Micah · chapter 1 · verse 8
Micah 1:8 in Kannada
ಆದದರಿಂದ ನಾನು ಗೋಳಾಡಿ ಅರಚುವೆನು; ಬರಿಗಾಲಾಗಿಯೂ ಬೆತ್ತಲೆಯಾಗಿಯೂ ಹೋಗುವೆನು; ನರಿಗಳ ಹಾಗೆ ಗೋಳಾಡುವೆನು; ಬಕಪಕ್ಷಿಯಂತೆ ದುಃಖಪಡುವೆನು.
Aadadarinda naanu golaadi arachuvenu; barigaalaagiyoo bettaleyaagiyoo hoguvenu; narigala haage golaaduvenu; bakapakshiyante duhkhapaduvenu.
Micah 1:8 in English
- King James Version (KJV)
- Therefore I will wail and howl, I will go stripped and naked: I will make a wailing like the dragons, and mourning as the owls.
- World English Bible (WEB)
- For this I will lament and wail. I will go stripped and naked. I will howl like the jackals and mourn like the ostriches.
- American Standard Version (ASV)
- For this will I lament and wail; I will go stripped and naked; I will make a wailing like the jackals, and a lamentation like the ostriches.
- Bible in Basic English (BBE)
- For this I will be full of sorrow and give cries of grief; I will go uncovered and unclothed: I will give cries of grief like the jackals and will be in sorrow like the ostriches.
- Darby Translation (DBY)
- For this will I lament, and I will howl; I will go stripped and naked: I will make a wailing like the jackals, and mourning like the ostriches.
- Webster's Bible (WBS)
- Therefore I will wail and howl, I will go stripped and naked: I will make a wailing like the dragons, and mourning as the owls.
- Young's Literal Translation (YLT)
- For this I lament and howl, I go spoiled and naked, I make a lamentation like dragons, And a mourning like daughters of an ostrich.
Read in context
- 6ಹೀಗಿರುವದರಿಂದ ನಾನು ಸಮಾರ್ಯವನ್ನು ಹೊಲದ ದಿಬ್ಬೆಯಾಗಿಯೂ ದ್ರಾಕ್ಷೇ ಬಳ್ಳಿ ನೆಡುವ ಸ್ಥಳವಾಗಿಯೂ ಮಾಡುವೆನು; ಅದರ ಕಲ್ಲುಗಳನ್ನು ತಗ್ಗಿನಲ್ಲಿ ಸುರಿದುಬಿಟ್ಟು; ಅದರ ಅಸ್ತಿವಾರಗಳನ್ನು ಹೊರ ಗೆಡುವೆನು.
- 7ಅದರ ಕೆತ್ತಿದ ವಿಗ್ರಹಗಳೆಲ್ಲಾ ತುಂಡು ಗಳಾಗುವಂತೆ ಒಡೆಯಲ್ಪಡುವವು. ಅದಕ್ಕೆ ಆದ ಸಂಪಾದನೆಗಳೆಲ್ಲಾ ಬೆಂಕಿಯಿಂದ ಸುಡಲ್ಪಡುವವು; ಅದರ ವಿಗ್ರಹಗಳನ್ನೆಲ್ಲಾ ಹಾಳುಮಾಡುವೆನು; ಸೂಳೆಯ ಕೂಲಿಯಿಂದ ಅವುಗಳನ್ನು ಕೂಡಿಸಿ ಕೊಂಡಿತು, ಸೂಳೆಯ ಕೂಲಿಗೆ ಅವು ತಿರುಗುವವು.
- 8ಆದದರಿಂದ ನಾನು ಗೋಳಾಡಿ ಅರಚುವೆನು; ಬರಿಗಾಲಾಗಿಯೂ ಬೆತ್ತಲೆಯಾಗಿಯೂ ಹೋಗುವೆನು; ನರಿಗಳ ಹಾಗೆ ಗೋಳಾಡುವೆನು; ಬಕಪಕ್ಷಿಯಂತೆ ದುಃಖಪಡುವೆನು.
- 9ಅದರ ಗಾಯವು ಗುಣವಾಗ ದಂಥದ್ದು, ಯಾಕಂದರೆ ಅದು ಯೆಹೂದಕ್ಕೆ ಬಂತು; ನನ್ನ ಜನರ ಬಾಗಲಿಗೂ ಯೆರೂಸಲೇಮಿನ ಮಟ್ಟಿಗೂ ಮುಟ್ಟಿದ್ದಾನೆ.
- 10ಗತ್ ಊರಿನಲ್ಲಿ ಅದನ್ನು ತಿಳಿಸಬೇಡ; ಸ್ವಲ್ಪವಾದರೂ ಅಳಬೇಡ; ಎಫ್ರಾತದ ಮನೆಯ ಧೂಳಿನಲ್ಲಿ ಹೊರಳಾಡು.
Cross references
- Isaiah 22:4 ಯೆಶಾಯ 22:4ಹೀಗಿರಲು ನನ್ನ ಕಡೆ ಯಿಂದ ದೃಷ್ಟಿ ತಿರುಗಿಸಿರಿ. ಬಹುಸಂಕಟದಿಂದ ನಾನು ಅಳುವೆನು. ನನ್ನ ಜನವೆಂಬ ಯುವತಿಯು ಹಾಳಾದ ವಿಷಯದಲ್ಲಿ ನನ್ನನ್ನು ಸಂತೈಸುವದಕ್ಕೆ ತವಕಗೊಳ್ಳದಿರಿ ಅಂದೆನು.
- Isaiah 20:2–4 ಯೆಶಾಯ 20:2–4ಅದೇ ಸಮಯದಲ್ಲಿ ಕರ್ತನು ಆಮೋ ಚನ ಮಗನಾದ ಯೆಶಾಯನಿಗೆ ಹೋಗಿ ನಿನ್ನ ನಡುವಿನ ಮೇಲಿರುವ ಗೋಣಿತಟ್ಟನ್ನು ಬಿಚ್ಚು, ನಿನ್ನ ಪಾದಗಳ ಲ್ಲಿರುವ ಕೆರಗಳನ್ನು ತೆಗೆದಿಡು ಎಂದು ಹೇಳಿದನು. ಅವನು ಹಾಗೆ ಮಾಡಿ ಬೆತ್ತಲೆಯಾಗಿ ಕೆರವಿಲ್ಲದೆ ತಿರು ಗುತ್ತಿದ್ದನು. ಕರ್ತನು ಹೇಳಿದ್ದೇನಂದರೆ, ನನ್ನ ಸೇವಕ ನಾದ ಯೆಶಾಯನು ಐಗುಪ್ತಕ್ಕೂ ಐಥಿಯೋಪಿ ಯಕ್ಕೂ ಗುರುತಾಗಿಯೂ ಆಶ್ಚರ್ಯವಾಗಿಯೂ ಹೀಗೆ ಮೂರು ವರ್ಷ ಬೆತ್ತಲೆಯಾಗಿ ಕೆರವಿಲ್ಲದೆ ನಡೆದನು. ಹಾಗೆಯೇ ಅಶ್ಶೂರಿನ ಅರಸನು ಐಗುಪ್ತ್ಯರನ್ನು ಬಂಧಿಸಿ ಐಥಿಯೋಪಿಯಾದ ಕೈದಿಗಳನ್ನು ಅವರು ದೊಡ್ಡವರಾಗಲಿ ಸಣ್ಣವರಾಗಲಿ ಬಟ್ಟೆ ಕೆರಗಳಿಲ್ಲದೆ ಬರಿ ಕುಂಡಿಯವರಾಗಿ ಐಗುಪ್ತದ ಮಾನಭಂಗಕ್ಕೋ ಸ್ಕರ ಸೆರೆಗೆ ನಡೆಯುವಂತೆ ಮಾಡುವನು.
- Isaiah 13:21 ಯೆಶಾಯ 13:21ಆದರೆ ಮರುಭೂಮಿಯ ಕಾಡುಮೃಗಗಳು ಅಲ್ಲಿ ಮಲಗುವವು; ಅವರ ಮನೆಗಳು ವ್ಯೆಥೆಯಿಂದ ತುಂಬಿರುವವು; ಅಲ್ಲಿ ಗೂಬೆಗಳು ವಾಸಿಸುವವು, ದೆವ್ವಗಳು ಕುಣಿದಾಡುವವು.ಅವರ ಹಾಳಾದ ಮನೆಗಳಲ್ಲಿ ದ್ವೀಪಗಳ ಕಾಡುಮೃಗಗಳು ಕೂಗುವವು; ಅವರ ಮೆಚ್ಚಿಕೆಯಾದ ಅರಮನೆಗಳಲ್ಲಿ ಸರ್ಪಗಳು ವಾಸಿಸುವವು; ಅವಳ ಕಾಲವು ಸವಿಾಪಿಸಿತು, ಇನ್ನು ಅವಳ ದಿನಗಳು ಮುಂದುವರಿಯವು.
- Psalm 102:6 ಕೀರ್ತನೆಗಳು 102:6ನಾನು ಅರಣ್ಯದ ಬಕಕ್ಕೆ ಸಮಾನನಾಗಿದ್ದೇನೆ; ನಾನು ಅರಣ್ಯದ ಗೂಬೆಯ ಹಾಗಿದ್ದೇನೆ.
- Jeremiah 48:36–39 ಯೆರೆಮೀಯ 48:36–39ಆದದರಿಂದ ನನ್ನ ಹೃದಯವು ಮೋವಾಬಿಗೋಸ್ಕರ ಕೊಳಲುಗಳ ಹಾಗೆ ಮೊರೆಯಿಡುವದು, ನನ್ನ ಹೃದಯವು ಕೀರ್ ಹೆರೆಸಿನ ಮನುಷ್ಯರಿಗೋಸ್ಕರ ಕೊಳಲುಗಳ ಹಾಗೆ ಮೊರೆಯಿಡು ವದು. ಅವನು ಮಾಡಿಕೊಂಡ ದ್ರವ್ಯನಾಶವಾಯಿತು. ಎಲ್ಲಾ ತಲೆಗಳು ಬೋಳಾಗುವವು; ಎಲ್ಲಾ ಗಡ್ಡಗಳು ಕ್ಷೌರವಾಗುವವು; ಎಲ್ಲಾ ಕೈಗಳ ಮೇಲೆ ಗಾಯಗಳೂ ಸೊಂಟಗಳ ಮೇಲೆ ಗೋಣಿತಟ್ಟು ಇರುವವು. ಮೋವಾಬಿನ ಎಲ್ಲಾ ಮಾಳಿಗೆಗಳ ಮೇಲೆಯೂ ಅದರ ಎಲ್ಲಾ ಬೀದಿಗಳಲ್ಲಿಯೂ ಗೋಳಾಟ ತುಂಬಿರು ವದು. ಮೆಚ್ಚದ ಪಾತ್ರೆಯ ಹಾಗೆ ಮೋವಾಬನ್ನು ನಾನು ಒಡೆದುಬಿಟ್ಟಿದ್ದೇನೆಂದು ಕರ್ತನು ಅನ್ನುತ್ತಾನೆ. ಅದು ಹೇಗೆ ಮುರಿದು ಹೋಯಿತು! ಮೋವಾಬು ಹೇಗೆ ನಾಚಿಕೆಪಟ್ಟು ಬೆನ್ನು ತಿರುಗಿಸಿತು ಎಂದು ಗೋಳಿಡುವರು. ಹೀಗೆ ಮೋವಾಬು ಅದರ ಸುತ್ತಲಿರು ವವರೆಲ್ಲರಿಗೆ ಹಾಸ್ಯಕ್ಕೂ ಹೆದರಿಕೆಗೂ ಆಗುವದು.
- Isaiah 21:3 ಯೆಶಾಯ 21:3ಆದ ದರಿಂದ ನನ್ನ ಸೊಂಟಗಳು ನೋವಿನಿಂದ ತುಂಬಿವೆ. ಹೆರುವವಳ ವೇದನೆಗಳಂತಿರುವ ವೇದನೆಗಳು ನನ್ನನ್ನು ಹಿಡಿದಿವೆ; ಕೇಳಕೂಡದ ಹಾಗೆ ಸಂಕಟಪಡುತ್ತೇನೆ, ನೋಡಕೂಡದ ಹಾಗೆ ಭ್ರಾಂತನಾಗಿದ್ದೇನೆ.
- Jeremiah 9:19 ಯೆರೆಮೀಯ 9:19ನಾವು ಹೇಗೆ ಹಾಳಾದೆವು, ನಾವು ದೇಶವನ್ನು ಬಿಟ್ಟದ್ದರಿಂದಲೂ ನಮ್ಮ ನಿವಾಸಗಳು ನಮ್ಮನ್ನು ಹೊರಗೆ ಹಾಕಿದ್ದರಿಂದಲೂ ಬಹಳವಾಗಿ ನಾಚಿಕೆಪಡುತ್ತೇವೆ ಎಂಬ ಗೋಳಾಟದ ಶಬ್ದವು ಚೀಯೋನಿನಿಂದ ಕೇಳಿ ಬಂತು.
- Jeremiah 4:19 ಯೆರೆಮೀಯ 4:19ನನ್ನ ಕರುಳುಗಳು, ನನ್ನ ಕರುಳುಗಳು! ನನ್ನ ಹೃದಯದಲ್ಲಿಯೇ ನೊಂದುಕೊಂಡಿದ್ದೇನೆ; ನನ್ನ ಹೃದ ಯವು ನನ್ನಲ್ಲಿ ಕೂಗುತ್ತದೆ, ಮೌನವಾಗಿರಲಾರೆನು; ಓ ನನ್ನ ಪ್ರಾಣವೇ, ತುತೂರಿಯ ಶಬ್ದವನ್ನೂ ಯುದ್ಧದ ಆರ್ಭಟವನ್ನೂ ನೀನು ಕೇಳಿದ್ದೀ.
- Jeremiah 9:1 ಯೆರೆಮೀಯ 9:1ಅಯ್ಯೋ, ನನ್ನ ತಲೆ ನೀರಾಗಿಯೂ ನನ್ನ ಕಣ್ಣುಗಳು ಕಣ್ಣೀರಿನ ಬುಗ್ಗೆಯಾಗಿಯೂ ಇದ್ದರೆ ಒಳ್ಳೇದು! ಆಗ ನನ್ನ ಜನರ ಮಗಳ ಹತವಾದ ವರ ನಿಮಿತ್ತ ಹಗಲು ರಾತ್ರಿ ಅಳುವೆನು.
- Isaiah 16:9 ಯೆಶಾಯ 16:9ಆದಕಾರಣ ಸಿಬ್ಮದ ದ್ರಾಕ್ಷಾ ಲತೆಯ ನಿಮಿತ್ತ ಯಜ್ಜೇರಿನೊಂದಿಗೆ ಅಳುವೆನು; ಓ ಹೆಷ್ಬೋನೇ, ಎಲೆಯಾಲೇ, ನಿನ್ನನ್ನು ನನ್ನ ಕಣ್ಣೀರಿ ನಿಂದ ತೋಯಿಸುವೆನು; ಬಿದ್ದುಹೋದ ನಿನ್ನ ಬೇಸಿ ಗೆಯ ಫಲಗಳಿಗೂ ಬೆಳೆಗಳಿಗೂ ಆರ್ಭಟಿಸುವರು.
- Jeremiah 9:10 ಯೆರೆಮೀಯ 9:10ಬೆಟ್ಟಗಳಿಗೋಸ್ಕರ ನಾನು ಅಳುವಿಕೆಯನ್ನೂ ದುಃಖವನ್ನೂ ಅರಣ್ಯದ ಸ್ಥಳಗಳಿಗೋಸ್ಕರ ಗೋಳಾಟ ವನ್ನೂ ಎತ್ತುವೆನು; ಅವುಗಳ ಮೂಲಕ ಹಾದು ಹೋಗದ ಹಾಗೆ ಅದು ಸುಡಲ್ಪಟ್ಟಿದೆ; ದನಗಳ ಶಬ್ದವು ಕೇಳಲ್ಪಡುವದಿಲ್ಲ; ಆಕಾಶದ ಪಕ್ಷಿಗಳೂ ಮೃಗಗಳೂ ಸಹ ಓಡಿಹೋಗಿವೆ.
- Job 30:29 ಯೋಬನು 30:29ಘಟಸರ್ಪಗಳಿಗೆ ಸಹೋದರನಾದೆನು; ಗೂಬೆ ಗಳಿಗೆ ನಾನು ಜೊತೆಯವನಾದೆನು.