Matthew · chapter 7 · verse 15
Matthew 7:15 in Kannada
ಕುರಿ ವೇಷ ಹಾಕಿಕೊಂಡು ನಿಮ್ಮ ಬಳಿಗೆ ಬರುವ ಸುಳ್ಳು ಪ್ರವಾದಿಗಳಿಗೆ ಎಚ್ಚರವಾಗಿರ್ರಿ; ಯಾಕಂದರೆ ಅವರು ಒಳಗೆ ದೋಚಿಕೊಳ್ಳುವ ತೋಳಗಳಾಗಿದ್ದಾರೆ.
Kuri vesha haakikondu nimma balige baruva sullu pravaadigalige echcharavaagirri; yaakandare avaru olage dochikolluva tolagalaagiddaare.
Matthew 7:15 in English
- King James Version (KJV)
- Beware of false prophets, which come to you in sheep’s clothing, but inwardly they are ravening wolves.
- World English Bible (WEB)
- “Beware of false prophets, who come to you in sheep’s clothing, but inwardly are ravening wolves.
- American Standard Version (ASV)
- Beware of false prophets, who come to you in sheep’s clothing, but inwardly are ravening wolves.
- Bible in Basic English (BBE)
- Be on the watch for false prophets, who come to you in sheep's clothing, but inside they are cruel wolves.
- Darby Translation (DBY)
- But beware of false prophets, which come to you in sheep's clothing, but within are ravening wolves.
- Webster's Bible (WBS)
- Beware of false prophets, who come to you in sheep's clothing, but inwardly they are ravening wolves.
- Young's Literal Translation (YLT)
- 'But, take heed of the false prophets, who come unto you in sheep's clothing, and inwardly are ravening wolves.
Read in context
- 13ಇಕ್ಕಟ್ಟಾದ ದ್ವಾರದೊಳಗೆ ನೀವು ಪ್ರವೇಶಿಸಿರಿ; ಯಾಕಂದರೆ ನಾಶನಕ್ಕೆ ನಡಿಸುವ ದ್ವಾರವು ಅಗಲವೂ ಮಾರ್ಗವು ವಿಶಾಲವೂ ಆಗಿದೆ. ಅದರೊಳಗೆ ಪ್ರವೇಶಿಸುವವರು ಬಹು ಜನ.
- 14ಜೀವಕ್ಕೆ ನಡಿಸುವ ದ್ವಾರವು ಇಕ್ಕಟ್ಟಾದದ್ದೂ ದಾರಿಯು ಬಿಕ್ಕಟ್ಟಾದದ್ದೂ ಆಗಿದೆ; ಆದದರಿಂದ ಅದನ್ನು ಕಂಡುಕೊಳ್ಳುವವರು ಸ್ವಲ್ಪ ಜನ.
- 15ಕುರಿ ವೇಷ ಹಾಕಿಕೊಂಡು ನಿಮ್ಮ ಬಳಿಗೆ ಬರುವ ಸುಳ್ಳು ಪ್ರವಾದಿಗಳಿಗೆ ಎಚ್ಚರವಾಗಿರ್ರಿ; ಯಾಕಂದರೆ ಅವರು ಒಳಗೆ ದೋಚಿಕೊಳ್ಳುವ ತೋಳಗಳಾಗಿದ್ದಾರೆ.
- 16ಅವರ ಫಲಗಳಿಂದ ನೀವು ಅವರನ್ನು ತಿಳಿದುಕೊಳ್ಳುವಿರಿ. ಜನರು ಮುಳ್ಳುಗಳಲ್ಲಿ ದ್ರಾಕ್ಷೆಯನ್ನೂ ಮದ್ದುಗುಣಿಕೇಗಿಡಗಳಲ್ಲಿ ಅಂಜೂರ ಗಳನ್ನೂ ಕೂಡಿಸುವರೋ?
- 17ಅದರಂತೆಯೇ ಪ್ರತಿ ಯೊಂದು ಒಳ್ಳೆ ಮರವು ಒಳ್ಳೇ ಫಲವನ್ನು ಕೊಡುತ್ತದೆ; ಮತ್ತು ಕೆಟ್ಟ ಮರವು ಕೆಟ್ಟ ಫಲವನ್ನು ಕೊಡುತ್ತದೆ;
Cross references
- 1 John 4:1 1 ಯೋಹಾನನು 4:1ಪ್ರಿಯರೇ, ಅನೇಕ ಸುಳ್ಳುಪ್ರವಾದಿಗಳು ಲೋಕದೊಳಗೆ ಹೋಗಿರುವದರಿಂದ ನೀವು ಎಲ್ಲಾ ಆತ್ಮಗಳನ್ನು ನಂಬದೆ ಆಯಾ ಆತ್ಮಗಳು ದೇವರಿಗೆ ಸಂಬಂಧವಾದವುಗಳೋ ಅಲ್ಲವೋ ಎಂದು ಅವುಗಳನ್ನು ಪರೀಕ್ಷಿಸಬೇಕು.
- Matthew 24:11 ಮತ್ತಾಯನು 24:11ಇದಲ್ಲದೆ ಬಹುಮಂದಿ ಸುಳ್ಳು ಪ್ರವಾದಿಗಳು ಎದ್ದು ಅನೇಕರನ್ನು ಮೋಸಗೊಳಿ ಸುವರು.
- 2 Peter 2:1–3 2 ಪೇತ್ರನು 2:1–3ಆದರೆ ಜನರಲ್ಲಿ ಸುಳ್ಳು ಪ್ರವಾದಿಗಳು ಸಹ ಇದ್ದರು; ಅದೇ ಪ್ರಕಾರ ನಿಮ್ಮಲ್ಲಿಯೂ ಸುಳ್ಳು ಬೋಧಕರು ಇರುವರು. ಅವರು ಪಾಷಾಂಡ ಬೋಧನೆಗಳನ್ನು ರಹಸ್ಯವಾಗಿ ಒಳತರುವವರೂ ತಮ್ಮನ್ನು ಕೊಂಡುಕೊಂಡ ಕರ್ತನನ್ನು ಕೂಡ ತಾವು ಅಲ್ಲಗಳೆಯುವವರೂ ಆಗಿದ್ದು ಫಕ್ಕನೆ ತಮ್ಮ ಅವರ ಕೆಡುಕಿನ ಮಾರ್ಗಗಳನ್ನು ಅನೇಕರು ಅನುಸರಿಸುವರು; ಅವರ ನಿಮಿತ್ತ ಸತ್ಯ ಮಾರ್ಗಕ್ಕೆ ದೂಷಣೆ ಉಂಟಾಗುವದು. ಅವರು ದ್ರವ್ಯಾಶೆಯುಳ್ಳವರಾಗಿ ಕಲ್ಪನೆಯ ಮಾತು ಗಳನ್ನು ಹೇಳುತ್ತಾ ನಿಮ್ಮಿಂದ ಲಾಭವನ್ನು ಸಂಪಾದಿಸ ಬೇಕೆಂದಿರುವರು. ಅಂಥವರಿಗೆ ಬಹಳ ಕಾಲದಿಂದಿದ್ದ ತೀರ್ಪು ತಡವಾಗುವದಿಲ್ಲ. ಅವರಿಗಾಗುವ ನಾಶನವು ತೂಕಡಿಸುವದಿಲ್ಲ.
- Acts 20:29–31 ಅಪೊಸ್ತಲರ ಕೃತ್ಯಗಳು 20:29–31ಯಾಕಂದರೆ ನಾನು ಹೋದ ಮೇಲೆ ಕ್ರೂರವಾದ ತೋಳಗಳು ನಿಮ್ಮೊಳಗೆ ಬರುವ ವೆಂದು ನಾನು ಬಲ್ಲೆನು; ಅವು ಹಿಂಡನ್ನು ಕನಿಕರಿಸು ವದಿಲ್ಲ. ಇದಲ್ಲದೆ ನಿಮ್ಮಲ್ಲಿಯೂ ಕೆಲವರು ಎದ್ದು ವಕ್ರ ಮಾತುಗಳನ್ನಾಡಿ ಶಿಷ್ಯರನ್ನು ತಮ್ಮ ಹಿಂದೆ ಎಳಕೊಳ್ಳುವರು. ಆದಕಾರಣ ನಾನು ಕಣ್ಣೀರಿನಿಂದ ಮೂರು ವರುಷ ಹಗಲಿರುಳು ಎಡೆಬಿಡದೆ ಪ್ರತಿಯೊಬ್ಬ ನನ್ನು ಎಚ್ಚರಿಸಿದೆನೆಂದು ನೀವು ಜ್ಞಾಪಕ ಮಾಡಿಕೊಂಡು ಎಚ್ಚರವಾಗಿರಿ.
- Mark 13:22–23 ಮಾರ್ಕನು 13:22–23ಯಾಕಂದರೆ ಸುಳ್ಳು ಕ್ರಿಸ್ತರೂ ಸುಳ್ಳುಪ್ರವಾದಿಗಳೂ ಎದ್ದು ಸಾಧ್ಯವಾದರೆ ಆರಿಸಿಕೊಂಡವರನ್ನೂ ಮೋಸ ಗೊಳಿಸುವದಕ್ಕೊಸ್ಕರ ಸೂಚಕಕಾರ್ಯಗಳನ್ನು ಅದ್ಭುತ ಕಾರ್ಯಗಳನ್ನು ಮಾಡಿ ತೋರಿಸುವರು. ಆದರೆ ನೀವು ಎಚ್ಚರಿಕೆ ತೆಗೆದುಕೊಳ್ಳಿರಿ; ಇಗೋ, ನಾನು ನಿಮಗೆ ಎಲ್ಲವುಗಳನ್ನು ಮುಂದಾಗಿ ಹೇಳಿದ್ದೇನೆ.
- Deuteronomy 13:1–3 ಧರ್ಮೋಪದೇಶಕಾಂಡ 13:1–3ಪ್ರವಾದಿಯಾಗಲಿ ಕನಸುಗಳನ್ನು ಕಾಣುವವನಾಗಲಿ ನಿಮ್ಮ ಮಧ್ಯದಲ್ಲಿ ಎದ್ದು ನಿನಗೆ ಸೂಚನೆಯನ್ನಾದರೂ ಅದ್ಭುತವನ್ನಾದರೂ ತೋರಿಸಿ ದರೆ ನೀನು ತಿಳಿಯದ ಬೇರೆ ದೇವರುಗಳನ್ನು ಅನುಸರಿಸಿ--ಅವರಿಗೆ ನಾವು ಸೇವೆಮಾಡೋಣ ಎಂದು ಹೇಳಿ ಅವನು ನಿನಗೆ ಹೇಳಿದ ಸೂಚನೆಯೂ ಅದ್ಭುತವೂ ಸಂಭವಿಸಿದರೆ ಆ ಪ್ರವಾದಿಯ ಇಲ್ಲವೆ ಕನಸು ಕಾಣುವವನ ಮಾತುಗಳನ್ನು ಕೇಳಬಾರದು. ನಿಮ್ಮ ದೇವರಾದ ಕರ್ತನು ನಿಮ್ಮನ್ನು ಶೋಧಿಸಿ ನೀವು ನಿಮ್ಮ ಪೂರ್ಣಹೃದಯದಿಂದಲೂ ನಿಮ್ಮ ಪೂರ್ಣ ಪ್ರಾಣದಿಂದಲೂ ನಿಮ್ಮ ದೇವರಾದ ಕರ್ತನನ್ನು ಪ್ರೀತಿ ಮಾಡುತ್ತೀರೇನೋ ಎಂದು ಪರೀಕ್ಷಿಸುತ್ತಾನೆ.
- Colossians 2:8 ಕೊಲೊಸ್ಸೆಯವರಿಗೆ 2:8ಕ್ರಿಸ್ತನನ್ನು ಅನುಸರಿಸದೆ ಮನುಷ್ಯರ ಸಂಪ್ರದಾಯಗಳನ್ನೂ ಪ್ರಾಪಂಚಿಕ ಬಾಲಬೋಧೆಯನ್ನೂ ಅನುಸರಿಸುವವರು ನಿಮ್ಮಲ್ಲಿ ಬಂದು ಮೋಸವಾದ ನಿರರ್ಥಕ ತತ್ವಜ್ಞಾನ ಬೋಧನೆ ಯಿಂದ ನಿಮ್ಮನ್ನು ಕೆಡಿಸಿಬಿಟ್ಟಾರು, ಎಚ್ಚರಿಕೆಯಾಗಿರ್ರಿ.
- 2 Corinthians 11:13–15 2 ಕೊರಿಂಥದವರಿಗೆ 11:13–15ಅಂಥವರು ಸುಳ್ಳು ಅಪೊಸ್ತಲರೂ ಮೋಸಗಾರರಾದ ಕೆಲಸದವರೂ ಕ್ರಿಸ್ತನ ಅಪೊಸ್ತಲರಂತೆ ಕಾಣಿಸಿಕೊಳ್ಳು ವದಕ್ಕೆ ತಮ್ಮನ್ನು ತಾವೇ ಮಾರ್ಪಡಿಸಿಕೊಳ್ಳುವವರೂ ಆಗಿದ್ದಾರೆ. ಇದೇನೂ ಆಶ್ಚರ್ಯವಲ್ಲ; ಯಾಕಂದರೆ ಸೈತಾನನು ಬೆಳಕಿನ ದೂತನಂತೆ ಕಾಣಿಸಿಕೊಳ್ಳುವ ಹಾಗೆ ತನ್ನನ್ನು ತಾನೇ ಮಾರ್ಪಡಿಸಿಕೊಳ್ಳುತ್ತಾನೆ. ಅವನ ಸೇವಕರು ಸಹ ನೀತಿಗೆ ಸೇವಕರಾಗಿ ಕಾಣಿಸಿಕೊಳ್ಳುವದಕ್ಕೆ ಮಾರ್ಪಡಿಸಿಕೊಳ್ಳುವದು ದೊಡ್ಡ ದಲ್ಲ. ಅವರ ಅಂತ್ಯವು ಅವರ ಕೃತ್ಯಗಳಿಗೆ ತಕ್ಕ ಹಾಗೆಯೇ ಆಗುವದು.
- Revelation 19:20 ಪ್ರಕಟನೆ 19:20ಆಗ ಮೃಗವು ಸೆರೆಸಿಕ್ಕಿತು; ಇದಲ್ಲದೆ ಮೃಗದ ಮುಂದೆ ಮಹತ್ಕಾರ್ಯಗಳನ್ನು ಮಾಡಿ ಮೃಗದ ಗುರುತು ಹಾಕಿಸಿಕೊಂಡವರನ್ನೂ ಅದರ ವಿಗ್ರಹವನ್ನು ಆರಾಧಿಸಿದವರನ್ನೂ ಮರುಳುಗೊಳಿಸಿದ ಆ ಸುಳ್ಳು ಪ್ರವಾದಿಯೂ ಆದರ ಜೊತೆಯಲ್ಲಿ ಸೆರೆ ಸಿಕ್ಕಿದನು. ಇವರಿಬ್ಬರೂ ಜೀವಸಹಿತವಾಗಿ ಗಂಧಕ ದಿಂದಮಿಕ್ಕಾದವರು ಆ ಕುದುರೆಯ ಮೇಲೆ ಕೂತಿದ್ದಾತನ ಕತ್ತಿಯಿಂದ ಅಂದರೆ ಆತನ ಬಾಯಿಂದ ಬಂದ ಕತ್ತಿ ಯಿಂದ ಹತರಾದರು; ಹಕ್ಕಿಗಳೆಲ್ಲಾ ಅವರ ಮಾಂಸವನು ಹೊಟ್ಟೆತುಂಬಾ ತಿಂದವು.
- Jude 1:4 ಯೂದನು 1:4ಯಾಕಂದರೆ ಭಕ್ತಿಹೀನರೂ ನಮ್ಮ ದೇವರ ಕೃಪೆಯನ್ನು ನೆವ ಮಾಡಿಕೊಂಡು ನಾಚಿಕೆಗೆಟ್ಟ ಕೃತ್ಯಗಳನ್ನು ನಡಿಸುವವರೂ ನಮ್ಮ ಒಬ್ಬನೇ ಕರ್ತನಾದ ದೇವರನ್ನು ಮತ್ತು ನಮ್ಮ ಕರ್ತನಾದ ಯೇಸು ಕ್ರಿಸ್ತನನ್ನು ಅಲ್ಲಗಳೆಯುವ ಈ ಕೆಲವು ಜನರು ರಹಸ್ಯವಾಗಿ ಒಳಗೆ ಹೊಕ್ಕಿದ್ದಾರೆ; ಇವರು ಈ ದಂ
- Micah 3:11 ಮೀಕ 3:11ಅದರ ಮುಖ್ಯಸ್ಥರು ಲಂಚಕ್ಕೆ ನ್ಯಾಯತೀರಿಸುತ್ತಾರೆ; ಅದರ ಯಾಜಕರು ಸಂಬಳಕ್ಕೆ ಬೋಧಿಸುತ್ತಾರೆ; ಅದರ ಪ್ರವಾ ದಿಗಳು ಹಣಕ್ಕೆ ಶಕುನ ಹೇಳುತ್ತಾರೆ; ಆದರೂ ಕರ್ತನ ಮೇಲೆ ಆತುಕೊಂಡು--ಕರ್ತನು ನಮ್ಮ ಮಧ್ಯದಲ್ಲಿ ಇಲ್ಲವೋ? ನಮ್ಮ ಮೇಲೆ ಕೇಡು ಬರುವದಿಲ್ಲ ಅನ್ನು ತ್ತಾರೆ.ಆದಕಾರಣ ನಿಮ್ಮ ನಿಮಿತ್ತವೇ, ಚೀಯೋನು ಹೊಲದ ಹಾಗೆ ಉಳಲ್ಪಡುವದು; ಯೆರೂಸಲೇಮು ದಿಬ್ಬೆಗಳಾಗುವದು, ಆಲಯದ ಪರ್ವತವು ಅಡವಿಯ ಉನ್ನತ ಸ್ಥಳಗಳ ಹಾಗಾಗುವದು.
- Micah 3:5–7 ಮೀಕ 3:5–7ತನ್ನ ಜನರು ತಪ್ಪುವಂತೆ ಮಾಡುವ ಪ್ರವಾದಿಗಳ ವಿಷಯವಾಗಿ ಕರ್ತನು ಹೀಗೆ ಹೇಳುತ್ತಾನೆ--ಅವರಿಗೆ ತಿನ್ನುವದಕ್ಕೆ ಕೊಡುವಂತವರಿಗೆ--ನಿಮಗೆ ಸಮಾಧಾನವಾಗಲಿ ಎಂದು ಹೇಳುತ್ತಾರೆ; ಆದರೆ ತಮ್ಮ ಬಾಯಿಗೆ ಏನೂ ಕೊಡದವನ ವಿರೋಧವಾಗಿ ಯುದ್ಧಕ್ಕೂ ಅವರು ಸಿದ್ಧರಾಗುವರು. ದರ್ಶನವಿಲ್ಲದ ನಿಮಗೆ ರಾತ್ರಿ ಯಾಗುವದು; ಶಕುನವಿಲ್ಲದೆ ನಿಮಗೆ ಕತ್ತಲಾಗುವದು; ಹೌದು, ಪ್ರವಾದಿಗಳ ಮೇಲೆ ಸೂರ್ಯ ಮುಣುಗು ವದು, ಅವರ ಮೇಲೆ ಹಗಲು ಕತ್ತಲಾಗುವದು. ಆಗ ದರ್ಶಿಗಳು ನಾಚಿಕೆಪಡುವರು, ಶಕುನಗಾರರು ವಿಸ್ಮಯಗೊಳ್ಳುವರು; ಹೌದು, ದೇವರಿಂದ ಉತ್ತರ ವಿಲ್ಲದ ಕಾರಣ ಎಲ್ಲರೂ ತಮ್ಮ ತುಟಿಗಳನ್ನು ಮುಚ್ಚಿ ಕೊಳ್ಳುವರು.