Nehemiah · chapter 9 · verse 11
Nehemiah 9:11 in Kannada
ನೀನು ಅವರ ಮುಂದೆ ಸಮುದ್ರವನ್ನು ವಿಭಾಗಿಸಿದ್ದರಿಂದ ಅವರು ಸಮುದ್ರದ ಮಧ್ಯದಲ್ಲಿ ಒಣ ಭೂಮಿಯಲ್ಲಿ ಹಾದುಹೋದರು. ಆದರೆ ಅವರನ್ನು ಹಿಂದಟ್ಟಿದವರನ್ನು ಅಗಾಧಗಳಲ್ಲಿ ಕಲ್ಲಿನ ಹಾಗೆ ಮಹಾ ಜಲರಾಶಿಗಳಲ್ಲಿ ದೊಬ್ಬಿ ಬಿಟ್ಟಿ.
Neenu avara munde samudravannu vibhaagisiddarinda avaru samudrada madhyadalli ona bhoomiyalli haaduhodaru. Aadare avarannu hindattidavarannu agaadhagalalli kallina haage mahaa jalaraashigalalli dobbi bitti.
Nehemiah 9:11 in English
- King James Version (KJV)
- And thou didst divide the sea before them, so that they went through the midst of the sea on the dry land; and their persecutors thou threwest into the deeps, as a stone into the mighty waters.
- World English Bible (WEB)
- You divided the sea before them, so that they went through the middle of the sea on the dry land; and you cast their pursuers into the depths, as a stone into the mighty waters.
- American Standard Version (ASV)
- And thou didst divide the sea before them, so that they went through the midst of the sea on the dry land; and their pursuers thou didst cast into the depths, as a stone into the mighty waters.
- Bible in Basic English (BBE)
- By you the sea was parted before them, so that they went through the sea on dry land; and those who went after them went down into the deep, like a stone into great waters.
- Darby Translation (DBY)
- And thou didst divide the sea before them, and they went through the midst of the sea on dry [ground]; and their pursuers thou threwest into the depths, as a stone into the mighty waters.
- Webster's Bible (WBS)
- And thou didst divide the sea before them, so that they went through the midst of the sea on the dry land; and their persecutors thou threwest into the deeps, as a stone into the mighty waters.
- Young's Literal Translation (YLT)
- And the sea Thou hast cleaved before them, and they pass over into the midst of the sea on the dry land, and their pursuers Thou hast cast into the depths, as a stone, into the strong waters.
Read in context
- 9ಇದಲ್ಲದೆ ಐಗುಪ್ತದಲ್ಲಿ ನಮ್ಮ ಪಿತೃಗಳ ದೀನ ಸ್ಥಿತಿಯನ್ನು ನೋಡಿದಿ; ಕೆಂಪುಸಮುದ್ರದ ಬಳಿಯಲ್ಲಿ ಅವರ ಕೂಗನ್ನು ಕೇಳಿದಿ.
- 10ಫರೋಹನ ಮೇಲೆಯೂ ಅವನ ಸಮಸ್ತ ಸೇವಕರ ಮೇಲೆಯೂ ಅವನ ಸಮಸ್ತ ದೇಶದ ಜನರ ಮೇಲೆಯೂ ಸೂಚ ಕಕಾರ್ಯಗಳನ್ನೂ ಅದ್ಭುತಗಳನ್ನೂ ತೋರಿಸಿದಿ. ಯಾಕಂದರೆ ಇವರು ಅವರಿಗೆ ಅಹಂಕಾರಿಗಳಾಗಿ ನಡೆದರೆಂದು ತಿಳಿದಿದ್ದಿ. ಈ ಪ್ರಕಾರವೇ ನೀನು ಇಂದಿನ ಹಾಗೆ ನಿನಗೆ ಹೆಸರನ್ನು ಮಾಡಿಕೊಂಡಿದ್ದೀ.
- 11ನೀನು ಅವರ ಮುಂದೆ ಸಮುದ್ರವನ್ನು ವಿಭಾಗಿಸಿದ್ದರಿಂದ ಅವರು ಸಮುದ್ರದ ಮಧ್ಯದಲ್ಲಿ ಒಣ ಭೂಮಿಯಲ್ಲಿ ಹಾದುಹೋದರು. ಆದರೆ ಅವರನ್ನು ಹಿಂದಟ್ಟಿದವರನ್ನು ಅಗಾಧಗಳಲ್ಲಿ ಕಲ್ಲಿನ ಹಾಗೆ ಮಹಾ ಜಲರಾಶಿಗಳಲ್ಲಿ ದೊಬ್ಬಿ ಬಿಟ್ಟಿ.
- 12ಇದಲ್ಲದೆ ಹಗಲಿನಲ್ಲಿ ಮೇಘ ಸ್ತಂಭ ದಿಂದಲೂ ಅವರು ನಡೆಯಬೇಕಾದ ಮಾರ್ಗದಲ್ಲಿ ಅವರಿಗೆ ಬೆಳಕಾಗುವ ಹಾಗೆ ರಾತ್ರಿಯಲ್ಲಿ ಅಗ್ನಿ ಸ್ತಂಭ ದಿಂದಲೂ ಅವರನ್ನು ನಡಿಸಿದಿ.
- 13ಸೀನಾಯ್ ಪರ್ವ ತದ ಮೇಲಕ್ಕೆ ಇಳಿದು ಬಂದಿ; ಆಕಾಶದಿಂದ ಅವರ ಸಂಗಡ ಮಾತನಾಡಿದಿ; ಸರಿಯಾದ ನ್ಯಾಯಗಳನ್ನೂ ಸತ್ಯವಾದ ನ್ಯಾಯಪ್ರಮಾಣಗಳನ್ನೂ ಉತ್ತಮವಾದ ಕಟ್ಟಳೆ ಗಳನ್ನೂ ಆಜ್ಞೆಗಳನ್ನೂ ಅವರಿಗೆ ಕೊಟ್ಟಿ.
Cross references
- Psalm 78:13 ಕೀರ್ತನೆಗಳು 78:13ಆತನು ಸಮುದ್ರವನ್ನು ವಿಭಾಗಿಸಿ ಅವರನ್ನು ದಾಟಿಸಿದನು; ನೀರನ್ನು ಕುಪ್ಪೆಯಾಗಿ ನಿಲ್ಲಿಸಿ ದನು.
- Exodus 14:21–22 ವಿಮೋಚನಕಾಂಡ 14:21–22ಆಗ ಮೋಶೆಯು ಸಮುದ್ರದ ಮೇಲೆ ತನ್ನ ಕೈಚಾಚಲಾಗಿ ಕರ್ತನು ರಾತ್ರಿಯೆಲ್ಲಾ ಬಲವಾದ ಮೂಡಣ ಗಾಳಿಯಿಂದ ಸಮುದ್ರವು ಹಿಂದಕ್ಕೆ ಹೋಗುವಂತೆ ಮಾಡಿ ಸಮುದ್ರವನ್ನು ಒಣನೆಲವನ್ನಾಗಿ ಮಾಡಿದನು; ಆಗ ನೀರುಗಳು ವಿಭಾಗವಾದವು. ಹೀಗೆ ಇಸ್ರಾಯೇಲ್ ಮಕ್ಕಳು ಸಮುದ್ರದ ಮಧ್ಯ ದಲ್ಲಿ ಒಣ ನೆಲದಲ್ಲೇ ಹೊರಟು ಹೋದರು. ನೀರು ಅವರಿಗೆ ಎಡಬಲದಲ್ಲಿ ಗೋಡೆಯಾಗಿತ್ತು.
- Exodus 14:27–28 ವಿಮೋಚನಕಾಂಡ 14:27–28ಆಗ ಮೋಶೆಯು ಸಮುದ್ರದ ಮೇಲೆ ಕೈಚಾಚಲಾಗಿ ಸಮುದ್ರವು ಬೆಳಗಾಗುವಾಗಲೇ ತನ್ನ ಶಕ್ತಿಗೆ ತಿರುಗಿಕೊಂಡಿತು. ಐಗುಪ್ತ್ಯರು ಅದಕ್ಕೆದುರಾಗಿ ಓಡಿಹೋದರು. ಕರ್ತನು ಐಗುಪ್ತ್ಯರನ್ನು ಸಮುದ್ರದ ಮಧ್ಯದಲ್ಲಿ ಸಂಹರಿಸಿದನು. ನೀರು ತಿರಿಗಿ ಬಂದು ರಥಗಳೂ ಕುದುರೆಗಳೂ ಸವಾರರೂ ಅವರ ಹಿಂದೆ ಸಮುದ್ರದಲ್ಲಿ ಬರುತ್ತಿದ್ದ ಫರೋಹನ ಎಲ್ಲಾ ಸೈನ್ಯವೂ ಒಬ್ಬರೂ ಉಳಿಯದಂತೆ ಮುಚ್ಚಿಕೊಂಡಿತು.
- Isaiah 63:11–13 ಯೆಶಾಯ 63:11–13ಆಗ ಆತನು ಪೂರ್ವಕಾಲದ ದಿನ ಗಳನ್ನು ಮೋಶೆಯನ್ನೂ ತನ್ನ ಜನರನ್ನೂ ಜ್ಞಾಪಕ ಮಾಡಿಕೊಂಡು--ಅವರನ್ನು ತನ್ನ ಮಂದೆಯ ಕುರುಬನ ಸಂಗಡ ಸಮುದ್ರದೊಳಗಿಂದ ಏರ ಮಾಡಿದವನು ಎಲ್ಲಿ? ಅವನ ಮಧ್ಯದಲ್ಲಿ ತನ್ನ ಪರಿಶುದ್ಧಾತ್ಮನನ್ನು ಇಟ್ಟವನು ಎಲ್ಲಿ? ಮೋಶೆಯ ಬಲಗೈಯ ಮುಖಾಂ ತರ, ತನ್ನ ಮಹಿಮೆಯುಳ್ಳ ತೋಳಿನಿಂದ ಅವರನ್ನು ನಡಿಸಿದವನೂ ತನಗೆ ನಿತ್ಯವಾದ ಹೆಸರನ್ನುಂಟು ಮಾಡುವ ಹಾಗೆ ಅವರ ಮುಂದೆ ನೀರುಗಳನ್ನು ಭೇದಿಸಿದವನು ಎಲ್ಲಿ? ಅಡವಿಯಲ್ಲಿ ಕುದುರೆಯಂತೆ ಅಗಾಧಗಳಲ್ಲಿ ಅವರನ್ನು ಎಡವದ ಹಾಗೆ ನಡಿಸಿ ದವನು ಎಲ್ಲಿ ಅಂದನು.
- Psalm 114:3–5 ಕೀರ್ತನೆಗಳು 114:3–5ಸಮುದ್ರವು ನೋಡಿ ಓಡಿಹೋಯಿತು; ಯೊರ್ದನ್ ಹಿಂತಿರುಗಿತು. ಬೆಟ್ಟಗಳು ಟಗರುಗಳ ಹಾಗೆಯೂ ಗುಡ್ಡಗಳು ಕುರಿಮರಿಗಳ ಹಾಗೆಯೂ ಹಾರಾಡಿದವು. ಸಮುದ್ರವೇ, ನಿನಗೆ ಏನಾಯಿತು? ಯಾಕೆ ಓಡಿ ಹೋಗುತ್ತೀ? ಯೊರ್ದನೇ, ಯಾಕೆ ಹಿಂದಿರುಗುತ್ತೀ?
- Psalm 106:9–11 ಕೀರ್ತನೆಗಳು 106:9–11ಆತನು ಕೆಂಪು ಸಮುದ್ರವನ್ನು ಗದರಿಸಲು ಅದು ಒಣಗಿ ಹೋಯಿತು. ಹೀಗೆ ಜಲಾಗಾಧದಲ್ಲಿ, ಅರಣ್ಯ ದಲ್ಲಿದ್ದ ಹಾಗೆಯೇ ಆತನು ಅವರನ್ನು ನಡಿಸಿದನು. ವೈರಿಯ ಕೈಯೊಳಗಿಂದ ಅವರನ್ನು ರಕ್ಷಿಸಿ, ಶತ್ರು ವಿನ ಕೈಯಿಂದ ಅವರನ್ನು ಬಿಡುಗಡೆ ಮಾಡಿದನು. ನೀರುಗಳು ಅವರ ವೈರಿಗಳನ್ನು ಮುಚ್ಚಿಬಿಟ್ಟವು; ಅವರಲ್ಲಿ ಒಬ್ಬನಾದರೂ ಉಳಿಯಲಿಲ್ಲ.
- Hebrews 11:29 ಇಬ್ರಿಯರಿಗೆ 11:29ನಂಬಿಕೆಯಿಂದಲೇ ಇಸ್ರಾಯೇಲ್ಯರು ಒಣ ಭೂಮಿಯನ್ನು ದಾಟುವಂತೆ ಕೆಂಪು ಸಮುದ್ರವನ್ನು ದಾಟಿದರು; ಐಗುಪ್ತ ದೇಶದವರು ಅದನ್ನು ದಾಟು ವದಕ್ಕೆ ಪ್ರಯತ್ನಿಸಿ ಮುಳುಗಿಹೋದರು.
- Psalm 136:13–15 ಕೀರ್ತನೆಗಳು 136:13–15ಕೆಂಪು ಸಮುದ್ರವನ್ನು ವಿಭಾಗಿಸಿದಾತನನ್ನು ಕೊಂಡಾ ಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ. ಇಸ್ರಾಯೇಲನ್ನು ಅದರ ನಡುವೆ ನಡಿಸಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ. ಫರೋಹನನ್ನೂ ಅವನ ಸೈನ್ಯವನ್ನೂ ಕೆಂಪು ಸಮು ದ್ರದಲ್ಲಿ ಕೆಡವಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.
- Psalm 66:6 ಕೀರ್ತನೆಗಳು 66:6ಆತನು ಸಮುದ್ರವನ್ನು ಒಣ ಗಿದ ಭೂಮಿಗೆ ತಿರುಗಿಸಿದನು; ಅವರು ಕಾಲು ನಡಿಗೆ ಯಾಗಿ ಪ್ರವಾಹವನ್ನು ದಾಟಿದರು; ಅಲ್ಲಿ ನಾವು ಆತನಲ್ಲಿ ಸಂತೋಷಿಸಿದೆವು.
- Revelation 18:21 ಪ್ರಕಟನೆ 18:21ಆಗ ಬಲಿಷ್ಠನಾದ ಒಬ್ಬ ದೂತನು ಬೀಸುವ ದೊಡ್ಡ ಕಲ್ಲಿನಂತಿರುವ ಒಂದು ಕಲ್ಲನ್ನು ಎತ್ತಿ ಸಮುದ್ರ ದೊಳಗೆ ಹಾಕಿ--ಮಹಾ ಪಟ್ಟಣವಾದ ಆ ಬಾಬೆಲು ಹೀಗೆಯೇ ಬಲಾತ್ಕಾರದಿಂದ ಕೆಡವಲ್ಲಟ್ಟು ಇನ್ನೆಂದಿಗೂ ಕಾಣಿಸುವದಿಲ್ಲ.
- Exodus 15:1–21 ವಿಮೋಚನಕಾಂಡ 15:1–21ಆಗ ಮೋಶೆಯೂ ಇಸ್ರಾಯೇಲ್ ಮಕ್ಕಳೂ ಕರ್ತನಿಗೆ ಈ ಹಾಡನ್ನು ಹಾಡಿ ಹೇಳಿದ್ದೇನಂದರೆ--ನಾನು ಕರ್ತನಿಗೆ ಹಾಡುತ್ತೇನೆ; ಆತನು ಪ್ರಭಾವದಿಂದ ಜಯಶಾಲಿಯಾದನು; ಕುದುರೆ ಯನ್ನೂ (ಕುದುರೆಯ) ಸವಾರನನ್ನೂ ಸಮುದ್ರದಲ್ಲಿ ದೊಬ್ಬಿದ್ದಾನೆ. ಕರ್ತನು ನನ್ನ ಬಲವೂ ಕೀರ್ತನೆಯೂ ಆಗಿದ್ದಾನೆ, ಆತನು ನನ್ನ ರಕ್ಷಣೆಯಾದನು, ಆತನು ನನ್ನ ದೇವರು, ಆತನಿಗಾಗಿ ನಾನು ಒಂದು ನಿವಾಸವನ್ನು ಸಿದ್ಧಮಾಡುವೆನು. ಆತನು ನನ್ನ ತಂದೆಯ ದೇವರು, ನಾನು ಆತನನ್ನು ಘನಪಡಿಸುವೆನು. ಕರ್ತನು ಯುದ್ಧ ಶೂರನು; ಕರ್ತನು ಎಂಬದೇ ಆತನ ಹೆಸರು. ಆತನು ಫರೋಹನ ರಥಗಳನ್ನೂ ಅವನ ಸೈನ್ಯವನ್ನೂ ಸಮುದ್ರ ದಲ್ಲಿ ನೂಕಿದ್ದಾನೆ; ಆಯಲ್ಪಟ್ಟ ಅವನ ಅಧಿಪತಿಗಳು ಸಹ ಕೆಂಪು ಸಮುದ್ರದಲ್ಲಿ ಮುಳುಗಿಹೋದರು. ಅಗಾಧಗಳು ಅವರನ್ನು ಮುಚ್ಚಿಕೊಂಡವು. ಅವರು ಕಲ್ಲಿನಂತೆ (ಸಮುದ್ರದ) ತಳಕ್ಕೆ ಮುಳುಗಿದರು. ಓ ಕರ್ತನೇ, ನಿನ್ನ ಬಲಗೈ ಶಕ್ತಿಯಲ್ಲಿ ಮಹಿಮೆಯುಳ್ಳ ದ್ದಾಗಿದೆ. ಓ ಕರ್ತನೇ, ನಿನ್ನ ಬಲಗೈ ಶತ್ರುವನ್ನು ಜಜ್ಜಿ ಪುಡಿಮಾಡಿತು. ನಿನ್ನ ಮಹತ್ತಾದ ಘನತೆಯಲ್ಲಿ ನಿನಗೆ ವಿರೋಧವಾಗಿ ಎದ್ದವರನ್ನು ಕೆಡವಿ ಬಿಟ್ಟಿರುವಿ. ನಿನ್ನ ರೌದ್ರವು ಹೊರಟು ಅವರನ್ನು ಹುಲ್ಲಿನಂತೆ ದಹಿಸಿಬಿಟ್ಟಿತು. ನಿನ್ನ ಮೂಗಿನ ಬಿರುಸಾದ ಗಾಳಿ ಯಿಂದ ನೀರುಗಳು ಒಟ್ಟುಗೂಡಿದವು. ಪ್ರವಾಹಗಳು ರಾಶಿಯಂತೆ ನಿಂತವು; ಸಮುದ್ರದ ಅಗಾಧಗಳ ನೀರು ಗಟ್ಟಿಯಾದವು. ಶತ್ರುವು--ನಾನು ಹಿಂದಟ್ಟಿ, ಹಿಡಿ ಯುವೆನು, ಕೊಳ್ಳೆಯನ್ನು ಹಂಚಿಕೊಳ್ಳುವೆನು, ನನ್ನ ಆಶೆಗಳು ಅವರಿಂದ ತೃಪ್ತಿಹೊಂದುವವು. ನಾನು ನನ್ನ ಖಡ್ಗವನ್ನು ಹಿರಿಯುವೆನು, ನನ್ನ ಕೈ ಅವರನ್ನು ಸಂಹಾರ ಮಾಡುವದು ಅಂದನು. ನೀನು ನಿನ್ನ ಗಾಳಿಯನ್ನು ಊದಿದಾಗ ಸಮುದ್ರವು ಅವರನ್ನು ಮುಚ್ಚಿಕೊಂಡಿತು. ಅವರು ಸೀಸದಂತೆ ಮಹಾಜಲಗಳಲ್ಲಿ ಮುಳುಗಿ ಹೊದರು. ದೇವರುಗಳಲ್ಲಿ ಓ ಕರ್ತನೇ, ನಿನ್ನ ಹಾಗೆ ಯಾರಿದ್ದಾರೆ? ಪರಿಶುದ್ಧತ್ವದಲ್ಲಿ ಮಹಿಮೆ ಹೊಂದಿದವನೂ ಸ್ತೋತ್ರಗಳಲ್ಲಿ ಭಯಂಕರನೂ ಅದ್ಭುತಗಳನ್ನು ಮಾಡುವಾತನೂ ಆದ ನಿನ್ನ ಹಾಗೆ ಯಾರಿದ್ದಾರೆ? ನೀನು ನಿನ್ನ ಬಲಗೈಯನ್ನು ಚಾಚಲು ಭೂಮಿಯು ಅವರನ್ನು ನುಂಗಿತು. ನೀನು ವಿಮೋಚಿ ಸಿದ ಜನರನ್ನು ಕರುಣೆಯಿಂದ ನಡಿಸಿದಿ; ನೀನು ಅವ ರನ್ನು ನಿನ್ನ ಬಲದಿಂದ ನಿನ್ನ ಪರಿಶುದ್ಧ ನಿವಾಸಕ್ಕೆ ನಡಿಸಿದಿ. ಜನರು ಇದನ್ನು ಕೇಳಿ ಭಯಪಡುವರು; ದುಃಖವು ಫಿಲಿಷ್ಟಿಯದಲ್ಲಿ ವಾಸಿಸುವವರನ್ನು ಹಿಡಿಯುವದು. ಆಗ ಎದೋಮಿನ ಪ್ರಭುಗಳು ದಿಗ್ಭ್ರಮೆಗೊಳ್ಳು ವರು; ಮೋವಾಬಿನ ಬಲಿಷ್ಠರನ್ನು ಕಂಪನವು ಹಿಡಿಯು ವದು. ಕಾನಾನಿನ ನಿವಾಸಿಗಳೆಲ್ಲಾ ಕರಗಿ ಹೋಗುವರು. ಭಯವೂ ಹೆದರಿಕೆಯೂ ಅವರ ಮೇಲೆ ಬೀಳು ವದು; ನಿನ್ನ ಜನರು ದಾಟಿ ಹೋಗುವ ವರೆಗೆ ಓ ಕರ್ತನೇ, ನೀನು ಕೊಂಡುಕೊಂಡ ಜನರು ದಾಟಿ ಹೋಗುವ ವರೆಗೆ ನಿನ್ನ ಬಾಹುವಿನ ದೊಡ್ಡಸ್ತಿಕೆಯಿಂದ ಅವರು ಕಲ್ಲಿನಂತೆ ಸ್ತಬ್ಧರಾಗುವರು. ನೀನು ಅವರನ್ನು ಒಳಗೆ ಬರಮಾಡಿ ಓ ಕರ್ತನೇ, ನಿನ್ನ ಕೈಗಳು ಸ್ಥಾಪಿಸಿದ ಪರಿಶುದ್ಧ ನಿವಾಸದಲ್ಲಿಯೂ (ಓ ಕರ್ತನೇ,) ನೀನು ವಾಸಿಸುವದಕ್ಕೆ ಮಾಡಿಕೊಂಡಿರುವ ನಿನ್ನ ಸ್ವಾಸ್ಥ್ಯದ ಪರ್ವತದಲ್ಲಿಯೂ ಅವರನ್ನು ಸ್ಥಾಪಿಸುವಿ. ಕರ್ತನು ಯುಗಯುಗಾಂತರಗಳ ವರೆಗೆ ಆಳುವನು. ಫರೋ ಹನ ಕುದುರೆಗಳು ಅವನ ರಥಗಳ ಸಂಗಡಲೂ ಸವಾರರ ಸಂಗಡಲೂ ಸಮುದ್ರದೊಳಗೆ ಬಂದಾಗ ಕರ್ತನು ಸಮುದ್ರದ ನೀರನ್ನು ಅವರ ಮೇಲೆ ತಿರಿಗಿ ಬರ ಮಾಡಿದನು; ಆದರೆ ಇಸ್ರಾಯೇಲ್ ಮಕ್ಕಳು ಸಮುದ್ರದ ಮಧ್ಯದಲ್ಲಿ ಒಣನೆಲದ ಮೇಲೆ ಹೋದರು. ಆಗ ಪ್ರವಾದಿನಿಯಾಗಿದ್ದ ಆರೋನನ ಸಹೋ ದರಿ ಮಿರ್ಯಾಮಳು ಕೈಯಲ್ಲಿ ದಮ್ಮಡಿಯನ್ನು ತೆಗೆದು ಕೊಂಡಳು. ಸ್ತ್ರೀಯರೆಲ್ಲರೂ ದಮ್ಮಡಿಗಳನ್ನು ಹಿಡಿದು ಕೊಂಡು ನಾಟ್ಯವಾಡುತ್ತಾ ಆಕೆಯನ್ನು ಹಿಂಬಾಲಿಸಿ ಹೋದರು. ಮಿರ್ಯಾಮಳು ಅವರಿಗೆ ಕೊಟ್ಟ ಉತ್ತರವೇನಂದರೆ--ನೀವು ಕರ್ತನಿಗೆ ಹಾಡಿರಿ, ಆತನು ಮಹಿಮೆಯಿಂದ ಜಯಿಸಿದ್ದಾನೆ; ಕುದುರೆಯನ್ನು ಸವಾರ ನನ್ನು ಸಮುದ್ರದಲ್ಲಿ ಹಾಕಿದ್ದಾನೆ ಎಂಬದು.
Original words (Hebrew)
- divide · H1234בָּקַע bâqaʻ
- sea · H3220יָם yâm
- before · H6440פָּנִים pânîym
- through · H5674עָבַר ʻâbar
- midst · H8432תָּוֶךְ tâvek
- sea · H3220יָם yâm
- land · H3004יַבָּשָׁה yabbâshâh
- persecutors · H7291רָדַף râdaph
- threwest · H7993שָׁלַךְ shâlak
- deeps · H4688מְצוֹלָה mᵉtsôwlâh
- stone · H68אֶבֶן ʼeben
- mighty · H5794עַז ʻaz
- waters · H4325מַיִם mayim