Nehemiah · chapter 5 · verse 3
Nehemiah 5:3 in Kannada
ಕೆಲವರು ಈ ಬರದಲ್ಲಿ ನಾವು ಧಾನ್ಯಕೊಂಡು ಕೊಳ್ಳುವ ಹಾಗೆ ನಮ್ಮ ಹೊಲಗಳನ್ನೂ ದ್ರಾಕ್ಷೇತೋಟಗಳನ್ನೂ ಮನೆಗಳನ್ನೂ ಒತ್ತೆ ಇಟ್ಟೆವು ಅಂದರು.
Kelavaru ee baradalli naavu dhaanyakondu kolluva haage namma holagalannoo draakshetotagalannoo manegalannoo otte ittevu andaru.
Nehemiah 5:3 in English
- King James Version (KJV)
- [Some] also there were that said, We have mortgaged our lands, vineyards, and houses, that we might buy corn, because of the dearth.
- World English Bible (WEB)
- There were also some who said, “We are mortgaging our fields, our vineyards, and our houses. Let us get grain, because of the famine.”
- American Standard Version (ASV)
- Some also there were that said, We are mortgaging our fields, and our vineyards, and our houses: let us get grain, because of the dearth.
- Bible in Basic English (BBE)
- And there were some who said, We are giving our fields and our vine-gardens and our houses for debt: let us get grain because we are in need.
- Darby Translation (DBY)
- And there were that said, We have had to pledge our fields, and our vineyards, and our houses, that we might procure corn in the dearth.
- Webster's Bible (WBS)
- [Some] also there were that said, We have mortgaged our lands, vineyards, and houses, that we might buy corn, because of the dearth.
- Young's Literal Translation (YLT)
- And there are who are saying, 'Our fields, and our vineyards, and our houses, we are pledging, and we receive corn for the famine.'
Read in context
- 1ಆದರೆ ಜನರಿಂದಲೂ ಅವರ ಹೆಂಡತಿಯರಿಂದಲೂ ತಮ್ಮ ಸಹೋದರರಾದ ಯೆಹೂದ್ಯರ ಮೇಲೆ ದೊಡ್ಡ ಕೂಗು ಉಂಟಾಯಿತು.
- 2ಅವರಲ್ಲಿ ಕೆಲವರು--ನಾವೂ ನಮ್ಮ ಕುಮಾರರೂ ನಮ್ಮ ಕುಮಾರ್ತೆಯರೂ ಅನೇಕರಾದದರಿಂದ ನಾವು ಬದುಕುವ ಹಾಗೆ ಧಾನ್ಯವನ್ನು ತಕ್ಕೊಂಡೆವು ಅಂದರು.
- 3ಕೆಲವರು ಈ ಬರದಲ್ಲಿ ನಾವು ಧಾನ್ಯಕೊಂಡು ಕೊಳ್ಳುವ ಹಾಗೆ ನಮ್ಮ ಹೊಲಗಳನ್ನೂ ದ್ರಾಕ್ಷೇತೋಟಗಳನ್ನೂ ಮನೆಗಳನ್ನೂ ಒತ್ತೆ ಇಟ್ಟೆವು ಅಂದರು.
- 4ಇನ್ನು ಕೆಲವರು--ಅರಸನಿಗೆ ಕಪ್ಪವನ್ನು ಕೊಡಲು ನಾವು ನಮ್ಮ ಹೊಲಗಳ ಮೇಲೆಯೂ ನಮ್ಮ ದ್ರಾಕ್ಷೇ ತೋಟಗಳ ಮೇಲೆಯೂ ಸಾಲವನ್ನು ತೆಗೆದು ಕೊಂಡಿದ್ದೇವೆ.
- 5ಆದರೂ ನಮ್ಮ ಶರೀರವು ನಮ್ಮ ಸಹೋದರರ ಶರೀರದ ಹಾಗೆ, ನಮ್ಮ ಮಕ್ಕಳು ಅವರ ಮಕ್ಕಳ ಹಾಗೆ ಆದರೆ ಇಗೋ, ಸೇವಕರಾಗಿರಲು ನಮ್ಮ ಕುಮಾರರನ್ನೂ ಕುಮಾರ್ತೆಯರನ್ನೂ ದಾಸರಾಗುವದಕ್ಕೆ ತಂದಿದ್ದೇವೆ. ನಮ್ಮ ಕುಮಾರ್ತೆ ಯರಲ್ಲಿ ಕೆಲವರು ಆಗಲೇ ದಾಸರಾದರು. ಅವರನ್ನು ಬಿಡಿಸಲು ನಮಗೆ ಶಕ್ತಿ ಇಲ್ಲ. ಯಾಕಂದರೆ ನಮ್ಮ ಹೊಲಗಳೂ ದ್ರಾಕ್ಷೇ ತೋಟಗಳೂ ಅನ್ಯರಿಗೆ ಸೇರಿ ದವು ಅಂದರು.
Cross references
- Leviticus 25:35–39 ಯಾಜಕಕಾಂಡ 25:35–39ನಿನ್ನ ಸಹೋದರನು ಬಡವನಾಗಿ ನಿನ್ನ ಬಳಿಯಲ್ಲಿ ಕ್ಷೀಣನಾಗಿ ಬಿದ್ದುಕೊಂಡಿದ್ದರೆ ಅವನು ಪರಕೀಯ ನಾಗಿದ್ದರೂ ಪ್ರವಾಸಿಯಾಗಿದ್ದರೂ ಅವನು ನಿನ್ನ ಬಳಿ ಯಲ್ಲಿ ಬದುಕುವ ಹಾಗೆ ಅವನಿಗೆ ಸಹಾಯಮಾಡ ಬೇಕು. ನೀನು ಅವನಿಂದ ಬಡ್ಡಿಯನ್ನಾಗಲಿ ಇಲ್ಲವೆ ಲಾಭವನ್ನಾಗಲಿ ತೆಗೆದುಕೊಳ್ಳಬಾರದು. ಆದರೆ ನಿನ್ನ ಸಹೋದರನು ನಿನ್ನೊಂದಿಗೆ ಬದುಕುವಂತೆ ನಿನ್ನ ದೇವ ರಿಗೆ ಭಯಪಡು. ನೀನು ಅವನಿಗೆ ನಿನ್ನ ಹಣವನ್ನು ಬಡ್ಡಿಗೆ ಕೊಡಬಾರದು ಇಲ್ಲವೆ ಲಾಭಕ್ಕಾಗಿ ನಿನ್ನ ಆಹಾರ ವನ್ನು ಸಾಲವಾಗಿ ಕೊಡಬೇಡ. ನಿನಗೆ ಕಾನಾನ್ ದೇಶವನ್ನು ಕೊಡುವಂತೆಯೂ ನಿನಗೆ ದೇವರಾಗಿರು ವಂತೆಯೂ ನಿನ್ನನ್ನು ಐಗುಪ್ತದೇಶದೊಳಗಿಂದ ಹೊರಗೆ ಕರತಂದ ನಿನ್ನ ದೇವರಾಗಿರುವ ಕರ್ತನು ನಾನೇ. ಇದಲ್ಲದೆ ನಿನ್ನೊಂದಿಗೆ ವಾಸಿಸುವ ನಿನ್ನ ಸಹೋದರನು ಬಡವನಾಗಿದ್ದು ನಿನಗೆ ಮಾರಲ್ಪಟ್ಟಿದ್ದರೆ ಅವನು ದಾಸನಂತೆ ನಿನಗೆ ಸೇವೆಮಾಡಲು ನೀನು ಅವನನ್ನು ಒತ್ತಾಯ ಮಾಡಬಾರದು.
- Malachi 3:8–11 ಮಲಾಕಿಯ 3:8–11ಮನುಷ್ಯನು ದೇವರದನ್ನು ಕಳ್ಳತನ ಮಾಡುವನೋ? ಆದರೆ ನೀವು ನನ್ನದನ್ನು ಕಳ್ಳತನ ಮಾಡಿದ್ದೀರಿ; ಆದರೆ ನೀವು--ಯಾವದರಲ್ಲಿ ನಿನ್ನದನ್ನು, ಕಳ್ಳತನ ಮಾಡಿದ್ದೇವೆಂದು ಅನ್ನುತ್ತೀರಿ? ದಶಮಭಾಗ ಮತ್ತು ಅರ್ಪಣೆಗಳನ್ನೇ. ಇದರ ಮೂಲಕ ಶಪಿಸಲ್ಪಟ್ಟಿ; ನೀವು, ಹೌದು, ಈ ಸಮಸ್ತ ಜನಾಂಗವೇ ನನ್ನದನ್ನು ಕಳ್ಳತನ ಮಾಡಿದ್ದೀರಿ. ನನ್ನ ಆಲಯದಲ್ಲಿ ಆಹಾರವಿರುವ ಹಾಗೆ ಹತ್ತನೇ ಪಾಲು ಗಳನ್ನೆಲ್ಲಾ ಬೊಕ್ಕಸದ ಮನೆಯಲ್ಲಿ ತನ್ನಿರಿ; ಇದರಿಂದ ನನ್ನನ್ನು ಪರೀಕ್ಷಿಸಿರಿ; ನಾನು ನಿಮಗೆ ಆಕಾಶದ ಕಿಟಕಿ ಗಳನ್ನು ತೆರೆದು ಸಾಕಾಗುವಷ್ಟಕ್ಕಿಂತ ಹೆಚ್ಚಾಗುವಷ್ಟು ಆಶೀರ್ವಾದ ನಿಮಗೆ ಸುರಿಸದಿರುವೆನೇ? ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ. ಇದಲ್ಲದೆ ನಾನು ನಿಮ್ಮ ನಿಮಿತ್ತ ನುಂಗಿ ಬಿಡುವವನನ್ನು ಗದರಿಸುವೆನು; ಅವನು ನಿಮ್ಮ ಭೂಮಿಯ ಫಲವನ್ನು ಕೆಡಿಸನು; ಇಲ್ಲವೆ ನಿಮ್ಮ ದ್ರಾಕ್ಷೇಬಳ್ಳಿ ಹೊಲದಲ್ಲಿ ತನ್ನ ಫಲ ವನ್ನು ಕಾಲಕ್ಕೆ ಮುಂಚೆ ಉದುರಿಸಿಬಿಡುವದಿಲ್ಲವೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- Genesis 47:15–25 ಆದಿಕಾಂಡ 47:15–25ಐಗುಪ್ತ ದೇಶದಲ್ಲಿಯೂ ಕಾನಾನ್ದೇಶದಲ್ಲಿಯೂ ಹಣವು ಮುಗಿದಾಗ ಐಗುಪ್ತ್ಯರೆಲ್ಲರೂ ಯೋಸೇಫನ ಬಳಿಗೆ ಬಂದು--ನಮಗೆ ರೊಟ್ಟಿಯನ್ನು ಕೊಡು, ನಾವು ನಿನ್ನ ಮುಂದೆ ಯಾಕೆ ಸಾಯಬೇಕು? ಯಾಕಂದರೆ ಹಣವೆಲ್ಲಾ ತೀರಿತು ಅಂದರು. ಆಗ ಯೋಸೇಫ ನು--ನಿಮ್ಮ ದನಗಳನ್ನು ತಕ್ಕೊಂಡು ಬನ್ನಿರಿ, ಹಣ ತೀರಿದ್ದೇಯಾದರೆ ನಿಮ್ಮ ದನಗಳಿಗೆ ಬದಲಾಗಿ (ಧಾನ್ಯವನ್ನು) ಕೊಡುತ್ತೇನೆ ಅಂದನು. ಆಗ ಅವರು ತಮ್ಮ ಪಶುಗಳನ್ನು ಯೋಸೇಫನ ಬಳಿಗೆ ತಂದರು. ಯೋಸೇಫನು ಅವರ ಕುದುರೆ ಮಂದೆ ದನ ಕತ್ತೆ ಇವುಗಳ ಬದಲಾಗಿ ರೊಟ್ಟಿಯನ್ನು ಕೊಟ್ಟು. ಆ ವರುಷವೆಲ್ಲಾ ಅವರನ್ನು ಪೋಷಿಸಿದನು. ಆ ವರುಷವಾದ ಮೇಲೆ ಎರಡನೆಯ ವರುಷದಲ್ಲಿ ಅವರು ಅವನ ಬಳಿಗೆ ಬಂದು ಅವನಿಗೆ--ಹಣವೂ ಪಶುಗಳ ಮಂದೆಗಳೂ ನಮ್ಮ ಒಡೆಯನ ವಶವಾಗಿ ಮುಗಿದಿರುವದರಿಂದ ನಮ್ಮ ಶರೀರಗಳೂ ಭೂಮಿಗಳೂ ಹೊರತು ನಮ್ಮ ಒಡೆಯನ ಮುಂದೆ ಏನೂ ಉಳಿಯಲಿಲ್ಲವೆಂಬದನ್ನು ನಮ್ಮ ಒಡೆಯನಿಗೆ ಮರೆಮಾಡುವದಿಲ್ಲ. ನಾವೂ ನಮ್ಮ ಭೂಮಿಯೂ ನಿನ್ನ ಕಣ್ಣೆದುರಿಗೆ ಸಾಯುವದು ಯಾಕೆ? ನಮ್ಮನ್ನೂ ನಮ್ಮ ಭೂಮಿಯನ್ನೂ ರೊಟ್ಟಿಗೆ ಕೊಂಡುಕೋ. ಆಗ ನಮ್ಮ ಭೂಮಿಯು ಫರೋಹನ ವಶವಾಗಿ ನಾವು ಅವನಿಗೆ ಗುಲಾಮರಾಗಿರುವೆವು. ನಮಗೆ ಬೀಜವನ್ನು ಕೊಡು; ಆಗ ನಾವು ಸಾಯದೆ ಬದುಕುವೆವು, ಭೂಮಿಯು ಹಾಳಾಗದೆ ಇರುವದು ಅಂದರು. ಆಗ ಯೋಸೇಫನು ಐಗುಪ್ತದೇಶ ವನ್ನೆಲ್ಲಾ ಫರೋಹನಿಗಾಗಿ ಕೊಂಡುಕೊಂಡನು. ಹೇಗಂದರೆ, ಬರವು ಅವರಿಗೆ ಕಠಿಣವಾಗಿದ್ದರಿಂದ ಐಗುಪ್ತ್ಯರು ತಮ್ಮತಮ್ಮ ಹೊಲಗಳನ್ನು ಮಾರಿಬಿಟ್ಟರು ಹೀಗೆ ಭೂಮಿಯು ಫರೋಹನದಾಯಿತು. ಅವನು ಜನರನ್ನು ಐಗುಪ್ತದ ಒಂದು ಮೇರೆಯಿಂದ ಇನ್ನೊಂದು ಮೇರೆಯ ವರೆಗೆ ಇದ್ದ ಪಟ್ಟಣಗಳಲ್ಲಿ ಸೇರಿಸಿದನು. ವೈದಿಕರ ಭೂಮಿಯನ್ನು ಮಾತ್ರ ಅವನು ಕೊಂಡು ಕೊಳ್ಳಲಿಲ್ಲ. ಯಾಕಂದರೆ ಫರೋಹನು ವೈದಿಕರಿಗೆ ಭಾಗಗಳನ್ನು ನೇಮಿಸಿದ್ದನು. ಅವನು ಅವರಿಗೆ ನೇಮಿಸಿದ್ದನ್ನು ಅವರು ಊಟಮಾಡುತ್ತಿದ್ದರು; ಆದ ದರಿಂದ ಅವರು ತಮ್ಮ ಭೂಮಿಗಳನ್ನು ಮಾರಲಿಲ್ಲ. ಆಗ ಯೋಸೇಫನು ಜನರಿಗೆ--ಇಗೋ, ಇಂದು ನಿಮ್ಮನ್ನೂ ನಿಮ್ಮ ಭೂಮಿಯನ್ನೂ ಫರೋಹನಿಗಾಗಿ ಕೊಂಡುಕೊಂಡಿದ್ದೇನೆ. ಇಗೋ, ಇಲ್ಲಿ ನಿಮಗೆ ಬೀಜವಿದೆ. ನೀವು ಭೂಮಿಯಲ್ಲಿ ಬೀಜಬಿತ್ತಿರಿ. ಬೆಳೆ ಬಂದಾಗ ಐದನೆಯ ಪಾಲನ್ನು ಫರೋಹನಿಗೆ ಕೊಡಬೇಕು. ನಾಲ್ಕು ಪಾಲು ಹೊಲದ ಬೀಜಕ್ಕಾ ಗಿಯೂ ನಿಮ್ಮ ಆಹಾರಕ್ಕಾಗಿಯೂ ನಿಮ್ಮ ಮಕ್ಕಳ ಆಹಾರಕ್ಕಾಗಿಯೂ ನಿಮಗೆ ಇರಲಿ ಅಂದನು. ಆಗ ಅವರು--ನೀನೇ ನಮ್ಮನ್ನು ಬದುಕಿಸಿದ್ದೀ, ನಮ್ಮ ಒಡೆಯನ ಕಣ್ಣುಗಳ ಮುಂದೆ ನಮಗೆ ಕೃಪೆ ದೊರಕಲಿ. ನಾವು ಫರೋಹನ ದಾಸರಾಗಿರುವೆವು ಅಂದರು.
- Deuteronomy 15:7 ಧರ್ಮೋಪದೇಶಕಾಂಡ 15:7ನಿನ್ನ ದೇವರಾದ ಕರ್ತನು ನಿನಗೆ ಕೊಡುವ ನಿನ್ನ ದೇಶದಲ್ಲಿ ನಿನ್ನ ಬಾಗಲುಗಳ ಒಂದರಲ್ಲಿ ನಿನ್ನ ಸಹೋದರರಲ್ಲಿ ಒಬ್ಬನಾಗಿರುವ ಬಡವನು ನಿನ್ನಲ್ಲಿದ್ದರೆ ನಿನ್ನ ಹೃದಯವನ್ನು ಕಠಿಣಮಾಡಿಕೊಳ್ಳಬೇಡ. ನಿನ್ನ ಕೈಯನ್ನು ನಿನ್ನ ಬಡ ಸಹೋದರನಿಗೆ ಮುಚ್ಚಿಕೊಳ್ಳ ಬೇಡ.