Psalms · chapter 19 · verse 7
Psalm 19:7 in Kannada
ಕರ್ತನ ನ್ಯಾಯಪ್ರಮಾಣವು ಸಂಪೂರ್ಣವಾಗಿದ್ದು ಪ್ರಾಣಕ್ಕೆ ಜೀವಕರವಾಗಿದೆ: ಕರ್ತನ ಸಾಕ್ಷಿಯು ಮೂರ್ಖರನ್ನು ಜ್ಞಾನಿಗಳನ್ನಾಗಿ ಮಾಡುತ್ತದೆ.
Kartana nyaayapramaanavu sampoornavaagiddu praanakke jeevakaravaagide: kartana saakshiyu moorkharannu jnyaanigalannaagi maaduttade.
Psalm 19:7 in English
- King James Version (KJV)
- The law of the LORD [is] perfect, converting the soul: the testimony of the LORD [is] sure, making wise the simple.
- World English Bible (WEB)
- The LORD’s law is perfect, restoring the soul. The LORD’s covenant is sure, making wise the simple.
- American Standard Version (ASV)
- The law of Jehovah is perfect, restoring the soul: The testimony of Jehovah is sure, making wise the simple.
- Bible in Basic English (BBE)
- The law of the Lord is good, giving new life to the soul: the witness of the Lord is certain, giving wisdom to the foolish.
- Darby Translation (DBY)
- The law of Jehovah is perfect, restoring the soul; the testimony of Jehovah is sure, making wise the simple;
- Webster's Bible (WBS)
- The law of the LORD [is] perfect, converting the soul: the testimony of the LORD [is] sure, making wise the simple.
- Young's Literal Translation (YLT)
- The law of Jehovah [is] perfect, refreshing the soul, The testimonies of Jehovah [are] stedfast, Making wise the simple,
Read in context
- 5ಅವನು ಮದಲಿಂಗನ ಹಾಗೆ ತನ್ನ ಕೊಠಡಿಯಿಂದ ಹೊರಟುಬಂದು ಪರಾಕ್ರಮಶಾಲಿಯ ಹಾಗೆ ಓಡಲು ಸಂತೋಷಿಸುತ್ತಾನೆ.
- 6ಆಕಾಶದ ಅಂತ್ಯದಿಂದ ಹೊರಟು ಅದರ ಅಂತ್ಯಗಳ ವರೆಗೆ ಸುತ್ತುತ್ತಾನೆ; ಅವನ ಬಿಸಿಲಿಗೆ ಮರೆಯಾದದ್ದು ಒಂದೂ ಇಲ್ಲ.
- 7ಕರ್ತನ ನ್ಯಾಯಪ್ರಮಾಣವು ಸಂಪೂರ್ಣವಾಗಿದ್ದು ಪ್ರಾಣಕ್ಕೆ ಜೀವಕರವಾಗಿದೆ: ಕರ್ತನ ಸಾಕ್ಷಿಯು ಮೂರ್ಖರನ್ನು ಜ್ಞಾನಿಗಳನ್ನಾಗಿ ಮಾಡುತ್ತದೆ.
- 8ಕರ್ತನ ಕಟ್ಟಳೆಗಳು ನ್ಯಾಯವಾದವುಗಳಾಗಿದ್ದು ಹೃದಯಕ್ಕೆ ಸಂತೋಷಕರವಾಗಿವೆ; ಕರ್ತನ ಆಜ್ಞೆಯು ಶುದ್ಧವಾ ದದ್ದು; ಕಣ್ಣುಗಳನ್ನು ಬೆಳಗಿಸುತ್ತದೆ.
- 9ಕರ್ತನ ಭಯವು ಪವಿತ್ರವಾಗಿದ್ದು ಎಂದೆಂದಿಗೂ ನೆಲೆಯಾಗಿದೆ. ಕರ್ತನ ನ್ಯಾಯಗಳು ಸತ್ಯವಾಗಿದ್ದು ಒಟ್ಟಾಗಿ ನೀತಿಯುಳ್ಳವುಗ ಳಾಗಿವೆ.
Cross references
- Psalm 119:130 ಕೀರ್ತನೆಗಳು 119:130ನಿನ್ನ ವಾಕ್ಯಗಳ ಪ್ರವೇಶವು ಬೆಳಕನ್ನು ಕೊಟ್ಟು ಮೂರ್ಖರಿಗೆ ಗ್ರಹಿಕೆಯನ್ನು ಉಂಟುಮಾಡುತ್ತದೆ.
- Psalm 111:7 ಕೀರ್ತನೆಗಳು 111:7ಆತನ ಕೈ ಕೆಲಸಗಳು ಸತ್ಯವೂ ನ್ಯಾಯವೂ ಆಗಿವೆ; ಆತನ ಕಟ್ಟಳೆಗಳೆಲ್ಲಾ ನಿಶ್ಚಯವಾದವುಗಳು.
- Colossians 3:16 ಕೊಲೊಸ್ಸೆಯವರಿಗೆ 3:16ಸಕಲ ಜ್ಞಾನದಲ್ಲಿ ಕ್ರಿಸ್ತನ ವಾಕ್ಯವು ನಿಮ್ಮಲ್ಲಿ ಸಮೃದ್ಧಿಯಾಗಿ ವಾಸಿಸಲಿ; ಒಬ್ಬರಿಗೊಬ್ಬರು ಉಪದೇಶಿಸುತ್ತಾ ಬುದ್ದಿ ಹೇಳುತ್ತಾ ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಆತ್ಮ ಸಂಬಂಧವಾದ ಹಾಡುಗಳಿಂದಲೂ ಕೃಪೆಯಿಂದ ನಿಮ್ಮ ಹೃದಯಗಳಲ್ಲಿ ಕರ್ತನಿಗೆ ಹಾಡುತ್ತಾ ಇರ್ರಿ.
- Proverbs 1:4 ಜ್ಞಾನೋಕ್ತಿಗಳು 1:4ಇವು ಮೂಢರಿಗೆ ಜಾಣತನ ವನ್ನೂ ಯೌವನಸ್ಥನಿಗೆ ತಿಳುವಳಿಕೆಯನ್ನೂ ವಿವೇಕ ವನ್ನೂ ಕೊಡುವವುಗಳಾಗಿವೆ.
- Psalm 23:3 ಕೀರ್ತನೆಗಳು 23:3ನನ್ನ ಪ್ರಾಣವನ್ನು ಪುನರ್ಜೀವಿಸ ಮಾಡುತ್ತಾನೆ. ನೀತಿಯ ದಾರಿಗಳಲ್ಲಿ ತನ್ನ ಹೆಸರಿನ ನಿಮಿತ್ತ ನನ್ನನ್ನು ನಡಿಸುತ್ತಾನೆ.
- 2 Timothy 3:15–17 2 ತಿಮೊಥೆಯನಿಗೆ 3:15–17ಚಿಕ್ಕಂದಿನಿಂದಲೂ ನೀನು ಪರಿಶುದ ಬರಹಗಳನ್ನು ತಿಳಿದವನಾಗಿದ್ದೀಯಲ್ಲಾ; ಆ ಬರಹಗಳು ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆಯ ಮೂಲಕ ರಕ್ಷಣೆ ಹೊಂದಿಸುವ ಜ್ಞಾನವನ್ನು ಕೊಡುವದಕ್ಕೆ ಶಕ್ತವಾಗಿವೆ. ಬರಹಗಳನ್ನು ತಿಳಿದವನಾಗಿದ್ದೀಯಲ್ಲಾ; ಆ ಬರಹಗಳು ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆಯ ಮೂಲಕ ರಕ್ಷಣೆ ಹೊಂದಿಸುವ ಜ್ಞಾನವನ್ನು ಕೊಡುವದಕ್ಕೆ ಶಕ್ತವಾಗಿವೆ.ಆದದರಿಂದ ದೇವರ ಮನುಷ್ಯನು ಪರಿಪೂರ್ಣ ನಾಗಿ ಸಕಲ ಸತ್ಕಾರ್ಯಗಳಿಗೆ ಸನ್ನದ್ಧನಾಗುವನು. ಆದದರಿಂದ ದೇವರ ಮನುಷ್ಯನು ಪರಿಪೂರ್ಣ ನಾಗಿ ಸಕಲ ಸತ್ಕಾರ್ಯಗಳಿಗೆ ಸನ್ನದ್ಧನಾಗುವನು.
- Psalm 119:105 ಕೀರ್ತನೆಗಳು 119:105ನಿನ್ನ ವಾಕ್ಯವು ನನ್ನ ಪಾದಕ್ಕೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ.
- Deuteronomy 32:4 ಧರ್ಮೋಪದೇಶಕಾಂಡ 32:4ಆತನೇ ಬಂಡೆ. ಆತನ ಕಾರ್ಯವು ಸಂಪೂರ್ಣ ವಾದದ್ದು. ಆತನ ಮಾರ್ಗಗಳೆಲ್ಲಾ ನ್ಯಾಯವಾಗಿವೆ; ಆತನು ಸತ್ಯದ ಮತ್ತು ದೋಷರಹಿತನಾದ ದೇವರು, ಆತನು ನೀತಿವಂತನೂ ಯಥಾರ್ಥನೂ ಆಗಿದ್ದಾನೆ.
- 2 Timothy 2:19 2 ತಿಮೊಥೆಯನಿಗೆ 2:19ಆದರೂ ದೇವರ ಅಸ್ತಿವಾರವು ಖಂಡಿತವಾಗಿ ನಿಲ್ಲುತ್ತದೆ. ಅದರ ಮೇಲೆ--ತನ್ನವರು ಯಾರಾರೆಂಬದನ್ನು ಕರ್ತನು ತಿಳಿದಿದ್ದಾನೆಂತಲೂ ಮತ್ತು ಕ್ರಿಸ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರು ದುಷ್ಟತ್ವವನ್ನು ಬಿಟ್ಟುಬಿಡ ಬೇಕೆಂತಲೂ ಮುದ್ರೆ ಉಂಟು.
- Psalm 93:5 ಕೀರ್ತನೆಗಳು 93:5ನಿನ್ನ ಸಾಕ್ಷಿಗಳು ಬಹಳ ನಿಶ್ಚಯವಾದವುಗಳು; ಓ ಕರ್ತನೇ, ಸದಾ ನಿನ್ನ ಮನೆಗೆ ಯೋಗ್ಯವಾದದ್ದು ಪರಿಶುದ್ಧತ್ವವೇ.
- Psalm 119:127–128 ಕೀರ್ತನೆಗಳು 119:127–128ಆದದರಿಂದ ನಿನ್ನ ಆಜ್ಞೆಗಳನ್ನು ಬಂಗಾರ ಕ್ಕಿಂತಲೂ ಹೌದು, ಅಪರಂಜಿಗಿಂತಲೂ ಹೆಚ್ಚಾಗಿ ಪ್ರೀತಿಮಾಡಿದ್ದೇನೆ. ನಿನ್ನ ಕಟ್ಟಳೆಗಳೆಲ್ಲಾ ಸರಿಯಾದ ವುಗಳೆಂದು ನಾನು ಎಣಿಸುತ್ತೇನೆ. ಮೋಸದ ಪ್ರತಿ ಯೊಂದು ಮಾರ್ಗವನ್ನು ಹಗೆಮಾಡುತ್ತೇನೆ.
- James 1:21–25 ಯಾಕೋಬನು 1:21–25ಆದಕಾರಣ ಎಲ್ಲಾ ಮಲಿನತೆಯನ್ನೂ ಎಲ್ಲಾ ದುಷ್ಟತನವನ್ನೂ ತೆಗೆದುಹಾಕಿ ಒಳಗೆ ಬೇರೂರಿರುವ ವಾಕ್ಯಕ್ಕೆ ನಮ್ರತೆ ಯಿಂದ ಎಡೆಕೊಡಿರಿ; ಅದು ನಿಮ್ಮ ಆತ್ಮಗಳನ್ನು ರಕ್ಷಿಸು ವದಕ್ಕೆ ಸಾಮರ್ಥ್ಯವುಳ್ಳದ್ದಾಗಿದೆ. ನೀವು ವಾಕ್ಯದ ಪ್ರಕಾರ ನಡೆಯುವವರಾಗಿರ್ರಿ; ಅದನ್ನು ಕೇಳುವವರು ಮಾತ್ರವೇ ಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಸ ಬೇಡಿರಿ. ಯಾವನಾದರೂ ವಾಕ್ಯವನ್ನು ಕೇಳುವವ ನಾಗಿದ್ದು ಅದರ ಪ್ರಕಾರ ನಡೆಯದಿದ್ದರೆ ಅವನು ಕನ್ನಡಿಯಲ್ಲಿ ತನ್ನ ಹುಟ್ಟು ಮುಖವನ್ನು ನೋಡಿದ ಮನುಷ್ಯನಂತಿರುವನು. ಇವನು ತನ್ನನ್ನು ನೋಡಿ ಕೊಂಡು ಹೋಗಿ ತಾನು ಹೀಗಿದ್ದೇನೆಂಬದನ್ನು ಆ ಕ್ಷಣವೇ ಮರೆತುಬಿಡುವನು. ಆದರೆ ಬಿಡುಗಡೆ ಯನ್ನುಂಟುಮಾಡುವ ಪರಿಪೂರ್ಣವಾದ ನಿಯಮ ವನ್ನು ಲಕ್ಷ್ಯಕೊಟ್ಟು ನೋಡಿ ಇನ್ನೂ ನೋಡುತ್ತಲೇ ಇರುವವನು (ವಾಕ್ಯವನ್ನು) ಕೇಳಿ ಮರೆತುಹೋಗುವವ ನಾಗಿರದೆ ಅದರ ಪ್ರಕಾರ ನಡೆಯುವವನಾಗಿದ್ದು ತನ್ನ ಕ್ರಿಯೆಯಿಂದ ಧನ್ಯನಾಗುವನು.