಧನ್ಯನಾಗುವಿ. ಯಾಕಂದರೆ ನೀತಿವಂತರ ಪುನರುತ್ಥಾನದಲ್ಲಿ ನಿನಗೆ ಪ್ರತ್ಯುಪಕಾರವಾಗುವದು.
- Psalm 44:21 ಕೀರ್ತನೆಗಳು 44:21ದೇವರು ಅದನ್ನು ವಿಚಾರಿಸನೋ? ಆತನು ಹೃದಯದ ಮರ್ಮ ಗಳನ್ನು ತಿಳಿದಿದ್ದಾನೆ.
- Matthew 25:34–40 ಮತ್ತಾಯನು 25:34–40ಆಗ ಅರಸನು ತನ್ನ ಬಲಗಡೆಯಲ್ಲಿ ರುವವರಿಗೆ--ನನ್ನ ತಂದೆಯಿಂದ ಆಶೀರ್ವಾದ ಹೊಂದಿದವರೇ, ನೀವು ಬನ್ನಿರಿ; ಭೂಲೋಕಕ್ಕೆ ಅಸ್ತಿ ವಾರ ಹಾಕಿದಂದಿನಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಬಾಧ್ಯವಾಗಿ ಹೊಂದಿರಿ; ಯಾಕಂದರೆ ನಾನು ಹಸಿದಿದ್ದೆನು, ನೀವು ನನಗೆ ಊಟವನ್ನು ಕೊಟ್ಟಿರಿ; ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯುವದಕ್ಕೆ ಕೊಟ್ಟಿರಿ; ನಾನು ಪರದೇಶಿಯಾಗಿ ದ್ದೆನು, ನೀವು ನನ್ನನ್ನು ಒಳಕ್ಕೆ ಸೇರಿಸಿಕೊಂಡಿರಿ; ಬಟ್ಟೆಯಿಲ್ಲದವನಾಗಿದ್ದೆನು, ನೀವು ನನಗೆ ಉಡಿಸಿ ದಿರಿ; ನಾನು ಅಸ್ವಸ್ಥನಾಗಿದ್ದೆನು; ನೀವು ನನ್ನನ್ನು ಸಂಧಿಸಿ ದಿರಿ; ನಾನು ಸೆರೆಯಲ್ಲಿದ್ದೆನು, ನೀವು ನನ್ನ ಬಳಿಗೆ ಬಂದಿರಿ ಎಂದು ಹೇಳುವನು. ಆಗ ಆ ನೀತಿವಂತರು ಪ್ರತ್ಯುತ್ತರವಾಗಿ ಆತನಿಗೆ--ಕರ್ತನೇ, ಯಾವಾಗ ನೀನು ಹಸಿದದ್ದನ್ನು ನೋಡಿ ನಾವು ನಿನಗೆ ಉಣಿಸಿ ದೆವು? ಇಲ್ಲವೆ ಬಾಯಾರಿದ್ದಾಗ ನಿನಗೆ ಕುಡಿಯುವದಕ್ಕೆ ಕೊಟ್ಟೆವು? ಯಾವಾಗ ನೀನು ಪರದೇಶಿಯಾ ಗಿರುವದನ್ನು ನಾವು ನೋಡಿ ನಿನ್ನನ್ನು ಒಳಕ್ಕೆ ಸೇರಿಸಿ ಕೊಂಡೆವು? ಇಲ್ಲವೆ ಬಟ್ಟೆಯಿಲ್ಲದಿರುವಾಗ ನಿನಗೆ ಉಡಿಸಿದೆವು? ಯಾವಾಗ ನೀನು ಅಸ್ವಸ್ಥನಾಗಿ ಇಲ್ಲವೆ ಸೆರೆಯಲ್ಲಿದ್ದಾಗ ನಾವು ನಿನ್ನನ್ನು ನೋಡಿ ನಿನ್ನ ಬಳಿಗೆ ಬಂದೆವು ಎಂದು ಹೇಳುವರು. ಅದಕ್ಕೆ ಅರಸನು ಪ್ರತ್ಯುತ್ತರವಾಗಿ ಅವರಿಗೆ--ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ನೀವು ಈ ನನ್ನ ಸಹೋದರ ರಲ್ಲಿ ಅತ್ಯಲ್ಪನಾದವನೊಬ್ಬನಿಗೆ ಮಾಡಿದ್ದು ನನಗೂ ಮಾಡಿದಂತಾಯಿತು ಅಂದನು.
- Psalm 139:12 ಕೀರ್ತನೆಗಳು 139:12ಕರ್ತನೇ, ಕತ್ತಲೆಯು ನಿನಗೆ ಕಾಣದಂತೆ ಮುಚ್ಚುವದಿಲ್ಲ; ರಾತ್ರಿಯು ಹಗಲಿನ ಹಾಗೆ ಬೆಳಗುವದು; ಕತ್ತಲೂ ಬೆಳಕೂ ನಿನಗೆ ಒಂದೇ ಆಗಿವೆ.
- Luke 8:17 ಲೂಕನು 8:17ಪ್ರಕಟವಾಗದೆ ಮರೆಯಾಗಿ ರುವಂತದ್ದು ಒಂದೂ ಇರುವದಿಲ್ಲ ತಿಳಿಯಲ್ಪಡದೆಯೂ ಬೈಲಿಗೆ ಬಾರದೆಯೂ ಇರುವ ರಹಸ್ಯವು ಯಾವದೂ ಇಲ್ಲ.
- Jeremiah 23:24 ಯೆರೆಮೀಯ 23:24ನಾನು ಅವನನ್ನು ನೋಡದ ಹಾಗೆ ಒಬ್ಬನು ಮರೆಯಾದ ಸ್ಥಳಗಳಲ್ಲಿ ತನ್ನನ್ನು ಅಡಗಿಸಿಕೊ ಳ್ಳಬಹುದೋ ಎಂದು ಕರ್ತನು ಅನ್ನುತ್ತಾನೆ; ನಾನು ಆಕಾಶದಲ್ಲಿಯೂ ಭೂಮಿಯಲ್ಲಿಯೂ ವ್ಯಾಪಿಸಿರುವವ ನಲ್ಲವೋ? ಎಂದು ಕರ್ತನು ಅನ್ನುತ್ತಾನೆ.
- Psalm 17:3 ಕೀರ್ತನೆಗಳು 17:3ನೀನು ನನ್ನ ಹೃದಯವನ್ನು ಶೋಧಿಸಿದ್ದೀ, ರಾತ್ರಿಯಲ್ಲಿ ನನ್ನನ್ನು ದರ್ಶಿಸಿದ್ದೀ; ನನ್ನನ್ನು ಪುಟಕ್ಕೆ ಹಾಕಿ ಏನೂ ಕಂಡುಕೊಳ್ಳಲಿಲ್ಲ. ನನ್ನ ಬಾಯಿ ಅತಿ ಕ್ರಮಿಸದಂತೆ ನಾನು ನಿಶ್ಚಯ ಮಾಡಿದ್ದೇನೆ.
- 1 Samuel 2:30 1 ಸಮುವೇಲನು 2:30ಆದದರಿಂದ ಇಸ್ರಾಯೇಲಿನ ದೇವರಾದ ಕರ್ತನು ಹೇಳುವ ದೇನಂದರೆ--ನಿನ್ನ ಮನೆಯವರೂ ನಿನ್ನ ತಂದೆಯ ಮನೆಯವರೂ ಎಂದೆಂದಿಗೂ ನನ್ನ ಸನ್ನಿಧಿಯಲ್ಲಿ ನಡೆದುಕೊಳ್ಳುವರೆಂದು ನಾನು ನಿಜವಾಗಿ ಹೇಳಿದ್ದೆನು. ಆದರೆ ಈಗ ಕರ್ತನು ಹೇಳುವದೇನಂದರೆ--ನನಗೆ ಅದು ದೂರವಾಗಿರಲಿ; ಯಾಕಂದರೆ ನನ್ನನ್ನು ಸನ್ಮಾನಿಸು ವವರನ್ನು ನಾನು ಸನ್ಮಾನಿಸುವೆನು; ನನ್ನನ್ನು ತಿರಸ್ಕರಿಸು ವವರನ್ನು ನಾನು ತಿರಸ್ಕರಿಸುವೆನು.
- Psalm 139:1–3 ಕೀರ್ತನೆಗಳು 139:1–3ಕರ್ತನೇ, ನನ್ನನ್ನು ಪರಿಶೋಧಿಸಿ ತಿಳುಕೊಂಡಿದ್ದೀ; ನಾನು ಕೂತು ಕೊಳ್ಳುವದನ್ನೂ ಏಳುವದನ್ನೂ ನೀನು ತಿಳುಕೊಂಡಿದ್ದೀ; ನನ್ನ ಆಲೋಚನೆಯನ್ನು ದೂರದಿಂದ ಗ್ರಹಿಸಿ ಕೊಂಡ್ಡಿದ್ದೀ; ನಾನು ನಡೆಯುವದನ್ನೂ ಮಲಗುವದನ್ನೂ ನೀನು ಶೋಧಿಸಿದ್ದೀ; ನನ್ನ ಮಾರ್ಗಗಳೆಲ್ಲಾ ನಿನಗೆ ಗೊತ್ತಾಗಿವೆ.