Nehemiah · chapter 9 · verse 10
Nehemiah 9:10 in Kannada
ಫರೋಹನ ಮೇಲೆಯೂ ಅವನ ಸಮಸ್ತ ಸೇವಕರ ಮೇಲೆಯೂ ಅವನ ಸಮಸ್ತ ದೇಶದ ಜನರ ಮೇಲೆಯೂ ಸೂಚ ಕಕಾರ್ಯಗಳನ್ನೂ ಅದ್ಭುತಗಳನ್ನೂ ತೋರಿಸಿದಿ. ಯಾಕಂದರೆ ಇವರು ಅವರಿಗೆ ಅಹಂಕಾರಿಗಳಾಗಿ ನಡೆದರೆಂದು ತಿಳಿದಿದ್ದಿ. ಈ ಪ್ರಕಾರವೇ ನೀನು ಇಂದಿನ ಹಾಗೆ ನಿನಗೆ ಹೆಸರನ್ನು ಮಾಡಿಕೊಂಡಿದ್ದೀ.
Pharohana meleyoo avana samasta sevakara meleyoo avana samasta deshada janara meleyoo soocha kakaaryagalannoo adbhutagalannoo torisidi. Yaakandare ivaru avarige ahankaarigalaagi nadedarendu tilididdi. Ee prakaarave neenu indina haage ninage hesarannu maadikondiddee.
Nehemiah 9:10 in English
- King James Version (KJV)
- And shewedst signs and wonders upon Pharaoh, and on all his servants, and on all the people of his land: for thou knewest that they dealt proudly against them. So didst thou get thee a name, as [it is] this day.
- World English Bible (WEB)
- and showed signs and wonders against Pharaoh, against all his servants, and against all the people of his land, for you knew that they dealt proudly against them, and made a name for yourself, as it is today.
- American Standard Version (ASV)
- and showedst signs and wonders upon Pharaoh, and on all his servants, and on all the people of his land; for thou knewest that they dealt proudly against them, and didst get thee a name, as it is this day.
- Bible in Basic English (BBE)
- And you did signs and wonders on Pharaoh and all his servants and all the people of his land; for you saw how cruel they were to them. So you got yourself a name as it is today.
- Darby Translation (DBY)
- and didst shew signs and wonders upon Pharaoh, and upon all his servants, and upon all the people of his land; for thou knewest that they dealt proudly against them, and thou didst make thee a name, as it is this day.
- Webster's Bible (WBS)
- And shewedst signs and wonders upon Pharaoh, and on all his servants, and on all the people of his land: for thou knewest that they dealt proudly against them. So didst thou get thee a name, as [it is] this day.
- Young's Literal Translation (YLT)
- and dost give signs and wonders on Pharaoh, and on all his servants, and on all the people of his land, for Thou hast known that they have acted proudly against them, and Thou makest to Thee a name as [at] this day.
Read in context
- 8ಅವನ ಹೃದಯವು ನಿನ್ನ ಮುಂದೆ ನಂಬಿಕೆಯುಳ್ಳದ್ದೆಂದು ಕಂಡುಕೊಂಡು ಕಾನಾನ್ಯರೂ ಹಿತ್ತಿಯರೂ ಅಮೋರಿ ಯರೂ ಪೆರಿಜ್ಜೀಯರೂ ಯೆಬೂಸಿಯರೂ ಗಿರ್ಗಾಷಿ ಯರೂ ಇವರ ದೇಶವನ್ನು ಅವನ ಸಂತಾನಕ್ಕೆ ಕೊಡುವ ಹಾಗೆ ಅವನ ಸಂಗಡ ಒಡಂಬಡಿಕೆಯನ್ನು ಮಾಡಿದಿ; ನೀನು ಸತ್ಯವಂತನಾಗಿರುವದರಿಂದ ನಿನ್ನ ವಾಕ್ಯಗಳನ್ನು ಈಡೇರಿಸಿದಿ.
- 9ಇದಲ್ಲದೆ ಐಗುಪ್ತದಲ್ಲಿ ನಮ್ಮ ಪಿತೃಗಳ ದೀನ ಸ್ಥಿತಿಯನ್ನು ನೋಡಿದಿ; ಕೆಂಪುಸಮುದ್ರದ ಬಳಿಯಲ್ಲಿ ಅವರ ಕೂಗನ್ನು ಕೇಳಿದಿ.
- 10ಫರೋಹನ ಮೇಲೆಯೂ ಅವನ ಸಮಸ್ತ ಸೇವಕರ ಮೇಲೆಯೂ ಅವನ ಸಮಸ್ತ ದೇಶದ ಜನರ ಮೇಲೆಯೂ ಸೂಚ ಕಕಾರ್ಯಗಳನ್ನೂ ಅದ್ಭುತಗಳನ್ನೂ ತೋರಿಸಿದಿ. ಯಾಕಂದರೆ ಇವರು ಅವರಿಗೆ ಅಹಂಕಾರಿಗಳಾಗಿ ನಡೆದರೆಂದು ತಿಳಿದಿದ್ದಿ. ಈ ಪ್ರಕಾರವೇ ನೀನು ಇಂದಿನ ಹಾಗೆ ನಿನಗೆ ಹೆಸರನ್ನು ಮಾಡಿಕೊಂಡಿದ್ದೀ.
- 11ನೀನು ಅವರ ಮುಂದೆ ಸಮುದ್ರವನ್ನು ವಿಭಾಗಿಸಿದ್ದರಿಂದ ಅವರು ಸಮುದ್ರದ ಮಧ್ಯದಲ್ಲಿ ಒಣ ಭೂಮಿಯಲ್ಲಿ ಹಾದುಹೋದರು. ಆದರೆ ಅವರನ್ನು ಹಿಂದಟ್ಟಿದವರನ್ನು ಅಗಾಧಗಳಲ್ಲಿ ಕಲ್ಲಿನ ಹಾಗೆ ಮಹಾ ಜಲರಾಶಿಗಳಲ್ಲಿ ದೊಬ್ಬಿ ಬಿಟ್ಟಿ.
- 12ಇದಲ್ಲದೆ ಹಗಲಿನಲ್ಲಿ ಮೇಘ ಸ್ತಂಭ ದಿಂದಲೂ ಅವರು ನಡೆಯಬೇಕಾದ ಮಾರ್ಗದಲ್ಲಿ ಅವರಿಗೆ ಬೆಳಕಾಗುವ ಹಾಗೆ ರಾತ್ರಿಯಲ್ಲಿ ಅಗ್ನಿ ಸ್ತಂಭ ದಿಂದಲೂ ಅವರನ್ನು ನಡಿಸಿದಿ.
Cross references
- Jeremiah 32:20 ಯೆರೆಮೀಯ 32:20ನೀನು ಈ ದಿನದ ವರೆಗೂ ಐಗುಪ್ತ ದೇಶದಲ್ಲಿಯೂ ಇಸ್ರಾ ಯೇಲಿನಲ್ಲಿಯೂ ಮನುಷ್ಯರೊಳಗೆ ಗುರುತುಗಳನ್ನೂ ಲಕ್ಷಣಗಳನ್ನೂ ಇಟ್ಟಿದ್ದೀ; ಇಂದಿನ ಪ್ರಕಾರ ನಿನಗೆ ಹೆಸರನ್ನು ಉಂಟುಮಾಡಿಕೊಂಡಿದ್ದೀ.
- Daniel 9:15 ದಾನಿಯೇಲನು 9:15ಆದರೆ ಈಗ, ಓ ನಮ್ಮ ದೇವರಾದ ಕರ್ತನೇ, ನಿನ್ನ ಭುಜಬಲವನ್ನು ತೋರಿಸಿ ನಿನ್ನ ಜನರನ್ನು ಐಗುಪ್ತದೇಶದೊಳಗಿಂದ ಪಾರುಮಾಡಿ, ಈವರೆಗೂ ಪ್ರಸಿದ್ಧವಾದ ಹೆಸರನ್ನು ಪಡೆದುಕೊಂಡಾತನೇ, ನಾವು ಪಾಪಮಾಡಿ ಕೆಟ್ಟವರಾಗಿ ನಡೆದುಕೊಂಡಿದ್ದೇವೆ.
- Deuteronomy 4:34 ಧರ್ಮೋಪದೇಶಕಾಂಡ 4:34ಇಲ್ಲವೆ ನಿಮ್ಮ ದೇವರಾದ ಕರ್ತನು ಐಗುಪ್ತದಲ್ಲಿ ನಿಮ್ಮ ಕಣ್ಣುಗಳ ಮುಂದೆ ನಿಮಗೆ ಮಾಡಿದ್ದೆಲ್ಲಾದರ ಹಾಗೆ ಬೇರೆ ದೇವರು ಹೋಗಿ ಒಂದು ಜನಾಂಗವನ್ನು ಮತ್ತೊಂದು ಜನಾಂಗದ ಮಧ್ಯ ದಿಂದ ಶೋಧನೆಗಳು ಗುರುತುಗಳು ಅದ್ಭುತಗಳು ಇವುಗಳ ಮೂಲಕವಾಗಿಯೂ ಯುದ್ಧದಿಂದಲೂ ಬಲವಾದ ಕೈಯಿಂದಲೂ ಚಾಚಿದ ತೋಳಿನಿಂದಲೂ ಮಹಾಭೀತಿಯಿಂದಲೂ ತಕ್ಕೊಳ್ಳುವದಕ್ಕೆ ಪ್ರಯತ್ನ ಮಾಡಿದನೋ?
- Exodus 5:2 ವಿಮೋಚನಕಾಂಡ 5:2ಫರೋಹನು--ನಾನು ಆತನ ಸ್ವರಕ್ಕೆ ವಿಧೇಯನಾಗಿ ಇಸ್ರಾಯೇಲ್ಯರನ್ನು ಕಳುಹಿಸಿ ಬಿಡುವಂತೆ ಆ ಕರ್ತನು ಯಾರು? ಆ ಕರ್ತನನ್ನು ನಾನರಿಯೆನು ಮತ್ತು ಇಸ್ರಾಯೇಲ್ಯರನ್ನು ಕಳುಹಿಸುವದಿಲ್ಲ ಅಂದನು.
- Exodus 18:11 ವಿಮೋಚನಕಾಂಡ 18:11ಎಲ್ಲಾ ದೇವರು ಗಳಿಗಿಂತ ಕರ್ತನೇ ದೊಡ್ಡವನೆಂದು ಈಗ ನಾನು ತಿಳಿದುಕೊಂಡಿದ್ದೇನೆ. ಐಗುಪ್ತ್ಯರು ಗರ್ವಪಟ್ಟಿದ್ದರಿಂದ ಆತನು ಅವರನ್ನು ತಗ್ಗಿಸಿದನು ಅಂದನು.
- Exodus 14:1–31 ವಿಮೋಚನಕಾಂಡ 14:1–31ಕರ್ತನು ಮಾತನಾಡಿ ಮೋಶೆಗೆ-- ಇಸ್ರಾಯೇಲ್ ಮಕ್ಕಳು ತಿರುಗಿಕೊಂಡು ಪೀಹಹೀರೋತಿಗೆ ಎದುರಾಗಿ ಮಿಗ್ದೋಲಿಗೂ ಸಮುದ್ರಕ್ಕೂ ಮಧ್ಯದಲ್ಲಿ ಬಾಳ್ಚೆಫೋನಿಗೆ ಎದುರಾಗಿ ಇಳುಕೊಳ್ಳಬೇಕೆಂದು ಅವರಿಗೆ ಹೇಳು. ಅದಕ್ಕೆ ಎದುರಾಗಿ ನೀವು ಸಮುದ್ರದ ತೀರದಲ್ಲಿ ಇಳುಕೊಳ್ಳ ಬೇಕು. ಫರೋಹನು ಇಸ್ರಾಯೇಲ್ ಮಕ್ಕಳ ವಿಷಯದಲ್ಲಿ--ಅವರು ದೇಶದಲ್ಲಿ ಸಿಕ್ಕಿಕೊಂಡರು. ಅರಣ್ಯವು ಅವರನ್ನು ಒಳಗೆ ಮುಚ್ಚಿಬಿಟ್ಟಿತು ಎಂದು ಹೇಳುವನು. ಇದಲ್ಲದೆ ಫರೋಹನು ಅವರನ್ನು ಹಿಂದಟ್ಟುವಂತೆ ನಾನು ಅವನ ಹೃದಯವನ್ನು ಕಠಿಣ ಮಾಡುವೆನು; ಫರೋಹನಲ್ಲಿಯೂ ಅವನ ಎಲ್ಲಾ ಸೈನ್ಯದಲ್ಲಿಯೂ ನನ್ನನ್ನು ಘನಪಡಿಸಿಕೊಳ್ಳುವೆನು; ಆಗ ನಾನೇ ಕರ್ತನೆಂದು ಐಗುಪ್ತ್ಯರು ತಿಳಿಯುವರು ಎಂದು ಹೇಳಿದನು. ಅವರು ಹಾಗೆಯೇ ಮಾಡಿದರು. ಜನರು ಓಡಿಹೋದರೆಂದು ಐಗುಪ್ತದ ಅರಸನಿಗೆ ತಿಳಿಸಲ್ಪಟ್ಟಿತು; ಆಗ ಫರೋಹನ ಮತ್ತು ಅವನ ಸೇವಕರ ಹೃದಯವು ಜನರಿಗೆ ವಿರೋಧವಾಗಿ ತಿರುಗಿಕೊಂಡಿತು; ಅವರು--ಇಸ್ರಾಯೇಲ್ಯರು ನಮ್ಮ ಸೇವೆಮಾಡುವದನ್ನು ಬಿಟ್ಟುಹೋಗಿಬಿಡುವಂತೆ ನಾವು ಯಾಕೆ ಮಾಡಿದೆವು ಅಂದರು. ಆಗ ಅವನು ತನ್ನ ರಥವನ್ನು ಸಿದ್ಧಮಾಡಿ ಕೊಂಡು ತನ್ನ ಜನರೊಂದಿಗೆ ಹೊರಟನು. ಇದಲ್ಲದೆ ಅವನು ಆರಿಸಿಕೊಂಡ ಆರು ನೂರು ರಥಗಳನ್ನೂ ಐಗುಪ್ತದ ಎಲ್ಲಾ ರಥಗಳನ್ನೂ ಅವುಗಳ ಮೇಲೆ ಅಧಿ ಪತಿಗಳನ್ನೂ ತೆಗೆದುಕೊಂಡು ಹೋದನು. ಐಗುಪ್ತದ ಅರಸನಾದ ಫರೋಹನ ಹೃದಯವನ್ನು ಕರ್ತನು ಕಠಿಣ ಮಾಡಿದ್ದರಿಂದ ಅವನು ಇಸ್ರಾಯೇಲ್ ಮಕ್ಕಳನ್ನು ಹಿಂದಟ್ಟಿದನು. ಆದರೆ ಇಸ್ರಾಯೇಲ್ ಮಕ್ಕಳು ಧೈರ್ಯ ದಿಂದ ಹೊರಗೆ ಹೋದರು. ಐಗುಪ್ತ್ಯರು ಅವರನ್ನು ಹಿಂದಟ್ಟಿದ್ದರು; ಅವರು ಸಮುದ್ರ ತೀರದಲ್ಲಿ ಇಳು ಕೊಂಡಿರುವಾಗ ಫರೋಹನ ಎಲ್ಲಾ ಕುದುರೆಗಳೂ ರಥಗಳೂ ಕುದುರೆ ಸವಾರರೂ ಅವನ ಸೈನ್ಯವೂ ಪೀಹಹೀರೋತಿನ ಸವಿಾಪದಲ್ಲಿ ಬಾಳ್ಚೆಫೋನಿನ ಎದುರಾಗಿ ಸವಿಾಪಿಸಿದರು. ಫರೋಹನು ಸವಿಾಪಕ್ಕೆ ಬರುತ್ತಿರಲು ಇಗೋ, ಇಸ್ರಾಯೇಲ್ ಮಕ್ಕಳು ತಮ್ಮ ಕಣ್ಣುಗಳನ್ನೆತ್ತಿ ಹಿಂದೆ ಬರುತ್ತಿರುವ ಐಗುಪ್ತ್ಯರನ್ನು ಕಂಡು ಇಸ್ರಾಯೇಲ್ ಮಕ್ಕಳು ಬಹಳವಾಗಿ ಭಯಪಟ್ಟು ಕರ್ತನಿಗೆ ಮೊರೆಯಿ ಟ್ಟರು. ಅವರು ಮೋಶೆಗೆ--ಐಗುಪ್ತದಲ್ಲಿ ಸಮಾಧಿ ಗಳು ಇಲ್ಲದ ಕಾರಣ ನಾವು ಅರಣ್ಯದಲ್ಲಿ ಸಾಯುವ ಹಾಗೆ ನಮ್ಮನ್ನು ಕರಕೊಂಡು ಬಂದಿಯೋ? ಯಾಕೆ ನೀನು ಈ ಪ್ರಕಾರ ನಮಗೆ ಮಾಡಿ ನಮ್ಮನ್ನು ಐಗುಪ್ತ ದಿಂದ ಕರಕೊಂಡು ಬಂದಿ? ನಾವು ಐಗುಪ್ತದೇಶ ದಲ್ಲಿದ್ದಾಗಲೇ--ನೀನು ನಮ್ಮ ಗೊಡವೆಗೆ ಬರಬೇಡ; ನಾವು ಐಗುಪ್ತ್ಯರಿಗೆ ಸೇವೆಮಾಡುವೆವು. ನಾವು ಅರಣ್ಯ ದಲ್ಲಿ ಸಾಯುವದಕ್ಕಿಂತ ಐಗುಪ್ತ್ಯರಿಗೆ ಸೇವೆ ಮಾಡು ವದು ಒಳ್ಳೇದಾಗಿತ್ತಲ್ಲವೇ ಎಂದು ಹೇಳಿದರು. ಅದಕ್ಕೆ ಮೋಶೆಯು ಜನರಿಗೆ--ನೀವು ಭಯಪಡ ಬೇಡಿರಿ; ಕದಲದೆ ನಿಲ್ಲಿರಿ; ಕರ್ತನು ನಿಮಗೆ ಈ ಹೊತ್ತು ತೋರಿಸುವ ರಕ್ಷಣೆಯನ್ನು ನೋಡಿರಿ. ನೀವು ಈ ಹೊತ್ತು ನೋಡುವ ಐಗುಪ್ತ್ಯರನ್ನು ಇನ್ನು ಮುಂದೆ ಎಂದೆಂದಿಗೂ ನೋಡುವದಿಲ್ಲ. ಕರ್ತನು ನಿಮ ಗೋಸ್ಕರ ಯುದ್ಧಮಾಡುವನು; ಆದರೆ ನೀವು ಸಮಾಧಾನವಾಗಿರ್ರಿ ಅಂದನು. ಆಗ ಕರ್ತನು ಮೋಶೆಗೆ--ನೀನು ನನಗೆ ಯಾಕೆ ಮೊರೆಯಿಡುತ್ತೀ? ಇಸ್ರಾಯೇಲ್ ಮಕ್ಕಳು ಮುಂದಕ್ಕೆ ಹೋಗಬೇಕೆಂದು ಹೇಳು. ನೀನು ನಿನ್ನ ಕೋಲನ್ನು ಎತ್ತಿ ಸಮುದ್ರದ ಮೇಲೆ ಕೈಚಾಚಿ ಅದನ್ನು ವಿಭಾಗಿಸು. ಆಗ ಇಸ್ರಾಯೇಲ್ ಮಕ್ಕಳು ಸಮುದ್ರದ ಮಧ್ಯದಲ್ಲಿ ಒಣಗಿದ ನೆಲದ ಮೇಲೆ ಹೋಗುವರು. ಇಗೋ, ನಾನು ಐಗುಪ್ತ್ಯರ ಹೃದಯವನ್ನು ಕಠಿಣಮಾಡುತ್ತೇನೆ; ಅವರು ಇವರನ್ನು ಹಿಂದಟ್ಟುವರು. ಇದಲ್ಲದೆ ಫರೋಹನ ಮೇಲೆಯೂ ಅವನ ಎಲ್ಲಾ ಸೈನ್ಯದ ಮೇಲೆಯೂ ಅವನ ರಥಗಳ ಮೇಲೆಯೂ ಕುದುರೆಯ ಸವಾರರ ಮೇಲೆಯೂ ನನ್ನನ್ನು ಘನಪಡಿಸಿಕೊಳ್ಳುವೆನು. ನಾನು ಫರೋ ಹನ ಮೇಲೆಯೂ ಅವನ ರಥಗಳ ಮೇಲೆಯೂ ಕುದುರೆಯ ಸವಾರರ ಮೇಲೆಯೂ ನನ್ನನ್ನು ಘನಪಡಿಸಿ ಕೊಂಡಾಗ ನಾನೇ ಕರ್ತನೆಂದು ಐಗುಪ್ತ್ಯರು ತಿಳಿದು ಕೊಳ್ಳುವರು ಅಂದನು. ಆಗ ಇಸ್ರಾಯೇಲ್ ದಂಡಿನ ಮುಂದೆ ಹೋಗುತ್ತಿದ್ದ ದೇವದೂತನು ತನ್ನ ಸ್ಥಳವನ್ನು ಬಿಟ್ಟು ಅವರ ಹಿಂದೆ ಬಂದನು. ಅವರ ಮುಂದೆ ಇದ್ದ ಮೇಘಸ್ತಂಭವು ಅಲ್ಲಿಂದ ಬಂದು ಅವರ ಹಿಂದೆ ನಿಂತುಕೊಂಡಿತು. ಅದು ಐಗುಪ್ತ್ಯರ ದಂಡಿಗೂ ಇಸ್ರಾಯೇಲ್ಯರ ದಂಡಿಗೂ ನಡುವೆ ಬಂದಿತು. ಅದು ಅವರಿಗೆ ಮೇಘವೂ ಕತ್ತಲೂ ಆಗಿದ್ದು ಇಸ್ರಾಯೇಲ್ಯರಿಗೆ ರಾತ್ರಿ ಯಲ್ಲಿ ಬೆಳಕು ಕೊಡುವಂಥದ್ದಾಗಿದ್ದದರಿಂದ ಆ ರಾತ್ರಿಯೆಲ್ಲಾ ಒಬ್ಬರ ಹತ್ತಿರ ಒಬ್ಬರು ಬರಲಿಲ್ಲ. ಆಗ ಮೋಶೆಯು ಸಮುದ್ರದ ಮೇಲೆ ತನ್ನ ಕೈಚಾಚಲಾಗಿ ಕರ್ತನು ರಾತ್ರಿಯೆಲ್ಲಾ ಬಲವಾದ ಮೂಡಣ ಗಾಳಿಯಿಂದ ಸಮುದ್ರವು ಹಿಂದಕ್ಕೆ ಹೋಗುವಂತೆ ಮಾಡಿ ಸಮುದ್ರವನ್ನು ಒಣನೆಲವನ್ನಾಗಿ ಮಾಡಿದನು; ಆಗ ನೀರುಗಳು ವಿಭಾಗವಾದವು. ಹೀಗೆ ಇಸ್ರಾಯೇಲ್ ಮಕ್ಕಳು ಸಮುದ್ರದ ಮಧ್ಯ ದಲ್ಲಿ ಒಣ ನೆಲದಲ್ಲೇ ಹೊರಟು ಹೋದರು. ನೀರು ಅವರಿಗೆ ಎಡಬಲದಲ್ಲಿ ಗೋಡೆಯಾಗಿತ್ತು. ಐಗು ಪ್ತ್ಯರೂ ಫರೋಹನ ಎಲ್ಲಾ ಕುದುರೆಗಳೂ ಅವನ ರಥಗಳೂ ಕುದುರೆಯ ಸವಾರರೂ ಅವರನ್ನು ಹಿಂದಟ್ಟಿ ಅವರ ಹಿಂದೆ ಸಮುದ್ರದ ಮಧ್ಯದಲ್ಲಿ ಸೇರಿದರು. ಬೆಳಗಿನ ಜಾವದಲ್ಲಿ ಕರ್ತನು ಅಗ್ನಿ ಮೇಘಗಳ ಸ್ತಂಭದೊಳಗಿಂದ ಐಗುಪ್ತ್ಯರ ದಂಡಿನ ಕಡೆಗೆ ನೋಡಿ ಅದನ್ನು ತೊಂದರೆಪಡಿಸಿ ಅವರ ರಥಗಳ ಚಕ್ರಗಳನ್ನು ತೆಗೆದುಬಿಟ್ಟದ್ದರಿಂದ ಐಗುಪ್ತ್ಯರು ಕಷ್ಟದಿಂದ ಹೋಗು ವಂತೆ ಮಾಡಿದನು. ಆಗ--ಇಸ್ರಾಯೇಲಿನ ಎದುರಿ ನಿಂದ ಓಡಿಹೋಗೋಣ. ಯಾಕಂದರೆ ಕರ್ತನು ಐಗುಪ್ತ್ಯರಿಗೆ ವಿರೋಧವಾಗಿ ಅವರಿಗೋಸ್ಕರ ಯುದ್ಧ ಮಾಡುತ್ತಾನೆಂದು ಹೇಳಿಕೊಂಡರು. ಆಗ ಕರ್ತನು ಮೋಶೆಗೆ--ಐಗುಪ್ತ್ಯರ ಮೇಲೆಯೂ ಅವರ ರಥಗಳ ಮೇಲೆಯೂ ಕುದುರೆಯ ಸವಾರರ ಮೇಲೆಯೂ ನೀರು ತಿರಿಗಿ ಬರುವಹಾಗೆ ಸಮುದ್ರದ ಮೇಲೆ ಕೈಚಾಚು ಅಂದನು. ಆಗ ಮೋಶೆಯು ಸಮುದ್ರದ ಮೇಲೆ ಕೈಚಾಚಲಾಗಿ ಸಮುದ್ರವು ಬೆಳಗಾಗುವಾಗಲೇ ತನ್ನ ಶಕ್ತಿಗೆ ತಿರುಗಿಕೊಂಡಿತು. ಐಗುಪ್ತ್ಯರು ಅದಕ್ಕೆದುರಾಗಿ ಓಡಿಹೋದರು. ಕರ್ತನು ಐಗುಪ್ತ್ಯರನ್ನು ಸಮುದ್ರದ ಮಧ್ಯದಲ್ಲಿ ಸಂಹರಿಸಿದನು. ನೀರು ತಿರಿಗಿ ಬಂದು ರಥಗಳೂ ಕುದುರೆಗಳೂ ಸವಾರರೂ ಅವರ ಹಿಂದೆ ಸಮುದ್ರದಲ್ಲಿ ಬರುತ್ತಿದ್ದ ಫರೋಹನ ಎಲ್ಲಾ ಸೈನ್ಯವೂ ಒಬ್ಬರೂ ಉಳಿಯದಂತೆ ಮುಚ್ಚಿಕೊಂಡಿತು. ಆದರೆ ಇಸ್ರಾಯೇಲ್ ಮಕ್ಕಳು ಸಮುದ್ರದ ಮಧ್ಯದಲ್ಲಿ ಒಣ ಗಿದ ನೆಲದಮೇಲೆ ನಡೆದುಹೋದರು. ನೀರು ಅವರಿಗೆ ಎಡಬಲಗಳಲ್ಲಿ ಗೋಡೆಯಾಗಿತ್ತು. ಆ ದಿನದಲ್ಲಿ ಕರ್ತನು ಈ ಪ್ರಕಾರ ಇಸ್ರಾಯೇಲ್ಯ ರನ್ನು ಐಗುಪ್ತ್ಯರ ಕೈಯಿಂದ ರಕ್ಷಿಸಿದನು. ಇಸ್ರಾಯೇ ಲ್ಯರು ಸಮುದ್ರತೀರದಲ್ಲಿ ಸತ್ತ ಐಗುಪ್ತ್ಯರನ್ನು ನೋಡಿ ದರು.ಐಗುಪ್ತ್ಯರ ಮೇಲೆ ಕರ್ತನು ಮಾಡಿದ ದೊಡ್ಡ ಕಾರ್ಯವನ್ನು ಇಸ್ರಾಯೇಲ್ಯರು ನೋಡಿ ಕರ್ತ ನಿಗೆ ಭಯಪಟ್ಟು ಕರ್ತನಲ್ಲಿಯೂ ಆತನ ಸೇವಕನಾದ ಮೋಶೆಯಲ್ಲಿಯೂ ನಂಬಿಕೆಯಿಟ್ಟರು. ಐಗುಪ್ತ್ಯರ ಮೇಲೆ ಕರ್ತನು ಮಾಡಿದ ದೊಡ್ಡ ಕಾರ್ಯವನ್ನು ಇಸ್ರಾಯೇಲ್ಯರು ನೋಡಿ ಕರ್ತ ನಿಗೆ ಭಯಪಟ್ಟು ಕರ್ತನಲ್ಲಿಯೂ ಆತನ ಸೇವಕನಾದ ಮೋಶೆಯಲ್ಲಿಯೂ ನಂಬಿಕೆಯಿಟ್ಟರು.
- Isaiah 63:14 ಯೆಶಾಯ 63:14ಪಶುವು ತಗ್ಗಿಗೆ ಇಳಿ ಯುವ ಪ್ರಕಾರ, ಕರ್ತನ ಆತ್ಮನು ಅವರಿಗೆ ವಿಶ್ರಾಂತಿ ಕೊಟ್ಟನು; ಈ ಪ್ರಕಾರ ನೀನು ನಿನಗೆ ಮಹಿಮೆ ಯುಳ್ಳ ಹೆಸರನ್ನು ಉಂಟು ಮಾಡುವ ಹಾಗೆ, ನಿನ್ನ ಜನರನ್ನು ನಡಿಸಿದಿ.
- Isaiah 63:12 ಯೆಶಾಯ 63:12ಮೋಶೆಯ ಬಲಗೈಯ ಮುಖಾಂ ತರ, ತನ್ನ ಮಹಿಮೆಯುಳ್ಳ ತೋಳಿನಿಂದ ಅವರನ್ನು ನಡಿಸಿದವನೂ ತನಗೆ ನಿತ್ಯವಾದ ಹೆಸರನ್ನುಂಟು ಮಾಡುವ ಹಾಗೆ ಅವರ ಮುಂದೆ ನೀರುಗಳನ್ನು ಭೇದಿಸಿದವನು ಎಲ್ಲಿ?
- Psalm 83:18 ಕೀರ್ತನೆಗಳು 83:18ನೀನು ಮಾತ್ರ ಯೆಹೋವ ನೆಂಬ ಹೆಸರುಳ್ಳ ನೀನು ಸಮಸ್ತ ಭೂಮಿಯ ಮೇಲೆ ಮಹೋನ್ನತನಾಗಿದ್ದೀ ಎಂದು ತಿಳುಕೊಳ್ಳಲಿ.
- Acts 7:36 ಅಪೊಸ್ತಲರ ಕೃತ್ಯಗಳು 7:36ಅವನು ಐಗುಪ್ತದೇಶದಲ್ಲಿಯೂ ಕೆಂಪು ಸಮುದ್ರ ದಲ್ಲಿಯೂ ನಾಲ್ವತ್ತು ವರುಷ ಅಡವಿಯಲ್ಲಿಯೂ ಅದ್ಭುತ ಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ಮಾಡಿದ ಮೇಲೆ ಅವರನ್ನು ನಡೆಸಿಕೊಂಡು ಬಂದನು.
- Psalm 78:43–53 ಕೀರ್ತನೆಗಳು 78:43–53ಐಗುಪ್ತದಲ್ಲಿ ಆದ ಸೂಚಕ ಕಾರ್ಯಗಳನ್ನೂ ಸೋನ್ ಬೈಲಿನಲ್ಲಿ ನಡಿಸಿದ ಅದ್ಭುತ ಗಳನ್ನೂ ಮಾಡಿದ ದಿವಸವನ್ನೂ ಆತನ ಕೈಯನ್ನೂ ಅವರು ಜ್ಞಾಪಕಮಾಡಿಕೊಳ್ಳಲಿಲ್ಲ. ಅವರು ಕುಡಿ ಯಲಾರದ ಹಾಗೆ ಅವರ ನದಿಗಳನ್ನೂ ಹೊಳೆಗ ಳನ್ನೂ ಆತನು ರಕ್ತಕ್ಕೆ ಮಾರ್ಪಡಿಸಿದನು. ಅವರಲ್ಲಿ ವಿವಿಧ ಹುಳಗಳನ್ನು ಕಳುಹಿಸಿದನು, ಅವು ಅವರನ್ನು ತಿಂದು ಬಿಟ್ಟವು; ಕಪ್ಪೆಗಳನ್ನು ಸಹ ಕಳುಹಿಸಿದನು; ಅವು ಅವರನ್ನು ನಾಶಮಾಡಿದವು. ಅವರ ಬೆಳೆ ಯನ್ನು ಕಂಬಳಿ ಹುಳಗಳಿಗೂ ವ್ಯವಸಾಯವನ್ನು ಮಿಡಿತೆಗಳಿಗೂ ಕೊಟ್ಟು ಅವರ ದ್ರಾಕ್ಷೇ ಬಳ್ಳಿಗ ಳನ್ನು ಕಲ್ಮಳೆಯಿಂದಲೂ ಆಲದ ಮರಗಳನ್ನು ಮಂಜಿ ನಿಂದಲೂ ನಾಶ ಮಾಡಿ ಅವರ ದನಗಳನ್ನು ಕಲ್ಮ ಳೆಗೂ ಮಂದೆಗಳನ್ನು ಸಿಡಿಲಿಗೂ ಒಪ್ಪಿಸಿಬಿಟ್ಟನು. ಉಪದ್ರಪಡಿಸುವ ದೂತರನ್ನೋ ಎಂಬಂತೆ ತನ್ನ ಕೋಪದ ಉರಿಯನ್ನು ಉಗ್ರ, ರೋಷ, ಇಕ್ಕಟ್ಟುಗಳನ್ನು ಅವರ ಮೇಲೆ ಸುರಿಸಿದನು. ತನ್ನ ಕೋಪಕ್ಕೆ ದಾರಿಮಾಡಿ ಅವರ ಪ್ರಾಣವನ್ನು ಸಾವಿನಿಂದ ಉಳಿಸದೆ ಅವರ ಜೀವವನ್ನು ಜಾಡ್ಯಕ್ಕೆ ಒಪ್ಪಿಸಿ ಐಗುಪ್ತದಲ್ಲಿ ಚೊಚ್ಚಲವಾದವರೆಲ್ಲರನ್ನೂ ಹಾಮನ ಗುಡಾರಗಳಲ್ಲಿ ಶಕ್ತಿಯ ಪ್ರಥಮ ಫಲವನ್ನೂ ಹೊಡೆದನು. ಕುರಿಗಳ ಹಾಗೆ ತನ್ನ ಜನರನ್ನು ಹೊರತಂದು, ಮಂದೆಯ ಹಾಗೆ ಅರಣ್ಯದಲ್ಲಿ ಅವರನ್ನು ನಡಿಸಿದನು. ಅವರನ್ನು ಸುರಕ್ಷಿತವಾಗಿ ನಡಿಸಿದಕಾರಣ ಅವರು ಹೆದರಲಿಲ್ಲ; ಆದರೆ ಸಮುದ್ರವು ಅವರ ಶತ್ರುಗಳನ್ನು ಮುಚ್ಚಿಬಿಟ್ಟಿತು.
- Daniel 4:37 ದಾನಿಯೇಲನು 4:37ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕದ ಅರಸನನ್ನು ಸ್ತುತಿಸಿ, ಹೆಚ್ಚಿಸಿ, ಘನಪಡಿಸುತ್ತೇನೆ; ಆತನ ಕ್ರಿಯೆಗಳೆಲ್ಲಾ ಸತ್ಯವೇ; ಆತನ ಮಾರ್ಗಗಳು ನ್ಯಾಯವೇ; ಗರ್ವದಲ್ಲಿ ನಡೆಯುವವರನ್ನು ಆತನೇ ತಗ್ಗಿಸಬಲ್ಲನು.