Matthew · chapter 8 · verse 13
Matthew 8:13 in Kannada
ಯೇಸು ಆ ಶತಾಧಿಪತಿಗೆ--ಹೋಗು, ನೀನು ನಂಬಿದಂತೆಯೇ ನಿನಗಾಗಲಿ ಎಂದು ಹೇಳಿದನು. ಮತ್ತು ಅವನ ಸೇವಕನು ಅದೇ ಗಳಿಗೆಯಲ್ಲಿ ಸ್ವಸ್ಥನಾದನು.
Yesu aa shataadhipatige--hogu, neenu nambidanteye ninagaagali endu helidanu. Mattu avana sevakanu ade galigeyalli svasthanaadanu.
Matthew 8:13 in English
- King James Version (KJV)
- And Jesus said unto the centurion, Go thy way; and as thou hast believed, [so] be it done unto thee. And his servant was healed in the selfsame hour.
- World English Bible (WEB)
- Jesus said to the centurion, “Go your way. Let it be done for you as you have believed.” His servant was healed in that hour.
- American Standard Version (ASV)
- And Jesus said unto the centurion, Go thy way; as thou hast believed, [so] be it done unto thee. And the servant was healed in that hour.
- Bible in Basic English (BBE)
- And Jesus said to the captain, Go in peace; as your faith is, so let it be done to you. And the servant was made well in that hour.
- Darby Translation (DBY)
- And Jesus said to the centurion, Go, and as thou hast believed, be it to thee. And his servant was healed in that hour.
- Webster's Bible (WBS)
- And Jesus said to the centurion, Depart; and as thou hast believed, so be it done to thee. And his servant was healed in the same hour.
- Young's Literal Translation (YLT)
- And Jesus said to the centurion, 'Go, and as thou didst believe let it be to thee;' and his young man was healed in that hour.
Read in context
- 11ನಾನು ನಿಮಗೆ ಹೇಳುವದೇನಂದರೆ--ಬಹಳ ಜನರು ಪೂರ್ವದಿಂದಲೂ ಪಶ್ಚಿಮದಿಂದಲೂ ಬಂದು ಪರ ಲೋಕರಾಜ್ಯದಲ್ಲಿ ಅಬ್ರಹಾಮ್ ಇಸಾಕ್ ಯಾಕೋಬ್ ಅವರೊಂದಿಗೆ ಕೂತುಕೊಳ್ಳುವರು.
- 12ಆದರೆ ರಾಜ್ಯದ ಮಕ್ಕಳು ಹೊರಗೆ ಕತ್ತಲೆಯಲ್ಲಿ ದೊಬ್ಬಲ್ಪಡುವರು; ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು.
- 13ಯೇಸು ಆ ಶತಾಧಿಪತಿಗೆ--ಹೋಗು, ನೀನು ನಂಬಿದಂತೆಯೇ ನಿನಗಾಗಲಿ ಎಂದು ಹೇಳಿದನು. ಮತ್ತು ಅವನ ಸೇವಕನು ಅದೇ ಗಳಿಗೆಯಲ್ಲಿ ಸ್ವಸ್ಥನಾದನು.
- 14ಇದಾದ ಮೇಲೆ ಯೇಸು ಪೇತ್ರನ ಮನೆಗೆ ಬಂದು ಅವನ ಹೆಂಡತಿಯ ತಾಯಿಯು ಜ್ವರದಿಂದ ಮಲಗಿರುವದನ್ನು ಕಂಡನು.
- 15ಆತನು ಆಕೆಯ ಕೈಯನ್ನು ಮುಟ್ಟಿದಾಗ ಜ್ವರವು ಆಕೆಯನ್ನು ಬಿಟ್ಟಿತು; ಮತ್ತು ಆಕೆಯು ಎದ್ದು ಅವರಿಗೆ ಉಪಚಾರ ಮಾಡಿದಳು.
Cross references
- Matthew 9:29–30 ಮತ್ತಾಯನು 9:29–30ಆಗ ಆತನು ಅವರ ಕಣ್ಣುಗಳನ್ನು ಮುಟ್ಟಿ--ನಿಮ್ಮ ನಂಬಿಕೆಯಂತೆ ನಿಮಗಾಗಲಿ ಎಂದು ಹೇಳಿದನು. ಆಗ ಅವರ ಕಣ್ಣುಗಳು ತೆರೆಯಲ್ಪಟ್ಟವು; ಮತ್ತು ಯೇಸು ಅವರಿಗೆ--ಇದು ಯಾರಿಗೂ ಗೊತ್ತಾಗಬಾರದು ನೋಡಿರಿ ಎಂದು ಅವರಿಗೆ ಖಂಡಿತವಾಗಿ ಅಪ್ಪಣೆಕೊಟ್ಟು ಹೇಳಿದನು.
- Mark 9:23 ಮಾರ್ಕನು 9:23ಆಗ ಯೇಸು ಅವನಿಗೆ--ನೀನು ನಂಬುವದಾದರೆ ಆಗುವದು; ನಂಬುವವನಿಗೆ ಎಲ್ಲವು ಸಾಧ್ಯವೇ ಎಂದು ಹೇಳಿದನು.
- John 4:50 ಯೋಹಾನನು 4:50ಯೇಸು ಅವನಿಗೆ--ನೀನು ಹೋಗು, ನಿನ್ನ ಮಗನು ಬದುಕಿರುತ್ತಾನೆ ಅಂದನು. ಮತ್ತು ಆ ಮನುಷ್ಯನು ಯೇಸು ಹೇಳಿದ ಮಾತನ್ನು ನಂಬಿ ಹೊರಟುಹೋದನು.
- Matthew 15:28 ಮತ್ತಾಯನು 15:28ಆಗ ಯೇಸು ಪ್ರತ್ಯುತ್ತರವಾಗಿ ಆಕೆಗೆ--ಓ ಸ್ತ್ರೀಯೇ, ನಿನ್ನ ನಂಬಿಕೆಯು ದೊಡ್ಡದು; ನೀನು ಇಷ್ಟಪಟ್ಟಂತೆಯೇ ನಿನಗಾಗಲಿ ಎಂದು ಹೇಳಿ ದನು. ಮತ್ತು ಆಕೆಯ ಮಗಳು ಅದೇ ಗಳಿಗೆಯಲ್ಲಿ ಸ್ವಸ್ಥಳಾದಳು.
- Matthew 9:22 ಮತ್ತಾಯನು 9:22ಆದರೆ ಯೇಸು ಹಿಂತಿರುಗಿ ಆಕೆಯನ್ನು ನೋಡಿ--ಮಗಳೇ, ಸಮಾಧಾನದಿಂದಿರು; ನಿನ್ನ ನಂಬಿಕೆಯು ನಿನ್ನನ್ನು ಸ್ವಸ್ಥ ಮಾಡಿಯದೆ ಅಂದನು. ಅದೇ ಗಳಿಗೆಯಲ್ಲಿ ಆ ಸ್ತ್ರೀಯು ಸ್ವಸ್ಥಳಾದಳು.
- Matthew 17:20 ಮತ್ತಾಯನು 17:20ಯೇಸು ಅವರಿಗೆ--ನಿಮ್ಮ ಅಪನಂಬಿಕೆಯ ದೆಸೆಯಿಂದಲೇ; ನಾನು ನಿಮಗೆ ನಿಜವಾಗಿ ಹೇಳುವದೇನಂದರೆ--ಸಾಸಿವೆ ಕಾಳಷ್ಟು ನಂಬಿಕೆ ನಿಮಗಿರುವದಾದರೆ ನೀವು ಈ ಬೆಟ್ಟಕ್ಕೆ--ಇಲ್ಲಿಂದ ಆ ಸ್ಥಳಕ್ಕೆ ಹೋಗು ಎಂದು ಹೇಳಿದರೆ ಅದು ಹೋಗುವದು; ಮತ್ತು ಯಾವದೂ ನಿಮಗೆ ಅಸಾಧ್ಯವಾಗಿರುವದಿಲ್ಲ.
- John 4:52–53 ಯೋಹಾನನು 4:52–53ಆಗ ಅವನು--ಯಾವ ಗಳಿಗೆಯಲ್ಲಿ ಅವನಿಗೆ ಗುಣವಾಗತೊಡಗಿತು ಎಂದು ಅವರನ್ನು ವಿಚಾರಿಸಿದಾಗ ಅವರು ನಿನ್ನೆ ಏಳನೇ ತಾಸಿನಲ್ಲಿ ಜ್ವರವು ಅವನನ್ನು ಬಿಟ್ಟಿತು ಎಂದು ಅವನಿಗೆ ಹೇಳಿದರು. ಹೀಗೆ--ನಿನ್ನ ಮಗನು ಬದುಕುತ್ತಾನೆ ಎಂದು ಯೇಸು ತನಗೆ ಹೇಳಿದ ಗಳಿಗೆಯಲ್ಲಿಯೇ ಅದು ಆಯಿತೆಂದು ತಂದೆಯು ತಿಳಿದುಕೊಂಡು ತಾನೂ ತನ್ನ ಮನೆಯವರೆಲ್ಲರೂ ನಂಬಿದರು.ಯೇಸು ಯೂದಾಯದಿಂದ ಗಲಿಲಾಯಕ್ಕೆ ಬಂದಮೇಲೆ ತಿರಿಗಿ ಮಾಡಿದ ಎರಡನೆಯ ಅದ್ಭುತಕಾರ್ಯವು ಇದಾಗಿದೆ.
- Ecclesiastes 9:7 ಪ್ರಸಂಗಿ 9:7ನೀನು ಹೋಗಿ ಸಂತೋಷದಿಂದ ನಿನ್ನ ರೊಟ್ಟಿ ಯನ್ನು ತಿಂದು ಹರ್ಷಹೃದಯದಿಂದ ನಿನ್ನ ದ್ರಾಕ್ಷಾ ರಸವನ್ನು ಕುಡಿ; ದೇವರು ಈಗ ನಿನ್ನ ಕೆಲಸಗಳನ್ನು ಒಪ್ಪಿಕೊಳ್ಳುತ್ತಾನೆ.
- Matthew 8:4 ಮತ್ತಾಯನು 8:4ಯೇಸು ಅವನಿಗೆ--ನೀನು ಯಾರಿಗೂ ಹೇಳಬೇಡ ನೋಡು; ಹೊರಟುಹೋಗಿ ಯಾಜಕನಿಗೆ ನಿನ್ನನ್ನು ತೋರಿಸಿಕೊಂಡು ಅವರಿಗೆ ಸಾಕ್ಷಿಯಾಗಿರುವಂತೆ ಮೋಶೆಯು ಆಜ್ಞಾಪಿಸಿದ ಕಾಣಿಕೆಯನ್ನು ಅರ್ಪಿಸು ಎಂದು ಹೇಳಿದನು.
- Mark 7:29 ಮಾರ್ಕನು 7:29ಆತನು ಅವಳಿಗೆ --ಈ ಮಾತಿನ ದೆಸೆಯಿಂದ ದೆವ್ವವು ನಿನ್ನ ಮಗಳನ್ನು ಬಿಟ್ಟು ಹೋಗಿದೆ, ನೀನು ಹೋಗು ಅಂದನು.