Nehemiah · chapter 13 · verse 12
Nehemiah 13:12 in Kannada
ಆಗ ಯೆಹೂದದವರೆಲ್ಲರು ಧಾನ್ಯ, ಹೊಸ ದ್ರಾಕ್ಷಾರಸ, ಎಣ್ಣೆ, ಇವುಗಳಲ್ಲಿ ಹತ್ತರಲೊಂದು ಪಾಲು ಕೊಠಡಿ ಗಳಲ್ಲಿ ತಂದರು.
Aaga yehoodadavarellaru dhaanya, hosa draakshaarasa, enne, ivugalalli hattaralondu paalu kothadi galalli tandaru.
Nehemiah 13:12 in English
- King James Version (KJV)
- Then brought all Judah the tithe of the corn and the new wine and the oil unto the treasuries.
- World English Bible (WEB)
- Then all Judah brought the tithe of the grain, the new wine, and the oil to the treasuries.
- American Standard Version (ASV)
- Then brought all Judah the tithe of the grain and the new wine and the oil unto the treasuries.
- Bible in Basic English (BBE)
- Then all Judah came with the tenth part of the grain and wine and oil and put it into the store-houses.
- Darby Translation (DBY)
- And all Judah brought the tithe of the corn and the new wine and the oil into the storehouses.
- Webster's Bible (WBS)
- Then all Judah brought the tithe of the corn and the new wine and the oil to the treasuries.
- Young's Literal Translation (YLT)
- and all Judah have brought in the tithe of the corn, and of the new wine, and of the oil, to the treasuries.
Read in context
- 10ಲೇವಿಯರ ಪಾಲುಗಳು ಅವರಿಗೆ ಕೊಡಲಿಲ್ಲ ವೆಂದು ನನಗೆ ತಿಳಿಯಿತು. ಯಾಕಂದರೆ ಸೇವೆಯನ್ನು ಮಾಡುವ ಲೇವಿಯರೂ ಹಾಡುಗಾರರೂ ತಮ್ಮ ತಮ್ಮ ಹೊಲಕ್ಕೆ ಓಡಿಹೋಗುತ್ತಿದ್ದರು.
- 11ಆಗ ನಾನು ಅಧಿಕಾರಸ್ತರನ್ನು ಗದರಿಸಿ ಅವರಿಗೆ--ದೇವರ ಮಂದಿರ ವನ್ನು ಬಿಟ್ಟದ್ದೇನಂದು ವಾದಿಸಿದೆನು. ಅವರನ್ನು ಕರಿಸಿ ಅವರನ್ನು ಅವರ ಸ್ಥಳಗಳಲ್ಲಿ ಇರಿಸಿದೆನು.
- 12ಆಗ ಯೆಹೂದದವರೆಲ್ಲರು ಧಾನ್ಯ, ಹೊಸ ದ್ರಾಕ್ಷಾರಸ, ಎಣ್ಣೆ, ಇವುಗಳಲ್ಲಿ ಹತ್ತರಲೊಂದು ಪಾಲು ಕೊಠಡಿ ಗಳಲ್ಲಿ ತಂದರು.
- 13ಆಗ ನಾನು ಯಾಜಕನಾದ ಶೆಲೆಮ್ಯನನ್ನೂ ಶಾಸ್ತ್ರಿಯಾದ ಚಾದೋಕನನ್ನೂ ಲೇವಿ ಯರಲ್ಲಿರುವ ಪೆದಾಯನನ್ನೂ ಅವರಿಗೆ ಸಹಾಯವಾಗಿ ಮತ್ತನ್ಯನ ಮಗನಾದ ಜಕ್ಕೂರನ ಮಗನಾದ ಹಾನಾ ನನನ್ನೂ ಬೊಕ್ಕಸಗಳ ಮೇಲೆ ನೇಮಿಸಿದೆನು; ಅವರು ನಂಬಿಗಸ್ತರೆಂದು ಎಣಿಸಲ್ಪಟ್ಟಿದ್ದರು. ತಮ್ಮ ಸಹೋ ದರರಿಗೆ ವಿಭಾಗಿಸುವದು ಅವರ ಕೆಲಸವಾಗಿತ್ತು.
- 14ನನ್ನ ದೇವರೇ, ಇದಕ್ಕೋಸ್ಕರ ನನ್ನನ್ನು ಜ್ಞಾಪಕ ಮಾಡು; ನಾನು ದೇವರ ಆಲಯಕೋಸ್ಕರವೂ ಅದರ ವಿಚಾರಗಳಿಗೋಸ್ಕರವೂ ಮಾಡಿದ ನನ್ನ ಕೆಲಸಗ ಳನ್ನು ಅಳಿಸಿಬಿಡಬೇಡ.
Cross references
- Nehemiah 10:37–39 ನೆಹೆಮೀಯ 10:37–39ನಮ್ಮ ಹಿಟ್ಟಿನಲ್ಲಿ ಮೊದಲಿನ ಪಾಲನ್ನೂ ನಮ್ಮ ಕಾಣಿಕೆಗಳನ್ನೂ ಸಕಲ ಮರಗಳ ಫಲವನ್ನೂ ದ್ರಾಕ್ಷಾ ರಸವನ್ನೂ ಎಣ್ಣೆಯನ್ನೂ ಯಾಜಕರ ಬಳಿಗೆ ನಮ್ಮ ದೇವರ ಆಲಯದ ಕೊಠಡಿಗಳಲ್ಲಿ ತಂದಿಡುವದಕ್ಕೂ; ಲೇವಿಯರು ಒಕ್ಕಲುತನದವರಿರುವ ಪಟ್ಟಣಗಳಿಂದ ಹತ್ತರಲ್ಲೊಂದು ಪಾಲನ್ನು ಹೊಂದುವ ಹಾಗೆ ನಮ್ಮ ಭೂಮಿಯ ಹತ್ತರಲ್ಲೊಂದು ಪಾಲನ್ನು ಲೇವಿಯರಿಗೆ ತರುವದಕ್ಕೂ ಪ್ರಮಾಣಮಾಡಿದೆವು. ಇದಲ್ಲದೆ ಲೇವಿಯರು ಹತ್ತರಲ್ಲೊಂದು ಪಾಲನ್ನು ತೆಗೆದುಕೊಳ್ಳುವಾಗ ಆರೋನನ ಮಗನಾದ ಯಾಜ ಕನು ಲೇವಿಯರ ಸಂಗಡ ಇರಬೇಕು. ಲೇವಿಯರು ಹತ್ತರಲ್ಲೊಂದು ಪಾಲಾದದ್ದರಲ್ಲಿ ಹತ್ತರಲ್ಲೊಂದು ಪಾಲನ್ನು ತೆಗೆದುಕೊಂಡು ನಮ್ಮ ದೇವರ ಆಲಯದಲ್ಲಿ ಕೊಠಡಿಗಳ ಬಳಿಯ ಬೊಕ್ಕಸದ ಮನೆಗೆ ತರಬೇಕು.ಪರಿಶುದ್ಧ ಸ್ಥಾನದ ಪಾತ್ರೆಗಳೂ ಸೇವೆಮಾಡುವ ಯಾಜಕರೂ ದ್ವಾರಪಾಲಕರೂ ಹಾಡುಗಾರರೂ ಇರುವ ಕೊಠಡಿಗಳಿಗೆ ಇಸ್ರಾಯೇಲ್ ಮಕ್ಕಳೂ ಲೇವಿಯರ ಮಕ್ಕಳೂ ಕಾಣಿಕೆಯಾದ ಧಾನ್ಯವನ್ನೂ ದ್ರಾಕ್ಷೇರಸವನ್ನೂ ಎಣ್ಣೆಯನ್ನೂ ತರಬೇಕು. ನಾವು ನಮ್ಮ ದೇವರ ಆಲಯವನ್ನು ಮರೆತು ಬಿಡುವುದಿಲ್ಲ ಅಂದರು. ಪರಿಶುದ್ಧ ಸ್ಥಾನದ ಪಾತ್ರೆಗಳೂ ಸೇವೆಮಾಡುವ ಯಾಜಕರೂ ದ್ವಾರಪಾಲಕರೂ ಹಾಡುಗಾರರೂ ಇರುವ ಕೊಠಡಿಗಳಿಗೆ ಇಸ್ರಾಯೇಲ್ ಮಕ್ಕಳೂ ಲೇವಿಯರ ಮಕ್ಕಳೂ ಕಾಣಿಕೆಯಾದ ಧಾನ್ಯವನ್ನೂ ದ್ರಾಕ್ಷೇರಸವನ್ನೂ ಎಣ್ಣೆಯನ್ನೂ ತರಬೇಕು. ನಾವು ನಮ್ಮ ದೇವರ ಆಲಯವನ್ನು ಮರೆತು ಬಿಡುವುದಿಲ್ಲ ಅಂದರು.
- Malachi 3:10 ಮಲಾಕಿಯ 3:10ನನ್ನ ಆಲಯದಲ್ಲಿ ಆಹಾರವಿರುವ ಹಾಗೆ ಹತ್ತನೇ ಪಾಲು ಗಳನ್ನೆಲ್ಲಾ ಬೊಕ್ಕಸದ ಮನೆಯಲ್ಲಿ ತನ್ನಿರಿ; ಇದರಿಂದ ನನ್ನನ್ನು ಪರೀಕ್ಷಿಸಿರಿ; ನಾನು ನಿಮಗೆ ಆಕಾಶದ ಕಿಟಕಿ ಗಳನ್ನು ತೆರೆದು ಸಾಕಾಗುವಷ್ಟಕ್ಕಿಂತ ಹೆಚ್ಚಾಗುವಷ್ಟು ಆಶೀರ್ವಾದ ನಿಮಗೆ ಸುರಿಸದಿರುವೆನೇ? ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- Nehemiah 12:44 ನೆಹೆಮೀಯ 12:44ಅದೇ ಕಾಲದಲ್ಲಿ ಯಾಜಕರಿಗೋಸ್ಕರವೂ ಲೇವಿ ಯರಿಗೋಸ್ಕರವೂ ನ್ಯಾಯಪ್ರಮಾಣದಲ್ಲಿ ನೇಮಿಸ ಲ್ಪಟ್ಟ ಪ್ರಕಾರ ಪಟ್ಟಣಗಳ ಹೊಲಗಳಿಂದ ಬರಬೇಕಾದ ಪಾಲುಗಳನ್ನು ಕೂಡಿಸುವ ಹಾಗೆ ಬೊಕ್ಕಸಗಳನ್ನೂ ಕಾಣಿಕೆಗಳನ್ನೂ ಪ್ರಥಮ ಫಲಗಳನ್ನೂ ಹತ್ತನೇ ಪಾಲು ಗಳನ್ನೂ ಇರಿಸುವ ಉಗ್ರಾಣಗಳ ಮೇಲೆ ಕೆಲವರು ನೇಮಿಸಲ್ಪಟ್ಟಿದ್ದರು. ಸೇವೆಮಾಡುವ ಯಾಜಕರನ್ನೂ ಲೇವಿಯರನ್ನೂ ಕುರಿತು ಯೆಹೂದದವರು ಸಂತೋಷ ಪಟ್ಟರು.
- Numbers 18:20–26 ಅರಣ್ಯಕಾಂಡ 18:20–26ಕರ್ತನು ಆರೋನನಿಗೆ--ನಿನಗೆ ಅವರ ದೇಶದಲ್ಲಿ ಯಾವ ಸ್ವಾಸ್ತ್ಯವೂ ಇರಬಾರದು; ನಿನಗೆ ಅವರ ಮಧ್ಯದಲ್ಲಿ ಯಾವ ಪಾಲೂ ಇರಬಾರದು; ನಾನೇ ಇಸ್ರಾಯೇಲ್ ಮಕ್ಕಳ ಮಧ್ಯದಲ್ಲಿ ನಿನ್ನ ಪಾಲೂ ಸ್ವಾಸ್ತ್ಯವೂ ಆಗಿದ್ದೇನೆ. ಇಗೋ, ಅವರು ಸಭೆಯ ಗುಡಾರದ ಸೇವೆಯನ್ನು ಮಾಡುವದರಿಂದ ನಾನು ಲೇವಿಯ ಮಕ್ಕಳಿಗೆ ಅವರ ಸೇವೆಗೋಸ್ಕರ ಇಸ್ರಾ ಯೇಲ್ಯರಲ್ಲಿ ಹತ್ತನೆಯ ಒಂದು ಪಾಲನ್ನೆಲ್ಲಾ ಸ್ವಾಸ್ತ್ಯ ಕ್ಕಾಗಿ ಕೊಟ್ಟಿದ್ದೇನೆ. ಇಸ್ರಾಯೇಲ್ ಮಕ್ಕಳು ಪಾಪವನ್ನು ಹೊತ್ತುಕೊಂಡು ಸಾಯದ ಹಾಗೆ ಇನ್ನು ಮೇಲೆ ಸಭೆಯ ಗುಡಾರದ ಸವಿಾಪಕ್ಕೆ ಬರಬಾರದು. ಆದರೆ ಲೇವಿಯರೇ ಸಭೆಯ ಗುಡಾರದ ಸೇವೆ ಯನ್ನು ಮಾಡಬೇಕು; ಅವರೇ ಅವರ ಅಕ್ರಮವನ್ನು ಹೊತ್ತುಕೊಳ್ಳಬೇಕು; ಇದು ನಿಮ್ಮ ಸಂತತಿಗಳಿಗೆ ನಿತ್ಯ ಕಟ್ಟಳೆಯಾಗಿದೆ; ಇಸ್ರಾಯೇಲ್ ಮಕ್ಕಳ ಮಧ್ಯದಲ್ಲಿ ಅವರಿಗೆ ಸ್ವಾಸ್ತ್ಯವು ಇರಬಾರದು. ಇಸ್ರಾಯೇಲ್ ಮಕ್ಕಳು ಕರ್ತನಿಗೆ ಎತ್ತುವ ಅರ್ಪಣೆಯಾಗಿ ಅರ್ಪಿಸುವ ಹತ್ತನೆಯ ಒಂದು ಪಾಲನ್ನು ಲೇವಿಯರಿಗೆ ಸ್ವಾಸ್ತ್ಯಕ್ಕಾಗಿ ಕೊಟ್ಟಿದ್ದೇನೆ; ಆದಕಾರಣ ಇಸ್ರಾಯೇಲ್ ಮಕ್ಕಳ ಮಧ್ಯದಲ್ಲಿ ಅವರಿಗೆ ಸ್ವಾಸ್ತ್ಯವಿರಬಾರದೆಂದು ನಾನು ಅವರಿಗೆ ಹೇಳಿದ್ದೇನೆ ಅಂದನು. ಕರ್ತನು ಮೋಶೆಯ ಸಂಗಡ ಮಾತನಾಡಿ ಹೇಳಿ ದ್ದೇನಂದರೆ-- ನೀನು ಲೇವಿಯರಿಗೆ ಹೀಗೆ ಮಾತ ನಾಡಿ ಅವರಿಗೆ ಹೇಳಬೇಕಾದದ್ದೇನಂದರೆ--ನೀವು ಇಸ್ರಾಯೇಲ್ ಮಕ್ಕಳ ಕಡೆಯಿಂದ ನಾನು ನಿಮಗೆ ಸ್ವಾಸ್ತ್ಯಕ್ಕಾಗಿ ಕೊಟ್ಟ ಹತ್ತನೆಯ ಒಂದು ಪಾಲನ್ನು ತಕ್ಕೊಂಡರೆ ನೀವು ಅದರಲ್ಲಿ ಕರ್ತನಿಗೆ ಹತ್ತನೆಯ ದರಿಂದ ಹತ್ತನೆಯದನ್ನು ಎತ್ತುವ ಅರ್ಪಣೆಯಾಗಿ ಅರ್ಪಿಸಬೇಕು.
- Deuteronomy 14:22 ಧರ್ಮೋಪದೇಶಕಾಂಡ 14:22ನೀನು ಬಿತ್ತುವದರಿಂದ ಹೊಲದಲ್ಲಿ ವರುಷ ವರುಷಕ್ಕೆ ಬರುವ ಹುಟ್ಟುವಳಿಯಿಂದ ದಶಮಾಂಶವನ್ನು ತಪ್ಪದೆ ಕೊಡಬೇಕು.
- Leviticus 27:30 ಯಾಜಕಕಾಂಡ 27:30ಭೂಮಿಯ ಬೀಜದಲ್ಲಾಗಲಿ ಮರದ ಫಲದ ಲ್ಲಾಗಲಿ ಹತ್ತನೇ ಪಾಲೆಲ್ಲಾ ಕರ್ತನದೇ. ಅದು ಕರ್ತನಿಗೆ ಪರಿಶುದ್ಧವಾದದ್ದು.