Micah · chapter 2 · verse 7
Micah 2:7 in Kannada
ಯಾಕೋಬಿನ ಮನೆತನದವ ರೆಂದು ಹೆಸರುಗೊಂಡವರೇ, ಕರ್ತನ ಆತ್ಮವು ಕಡಿಮೆ ಯಾಯಿತೋ? ಇವು ಆತನ ಕ್ರಿಯೆಗಳೋ? ಯಥಾ ರ್ಥವಾಗಿ ನಡೆಯುವವನಿಗೆ ನನ್ನ ಮಾತುಗಳು ಒಳ್ಳೇದನ್ನು ಮಾಡುವದಿಲ್ಲವೋ?
Yaakobina manetanadava rendu hesarugondavare, kartana aatmavu kadime yaayito? Ivu aatana kriyegalo? Yathaa rthavaagi nadeyuvavanige nanna maatugalu olledannu maaduvadillavo?
Micah 2:7 in English
- King James Version (KJV)
- O [thou that art] named the house of Jacob, is the spirit of the LORD straitened? [are] these his doings? do not my words do good to him that walketh uprightly?
- World English Bible (WEB)
- Shall it be said, O house of Jacob, “Is the LORD’s Spirit angry? Are these his doings? Don’t my words do good to him who walks blamelessly?”
- American Standard Version (ASV)
- Shall it be said, O house of Jacob, Is the Spirit of Jehovah straitened? are these his doings? Do not my words do good to him that walketh uprightly?
- Bible in Basic English (BBE)
- Is the Lord quickly made angry? are these his doings? do not his words do good to his people Israel?
- Darby Translation (DBY)
- O thou [that art] named the house of Jacob, Is Jehovah impatient? are these his doings? Do not my words do good to him that walketh uprightly?
- Webster's Bible (WBS)
- O [thou that art] named the house of Jacob, is the spirit of the LORD straitened? are these his doings? do not my words do good to him that walketh uprightly?
- Young's Literal Translation (YLT)
- Doth the house of Jacob say, 'Hath the Spirit of Jehovah been shortened? Are these His doings?' Do not My words benefit the people that is walking uprightly?
Read in context
- 5ಆದದರಿಂದ ಕರ್ತನ ಸಭೆಯಲ್ಲಿ ಪಾಲಿಗಾಗಿ ನೂಲು ಹಾಕುವವನು ನಿನಗೆ ಒಬ್ಬನೂ ಇರುವದಿಲ್ಲ.
- 6ಪ್ರವಾದಿಸಬೇಡಿರೆಂದು ಪ್ರವಾದಿಸುವವರಿಗೆ ಅನ್ನು ತ್ತಾರೆ; ಅವರಿಗೆ ಆತನು ಪ್ರವಾದಿಸನು, ಆದರೆ ಅವರು ನಾಚಿಕೆಪಡುವದಿಲ್ಲ.
- 7ಯಾಕೋಬಿನ ಮನೆತನದವ ರೆಂದು ಹೆಸರುಗೊಂಡವರೇ, ಕರ್ತನ ಆತ್ಮವು ಕಡಿಮೆ ಯಾಯಿತೋ? ಇವು ಆತನ ಕ್ರಿಯೆಗಳೋ? ಯಥಾ ರ್ಥವಾಗಿ ನಡೆಯುವವನಿಗೆ ನನ್ನ ಮಾತುಗಳು ಒಳ್ಳೇದನ್ನು ಮಾಡುವದಿಲ್ಲವೋ?
- 8ಇತ್ತೀಚೆಗೆ ನನ್ನ ಜನರು ವೈರಿಯ ಹಾಗೆ ಎದ್ದಿದ್ದಾರೆ; ಯುದ್ಧದಿಂದ ತಿರುಗಿಕೊಂಡು ಭದ್ರವಾಗಿ ಹಾದುಹೋಗುವವರ ವಸ್ತ್ರದ ಸಂಗಡ ನಿಲುವಂಗಿಯನ್ನು ನೀವು ಕಿತ್ತುಕೊ ಳ್ಳುತ್ತೀರಿ.
- 9ನನ್ನ ಜನರ ಸ್ತ್ರೀಯರನ್ನು ಅವರ ರಮ್ಯ ವಾದ ಮನೆಗಳೊಳಗಿಂದ ಹೊರಡಿಸಿದ್ದೀರಿ; ಅವರ ಮಕ್ಕಳಿಂದ ನನ್ನ ಮಹಿಮೆಯನ್ನು ಎಂದೆಂದಿಗೂ ತೆಗೆದಿ ದ್ದೀರಿ.
Cross references
- Psalm 84:11 ಕೀರ್ತನೆಗಳು 84:11ದೇವರಾದ ಕರ್ತನು ಸೂರ್ಯ ನೂ ಗುರಾಣಿಯೂ ಆಗಿದ್ದಾನೆ; ಕರ್ತನು ಕೃಪೆಯನ್ನೂ ಮಹಿಮೆಯನ್ನೂ ಕೊಡುತ್ತಾನೆ; ಸಂಪೂರ್ಣವಾಗಿ ನಡೆದುಕೊಳ್ಳುವವರಿಗೆ ಆತನು ಯಾವ ಒಳ್ಳೇದನ್ನು ಹಿಂದೆಗೆಯುವದಿಲ್ಲ.ಸೈನ್ಯಗಳ ಓ ಕರ್ತನೇ, ನಿನ್ನಲ್ಲಿ ಭರವಸವಿಡುವ ಮನುಷ್ಯನು ಧನ್ಯನು.
- Jeremiah 15:16 ಯೆರೆಮೀಯ 15:16ನಿನ್ನ ವಾಕ್ಯಗಳು ಸಿಕ್ಕಿದವು, ಅವುಗಳನ್ನು ತಿಂದೆನು. ನಿನ್ನ ವಾಕ್ಯವು ನನ್ನ ಹೃದಯಕ್ಕೆ ಉಲ್ಲಾಸವೂ ಸಂತೋಷವೂ ಆಗಿತ್ತು; ಓ ಸೈನ್ಯಗಳ ದೇವರಾದ ಕರ್ತನೇ, ನಿನ್ನ ಹೆಸರಿನಿಂದ ಕರೆಯಲ್ಪಟ್ಟಿದ್ದೇನೆ.
- Psalm 15:2 ಕೀರ್ತನೆಗಳು 15:2ಯಥಾರ್ಥವಾಗಿ ನಡೆದು ನೀತಿಯನ್ನು ನಡಿಸಿ ತನ್ನ ಹೃದಯದಲ್ಲಿ ಸತ್ಯವನ್ನಾಡುವವನೇ.
- Proverbs 10:9 ಜ್ಞಾನೋಕ್ತಿಗಳು 10:9ಯಥಾರ್ಥವಾಗಿ ನಡೆಯುತ್ತಿರುವವನು ದೃಢವಾಗಿ ನಡೆಯುತ್ತಾನೆ; ತನ್ನ ಮಾರ್ಗಗಳನ್ನು ಡೊಂಕು ಮಾಡು ತ್ತಿರುವವನು ಬಯಲಿಗೆ ಬರುವನು.
- Psalm 119:99–103 ಕೀರ್ತನೆಗಳು 119:99–103ನನ್ನ ಬೋಧಕರೆಲ್ಲರಿಗಿಂತ ನಾನು ಬುದ್ಧಿವಂತ ನಾಗಿದ್ದೇನೆ; ನಿನ್ನ ಸಾಕ್ಷಿಗಳು ನನ್ನ ಧ್ಯಾನವಾಗಿವೆ. ನಾನು ಪೂರ್ವಿಕರಿಗಿಂತ ವಿವೇಕಿಯಾಗಿದ್ದೇನೆ; ನಿನ್ನ ಕಟ್ಟಳೆಗಳನ್ನು ಕೈಕೊಂಡಿದ್ದೇನೆ. ನಿನ್ನ ವಾಕ್ಯವನ್ನು ಕೈಕೊಳ್ಳುವ ಹಾಗೆ ಎಲ್ಲಾ ಕೆಟ್ಟದಾರಿಗಳಿಂದ ನನ್ನ ಪಾದ ಗಳನ್ನು ಹಿಂದೆಗೆದ್ದಿದ್ದೇನೆ. ನಿನ್ನ ನ್ಯಾಯವಿಧಿಗಳಿಂದ ನಾನು ತೊಲಗಲಿಲ್ಲ; ನೀನು ನನ್ನನ್ನು ಬೋಧಿಸಿದ್ದೀ. ನಿನ್ನ ಮಾತುಗಳು ನನ್ನ ರುಚಿಗೆ ಎಷ್ಟೋ ಸಿಹಿ ಯಾಗಿವೆ, ಅವು ನನ್ನ ಬಾಯಿಗೆ ಜೇನಿಗಿಂತ ಸಿಹಿ ಯಾಗಿವೆ.
- Proverbs 10:29 ಜ್ಞಾನೋಕ್ತಿಗಳು 10:29ಯಥಾರ್ಥವಂತರಿಗೆ ಕರ್ತನ ಮಾರ್ಗವು ಬಲವಾಗಿದೆ; ಅಕ್ರಮ ಮಾಡುವ ವರಿಗೆ ಅದು ನಾಶನವಾಗಿರುವದು.
- Psalm 119:92–93 ಕೀರ್ತನೆಗಳು 119:92–93ನಿನ್ನ ನ್ಯಾಯ ಪ್ರಮಾಣವು ನನಗೆ ಆನಂದವಾಗಿರದಿದ್ದರೆ ನಾನು ನನ್ನ ಸಂಕಟದಲ್ಲಿ ನಾಶವಾಗುತ್ತಿದ್ದೆನು. ಎಂದೆಂದಿಗೂ ನಿನ್ನ ಕಟ್ಟಳೆಗಳನ್ನು ಮರೆತುಬಿಡೆನು; ಯಾಕಂದರೆ ಅವುಗಳಿಂದ ನನ್ನನ್ನು ಬದುಕಿಸಿದ್ದೀ.
- Zechariah 4:6 ಜೆಕರ್ಯ 4:6ನಾನು--ನನ್ನ ಒಡೆಯನೇ, ಇಲ್ಲ ಅಂದೆನು. ಆಗ ಅವನು ಉತ್ತರಕೊಟ್ಟು ನನಗೆ ಹೇಳಿದ್ದೇನಂದರೆ--ಜೆರುಬ್ಬಾಬೆಲನಿಗೆ ಕರ್ತನ ವಾಕ್ಯವು ಇದೇ--ಬಲ ದಿಂದಲ್ಲ, ಶಕ್ತಿಯಿಂದಲ್ಲ, ನನ್ನ ಆತ್ಮದಿಂದಲೇ ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- Psalm 19:7–11 ಕೀರ್ತನೆಗಳು 19:7–11ಕರ್ತನ ನ್ಯಾಯಪ್ರಮಾಣವು ಸಂಪೂರ್ಣವಾಗಿದ್ದು ಪ್ರಾಣಕ್ಕೆ ಜೀವಕರವಾಗಿದೆ: ಕರ್ತನ ಸಾಕ್ಷಿಯು ಮೂರ್ಖರನ್ನು ಜ್ಞಾನಿಗಳನ್ನಾಗಿ ಮಾಡುತ್ತದೆ. ಕರ್ತನ ಕಟ್ಟಳೆಗಳು ನ್ಯಾಯವಾದವುಗಳಾಗಿದ್ದು ಹೃದಯಕ್ಕೆ ಸಂತೋಷಕರವಾಗಿವೆ; ಕರ್ತನ ಆಜ್ಞೆಯು ಶುದ್ಧವಾ ದದ್ದು; ಕಣ್ಣುಗಳನ್ನು ಬೆಳಗಿಸುತ್ತದೆ. ಕರ್ತನ ಭಯವು ಪವಿತ್ರವಾಗಿದ್ದು ಎಂದೆಂದಿಗೂ ನೆಲೆಯಾಗಿದೆ. ಕರ್ತನ ನ್ಯಾಯಗಳು ಸತ್ಯವಾಗಿದ್ದು ಒಟ್ಟಾಗಿ ನೀತಿಯುಳ್ಳವುಗ ಳಾಗಿವೆ. ಅವು ಬಂಗಾರಕ್ಕಿಂತಲೂ ಬಹಳ ಅಪರಂಜಿ ಗಿಂತಲೂ ಅಪೇಕ್ಷಿಸತಕ್ಕವುಗಳು; ಜೇನಿಗಿಂತಲೂ ಶೋಧಿಸಿದ ಜೇನು ತುಪ್ಪಕ್ಕಿಂತಲೂ ಸಿಹಿಯಾದವು ಗಳು. ನಿನ್ನ ಸೇವಕನು ಅವುಗಳಿಂದ ಎಚ್ಚರಿಸಲ್ಪಡು ತ್ತಾನೆ; ಅವುಗಳನ್ನು ಕೈಕೊಳ್ಳುವದರಲ್ಲಿ ದೊಡ್ಡ ಪ್ರತಿ ಫಲ ಉಂಟು.
- Proverbs 28:18 ಜ್ಞಾನೋಕ್ತಿಗಳು 28:18ಯಥಾರ್ಥ ವಾಗಿ ನಡೆಯುವವನು ರಕ್ಷಿಸಲ್ಪಡುವನು; ತನ್ನ ಮಾರ್ಗ ಗಳಲ್ಲಿ ವಕ್ರವಾಗಿ ನಡೆದುಕೊಳ್ಳುವವನು ತಟ್ಟನೆ ಬೀಳು ವನು.
- Hosea 14:9 ಹೋಶೇಯ 14:9ಈ ಸಂಗತಿಗಳನ್ನು ಗ್ರಹಿಸುವ ಜ್ಞಾನಿಯು ಯಾರು? ವಿವೇಕವುಳ್ಳವನು ಅವುಗಳನ್ನು ತಿಳಿದುಕೊಳ್ಳುವನೋ? ಕರ್ತನ ಮಾರ್ಗ ಗಳು ನ್ಯಾಯವಾಗಿದೆ; ಮತ್ತು ನೀತಿವಂತರು ಅದರಲ್ಲಿ ನಡೆಯುವರು; ಆದರೆ ಅಕ್ರಮಗಾರರು ಅವುಗಳಲ್ಲಿ ಬೀಳುವರು.
- Isaiah 50:2 ಯೆಶಾಯ 50:2ನಾನು ಬಂದಾಗ ಯಾಕೆ ಅಲ್ಲಿ ಒಬ್ಬನೂ ಇರಲಿಲ್ಲ? ನಾನು ಕರೆದಾಗ ಯಾಕೆ ಯಾರೂ ಉತ್ತರ ಕೊಡಲಿಲ್ಲ? ನನ್ನ ಹಸ್ತವು ವಿಮೋಚಿಸದಂಥಾ ಮೋಟುಗೈಯೋ? ಇಲ್ಲವೇ ಬಿಡಿಸುವದಕ್ಕೆ ನನ್ನಲ್ಲಿ ಶಕ್ತಿಯಿಲ್ಲವೋ? ಇಗೋ, ನನ್ನ ಗದರಿಕೆಯಿಂದ ನಾನು ಸಮುದ್ರವನ್ನು ಒಣಗಿಸುತ್ತೇನೆ. ನಾನು ನದಿಗಳನ್ನು ಅರಣ್ಯವನ್ನಾಗಿ ಮಾಡುತ್ತೇನೆ. ನೀರಿಲ್ಲದ ಕಾರಣ ಅಲ್ಲಿಯ ವಿಾನುಗಳು ಬಾಯಾರಿ ಸತ್ತುನಾರುವವು.