Nehemiah · chapter 4 · verse 5
Nehemiah 4:5 in Kannada
ಅವರು ಕಟ್ಟುವವರ ಮುಂದೆ ನಿನಗೆ ಕೋಪ ಎಬ್ಬಿಸಿದ್ದರಿಂದ ನೀನು ಅವರ ಅಕ್ರಮವನ್ನು ಮುಚ್ಚಬೇಡ. ಅವರ ಪಾಪವು ನಿನ್ನ ಮುಂದೆ ಅಳಿಸಲ್ಪಡದೆ ಇರಲಿ.
Avaru kattuvavara munde ninage kopa ebbisiddarinda neenu avara akramavannu muchchabeda. Avara paapavu ninna munde alisalpadade irali.
Nehemiah 4:5 in English
- King James Version (KJV)
- And cover not their iniquity, and let not their sin be blotted out from before thee: for they have provoked [thee] to anger before the builders.
- World English Bible (WEB)
- Don’t cover their iniquity. Don’t let their sin be blotted out from before you; for they have insulted the builders.”
- American Standard Version (ASV)
- and cover not their iniquity, and let not their sin be blotted out from before thee; for they have provoked [thee] to anger before the builders.
- Bible in Basic English (BBE)
- Let not their wrongdoing be covered or their sin washed away from before you: for they have made you angry before the builders.
- Darby Translation (DBY)
- And cover not their iniquity, and let not their sin be blotted out from before thee; for they have provoked the builders.
- Webster's Bible (WBS)
- And cover not their iniquity, and let not their sin be blotted out from before thee: for they have provoked [thee] to anger before the builders.
- Young's Literal Translation (YLT)
- and do not cover over their iniquity, and their sin from before Thee let not be blotted out, for they have provoked to anger — over-against those building.
Read in context
- 3ಇದಲ್ಲದೆ ಅಮ್ಮೋನ್ಯನಾದ ಟೋಬೀ ಯನು ಅವನ ಬಳಿಯಲ್ಲಿದ್ದು--ಒಂದು ನರಿಯು ಅವರು ಕಟ್ಟಿದರ ಮೇಲೆ ಹಾರಿದರೆ ಅದು ಅವರ ಕಲ್ಲುಗೋಡೆಯನ್ನು ಕೆಡವಿಹಾಕುವದು ಅಂದನು.
- 4ನಮ್ಮ ದೇವರೇ, ಕೇಳು; ಯಾಕಂದರೆ ನಾವು ತಿರಸ್ಕರಿಸಲ್ಪಟ್ಟವರಾಗಿದ್ದೇವೆ. ನೀನು ಅವರ ನಿಂದೆಯನ್ನು ಅವರ ತಲೆಗಳ ಮೇಲೆ ತಿರುಗುವಂತೆ ಮಾಡಿ ಸೆರೆಯ ದೇಶದಲ್ಲಿ ಅವರನ್ನು ಕೊಳ್ಳೆಯಾಗಿ ಒಪ್ಪಿಸು.
- 5ಅವರು ಕಟ್ಟುವವರ ಮುಂದೆ ನಿನಗೆ ಕೋಪ ಎಬ್ಬಿಸಿದ್ದರಿಂದ ನೀನು ಅವರ ಅಕ್ರಮವನ್ನು ಮುಚ್ಚಬೇಡ. ಅವರ ಪಾಪವು ನಿನ್ನ ಮುಂದೆ ಅಳಿಸಲ್ಪಡದೆ ಇರಲಿ.
- 6ಹೀಗೆಯೇ ನಾವು ಗೋಡೆಯನ್ನು ಕಟ್ಟಿದೆವು; ಗೋಡೆಯಲ್ಲಾ ಅರ್ಧ ಎತ್ತರದ ವರೆಗೂ ಒಂದಾಗಿ ಕೂಡಿತು. ಜನರು ಕೆಲಸ ಮಾಡುವದಕ್ಕೆ ಮನಸ್ಸುಳ್ಳ ವರಾಗಿದ್ದರು.
- 7ಯೆರೂಸಲೇಮಿನ ಗೋಡೆಗಳು ಕಟ್ಟಲ್ಪ ಟ್ಟವೆಂದೂ ಅದರ ಸಂದುಗಳು ಮುಚ್ಚಲ್ಪಟ್ಟವೆಂದೂ ಸನ್ಬಲ್ಲಟನು ಟೋಬೀಯನೂ ಅರಬಿಯರೂ ಅಮ್ಮೋ ನ್ಯರೂ ಅಷ್ಡೋದ್ಯರೂ ಕೇಳಿದಾಗ ಏನಾಯಿತಂದರೆ
Cross references
- Jeremiah 18:23 ಯೆರೆಮೀಯ 18:23ಆದಾಗ್ಯೂ ಕರ್ತನೇ, ಅವರು ನನ್ನನ್ನು ಸಾಯಿಸುವದಕ್ಕೆ ನನಗೆ ವಿರೋಧವಾಗಿ ಮಾಡಿದ ಆಲೋಚನೆಯನ್ನೆಲ್ಲಾ ನೀನು ಬಲ್ಲೆ; ಅವರ ಅಕ್ರಮವನ್ನು ಮನ್ನಿಸಬೇಡ; ಪಾಪವನ್ನು ನಿನ್ನ ಸನ್ನಿಧಿ ಯೊಳಗಿಂದ ಅಳಿಸಿಬಿಡಬೇಡ; ಅವರು ನಿನ್ನ ಮುಂದೆ ಕೆಡವಲ್ಪಡಲಿ; ನಿನ್ನ ಕೋಪದ ಕಾಲದಲ್ಲಿ ಅವರಿಗೆ ಹಾಗೆ ಮಾಡು.
- Psalm 109:14 ಕೀರ್ತನೆಗಳು 109:14ಅವನ ತಂದೆಗಳ ಅಕ್ರಮವು ಕರ್ತನ ಮುಂದೆ ಜ್ಞಾಪಕವಾಗಲಿ; ಅವನ ತಾಯಿಯ ಪಾಪವು ಅಳಿದು ಹೋಗದಿರಲಿ.
- Psalm 69:27–28 ಕೀರ್ತನೆಗಳು 69:27–28ಅವರ ಅಕ್ರಮಕ್ಕೆ ಅಕ್ರಮವನ್ನು ಸೇರಿಸು; ಅವರು ನಿನ್ನ ನೀತಿಯಲ್ಲಿ ಸೇರದೆ ಇರಲಿ. ಜೀವದ ಪುಸ್ತಕದೊಳಗಿಂದ ಅವರು ಅಳಿಸಲ್ಪಡಲಿ; ನೀತಿವಂತರ ಸಂಗಡ ಅವರ ಹೆಸರು ಬರೆಯಲ್ಪಡದೆ ಇರಲಿ.
- 2 Timothy 4:14 2 ತಿಮೊಥೆಯನಿಗೆ 4:14ಕಂಚುಗಾರನಾದ ಅಲೆಕ್ಸಾಂದ್ರನು ನನಗೆ ಬಹಳ ಕೇಡುಮಾಡಿದನು; ಕರ್ತನು ಅವನ ಕೃತ್ಯಗಳಿಗೆ ಸರಿ ಯಾಗಿ ಅವನಿಗೆ ಪ್ರತಿಫಲವನ್ನು ಕೊಡುವನು.
- Isaiah 44:22 ಯೆಶಾಯ 44:22ನಾನು ನಿನ್ನ ದ್ರೋಹಗಳನ್ನು ಗಾಢವಾದ ಮೇಘದಂತೆ ಅಳಿಸಿಬಿಟ್ಟಿದ್ದೇನೆ; ನಿನ್ನ ಪಾಪಗಳನ್ನು ಮೋಡದಂತೆ ಹಾರಿಸಿದ್ದೇನೆ; ನನ್ನ ಕಡೆಗೆ ತಿರಿಗಿಕೋ, ನಾನು ನಿನ್ನನ್ನು ವಿಮೋಚಿಸಿದ್ದೇನೆ.
- Psalm 51:1 ಕೀರ್ತನೆಗಳು 51:1ಓ ದೇವರೇ, ನನ್ನ ಮೇಲೆ ಕರುಣೆಯಿಡು; ನಿನ್ನ ಪ್ರೀತಿಕರುಣೆಯ ಪ್ರಕಾರ ನಿನ್ನ ಅತಿ ಶಯವಾದ ಅಂತಃಕರುಣೆಗಳ ಪ್ರಕಾರ ನನ್ನ ದ್ರೋಹ ಗಳನ್ನು ಅಳಿಸಿಬಿಡು.
- Isaiah 43:25 ಯೆಶಾಯ 43:25ನಾನಾಗಿ ನಾನೇ ನನಗೋಸ್ಕರ ನಿನ್ನ ದ್ರೋಹಗಳನ್ನು ಅಳಿಸಿಬಿಡುತ್ತೇನೆ. ನಿನ್ನ ಪಾಪ ಗಳನ್ನು ನನ್ನ ನೆನಪಿನಲ್ಲಿಡೆನು.
- Psalm 51:9 ಕೀರ್ತನೆಗಳು 51:9ನನ್ನ ಪಾಪಗಳನ್ನು ನೋಡದಂತೆ ನೀನು ವಿಮುಖನಾಗು; ನನ್ನ ಅಕ್ರಮಗಳನ್ನೆಲ್ಲಾ ಅಳಿಸಿ ಬಿಡು.
- Psalm 59:5–13 ಕೀರ್ತನೆಗಳು 59:5–13ಸೈನ್ಯಗಳ ದೇವ ರಾದ ಓ ಕರ್ತನೇ, ಇಸ್ರಾಯೇಲಿನ ದೇವರೇ, ನೀನು ಎಲ್ಲಾ ಜನಾಂಗಗಳನ್ನು ದರ್ಶಿಸುವದಕ್ಕೆ ಎಚ್ಚರವಾಗು; ದುಷ್ಟರಾದ ಅಪರಾಧಿಗಳಲ್ಲಿ ಯಾರಿಗಾದರೂ ಕರುಣೆ ತೋರಿಸಬೇಡ. ಸೆಲಾ. ಅವರು ಸಂಜೆಗೆ ಹಿಂತಿರುಗುವರು; ನಾಯಿಯ ಹಾಗೆ ಬೊಗಳುವರು; ಪಟ್ಟಣವನ್ನು ಸುತ್ತುವರು. ಇಗೋ, ತಮ್ಮ ಬಾಯಿಯಿಂದ ಕಕ್ಕುತ್ತಾರೆ; ಅವರ ತುಟಿಗಳಲ್ಲಿ ಕತ್ತಿಗಳು ಅವೆ; ಅವರು--ಕೇಳುವವನಾರು ಎಂದು ಅನ್ನುತ್ತಾರೆ. ಆದರೆ ಓ ಕರ್ತನೇ, ನೀನು ಅವರನ್ನು ನೋಡಿ ನಗುವಿ, ನೀನು ಅನ್ಯಜನಾಂಗ ಗಳನ್ನೆಲ್ಲಾ ಗೇಲಿಮಾಡುವಿ. ನನ್ನ ಬಲಕ್ಕಾಗಿ ನಾನು ನಿನ್ನನ್ನು ಕಾದುಕೊಂಡಿರುವೆನು; ದೇವರು ನನ್ನ ದುರ್ಗವಾಗಿದ್ದಾನೆ. ಕರುಣೆಯುಳ್ಳ ನನ್ನ ದೇವರು ನನಗೆ ಪ್ರಸನ್ನನಾಗುವನು; ದೇವರು ನನ್ನ ಇಷ್ಟದಂತೆ ನನ್ನ ವಿರೋಧಿಗಳಿಗೆ ಆಗುವದನ್ನು ನೋಡುವಂತೆ ಮಾಡುವನು. ನನ್ನ ಜನರು ಮರೆತುಬಿಡದ ಹಾಗೆ ಅವರನ್ನು ಕೊಲ್ಲಬೇಡ; ನಿನ್ನ ಪರಾಕ್ರಮದಿಂದ ಅವರನ್ನು ಚದರಿಸಿ, ನಮ್ಮ ಗುರಾಣಿಯಾದ ಓ ಕರ್ತನೇ, ಅವರನ್ನು ಕೆಡವಿಹಾಕು. ಅವರ ಬಾಯಿಂದ ಬರುವ ಪಾಪಕ್ಕೂ ಅವರ ತುಟಿಗಳ ಮಾತಿಗೂ ಅವರು ನುಡಿಯುವ ಶಾಪಕ್ಕೋಸ್ಕರವೂ ಸುಳ್ಳುಗಳಿಗೋಸ್ಕರವೂ ಅವರ ಅಹಂಕಾರದಲ್ಲಿ ಸಿಕ್ಕಿಬೀಳಲಿ. ಕೋಪದಿಂದ ಅವ ರನ್ನು ದಹಿಸಿಬಿಡು, ಅವರು ಇಲ್ಲದಂತೆ ಸಂಹರಿಸು; ಆಗ ದೇವರು ಯಾಕೋಬನಲ್ಲಿ ಭೂಮಿಯ ಕೊನೆ ಗಳವರೆಗೆ ಆಳುವಾತನಾಗಿದ್ದಾನೆಂದು ತಿಳುಕೊಳ್ಳು ವರು. ಸೆಲಾ.