Psalms · chapter 51 · verse 1
Psalm 51:1 in Kannada
ಓ ದೇವರೇ, ನನ್ನ ಮೇಲೆ ಕರುಣೆಯಿಡು; ನಿನ್ನ ಪ್ರೀತಿಕರುಣೆಯ ಪ್ರಕಾರ ನಿನ್ನ ಅತಿ ಶಯವಾದ ಅಂತಃಕರುಣೆಗಳ ಪ್ರಕಾರ ನನ್ನ ದ್ರೋಹ ಗಳನ್ನು ಅಳಿಸಿಬಿಡು.
O devare, nanna mele karuneyidu; ninna preetikaruneya prakaara ninna ati shayavaada antahkarunegala prakaara nanna droha galannu alisibidu.
Psalm 51:1 in English
- King James Version (KJV)
- To the chief Musician, A Psalm of David, when Nathan the prophet came unto him, after he had gone in to Bath-sheba. Have mercy upon me, O God, according to thy lovingkindness: according unto the multitude of thy tender mercies blot out my transgressions.
- World English Bible (WEB)
- For the Chief Musician. A Psalm by David, when Nathan the prophet came to him, after he had gone in to Bathsheba. Have mercy on me, God, according to your loving kindness. According to the multitude of your tender mercies, blot out my transgressions.
- American Standard Version (ASV)
- For the Chief Musician. A Psalm of David; when Nathan the prophet came unto him, after he had gone in to Bath-sheba. Have mercy upon me, O God, according to thy lovingkindness: According to the multitude of thy tender mercies blot out my transgressions.
- Bible in Basic English (BBE)
- To the chief music-maker. A Psalm. Of David. When Nathan the prophet came to him, after he had gone in to Bath-sheba. Have pity on me, O God, in your mercy; out of a full heart, take away my sin.
- Darby Translation (DBY)
- To the chief Musician. A Psalm of David; when Nathan the prophet came to him, after he had gone in to Bath-sheba. Be gracious unto me, O God, according to thy loving-kindness; according to the abundance of thy tender mercies, blot out my transgressions.
- Webster's Bible (WBS)
- To the chief Musician, A Psalm of David, when Nathan the prophet came to him, after he had gone in to Bath-sheba. Have mercy upon me, O God, according to thy loving-kindness: according to the multitude of thy tender mercies, blot out my transgressions.
- Young's Literal Translation (YLT)
- To the Overseer. — A Psalm of David, in the coming in unto him of Nathan the prophet, when he hath gone in unto Bath-Sheba. Favour me, O God, according to Thy kindness, According to the abundance of Thy mercies, Blot out my transgressions.
Read in context
- 1ಓ ದೇವರೇ, ನನ್ನ ಮೇಲೆ ಕರುಣೆಯಿಡು; ನಿನ್ನ ಪ್ರೀತಿಕರುಣೆಯ ಪ್ರಕಾರ ನಿನ್ನ ಅತಿ ಶಯವಾದ ಅಂತಃಕರುಣೆಗಳ ಪ್ರಕಾರ ನನ್ನ ದ್ರೋಹ ಗಳನ್ನು ಅಳಿಸಿಬಿಡು.
- 2ನನ್ನ ಅಕ್ರಮದಿಂದ ನನ್ನನ್ನು ಪೂರ್ಣವಾಗಿ ತೊಳೆ; ನನ್ನ ಪಾಪದಿಂದ ನನ್ನನ್ನು ಶುದ್ಧಿಮಾಡು.
- 3ನನ್ನ ದ್ರೋಹಗಳನ್ನು ನಾನು ಒಪ್ಪಿ ಕೊಳ್ಳುತ್ತೇನೆ; ನನ್ನ ಪಾಪವು ಯಾವಾಗಲೂ ನನ್ನ ಮುಂದೆ ಇದೆ.
Cross references
- Acts 3:19 ಅಪೊಸ್ತಲರ ಕೃತ್ಯಗಳು 3:19ಆದದರಿಂದ ನಿಮ್ಮ ಪಾಪಗಳು ಅಳಿಸಲ್ಪಡು ವಂತೆ ನೀವು ಮಾನಸಾಂತರಪಟ್ಟು ತಿರುಗಿಕೊಳ್ಳಿರಿ; ಆಗ ಕರ್ತನ ಸನ್ನಿಧಾನದಿಂದ ನಿಮಗೆ ವಿಶ್ರಾಂತಿಕಾಲಗಳು ಒದಗುವವು.
- Isaiah 44:22 ಯೆಶಾಯ 44:22ನಾನು ನಿನ್ನ ದ್ರೋಹಗಳನ್ನು ಗಾಢವಾದ ಮೇಘದಂತೆ ಅಳಿಸಿಬಿಟ್ಟಿದ್ದೇನೆ; ನಿನ್ನ ಪಾಪಗಳನ್ನು ಮೋಡದಂತೆ ಹಾರಿಸಿದ್ದೇನೆ; ನನ್ನ ಕಡೆಗೆ ತಿರಿಗಿಕೋ, ನಾನು ನಿನ್ನನ್ನು ವಿಮೋಚಿಸಿದ್ದೇನೆ.
- Isaiah 43:25 ಯೆಶಾಯ 43:25ನಾನಾಗಿ ನಾನೇ ನನಗೋಸ್ಕರ ನಿನ್ನ ದ್ರೋಹಗಳನ್ನು ಅಳಿಸಿಬಿಡುತ್ತೇನೆ. ನಿನ್ನ ಪಾಪ ಗಳನ್ನು ನನ್ನ ನೆನಪಿನಲ್ಲಿಡೆನು.
- Psalm 51:9 ಕೀರ್ತನೆಗಳು 51:9ನನ್ನ ಪಾಪಗಳನ್ನು ನೋಡದಂತೆ ನೀನು ವಿಮುಖನಾಗು; ನನ್ನ ಅಕ್ರಮಗಳನ್ನೆಲ್ಲಾ ಅಳಿಸಿ ಬಿಡು.
- Colossians 2:14 ಕೊಲೊಸ್ಸೆಯವರಿಗೆ 2:14ನಮಗೆ ವಿರೋಧವಾಗಿಯೂ ಪ್ರತಿ ಕೂಲವಾಗಿಯೂ ಇದ್ದ ಕೈಬರಹದ ಶಾಸನಗಳನ್ನು ಅಳಿಸಿ ಅದನ್ನು ತನ್ನ ಶಿಲುಬೆಗೆ ಜಡಿದು ಇಲ್ಲದಂತಾಗ ಮಾಡಿದನು.
- Psalm 69:16 ಕೀರ್ತನೆಗಳು 69:16ಓ ಕರ್ತನೇ, ನನಗೆ ಉತ್ತರಕೊಡು;ನಿನ್ನ ಪ್ರೀತಿ ಕರುಣೆಯು ಒಳ್ಳೇದಾಗಿದೆ; ನಿನ್ನ ಅತಿ ಶಯವಾದ ಅಂತಃಕರುಣೆಗಳ ಪ್ರಕಾರ ನನ್ನ ಕಡೆಗೆ ತಿರುಗು.
- 2 Samuel 11:2–13 2 ಸಮುವೇಲನು 11:2–13ಆಗ ಆದದ್ದೇನಂದರೆ, ದಾವೀದನು ಒಂದು ದಿನ ಸಾಯಂಕಾಲದಲ್ಲಿ ತನ್ನ ಹಾಸಿಗೆಯಿಂದ ಎದ್ದು ಅರಮನೆಯ ಉಪ್ಪರಿಗೆಯ ಮೇಲೆ ತಿರುಗಾಡುತ್ತಾ ಇರುವಾಗ ಸ್ನಾನಮಾಡುತ್ತಿರುವ ಒಬ್ಬ ಸ್ತ್ರೀಯನ್ನು ಉಪ್ಪರಿಗೆಯ ಮೇಲಿನಿಂದ ನೋಡಿದನು. ಆ ಸ್ತ್ರೀಯು ಮಹಾಸೌಂದರ್ಯ ರೂಪವುಳ್ಳವಳಾಗಿದ್ದಳು. ಆಗ ದಾವೀದನು ಆ ಸ್ತ್ರೀ ಯಾರೆಂದು ಕೇಳುವದಕ್ಕೆ--ಕಳುಹಿಸಿದಾಗ ಒಬ್ಬನು--ಅವಳು ಹಿತ್ತಿಯನಾದ ಊರೀಯನ ಹೆಂಡತಿಯಾಗಿರುವ ಎಲೀಯಾಮನ ಮಗಳಾದ ಬತ್ಷೆಬೆಯಲ್ಲವೋ ಅಂದನು. ದಾವೀದನು ದೂತರನ್ನು ಕಳುಹಿಸಿ ಅವಳನ್ನು ಕರೆಯಿಸಿದನು. ಅವಳು ಅವನ ಬಳಿಗೆ ಬಂದಾಗ ಅವಳು ತನ್ನ ಮೈಲಿಗೆಯನ್ನು ಕಳಕೊಂಡು ಶುಚಿಯಾಗಿದ್ದದರಿಂದ ದಾವೀದನು ಅವಳ ಸಂಗಡ ಮಲಗಿದನು. ತರುವಾಯ ಆಕೆಯು ತನ್ನ ಮನೆಗೆ ಹೋದಳು. ಆ ಸ್ತ್ರೀಯು ಗರ್ಭಧರಿಸಿ ತಾನು ಗರ್ಭವತಿಯಾದೆನೆಂದು ದಾವೀದನಿಗೆ ಹೇಳಿ ಕಳುಹಿಸಿದಳು. ಆಗ ದಾವೀದನು ಹಿತ್ತಿಯನಾದ ಊರೀಯನನ್ನು ತನ್ನ ಬಳಿಗೆ ಕಳುಹಿಸೆಂದು ಯೋವಾಬನಿಗೆ ಹೇಳಿ ಕಳುಹಿಸಿದನು. ಹಾಗೆಯೇ ಯೋವಾಬನು ಊರೀಯ ನನ್ನು ದಾವೀದನ ಬಳಿಗೆ ಕಳುಹಿಸಿದನು. ಊರೀ ಯನು ದಾವೀದನ ಬಳಿಗೆ ಬಂದಾಗ ದಾವೀದನು ಅವನನ್ನು--ಯೋವಾಬನೂ ಜನರೂ ಹೇಗಿದ್ದಾರೆ ಮತ್ತು ಯುದ್ಧವೂ ಹೇಗಿದೆ ಎಂದು ವಿಚಾರಿಸಿದನು. ದಾವೀದನು ಊರೀಯನಿಗೆ--ನೀನು ನಿನ್ನ ಮನೆಗೆ ಹೋಗಿ ನಿನ್ನ ಕಾಲುಗಳನ್ನು ತೊಳಕೋ ಅಂದನು. ಊರೀಯನು ಅರಸನ ಮನೆಯಿಂದ ಹೊರಡುವಾಗ ಅರಸನ ಭೋಜನವು ಅವನ ಸಂಗಡವೇ ಹೋಯಿತು. ಆದರೆ ಊರೀಯನು ತನ್ನ ಮನೆಗೆ ಹೋಗದೆ ಅರಮನೆಯ ಬಾಗಲ ಬಳಿಯಲ್ಲಿ ತನ್ನ ಯಜಮಾನನ ಎಲ್ಲಾ ಸೇವಕರ ಸಂಗಡ ಮಲಗಿದ್ದನು. ಊರೀಯನು ತನ್ನ ಮನೆಗೆ ಹೋಗಲಿಲ್ಲವೆಂದು ದಾವೀದನಿಗೆ ತಿಳಿಸ ಲ್ಪಟ್ಟಾಗ ದಾವೀದನು ಊರೀಯನಿಗೆ -- ನೀನು ಪ್ರಯಾಣದಿಂದ ಬರಲಿಲ್ಲವೋ? ಯಾಕೆ ನಿನ್ನ ಮನೆಗೆ ಹೋಗಲಿಲ್ಲ ಅಂದನು. ಊರೀಯನು ದಾವೀದ ನಿಗೆ--ಮಂಜೂಷವೂ ಇಸ್ರಾಯೇಲ್ಯರೂ ಯೆಹೂದ ದವರೂ ಡೇರೆಗಳಲ್ಲಿ ವಾಸಿಸಿರುವಾಗಲೂ ನನ್ನ ಒಡೆಯನಾದ ಯೋವಾಬನೂ ನನ್ನ ಒಡೆಯನ ಸೇವ ಕರೂ ಬೈಲಿನಲ್ಲಿ ದಂಡಿಳಿದಿರುವಾಗ ನಾನು ಉಣ್ಣುವ ದಕ್ಕೂ ಕುಡಿಯುವದಕ್ಕೂ ನನ್ನ ಹೆಂಡತಿಯ ಸಂಗಡ ಮಲಗುವದಕ್ಕೂ ನನ್ನ ಮನೆಗೆ ಹೋಗಲೋ? ನಿನ್ನ ಜೀವದಾಣೆ, ನಿನ್ನ ಪ್ರಾಣದ ಜೀವದಾಣೆ, ನಾನು ಈ ಕಾರ್ಯ ಮಾಡುವದಿಲ್ಲ ಅಂದನು. ಆಗ ದಾವೀದನು ಊರೀಯನಿಗೆ--ಈ ಹೊತ್ತು ಇಲ್ಲಿರು; ನಾಳೆ ನಿನ್ನನ್ನು ಕಳುಹಿಸುತ್ತೇನೆ ಅಂದನು. ಹಾಗೆಯೇ ಊರೀಯನು ಆ ದಿನವೂ ಮಾರನೆ ದಿನವೂ ಯೆರೂಸ ಲೇಮಿನಲ್ಲಿಯೇ ಇದ್ದನು. ದಾವೀದನು ಅವನನ್ನು ಕರೆದಾಗ ಅವನು ಅವನ ಮುಂದೆ ಉಂಡು ಕುಡಿದನು. ಇದಲ್ಲದೆ ದಾವೀದನು ಅವನನ್ನು ಅಮಲೇರುವಂತೆ ಮಾಡಿಸಿದನು. ಅವನು ಸಾಯಂಕಾಲದಲ್ಲಿ ತನ್ನ ಮನೆಗೆ ಹೋಗದೆ ತನ್ನ ಯಜಮಾನನ ಸೇವಕರ ಸಂಗಡ ಮಲಗುವದಕ್ಕೆ ಹೊರಟುಹೋದನು.
- Ephesians 1:6–8 ಎಫೆಸದವರಿಗೆ 1:6–8ತನ್ನ ಕೃಪಾಮಹಿಮೆಯ ಸ್ತುತಿಗಾಗಿ ಆತನು ನಮ್ಮನ್ನು ಆ ಪ್ರಿಯನಲ್ಲಿ ಅಂಗೀಕರಿಸಿದ್ದಾನೆ. ಆತನ ಕೃಪಾ ಐಶ್ವರ್ಯ ಕ್ಕನುಸಾರವಾಗಿ ಆತನ ರಕ್ತದ ಮೂಲಕ ಆತನಲ್ಲಿ ನಮಗೆ ವಿಮೋಚನೆಯು ಅಂದರೆ ಪಾಪಗಳ ಕ್ಷಮಾ ಪಣೆಯು ಉಂಟಾಯಿತು. ಹೀಗೆ ಆತನು ತನ್ನ ಕೃಪಾತಿಶಯದಲ್ಲಿ ಸಕಲ ಜ್ಞಾನವನ್ನೂ ಬುದ್ದಿಯನ್ನೂ ಇನ್ನೂ ಹೆಚ್ಚಾಗಿ ನಮ್ಮ ಕಡೆಗೆ ತೋರಿಸಿದ್ದಾನೆ.
- Psalm 106:45 ಕೀರ್ತನೆಗಳು 106:45ಅವರಿಗಾಗಿ ತನ್ನ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಂಡು ತನ್ನ ಅತಿಶಯವಾದ ಕರು ಣೆಯ ಪ್ರಕಾರ ಪಶ್ಚಾತ್ತಾಪಪಟ್ಟನು.
- Psalm 4:1 ಕೀರ್ತನೆಗಳು 4:1ನನ್ನ ನೀತಿಯಾದ ಓ ದೇವರೇ, ನಾನು ಮೊರೆಯಿಡಲು ನನಗೆ ಕಿವಿಗೊಡು, ಇಕ್ಕಟ್ಟಿನಲ್ಲಿ ನನಗೆ ವಿಶಾಲಮಾಡಿದಿ. ನನ್ನ ಮೇಲೆ ಕರುಣೆಯಿಟ್ಟು ನನ್ನ ಪ್ರಾರ್ಥನೆಯನ್ನು ಕೇಳು.
- Psalm 25:6–7 ಕೀರ್ತನೆಗಳು 25:6–7ಓ ಕರ್ತನೇ, ನಿನ್ನ ಅಂತಃಕರಣಗಳನ್ನೂ ನಿನ್ನ ಪ್ರೀತಿಯ ದಯೆಯನ್ನೂ ಜ್ಞಾಪಕಮಾಡಿಕೋ; ಅವು ಆದಿಯಿಂದ ಇದ್ದವುಗಳು. ಓ ಕರ್ತನೇ, ನನ್ನ ಯೌವನದ ಪಾಪಗಳನ್ನೂ ದ್ರೋಹಗಳನ್ನೂ ಜ್ಞಾಪಕ ಮಾಡಿಕೊಳ್ಳದೆ ನಿನ್ನ ಕರುಣೆಯ ಪ್ರಕಾರ ನಿನ್ನ ಒಳ್ಳೇ ತನದ ನಿಮಿತ್ತ ನೀನು ನನ್ನನ್ನು ಜ್ಞಾಪಕ ಮಾಡಿಕೋ.
- Romans 5:20–21 ರೋಮಾಪುರದವರಿಗೆ 5:20–21ಹೇಗಾದರೂ ಅಪರಾಧವು ಹೆಚ್ಚಾಗಿ ಕಂಡುಬರುವ ಹಾಗೆ ನ್ಯಾಯಪ್ರಮಾಣವು ಪ್ರವೇಶಿಸಿತು; ಆದರೆ ಪಾಪವು ಹೆಚ್ಚಿದಲ್ಲೇ ಕೃಪೆಯು ಎಷ್ಟೋ ಹೆಚ್ಚಾಗಿ ಪ್ರಬಲವಾಯಿತು.ಹೀಗೆ ಪಾಪವು ಮರಣವನ್ನುಂಟು ಮಾಡುವದಕ್ಕಾಗಿ ಪ್ರಭುತ್ವವನ್ನು ನಡಿಸಿದ ಹಾಗೆಯೇ ಕೃಪೆಯು ನೀತಿಯ ಮೂಲಕ ನಮ್ಮ ಕರ್ತನಾದ ಯೇಸು ಕ್ರಿಸ್ತನಿಂದಾದ ನಿತ್ಯಜೀವ ವನ್ನುಂಟು ಮಾಡುವದಕ್ಕೆ ಪ್ರಭುತ್ವ ನಡಿಸುವದು. ಹೀಗೆ ಪಾಪವು ಮರಣವನ್ನುಂಟು ಮಾಡುವದಕ್ಕಾಗಿ ಪ್ರಭುತ್ವವನ್ನು ನಡಿಸಿದ ಹಾಗೆಯೇ ಕೃಪೆಯು ನೀತಿಯ ಮೂಲಕ ನಮ್ಮ ಕರ್ತನಾದ ಯೇಸು ಕ್ರಿಸ್ತನಿಂದಾದ ನಿತ್ಯಜೀವ ವನ್ನುಂಟು ಮಾಡುವದಕ್ಕೆ ಪ್ರಭುತ್ವ ನಡಿಸುವದು.