Micah · chapter 5 · verse 12
Micah 5:12 in Kannada
ನಿನ್ನ ಕೈಯೊಳಗಿಂದ ಮಂತ್ರತಂತ್ರವನ್ನು ಕಡಿದು ಬಿಡುವೆನು; ಕಣಿ ಹೇಳುವವರು ನಿನಗೆ ಇನ್ನು ಇರು ವದಿಲ್ಲ.
Ninna kaiyolaginda mantratantravannu kadidu biduvenu; kani heluvavaru ninage innu iru vadilla.
Micah 5:12 in English
- King James Version (KJV)
- And I will cut off witchcrafts out of thine hand; and thou shalt have no [more] soothsayers:
- World English Bible (WEB)
- I will destroy witchcraft from your hand. You shall have no soothsayers.
- American Standard Version (ASV)
- And I will cut off witchcrafts out of thy hand; and thou shalt have no [more] soothsayers:
- Bible in Basic English (BBE)
- I will put an end to your use of secret arts, and you will have no more readers of signs:
- Darby Translation (DBY)
- And I will cut off sorceries out of thy hand; and thou shalt have no soothsayers.
- Webster's Bible (WBS)
- And I will cut off witchcrafts out of thy hand; and thou shalt have no [more] sooth-sayers:
- Young's Literal Translation (YLT)
- And have cut off sorcerers out of thy hand, And observers of clouds thou hast none.
Read in context
- 10ಕರ್ತನು ಹೀಗೆ ಅನ್ನುತ್ತಾನೆ--ಆ ದಿನದಲ್ಲಿ ಆಗುವದೇನಂದರೆ--ನಾನು ನಿನ್ನ ಮಧ್ಯದೊಳಗಿಂದ ನಿನ್ನ ಕುದುರೆಗಳನ್ನು ಕಡಿದುಬಿಟ್ಟು ನಿನ್ನ ರಥಗಳನ್ನು ನಾಶಮಾಡುವೆನು.
- 11ನಿನ್ನ ದೇಶದ ಪಟ್ಟಣಗಳನ್ನು ಕಡಿದುಬಿಟ್ಟು ನಿನ್ನ ಕೋಟೆಗಳನ್ನೆಲ್ಲಾ ಕೆಡವಿಹಾಕುವೆನು.
- 12ನಿನ್ನ ಕೈಯೊಳಗಿಂದ ಮಂತ್ರತಂತ್ರವನ್ನು ಕಡಿದು ಬಿಡುವೆನು; ಕಣಿ ಹೇಳುವವರು ನಿನಗೆ ಇನ್ನು ಇರು ವದಿಲ್ಲ.
- 13ನಿನ್ನ ಕೆತ್ತಿದ ವಿಗ್ರಹಗಳನ್ನೂ ನಿಂತಿರುವ ನಿನ್ನ ಪ್ರತಿಮೆಗಳನ್ನೂ ನಿನ್ನ ಮಧ್ಯದೊಳಗಿಂದ ಕಡಿದು ಬಿಡುವೆನು; ನೀನು ಇನ್ನು ಸ್ವಂತ ಕೈಕೆಲಸಗಳನ್ನು ಆರಾಧಿಸುವದಿಲ್ಲ.
- 14ನಿನ್ನ ತೋಪುಗಳನ್ನು ನಿನ್ನ ಮಧ್ಯ ದೊಳಗಿಂದ ಕಿತ್ತುಹಾಕಿ ನಿನ್ನ ಪಟ್ಟಣಗಳನ್ನು ನಾಶ ಮಾಡುವೆನು.ಇದಲ್ಲದೆ ಕಿವಿಗೊಡದೆ ಇದ್ದ ಜನಾಂಗಗಳಿಗೆ ಕೋಪದಿಂದಲೂ ಉಗ್ರದಿಂದಲೂ ಮುಯ್ಯಿ ತೀರಿಸುವೆನು.
Cross references
- Deuteronomy 18:10–12 ಧರ್ಮೋಪದೇಶಕಾಂಡ 18:10–12ತನ್ನ ಮಗನನ್ನು ಇಲ್ಲವೆ ಮಗಳನ್ನು ಬೆಂಕಿದಾಟಿಸುವವನೂ ಕಣಿಹೇಳುವವನೂ ಮೇಘಮಂತ್ರದವನೂ ಸರ್ಪಮಂತ್ರದವನೂ ಮಾಟಗಾರನೂ ಗಾರಡಿಗಾರನೂ ಯಕ್ಷಿಣಿಗಾರನೂ ಮಂತ್ರಜ್ಞನೂ ಸತ್ತವರ ಹತ್ತಿರ ವಿಚಾರಿಸುವವನೂ ನಿನ್ನಲ್ಲಿ ಸಿಕ್ಕಬಾರದು. ಇಂಥವುಗಳನ್ನು ಮಾಡುವ ವರೆಲ್ಲಾ ಕರ್ತನಿಗೆ ಅಸಹ್ಯ; ಈ ಅಸಹ್ಯ ಕಾರ್ಯಗಳ ನಿಮಿತ್ತ ನಿನ್ನ ದೇವರಾದ ಕರ್ತನು ಅವರನ್ನು ನಿನ್ನ ಮುಂದೆ ಹೊರಡಿಸುತ್ತಾನೆ.
- Revelation 22:15 ಪ್ರಕಟನೆ 22:15ಆದರೆ ನಾಯಿಗಳೂ ಮಾಟಗಾರರೂ ಜಾರರೂ ಕೊಲೆ ಗಾರರೂ ವಿಗ್ರಹಾರಾಧಕರೂ ಸುಳ್ಳಾದದ್ದನ್ನು ಪ್ರೀತಿಸಿ ನಡಿಸುವವರೆಲ್ಲರೂ ಹೊರಗಿರುವರು ಎಂದು ಹೇಳಿದನು.
- Isaiah 8:19–20 ಯೆಶಾಯ 8:19–20ಲೊಚಗುಟ್ಟುವ ಪಿಸುಮಾತಾಡುವ ಮಂತ್ರಗಾರ ರನ್ನೂ ಕಣಿಹೇಳುವವರನ್ನೂ ಹುಡುಕಿರಿ ಎಂದು ಅವರು ನಿಮಗೆ ಹೇಳುವಾಗ ಜನರು ತಮ್ಮ ದೇವರನ್ನೇ ಹುಡುಕುವದಿಲ್ಲವೋ? ಜೀವಿತರಿಗಾಗಿ ಸತ್ತವರಲ್ಲಿ ಹೋಗುವದುಂಟೋ? ನ್ಯಾಯಪ್ರಮಾಣ ಮತ್ತು ಸಾಕ್ಷಿಯ ವಿಷಯದಲ್ಲಿ ಈ ವಾಕ್ಯದ ಪ್ರಕಾರ ಹೇಳದಿರು ವದು ಅವರಲ್ಲಿ ಬೆಳಕಿಲ್ಲದ್ದರಿಂದಲೇ.
- Isaiah 2:20 ಯೆಶಾಯ 2:20ಆ ದಿನದಲ್ಲಿ ಮನುಷ್ಯನು ಅಡ್ಡಬೀಳುವದಕ್ಕೋಸ್ಕರ ತಾವು ಮಾಡಿ ಕೊಂಡ ಬೆಳ್ಳಿಯ ವಿಗ್ರಹಗಳನ್ನೂ ಚಿನ್ನದ ವಿಗ್ರಹ ಗಳನ್ನೂ ಇಲಿ ಬಾವಲಿಗಳಿಗೆ ಬಿಸಾಡಿಬಿಡುವನು.
- Zechariah 13:2–4 ಜೆಕರ್ಯ 13:2–4ಸೈನ್ಯಗಳ ಕರ್ತನು--ಆ ದಿನದಲ್ಲಿ ಆಗುವದೇನಂದರೆ, ನಾನು ವಿಗ್ರಹಗಳ ಹೆಸರುಗಳನ್ನು ದೇಶದೊಳಗಿಂದ ಕಡಿದುಬಿಡುವೆನು; ಅವು ಇನ್ನು ಮೇಲೆ ಜ್ಞಾಪಕಕ್ಕೆ ಬರುವದಿಲ್ಲ; ಪ್ರವಾದಿಗಳನ್ನೂ ಅಶುದ್ಧ ಆತ್ಮವನ್ನೂ ದೇಶದೊಳಗಿಂದ ತೊಲಗಿ ಹೋಗುವಂತೆ ಮಾಡುವೆನು ಎಂದು ಅನ್ನುತ್ತಾನೆ. ಆಗುವದೇನಂದರೆ, ಯಾವನಾದರೂ ಇನ್ನು ಪ್ರವಾದಿ ಸಿದರೆ ಅವನ ಹೆತ್ತವರಾದ ತಂದೆತಾಯಿಗಳು ಅವ ನಿಗೆ--ನೀನು ಬದುಕಬಾರದು, ಕರ್ತನ ಹೆಸರಿನಲ್ಲಿ ಸುಳ್ಳು ಹೇಳುತ್ತೀ ಎಂದು ಹೇಳುವರು; ಅವನು ಪ್ರವಾದಿಸುವಾಗ ಅವನ ಹೆತ್ತವರಾದ ತಂದೆತಾಯಿ ಗಳು ಅವನನ್ನು ನೂಕಿಬಿಡುವರು. ಆ ದಿವಸದಲ್ಲಿ ಆಗುವದೇನಂದರೆ, ಪ್ರವಾದಿಗಳು ಪ್ರವಾದಿಸುವಾಗ ಅವರು ತಮ್ಮ ತಮ್ಮ ದರ್ಶನಗಳಿಗೆ ನಾಚಿಕೆಪಡುವರು; ವಂಚಿಸುವ ಹಾಗೆ ಒರಟಾದ ವಸ್ತ್ರವನ್ನು ಹಾಕಿಕೊಳ್ಳರು.
- Isaiah 2:6–8 ಯೆಶಾಯ 2:6–8ಆದದರಿಂದ ಯಾಕೋಬಿನ ಮನೆತನದವರು ಮೂಡಣ ದೇಶ ಗಳಲ್ಲಿ ಮಗ್ನರಾಗಿ ಫಿಲಿಷ್ಟಿಯರಂತೆ ಕಣಿ ಹೇಳುವವ ರಾಗಿಯೂ ಅನ್ಯ ದೇಶಗಳವರ ಮಧ್ಯದಲ್ಲಿ ಮೆಚ್ಚಿಕೆ ಯುಳ್ಳವರಾಗಿಯೂ ಇರುವದರಿಂದ ಈ ನಿನ್ನ ಜನರನ್ನು ತಳ್ಳಿಬಿಟ್ಟಿದ್ದೀ. ಅವರ ದೇಶವು ಬೆಳ್ಳಿ ಬಂಗಾರಗ ಳಿಂದಲೂ ತುಂಬಿದೆ, ಅವರ ಬೊಕ್ಕಸಗಳಿಗೆ ಮಿತಿ ಯಿಲ್ಲ; ಅವರ ದೇಶವು ಕುದುರೆಗಳಿಂದಲೂ ತುಂಬಿದೆ, ಅವರ ರಥಗಳಿಗೆ ಮಿತಿಯೇ ಇಲ್ಲ. ಅವರ ದೇಶವು ವಿಗ್ರಹಗಳಿಂದಲೂ ತುಂಬಿದೆ; ತಮ್ಮ ಬೆರಳುಗಳಿಂದ ಮಾಡಿದ ತಮ್ಮ ಕೈಕೆಲಸವನ್ನೇ ಆರಾಧಿಸುವರು.
- Isaiah 2:18 ಯೆಶಾಯ 2:18ಆತನು ವಿಗ್ರಹಗಳನ್ನು ಸಂಪೂರ್ಣ ವಾಗಿ ಇಲ್ಲದಂತೆ ಮಾಡಿಬಿಡುವನು.
- Revelation 19:20 ಪ್ರಕಟನೆ 19:20ಆಗ ಮೃಗವು ಸೆರೆಸಿಕ್ಕಿತು; ಇದಲ್ಲದೆ ಮೃಗದ ಮುಂದೆ ಮಹತ್ಕಾರ್ಯಗಳನ್ನು ಮಾಡಿ ಮೃಗದ ಗುರುತು ಹಾಕಿಸಿಕೊಂಡವರನ್ನೂ ಅದರ ವಿಗ್ರಹವನ್ನು ಆರಾಧಿಸಿದವರನ್ನೂ ಮರುಳುಗೊಳಿಸಿದ ಆ ಸುಳ್ಳು ಪ್ರವಾದಿಯೂ ಆದರ ಜೊತೆಯಲ್ಲಿ ಸೆರೆ ಸಿಕ್ಕಿದನು. ಇವರಿಬ್ಬರೂ ಜೀವಸಹಿತವಾಗಿ ಗಂಧಕ ದಿಂದಮಿಕ್ಕಾದವರು ಆ ಕುದುರೆಯ ಮೇಲೆ ಕೂತಿದ್ದಾತನ ಕತ್ತಿಯಿಂದ ಅಂದರೆ ಆತನ ಬಾಯಿಂದ ಬಂದ ಕತ್ತಿ ಯಿಂದ ಹತರಾದರು; ಹಕ್ಕಿಗಳೆಲ್ಲಾ ಅವರ ಮಾಂಸವನು ಹೊಟ್ಟೆತುಂಬಾ ತಿಂದವು.
- Isaiah 27:9 ಯೆಶಾಯ 27:9ಹೀಗಿರಲು (ಈ ಕಾರಣದಿಂದ) ಯಾಕೋಬು ಯಜ್ಞವೇದಿಯ ಕಲ್ಲುಗಳನ್ನೆಲ್ಲಾ ಒಡೆದುಹೋದ ಸುಣ್ಣದ ಕಲ್ಲುಗಳಂತೆ ಮಾಡುವಾಗ ವಿಗ್ರಹಸ್ತಂಭಗಳೂ ಸೂರ್ಯಸ್ತಂಭ ಗಳೂ ಏಳುವದಿಲ್ಲ ಮತ್ತು ಅದರ ಪಾಪಪರಿಹಾರಕ್ಕೆ ಗುರುತಾದ ಪೂರ್ಣಫಲವು ಇದೇ.