Matthew · chapter 7 · verse 1
Matthew 7:1 in Kannada
ನಿಮಗೆ ತೀರ್ಪು ಆಗದಂತೆ ನೀವೂ ತೀರ್ಪು ಮಾಡಬೇಡಿರಿ.
Nimage teerpu aagadante neevoo teerpu maadabediri.
Matthew 7:1 in English
- King James Version (KJV)
- Judge not, that ye be not judged.
- World English Bible (WEB)
- “Don’t judge, so that you won’t be judged.
- American Standard Version (ASV)
- Judge not, that ye be not judged.
- Bible in Basic English (BBE)
- Be not judges of others, and you will not be judged.
- Darby Translation (DBY)
- Judge not, that ye may not be judged;
- Webster's Bible (WBS)
- Judge not, that ye be not judged.
- Young's Literal Translation (YLT)
- 'Judge not, that ye may not be judged,
Read in context
- 1ನಿಮಗೆ ತೀರ್ಪು ಆಗದಂತೆ ನೀವೂ ತೀರ್ಪು ಮಾಡಬೇಡಿರಿ.
- 2ನೀವು ಮಾಡುವ ತೀರ್ಪಿ ನಿಂದಲೇ ನಿಮಗೆ ತೀರ್ಪಾಗುವದು; ಮತ್ತು ನೀವು ಅಳೆಯುವ ಅಳತೆಯಿಂದಲೇ ನಿಮಗೆ ತಿರಿಗಿ ಅಳತೆ ಯಾಗುವದು.
- 3ಮತ್ತು ನಿನ್ನ ಸ್ವಂತ ಕಣ್ಣಿನಲ್ಲಿರುವ ತೊಲೆಯನ್ನು ಯೋಚಿಸದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ರವೆಯನ್ನು ನೀನು ಯಾಕೆ ನೋಡುತ್ತೀ?
Cross references
- Luke 6:37 ಲೂಕನು 6:37ತೀರ್ಪು ಮಾಡಬೇಡಿರಿ; ಆಗ ನಿಮಗೂ ತೀರ್ಪಾಗುವದಿಲ್ಲ. ಖಂಡಿಸಬೇಡಿರಿ; ಆಗ ನಿಮಗೂ ಖಂಡನೆಯಾಗುವದಿಲ್ಲ. ಕ್ಷಮಿಸಿರಿ; ಆಗ ನಿಮಗೂ ಕ್ಷಮಿಸಲ್ಪಡುವದು.
- Romans 2:1–2 ರೋಮಾಪುರದವರಿಗೆ 2:1–2ಆದದರಿಂದ ಓ ಮನುಷ್ಯನೇ, ತೀರ್ಪು ಮಾಡುವ ನೀನು ಯಾವನಾಗಿದ್ದರೂ ನೆವವಿಲ್ಲದವನಾಗಿದ್ದೀ; ಹೇಗೆಂದರೆ ಬೇರೊಬ್ಬನಿಗೆ ತೀರ್ಪು ಮಾಡುವ ನೀನು ಅಂಥವುಗಳನ್ನೇ ಮಾಡುವವ ನಾದ್ದರಿಂದ ನಿನ್ನಷ್ಟಕ್ಕೆ ನೀನೇ ತೀರ್ಪು ಮಾಡಿಕೊಂಡ ಹಾಗಾಯಿತು. ಆದರೆ ಅಂಥವುಗಳನ್ನು ಮಾಡುವವರ ಮೇಲೆ ಸತ್ಯಕ್ಕನುಸಾರವಾಗಿ ದೇವರ ನ್ಯಾಯತೀರ್ಪು ಇದೆಯೆಂದು ನಮಗೆ ನಿಶ್ಚಯವುಂಟು.
- James 4:11–12 ಯಾಕೋಬನು 4:11–12ಸಹೋದರರೇ, ಒಬ್ಬರ ವಿಷಯದಲ್ಲಿ ಒಬ್ಬರು ಕೆಟ್ಟದ್ದನ್ನು ಮಾತನಾಡಬೇಡಿರಿ. ಯಾವನಾದರೂ ತನ್ನ ಸಹೋದರನ ವಿಷಯದಲ್ಲಿ ಕೆಟ್ಟದ್ದಾಗಿ ಮಾತನಾಡಿದರೆ ಅಥವಾ ತನ್ನ ಸಹೋದರನ ವಿಷಯವಾಗಿ ತೀರ್ಪು ಮಾಡಿದರೆ ಅವನು ನ್ಯಾಯಪ್ರಮಾಣದ ವಿಷಯದಲ್ಲಿ ಕೆಟ್ಟದ್ದಾಗಿ ಮಾತನಾಡಿ ನ್ಯಾಯಪ್ರಮಾಣದ ವಿಷಯ ದಲ್ಲಿ ನ್ಯಾಯಪ್ರಮಾಣ ವನ್ನು ಕೊಟ್ಟಾತನು ಒಬ್ಬನೇ; ಆತನೇ ಉಳಿಸುವದಕ್ಕೂ ನಾಶ ಮಾಡುವದಕ್ಕೂ ಶಕ್ತನು. ಹೀಗಿರುವಾಗ ಮತ್ತೊಬ್ಬನ ವಿಷಯದಲ್ಲಿ ತೀರ್ಪುಮಾಡುವದಕ್ಕೆ ನೀನು ಯಾರು?
- Luke 6:41 ಲೂಕನು 6:41ನಿನ್ನ ಸ್ವಂತ ಕಣ್ಣಿನಲ್ಲಿರುವ ತೊಲೆಯನ್ನು ನೀನು ತಿಳಿದುಕೊಳ್ಳದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ರವೆಯನ್ನು ಯಾಕೆ ನೋಡುತ್ತೀ?
- Romans 14:10–13 ರೋಮಾಪುರದವರಿಗೆ 14:10–13ಆದರೆ ನೀನು ನಿನ್ನ ಸಹೋದರನಿಗೆ ತೀರ್ಪುಮಾಡುವದು ಯಾಕೆ? ಇಲ್ಲವೆ ನಿನ್ನ ಸಹೋದರನನ್ನು ಹೀನೈಸುವದು ಯಾಕೆ? ನಾವೆಲ್ಲರೂ ಕ್ರಿಸ್ತನ ನ್ಯಾಯಾಸನದ ಮುಂದೆ ನಿಂತುಕೊಳ್ಳಬೇಕಲ್ಲಾ. ನನ್ನ ಜೀವದಾಣೆ, ಪ್ರತಿಯೊಬ್ಬನು ನನ್ನ ಮುಂದೆ ಮೊಣಕಾಲೂರುವನು ಮತ್ತು ಪ್ರತಿಯೊಂದು ನಾಲಿಗೆಯು ದೇವರಿಗೆ ಅರಿಕೆ ಮಾಡುವದು ಎಂಬದಾಗಿ ಕರ್ತನು ಹೇಳುತ್ತಾನೆ ಎಂದು ಬರೆದದೆ. ಹೀಗಿರಲಾಗಿ ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ವಿಷಯವಾಗಿ ದೇವರಿಗೆ ಲೆಕ್ಕ ಒಪ್ಪಿಸಬೇಕು. ಆದಕಾರಣ ಇನ್ನು ಮೇಲೆ ಒಬ್ಬರ ವಿಷಯದ ಲ್ಲೊಬ್ಬರು ಎಂದಿಗೂ ತೀರ್ಪು ಮಾಡದೆ ಇರೋಣ; ಇದಲ್ಲದೆ ಸಹೋದರನ ಎದುರಿಗೆ ಅಡ್ಡಿಯನ್ನಾಗಲಿ ಎಡೆತಡೆಯನ್ನಾಗಲಿ ಹಾಕಲೇಬಾರದೆಂದು ತೀರ್ಮಾನಿ ಸಿಕೊಳ್ಳಿರಿ.
- Matthew 7:5 ಮತ್ತಾಯನು 7:5ಕಪಟಿ ನೀನು, ಮೊದಲು ನಿನ್ನ ಸ್ವಂತ ಕಣ್ಣಿನೊಳಗಿರುವ ತೊಲೆ ಯನ್ನು ತೆಗೆದು ಹಾಕು; ಆಗ ನಿನ್ನ ಸಹೋದರನ ಕಣ್ಣಿನೊಳಗಿರುವ ರವೆಯನ್ನು ತೆಗೆದು ಹಾಕುವದಕ್ಕೆ ನಿನಗೆ ಚೆನ್ನಾಗಿ ಕಾಣಿಸುವದು.
- 1 Corinthians 4:3–5 1 ಕೊರಿಂಥದವರಿಗೆ 4:3–5ನನಗಾದರೋ ನಿಮ್ಮಿಂದಾಗಲಿ ಮನುಷ್ಯರ ನ್ಯಾಯವಿಚಾರಣೆಯಿಂದಾಗಲಿ ನನಗೆ ನ್ಯಾಯವಿಚಾರಣೆಯಾಗುವದು ಅತ್ಯಲ್ಪವಾಗಿದೆ. ಹೌದು, ನಾನೂ ನನ್ನನ್ನು ವಿಚಾರಿಸಿಕೊಳ್ಳುವದಿಲ್ಲ. ನಾನೇ ನಾನಾಗಿ ಏನೂ ತಿಳಿಯದವನಾಗಿದ್ದೇನೆ; ಆದಾಗ್ಯೂ ಅದರಿಂದ ನಾನು ನೀತಿವಂತನಾಗಲಿಲ್ಲ; ನನ್ನನ್ನು ವಿಚಾರಿಸುವಾತನು ಕರ್ತನೇ. ಆದದರಿಂದ ಕಾಲಕ್ಕೆ ಮೊದಲು ಕರ್ತನು ಬರುವತನಕ ಯಾವದನ್ನೂ ಕುರಿತು ತೀರ್ಪು ಮಾಡಬೇಡಿರಿ; ಆತನು ಕತ್ತಲೆಯ ಲ್ಲಿರುವ ಗುಪ್ತಕಾರ್ಯಗಳನ್ನು ಬೆಳಕಿಗೆ ತರುವನು; ಹೃದಯದ ಯೋಚನೆಗಳನ್ನು ಪ್ರತ್ಯಕ್ಷಪಡಿಸುವನು; ಆಗ ಪ್ರತಿಯೊಬ್ಬನಿಗೆ ಬರತಕ್ಕ ಹೊಗಳಿಕೆಯು ದೇವ ರಿಂದ ಬರುವದು.
- Romans 14:3–4 ರೋಮಾಪುರದವರಿಗೆ 14:3–4ತಿನ್ನುವವನು ತಿನ್ನದವನನ್ನು ಹೀನೈಸಬಾರದು; ತಿನ್ನದವನು ತಿನ್ನುವವ ನನ್ನು ದೋಷಿಯೆಂದು ಎಣಿಸಬಾರದು; ದೇವರೇ ಅವನನ್ನು ಸೇರಿಸಿಕೊಂಡಿದ್ದಾನಲ್ಲಾ. ಮತ್ತೊಬ್ಬನ ಸೇವಕನ ವಿಷಯವಾಗಿ ತೀರ್ಪುಮಾಡುವದಕ್ಕೆ ನೀನು ಯಾರು? ಅವನು ನಿಂತರೂ ಬಿದ್ದರೂ ಅದು ಅವನ ಯಜಮಾನನಿಗೇ ಸೇರಿದ್ದು. ಹೌದು, ಅವನು ನಿಲ್ಲಿಸಲ್ಪಡುವನು; ಅವನನ್ನು ನಿಲ್ಲಿಸುವದಕ್ಕೆ ದೇವರು ಶಕ್ತನಾಗಿದ್ದಾನೆ.
- Matthew 7:2 ಮತ್ತಾಯನು 7:2ನೀವು ಮಾಡುವ ತೀರ್ಪಿ ನಿಂದಲೇ ನಿಮಗೆ ತೀರ್ಪಾಗುವದು; ಮತ್ತು ನೀವು ಅಳೆಯುವ ಅಳತೆಯಿಂದಲೇ ನಿಮಗೆ ತಿರಿಗಿ ಅಳತೆ ಯಾಗುವದು.
- Ezekiel 16:52–56 ಯೆಹೆಜ್ಕೇಲನು 16:52–56ನಿನ್ನ ದೋಷಗಳೇ ನಿನ್ನ ಅಕ್ಕ ತಂಗಿಯರ ಪಕ್ಷವಾಗಿ ನಿಂತಿದ್ದರಿಂದ ನೀನು ನಾಚಿಕೆ ಪಡು; ನೀನು ಅವರಿಗಿಂತ ಅಸಹ್ಯವಾಗಿ ಮಾಡಿದ ನಿನ್ನ ಪಾಪಗಳಿಗೆ ತಕ್ಕ ನಿಂದೆಯನ್ನು ಹೊತ್ತುಕೋ; ಅವರು ನಿನಗಿಂತ ನೀತಿವಂತರು; ಹೌದು, ನೀನು ನಿನ್ನ ಸಹೋದರಿಗಳನ್ನು ನೀತಿವಂತರೆಂದು ತೋರ್ಪಡಿಸಿ ದ್ದರಿಂದ ನೀನೇ ನಾಚಿಕೆಪಟ್ಟು ನಿನ್ನ ನಿಂದೆಯನ್ನು ಹೊತ್ತುಕೋ. ನಾನು ಅವರ ಸೆರೆಯನ್ನೂ ಕುಮಾರ್ತೆಯರ ಸಹಿತವಾದ ಸೊದೋಮಿನ ಸೆರೆಯನ್ನೂ ಕುಮಾರ್ತೆ ಯರ ಸಹಿತವಾದ ಸಮಾರ್ಯದ ಸೆರೆಯನ್ನೂ ತಪ್ಪಿಸುವಾಗ ಅವರೊಂದಿಗೆ ನಿನ್ನ ಸೆರೆಯವರ ಸೆರೆಯನ್ನು ತಪ್ಪಿಸುವೆನು. ನೀನು ನಿನ್ನ ನಿಂದೆಯನ್ನು ಹೊತ್ತು ಕೊಂಡು ಅವರನ್ನು ಆದರಿಸುವಾಗ ನೀನು ಲಜ್ಜೆಪಡುವಿ, ನಾಚಿಕೆಗೊಳ್ಳುವಿ. ಆ ಸಮಾರ್ಯ, ಸೊದೋಮ್ ಎಂಬ ನಿನ್ನ ಅಕ್ಕತಂಗಿಯರೂ ಕುಮಾರ್ತೆಯರೂ ತಮ್ಮ ಪೂರ್ವಸ್ಥಿತಿಗೆ ತಿರುಗುವರು. ನೀನೂ ಕುಮಾರ್ತೆ ಯರೂ ಪೂರ್ವಸ್ಥಿತಿಗೆ ತಿರುಗಿಕೊಳ್ಳುವಿರಿ. ನಿನ್ನ ಸಹೋದರಿಯಾದ ಸೊದೋಮ್ ನಿನ್ನ ಗರ್ವದ ದಿವಸಗಳಲ್ಲಿ ನಿನ್ನ ಬಾಯಿಂದ ಉಚ್ಚರಿಸಲ್ಪಡಲಿ.
- James 3:1 ಯಾಕೋಬನು 3:1ನನ್ನ ಸಹೋದರರೇ, ಬೋಧಕರಾದ ನಮಗೆ ದೊಡ್ಡ ದಂಡನೆಯಾಗುವದೆಂದು ತಿಳಿದುಕೊಂಡು ಬಹುಮಂದಿ ಬೋಧಕರಾಗಬೇಡಿರಿ.
- Isaiah 66:5 ಯೆಶಾಯ 66:5ಕರ್ತನ ವಾಕ್ಯವನ್ನು ಕೇಳಿರಿ, ಆತನ ವಾಕ್ಯಕ್ಕೆ ನಡಗುವವರೇ, ನಿಮ್ಮ ಸಹೋದರರು ನಿಮ್ಮನ್ನು ಹಗೆಮಾಡಿ ನನ್ನ ಹೆಸರಿಗೋಸ್ಕರ ನಿಮ್ಮನ್ನು ಹೊರಗೆ ಹಾಕಿ--ಕರ್ತನು ಮಹಿಮೆ ಹೊಂದಲೆಂದು ಹೇಳಿ ದ್ದಾರೆ; ಆದರೆ ಆತನು ನಿಮ್ಮ ಸಂತೋಷಕ್ಕಾಗಿ ಕಾಣಿಸಿ ಕೊಳ್ಳುವನು; ಅವರು ನಾಚಿಕೆಪಡುವರು.