Micah · chapter 6 · verse 12
Micah 6:12 in Kannada
ಅದರ ಐಶ್ವರ್ಯವಂತರು ಬಲಾತ್ಕಾರದಿಂದ ತುಂಬಿ ದ್ದಾರೆ, ಅದರ ನಿವಾಸಿಗಳು ಸುಳ್ಳುಗಳನ್ನು ಹೇಳುವವ ರಾಗಿದ್ದಾರೆ; ಅವರ ನಾಲಿಗೆ ಅವರ ಬಾಯಿಯಲ್ಲಿ ಕಪಟವುಳ್ಳದ್ದೇ.
Adara aishvaryavantaru balaatkaaradinda tumbi ddaare, adara nivaasigalu sullugalannu heluvava raagiddaare; avara naalige avara baayiyalli kapatavulladde.
Micah 6:12 in English
- King James Version (KJV)
- For the rich men thereof are full of violence, and the inhabitants thereof have spoken lies, and their tongue [is] deceitful in their mouth.
- World English Bible (WEB)
- Her rich men are full of violence, her inhabitants speak lies, and their tongue is deceitful in their speech.
- American Standard Version (ASV)
- For the rich men thereof are full of violence, and the inhabitants thereof have spoken lies, and their tongue is deceitful in their mouth.
- Bible in Basic English (BBE)
- For its men of wealth are cruel, and its people have said what is not true, and their tongue is false in their mouth.
- Darby Translation (DBY)
- For her rich men are full of violence, and her inhabitants speak lies, and their tongue is deceitful in their mouth.
- Webster's Bible (WBS)
- For the rich men thereof are full of violence, and the inhabitants thereof have spoken lies, and their tongue [is] deceitful in their mouth.
- Young's Literal Translation (YLT)
- Whose rich ones have been full of violence, And its inhabitants have spoken falsehood, And their tongue [is] deceitful in their mouth.
Read in context
- 10ದುಷ್ಟರ ಮನೆಯಲ್ಲಿ ದುಷ್ಟತ್ವದ ಬೊಕ್ಕಸಗಳೂ ಅಸಹ್ಯವಾದಂಥ ಕಡಿಮೆಯಾದ ಅಳತೆಯೂ ಉಂಟೋ?
- 11ನಾನು ದುಷ್ಟತ್ವದ ತ್ರಾಸುಗಳುಳ್ಳವರನ್ನು ಮೋಸವಾದ ಕಲ್ಲು ಗಳ ಚೀಲವುಳ್ಳವರನ್ನು ನಿರ್ಮಲರೆಂದೆಣಿಸುವೆನೋ?
- 12ಅದರ ಐಶ್ವರ್ಯವಂತರು ಬಲಾತ್ಕಾರದಿಂದ ತುಂಬಿ ದ್ದಾರೆ, ಅದರ ನಿವಾಸಿಗಳು ಸುಳ್ಳುಗಳನ್ನು ಹೇಳುವವ ರಾಗಿದ್ದಾರೆ; ಅವರ ನಾಲಿಗೆ ಅವರ ಬಾಯಿಯಲ್ಲಿ ಕಪಟವುಳ್ಳದ್ದೇ.
- 13ಆದದರಿಂದ ನಾನು ಸಹ ನಿನ್ನನ್ನು ಹೊಡೆದು ನಿನಗೆ ರೋಗವನ್ನು ಬರಮಾಡುವೆನು; ನಿನ್ನ ಪಾಪಗಳ ನಿಮಿತ್ತ ನಿನ್ನನ್ನು ಹಾಳುಮಾಡುವೆನು.
- 14ನೀನು ಉಂಡು ತೃಪ್ತಿಯಾಗದೆ ಇರುವಿ; ನಿನ್ನೊಳಗೆ ನಿನ್ನ ಬೀಳ್ವಿಕೆಯು ಇರುವದು; ನೀನು ಹಿಡಿದು ತಪ್ಪಿಸದೆ ಇರುವಿ; ನೀನು ತಪ್ಪಿಸುವಂಥದ್ದನ್ನು ನಾನು ಕತ್ತಿಗೆ ಒಪ್ಪಿಸುವೆನು.
Cross references
- Hosea 7:13 ಹೋಶೇಯ 7:13ಅವರಿಗೆ ಅಯ್ಯೋ, ಅವರು ನನ್ನನ್ನು ಬಿಟ್ಟು ಓಡಿ ಹೋಗಿದ್ದಾರೆ; ಅವರು ನಾಶವಾಗಲಿ! ಯಾಕಂದರೆ ನನಗೆ ಅವರು ವಿರುದ್ಧವಾಗಿ ದ್ರೋಹ ಮಾಡಿದ್ದಾರೆ; ನಾನು ಅವರಿಗೆ ವಿಮೋಚನೆ ಮಾಡಿದ್ದಾಗ್ಯೂ ಅವರು ನನಗೆ ವಿರುದ್ಧ ವಾಗಿ ಸುಳ್ಳು ಹೇಳಿದ್ದಾರೆ.
- Jeremiah 9:8 ಯೆರೆಮೀಯ 9:8ಅವರ ನಾಲಿಗೆ ಎಸೆದ ಬಾಣದಂತಿದೆ, ಅದು ಮೋಸವನ್ನಾಡುತ್ತದೆ. ತನ್ನ ಬಾಯಿಂದ ತನ್ನ ನೆರೆಯವರ ಸಂಗಡ ಸಮಾಧಾನವಾಗಿ ಮಾತನಾಡಿ ಹೃದಯದಲ್ಲಿ ಅವನಿಗೆ ಹೊಂಚುಹಾಕುತ್ತಾನೆ.
- Isaiah 1:23 ಯೆಶಾಯ 1:23ನಿನ್ನ ಪ್ರಭುಗಳು ಎದುರು ಬೀಳುವವರೂ ಕಳ್ಳರ ಜೊತೆಗಾರರೂ ಆಗಿ ದ್ದಾರೆ; ಪ್ರತಿಯೊಬ್ಬನು ಲಂಚ ಪ್ರಿಯನೂ ಬಹು ಮಾನಗಳನ್ನು ಅಪೇಕ್ಷಿಸುವವನೂ ಆಗಿದ್ದಾನೆ; ಅವರು ಅನಾಥರಿಗೆ ನ್ಯಾಯತೀರಿಸರು, ಇಲ್ಲವೆ ವಿಧವೆಯರ ವ್ಯಾಜ್ಯವು ಅವರ ಬಳಿಗೆ ಬರುವದಿಲ್ಲ.
- Jeremiah 9:2–6 ಯೆರೆಮೀಯ 9:2–6ಹಾ, ಅರಣ್ಯದಲ್ಲಿ ನನಗೆ ಪ್ರಯಾಣಸ್ಥರ ಛತ್ರವು ಇದ್ದರೆ ಒಳ್ಳೇದು, ಆಗ ನನ್ನ ಜನರನ್ನು ಬಿಟ್ಟು ಹೊರಟು ಹೋಗುತ್ತಿದ್ದೆನು; ಅವರೆಲ್ಲರೂ ವ್ಯಭಿಚಾರಿಗಳೇ, ವಂಚಕರ ಕೂಟವೇ. ಅವರು ತಮ್ಮ ನಾಲಿಗೆಗಳನ್ನು ಬಿಲ್ಲಿನಂತೆ ಸುಳ್ಳುಗಳಿಗಾಗಿ ಬೊಗ್ಗಿಸುತ್ತಾರೆ. ಆದರೆ ಭೂಮಿಯಲ್ಲಿ ಸತ್ಯಕ್ಕಾಗಿ ಬಲಿಷ್ಠರಾಗುವದಿಲ್ಲ; ಅವರು ಕೇಡಿನಿಂದ ಕೇಡಿಗೆ ಹೋಗುತ್ತಾ ನನ್ನನ್ನು ಅರಿಯದೆ ಇದ್ದಾರೆಂದು ಕರ್ತನು ಅನ್ನುತ್ತಾನೆ. ನಿಮ್ಮ ನಿಮ್ಮ ನೆರೆಯವರಿಗೆ ಎಚ್ಚರಿಕೆಯಾಗಿರಿ; ಯಾವ ಸಹೋದರ ನಲ್ಲಾದರೂ ನಂಬಿಕೆ ಇಡಬೇಡಿರಿ; ಸಹೋದರರೆಲ್ಲರೂ ಸಂಪೂರ್ಣವಾಗಿ ಮೋಸಮಾಡುವರು, ನೆರೆಯವ ರೆಲ್ಲರು ಚಾಡಿಹೇಳುತ್ತಾ ತಿರುಗಾಡುವರು. ತಮ್ಮ ತಮ್ಮ ನೆರೆಯವರಿಗೆ ವಂಚನೆಮಾಡಿ ಸತ್ಯವನ್ನು ಮಾತಾ ಡರು; ಸುಳ್ಳುಗಳನ್ನು ಹೇಳುವದಕ್ಕೆ ಅವರು ತಮ್ಮ ನಾಲಿಗೆಗೆ ಬೋಧಿಸಿದ್ದಾರೆ. ಅಕ್ರಮ ಮಾಡುವದಕ್ಕೆ ಪ್ರಯಾಸಪಡುತ್ತಾರೆ. 6 ನಿನ್ನ ನಿವಾಸವು ಮೋಸದ ಮಧ್ಯದಲ್ಲಿ ಅದೆ; ಮೋಸದಿಂದಲೇ ನನ್ನನ್ನು ನಿರಾಕರಿಸು ತ್ತಾರೆಂದು ಕರ್ತನು ಅನ್ನುತ್ತಾನೆ.
- Isaiah 3:8 ಯೆಶಾಯ 3:8ಯೆರೂಸಲೇಮು ಹಾಳಾಗಿದೆ, ಯೆಹೂ ದವು ಬಿದ್ದುಹೋಗಿದೆ, ಆದದರಿಂದ ಅವರ ನಡೆನುಡಿ ಗಳು ಕರ್ತನಿಗೆ ವಿರುದ್ಧವಾಗಿ ಆತನ ಪ್ರಭಾವದ ದೃಷ್ಟಿ ಯನ್ನು ಕೆರಳಿಸುತ್ತವಲ್ಲವೇ.
- Micah 2:1–2 ಮೀಕ 2:1–2ಅಪರಾಧವನ್ನು ಯೋಚಿಸಿ, ತಮ್ಮ ಹಾಸಿಗೆಗಳ ಮೇಲೆ ಕೆಟ್ಟದ್ದನ್ನು ನಡಿಸುವವರಿಗೆ ಅಯ್ಯೋ! ಹೊತ್ತಾರೆ ಬೆಳಕಾಗುವಾಗ ಅದನ್ನು ಮಾಡುತ್ತಾರೆ; ಅದು ಅವರ ಕೈವಶದಲ್ಲಿದೆ. ಅವರು ಹೊಲಗಳನ್ನು ಆಶಿಸಿ ಬಲಾತ್ಕಾರದಿಂದ ತಕ್ಕೊಳ್ಳುತ್ತಾರೆ; ಮನೆಗಳನ್ನು ಸಹ ತೆಗೆದುಕೊಳ್ಳುತ್ತಾರೆ; ಮನುಷ್ಯನಿಗೂ ಅವನ ಮನೆಗೂ ಹೌದು, ಮನುಷ್ಯನಿಗೂ ಅವನ ಸ್ವಾಸ್ತ್ಯಕ್ಕೂ ಬಲಾತ್ಕಾರ ಮಾಡುತ್ತಾರೆ.
- Isaiah 5:7 ಯೆಶಾಯ 5:7ಸೈನ್ಯಗಳ ಕರ್ತನ ದ್ರಾಕ್ಷೇ ತೋಟವು ಇಸ್ರಾಯೇಲಿನ ಮನೆಯೇ, ಯೆಹೂದದ ಜನವೋ, ಆತನ ಇಷ್ಟದ ಗಿಡವೇ. ಆತನು ನ್ಯಾಯವನ್ನು ನಿರೀ ಕ್ಷಿಸಲು, ಇಗೋ, ಹಿಂಸೆಯೇ; ನೀತಿಯನ್ನು ನಿರೀಕ್ಷಿಸಲು ಗೋಳಾಟವೇ ಸಿಕ್ಕೀತು.
- Romans 3:13 ರೋಮಾಪುರದವರಿಗೆ 3:13ಅವರ ಗಂಟಲು ತೆರೆದಿರುವ ಸಮಾಧಿಯಾಗಿದೆ. ಅವರು ತಮ್ಮ ನಾಲಿಗೆಗಳಿಂದ ವಂಚಿಸುತ್ತಾರೆ; ಅವರ ತುಟಿಗಳ ಕೆಳಗೆ ಹಾವಿನ ವಿಷವಿದೆ.
- Zephaniah 3:3 ಚೆಫನ್ಯ 3:3ಅದರ ಮಧ್ಯದಲ್ಲಿರುವ ಪ್ರಧಾನರುಗಳು ಗರ್ಜಿಸುವ ಸಿಂಹಗಳಾಗಿದ್ದಾರೆ; ಅದರ ನ್ಯಾಯಾಧಿಪತಿಗಳು ಸಂಜೆಯ ತೋಳಗಳಾಗಿದ್ದಾರೆ; ಮರುದಿನದ ವರೆಗೂ ಕಡಿಯುವದಕ್ಕೆ ಎಲುಬುಗಳಿಲ್ಲ.
- Amos 5:11–12 ಆಮೋಸ 5:11–12ಆದಕಾರಣ ನೀವು ಬಡವನನ್ನು ತುಳಿದವರಾಗಿ ಗೋಧಿಯ ಹೊರೆಗಳನ್ನು ಅವನಿಂದ ಕಸಿದುಕೊಂಡು ಕೆತ್ತಿದ ಕಲ್ಲಿನ ಮನೆಗಳನ್ನು ಕಟ್ಟಿದ್ದೀರಲ್ಲಾ; ನೀವು ಅವುಗಳಲ್ಲಿ ವಾಸಮಾಡದೆ ಇರುವಿರಿ; ರಮ್ಯವಾದ ದ್ರಾಕ್ಷೆಯತೋಟ ಗಳನ್ನು ನೆಟ್ಟಿರಲ್ಲಾ; ಅವುಗಳ ದ್ರಾಕ್ಷಾರಸವನ್ನು ಕುಡಿ ಯಲಾರಿರಿ. ನಿಮ್ಮ ಅನೇಕ ಅಪರಾಧಗಳನ್ನೂ ನಿಮ್ಮ ಘೋರವಾದ ಪಾಪಗಳನ್ನೂ ನಾನು ಬಲ್ಲೆನು; ಅವರು ನೀತಿವಂತರನ್ನು ಬಾಧೆಪಡಿಸಿ ಲಂಚವನ್ನು ತೆಗೆದು ಕೊಂಡರು; ಬಾಗಲ ಬಳಿಯಲ್ಲಿರುವ ಬಡವರ ನ್ಯಾಯ ವನ್ನು ತೀರಿಸದೆ ಅವರು ಕಳುಹಿಸಿಬಿಟ್ಟರು.
- Ezekiel 22:6–13 ಯೆಹೆಜ್ಕೇಲನು 22:6–13ಇಗೋ ಇಸ್ರಾ ಯೇಲಿನ ಪ್ರಭುಗಳಲ್ಲಿ ಪ್ರತಿಯೊಬ್ಬನು ತನ್ನ ತನ್ನ ಶಕ್ತ್ಯಾನುಸಾರವಾಗಿ ರಕ್ತವನ್ನು ನಿನ್ನ ಮೇಲೆ ಚೆಲ್ಲುತ್ತಲೇ ಇದ್ದಾನೆ. ನಿನ್ನಲ್ಲಿ ತಂದೆಯನ್ನೂ ತಾಯಿಯನ್ನೂ ಅಲಕ್ಷ್ಯ ಮಾಡಿದ್ದಾರೆ; ನಿನ್ನಲ್ಲಿ ಅಪರಿಚಿತರಿಗೆ ಬಲಾತ್ಕಾರ ಮಾಡಿದ್ದಾರೆ; ನಿನ್ನಲ್ಲಿ ದಿಕ್ಕಿಲ್ಲದವನನ್ನೂ ವಿಧವೆಯನ್ನೂ ಪೀಡಿಸಿದ್ದಾರೆ. ನೀನು ನನ್ನ ಪರಿಶುದ್ಧ ಸಂಗತಿಗಳನು ತಿರಸ್ಕರಿಸಿ ನನ್ನ ಸಬ್ಬತ್ತುಗಳನ್ನು ಅಪವಿತ್ರಪಡಿಸಿದ್ದೀ. ನಿನ್ನಲ್ಲಿ ರಕ್ತಚೆಲ್ಲುವ ಹಾಗೆ ಚಾಡಿ ಹೇಳುವ ಜನ ಇದ್ದಾರೆ; ಬೆಟ್ಟಗಳ ಮೇಲೆ ತಿನ್ನುವವರಿದ್ದಾರೆ; ದುರಾ ಚಾರಿಗಳು ನಿನ್ನ ಮಧ್ಯದಲ್ಲಿದ್ದಾರೆ. ನಿನ್ನಲ್ಲಿ ತಂದೆಯ ಬೆತ್ತಲೆತನವನ್ನು ಹೊರಗೆಡವಿದ್ದಾರೆ; ನಿನ್ನಲ್ಲಿ ಮುಟ್ಟಾಗಿ ಪ್ರತ್ಯೇಕವಾಗಿರುವವರನ್ನು ಕೂಡಿದ್ದಾರೆ; ಒಬ್ಬನು ತನ್ನ ನೆರೆಯವನ ಹೆಂಡತಿಯ ಸಂಗಡ ದುರಾಚಾರವನ್ನು ಮಾಡಿದ್ದಾನೆ; ಮತ್ತೊಬ್ಬನು ಅಕೃತ್ಯದಿಂದ ಸೊಸೆಯನ್ನು ಕೆಡಿಸಿದ್ದಾನೆ; ಇನ್ನೊಬ್ಬನು ತನ್ನ ತಂದೆಯ ಮಗಳಾದ ತನ್ನ ಸಹೋದರಿಯನ್ನೇ ಭಂಗಪಡಿಸಿದ್ದಾನೆ. ನಿನ್ನಲ್ಲಿ ರಕ್ತ ಚೆಲ್ಲುವ ಹಾಗೆ ಲಂಚತಿಂದಿದ್ದಾರೆ; ಬಡ್ಡಿಯನ್ನೂ ಲಾಭವನ್ನೂ ತೆಗೆದುಕೊಂಡಿದ್ದಾರೆ; ಬಲಾತ್ಕಾರದಿಂದ ನಿನ್ನ ನೆರೆಯವರಲ್ಲಿ ದುರ್ಲಾಭಮಾಡಿಕೊಂಡಿದ್ದಾರೆ; ನನ್ನನ್ನು ಮರೆತುಬಿಟ್ಟಿ ದ್ದಾರೆಂದು ದೇವರಾದ ಕರ್ತನು ಹೇಳುತ್ತಾನೆ. ಆದದರಿಂದ ಇಗೋ, ನೀನು ಮಾಡಿದ ಈ ದುರ್ಲಾಭದಿಂದಲೂ ನಿನ್ನಲ್ಲಿರುವ ನಿನ್ನ ರಕ್ತಾಪ ರಾಧದಿಂದಲೂ ನಾನು ನನ್ನ ಕೈ ಬಡಿದುಕೊಂಡಿದ್ದೇನೆ.
- Amos 6:1–3 ಆಮೋಸ 6:1–3ಚೀಯೋನಿನಲ್ಲಿ ನಿಶ್ಚಿಂತೆಯಿಂದಿರುವವ ರಿಗೂ ಸಮಾರ್ಯ ಬೆಟ್ಟದಲ್ಲಿ ನಂಬಿಕೆ ಯಿಡುವವರಿಗೂ ಇಸ್ರಾಯೇಲಿನ ಮನೆತನದವರ ಯಾರ ಬಳಿಗೆ ಬರುತ್ತಾರೋ ಆ ಪ್ರಮುಖ ಜನಾಂಗ ದಲ್ಲಿ ಹೆಸರುಗೊಂಡವರಿಗೂ ಅಯ್ಯೋ! ಕಲ್ನೆಗೆ ಹಾದುಹೋಗಿ ನೋಡಿರಿ; ಅಲ್ಲಿಂದ ಮಹಾ ಹಮಾತಿಗೆ ಹೋಗಿರಿ; ಅಲ್ಲಿಂದ ಫಿಲಿಷ್ಟಿಯರ ಗಾತಿಗೆ ಇಳಿದು ಹೋಗಿರಿ; ಅವು ಈ ರಾಜ್ಯಗಳಿಗಿಂತ ಒಳ್ಳೆಯವು ಗಳೇನು? ಅವುಗಳ ಪ್ರಾಂತ್ಯವು ನಿಮ್ಮ ಪ್ರಾಂತ್ಯಕ್ಕಿಂತ ದೊಡ್ಡದೋ? ನೀವು ಕೆಟ್ಟ ದಿನವನ್ನು ದೂರಮಾಡಿ ಕೊಂಡು ಬಲಾತ್ಕಾರದ ಪೀಠವನ್ನು ಹತ್ತಿರ ಮಾಡಿಕೊ ಳ್ಳುತ್ತೀರಿ.