Numbers · chapter 11 · verse 2
Numbers 11:2 in Kannada
ಆಗ ಜನರು ಮೋಶೆಗೆ ಕೂಗಿಕೊಂಡದ್ದರಿಂದ ಮೋಶೆಯು ಕರ್ತನಿಗೆ ಪ್ರಾರ್ಥನೆ ಮಾಡಿದನು. ಆಗ ಬೆಂಕಿಯು ಆರಿಹೋಯಿತು.
Aaga janaru moshege koogikondaddarinda mosheyu kartanige praarthane maadidanu. Aaga benkiyu aarihoyitu.
Numbers 11:2 in English
- King James Version (KJV)
- And the people cried unto Moses; and when Moses prayed unto the LORD, the fire was quenched.
- World English Bible (WEB)
- The people cried to Moses; and Moses prayed to the LORD, and the fire abated.
- American Standard Version (ASV)
- And the people cried unto Moses; and Moses prayed unto Jehovah, and the fire abated.
- Bible in Basic English (BBE)
- And the people made an outcry to Moses, and Moses made prayer to the Lord, and the fire was stopped.
- Darby Translation (DBY)
- And the people cried to Moses; and Moses prayed to Jehovah — and the fire abated.
- Webster's Bible (WBS)
- And the people cried to Moses; and when Moses prayed to the LORD, the fire was quenched.
- Young's Literal Translation (YLT)
- And the people cry unto Moses, and Moses prayeth unto Jehovah, and the fire is quenched;
Read in context
- 1ಜನರು ಗುಣುಗುಟ್ಟಿದಾಗ ಅದು ಕರ್ತನಿಗೆ ಮೆಚ್ಚಿಗೆಯಾಗಲಿಲ್ಲ. ಕರ್ತನು ಅದನ್ನು ಕೇಳಿ ಕೋಪಿಸಿಗೊಂಡನು. ಕರ್ತನ ಬೆಂಕಿಯು ಅವರಲ್ಲಿ ಹತ್ತಿ ಪಾಳೆಯದ ಕಟ್ಟಕಡೆಯ ಭಾಗದಲ್ಲಿ ದಹಿಸಿತು.
- 2ಆಗ ಜನರು ಮೋಶೆಗೆ ಕೂಗಿಕೊಂಡದ್ದರಿಂದ ಮೋಶೆಯು ಕರ್ತನಿಗೆ ಪ್ರಾರ್ಥನೆ ಮಾಡಿದನು. ಆಗ ಬೆಂಕಿಯು ಆರಿಹೋಯಿತು.
- 3ಕರ್ತನ ಬೆಂಕಿಯು ಅವರಲ್ಲಿ ದಹಿಸಿದ್ದರಿಂದ ಆ ಸ್ಥಳಕ್ಕೆ ತಬೇರ ಎಂದು ಹೆಸರಿಟ್ಟರು.
- 4ಆಗ ಅವರೊಳಗಿದ್ದ ಮಿಶ್ರವಾದ ಗುಂಪಿನ ಜನರು ದುರಾಶೆಪಟ್ಟರು. ಇಸ್ರಾಯೇಲ್ ಮಕ್ಕಳು ಸಹ ತಿರಿಗಿ ಅತ್ತು--ನಮಗೆ ತಿನ್ನುವದಕ್ಕೆ ಮಾಂಸವನ್ನು ಕೊಡು ವವರು ಯಾರು?
Cross references
- Numbers 21:7 ಅರಣ್ಯಕಾಂಡ 21:7ಆದದರಿಂದ ಜನರು ಮೋಶೆಯ ಬಳಿಗೆ ಬಂದು --ನಾವು ಕರ್ತನಿಗೂ ನಿನಗೂ ವಿರೋಧವಾಗಿ ಮಾತನಾಡಿ ಪಾಪಮಾಡಿದ್ದೇವೆ; ಆತನು ನಮ್ಮಿಂದ ಸರ್ಪಗಳನ್ನು ದೂರ ಮಾಡುವ ಹಾಗೆ ಆತನಿಗೆ ಪ್ರಾರ್ಥನೆಮಾಡು ಅಂದರು. ಮೋಶೆಯು ಜನರಿ ಗೋಸ್ಕರ ಪ್ರಾರ್ಥನೆಮಾಡಿದನು.
- James 5:16 ಯಾಕೋಬನು 5:16ನೀವು ಸ್ವಸ್ಥವಾಗಬೇಕಾದರೆ ನಿಮ್ಮ ತಪ್ಪುಗಳನ್ನು ಒಬ್ಬರಿಗೊಬ್ಬರು ಅರಿಕೆಮಾಡಿ ಒಬ್ಬರಿ ಗೋಸ್ಕರ ಒಬ್ಬರು ಪ್ರಾರ್ಥಿಸಿರಿ; ನೀತಿವಂತನ ಅತ್ಯಾಸಕ್ತಿಯುಳ್ಳ ಪ್ರಾರ್ಥನೆಯು ಬಹು ಫಲಕಾರಿಯಾಗುತ್ತದೆ.
- Numbers 16:45–48 ಅರಣ್ಯಕಾಂಡ 16:45–48ನೀವು ಈ ಸಭೆಯ ಮಧ್ಯದಿಂದ ಎದ್ದು ಬನ್ನಿರಿ. ನಾನು ಅವರನ್ನು ಕ್ಷಣಮಾತ್ರದಲ್ಲಿ ದಹಿಸಿಬಿಡುತ್ತೇನೆ ಅಂದನು. ಆಗ ಅವರು ಬೋರಲು ಬಿದ್ದರು. ಮೋಶೆಯು ಆರೋನನಿಗೆ--ನೀನು ಧೂಪದ ಪಾತ್ರೆಯನ್ನು ತೆಗೆದುಕೊಂಡು ಅದರ ಮೇಲೆ ಬಲಿಪೀಠದ ಬೆಂಕಿಯನ್ನು ಇಟ್ಟು ಧೂಪ ಹಾಕಿ ಶೀಘ್ರವಾಗಿ ಸಭೆಯೊಳಗೆ ಹೋಗಿ ಅವರಿ ಗೋಸ್ಕರ ಪ್ರಾಯಶ್ಚಿತ್ತಮಾಡು. ಯಾಕಂದರೆ ಕರ್ತನ ಸಮ್ಮುಖದಿಂದ ಕೋಪವು ಹೊರಟು ಅವರೊಳಗೆ ವ್ಯಾಧಿಯು ಪ್ರಾರಂಭವಾಯಿತು ಎಂದು ಹೇಳಿದನು. ಮೋಶೆಯು ಹೇಳಿದ ಹಾಗೆ ಆರೋನನು ಅದನ್ನು ತೆಗೆದುಕೊಂಡು ಸಭೆಯ ಮಧ್ಯಕ್ಕೆ ಓಡಿಬಂದನು. ಆಗ ಇಗೋ, ವ್ಯಾಧಿಯು ಜನರೊಳಗೆ ಪ್ರಾರಂಭ ವಾಗಿತ್ತು. ಆಗ ಅವನು ಧೂಪವನ್ನಿಟ್ಟು ಜನರಿಗೋ ಸ್ಕರ ಪ್ರಾಯಶ್ಚಿತ್ತಮಾಡಿದನು. ಅವನು ಸತ್ತವರಿಗೂ ಜೀವವುಳ್ಳವರಿಗೂ ಮಧ್ಯ ನಿಂತುಕೊಂಡ ದ್ದರಿಂದ ವ್ಯಾಧಿಯು ಶಮನವಾಯಿತು.
- 1 John 2:1–2 1 ಯೋಹಾನನು 2:1–2ನನ್ನ ಚಿಕ್ಕಮಕ್ಕಳೇ, ನೀವು ಪಾಪಮಾಡ ದಂತೆ ಇವುಗಳನ್ನು ನಾನು ನಿಮಗೆ ಬರೆಯು ತ್ತೇನೆ. ಯಾವನಾದರೂ ಪಾಪಮಾಡಿದರೆ ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸು ಕ್ರಿಸ್ತನು ನಮಗೆ ಪಕ್ಷವಾದಿಯಾಗಿದ್ದಾನೆ. ಆತನು ನಮ್ಮ ಪಾಪಗಳಿಗಾಗಿ ಪ್ರಾಯಶ್ಚಿತ್ತವಾಗಿದ್ದಾನೆ; ನಮ್ಮ ಪಾಪಗಳಿಗೆ ಮಾತ್ರ ವಲ್ಲದೆ ಸಮಸ್ತ ಲೋಕದ ಪಾಪಗಳಿಗಾಗಿಯೂ ಪ್ರಾಯಶ್ಚಿತ್ತವಾಗಿದ್ದಾನೆ.
- Psalm 106:23 ಕೀರ್ತನೆಗಳು 106:23ಆದದರಿಂದ ಆತನು ಅವರನ್ನು ನಾಶಮಾಡುತ್ತೇನೆಂದು ಹೇಳಿದನು. ಆದರೆ ಆತನು ಆದುಕೊಂಡ ಮೋಶೆಯು ಆತನ ಕೋಪ ವನ್ನು ತಿರುಗಿಸುವ ಹಾಗೆ ಆಪತ್ತಿನಲ್ಲಿ ಆತನ ಮುಂದೆ ನಿಂತುಕೊಂಡನು.
- Acts 8:24 ಅಪೊಸ್ತಲರ ಕೃತ್ಯಗಳು 8:24ಅದಕ್ಕೆ ಸೀಮೋನನು--ನೀವು ಹೇಳಿರುವ ವಿಷಯ ಗಳಲ್ಲಿ ಯಾವದೂ ನನ್ನ ಮೇಲೆ ಬಾರದಂತೆ ನನಗೋಸ್ಕರ ನೀವೇ ಕರ್ತನನ್ನು ಬೇಡಿಕೊಳ್ಳಿರಿ ಎಂದು ಹೇಳಿದನು.
- Deuteronomy 9:19–20 ಧರ್ಮೋಪದೇಶಕಾಂಡ 9:19–20ಕರ್ತನು ನಿಮ್ಮನ್ನು ನಾಶಮಾಡುವ ಹಾಗೆ ನಿಮ್ಮ ಮೇಲೆ ಮಾಡುವ ಕೋಪ ರೌದ್ರಗಳಿಗೆ ಹೆದರಿದೆನು; ಆ ಕಾಲದಲ್ಲಿಯೂ ಕರ್ತನು ನನ್ನ ಪ್ರಾರ್ಥನೆ ಯನ್ನು ಕೇಳಿದನು. ಆರೋನನನ್ನು ನಾಶಮಾಡುವ ಹಾಗೆ ಕರ್ತನು ಅವನ ಮೇಲೆಯೂ ಬಹಳ ಕೋಪ ಗೊಂಡನು. ಆದದರಿಂದ ಆರೋನನಿಗೋಸ್ಕರವೂ ಆ ಸಮಯದಲ್ಲಿ ಪ್ರಾರ್ಥನೆಮಾಡಿದೆನು.
- Amos 7:2–6 ಆಮೋಸ 7:2–6ಆದದ್ದೇ ನಂದರೆ, ಅವು ಆ ದೇಶದ ಹುಲ್ಲನ್ನು ತಿಂದು ಮುಗಿಸಿದ ಮೇಲೆ ನಾನು--ಓ ಕರ್ತನಾದ ದೇವರೇ, ನನ್ನನ್ನು ಮನ್ನಿಸು; ಯಾಕೋಬನು ಹೇಗೆ ನಿಲ್ಲುವನು? ಅದು ಸಣ್ಣ ಜನಾಂಗ ಎಂದು ವಿಜ್ಞಾಪಿಸಿ ಕೊಳ್ಳಲು ಕರ್ತನು ಇದನ್ನು ಕುರಿತು ಪಶ್ಚಾತ್ತಾಪಪಟ್ಟು ಇದು ಆಗ ಬಾರ ದೆಂದು ಹೇಳಿದನು. ಕರ್ತನಾದ ದೇವರು ನನಗೆ ಹೀಗೆ ತೋರಿಸಿದನು; ಇಗೋ, ಕರ್ತನಾದ ದೇವರು ಬೆಂಕಿಯಿಂದ ತರ್ಕ ಮಾಡುವದಕ್ಕೆ ಕರೆದನು. ಅದು ದೊಡ್ಡ ಅಗಾಧವನ್ನೂ ನುಂಗಿತು ಮತ್ತು ವಿಭಾಗವನ್ನು ತಿಂದುಬಿಟ್ಟಿತು. ಆಗ ನಾನು--ಓ ದೇವರಾದ ಕರ್ತನೇ, ನಿಲ್ಲಿಸಿಬಿಡು ಎಂದು ಬೇಡಿಕೊಳ್ಳುತ್ತೇನೆ; ಯಾಕೋಬು ಯಾರಿಂದ ಎಬ್ಬಿಸ ಲ್ಪಟ್ಟಿತು? ಅದು ಚಿಕ್ಕ ಜನಾಂಗ ಎಂದು ಹೇಳಿದನು. ಕರ್ತನು ಇದಕ್ಕಾಗಿ ಪಶ್ಚಾತ್ತಾಪಪಟ್ಟು ಇವು ಸಹ ಆಗಬಾರದೆಂದು ಕರ್ತನಾದ ದೇವರು ಹೇಳುತ್ತಾನೆ.
- Isaiah 37:4 ಯೆಶಾಯ 37:4ನಿನ್ನ ದೇವರಾಗಿರುವ ಕರ್ತನು ಅಶ್ಶೂರದ ಅರಸನಿಂದ ಕಳುಹಿಸಲ್ಪಟ್ಟ ರಬ್ಷಾಕೆಯ ಮಾತುಗಳನ್ನು ಕೇಳಿರುವನು; ಅವನು ತನ್ನ ಯಜಮಾನನ ಹೆಸರಿನಲ್ಲಿ ಜೀವಸ್ವರೂ ಪನಾದ ದೇವರನ್ನು ದೂಷಿಸಿದ್ದರಿಂದ ಆತನು ಅವನಿಗೆ ಮುಯ್ಯಿ ತೀರಿಸಾನು; ಆದದರಿಂದ ಉಳಿದಿರುವ ಸ್ವಲ್ಪ ಜನರಿಗೋಸ್ಕರ ಆತನನ್ನು ಪ್ರಾರ್ಥಿಸು ಎಂಬದಾಗಿ ಹಿಜ್ಕೀಯನು ಅನ್ನುತ್ತಾನೆ ಎಂದು ಹೇಳಿದರು.
- 1 John 5:16 1 ಯೋಹಾನನು 5:16ಯಾವನಾದರೂ ತನ್ನ ಸಹೋದರನು ಮರಣಕರವಲ್ಲದ ಪಾಪಮಾಡುವ ದನ್ನು ಕಂಡರೆ ಅವನು ಬೇಡಿಕೊಳ್ಳಲಿ; ಆಗ ಆತನು ಮರಣಕರವಲ್ಲದ ಪಾಪಮಾಡುವವರಿಗೆ ಜೀವವನ್ನು ದಯಪಾಲಿಸುವನು. ಮರಣಕರವಾದ ಪಾಪವುಂಟು; ಈ ಪಾಪದ ವಿಷಯವಾಗಿ ಅವನು ಬೇಡಿಕೊಳ್ಳ ಬೇಕೆಂದು ನಾನು ಹೇ
- Jeremiah 37:3 ಯೆರೆಮೀಯ 37:3ಅರಸನಾದ ಚಿದ್ಕೀಯನು ಶೆಲೆಮ್ಯನ ಮಗನಾದ ಯೆಹೂಕಲನನ್ನೂ ಯಾಜಕನಾದ ಮಾಸೇಯನ ಮಗನಾದ ಚೆಫನ್ಯನನ್ನೂ ಪ್ರವಾದಿಯಾದ ಯೆರೆವಿಾಯನ ಬಳಿಗೆ ಕಳುಹಿಸಿ--ನಮ್ಮ ದೇವರಾದ ಕರ್ತನಿಗೆ ನಮಗೋಸ್ಕರ ಪ್ರಾರ್ಥನೆ ಮಾಡೆಂದು ಹೇಳಿಸಿದನು.
- Genesis 18:23–33 ಆದಿಕಾಂಡ 18:23–33ಆಗ ಅಬ್ರಹಾಮನು ಹತ್ತಿರ ಬಂದು--ದುಷ್ಟರ ಸಂಗಡ ನೀತಿವಂತರನ್ನೂ ನಾಶಮಾಡು ವಿಯಾ? ಒಂದು ವೇಳೆ ಆ ಪಟ್ಟಣದಲ್ಲಿ ಐವತ್ತು ಮಂದಿ ನೀತಿವಂತರಿದ್ದರೆ ಅದರೊಳಗಿರುವ ಆ ಐವತ್ತು ನೀತಿವಂತರಿಗೋಸ್ಕರ ಆ ಸ್ಥಳವನ್ನು ಉಳಿಸದೆ ನಾಶಮಾಡುವಿಯೋ? ಆ ಪ್ರಕಾರ ಮಾಡಿ ನೀತಿವಂತರನ್ನು ದುಷ್ಟರ ಸಂಗಡ ಕೊಲ್ಲುವದು ನಿನಗೆ ದೂರವಾಗಿರಲಿ; ಹಾಗೆ ನೀತಿವಂತರನ್ನು ದುಷ್ಟರಿಗೆ ಸಮಾನಮಾಡುವದು ನಿನಗೆ ದೂರ ವಾಗಿರಲಿ; ಭೂಲೋಕಕ್ಕೆಲ್ಲಾ ನ್ಯಾಯಾಧಿಪತಿಯಾಗಿ ರುವಾತನು ನ್ಯಾಯವಾದದ್ದನ್ನು ಮಾಡದೆ ಇರುವನೇ ಅಂದನು. ಅದಕ್ಕೆ ಕರ್ತನು--ನನಗೆ ಸೊದೋಮ್ ಪಟ್ಟಣದೊಳಗೆ ಐವತ್ತು ಮಂದಿ ನೀತಿವಂತರು ಸಿಕ್ಕಿದರೆ ಅವರಿಗೊಸ್ಕರ ಆ ಸ್ಥಳವನ್ನೆಲ್ಲಾ ಉಳಿಸುವೆನು ಅಂದನು. ಆಗ ಅಬ್ರಹಾಮನು--ಇಗೋ, ಮಣ್ಣೂ ಬೂದಿಯೂ ಆಗಿರುವ ನಾನು ಕರ್ತನ ಸಂಗಡ ಮಾತನಾಡುವದಕ್ಕೆ ಮುಂಗೊಂಡಿದ್ದೇನೆ. ಒಂದು ವೇಳೆ ಐವತ್ತು ನೀತಿವಂತರಲ್ಲಿ ಐದು ಕಡಿಮೆ ಇದ್ದರೆ ಆ ಐದು ಮಂದಿ ಇಲ್ಲದ್ದರಿಂದ ಆ ಪಟ್ಟಣವನ್ನು ನಾಶಮಾಡುವಿಯೋ ಎಂದು ಪ್ರತ್ಯುತ್ತರವಾಗಿ ಅಂದನು. ಆದಕ್ಕೆ ಆತನು--ನಾಲ್ವತ್ತೈದು ಮಂದಿ ಅಲ್ಲಿ ಸಿಕ್ಕಿದರೆ ನಾನು ನಾಶಮಾಡುವದಿಲ್ಲ ಅಂದನು. ಅಬ್ರಹಾಮನು ಆತನ ಸಂಗಡ ಇನ್ನೂ ಮಾತನಾಡಿ--ಒಂದು ವೇಳೆ ಅಲ್ಲಿ ನಾಲ್ವತ್ತು ಮಂದಿ ಸಿಕ್ಕಾರು ಅಂದನು. ಅದಕ್ಕೆ ಆತನು--ನಾಲ್ವತ್ತು ಮಂದಿಗೋಸ್ಕರ ಅದನ್ನು ನಾನು ನಾಶಮಾಡುವದಿಲ್ಲ ಅಂದನು. ಅವನು-- ಕರ್ತನಿಗೆ ಕೋಪಬಾರದೆ ಇರಲಿ; ನಾನು ಮಾತನಾ ಡುತ್ತೇನೆ--ಒಂದು ವೇಳೆ ಅಲ್ಲಿ ಮೂವತ್ತು ಮಂದಿ ಸಿಕ್ಕಾರು ಅಂದಾಗ ಆತನು--ನನಗೆ ಅಲ್ಲಿ ಮೂವತ್ತು ಮಂದಿ ಸಿಕ್ಕಿದರೆ ನಾಶಮಾಡುವದಿಲ್ಲ ಅಂದನು. ಅವನು--ಇಗೋ, ಕರ್ತನ ಸಂಗಡ ಮಾತನಾಡು ವದಕ್ಕೆ ಮುಂಗೊಂಡಿದ್ದೇನೆ; ಒಂದು ವೇಳೆ ಇಪ್ಪತ್ತು ಮಂದಿ ಅಲ್ಲಿ ಸಿಕ್ಕಾರು ಅಂದಾಗ ಆತನು-- ಆ ಇಪ್ಪತ್ತು ಮಂದಿಗೋಸ್ಕರ ನಾನು ಅದನ್ನು ನಾಶಮಾಡುವದಿಲ್ಲ ಅಂದನು. ಅವನು--ಹಾ, ಕರ್ತನೇ, ನಿನಗೆ ಕೋಪಬಾರದೆ ಇರಲಿ; ಇನ್ನು ಒಂದೇ ಸಾರಿ ಮಾತನಾಡುತ್ತೇನೆ--ಒಂದು ವೇಳೆ ಅಲ್ಲಿ ಹತ್ತು ಮಂದಿ ಸಿಕ್ಕಾರು ಅಂದಾಗ ಆತನು--ಹತ್ತು ಮಂದಿಗೋಸ್ಕರ ನಾಶಮಾಡೆನು ಅಂದನು.ಕರ್ತನು ಅಬ್ರಹಾಮನ ಸಂಗಡ ಮಾತನಾಡು ವದನ್ನು ಮುಗಿಸಿದ ಕೂಡಲೆ ಹೊರಟುಹೋದನು. ಅಬ್ರಹಾಮನು ತನ್ನ ಸ್ಥಳಕ್ಕೆ ತಿರುಗಿಕೊಂಡನು. ಕರ್ತನು ಅಬ್ರಹಾಮನ ಸಂಗಡ ಮಾತನಾಡು ವದನ್ನು ಮುಗಿಸಿದ ಕೂಡಲೆ ಹೊರಟುಹೋದನು. ಅಬ್ರಹಾಮನು ತನ್ನ ಸ್ಥಳಕ್ಕೆ ತಿರುಗಿಕೊಂಡನು.