Matthew · chapter 7 · verse 16
Matthew 7:16 in Kannada
ಅವರ ಫಲಗಳಿಂದ ನೀವು ಅವರನ್ನು ತಿಳಿದುಕೊಳ್ಳುವಿರಿ. ಜನರು ಮುಳ್ಳುಗಳಲ್ಲಿ ದ್ರಾಕ್ಷೆಯನ್ನೂ ಮದ್ದುಗುಣಿಕೇಗಿಡಗಳಲ್ಲಿ ಅಂಜೂರ ಗಳನ್ನೂ ಕೂಡಿಸುವರೋ?
Avara phalagalinda neevu avarannu tilidukolluviri. Janaru mullugalalli draaksheyannoo maddugunikegidagalalli anjoora galannoo koodisuvaro?
Matthew 7:16 in English
- King James Version (KJV)
- Ye shall know them by their fruits. Do men gather grapes of thorns, or figs of thistles?
- World English Bible (WEB)
- By their fruits you will know them. Do you gather grapes from thorns or figs from thistles?
- American Standard Version (ASV)
- By their fruits ye shall know them. Do [men] gather grapes of thorns, or figs of thistles?
- Bible in Basic English (BBE)
- By their fruits you will get knowledge of them. Do men get grapes from thorns or figs from thistles?
- Darby Translation (DBY)
- By their fruits ye shall know them. Do [men] gather a bunch of grapes from thorns, or from thistles figs?
- Webster's Bible (WBS)
- Ye shall know them by their fruits: Do men gather grapes from thorns, or figs from thistles:
- Young's Literal Translation (YLT)
- From their fruits ye shall know them; do [men] gather from thorns grapes? or from thistles figs?
Read in context
- 14ಜೀವಕ್ಕೆ ನಡಿಸುವ ದ್ವಾರವು ಇಕ್ಕಟ್ಟಾದದ್ದೂ ದಾರಿಯು ಬಿಕ್ಕಟ್ಟಾದದ್ದೂ ಆಗಿದೆ; ಆದದರಿಂದ ಅದನ್ನು ಕಂಡುಕೊಳ್ಳುವವರು ಸ್ವಲ್ಪ ಜನ.
- 15ಕುರಿ ವೇಷ ಹಾಕಿಕೊಂಡು ನಿಮ್ಮ ಬಳಿಗೆ ಬರುವ ಸುಳ್ಳು ಪ್ರವಾದಿಗಳಿಗೆ ಎಚ್ಚರವಾಗಿರ್ರಿ; ಯಾಕಂದರೆ ಅವರು ಒಳಗೆ ದೋಚಿಕೊಳ್ಳುವ ತೋಳಗಳಾಗಿದ್ದಾರೆ.
- 16ಅವರ ಫಲಗಳಿಂದ ನೀವು ಅವರನ್ನು ತಿಳಿದುಕೊಳ್ಳುವಿರಿ. ಜನರು ಮುಳ್ಳುಗಳಲ್ಲಿ ದ್ರಾಕ್ಷೆಯನ್ನೂ ಮದ್ದುಗುಣಿಕೇಗಿಡಗಳಲ್ಲಿ ಅಂಜೂರ ಗಳನ್ನೂ ಕೂಡಿಸುವರೋ?
- 17ಅದರಂತೆಯೇ ಪ್ರತಿ ಯೊಂದು ಒಳ್ಳೆ ಮರವು ಒಳ್ಳೇ ಫಲವನ್ನು ಕೊಡುತ್ತದೆ; ಮತ್ತು ಕೆಟ್ಟ ಮರವು ಕೆಟ್ಟ ಫಲವನ್ನು ಕೊಡುತ್ತದೆ;
- 18ಒಳ್ಳೆ ಮರವು ಕೆಟ್ಟ ಫಲವನ್ನು ಕೊಡಲಾರದು; ಇಲ್ಲವೆ ಕೆಟ್ಟ ಮರವು ಒಳ್ಳೇ ಫಲವನ್ನು ಕೊಡಲಾರದು.
Cross references
- Luke 6:43–45 ಲೂಕನು 6:43–45ಒಳ್ಳೇಮರವು ಕೆಟ್ಟ ಫಲವನ್ನು ಫಲಿಸುವದಿಲ್ಲ; ಇಲ್ಲವೆ ಕೆಟ್ಟಮರವು ಒಳ್ಳೇಫಲವನ್ನು ಫಲಿಸುವದಿಲ್ಲ. ಪ್ರತಿಯೊಂದು ಮರವು ಅದರ ಫಲದಿಂದಲೇ ಗೊತ್ತಾಗುವದು. ಯಾಕಂದರೆ ಮುಳ್ಳುಗಳಲ್ಲಿ ಮನುಷ್ಯರು ಅಂಜೂರ ಗಳನ್ನು ಕೂಡಿಸುವದಿಲ್ಲ; ಇಲ್ಲವೆ ಗಜ್ಜುಗದ ಪೊದೆಯಲ್ಲಿ ದ್ರಾಕ್ಷೇಗಳನ್ನು ಕೂಡಿಸುವದಿಲ್ಲ. ಒಳ್ಳೇಮನುಷ್ಯನು ತನ್ನ ಹೃದಯದ ಒಳ್ಳೇಬೊಕ್ಕಸದಿಂದ ಒಳ್ಳೆಯದನ್ನೇ ಹೊರಗೆ ತರುತ್ತಾನೆ; ಆದರೆ ಕೆಟ್ಟಮನುಷ್ಯನು ತನ್ನ ಹೃದಯದ ಕೆಟ್ಟಬೊಕ್ಕಸದಿಂದ ಕೆಟ್ಟದ್ದನ್ನೇ ಹೊರಗೆ ತರುತ್ತಾನೆ. ಯಾಕಂದರೆ ಹೃದಯದ ಸಮೃದ್ಧಿಯಿಂದ ಅವನ ಬಾಯಿ ಮಾತನಾಡುತ್ತದೆ.
- Matthew 12:33 ಮತ್ತಾಯನು 12:33ಮರವು ಒಳ್ಳೆಯದಾಗಿದ್ದರೆ ಅದರ ಫಲವೂ ಒಳ್ಳೆಯದೆಂದು ಎಣಿಸಿರಿ; ಇಲ್ಲವೇ ಮರವು ಕೆಟ್ಟದ್ದಾಗಿದ್ದರೆ ಅದರ ಫಲವೂ ಕೆಟ್ಟದ್ದೆಂದೆಣಿಸಿರಿ; ಯಾಕಂದರೆ ಮರವು ತನ್ನ ಫಲದಿಂದಲೇ ತಿಳಿಯಲ್ಪ ಡುವದು.
- James 3:12 ಯಾಕೋಬನು 3:12ನನ್ನ ಸಹೋದರರೇ, ಅಂಜೂರದ ಮರವು ಎಣ್ಣೇಮರದ ಕಾಯಿ ಬಿಡುವದೋ? ದ್ರಾಕ್ಷೇ ಬಳ್ಳಿಯಲ್ಲಿ ಅಂಜೂರದ ಹಣ್ಣಾಗುವದೋ? ಹಾಗೆಯೇ ಯಾವ ಊಟೆಯೂ ಉಪ್ಪು ನೀರನ್ನೂ ಸಿಹಿ ನೀರನ್ನೂ ಕೊಡಲಾರದು.
- Matthew 7:20 ಮತ್ತಾಯನು 7:20ಆದದರಿಂದ ಅವರ ಫಲಗಳಿಂದ ನೀವು ಅವರನ್ನು ತಿಳಿದುಕೊಳ್ಳುವಿರಿ.
- 2 Peter 2:10–18 2 ಪೇತ್ರನು 2:10–18ಆದರೆ ಮುಖ್ಯವಾಗಿ ಬಂಡು ತನದ ದುರಾಶೆಯಲ್ಲಿ ಶರೀರಾನುಸಾರ ನಡೆದು ಪ್ರಭುತ್ವವನ್ನು ತಿರಸ್ಕಾರ ಮಾಡುವವರನ್ನು ಹೀಗೆ ಶಿಕ್ಷಿಸುವನು. ಇವರು ಯಾರಿಗೂ ಹೆದರದೆ ಸ್ವೇಚ್ಛಾಪರರಾಗಿದ್ದಾರೆ; ದುರಹಂಕಾರದಿಂದ ಗೌರವವುಳ್ಳವರನ್ನು ದೂಷಿಸುತ್ತಾರೆ. ದೂತರು ಬಲದಲ್ಲಿಯೂ ಮಹತ್ತಿನಲ್ಲಿಯೂ ಶ್ರೇಷ್ಠರಾಗಿದ್ದರೂ ಕರ್ತನ ಮುಂದೆ ಗೌರವವುಳ್ಳವರಿಗೆ ವಿರೋಧವಾಗಿ ನಿಂದೆಯನ್ನೂ ದೂಷಣೆಯನ್ನೂ ತರು ವದಿಲ್ಲ. ಆದರೆ ಹಿಡಿಯಲ್ಪಟ್ಟು ನಾಶವಾಗುವದಕ್ಕೆ ಹುಟ್ಟಿರುವ ವಿವೇಕ ಶೂನ್ಯ ಮೃಗಗಳಂತಿರುವ ಈ ದುರ್ಮಾರ್ಗಿಗಳು ತಮಗೆ ತಿಳಿಯದವುಗಳ ವಿಷಯ ವಾಗಿ ದೂಷಣೆ ಹೇಳುವವರಾಗಿದ್ದಾರೆ; ಇವರು ತಮ್ಮ ಕೆಟ್ಟತನದಿಂದ ಸಂಪೂರ್ಣ ನಾಶವಾಗುವವರಾಗಿ ತಮ್ಮ ದುರ್ನೀತಿಗೆ ಸರಿಯಾದ ದುಷ್ಪಲವನ್ನು ಹೊಂದುವರು. ದುಂದುಗಾರಿಕೆಯಲ್ಲಿ ಹಗಲನ್ನು ಕಳೆಯುವದೇ ಸುಖವೆಂದೆಣಿಸುತ್ತಾರೆ. ಇವರು ನಿಮ್ಮ ಸಂಗಡ ಸೇರಿ ಔತಣ ಮಾಡುತ್ತಿರುವಾಗ ವಂಚಕ ರಾಗಿದ್ದು ಕಳಂಕಕ್ಕೂ ನಿಂದೆಗೂ ಕಾರಣರಾಗಿದ್ದಾರೆ. ಇವರು ಜಾರತ್ವದಿಂದ ತುಂಬಿದ ಮತ್ತು ಪಾಪವನ್ನು ಬಿಡಲೊಲ್ಲದ ಕಣ್ಣುಳ್ಳವರೂ ಚಪಲ ಚಿತ್ತರನ್ನು ಮರುಳು ಗೊಳಿಸುವವರೂ ಲೋಭಗಳಲ್ಲಿ ತೇರ್ಗಡೆ ಹೊಂದಿದ ಹೃದಯವುಳ್ಳವರೂ ಶಾಪದ ಮಕ್ಕಳೂ ಆಗಿದ್ದಾರೆ. ಇವರು ನೀಟಾದ ಮಾರ್ಗವನ್ನು ಬಿಟ್ಟು ಬೆಯೋರನ ಮಗನಾದ ಬಿಳಾಮನ ಮಾರ್ಗವನ್ನು ಹಿಡಿದು ತಪ್ಪಿಹೋಗಿದ್ದಾರೆ. ಈ ಬಿಳಾಮನು ಅನೀತಿಯಿಂದ ದೊರಕುವ ಸಂಬಳವನ್ನು ಪ್ರೀತಿಸಿದನು. ಆದರೆ ಅವನ ದುಷ್ಟತ್ವಕ್ಕೆ ಖಂಡನೆಯಾಯಿತು; ಮೂಕ ಕತ್ತೆಯು ಮನುಷ್ಯ ಸ್ವರದಿಂದ ಮಾತನಾಡಿ ಆ ಪ್ರವಾದಿಯ ಹುಚ್ಚುತನಕ್ಕೆ ಅಡ್ಡಿ ಮಾಡಿತು. ಇವರು ನೀರಿಲ್ಲದ ಭಾವಿಗಳೂ ಬಿರುಗಾಳಿಯಿಂದ ಬಡಿಸಿಕೊಂಡು ಹಾರಿ ಹೋಗುವ ಮೇಘಗಳೂ ಆಗಿದ್ದಾರೆ. ಇಂಥವರ ಪಾಲಿಗೆ ನಿರಂತರವಾದ ಕಾರ್ಗತ್ತಲು ಇಟ್ಟಿರುವದು. ತಪ್ಪಾದ ಮಾರ್ಗದಲ್ಲಿ ಜೀವಿಸುವವರಿಂದ ಸಂಪೂರ್ಣವಾಗಿ ತಪ್ಪಿಸಿಕೊಂಡವರ ಸಂಗಡ ಇವರು ಹುರುಳಿಲ್ಲದ ದೊಡ್ಡ ದೊಡ್ಡ ಮಾತುಗಳನ್ನಾಡಿ ಶರೀರದ ದುರಾಶೆಗಳನ್ನು ಹುಟ್ಟಿಸಿ ಹೆಚ್ಚಾದ ಬಂಡುತನದಿಂದ ಅವರನ್ನು ಮರುಳುಗೊಳಿಸುತ್ತಾರೆ.
- Jude 1:10–19 ಯೂದನು 1:10–19ಆದರೆ ಈ ಜನರು ತಮಗೆ ಗೊತ್ತಿಲ್ಲದವುಗಳ ವಿಷಯವಾಗಿ ಕೆಟ್ಟದ್ದಾಗಿ ಮಾತನಾಡುತ್ತಾರೆ ಮತ್ತು ತಾವು ವಿವೇಕಶೂನ್ಯ ಮೃಗಗಳಂತೆ ಸ್ವಾಭಾವಿಕವಾಗಿ ಯಾವವುಗಳನ್ನು ತಿಳಿದುಕೊಳ್ಳುತ್ತಾರೋ ಅವುಗಳಲ್ಲಿ ತಮ್ಮನ್ನು ಕೆಡಿಸಿಕೊಳ್ಳುತ್ತಾರೆ. ಅವರು ಕಾಯಿನನ ಮಾರ್ಗ ಹಿಡಿದವರೂ ಪ್ರತೀಕಾರ ಹೊಂದುವದಕ್ಕಾಗಿ ಬಿಳಾಮನ ದೋಷವನ್ನು ಮಾಡುವದಕ್ಕೆ ದುರಾಶೆ ಯಿಂದ ಓಡುವವರೂ ಕೋರಹನಂತೆ ಎದುರು ಮಾತನಾಡಿ ನಾಶವಾಗುವವರೂ ಆಗಿರುವ ಅವರಿಗೆ ಅಯ್ಯೋ! ಳಂಕರಾದ ಇವರು ನಿಮ್ಮ ಪ್ರೇಮ ಭೋಜನಗಳಲ್ಲಿ ನಿರ್ಭಯವಾಗಿ ತಿಂದು ತಮ್ಮನ್ನು ತಾವೇ ಪೋಷಿಸಿಕೊಳ್ಳುತ್ತಾರೆ. ಇವರು ಗಾಳಿಯಿಂದ ಬಡಿಸಿಕೊಂಡು ಹೋಗುವ ನೀರಿಲ್ಲದ ಮೇಘಗಳೂ ಎರಡು ಸಾರಿ ಸತ್ತವರೂ ಹಣ್ಣು ಬಿಡದೆ ಒಣಗಿಹೋಗಿ ಬೇರು ಸಹಿತ ಕಿತ್ತುಬಿದ್ದ ಮರಗಳೂ ಸ್ವಂತ ಅವಮಾನವೆಂಬ ನೊರೆಯನ್ನು ಕಾರುವ ಸಮುದ್ರದ ಹುಚ್ಚು ತೆರೆಗಳೂ ಆಗಿದ್ದಾರೆ. ಅಲೆಯುವ ನಕ್ಷತ್ರ ಗಳಾದ ಇವರ ಪಾಲಿಗೆ ಕಾರ್ಗತ್ತಲೆಯು ಸದಾಕಾಲ ಇಟ್ಟಿರುವದು. ಇಂಥವರ ವಿಷಯದಲ್ಲಿಯೇ ಆದಾಮನಿಂದ ಏಳನೆಯವನಾದ ಹನೋಕನು ಸಹ--ಇಗೋ, ಕರ್ತನು ತನ್ನ ಹತ್ತು ಸಾವಿರ ಪರಿಶುದ್ಧರನ್ನು ಕೂಡಿಕೊಂಡು ಎಲ್ಲರಿಗೆ ನ್ಯಾಯ ತೀರಿಸುವದಕ್ಕೂ ಅವರಲ್ಲಿ ಭಕ್ತಿಹೀನರೆಲ್ಲರು ಮಾಡಿದ ಭಕ್ತಿಯಿಲ್ಲದ ಅವರ ಎಲ್ಲಾ ಕೃತ್ಯಗಳ ವಿಷಯವಾಗಿ ಮತ್ತು ಭಕ್ತಿಯಿಲ್ಲದ ಪಾಪಿಷ್ಠರು ತನಗೆ ವಿರೋಧವಾಗಿ ಆಡಿದ ಎಲ್ಲಾ ಕಠಿಣವಾದ ಮಾತುಗಳ ವಿಷಯವಾಗಿ ಅವರಿಗೆ ಮನದಟ್ಟು ಮಾಡುವದಕ್ಕೂ ಬಂದನು ಎಂಬ ದಾಗಿ ಪ್ರವಾದಿಸಿದನು. ಇವರು ಗುಣುಗುಟ್ಟು ವವರೂ ದೂರುವವರೂ ತಮ್ಮ ದುರಾಶೆಗಳನ್ನನುಸರಿಸಿ ನಡೆಯುವವರೂ ಆಗಿದ್ದಾರೆ. ಇವರ ಬಾಯಿಯು ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತದೆ. ಇವರು ಸ್ವಪ್ರಯೋಜನಕ್ಕಾಗಿ ಮುಖಸ್ತುತಿ ಮಾಡುತ್ತಾರೆ. ಪ್ರಿಯರೇ, ನೀವಾದರೋ ನಮ್ಮ ಕರ್ತನಾದ ಯೇಸು ಕ್ರಿಸ್ತನ ಅಪೊಸ್ತಲರು ಮೊದಲು ಹೇಳಿದ ಮಾತುಗಳನ್ನು ಜ್ಞಾಪಕಮಾಡಿಕೊಳ್ಳಿರಿ. ಭಕ್ತಿಗೆ ವಿರುದ್ಧವಾದ ತಮ್ಮ ಆಶೆಗಳನ್ನು ಅನುಸರಿಸಿ ನಡೆಯುವ ಕುಚೋದ್ಯಗಾರರು ಅಂತ್ಯಕಾಲದಲ್ಲಿ ಇರುವರೆಂದು ಅವರು ನಿಮಗೆ ಹೇಳಿದರು. ಇವರು ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳುವವರೂ ಪ್ರಾಕೃತಮನುಷ್ಯರೂ ಆತ್ಮವಿಲ್ಲದವರೂ ಆಗಿದ್ದಾರೆ.